ಸಂಧ್ಯಾ,ಶಾಲಿವನ,ಸ್ಥಿರಾ,ವರ್ಣ

ಪದ ಚಿಂತನ

ಸಂಧ್ಯಾ,ಶಾಲಿವನ,ಸ್ಥಿರಾ,ವರ್ಣ

ಸಂಜೆ, ಭತ್ತದಗದ್ದೆ, ಭೂಮಿ,ಬಣ್ಣ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ.

ಧ್ಯೈ ದಾತು ಧ್ಯಾನ ಎಂಬರ್ಥ ಹೊಂದಿದ್ದು, ಸಂ ಉಪಸರ್ಗ ಮತ್ತು ಅಙ್ ಪ್ರತ್ಯಯ ಸೇರಿ, ಸಂಧ್ಯಾ ಪದ ಸಿದ್ಧಿಸಿ ಸೂರ್ಯನ ಉದಯ ಮತ್ತು ಅಸ್ತಮ ಕಾಲ ಎಂಬರ್ಥವಿದೆ. ಕನ್ನಡದಲ್ಲಿ ಸಂಜೆ ಎಂಬರ್ಥದಲ್ಲಿ ಬಳಕೆಯಲ್ಲಿದೆ.

ಶಲ್ ಧಾತು ಚಲನೆ ಎಂಬರ್ಥ ಹೊಂದಿದ್ದು, ಣಿಚ್+ ಇಃ ಪ್ರತ್ಯಯಗಳು ಸೇರಿ, ಶಾಲಿ ಪದ ಸಿದ್ಧಿಸಿ, ಭತ್ತ( ಬತ್ತ) ಎಂಬರ್ಥ ಸ್ಫುರಿಸುತ್ತದೆ. ಇದಕ್ಕೆ ವನ ಪದ ಸೇರಿ, ಶಾಲಿವನ ಪದವು ಬತ್ತದಗದ್ದೆ ಎಂಬರ್ಥ ಸ್ಫುರಿಸುತ್ತದೆ.

ಷ್ಟಾ ಧಾತು ನಿಶ್ಚಲ ಎಂಬರ್ಥ ಹೊಂದಿದ್ದು, ಕಿರಚ್ ಪ್ರತ್ಯಯ ಟಿಲೋಪೋ ನಿಪಾ ಸೂತ್ರದನ್ವಯ ಸ್ಥಿರಾ ಪದ ಸಿದ್ಧಿಸಿ, ಭೂಮಿ ಎಂಬರ್ಥ ಸ್ಫುರಿಸುತ್ತದೆ. ಕನ್ನಡದಲ್ಲಿ ತಿರೆ ಎಂಬ ತದ್ಭವ ರೂಪದಲ್ಲಿ ಬಳಕೆಯಲ್ಲಿದೆ.

ವರ್ಣ್ ಧಾತು ಸ್ತುತಿ ಎಂಬರ್ಥ ಹೊಂದಿದ್ದು, ಘಞ್ ಪ್ರತ್ಯಯ ಸೇರಿ, ವರ್ಣ ಪದ ಸಿದ್ಧಿಸಿ, ಬಣ್ಣ, ಹೊಗಳಿಕೆ, ಆಕಾರ,ರೂಪ,ಗುಣ ಮುಂತಾದ ಅರ್ಥಗಳು ಸ್ಫುರಿಸುತ್ತವೆ.

ಓದಿದ್ದಕ್ಕಾಗಿ ಧನ್ಯವಾದಗಳು.??

ಅ.ನಾ

Total Page Visits: 271 - Today Page Visits: 2