ಉದ್ದೀಪನ/ಪ್ರಾಣಾಹುತಿ
ಪದ ಚಿಂತನ* ಉದ್ದೀಪನ/ಪ್ರಾಣಾಹುತಿ ಪ್ರಚೋದನೆ/ ಊಟಕ್ಕೆ ಮೊದಲಿನ ಹವಿಸ್ಸಿನ ಅರ್ಪಣೆ ಎಂಬರ್ಥಗಳು ಈ ಪದಗಳಿಗಿವೆ. ದೀಪೀ ಧಾತು ಪ್ರಕಾಶಿಸುವುದು ಎಂಬರ್ಥ ಹೊಂದಿದ್ದು, ನ ಪ್ರತ್ಯಯ ಉದ್ ಉಪಸರ್ಗ ಸೇರಿ ಉದ್ದೀಪನ ಪದವು ನಿಷ್ಪತ್ತಿಯಾಗುತ್ತದೆ. ಪ್ರೇರಿಸುವುದು, ಹುರಿದುಂಬಿಸುವುದು, ಉತ್ತೇಜನ ನೀಡುವುದು, ನವರಸಗಳ ಉತ್ಪತ್ತಿಗೆ ಕಾರಣವಾದದ್ದು ಎಂಬರ್ಥಗಳು ಸ್ಫುರಿಸುತ್ತವೆ. ಹು ಧಾತುವಿಗೆ ಹವಿಸ್ಸನ್ನು ನೀಡುವುದು ಎಂಬರ್ಥವಿದ್ದು, ಕ್ತಿನ್( ತಿ) ಪ್ರತ್ಯಯ ‘ಆ’ ಉಪಸರ್ಗ ಸೇರಿ ಆಹುತಿ ಪದ ನಿಷ್ಪತ್ತಿಯಾಗಿ, ದೇವತೆಗಳಿಗೆ ಅಗ್ನಿಮೂಲಕ ಹವಿಸ್ಸು ಅರ್ಪಿಸುವುದು, ಹೋಮ, ಹವಿಸ್ಸು ಮುಂತಾದ ಅರ್ಥಗಳು […]
ಮುಂದೆ ಓದಿ