ದಾತಾರ,ಸಮರ,ಶೌರ್ಯ,ಸಂಪನ್ನ

Uncategorized

ಪದ ಚಿಂತನ

ದಾತಾರ/ಸಮರ/ ಶೌರ್ಯ/ಸಂಪನ್ನ

ದಾನಿ,ಯುದ್ಧ,ಪರಾಕ್ರಮ, ಹೊಂದಿದವನು ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ.

ಡುದಾಞ್ ಧಾತು ದಾನ ಎಂಬರ್ಥ ಹೊಂದಿದ್ದು, ತೃಚ್ ಪ್ರತ್ಯಯ ಸೇರಿ, ದಾತೃ ಪದ ಸಿದ್ಧಿಸಿ, ದಾನಿ,ನೀಡುವವನು ಎಂಬರ್ಥ ಸ್ಫುರಿಸುತ್ತದೆ. ಕನ್ನಡದಲ್ಲಿ ದಾತಾರ ಎಂದಾಗಿದೆ.

ಧಾತು ಚಲನೆ ಎಂಬರ್ಥ ಹೊಂದಿದ್ದು, ಸಂ ಉಪಸರ್ಗ ಮತ್ತು ಘಞ್ ಪ್ರತ್ಯಯ ಸೇರಿ, ಸಮರ ಪದ ಸಿದ್ಧಿಸಿ, ಯುದ್ಧ,ಕಾಳಗ ಎಂಬರ್ಥ ಸ್ಫುರಿಸುತ್ತದೆ.

ಶೂರ್ ಧಾತು ವೀರ ಎಂಬರ್ಥ ಹೊಂದಿದ್ದು, ಅಚ್+ ಷ್ಯಞ್ ಪ್ರತ್ಯಯಗಳು ಸೇರಿ, ಶೌರ್ಯ ಪದ ಸಿದ್ಧಿಸಿ, ಪರಾಕ್ರಮ ಎಂಬರ್ಥ ಸ್ಫುರಿಸುತ್ತದೆ.

ಪದ್ ಧಾತು ಚಲನೆ ಎಂಬರ್ಥ ಹೊಂದಿದ್ದು, ಸಂ ಉಪಸರ್ಗ ಮತ್ತು ಕ್ತಃ ಪ್ರತ್ಯಯ ಸೇರಿ, ಸಂಪನ್ನ ಪದ ಸಿದ್ಧಿಸಿ, ಹೊಂದಿದವನು, ಸಂಪತ್ತಿನಿಂದ ಕೂಡಿದವನು, ನಿಷ್ಣಾತನಾದ, ಹೇರಳವಾದ ಮುಂತಾದ ಅರ್ಥಗಳು ಸ್ಫುರಿಸುತ್ತವೆ.

ಓದಿದ್ದಕ್ಕಾಗಿ ಧನ್ಯವಾದಗಳು.??

ಅ.ನಾ.