ಪ್ರಸ್ತಾವ/ ಪ್ರಸ್ತಾವನಾ

ಪದ ಚಿಂತನ* ಪ್ರಸ್ತಾವ/ ಪ್ರಸ್ತಾವನಾ ಪೀಠಿಕೆ, ಪ್ರಾರಂಭ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ. ಸ್ತು ಧಾತು ಹೊಗಳು ಎಂಬರ್ಥ ಹೊಂದಿದ್ದು ಪ್ರತ್ಯಯ ಸೇರಿ ಸ್ತಾವ ಎಂದಾಗಿ, ಉಪಸರ್ಗ ಪ್ರ ಸೇರಿ ಪ್ರಸ್ತಾವ ಪದ ಸಿದ್ಧಿಸುತ್ತದೆ. ಪೀಠಿಕೆ, ಸಂದರ್ಭ, ಅವಕಾಶ, ಉಲ್ಲೇಖ ಎಂಬರ್ಥಗಳು ಸ್ಫುರಿಸುತ್ತವೆ. ಕನ್ನಡದಲ್ಲಿ ಪ್ರಸ್ತಾಪ ಎಂಬ ಅಪಪ್ರಯೋಗ ಬಳಕೆಯಲ್ಲಿದೆ. ಸ್ತು ಧಾತು ಸ್ತವ> ಸ್ತಾವ ಆಗಬಹುದೇ ವಿನಾ ಸ್ತಾಪ ಆಗುವುದಿಲ್ಲ. ಪ್ರಸ್ತಾವ ಪದಕ್ಕೆ ನಾ ಪ್ರತ್ಯಯ ಸೇರಿ ಪ್ರಸ್ತಾವನಾ ಎಂದಾದಾಗ ಪ್ರಾರಂಭ, ಮೊದಲು, ನಾಟಕದ ಆಮುಖ( […]

ಮುಂದೆ ಓದಿ

ಪ್ರೇರಣ( ಪ್ರೇರಣೆ)/ ಪ್ರೇರಿಸು

ಪದ ಚಿಂತನ* ಪ್ರೇರಣ( ಪ್ರೇರಣೆ)/ ಪ್ರೇರಿಸು ಪ್ರಚೋದನೆ ಎಂಬರ್ಥವು ಈ ಪದಕ್ಕಿದೆ. ಪ್ರಚೋದಿಸು ಎಂದು ಹೇಳಲು ಪ್ರೇರೇಪಿಸು ಎಂಬ ಪದವನ್ನು ವ್ಯಾಪಕವಾಗಿ ಕನ್ನಡದಲ್ಲಿ ಬಳಸಲಾಗುತ್ತಿದೆ. ಇದು ದೋಷಯುಕ್ತ ಪದ. ಈರ್ ಧಾತು ಚಲನೆ ಎಂಬರ್ಥ ಹೊಂದಿದ್ದು, ಉಪಸರ್ಗ ಪ್ರ ಮತ್ತು ಪ್ರತ್ಯಯ ಅ+ ಣ ಸೇರಿ ಪ್ರೇರಣ ಪದ ಸಿದ್ಧಿಸುತ್ತದೆ. ಒಂದು ಕಾರ್ಯದಲ್ಲಿ ತೊಡಗಿಸುವಂತೆ ಮಾಡುವುದು, ಉತ್ತೇಜನಗೊಳಿಸುವುದು ಎಂಬರ್ಥಗಳು ಸ್ಫುರಿಸುತ್ತವೆ. ಕನ್ನಡದಲ್ಲಿ ಇದು ಪ್ರೇರಣೆ ಎಂದಾಗಿದೆ. ಈ ಪ್ರೇರಣ ಪದದ ಣ ಪ್ರತ್ಯಯ ತೆಗೆದು, ಕನ್ನಡದ ಇಸು […]

ಮುಂದೆ ಓದಿ

ಉಜ್ಜ್ವಲ / ತಜ್ಜ್ಞ

ಪದ ಚಿಂತನ* ಉಜ್ಜ್ವಲ / ತಜ್ಜ್ಞ ಪ್ರಕಾಶಮಾನ, ತಿಳಿದವನು ಎಂಬರ್ಥಗಳು ಕ್ರಮವಾಗಿ ಉಜ್ಜ್ವಲ ತಜ್ಜ್ಞ ಪದಗಳಿಗಿವೆ. ಈ ಪದಗಳನ್ನು ಉಜ್ವಲ/ ತಜ್ಞ ಎಂದು ತಪ್ಪು ರೂಪದಲ್ಲೇ ಅನೇಕರು ಬಳಸುತ್ತಾರೆ. ಜ್ವಲ ಧಾತು ದೀಪ್ತಿ,ಹೊಳೆಯುವುದು ಎಂಬರ್ಥ ಹೊಂದಿದ್ದು, ಅದಕ್ಕೆ ಉತ್(ಉದ್) ಉಪಸರ್ಗ ಸೇರಿ, ಶ್ಚುತ್ವಸಂಧಿ ನಿಯಮದಂತೆ ಉಜ್ಜ್ವಲ ಪದ ನಿಷ್ಪತ್ತಿಯಾಗುತ್ತದೆ. ಹೊಳೆಯುತ್ತಿರುವ, ಸ್ವರ್ಣ, ಶುದ್ಧ, ಅರಳಿದ ಎಂಬರ್ಥಗಳಲ್ಲದೆ ನವರಸಗಳಲ್ಲಿ ಪ್ರಕಾಶಮಾನವಾಗಿ ಕಾಣುವ “ಶೃಂಗಾರರಸ” ಎಂಬರ್ಥವೂ ಸ್ಫುರಿಸುತ್ತದೆ. ಜ್ಞಾ ಧಾತು ತಿಳಿವಳಿಕೆ ಎಂಬರ್ಥ ಹೊಂದಿದ್ದು ತತ್ ಪದ ಮತ್ತು ಅ […]

ಮುಂದೆ ಓದಿ

ತಕ್ಷಣ/ ತತ್ಕ್ಷಣ

ಪದ ಚಿಂತನ* ತಕ್ಷಣ/ ತತ್ಕ್ಷಣ ಇವೆರಡೂ ಪದಗಳು ಬೇರೆ ಬೇರೆ ಧಾತುಗಳಿಂದ ನಿಷ್ಪನ್ನವಾಗಿ, ಬೇರೆಬೇರೆ ಅರ್ಥ ಹೊಂದಿವೆ. ತಕ್ಷ ಎಂಬ ಧಾತು ಕೆತ್ತುವುದು ಎಂಬರ್ಥ ಪಡೆದಿದ್ದು, ಅದಕ್ಕೆ ಣ ಪ್ರತ್ಯಯ ಸೇರಿ ತಕ್ಷಣ ಎಂದಾದಾಗ ಮರವನ್ನು ಕತ್ತರಿಸುವುದು,ಕೆತ್ತುವುದು ಎಂಬರ್ಥ ಪಡೆಯುತ್ತದೆ. ಕ್ಷಣ ಧಾತುವಿಗೆ, ಸಮಯ, ಕಾಲ ಎಂಬರ್ಥವಿದ್ದು ಅದಕ್ಕೆ ತತ್ ಎಂಬ ಪದ ಸೇರಿದಾಗ ತತ್ಕ್ಷಣ ಪದವುಂಟಾಗಿ ಅದೇ ವೇಳೆ, ಅದೇ ಕಾಲ ಎಂಬರ್ಥ ಸ್ಫುರಿಸುತ್ತದೆ. ಆದರೆ ಹೆಚ್ಚಾಗಿ, ಆಗಲೇ, ಅದೇಸಮಯ ಎಂಬರ್ಥ ಹೇಳಲು ತಕ್ಷಣ ಬಾ, […]

ಮುಂದೆ ಓದಿ

ಸ್ನೇಹ/ಸ್ನೇಹಿತ

ಪದ ಚಿಂತನ* ಸ್ನೇಹ/ ಸ್ನೇಹಿತ. ಪ್ರೀತಿ, ಮಿತ್ರ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ. ಸ್ನಿಹ್ ಧಾತು ಪ್ರೀತಿ ಅರ್ಥವನ್ನು ಹೊಂದಿದ್ದು, ಪ್ರತ್ಯಯ ಸೇರಿ ಸ್ನೇಹ ಎಂದಾದಾಗ ವಿಶ್ವಾಸ, ಸೌಹಾರ್ದ, ತೈಲ,ಜಿಡ್ಡಿನ ವಸ್ತು ಎಂಬರ್ಥಗಳು ಸ್ಫುರಿಸುತ್ತವೆ. ಸ್ನೇಹ ಜಿಡ್ಡಿನಂತಿರುವುದರಿಂದ ಅದು ಸುಲಭವಾಗಿ ಅಳಿಸಲಾಗದು. ಬಲವಾದ ಬಾಹ್ಯ ಪ್ರಯೋಗದಿಂದ ಮಾತ್ರ ಜಿಡ್ಡಿನ ಅಂತ್ಯ ಸಾಧ್ಯ. ಬಾಹ್ಯ ಶಕ್ತಿಯ ಮಧ್ಯ ಪ್ರವೇಶ ಇಲ್ಲದಿದ್ದರೆ,ಸ್ನೇಹದ ಬಂಧ ಸದಾ ಬಿಗಿಯಾಗಿರುತ್ತದೆ. ಹಾಗಾಗಿ ಸ್ನೇಹ ಅನ್ವರ್ಥನಾಮವಾಗಿ ಬಿಗಿಯಾದ ವಿಶ್ವಾಸ, ಸೌಹಾರ್ದದ ಬಂಧದಲ್ಲಿದೆ. ಸ್ನೇಹ ಪದಕ್ಕೆ ಇತ […]

ಮುಂದೆ ಓದಿ

ನಿವೇದನ/ ನೈವೇದ್ಯ

ಸಮರ್ಪಿಸುವುದು ಮತ್ತು ದೇವರಿಗೆ ಅರ್ಪಿಸುವ ಹಣ್ಣುಕಾಯಿ, ಹವಿಸ್ಸು ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿದೆ. ಬೇರೆ ಬೇರೆ ಅರ್ಥಗಳಿರುವ ಈ ಪದಗಳಿಗೆ ಧಾತು ಒಂದೇ ಆಗಿದೆ. ವಿದ್ ಧಾತು ಜ್ಞಾನ ಎಂಬರ್ಥದಲ್ಲಿದ್ದು, ನಿ ಉಪಸರ್ಗ ಮತ್ತು ನ ಪ್ರತ್ಯಯ ಸೇರಿ ನಿವೇದನ ಎಂದಾದಾಗ ಸಮರ್ಪಿಸುವುದು, ವಿಜ್ಞಾಪಿಸುವುದು, ಅರಿಕೆಮಾಡುವುದು, ತಿಳಿಸುವುದು ಎಂಬರ್ಥಗಳನ್ನು ಹೊಂದಿದೆ. ಕನ್ನಡದಲ್ಲಿ ನಿವೇದನೆ ಎಂದು ಪ್ರಯೋಗದಲ್ಲಿದೆ. ವಿದ್ ಧಾತುವಿಗೆ ನಿ ಉಪಸರ್ಗ ಅ ವಿಕರಣ ಪ್ರತ್ಯಯ ಸೇರಿ ನಿವೇದ ಎಂದಾಗಿ, ಇದಕ್ಕೆ ಯ ಪ್ರತ್ಯಯ ಸೇರಿ, ಆದಿಯ […]

ಮುಂದೆ ಓದಿ

ಪ್ರಾಣ/ ಪ್ರಾಣಿ

ಪ್ರಾಣ/ ಪ್ರಾಣಿ ಶರೀರದಲ್ಲಿರುವ ಉಸಿರು, ಮೃಗಗಳು ಎಂಬರ್ಥಗಳನ್ನು ಕ್ರಮವಾಗಿ ನಾವು ಈ ಪದಗಳಿಗೆ ಹೇಳುತ್ತೇವೆ. ಈ ಪದಗಳಿಗೆ ವಿಶಿಷ್ಟವಾದ ಅರ್ಥಗಳಿವೆ. ಅನ ಎಂಬ ಧಾತು ಜೀವಿಸು, ಬದುಕು ಎಂಬರ್ಥವನ್ನು ಹೊಂದಿದ್ದು, ಪ್ರ ಉಪಸರ್ಗ ಸೇರಿ ಪ್ರ+ ಅನ > ಪ್ರಾನ ಎಂದಾಗಿ, ರೇಫೆಯು ಪದದಲ್ಲಿರುವ ಕಾರಣದಿಂದ, ನಿಯಮದಂತೆ ನಕಾರ ಕ್ಕೆ ಣ ಆದೇಶವಾಗಿ ಪ್ರಾಣ ಎಂಬ ಪದ ಸಿದ್ಧಿಸುತ್ತದೆ. ಬ್ರಹ್ಮ, ಶರೀರದಲ್ಲಿರುವ ಪಂಚವಾಯುಗಳು, ಉಸಿರು ಎಂಬರ್ಥ ಸ್ಫುರಿಸುತ್ತದೆ. ಇಷ್ಟವಾದದನ್ನು, ಪ್ರೀತಿಗೆ ಪಾತ್ರರಾದವರನ್ನು ಪ್ರಾಣ ಎಂದು ಕರೆಯುವ ರೂಢಿಯೂ […]

ಮುಂದೆ ಓದಿ

ಉಪಾಧ್ಯಾಯ:-

ಪದ ಚಿಂತನ* ಜೀವನ ನಿರ್ವಹಣೆಗಾಗಿ ವಿದ್ಯೆ ಕಲಿಸುವವನು. ಶಿಕ್ಷಣ ನೀಡುವವನು ಎಂಬರ್ಥವನ್ನು ಉಪಾಧ್ಯಾಯ ಪದ ಹೊಂದಿರುವುದು ನಿಘಂಟುಗಳಲ್ಲಿ ಕಂಡುಬರುತ್ತದೆ. ಆದರೆ ಉಪಾಧ್ಯಾಯ ಪದಕ್ಕೆ ಇನ್ನೂ ವಿಶಾಲಾರ್ಥವೇ ಇದೆ. ಅಯ ಎಂಬ ಧಾತುವಿಗೆ ಚಲನೆ,ವಿಷಯದ ಕಡೆ ಗಮನ ಎಂಬರ್ಥಗಳಿದ್ದು ಅಧಿ ಉಪಸರ್ಗ ಸೇರಿ, ಅಧಿ+ ಅಯ+ ಧಞ್( ಅ) ಪ್ರತ್ಯಯ ಸೇರಿ ಅಧಿ+ ಆಯ(ಧಾತುವಿನ ಅಂತ್ಯ ಸ್ವರ ಲೋಪ ಮತ್ತು ಪ್ರತ್ಯಯವು ಅಂತ್ಯಕ್ಕೆ ಸೇರಿ ಆದಿ ದೀರ್ಘ) ಅಧ್ಯಾಯ ಎಂದಾಗುತ್ತದೆ. ಇದರರ್ಥ ವ್ಯಾಸಂಗ, ಅಧ್ಯಯನ. ಉಪ ಎಂದರೆ ಸಾಮೀಪ್ಯ, […]

ಮುಂದೆ ಓದಿ

ಪದ ಚಿಂತನ

ಪದ ಚಿಂತನ ಪದ ಚಿಂತನ esiri kannada Jul 29, 2020 www.esirikannada.com ***ಭಕ್ಷ್ಯ / ಭೋಜ್ಯ- :**** ಗಣಪತಿ ಹಬ್ಬದಲ್ಲಿ ದೇವರ ನೈವೇದ್ಯಕ್ಕೆ ಭಕ್ಷ್ಯ, ಭೋಜ್ಯಗಳನ್ನು ಇಟ್ಟು ಪೂಜೆ ಸಲ್ಲಿಸುವುದು ಪರಂಪರೆಯಿಂದಲೂ ನಡೆದು ಬಂದಿದೆ. ಭಕ್ಷ್ಯ ಅಂದರೆ ತಿಂಡಿ, ಗಟ್ಟಿ ಆಹಾರ. ಭಕ್ಷ್ ಧಾತು ತಿನ್ನುವುದು ಎಂಬರ್ಥ ಹೊಂದಿದ್ದು ಯ ಪ್ರತ್ಯಯ ಸೇರಿ ಭಕ್ಷ್ಯ ಎಂದಾದಾಗ ತಿಂಡಿ ಅರ್ಥವನ್ನು ಹೊಂದುತ್ತದೆ. ಚಕ್ಕುಲಿ,ಕೋಡುಬಳೆ, ದೋಸೆ,ರೊಟ್ಟಿ ಮುಂತಾದವು ಭಕ್ಷ್ಯಗಳು. ಭೋಜ್ಯ ಎಂದರೆ ಆಹಾರ, ಅನ್ನ, ತಿನ್ನಲು ಅರ್ಹವಾದದ್ದು ಎಂಬರ್ಥಗಳಿವೆ. […]

ಮುಂದೆ ಓದಿ