ಸೌಮ್ಯ/ ಸನ್ಮಂಗಳ

ಪದ ಚಿಂತನ* ಸೌಮ್ಯ/ ಸನ್ಮಂಗಳ ಮೃದುವಾದ, ಶ್ರೇಷ್ಠವಾದ ಶ್ರೇಯಸ್ಸು ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ. ಷು ಧಾತುವಿಗೆ ಉತ್ಪತ್ತಿ ಎಂಬರ್ಥವಿದ್ದು, ಮನ್ ಪ್ರತ್ಯಯ ಸೇರಿ ಸೋಮ ಪದವುಂಟಾಗಿ, ಯಃ ಮತ್ತು ಅಣ್ ಪ್ರತ್ಯಯಗಳು ಸೇರಿ ಸೌಮ್ಯ ಪದದ ನಿಷ್ಪತ್ತಿಯಾಗುತ್ತದೆ. ಬುಧಗ್ರಹ, ಚಂದ್ರ, ಶಾಂತವಾದ, ಕೋಪತಾಪವಿಲ್ಲದ, ಮನೋಹರವಾದ ಮುಂತಾದ ಅರ್ಥಗಳು ಸ್ಫುರಿಸುತ್ತವೆ. ಮಗಿ ಧಾತುವಿಗೆ ಚಲನೆ ಎಂಬರ್ಥವಿದ್ದು, ಅಲಚ್ ಪ್ರತ್ಯಯ ಸೇರಿ ಮಂಗಲ ಪದ ಸಿದ್ಧಿಸಿ, ಕುಜಗ್ರಹ, ಶುಭ, ಶ್ರೇಯಸ್ಸು,ಆನಂದ ಮುಂತಾದ ಅರ್ಥಗಳು ಸ್ಫುರಿಸುತ್ತವೆ. ಶ್ರೇಷ್ಠವಾದ ಅರ್ಥದ ಸತ್ […]

ಮುಂದೆ ಓದಿ

ಕೃತಜ್ಞತೆ

ಕೃತಜ್ಞತೆ ನೀರು ಗೊಬ್ಬರವಿತ್ತ ನೆರವ ಮರೆವುದೆ ಮರವು ? ಪೊರೆವುದೈ ನಿನ್ನ ಮೇಣ್ ನಿನ್ನವರನೆಲ್ಲಾ !? ನೆರವಿತ್ತು ನೆರಳಿತ್ತು ನೂರು ವರುಷದ ವರೆಗೆ ! ಸಾರುವುದೆ ಡಂಗುರವ ? ಜಾಣಮೂರ್ಖ // ನಾವು ಬೆಳೆಸಿದ ಗಿಡ ಮರಗಳ ಕೃತಜ್ಞತೆ ಮತ್ತು ಔದಾರ್ಯಗಳು ನಮಗೆ ಅದೆಷ್ಟು ಅನುಕರಣಾರ್ಹವಾಗಿವೆ !? ನಾವು ಸವೆದುಕೊಂಡಿರುವುದು ಒಂದಷ್ಟು ನೀರು ಗೊಬ್ಬರ ಅಷ್ಟೆ (ಅದೂ ಹೇರಳವಾಗಿ ಸಿಗೋದು ಮತ್ತೆ ನಮಗೆ ಬೇಡವಾದದ್ದು.) ಆದರೆ ಹೆಮ್ಮರವಾಗಿ ಬೆಳೆದ ಮರವು ನಮ್ಮ ಮತ್ತು ನಮ್ಮ ಕುಟುಂಬ ವರ್ಗದವರಿಗೆಲ್ಲಾ […]

ಮುಂದೆ ಓದಿ

ನಾಕದೊಳಗಿನ ನಾಕ

ನಾಕದೊಳಗಿನ ನಾಕ ಹಾಸುವೆಳೆ ನಾರ್ಪಿಡಿದು ಹೊಸೆದು ಹೆಣೆವುದು ಹಿಸಿದು ಹಂಸತೂಲಿಕೆಯೇಕೆ ಈಸೆ ನಿದಿರೆಯನು ! ನಾಕದೊಳು ನಾಕವೈ ಮೂಕಹಕ್ಕಿಯ ಗೂಡು ಸಾಕು ಬಾ ಸಗ್ಗವಿದೆ ಜಾಣಮೂರ್ಖ // ಎಳೆಯ ಬಿಗಿಯಾದ ನಾರನ್ನು ಆರಿಸಿ , ಎಳೆದು , ಹಿಸಿದು , ಹೊಸೆದು ಗೂಡುಕಟ್ಟಿ ನಲಿವ ಗೀಜುಗನ ಗೂಡಿನ ಮುಂದೆ ಹಂಸತೂಲಿಕಾ ತಲ್ಪವಾದರೂ ಏಕೆ ? ಅದರಲ್ಲಿ ಮಲಗುವವರು ನಿಜವಾಗಿ ಸುಖನಿದಿರೆ ಮಾಡುವರೇನು ? ಆದರೆ ಈ ಮೂಕ ಹಕ್ಕಿಯು ಸದ್ದು ಗದ್ದಲವಿಲ್ಲದೆ ಕಟ್ಟುವ ಈ ಗೂಡು ಹಂಸ […]

ಮುಂದೆ ಓದಿ

ಛಲ/ಮಾಲೆ/ ಸಾಧುಜನ

ಪದ ಚಿಂತನ* ಛಲ/ಮಾಲೆ/ ಸಾಧುಜನ ದೃಢನಿಶ್ಚಯ, ಹಾರ,ಸಭ್ಯಮನುಷ್ಯ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ. ಛೋ ಧಾತು ಕತ್ತರಿಸುವುದು ಎಂಬರ್ಥ ಹೊಂದಿದ್ದು, ಕಲಃ ಪ್ರತ್ಯಯ ಸೇರಿ, ಛಲ ಪದದ ನಿಷ್ಪತ್ತಿಯಾಗಿ, ಕಾರಣ,ಮರೆಮಾಚುವುದು, ಕಪಟ, ದೃಢ ನಿರ್ಣಯ ಮುಂತಾದ ಅರ್ಥಗಳು ಸ್ಫುರಿಸುತ್ತವೆ. ಲಾ ಧಾತು, ನೀಡುವುದು ಅರ್ಥ ಹೊಂದಿದ್ದು, ಲಕ್ಷ್ಮೀ ಎಂಬ ಅರ್ಥವುಳ್ಳ ಮಾ ಧಾತುವಿನೊಡನೆ ಸೇರಿ, ಮಾಲಾ( ಲಕ್ಷ್ಮಿಗೆ ಶೋಭೆಯನ್ನು ನೀಡುವ) ಪದವು ಸಿದ್ಧಿಸುತ್ತದೆ. ಹಾರ,ಪಂಕ್ತಿ, ಜಪಸರ ಮುಂತಾದ ಅರ್ಥಗಳು ಸ್ಫುರಿಸುತ್ತವೆ. ಕನ್ನಡದಲ್ಲಿ ಮಾಲೆ ಎಂದಾಗಿದೆ. ಸಾಧ್ ಧಾತುವಿಗೆ, […]

ಮುಂದೆ ಓದಿ

ಅಸು/ರುಚಿ/ ವನ್ಯಫಲ

ಪದ ಚಿಂತನ* ಅಸು/ರುಚಿ/ ವನ್ಯಫಲ ಉಸಿರು, ಸವಿ, ಕಾಡಿನಹಣ್ಣು ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ. ಅಸ್ ಧಾತು ಇಡುವುದು ಎಂಬರ್ಥ ಹೊಂದಿದ್ದು ಉನ್( ಉ) ಪ್ರತ್ಯಯ ಸೇರಿ ಅಸು ಪದ ಸಿದ್ಧಿಸಿ ಉಸಿರು, ಪ್ರಾಣ, ಶ್ವಾಸ, ಮನಸ್ಸು, ಜಲ ಮುಂತಾದ ಅರ್ಥಗಳು ಸ್ಫುರಿಸುತ್ತವೆ. ರುಚ್ ಧಾತು ಪ್ರಕಾಶಿಸು ಎಂಬರ್ಥ ಹೊಂದಿದ್ದು, ಇನ್( ಇ) ಪ್ರತ್ಯಯ ಸೇರಿ ರುಚಿ ಪದ ಸಿದ್ಧಿಸಿ, ಇಷ್ಟ, ಆಸೆ,ಪ್ರೀತಿ, ಆಸಕ್ತಿ, ಸವಿ, ಅನುರಾಗ ಮುಂತಾದ ಅರ್ಥಗಳು ಸ್ಫುರಿಸುತ್ತವೆ. ವನ್ ಧಾತು ಆಸಕ್ತಿಯುಳ್ಳ ಎಂಬರ್ಥ […]

ಮುಂದೆ ಓದಿ

ಬಾಳಬಟ್ಟೆ

ಬಾಳಬಟ್ಟೆ ನೇಕಾರನರ್ತಿಯಿಂ ನೂಲಿನೆಳೆಗಳ ಪಿಡಿದು ಅಡ್ಡದೆಳೆಯುದ್ದದೆಳೆ ಹೊಂದಿಸುವನಲ್ತೆ ! ನೋವ್ನಲಿವಿನೆಳೆಗಳಿಂ ನೇಕಾರ ಹೊಂದಿಸಿದ ಬಾಳ ಬಟ್ಟೆಯ ನೋಡೊ ಜಾಣಮೂರ್ಖ // ನಾವೆಲ್ಲಾ ತರಾವರಿ ಬಣ್ಣ ಬಣ್ಣದ ಬಟ್ಟೆಗಳನ್ನು ಧರಿಸುತ್ತೇವೆ ! ಚಂದವಾಗಿ ಕಾಣಬೇಕೆಂದು ಅಲ್ಲವೇ ಗೆಳೆಯರೇ ? ಅದರ ಹಿಂದೆ ಬಟ್ಟೆ ನೆಯ್ದವನ ತುಂಬುಶ್ರಮವಿರುತ್ತದೆ. ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿ ನೂಲಿನ ಎಳೆಗಳು ಅಡ್ಡವಾಗಿಯೂ , ಉದ್ದುದ್ದವಾಗಿಯೂ ಜೋಡಿಸಲ್ಪಟ್ಟು ನೆಯ್ದ ಸುಂದರ ವಸ್ತ್ರವದು ! ಈ ಬದುಕೂ ಕೂಡ ಹಾಗೆಯೇ ಗೆಳೆಯರೇ ! ದೇವನೆಂಬ ನೇಕಾರನು ನೋವು ನಲಿವುಗಳೆಂಬ […]

ಮುಂದೆ ಓದಿ

ಉದ್ದೀಪನ/ಪ್ರಾಣಾಹುತಿ

ಪದ ಚಿಂತನ* ಉದ್ದೀಪನ/ಪ್ರಾಣಾಹುತಿ ಪ್ರಚೋದನೆ/ ಊಟಕ್ಕೆ ಮೊದಲಿನ ಹವಿಸ್ಸಿನ ಅರ್ಪಣೆ ಎಂಬರ್ಥಗಳು ಈ ಪದಗಳಿಗಿವೆ. ದೀಪೀ ಧಾತು ಪ್ರಕಾಶಿಸುವುದು ಎಂಬರ್ಥ ಹೊಂದಿದ್ದು, ನ ಪ್ರತ್ಯಯ ಉದ್ ಉಪಸರ್ಗ ಸೇರಿ ಉದ್ದೀಪನ ಪದವು ನಿಷ್ಪತ್ತಿಯಾಗುತ್ತದೆ. ಪ್ರೇರಿಸುವುದು, ಹುರಿದುಂಬಿಸುವುದು, ಉತ್ತೇಜನ ನೀಡುವುದು, ನವರಸಗಳ ಉತ್ಪತ್ತಿಗೆ ಕಾರಣವಾದದ್ದು ಎಂಬರ್ಥಗಳು ಸ್ಫುರಿಸುತ್ತವೆ. ಹು ಧಾತುವಿಗೆ ಹವಿಸ್ಸನ್ನು ನೀಡುವುದು ಎಂಬರ್ಥವಿದ್ದು, ಕ್ತಿನ್( ತಿ) ಪ್ರತ್ಯಯ ‘ಆ’ ಉಪಸರ್ಗ ಸೇರಿ ಆಹುತಿ ಪದ ನಿಷ್ಪತ್ತಿಯಾಗಿ, ದೇವತೆಗಳಿಗೆ ಅಗ್ನಿಮೂಲಕ ಹವಿಸ್ಸು ಅರ್ಪಿಸುವುದು, ಹೋಮ, ಹವಿಸ್ಸು ಮುಂತಾದ ಅರ್ಥಗಳು […]

ಮುಂದೆ ಓದಿ

ಅಜ್ಞಾನಕಿಹುದೆ ಗತಿ !

ಅಜ್ಞಾನಕಿಹುದೆ ಗತಿ ! ಬಿಸಿಲತೊರೆಯರಿವಂತೆ ಬಂಧ ಬಿಗಿಗೊಂಡೊಡಾ ಯ್ತಂತೆ ಹುರಿದಿಹ ಬಿತ್ತು ಮೊಳೆಗೊಳ್ವುದೇನು ? ಜ್ಞಾನಾಗ್ನಿಯೊಳು ಬೆಂದ ಅಜ್ಞಾನಕಿಹುದೆ ಗತಿ ! ಅನುಭವಿಸು ಬೇಯೇಳು ಜಾಣಮೂರ್ಖ // ಬಿಸಿಲತೊರೆ ಎಂದರೆ ಮರೀಚಿಕೆ (ಬಿಸಿಲುಗುದುರೆ) ಎಂದರ್ಥ. ಅದನ್ನು ಅರ್ಥೈಸಿಕೊಂಡರೆ ಆಯ್ತು. ಮರೀಚಿಕೆಯ ಅರ್ಥ ‘ಸುಳ್ಳು’ ಎಂಬುದಷ್ಟೇ !. ಇದೆಲ್ಲದರ ಅರ್ಥ ತಿಳಿದು ಮಾಗಿದರೆ ಮುಗಿಯಿತು. ಮನಸ್ಸು ಪಕ್ವವಾದಂತೆ. ಹುರಿದ ಬಿತ್ತು ಹೇಗೆ ಮೊಳೆತು ಬೆಳೆಯುವುದಿಲ್ಲವೋ ಹಾಗೆ ನಮ್ಮ ಜ್ಞಾನಾಗ್ನಿಯಲ್ಲಿ ಬೆಂದ ಅಜ್ಞಾನಕ್ಕೆ ಮತ್ತೆ ಅಸ್ತಿತ್ವವಿದೆಯೇ ? ಆದ್ದರಿಂದ ಓ […]

ಮುಂದೆ ಓದಿ

ಮೃದು/ ಸ್ಪರ್ಶ

ಪದ ಚಿಂತನ* ಮೃದು/ ಸ್ಪರ್ಶ ಕೋಮಲ, ಮುಟ್ಟುವುದು ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ. ಮೃದ ಧಾತು ಪುಡಿಮಾಡುವುದು ಎಂಬರ್ಥ ಹೊಂದಿದ್ದು ಇದಕ್ಕೆ ಕುಃ(ಉ) ಪ್ರತ್ಯಯ ಸೇರಿ ಮೃದು ಪದ ಸಿದ್ಧಿಸಿ, ಮೆತ್ತಗಿರುವ,ಮೆದುವಾದ, ಸೌಮ್ಯವಾದ, ಶಾಂತವಾದ, ನಿಧಾನವಾದ ಮುಂತಾದ ಅರ್ಥಗಳು ಸ್ಫುರಿಸುತ್ತವೆ. ಸ್ಪೃಶ ಧಾತು ಕೊಡುಗೆ ಎಂಬರ್ಥವಿದ್ದು, ಘಞ್( ಅ) ಪ್ರತ್ಯಯ ಸೇರಿ ಸ್ಪರ್ಶ ಪದವು ನಿಷ್ಪತ್ತಿಯಾಗಿ, ಚರ್ಮೇಂದ್ರಿಯದಿಂದ ತಿಳಿಯುವ ಗುಣ, ಮುಟ್ಟುವುದು, ಸೋಕುವುದು, ದಾನ ಮುಂತಾದ ಅರ್ಥಗಳು ಸ್ಫುರಿಸುತ್ತವೆ. ಓದಿದ್ದಕ್ಕಾಗಿ ಧನ್ಯವಾದಗಳು.??????????? ಅ.ನಾ.*

ಮುಂದೆ ಓದಿ

ಪೆರರಾಟಕಣಿಯೆಲ್ಲ

ಪೆರರಾಟಕಣಿಯೆಲ್ಲ ! ಬಂಗಾರ ತುಂಬಲೇನ್ ಬಂಗ ತೀರದ ಮೇಲೆ ಸಿಂಗಾರಗೊಂಡರೇ ನರಿವಿರದ ಮೇಲೆ ? ಬಂಗಾರ ಸಿಂಗಾರ ರಂಗದಾ ಮೇಲಷ್ಟೆ ! ಪೆರರಾಟಕಣಿಯೆಲ್ಲ ಜಾಣಮೂರ್ಖ // ಕೆಲವರಿಗೆ ಬಂಗಾರದ ಒಡವೆಗಳ ಮೇಲೆ ಅದೆಷ್ಟು ಪ್ರೀತಿ ! ತಿಜೋರಿಯಲ್ಲಿ ತುಂಬಿದ್ದೇ ತುಂಬಿದ್ದು. ಅವರ ತಾಪತ್ರಯಗಳು, ತೊಂದರೆಗಳು ತೀರುವುದೇ ಇಲ್ಲ. ಬಂಗಪಟ್ಟು ಬಿಸಿಯನ್ನ ಉಣ್ಣುವುದಕ್ಕಿಂತಲೂ ತಂಗಳನ್ನವೇ ಲೇಸಲ್ಲವೇ ಗೆಳೆಯರೇ ? ಕೆಲವರಿಗಂತೂ ಆಸೆ , ಮೋಹಗಳು ಹೋಗುವುದೇ ಇಲ್ಲ. ಒಡವೆಗಳ ಹೊರೆ ಹೊತ್ತು ಭಾರದಿಂದ ಬೀಗುತ್ತಾರೆ. ತನುವು ಸಿಂಗಾರಗೊಂಡರಾಯ್ತೆ ? […]

ಮುಂದೆ ಓದಿ