ಪತಿ,ಅವಸರ,ಶರೀರ,ರಾಜೀವಸಖ
ಪತಿ/ಅವಸರ/ಶರೀರ/ರಾಜೀವಸಖ ಒಡೆಯ,ಸಂದರ್ಭ,ದೇಹ,ಸೂರ್ಯ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ. ಪಾ ಧಾತು ರಕ್ಷಣೆ ಎಂಬರ್ಥ ಹೊಂದಿದ್ದು, ಇತಿಃ ಪ್ರತ್ಯಯ ಸೇರಿ, ಪತಿ ಪದ ಸಿದ್ಧಿಸಿ, ಒಡೆಯ,ಯಜಮಾನ,ಗಂಡ ಎಂಬರ್ಥಗಳು ಸ್ಫುರಿಸುತ್ತವೆ. ಸೃ ಧಾತು ಚಲನೆ ಎಂಬರ್ಥ ಹೊಂದಿದ್ದು, ಅವ ಉಪಸರ್ಗ ಮತ್ತು ಅಪ್ ಪ್ರತ್ಯಯ ಸೇರಿ, ಅವಸರ ಪದ ಸಿದ್ಧಿಸಿ, ಸಂದರ್ಭ, ಅವಕಾಶ, ಸಕಾಲ, ವಿರಾಮ ಮುಂತಾದ ಅರ್ಥಗಳು ಸ್ಫುರಿಸುತ್ತವೆ. ಕನ್ನಡದಲ್ಲಿ ಆತುರ ಎಂಬರ್ಥದಲ್ಲಿ ಈ ಪದದ ಪ್ರಯೋಗವಿದೆ. ಶೄ ಧಾತು ಹಿಂಸೆ ಎಂಬರ್ಥ ಹೊಂದಿದ್ದು, ಈರನ್ ಪ್ರತ್ಯಯ ಸೇರಿ, […]
ಮುಂದೆ ಓದಿ