ಪದ ಚಿಂತನ
ನಿರ್ವಹಣೆ/ಲೇಖನ/ಗರ್ವ/ ವಂಧ್ಯಾ
ನಿಭಾಯಿಸುವುದು, ಬರವಣಿಗೆ,ಅಹಂಕಾರ, ಬಂಜೆ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ.
ವಹ್ ಧಾತು ಒಯ್ಯುವುದು ಎಂಬರ್ಥ ಹೊಂದಿದ್ದು, ನಿರ್ ಉಪಸರ್ಗ ಮತ್ತು ಲ್ಯುಟ್ ಪ್ರತ್ಯಯ ಸೇರಿ, ನಿರ್ವಹಣ ಪದ ಸಿದ್ಧಿಸಿ, ನಿಭಾಯಿಸುವುದು, ಕಾರ್ಯವನ್ನು ಸುಗಮಗೊಳಿಸುವುದು ಎಂಬರ್ಥಗಳು ಸ್ಫುರಿಸುತ್ತವೆ. ಕನ್ನಡದಲ್ಲಿ ನಿರ್ವಹಣೆ ಎಂದಾಗಿದೆ.
ಲಿಖ್ ಧಾತು ಅಕ್ಷರರಚನೆ ಎಂಬರ್ಥ ಹೊಂದಿದ್ದು, ಲ್ಯುಟ್ ಪ್ರತ್ಯಯ ಸೇರಿ, ಲೇಖನ ಪದ ಸಿದ್ಧಿಸಿ, ಬರೆವಣಿಗೆ, ಬರೆಹ, ಗೀರುವುದು, ಪ್ರೇರಣೆ ಮಾಡುವುದು ಮುಂತಾದ ಅರ್ಥಗಳು ಸ್ಫುರಿಸುತ್ತವೆ.
ಗರ್ವ್ ಧಾತು ದರ್ಪ ಎಂಬರ್ಥ ಹೊಂದಿದ್ದು, ಘಞ್ ಪ್ರತ್ಯಯ ಸೇರಿ, ಗರ್ವ ಪದ ಸಿದ್ಧಿಸಿ, ಅಹಂಕಾರ, ಅಭಿಮಾನ, ಸೊಕ್ಕು, ಹಮ್ಮು ಮುಂತಾದ ಅರ್ಥಗಳು ಸ್ಫುರಿಸುತ್ತವೆ.
ಬಂಧ್ ಧಾತು ಕಟ್ಟುವುದು ಎಂಬರ್ಥ ಹೊಂದಿದ್ದು, ಯತ್+ ಅಙ್ ಪ್ರತ್ಯಯಗಳು ಮತ್ತು ವಬಯೋರಭೇದಃ ಸೂತ್ರದನ್ವಯ, ವಂಧ್ಯಾ ಪದ ಸಿದ್ಧಿಸಿ, ಬಂಜೆ, ಫಲವಿಲ್ಲದ, ಫಲಿಸದ ಎಂಬರ್ಥಗಳು ಸ್ಫುರಿಸುತ್ತವೆ.
ಓದಿದ್ದಕ್ಕಾಗಿ ಧನ್ಯವಾದಗಳು.??
ಅ.ನಾ.