ನಾನೇಕೆ ಹಾಗಿಲ್ಲ !?

ನಾನೇಕೆ ಹಾಗಿಲ್ಲ !? ತಿಪ್ಪೆಯೊಳಗೊಪ್ಪದಿಂ ಬೆಳೆದ ವಳ್ಳಿಯ ಒಡಲ ಪೂವಿನೊಳಗೇಂ ಕಂಪು ವೆಂತ ವೈಚಿತ್ರ್ಯ ! ಸಕಲ ಸಿರಿಯಿರಲೇನು ಭಾವಸಿರಿ ಇರದಿರಲು ಲೇಸೊ ತಿಪ್ಪೆಯ ವಳ್ಳಿ ಜಾಣಮೂರ್ಖ // ಸ್ನೇಹಿತರೇ , ತಿಪ್ಪೆಯನ್ನು ಕಂಡರೆ ನಮಗೆಲ್ಲಾ ಎಂತಹುದೋ ಅಸಹ್ಯ ! ಆದರೆ ಆ ತಿಪ್ಪೆಯ ಗೊಬ್ಬರ ಹಾಕಿಯೇ ಬೆಳೆದ ಸೊಪ್ಪಿನ ಸಾರು , ಸಾರ ಎರಡನ್ನೂ ಚಪ್ಪರಿಸಿಕೊಂಡು ಸವಿಯುತ್ತೇವೆ ! ಎಂತಹಾ ವಿಪರ್ಯಾಸ ಅಲ್ಲವೆ !? ಹಾಗೇನೇ ತಿಪ್ಪೆಯ ಹೂವೂ ಸಹ ! ತಿಪ್ಪೆಯ ಸಾರವುಂಡೇ ಬೆಳೆದ […]

ಮುಂದೆ ಓದಿ

ಪ್ರಸ್ತಾವ/ ಪ್ರಸ್ತಾವನಾ

ಪದ ಚಿಂತನ* ಪ್ರಸ್ತಾವ/ ಪ್ರಸ್ತಾವನಾ ಪೀಠಿಕೆ, ಪ್ರಾರಂಭ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ. ಸ್ತು ಧಾತು ಹೊಗಳು ಎಂಬರ್ಥ ಹೊಂದಿದ್ದು ಪ್ರತ್ಯಯ ಸೇರಿ ಸ್ತಾವ ಎಂದಾಗಿ, ಉಪಸರ್ಗ ಪ್ರ ಸೇರಿ ಪ್ರಸ್ತಾವ ಪದ ಸಿದ್ಧಿಸುತ್ತದೆ. ಪೀಠಿಕೆ, ಸಂದರ್ಭ, ಅವಕಾಶ, ಉಲ್ಲೇಖ ಎಂಬರ್ಥಗಳು ಸ್ಫುರಿಸುತ್ತವೆ. ಕನ್ನಡದಲ್ಲಿ ಪ್ರಸ್ತಾಪ ಎಂಬ ಅಪಪ್ರಯೋಗ ಬಳಕೆಯಲ್ಲಿದೆ. ಸ್ತು ಧಾತು ಸ್ತವ> ಸ್ತಾವ ಆಗಬಹುದೇ ವಿನಾ ಸ್ತಾಪ ಆಗುವುದಿಲ್ಲ. ಪ್ರಸ್ತಾವ ಪದಕ್ಕೆ ನಾ ಪ್ರತ್ಯಯ ಸೇರಿ ಪ್ರಸ್ತಾವನಾ ಎಂದಾದಾಗ ಪ್ರಾರಂಭ, ಮೊದಲು, ನಾಟಕದ ಆಮುಖ( […]

ಮುಂದೆ ಓದಿ

ಗುರು ಸನ್ನಿಧಿಯೆ ಸಾಕು

ಗುರು ಸನ್ನಿಧಿಯೆ ಸಾಕು ನನೆಯರಳಿ ನಗೆ ರವಿಯ ಕಿರಣ ಸ್ಪರ್ಶವು ಸಾಕು ! ಬಲದೊಳರಳಿಸಲದರ ಬದುಕೆಂತು ಪೇಳು !? ಸಾಜದೊಳಗೆದೆಯರಳೆ ಗುರುಸನ್ನಿಧಿಯೆ ಸಾಕು ಬಲವಂತವೇ ಬೋಧೆ ಜಾಣಮೂರ್ಖ !// ಮೊಗ್ಗರಳಿ ಹೂವಾಗಿ ಕಂಪು ಸೂಸಲು ನೈಸರ್ಗಿಕವಾದ ರವಿಕಿರಣದ ಸ್ಪರ್ಶವಷ್ಟೇ ಸಾಕು. ಬಲವಂತವಾಗಿ ಅರಳಿಸ ಹೋದರೆ ಎಸಳುಗಳು ಹರಿದು , ಹೂವಿನ ಆತ್ಮವೇ ಆದ ಮಕರಂದವು ಕ್ಷಣಾರ್ಧದಲ್ಲಿ ಮಾಯವಾಗುತ್ತದೆ. ಅದರ ಬದುಕು ನಷ್ಟವಾಗುತ್ತದೆ. ನಮ್ಮ ಹೃದಯವೂ ಸಹ ಒಂದು ಮೊಗ್ಗಿನಂತೆಯೇ ! ಅದು ಅರಳಬೇಕು. ಬಲವಂತವಾಗಿ ಅರಳಿಸಬಾರದು. ಅದಕ್ಕೆ […]

ಮುಂದೆ ಓದಿ

ಪ್ರೇರಣ( ಪ್ರೇರಣೆ)/ ಪ್ರೇರಿಸು

ಪದ ಚಿಂತನ* ಪ್ರೇರಣ( ಪ್ರೇರಣೆ)/ ಪ್ರೇರಿಸು ಪ್ರಚೋದನೆ ಎಂಬರ್ಥವು ಈ ಪದಕ್ಕಿದೆ. ಪ್ರಚೋದಿಸು ಎಂದು ಹೇಳಲು ಪ್ರೇರೇಪಿಸು ಎಂಬ ಪದವನ್ನು ವ್ಯಾಪಕವಾಗಿ ಕನ್ನಡದಲ್ಲಿ ಬಳಸಲಾಗುತ್ತಿದೆ. ಇದು ದೋಷಯುಕ್ತ ಪದ. ಈರ್ ಧಾತು ಚಲನೆ ಎಂಬರ್ಥ ಹೊಂದಿದ್ದು, ಉಪಸರ್ಗ ಪ್ರ ಮತ್ತು ಪ್ರತ್ಯಯ ಅ+ ಣ ಸೇರಿ ಪ್ರೇರಣ ಪದ ಸಿದ್ಧಿಸುತ್ತದೆ. ಒಂದು ಕಾರ್ಯದಲ್ಲಿ ತೊಡಗಿಸುವಂತೆ ಮಾಡುವುದು, ಉತ್ತೇಜನಗೊಳಿಸುವುದು ಎಂಬರ್ಥಗಳು ಸ್ಫುರಿಸುತ್ತವೆ. ಕನ್ನಡದಲ್ಲಿ ಇದು ಪ್ರೇರಣೆ ಎಂದಾಗಿದೆ. ಈ ಪ್ರೇರಣ ಪದದ ಣ ಪ್ರತ್ಯಯ ತೆಗೆದು, ಕನ್ನಡದ ಇಸು […]

ಮುಂದೆ ಓದಿ

ಇಟ್ಟಂತೆ ಇದ್ದುಬಿಡು

ಇಟ್ಟಂತೆ ಇದ್ದುಬಿಡು ಕೊಟ್ಟು ನೋಡುವನು ತಾ ಕೊಡದೆಯೂ ನೋಡುವನು ಕೊಟ್ಟರೂ ಕೊಡದಂತೆ ಇಟ್ಟುಬಿಡಬಹುದು ! ಕೊಟ್ಟೊಡೇಂ ಕೊಡದೊಡೇ ನಿಟ್ಟಂತೆ ಇದ್ದುಬಿಡು ಕೆಟ್ಟೆನೆಂದೆನಬೇಡ ಜಾಣಮೂರ್ಖ // ಭಗವಂತನು ಮಾನವನ ವಿವಿಧ ಅಗತ್ಯಗಳನ್ನು ಕೊಟ್ಟು ನೋಡುತ್ತಾನೆ. ಹಾಗೆಯೇ ಕೊಡದೆಯೂ ನೋಡುತ್ತಾನೆ. ಕೊಟ್ಟರೂ ಕೊಡದಂತೆ ಇಟ್ಟು ಬಿಡುತ್ತಾನೆ. ಕೆಲವರನ್ನು ನೋಡಿ ಎಲ್ಲ ಇದ್ದರೂ ಏನೂ ಇಲ್ಲದಂತೆಯೇ ಬದುಕುತ್ತಾರೆ. ಅಲ್ಲವೇ !? ಅದಕ್ಕೆ ನಮ್ಮ ಬದುಕು ಹೇಗಿರಬೇಕೆಂದರೆ ದೈವವು ಕೊಡಲಿ , ಕೊಡದಿರಲಿ ಹೇಗಾದರೂ ಇರಲಿ ಇಟ್ಟಂತೆ ಇದ್ದುಬಿಡಬೇಕು. ಅಯ್ಯೋ ನಾ ಕೆಟ್ಟೆನೆನದಂತೆ […]

ಮುಂದೆ ಓದಿ

ಉಜ್ಜ್ವಲ / ತಜ್ಜ್ಞ

ಪದ ಚಿಂತನ* ಉಜ್ಜ್ವಲ / ತಜ್ಜ್ಞ ಪ್ರಕಾಶಮಾನ, ತಿಳಿದವನು ಎಂಬರ್ಥಗಳು ಕ್ರಮವಾಗಿ ಉಜ್ಜ್ವಲ ತಜ್ಜ್ಞ ಪದಗಳಿಗಿವೆ. ಈ ಪದಗಳನ್ನು ಉಜ್ವಲ/ ತಜ್ಞ ಎಂದು ತಪ್ಪು ರೂಪದಲ್ಲೇ ಅನೇಕರು ಬಳಸುತ್ತಾರೆ. ಜ್ವಲ ಧಾತು ದೀಪ್ತಿ,ಹೊಳೆಯುವುದು ಎಂಬರ್ಥ ಹೊಂದಿದ್ದು, ಅದಕ್ಕೆ ಉತ್(ಉದ್) ಉಪಸರ್ಗ ಸೇರಿ, ಶ್ಚುತ್ವಸಂಧಿ ನಿಯಮದಂತೆ ಉಜ್ಜ್ವಲ ಪದ ನಿಷ್ಪತ್ತಿಯಾಗುತ್ತದೆ. ಹೊಳೆಯುತ್ತಿರುವ, ಸ್ವರ್ಣ, ಶುದ್ಧ, ಅರಳಿದ ಎಂಬರ್ಥಗಳಲ್ಲದೆ ನವರಸಗಳಲ್ಲಿ ಪ್ರಕಾಶಮಾನವಾಗಿ ಕಾಣುವ “ಶೃಂಗಾರರಸ” ಎಂಬರ್ಥವೂ ಸ್ಫುರಿಸುತ್ತದೆ. ಜ್ಞಾ ಧಾತು ತಿಳಿವಳಿಕೆ ಎಂಬರ್ಥ ಹೊಂದಿದ್ದು ತತ್ ಪದ ಮತ್ತು ಅ […]

ಮುಂದೆ ಓದಿ

ತಕ್ಷಣ/ ತತ್ಕ್ಷಣ

ಪದ ಚಿಂತನ* ತಕ್ಷಣ/ ತತ್ಕ್ಷಣ ಇವೆರಡೂ ಪದಗಳು ಬೇರೆ ಬೇರೆ ಧಾತುಗಳಿಂದ ನಿಷ್ಪನ್ನವಾಗಿ, ಬೇರೆಬೇರೆ ಅರ್ಥ ಹೊಂದಿವೆ. ತಕ್ಷ ಎಂಬ ಧಾತು ಕೆತ್ತುವುದು ಎಂಬರ್ಥ ಪಡೆದಿದ್ದು, ಅದಕ್ಕೆ ಣ ಪ್ರತ್ಯಯ ಸೇರಿ ತಕ್ಷಣ ಎಂದಾದಾಗ ಮರವನ್ನು ಕತ್ತರಿಸುವುದು,ಕೆತ್ತುವುದು ಎಂಬರ್ಥ ಪಡೆಯುತ್ತದೆ. ಕ್ಷಣ ಧಾತುವಿಗೆ, ಸಮಯ, ಕಾಲ ಎಂಬರ್ಥವಿದ್ದು ಅದಕ್ಕೆ ತತ್ ಎಂಬ ಪದ ಸೇರಿದಾಗ ತತ್ಕ್ಷಣ ಪದವುಂಟಾಗಿ ಅದೇ ವೇಳೆ, ಅದೇ ಕಾಲ ಎಂಬರ್ಥ ಸ್ಫುರಿಸುತ್ತದೆ. ಆದರೆ ಹೆಚ್ಚಾಗಿ, ಆಗಲೇ, ಅದೇಸಮಯ ಎಂಬರ್ಥ ಹೇಳಲು ತಕ್ಷಣ ಬಾ, […]

ಮುಂದೆ ಓದಿ

ವಿಧಿ ಪಡೆಯದ ಭಾಗ್ಯ !

ವಿಧಿ ಪಡೆಯದ ಭಾಗ್ಯ ! ಕೊಡುವ ಭಾಗ್ಯವನೆಲ್ಲ ಬಿಡದೆ ಪಡೆವುದು ವಿಧಿಯು ! ಪಡೆಯದಿಹ ಭಾಗ್ಯಮಿದೆ ಒಡನೆ ಪಡೆ ಕೆಳೆಯ ! ಅಳಿವ ವೈಭೊಗ ತೊರೆ ದಾತ್ಮದರಿವನು ಪಡೆದು ಮುಕ್ತನಾಗೇಳೇಳೊ ಜಾಣಮೂರ್ಖ // ವಿಧಿಯು ನಮಗೆ ಯಾವ ಯಾವ ಭಾಗ್ಯವನ್ನು ನೀಡುವುದೋ ಅದನ್ನೆಲ್ಲಾ ಒಮ್ಮೆ ನಿರ್ದಾಕ್ಷಣ್ಯವಾಗಿ ಹಿಂಪಡೆಯುತ್ತದೆ. ಏನನ್ನೂ ಬಿಡುವುದಿಲ್ಲ. ಇದೊಂದು ಮಹಾ ವಿಯೋಗ. ದುಃಖಕರ ! ಎಲ್ಲವೂ ಹೋಗುತ್ತದೆ , ಯಾವುದೂ ಶಾಶ್ವತವಲ್ಲ ಎಂಬುದು ನಿಶ್ಚಿತವಾದ ಮೇಲೆ ದುಃಖವಾದರೂ ಏಕೆ ? ಅಲ್ಲವೇ ಓ ,ಗೆಳೆಯಾ […]

ಮುಂದೆ ಓದಿ

ಸ್ನೇಹ/ಸ್ನೇಹಿತ

ಪದ ಚಿಂತನ* ಸ್ನೇಹ/ ಸ್ನೇಹಿತ. ಪ್ರೀತಿ, ಮಿತ್ರ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ. ಸ್ನಿಹ್ ಧಾತು ಪ್ರೀತಿ ಅರ್ಥವನ್ನು ಹೊಂದಿದ್ದು, ಪ್ರತ್ಯಯ ಸೇರಿ ಸ್ನೇಹ ಎಂದಾದಾಗ ವಿಶ್ವಾಸ, ಸೌಹಾರ್ದ, ತೈಲ,ಜಿಡ್ಡಿನ ವಸ್ತು ಎಂಬರ್ಥಗಳು ಸ್ಫುರಿಸುತ್ತವೆ. ಸ್ನೇಹ ಜಿಡ್ಡಿನಂತಿರುವುದರಿಂದ ಅದು ಸುಲಭವಾಗಿ ಅಳಿಸಲಾಗದು. ಬಲವಾದ ಬಾಹ್ಯ ಪ್ರಯೋಗದಿಂದ ಮಾತ್ರ ಜಿಡ್ಡಿನ ಅಂತ್ಯ ಸಾಧ್ಯ. ಬಾಹ್ಯ ಶಕ್ತಿಯ ಮಧ್ಯ ಪ್ರವೇಶ ಇಲ್ಲದಿದ್ದರೆ,ಸ್ನೇಹದ ಬಂಧ ಸದಾ ಬಿಗಿಯಾಗಿರುತ್ತದೆ. ಹಾಗಾಗಿ ಸ್ನೇಹ ಅನ್ವರ್ಥನಾಮವಾಗಿ ಬಿಗಿಯಾದ ವಿಶ್ವಾಸ, ಸೌಹಾರ್ದದ ಬಂಧದಲ್ಲಿದೆ. ಸ್ನೇಹ ಪದಕ್ಕೆ ಇತ […]

ಮುಂದೆ ಓದಿ