ಶಿಕ್ಷಕರು ಸೋಮವಾರದಿಂದ ಶಾಲೆಗೆ ?.

ಲಾಕ್‌ ಡೌನ್‌ ತೆರೆವು-೩ ರ ನೀಯಮಗಳ ಪ್ರಕಾರ ಶಾಲೆ-ಕಾಲೇಜುಗಳು 31/08/2020 ರ ವರೆಗೆ ಮುಚ್ಚಲ್ಪಡುತ್ತವೆ. ಆದರೆ ಶಿಕ್ಷಕರಿಗೆ ಸೋಮವಾರದಿಂದ work from Home ಮಾಡುವ ಕುರಿತಯ ಇಲಾಖೆಯ ಯಾವುದೇ ಆದೇಶ ಆಗಿರುವುದಿಲ್ಲ. ನಿಯಮಗಳ ಪ್ರಕಾರ ಆನ್ಲೈನ್‌ ಶಿಕ್ಷಣ ಮುಂದುವರಿಯಲಿದ್ದು,ಅದಕ್ಕೆ ಎಲ್ಲಾ ಶಿಕ್ಷಕರು ಸಿದ್ದರಾಗಿರಬೇಕು. ಸೋಮವಾರದಿಂದ ಶಿಕ್ಷಕರು ಶೈಕ್ಷಣಿಕ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು. ವರ್ಕ್‌ ಫ್ರಮ್‌ ಹೋಮ್ ಬಗ್ಗೆ ಇಲಾಖೆಯ ಅಧಿಕೃತ ಆದೇಶವಾಗಬೇಕಿದೆ.

ಮುಂದೆ ಓದಿ

ದೇವ ಮಾನವ ಮೈತ್ರಿ

ಮನದ ಸಂಕಲ್ಪ ತಾ ದೃಢಮಿರ್ದೊಡಾಯ್ತು ಮಿಗೆ ದೇವ ಬಹನಲ್ಲಿ ಕಾಣ್ ಸಂದೆಯಮದೇಕೆ !? ಸಂಕಲ್ಪ ಸಿದ್ಧಿಗದು ಸಿದ್ಧಸೋಪಾನಮದೆ ದೇವಮಾನವ ಮೈತ್ರಿ ಜಾಣಮೂರ್ಖ // ದೈವ ಸಂಕಲ್ಪವನ್ನು ಅರಿತವರಿಲ್ಲ ಎನ್ನುತ್ತಾರೆ ಅಲ್ಲವೆ ? ದೇವಮಾನವ ಮೈತ್ರಿ ಅತಿ ಗೌಪ್ಯವಾದದ್ದು. ಕೆಲವರು ಸ್ವಲ್ಪ ಸೂಕ್ಷ್ಮದೃಷ್ಟಿ , ಸೂಕ್ಷ್ಮ ಸಂವೇದನೆಗಳನ್ನು ಹೊಂದಿದ್ದು, ಅಂತಹವರಿಗೆ ಈ ಅರಿವು ಇರುತ್ತದೆ. ಮನಸ್ಸಿನಂತೆ ಮಹಾದೇವ , ಯದ್ಭಾವಂ ತದ್ಭವತಿ ಎಂಬಿತ್ಯಾದಿ ಮಾತುಗಳನ್ನು ನೀವು ಕೇಳಿದ್ದೀರಲ್ಲ ! ಮನಸ್ಸಿನ ಸಂಕಲ್ಪಗಳು ದೃಢವಾಗಿರಬೇಕಷ್ಟೆ. ಆತ್ಮಸಂಕಲ್ಪ ದೃಡವಾಗಿದ್ದಾಗ ಕೈಚೆಲ್ಲಿ ಕುಳಿತ […]

ಮುಂದೆ ಓದಿ

ಪ್ರಾಣ/ ಪ್ರಾಣಿ

ಪ್ರಾಣ/ ಪ್ರಾಣಿ ಶರೀರದಲ್ಲಿರುವ ಉಸಿರು, ಮೃಗಗಳು ಎಂಬರ್ಥಗಳನ್ನು ಕ್ರಮವಾಗಿ ನಾವು ಈ ಪದಗಳಿಗೆ ಹೇಳುತ್ತೇವೆ. ಈ ಪದಗಳಿಗೆ ವಿಶಿಷ್ಟವಾದ ಅರ್ಥಗಳಿವೆ. ಅನ ಎಂಬ ಧಾತು ಜೀವಿಸು, ಬದುಕು ಎಂಬರ್ಥವನ್ನು ಹೊಂದಿದ್ದು, ಪ್ರ ಉಪಸರ್ಗ ಸೇರಿ ಪ್ರ+ ಅನ > ಪ್ರಾನ ಎಂದಾಗಿ, ರೇಫೆಯು ಪದದಲ್ಲಿರುವ ಕಾರಣದಿಂದ, ನಿಯಮದಂತೆ ನಕಾರ ಕ್ಕೆ ಣ ಆದೇಶವಾಗಿ ಪ್ರಾಣ ಎಂಬ ಪದ ಸಿದ್ಧಿಸುತ್ತದೆ. ಬ್ರಹ್ಮ, ಶರೀರದಲ್ಲಿರುವ ಪಂಚವಾಯುಗಳು, ಉಸಿರು ಎಂಬರ್ಥ ಸ್ಫುರಿಸುತ್ತದೆ. ಇಷ್ಟವಾದದನ್ನು, ಪ್ರೀತಿಗೆ ಪಾತ್ರರಾದವರನ್ನು ಪ್ರಾಣ ಎಂದು ಕರೆಯುವ ರೂಢಿಯೂ […]

ಮುಂದೆ ಓದಿ