ಕುಂಭಸಂಭವ, ಕನಕಪಾತ್ರ,ಉಪಾಯ,ಮೃತ್ಪಾತ್ರ

ಪದ ಚಿಂತನ ಕುಂಭಸಂಭವ/ ಕನಕಪಾತ್ರ/ಉಪಾಯ/ಮೃತ್ಪಾತ್ರ ದ್ರೋಣ, ಚಿನ್ನದಪಾತ್ರೆ,ಯುಕ್ತಿ, ಮಣ್ಣಿನಪಾತ್ರೆ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ. ಉಂಭ್ ಧಾತು ತುಂಬುವುದು ಎಂಬರ್ಥ ಹೊಂದಿದ್ದು, ಶಬ್ದ ಎಂಬರ್ಥದ ಕುಂ ಪದ ಮತ್ತು ಅಣ್ ಪ್ರತ್ಯಯ ಸೇರಿ, ಕುಂಭ ಪದ ಸಿದ್ಧಿಸಿ, ಮಣ್ಣಿನ ಗಡಿಗೆ,ಬಿಂದಿಗೆ ಎಂಬರ್ಥ ಸ್ಫುರಿಸುತ್ತದೆ. ಭೂ ಧಾತು ಇರುವಿಕೆ ಎಂಬರ್ಥ ಹೊಂದಿದ್ದು, ಸಂ ಉಪಸರ್ಗ ಮತ್ತು ಅಪ್ ಪ್ರತ್ಯಯ ಸೇರಿ, ಸಂಭವ ಪದ ಸಿದ್ಧಿಸಿ, ಉತ್ಪತ್ತಿ, ಜನ್ಮತಾಳುವುದು ಎಂಬರ್ಥ ಸ್ಫುರಿಸುತ್ತದೆ. ಕುಂಭಸಂಭವ ಸಮಸ್ತಪದವು ದ್ರೋಣ, ಅಗಸ್ತ್ಯಮಹರ್ಷಿ,ವಸಿಷ್ಠಮಹರ್ಷಿ ಎಂಬರ್ಥಗಳನ್ನು ಹೊಂದಿದೆ. […]

ಮುಂದೆ ಓದಿ

ಹಸ್ತಿ,ಘನ,ಕಿಂಕರ,ಸಂತತಿ

ಪದ ಚಿಂತನ ಹಸ್ತಿ/ಘನ/ಕಿಂಕರ/ಸಂತತಿ ಆನೆ, ಶ್ರೇಷ್ಠ, ಸೇವಕ, ಪೀಳಿಗೆ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ. ಕೈ ಎಂಬರ್ಥದ ಹಸ್ತ ಪದಕ್ಕೆ ಇನಿಃ ಪ್ರತ್ಯಯ ಸೇರಿ, ಹಸ್ತಿನ್ ಪದ ಸಿದ್ಧಿಸಿ, ಗಜ,ಆನೆ ಎಂಬರ್ಥ ಸ್ಫುರಿಸುತ್ತದೆ.( ಸೊಂಡಿಲು ಹಸ್ತದಂತೆ ಇದೆ, ಎಂಬರ್ಥದಲ್ಲಿ ಹಸ್ತಿ ಪದ ಆನೆಗಿದೆ) ಹನ್ ಧಾತು ಹಿಂಸೆ ಎಂಬರ್ಥ ಹೊಂದಿದ್ದು, ಅಪ್ ಪ್ರತ್ಯಯ ಮತ್ತು ಘನಶ್ಚಾದೇಶಃ ಸೂತ್ರದನ್ವಯ ಘನ ಪದ ಸಿದ್ಧಿಸಿ, ಶ್ರೇಷ್ಠ, ಪೂರ್ಣ,ದೃಢ,ಮೋಡ,ಗುಂಪು,ದೇಹ ಮುಂತಾದ ಅರ್ಥಗಳು ಸ್ಫುರಿಸುತ್ತವೆ. ಕೃಞ್ ಧಾತು ಮಾಡುವುದು ಎಂಬರ್ಥ ಹೊಂದಿದ್ದು, ಅಚ್ […]

ಮುಂದೆ ಓದಿ

ತನಯ,ಪ್ರಸಾದ,ವಂಶ,ಗ್ಲಾನಿ

ಪದ ಚಿಂತನ ತನಯ/ಪ್ರಸಾದ/ವಂಶ/ಗ್ಲಾನಿ ಮಗ, ಅನುಗ್ರಹ, ಪೀಳಿಗೆ, ಆಯಾಸ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ. ತನು ಧಾತು ವ್ಯಾಪ್ತಿ ಎಂಬರ್ಥ ಹೊಂದಿದ್ದು, ಕಯನ್ ಪ್ರತ್ಯಯ ಸೇರಿ, ತನಯ ಪದ ಸಿದ್ಧಿಸಿ, ಮಗ,ಪುತ್ರ ಎಂಬರ್ಥ ಸ್ಫುರಿಸುತ್ತದೆ. ಷಡ್ಲೃ ಧಾತು ಹಿಂಸೆ ಎಂಬರ್ಥ ಹೊಂದಿದ್ದು, ಪ್ರ ಉಪಸರ್ಗ ಮತ್ತು ಘಞ್ ಪ್ರತ್ಯಯ ಸೇರಿ, ಪ್ರಸಾದ ಪದ ಸಿದ್ಧಿಸಿ, ಅನುಗ್ರಹ, ಶುದ್ಧವಾಗಿರುವುದು, ವರ, ದೇವರಿಗೆ ನಿವೇದಿಸಿದ ವಸ್ತು ಮುಂತಾದ ಅರ್ಥಗಳು ಸ್ಫುರಿಸುತ್ತವೆ. ಕನ್ನಡದಲ್ಲಿ ಹಸಾದ ಎಂದು ತದ್ಭವ ರೂಪದಲ್ಲೂ ಬಳಕೆಯಲ್ಲಿದೆ. ವಶ್ […]

ಮುಂದೆ ಓದಿ

ಸೂನು, ಮೌನ,ಮಾಧವ, ಮಹಿ

ಪದ ಚಿಂತನ ಸೂನು/ ಮೌನ/ಮಾಧವ/ ಮಹಿ ಮಗ, ಮಾತಾಡದಿರುವುದು, ನಾರಾಯಣ, ಭೂಮಿ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ. ಷೂಙ್ ಧಾತು ಪ್ರಸವ ಎಂಬರ್ಥ ಹೊಂದಿದ್ದು, ನುಃ ಪ್ರತ್ಯಯ ಸೇರಿ, ಸೂನು ಪದ ಸಿದ್ಧಿಸಿ, ಮಗ,ಮಗಳು, ಸೂರ್ಯ, ಕಿರಣ, ಎಕ್ಕದ ಗಿಡ ಎಂಬರ್ಥಗಳಿವೆ. ಮನ್ ಧಾತು ಜ್ಞಾನ ಎಂಬರ್ಥ ಹೊಂದಿದ್ದು, ಇನ್+ ಉತ್ ಚ + ಅಣ್ ಪ್ರತ್ಯಯಗಳು ಸೇರಿ, ಮೌನ ಪದ ಸಿದ್ಧಿಸಿ, ಮಾತಾಡದಿರುವುದು, ಗದ್ದಲವಿಲ್ಲದ ಎಂಬರ್ಥ ಸ್ಫುರಿಸುತ್ತದೆ. ಮಾ ಧಾತು ಅಳತೆ ಎಂಬರ್ಥ ಹೊಂದಿದ್ದು, ಕಃ […]

ಮುಂದೆ ಓದಿ

ಚತುರಂಗ,ಋಣ,ರಣ,ಸುಭಟ

ಪದ ಚಿಂತನ ಚತುರಂಗ/ಋಣ/ರಣ/ಸುಭಟ ಆನೆಕುದುರೆರಥಕಾಲಾಳು ಸೈನ್ಯ, ಸಾಲ, ಯುದ್ಧ, ಶ್ರೇಷ್ಠ ಸೈನಿಕ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ‌. ಚತೇ ಧಾತು ಯಾಚಿಸುವುದು ಎಂಬರ್ಥ ಹೊಂದಿದ್ದು ಉರನ್ ಪ್ರತ್ಯಯ ಸೇರಿ, ಚತುರ್ ಪದ ಸಿದ್ಧಿಸಿ, ನಾಲ್ಕು ಎಂಬರ್ಥ ಸ್ಫುರಿಸುತ್ತದೆ. ಅಗಿ ಧಾತು ಚಲನೆ ಎಂಬರ್ಥ ಹೊಂದಿದ್ದು, ಅಚ್ ಪ್ರತ್ಯಯ ಸೇರಿ, ಅಂಗ ಪದ ಸಿದ್ಧಿಸಿ, ಅವಯವ ಎಂಬರ್ಥ ಸ್ಫುರಿಸುತ್ತದೆ. ಚತುರ್ +ಅಂಗ> ಚತುರಂಗ ಸಮಸ್ತಪದವು, ಆನೆಕುದುರೆರಥಕಾಲಾಳುಗಳಿಂದ ಕೂಡಿದ ಸೈನ್ಯ ಎಂಬರ್ಥ ಸ್ಫುರಿಸುತ್ತದೆ. ಋ ಧಾತು ಚಲನೆ ಎಂಬರ್ಥ ಹೊಂದಿದ್ದು, […]

ಮುಂದೆ ಓದಿ

ಪತಿ,ಅವಸರ,ಶರೀರ,ರಾಜೀವಸಖ

ಪತಿ/ಅವಸರ/ಶರೀರ/ರಾಜೀವಸಖ ಒಡೆಯ,ಸಂದರ್ಭ,ದೇಹ,ಸೂರ್ಯ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ. ಪಾ ಧಾತು ರಕ್ಷಣೆ ಎಂಬರ್ಥ ಹೊಂದಿದ್ದು, ಇತಿಃ ಪ್ರತ್ಯಯ ಸೇರಿ, ಪತಿ ಪದ ಸಿದ್ಧಿಸಿ, ಒಡೆಯ,ಯಜಮಾನ,ಗಂಡ ಎಂಬರ್ಥಗಳು ಸ್ಫುರಿಸುತ್ತವೆ. ಸೃ ಧಾತು ಚಲನೆ ಎಂಬರ್ಥ ಹೊಂದಿದ್ದು, ಅವ ಉಪಸರ್ಗ ಮತ್ತು ಅಪ್ ಪ್ರತ್ಯಯ ಸೇರಿ, ಅವಸರ ಪದ ಸಿದ್ಧಿಸಿ, ಸಂದರ್ಭ, ಅವಕಾಶ, ಸಕಾಲ, ವಿರಾಮ ಮುಂತಾದ ಅರ್ಥಗಳು ಸ್ಫುರಿಸುತ್ತವೆ. ಕನ್ನಡದಲ್ಲಿ ಆತುರ ಎಂಬರ್ಥದಲ್ಲಿ ಈ ಪದದ ಪ್ರಯೋಗವಿದೆ. ಶೄ ಧಾತು ಹಿಂಸೆ ಎಂಬರ್ಥ ಹೊಂದಿದ್ದು, ಈರನ್ ಪ್ರತ್ಯಯ ಸೇರಿ, […]

ಮುಂದೆ ಓದಿ

ವಿನಿಯೋಗ,ಉಪವನ, ಲೀಲೆ,ಅರ್ಚಿತ

ಪದ ಚಿಂತನ ವಿನಿಯೋಗ/ಉಪವನ/ ಲೀಲೆ/ಅರ್ಚಿತ ಉಪಯೋಗ, ಕೈತೋಟ, ಆಟ, ಪೂಜಿಸಲ್ಪಟ್ಟ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ. ಯುಜಿರ್ ಧಾತು ಸೇರುವುದು ಎಂಬರ್ಥ ಹೊಂದಿದ್ದು, ವಿ+ ನಿ ಉಪಸರ್ಗಗಳು ಮತ್ತು ಘಞ್ ಪ್ರತ್ಯಯ ಸೇರಿ, ವಿನಿಯೋಗ ಪದ ಸಿದ್ಧಿಸಿ, ಉಪಯೋಗ, ಹಂಚುವುದು, ನಿಯಮಿಸುವುದು ಎಂಬರ್ಥಗಳು ಸ್ಫುರಿಸುತ್ತವೆ. ಕಾಡು ಎಂಬರ್ಥದ ವನ ಪದಕ್ಕೆ ಉಪ ಉಪಸರ್ಗ ಸೇರಿ, ಉಪವನ ಎಂದಾಗಿ, ಕೈತೋಟ, ಉದ್ಯಾನ, ವನದ ಸಮೀಪ ಎಂಬರ್ಥಗಳು ಸ್ಫುರಿಸುತ್ತವೆ. ಲೀಙ್ ಧಾತು ಜೊತೆಗೂಡು ಎಂಬರ್ಥ ಹೊಂದಿದ್ದು, ಕ್ವಿಪ್ ಪ್ರತ್ಯಯ ಸೇರಿ […]

ಮುಂದೆ ಓದಿ

ಅಬ್ಧಿಪ,ವರುಣ,ಉರ್ವಿ,ಯಜ್ಞ

ಪದ ಚಿಂತನ ಅಬ್ಧಿಪ/ವರುಣ/ಉರ್ವಿ/ಯಜ್ಞ ವರುಣ, ಜಲಾಧಿದೇವತೆ,ಭೂಮಿ,ಯಾಗ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ. ಆಪ್ಲೃ ಧಾತು ವ್ಯಾಪ್ತಿ ಎಂಬರ್ಥ ಹೊಂದಿದ್ದು, ಕ್ವಿಪ್ ಹ್ರಸ್ವಶ್ಚ ಸೂತ್ರದನ್ವಯ ಅಪ್ ಪದ ಸಿದ್ಧಿಸಿ, ನೀರು ಎಂಬರ್ಥ ಸ್ಫುರಿಸುತ್ತದೆ. ಡುಧಾಞ್ ಧಾತು ಧಾರಣೆ ಎಂಬರ್ಥ ಹೊಂದಿದ್ದು, ಕಿಃ ಪ್ರತ್ಯಯ ಸೇರಿ, ಧಿ ಎಂದಾಗಿ, ಅಪ್+ ಧಿ > ಅಬ್ಧಿ ಪದ ಸಿದ್ಧಿಸಿ, ಸಾಗರ ಎಂಬರ್ಥ ಸ್ಫುರಿಸುತ್ತದೆ. ಅಬ್ಧಿ ಪದಕ್ಕೆ ರಕ್ಷಣೆ ಎಂಬರ್ಥದ ಪಾ ಧಾತು ಮತ್ತು ಕಃ ಪ್ರತ್ಯಯ ಸೇರಿ, ಅಬ್ಧಿಪ ಪದ ಸಿದ್ಧಿಸಿ, […]

ಮುಂದೆ ಓದಿ

ನಿರ್ವಹಣೆ,ಲೇಖನ,ಗರ್ವ, ವಂಧ್ಯಾ

ಪದ ಚಿಂತನ ನಿರ್ವಹಣೆ/ಲೇಖನ/ಗರ್ವ/ ವಂಧ್ಯಾ ನಿಭಾಯಿಸುವುದು, ಬರವಣಿಗೆ,ಅಹಂಕಾರ, ಬಂಜೆ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ. ವಹ್ ಧಾತು ಒಯ್ಯುವುದು ಎಂಬರ್ಥ ಹೊಂದಿದ್ದು, ನಿರ್ ಉಪಸರ್ಗ ಮತ್ತು ಲ್ಯುಟ್ ಪ್ರತ್ಯಯ ಸೇರಿ, ನಿರ್ವಹಣ ಪದ ಸಿದ್ಧಿಸಿ, ನಿಭಾಯಿಸುವುದು, ಕಾರ್ಯವನ್ನು ಸುಗಮಗೊಳಿಸುವುದು ಎಂಬರ್ಥಗಳು ಸ್ಫುರಿಸುತ್ತವೆ. ಕನ್ನಡದಲ್ಲಿ ನಿರ್ವಹಣೆ ಎಂದಾಗಿದೆ. ಲಿಖ್ ಧಾತು ಅಕ್ಷರರಚನೆ ಎಂಬರ್ಥ ಹೊಂದಿದ್ದು, ಲ್ಯುಟ್ ಪ್ರತ್ಯಯ ಸೇರಿ, ಲೇಖನ ಪದ ಸಿದ್ಧಿಸಿ, ಬರೆವಣಿಗೆ, ಬರೆಹ, ಗೀರುವುದು, ಪ್ರೇರಣೆ ಮಾಡುವುದು ಮುಂತಾದ ಅರ್ಥಗಳು ಸ್ಫುರಿಸುತ್ತವೆ. ಗರ್ವ್ ಧಾತು ದರ್ಪ […]

ಮುಂದೆ ಓದಿ