ವಿಪರೀತ,ಆಶ್ಚರ್ಯ/ನಿಮಿಷ

ಪದ ಚಿಂತನ

ವಿಪರೀತ,ಆಶ್ಚರ್ಯ/ನಿಮಿಷ

ಅತಿಯಾದ, ಅಚ್ಚರಿ, ೬೦ ಸೆಕೆಂಡುಗಳ ಕಾಲ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ.

ಇಣ್ ಧಾತು ಚಲನೆ ಎಂಬರ್ಥ ಹೊಂದಿದ್ದು, ವಿ+ ಪರಿ ಉಪಸರ್ಗಗಳು ಮತ್ತು ಕ್ತಃ ಪ್ರತ್ಯಯ ಸೇರಿ, ವಿಪರೀತ ಪದ ಸಿದ್ಧಿಸಿ, ಪ್ರತಿಕೂಲ, ವ್ಯತ್ಯಾಸವಾದ, ವಿರುದ್ಧವಾದ, ಹಿಂದುಮುಂದಾದ ಎಂಬರ್ಥಗಳು ಸ್ಫುರಿಸುತ್ತವೆ. ಆದರೆ ಕನ್ನಡದಲ್ಲಿ ಅತಿಯಾದ, ಹೆಚ್ಚು, ಬಹಳ ಎಂಬ ಬೇರೆ ಅರ್ಥಗಳೇ ಬಂದುಬಿಟ್ಟಿದೆ.

ಚರ್ ಧಾತು ಚಲನೆ ಎಂಬರ್ಥ ಹೊಂದಿದ್ದು, ಆ ಉಪಸರ್ಗ ಮತ್ತು ಯತ್+ ಸುಟ್ ಪ್ರತ್ಯಯಗಳು ಸೇರಿ ಆಶ್ಚರ್ಯ ಪದ ಸಿದ್ಧಿಸಿ, ವಿಸ್ಮಯ, ಅಚ್ಚರಿ, ಅದ್ಭುತ ಎಂಬರ್ಥಗಳು ಸ್ಫುರಿಸುತ್ತವೆ.

ಮಿಷ ಧಾತು ಸ್ಪರ್ಧೆ ಎಂಬರ್ಥ ಹೊಂದಿದ್ದು ನಿ ಉಪಸರ್ಗ ಮತ್ತು ಘಞ್ ಪ್ರತ್ಯಯ ಸೇರಿ ನಿಮಿಷ ಪದ ಸಿದ್ಧಿಸಿ, ಕಣ್ಣುಮುಚ್ಚುವುದು, ವಿಷ್ಣು, ಕಣ್ಣುಮುಚ್ಚಿ ತೆರೆಯುವ ಸಮಯ ಎಂಬರ್ಥಗಳು ಸ್ಫುರಿಸುತ್ತವೆ. ಆದರೆ ಕನ್ನಡದಲ್ಲಿ ೬೦ ಸೆಕೆಂಡುಗಳ ಕಾಲ ಎಂಬರ್ಥವಿದೆ.

ಓದಿದ್ದಕ್ಕಾಗಿ ಧನ್ಯವಾದಗಳು.??

ಅ.ನಾ.

Total Page Visits: 216 - Today Page Visits: 1