ವಿನಿಯೋಗ,ಉಪವನ, ಲೀಲೆ,ಅರ್ಚಿತ

ಪದ ಚಿಂತನ

ಪದ ಚಿಂತನ

ವಿನಿಯೋಗ/ಉಪವನ/ ಲೀಲೆ/ಅರ್ಚಿತ

ಉಪಯೋಗ, ಕೈತೋಟ, ಆಟ, ಪೂಜಿಸಲ್ಪಟ್ಟ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ.

ಯುಜಿರ್ ಧಾತು ಸೇರುವುದು ಎಂಬರ್ಥ ಹೊಂದಿದ್ದು, ವಿ+ ನಿ ಉಪಸರ್ಗಗಳು ಮತ್ತು ಘಞ್ ಪ್ರತ್ಯಯ ಸೇರಿ, ವಿನಿಯೋಗ ಪದ ಸಿದ್ಧಿಸಿ, ಉಪಯೋಗ, ಹಂಚುವುದು, ನಿಯಮಿಸುವುದು ಎಂಬರ್ಥಗಳು ಸ್ಫುರಿಸುತ್ತವೆ.

ಕಾಡು ಎಂಬರ್ಥದ ವನ ಪದಕ್ಕೆ ಉಪ ಉಪಸರ್ಗ ಸೇರಿ, ಉಪವನ ಎಂದಾಗಿ, ಕೈತೋಟ, ಉದ್ಯಾನ, ವನದ ಸಮೀಪ ಎಂಬರ್ಥಗಳು ಸ್ಫುರಿಸುತ್ತವೆ.

ಲೀಙ್ ಧಾತು ಜೊತೆಗೂಡು ಎಂಬರ್ಥ ಹೊಂದಿದ್ದು, ಕ್ವಿಪ್ ಪ್ರತ್ಯಯ ಸೇರಿ ಲೀ ಎಂದಾಗುತ್ತದೆ. ಲಾ ಧಾತು ಸ್ವೀಕಾರ ಎಂಬರ್ಥ ಹೊಂದಿದ್ದು ಕಃ ಪ್ರತ್ಯಯ ಸೇರಿ, ಲಾ ಎಂದಾಗಿ, ಲೀಲಾ ಪದವು ಆಟ,ಕ್ರೀಡೆ,ವಿಲಾಸ, ಅತಿಶಯ, ಸಮೃದ್ಧಿ, ಸೌಂದರ್ಯ ಮುಂತಾದ ಅರ್ಥಗಳು ಸ್ಫುರಿಸುತ್ತವೆ.

ಅರ್ಚ್ ಧಾತು ಪೂಜೆ ಎಂಬರ್ಥ ಹೊಂದಿದ್ದು, ಇನ್+ ಕ್ತಃ ಪ್ರತ್ಯಯಗಳು ಸೇರಿ, ಅರ್ಚಿತ ಪದ ಸಿದ್ಧಿಸಿ, ಪೂಜಿಸಲ್ಪಟ್ಟ, ಆರಾಧಿಸಲ್ಪಟ್ಟ, ವಿಷ್ಣು ಎಂಬರ್ಥಗಳು ಸ್ಫುರಿಸುತ್ತವೆ.

ಓದಿದ್ದಕ್ಕಾಗಿ ಧನ್ಯವಾದಗಳು.??

ಅ.ನಾ.