ಮಾತೆ,ಕದಳೀ, ದ್ರುಮ,ಚೂತವನ

ಪದ ಚಿಂತನ

ಪದ ಚಿಂತನ

ಮಾತೆ,ಕದಳೀ, ದ್ರುಮ,ಚೂತವನ

ತಾಯಿ, ಬಾಳೆ, ಗಿಡ, ಮಾವಿನತೋಟ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ.

ಮಾನ್ ಧಾತು ಗೌರವಿಸು ಎಂಬರ್ಥವಿದ್ದು, ತೃಚ್+ಆನಙ್ ಪ್ರತ್ಯಯಗಳು ಸೇರಿ, ಮಾತಾ ಪದ ಸಿದ್ಧಿಸಿ, ತಾಯಿ, ಜನನಿ ಎಂಬರ್ಥ ಸ್ಫುರಿಸುತ್ತದೆ. ಕನ್ನಡದಲ್ಲಿ ಮಾತೆ ಎಂದಾಗಿದೆ.

ಕದ್ ಧಾತು ಕೊರತೆ ಎಂಬರ್ಥ ಹೊಂದಿದ್ದು, ಕಲಃ+ಙೀಷ್ ಪ್ರತ್ಯಯಗಳು ಸೇರಿ, ಕದಲೀ ಪದ ಸಿದ್ಧಿಸಿ, ಬಾಳೆಗಿಡ ಎಂಬರ್ಥ ಸ್ಫುರಿಸುತ್ತದೆ. ಕನ್ನಡದಲ್ಲಿ ಕದಳೀ ಎಂದಾಗಿದೆ.

ದ್ರು ಧಾತು ಚಲನೆ ಎಂಬರ್ಥ ಹೊಂದಿದ್ದು, ಡುಃ+ಮಃ ಪ್ರತ್ಯಯಗಳು ಸೇರಿ ದ್ರುಮ ಪದ ಸಿದ್ಧಿಸಿ, ಗಿಡ,ವೃಕ್ಷ ಎಂಬರ್ಥಗಳು ಸ್ಫುರಿಸುತ್ತವೆ.

ಚೂಷ್ ಧಾತು ಪಾನ ಎಂಬರ್ಥ ಹೊಂದಿದ್ದು, ಕ್ತಃ ಪ್ರತ್ಯಯ ಸೇರಿ, ಚೂತ ಪದ ಸಿದ್ಧಿಸಿ, ಮಾವು ಎಂಬರ್ಥ ಸ್ಫುರಿಸುತ್ತದೆ. ಇದಕ್ಕೆ ತೋಟ ಎಂಬರ್ಥದ ವನ ಪದ ಸೇರಿ, ಚೂತವನ ಪದವು ಮಾವಿನತೋಟ ಎಂಬರ್ಥ ಸ್ಫುರಿಸುತ್ತದೆ.

ಓದಿದ್ದಕ್ಕಾಗಿ ಧನ್ಯವಾದಗಳು.??

ಅ.ನಾ