ಪದ ಚಿಂತನ

ಪದ ಚಿಂತನ

ಪದ ಚಿಂತನ

ಶ್ರೇಯಸ್/ ಸ್ಪರ್ಧೆ/ ಸಾಧ್ಯ

ಅಭಿವೃದ್ಧಿ, ಪೈಪೋಟಿ, ಮಾಡಬಹುದಾದ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ.

ಪ್ರಶಸ್ಯ ಪದ ಶ್ರೇಷ್ಠ ಎಂಬರ್ಥವಿದ್ದು, ಪ್ರಶಸ್ಯಸ್ಯ ಶ್ರಃ ಸೂತ್ರದನ್ವಯ ಶ್ರ ಎಂದಾಗಿ,
ಈಯಸುನ್ ಪ್ರತ್ಯಯ ಸೇರಿ, ಶ್ರೇಯಸ್ ಪದ ಸಿದ್ಧಿಸಿ, ಅಭ್ಯುದಯ, ಏಳಿಗೆ, ಶ್ರೇಷ್ಠ, ಮುಕ್ತಿ ಮುಂತಾದ ಅರ್ಥಗಳು ಸ್ಫುರಿಸುತ್ತವೆ.

ಸ್ಪರ್ಧ್ ಧಾತು ಸಂಘರ್ಷ ಎಂಬರ್ಥ ಹೊಂದಿದ್ದು, ಅಙ್ ಪ್ರತ್ಯಯ ಸೇರಿ, ಸ್ಪರ್ಧಾ ಪದ ಸಿದ್ಧಿಸಿ, ಮೇಲಾಟ, ಪೈಪೋಟಿ, ಇನ್ನೊಬ್ಬರನ್ನು ಸೋಲಿಸುವ ಪ್ರಯತ್ನ ಮುಂತಾದ ಅರ್ಥಗಳು ಸ್ಫುರಿಸುತ್ತವೆ. ಕನ್ನಡದಲ್ಲಿ ಸ್ಫರ್ಧೆ ಎಂದಾಗಿದೆ.

ಸಾಧ್ ಧಾತು ಸ್ವಭಾವ ಎಂಬರ್ಥ ಹೊಂದಿದ್ದು, ಣ್ಯತ್ ಪ್ರತ್ಯಯ ಸೇರಿ, ಸಾಧ್ಯ ಪದ ಸಿದ್ಧಿಸಿ, ಕಾರ್ಯನಿರ್ವಹಣೆ, ಕಾರ್ಯಸಿದ್ಧಿ ಮಾಡುವುದು, ಮಾಡಬಹುದಾದ ಎಂಬರ್ಥಗಳು ಸ್ಫುರಿಸುತ್ತವೆ.

ಓದಿದ್ದಕ್ಕಾಗಿ ಧನ್ಯವಾದಗಳು.??

ಅ.ನಾ.

Total Page Visits: 189 - Today Page Visits: 1