ಪದ ಚಿಂತನ
ಸೂನು/ ಮೌನ/ಮಾಧವ/ ಮಹಿ
ಮಗ, ಮಾತಾಡದಿರುವುದು, ನಾರಾಯಣ, ಭೂಮಿ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ.
ಷೂಙ್ ಧಾತು ಪ್ರಸವ ಎಂಬರ್ಥ ಹೊಂದಿದ್ದು, ನುಃ ಪ್ರತ್ಯಯ ಸೇರಿ, ಸೂನು ಪದ ಸಿದ್ಧಿಸಿ, ಮಗ,ಮಗಳು, ಸೂರ್ಯ, ಕಿರಣ, ಎಕ್ಕದ ಗಿಡ ಎಂಬರ್ಥಗಳಿವೆ.
ಮನ್ ಧಾತು ಜ್ಞಾನ ಎಂಬರ್ಥ ಹೊಂದಿದ್ದು, ಇನ್+ ಉತ್ ಚ + ಅಣ್ ಪ್ರತ್ಯಯಗಳು ಸೇರಿ, ಮೌನ ಪದ ಸಿದ್ಧಿಸಿ, ಮಾತಾಡದಿರುವುದು, ಗದ್ದಲವಿಲ್ಲದ ಎಂಬರ್ಥ ಸ್ಫುರಿಸುತ್ತದೆ.
ಮಾ ಧಾತು ಅಳತೆ ಎಂಬರ್ಥ ಹೊಂದಿದ್ದು, ಕಃ ಪ್ರತ್ಯಯ ಸೇರಿ, ಮಾ ಎಂದಾಗಿ ಲಕ್ಷ್ಮೀ ಎಂಬರ್ಥ ಸ್ಫುರಿಸುತ್ತದೆ. ಧೂಞ್ ಧಾತು ಕಂಪನ ಎಂಬರ್ಥ ಹೊಂದಿದ್ದು, ಣಿಚ್+ ಅಚ್ ಪ್ರತ್ಯಯಗಳು ಸೇರಿ, ಧವ ಪದ ಸಿದ್ಧಿಸಿ, ಪತಿ,ಗಂಡ ಎಂಬರ್ಥ ಸ್ಫುರಿಸುತ್ತದೆ. ಮಾಧವ ಸಮಸ್ತಪದವು ಲಕ್ಷ್ಮಿಯಪತಿ, ನಾರಾಯಣ ಎಂಬರ್ಥ ಸ್ಫುರಿಸುತ್ತದೆ.
ಮಹ್ ಧಾತು ಪೂಜೆ ಎಂಬರ್ಥ ಹೊಂದಿದ್ದು, ಇಃ ಪ್ರತ್ಯಯ ಸೇರಿದಾಗ ಮಹಿ ಎಂದಾಗುತ್ತದೆ, ಙೀಷ್ ಪ್ರತ್ಯಯ ಸೇರಿದಾಗ ಮಹೀ ಎಂದಾಗುತ್ತದೆ. ಭೂಮಿ,ಮಹಿಮೆ ಎಂಬರ್ಥಗಳು ಸ್ಫುರಿಸುತ್ತವೆ.
ಓದಿದ್ದಕ್ಕಾಗಿ ಧನ್ಯವಾದಗಳು.??
ಅ.ನಾ.