2021 ರ ಮಾರ್ಚ್ ಮಾಹೆಯಲ್ಲಿ ನಡೆದ ಗಣಕಯಂತ್ರ ಶಿಕ್ಷಣ ಪರೀಕ್ಷೆಯ ಫಲಿತಾಂಶ ಪ್ರಕಟ

ಪ್ರಚಲಿತ ಸುದ್ಧಿ ಸುದ್ಧಿ


2021 ರ ಮಾರ್ಚ್ ಮಾಹೆಯಲ್ಲಿ ನಡೆದ ಗಣಕಯಂತ್ರ ಶಿಕ್ಷಣ ಪರೀಕ್ಷೆಯ ಫಲಿತಾಂಶವನ್ನು
ದಿನಾಂಕ:21/4/2021 ರ ಅಪರಾಹ್ನ 3:00 ಗಂಟೆಗೆ ಮಂಡಳಿಯ ವಬ್ ಸೈಟ್ http://sslc.karnataka.gov.in
ನಲ್ಲಿ ಪ್ರಕಟಿಸಲಾಗುವುದು. ಸದರಿ ಫಲಿತಾಂಶವು ಎಲ್ಲಾ ಗಣಕಯಂತ್ರ ಶಿಕ್ಷಣ ಸಂಸ್ಥೆಗಳ ಲಾಗಿನ್‌ನಲ್ಲಿ
ದಿನಾಂಕ:22N4/20 21 ರಂದು ಲಭ್ಯ ಮಾಡಲಾಗುವುದು, ಸಂಸ್ಥೆಗಳ ಮುಖ್ಯಸ್ಥರು ಫಲಿತಾಂಶ ಪಟ್ಟಿಯನ್ನು
ಡೌನ್‌ಲೋಡ್ ಮಾಡಿಕೊಂಡು ತಮ್ಮ ಸಂಸ್ಥೆಯ ಸೂಚನಾ ಫಲಕದಲ್ಲಿ ಪ್ರಕಟಿಸುವುದು. ಫಲಿತಾಂಶದಲ್ಲಿ ತಿದ್ದುಪಡಿ
ಇದ್ದಲ್ಲಿ ಫಲಿತಾಂಶ ಪ್ರಕಟಣೆಯಾದ 15 ದಿನಗಳೊಳಗಾಗಿ ಸಂಸ್ಥೆಯ ಮೂಲಕ ಪ್ರಸ್ತಾವನೆ ಸಲ್ಲಿಸುವುದು,
ಪ್ರಸ್ತಾವನೆಯನ್ನು ಪರಿಶೀಲಿಸಿ ನಿಯಮಾನುಸಾರ ಫಲಿತಾಂಶವನ್ನು ತಿದ್ದುಪಡಿ ಮಾಡಲು ಕ್ರಮ ವಹಿಸಲಾಗುವುದು.
ಪರೀಕ್ಷೆಯಲ್ಲಿ ದುರಾಚರಣೆ, ವಂಚನೆ, ಅನುಚಿತ ವರ್ತನೆ, ನಕಲು ಮಾಡಿರುವುದು ಮೊದಲಾದವುಗಳಿಂದ
ಪ್ರಭಾವಿತವಾಗಿದೆ ಎಂದು ಕಂಡು ಬಂದಲ್ಲಿ ಅಂತಹ ಫಲಿತಾಂಶವನ್ನು ಫಲಿತಾಂಶ ಪ್ರಕಟವಾದ ನಂತರವೂ
ನಿಯಮಾನುಸಾರ ತಡೆಹಿಡಿಯುವ ರದ್ದುಪಡಿಸುವ, ಮಾರ್ಪಡಿಸಿ ಪ್ರಕಟಿಸುವ ಅಧಿಕಾರವನ್ನು ಮಂಡಳಿ
ಹೊಂದಿರುತ್ತದೆ.
2021 ರ ಮಾರ್ಚ್‌ ಮಣೆಯ ಗಣಕಯಂತ್ರ ಶಿಕ್ಷಣ ಪರೀಕ್ಷೆಯ ಉತ್ತರ ಪತ್ರಿಕೆಗಳ ಛಾಯಾಪ್ರತಿಗಾಗಿ
ಹಾಗೂ ಮರು ಮೌಲ್ಯಮಾಪನಕ್ಕಾಗಿ ನಿಗಧಿತ ಅರ್ಜಿ ಸಲ್ಲಿಸುವ ವೇಳಾಪಟ್ಟಿ ಈ ಕೆಳಕಂಡಂತಿದೆ.
ಮಾರ್ಚ್‌ ಮಾಹೆಯ ಗಣಕಯಂತ್ರ ಶಿಕ್ಷಣ ಪರೀಕ್ಷೆಯ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿಯನ್ನು ಪಡೆಯಲು ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 23/04/2021


2021 ರ ಮಾರ್ಚ್ ಮಾಹೆಯ ಗಣಕಯಂತ್ರ ಶಿಕ್ಷಣ ಪರೀಕ್ಷೆಯ ಉತ್ತರ ಪತ್ರಿಕೆಗಳ ಪಡೆಯಲು ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ 03/05/2021


2021 ಮಾಚ್೯ ಮಾಹೆಯ ಗಣಕಯಂತ್ರ ಶಿಕ್ಷಣ ಪರೀಕ್ಷೆಯ ಉತ್ತರ ಪತ್ರಿಕೆಗಳ | ಮರುಮೌಲ್ಯಮಾಪನ/ಅಂಶಗಳ ಮರುಎಣಿಕೆಗೆ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ 23/04/20 21


2021 ರ ಮಾರ್ಚ್ ಮಾಹಯ
ಗಣಕಯಂತ್ರ ಶಿಕ್ಷಣ ಪರೀಕ್ಷೆಂತು ಉತ್ತರ ಪತ್ರಿಕೆಗಳ
ಮರುಮೌಲ್ಯಮಾಪನ/ಅಂಕಗಳ ಮರುಎಣಿಕೆಗೆ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ 07/05/2021
ಮರುಎಣಿಕೆ ಬಯಸುವ ವಿದ್ಯಾರ್ಥಿಗಳು (ಥಿಯರಿ ಉತ್ತರ ಪತ್ರಿಕೆ ಮಾತ್ರ) ಕಡ್ಡಾಯವಾಗಿ ಸಂಬಂಧಪಟ್ಟ ವಿಷಯದ
ಉತ್ತರ ಪತ್ರಿಕೆಯ ಛಾಯಾಪ್ರತಿಯನ್ನು ಪಡೆಯಬೇಕಾಗಿರುತ್ತದೆ. ನೇರವಾಗಿ ಮರುಎಣಿಕೆಗಾಗಿ ಅರ್ಜಿ ಸಲ್ಲಿಸುವಂತಿಲ್ಲ.
ಛಾಯಾ ಪ್ರತಿಯನ್ನು ಪಡೆದ ನಂತರ ಅಂಕಗಳ ಎಣಿಕೆಯಲ್ಲಿ ವ್ಯತ್ಯಾಸವಿದ್ದಲ್ಲಿ ಖಚಿತಪಡಿಸಿಕೊಂಡ ನಂತರವೇ
ಮರುಎಣಿಕೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಈ ಬಗ್ಗೆ ಮಾಹಿತಿಯನ್ನು ಅಭ್ಯರ್ಥಿಗಳಿಗೆ SMS ಮೂಲಕ ನೋಂದಾಯಿತ ಮೊಬೈಲ್ ಸಂಖ್ಯೆಗೆ ರವಾನಿಸಲಾಗುವುದು ಹಾಗೂ ಅಂಕಗಳಲ್ಲಿ ವ್ಯತ್ಯಾಸವಾಗಿದ್ದಲ್ಲಿ ಶುಲ್ಕವನ್ನು ಹಿಂದಿರುಗಿಸಲಾಗುವುದು,
ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲು ಉತ್ತರ ಪತ್ರಿಕೆಗಳ
ಛಾಯಾಸಿ ಪಡೆದ ನಂತರ ಆನ್‌ಲೈನ್ ಮೂಲಕ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಮರುಮೌಲ್ಯಮಾಪನದ ನಂತರ ಅಥವಾ 10ಕ್ಕಿಂತ ಹೆಚ್ಚು ಅಂಕಗಳ ವ್ಯತ್ಯಾಸವಾಗಿದ್ದಲ್ಲಿ ಶುಲ್ಕವನ್ನು ಹಿಂತಿರುಗಿಸಲಾಗುವುದು.
ಛಾಯಾಪ್ರತಿ ಹಾಗೂ ಮರುಮೌಲ್ಯಮಾಪನಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
ಕಲ್ಪಿಸಿರುವುದರಿಂದ ಭೌತಿಕವಾಗಿ ಅರ್ಜಿಗಳನ್ನು ಸ್ವೀಕರಿಸುವುದನ್ನು ರದ್ದುಪಡಿಸಲಾಗಿದೆ. ಛಾಯಾಪ್ರತಿ
ಮರುಮೌಲ್ಯಮಾಪನಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮಂಡಳಿಯ http://sslc.karnataka.gov.in ದಲ್ಲಿ ಲಭ್ಯವಿದ್ದು, ಸದರಿ ಜಾಲತಾಣದಲ್ಲಿ ಆನ್‌ಲೈನ್‌ನಲ್ಲಿ 1
ಸಲ್ಲಿಸಬಹುದಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ನಂತರ ನಿಗದಿತ ಶುಲ್ಕವನ್ನು ಆನ್‌ಲೈನ್‌ನಲ್ಲಿ DEB,
CARD/CREDIT CARD/NETBANKING ಮೂಲಕ ಅಥವಾ ಆನ್‌ಲೈನ್‌ನಲ್ಲಿ ಜನರೇಟ್ ಆದ ಚಲನ್
ಬಳಸಿ ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ಮೂಲಕ ಪಾವತಿಸಬಹುದಾಗಿದೆ. ಮೌಲ್ಯಮಾಪನಕ್ಕಾಗಿ
ಅರ್ಜಿ ಸಲ್ಲಿಸಿದ ನಂತರ ಅರ್ಜಿ ಸ್ವೀಕಾರವಾದ ಬಗ್ಗೆ ನೋಂದಾಯಿಸಿದ ಮೊಬೈಲ್ ಸಂಖ್ಯೆಗೆ ಎಸ್.ಎಂ.ಎಸ್
ಮುಖಾಂತರ ಮಾಹಿತಿ ರವಾನೆಯಾಗುತ್ತದೆ,

Total Page Visits: 330 - Today Page Visits: 2