ನಿರ್ವಹಣೆ,ಲೇಖನ,ಗರ್ವ,ವಂಧ್ಯಾ

ಪದ ಚಿಂತನ ನಿರ್ವಹಣೆ,ಲೇಖನ,ಗರ್ವ,ವಂಧ್ಯಾ ನಿಭಾಯಿಸುವುದು, ಬರವಣಿಗೆ,ಅಹಂಕಾರ, ಬಂಜೆ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ. ವಹ್ ಧಾತು ಒಯ್ಯುವುದು ಎಂಬರ್ಥ ಹೊಂದಿದ್ದು, ನಿರ್ ಉಪಸರ್ಗ ಮತ್ತು ಲ್ಯುಟ್ ಪ್ರತ್ಯಯ ಸೇರಿ, ನಿರ್ವಹಣ ಪದ ಸಿದ್ಧಿಸಿ, ನಿಭಾಯಿಸುವುದು, ಕಾರ್ಯವನ್ನು ಸುಗಮಗೊಳಿಸುವುದು ಎಂಬರ್ಥಗಳು ಸ್ಫುರಿಸುತ್ತವೆ. ಕನ್ನಡದಲ್ಲಿ ನಿರ್ವಹಣೆ ಎಂದಾಗಿದೆ. ಲಿಖ್ ಧಾತು ಅಕ್ಷರರಚನೆ ಎಂಬರ್ಥ ಹೊಂದಿದ್ದು, ಲ್ಯುಟ್ ಪ್ರತ್ಯಯ ಸೇರಿ, ಲೇಖನ ಪದ ಸಿದ್ಧಿಸಿ, ಬರೆವಣಿಗೆ, ಬರೆಹ, ಗೀರುವುದು, ಪ್ರೇರಣೆ ಮಾಡುವುದು ಮುಂತಾದ ಅರ್ಥಗಳು ಸ್ಫುರಿಸುತ್ತವೆ. ಗರ್ವ್ ಧಾತು ದರ್ಪ ಎಂಬರ್ಥ […]

ಮುಂದೆ ಓದಿ

ಪಾಳಿ ಬರುವನಕ ತಾಳ್

ಪಾಳಿ ಬರುವನಕ ತಾಳ್ ನಾಳೆಗಳನಿಟ್ಟವನು ಕೂಳಿಗಿಟ್ಟಿಹ ದಾರಿ ಪಾಳಿ ಬರುವನಕ ತಾಳ್ ಗೋಳಾಟವೇಕೆ ? ದಾಳವಿಹುದೆಂತೊ ವಿಧಿಯಾಟವರಿತವರಾರು ? ತಾಳು ಉಬ್ಬೆಗವೇಕೆ ಜಾಣಮೂರ್ಖ// ನಾವುಗಳು ಪ್ರತಿಯೊಬ್ಬರೂ ಈ ಮುಕ್ತಕದ ಆಳಕ್ಕಿಳಿದು ಬಿಟ್ಟರೆ ಜಗತ್ತು ರಾಮರಾಜ್ಯವಾಗಿಬಿಡುತ್ತೆ. ಆದರೆ ಆಳಕ್ಕಿಳಿಯಬೇಕಷ್ಟೆ. ಓ, ಗೆಳೆಯ ವಿಧಿ ನಿನಗೆ ನಾಳೆಯನ್ನು ಕೊಟ್ಟಿದೆ ಎಂದ ಮೇಲೆ ನಿನಗೊಂದು ಬದುಕಿನ ದಾರಿಯನ್ನು ಕೊಟ್ಟೇ ಇರುತ್ತದೆ. ಬದುಕು ಬಂದಂತೆ , ದಾರಿ ಕೊಟ್ಟಂತೆ ನಡೆಯೋಣ. ಕಿಂಚಿತ್ ಪ್ರಯತ್ನವಿರಲಿ. ಆದರೆ ಅದಕ್ಕಾಗಿ ಗೋಳಾಡುವುದಾದರೂ ಏಕೆ ? ವಿಧಿಯ ಎಣಿಕೆಯೆಂತೋ […]

ಮುಂದೆ ಓದಿ

ಅಬ್ಧಿಪ/ವರುಣ/ಉರ್ವಿ/ಯಜ್ಞ

ಪದ ಚಿಂತನ ಅಬ್ಧಿಪ/ವರುಣ/ಉರ್ವಿ/ಯಜ್ಞ ವರುಣ, ಜಲಾಧಿದೇವತೆ,ಭೂಮಿ,ಯಾಗ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ. ಆಪ್ಲೃ ಧಾತು ವ್ಯಾಪ್ತಿ ಎಂಬರ್ಥ ಹೊಂದಿದ್ದು, ಕ್ವಿಪ್ ಹ್ರಸ್ವಶ್ಚ ಸೂತ್ರದನ್ವಯ ಅಪ್ ಪದ ಸಿದ್ಧಿಸಿ, ನೀರು ಎಂಬರ್ಥ ಸ್ಫುರಿಸುತ್ತದೆ. ಡುಧಾಞ್ ಧಾತು ಧಾರಣೆ ಎಂಬರ್ಥ ಹೊಂದಿದ್ದು, ಕಿಃ ಪ್ರತ್ಯಯ ಸೇರಿ, ಧಿ ಎಂದಾಗಿ, ಅಪ್+ ಧಿ > ಅಬ್ಧಿ ಪದ ಸಿದ್ಧಿಸಿ, ಸಾಗರ ಎಂಬರ್ಥ ಸ್ಫುರಿಸುತ್ತದೆ. ಅಬ್ಧಿ ಪದಕ್ಕೆ ರಕ್ಷಣೆ ಎಂಬರ್ಥದ ಪಾ ಧಾತು ಮತ್ತು ಕಃ ಪ್ರತ್ಯಯ ಸೇರಿ, ಅಬ್ಧಿಪ ಪದ ಸಿದ್ಧಿಸಿ, […]

ಮುಂದೆ ಓದಿ

ವಿನಿಯೋಗ/ಉಪವನ/ ಲೀಲೆ/ಅರ್ಚಿತ

ಪದ ಚಿಂತನ ವಿನಿಯೋಗ,ಉಪವನ,ಲೀಲೆ,ಅರ್ಚಿತ ಉಪಯೋಗ, ಕೈತೋಟ, ಆಟ, ಪೂಜಿಸಲ್ಪಟ್ಟ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ. ಯುಜಿರ್ ಧಾತು ಸೇರುವುದು ಎಂಬರ್ಥ ಹೊಂದಿದ್ದು, ವಿ+ ನಿ ಉಪಸರ್ಗಗಳು ಮತ್ತು ಘಞ್ ಪ್ರತ್ಯಯ ಸೇರಿ, ವಿನಿಯೋಗ ಪದ ಸಿದ್ಧಿಸಿ, ಉಪಯೋಗ, ಹಂಚುವುದು, ನಿಯಮಿಸುವುದು ಎಂಬರ್ಥಗಳು ಸ್ಫುರಿಸುತ್ತವೆ. ಕಾಡು ಎಂಬರ್ಥದ ವನ ಪದಕ್ಕೆ ಉಪ ಉಪಸರ್ಗ ಸೇರಿ, ಉಪವನ ಎಂದಾಗಿ, ಕೈತೋಟ, ಉದ್ಯಾನ, ವನದ ಸಮೀಪ ಎಂಬರ್ಥಗಳು ಸ್ಫುರಿಸುತ್ತವೆ. ಲೀಙ್ ಧಾತು ಜೊತೆಗೂಡು ಎಂಬರ್ಥ ಹೊಂದಿದ್ದು, ಕ್ವಿಪ್ ಪ್ರತ್ಯಯ ಸೇರಿ ಲೀ […]

ಮುಂದೆ ಓದಿ

ಬಾಳ್ವೆಂದರಿದೆಯೇನೊ

ಬಾಳ್ವೆಂದರಿದೆಯೇನೊ ಬೀಳ್ವುದೇನೇಳ್ವುದೇನೀಸೀಸಿ ಸೋಲ್ವುದೇ ನಾಳ್ವಂತ ಪರಿಯುಮೇಂ ಪೇಳ್ವ ಪಾಂಗೆಂತು ! ತಾಳ್ವಿಕೆಯ ಆಳದೊಳಗೇಂ ಸ್ವಾರ್ಥದಾ ಸೆಳೆತ ಬಾಳ್ವೆಂದರಿದೆಯೇನೊ ಜಾಣಮೂರ್ಖ // ಸ್ನೇಹಿತರೇ , ಗುರುವಿತ್ತ ಈ ನುಚ್ಚಿನ ನುಡಿಯನ್ನು ಒಮ್ಮೆ ಗಂಭೀರವಾಗಿ ಪರಿಗಣಿಸಿ. ನಿಮ್ಮನ್ನೊಮ್ಮೆ ನೀವೇ ನೋಡಿಕೊಳ್ಳಿ ! ಬದುಕಿನಲ್ಲಿ ಒಮ್ಮೆ ಏಳುತ್ತೇವೆ , ಮತ್ತೊಮ್ಮೆ ಬೀಳುತ್ತೇವೆ. ಈ ಬಾಳ ಸಾಗರದಲ್ಲಿ ಈಸೀ ಈಸೀ ಸೋಲುತ್ತೇವೆ. ಸೋತರೂ ರಕ್ತಗುಣ ! ನಿರಂಕುಶತ್ವ , ಅಹಂಕಾರ ಮಾತ್ರ ಹೋಗೋದೇ ಇಲ್ಲ. ನಮ್ಮ ಮಾತಿನ ಗತ್ತು ಗೊತ್ತಿಲ್ಲದೆಯೇ ನಮ್ಮಲ್ಲಿರುವ ಅಹಂಕಾರವನ್ನು […]

ಮುಂದೆ ಓದಿ

ವಾಜಿ/ಹಯ/ ತುರಗ/ ತುರಂಗ/ ಅಶ್ವ

ಪದ ಚಿಂತನ ವಾಜಿ,ಹಯ, ತುರಗ, ತುರಂಗ, ಅಶ್ವ ಈ ಐದೂ ಪದಗಳಿಗೆ ಕುದುರೆ ಎಂಬರ್ಥ ಸ್ಫುರಿಸುತ್ತದೆ. ವಜ್ ಧಾತು ಚಲನೆ ಎಂಬರ್ಥ ಹೊಂದಿದ್ದು, ಘಞ್+ ಇನಿಃ ಪ್ರತ್ಯಯಗಳು ಸೇರಿ, ವಾಜಿನ್ ಪದ ಸಿದ್ಧಿಸಿ, ಕುದುರೆ, ಶರ, ಪಕ್ಷಿ ಎಂಬರ್ಥಗಳು ಸ್ಫುರಿಸುತ್ತವೆ. ಹಯ್ ಧಾತು ಚಲನೆ ಎಂಬರ್ಥ ಹೊಂದಿದ್ದು, ಅಚ್ ಪ್ರತ್ಯಯ ಸೇರಿ, ಹಯ ಪದ ಸಿದ್ಧಿಸಿ, ಕುದುರೆ, ಏಳುಸಂಖ್ಯೆ ಎಂಬರ್ಥಗಳು ಸ್ಫುರಿಸುತ್ತವೆ. ತುರ್ ಧಾತು ವೇಗವಾದ ಎಂಬರ್ಥ ಹೊಂದಿದ್ದು, ಕಃ ಪ್ರತ್ಯಯ ಸೇರಿ ತುರ ಎಂದಾಗಿ, ಇದಕ್ಕೆ […]

ಮುಂದೆ ಓದಿ

ವಿಶ್ವವಿದ್ಯಾನಿಲಯದ ಈ ಕೆಳಕಂಡ ಸ್ನಾತಕೋತ್ತರ ಅಧ್ಯಯನ ವಿಭಾಗಗಳಲ್ಲಿ 2021-22 ನೇ ಶೈಕ್ಷಣಿಕ ಸಾಲಿನಲ್ಲಿ ಲಭ್ಯವಿರುವ Ph.D./PDF/D.Sc./D.Litt. ಸಂಶೋಧನಾ ಸ್ಥಾನಗಳಿಗೆ ಅರ್ಜಿಗಳನ್ನು ಅಹ್ವಾನಿಸಿದೆ.

http://davangereuniversity.ac.in/

ಮುಂದೆ ಓದಿ