ಉಪಾಧ್ಯಾಯ:-

ಪದ ಚಿಂತನ* ಜೀವನ ನಿರ್ವಹಣೆಗಾಗಿ ವಿದ್ಯೆ ಕಲಿಸುವವನು. ಶಿಕ್ಷಣ ನೀಡುವವನು ಎಂಬರ್ಥವನ್ನು ಉಪಾಧ್ಯಾಯ ಪದ ಹೊಂದಿರುವುದು ನಿಘಂಟುಗಳಲ್ಲಿ ಕಂಡುಬರುತ್ತದೆ. ಆದರೆ ಉಪಾಧ್ಯಾಯ ಪದಕ್ಕೆ ಇನ್ನೂ ವಿಶಾಲಾರ್ಥವೇ ಇದೆ. ಅಯ ಎಂಬ ಧಾತುವಿಗೆ ಚಲನೆ,ವಿಷಯದ ಕಡೆ ಗಮನ ಎಂಬರ್ಥಗಳಿದ್ದು ಅಧಿ ಉಪಸರ್ಗ ಸೇರಿ, ಅಧಿ+ ಅಯ+ ಧಞ್( ಅ) ಪ್ರತ್ಯಯ ಸೇರಿ ಅಧಿ+ ಆಯ(ಧಾತುವಿನ ಅಂತ್ಯ ಸ್ವರ ಲೋಪ ಮತ್ತು ಪ್ರತ್ಯಯವು ಅಂತ್ಯಕ್ಕೆ ಸೇರಿ ಆದಿ ದೀರ್ಘ) ಅಧ್ಯಾಯ ಎಂದಾಗುತ್ತದೆ. ಇದರರ್ಥ ವ್ಯಾಸಂಗ, ಅಧ್ಯಯನ. ಉಪ ಎಂದರೆ ಸಾಮೀಪ್ಯ, […]

ಮುಂದೆ ಓದಿ

ಕಾಲ ಕಾಲನು ಬಂಧಿ

ಕಾಲಕಾಲನು ಬಂಧಿ ಮಿಥ್ಯದೊಳಗಿಷ್ಟು ಮೇಣ್ ಸತ್ಯದನ್ವೇಷಣೆಯೊ ಳಿಷ್ಟಿಷ್ಟು ಆಯು ತಾ ನಳಿಯುತಿಹುದಯ್ಯೊ ಕಾಲ ಕಳೆಯಲುಬೇಡ ಕಾಲ ಕಾಯ್ವನೆ ಹೇಳು ಕಾಲಕಾಲನು ಬಂಧಿ ಜಾಣಮೂರ್ಖ // ನಮ್ಮ ಆಯಸ್ಸನ್ನು ಮಿಥ್ಯದೊಳಗಿದ್ದು ಇಷ್ಟು , ಅಂತೆಯೇ ಸತ್ಯದ ಬಗ್ಗೆ ಚಿಂತಿಸುತ್ತಾ ಅದನ್ನು ಹುಡುಕುವುದರೊಳಗೆ ಒಂದಿಷ್ಟು , ಹೀಗೆ ಇಷ್ಟಿಷ್ಟೇ ಕಳೆಯುತ್ತಿದ್ದೇವೆ. ಆದರೆ ಕಾಲವನ್ನು ವ್ಯರ್ಥವಾಗಿ ಕಳೆಯದೇ ಅರ್ಥಪೂರ್ಣವಾಗಿ ಕಳೆಯಬೇಕು. ಜಗತ್ತಿಗೆ ನಾವು ಮಾದರಿಯಾಗಿರಬೇಕು. ಏಕೆಂದರೆ ಕಾಲನು ಯಾರಿಗೂ , ಯಾವುದಕ್ಕೂ ಕಾಯುವುದಿಲ್ಲ. ಆ ಕ್ಷಣ ಬಂತೆಂದರೆ ಮುಗಿಯಿತು. ಎಲ್ಲ ಬಂಧಗಳನ್ನೂ […]

ಮುಂದೆ ಓದಿ

ನಿನ್ನ‌ ನೀ ಮೆಚ್ಚಿ ಸಾರ್

ನಿನ್ನ ನೀ ಮೆಚ್ಚಿ ಸಾರ್ ಸರಳವಾಗಿರೆ ಜಗದಿ ಮರುಳನೆನುವರು ಮಂದಿ ಬಿಗುವಾಗಲೇಗುವುದು ಬಲುಕಷ್ಟಮೆಂಬರ್ ಅವರ ಮೆಚ್ಚಿಪೆನೆಂಬ ಗೊಡವೆಯೇತಕೆ ದೂಡು ನಿನ್ನ ನೀ ಮೆಚ್ಚಿ ಸಾರ್ ಜಾಣಮೂರ್ಖ // ನಾವು ನಮ್ಮ ಬದುಕಿನ ಬಹಳಷ್ಟು ಕಾಲ ಬೇರೆಯವರಿಗಾಗಿಯೇ ಬದುಕುತ್ತೇವೆ. ಅವರು ಮೆಚ್ಚಲಿ ಇವರು ಮೆಚ್ಚಲಿ ಅಂತ. ಈ ನಿಟ್ಟಿನಲ್ಲಿ ಯೋಚಿಸಿ ಗೆಳೆಯರೇ , ನೀವು ತುಂಬಾ ಸರಳವಾಗಿದ್ದರೆ ನಿಮ್ಮನ್ನು ಮರುಳ ಎನ್ನುತ್ತಾರೆ. ಹೇಗಿರಬಹುದಿತ್ತು ! ಅವನಿಗೆ ಪ್ರಾಪಂಚಿಕ ಜ್ಞಾನವೇ ಇಲ್ಲ , ಬದುಕೋ ದಾರೀನೇ ಗೊತ್ತಿಲ್ಲ ಎಂದು ಜರಿಯುತ್ತಾರೆ. […]

ಮುಂದೆ ಓದಿ

ಜಾಣಮೂರ್ಖ

ಹಸನುಗೊಳಿಸಿಯೆ ಬಿತ್ತು ಬಿತ್ತು ಹಸನಿರಲೇನು ಭೂಮಿ ಹಸನಿರದಿರಲು ! ಮನದಿ ಮಾಲಿನ್ಯವಿರೆ ಜಾನ ಡೊಂಕೇನು ? ಕರಲೊಳಗೆ ಬೀಳ್ದ ಬಿ ತ್ತೆಂತು ಮರವಾಗುವುದೊ ? ಹಸನುಗೊಳಿಸಿಯೆ ಬಿತ್ತು ಜಾಣಮೂರ್ಖ// ಬಿತ್ತನೆಯ ಬೀಜವು ಎಷ್ಟೇ ಯೋಗ್ಯವಾಗಿದ್ದರೂ ಸಹ ಭೂಮಿ ಫಲವತ್ತಾಗಿಲ್ಲದಿದ್ದರೆ ! ಬೆಳೆ ಫಲಿಸುವುದೇನು ? ಅಂತೆಯೇ ಸುಜ್ಞಾನ. ಅರಗಿಸಿಕೊಳ್ಳುವ ಮನಸ್ಸೇ ಮಲಿನಗೊಂಡಿದ್ದರೆ ಜ್ಞಾನವೇನು ಮಾಡುತ್ತದೆ? ಕರಲು (ಕ್ಷಾರಯುಕ್ತ) ನೆಲದಲ್ಲಿ ಬಿತ್ತಿದ ಬೀಜ ಹೆಮ್ಮರವಾಗುವುದೇನು? ಬಿತ್ತುವವರಿಗೂ , ಬಿತ್ತಿಸಿಕೊಳ್ಳುವ ನೆಲಕ್ಕೂ ಎರಡಕ್ಕೂ ಕಸುವಿರಬೇಕು. ನೆಲವು ಹಸನಾಗಿಲ್ಲದಿದ್ದರೆ ಅದನ್ನು ನೀರು […]

ಮುಂದೆ ಓದಿ

ವಾಟ್ಸ್ಯಾಪ್‌‌ ಬಳಕೆದಾರರು ತಿಳಿದಿರಲೇಬೇಕಾದ ಮಾಹಿತಿ ಇದು

ವಾಟ್ಸ್ಯಾಪ್‌‌ ಬಳಕೆದಾರರು ತಿಳಿದಿರಲೇಬೇಕಾದ ಮಾಹಿತಿ ಇದು ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸ್ಯಾಪ್‌ ‌ ತನ್ನ ಪ್ಲಾಟ್ಫಾರ್ಮ್ ಅನ್ನು ನಿರಂತರವಾಗಿ ನವೀಕರಿಸುತ್ತಾ ಬಂದಿದೆ. ಇದೀಗ ಫೇಸ್‌ಬುಕ್‌ ಒಡೆತನದ ಮೆಸೇಜಿಂಗ್‌ ಅಪ್ಲಿಕೇಶನ್‌ ಮತ್ತೊಂದು ವೈಶಿಷ್ಟ್ಯವನ್ನು ಜಾರಿಗೆ ತಂದಿದೆ. ಸಾಮಾನ್ಯವಾಗಿ ಹೆಚ್ಚಿ ಕಿರಿಕಿರಿ ಆಗುವ ಗ್ರೂಪ್‌ಗಳನ್ನು ಇದು ನಿಯಂತ್ರಿಲಿದೆ. ಈ ಮೂಲಕ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಲಿದೆ. ವಾಟ್ಸ್ಯಾಪ್‌‌ ʼಮ್ಯೂಟ್‌ ಆಲ್ವೇಸ್‌’ ಎಂಬ ಹೊಸ ವೈಶಿಷ್ಟ್ಯವನ್ನು ಪರಿಚಯಿಸಲಿದೆ. ಈ ವಿಶೇಷ ಫೀಚರ್‌ ನಮಗೆ ಕಿರಿಕಿರಿ ಎನಿಸುವ ಗ್ರೂಪ್‌ಗಳ ನೋಟಿಫಿಕೇಶನ್‌ಗಳನ್ನು ಶಾಶ್ವತವಾಗಿ ನಿರ್ಬಂಧಿಸಲು […]

ಮುಂದೆ ಓದಿ