ತಕ್ಷಣ/ ತತ್ಕ್ಷಣ

ಪದ ಚಿಂತನ* ತಕ್ಷಣ/ ತತ್ಕ್ಷಣ ಇವೆರಡೂ ಪದಗಳು ಬೇರೆ ಬೇರೆ ಧಾತುಗಳಿಂದ ನಿಷ್ಪನ್ನವಾಗಿ, ಬೇರೆಬೇರೆ ಅರ್ಥ ಹೊಂದಿವೆ. ತಕ್ಷ ಎಂಬ ಧಾತು ಕೆತ್ತುವುದು ಎಂಬರ್ಥ ಪಡೆದಿದ್ದು, ಅದಕ್ಕೆ ಣ ಪ್ರತ್ಯಯ ಸೇರಿ ತಕ್ಷಣ ಎಂದಾದಾಗ ಮರವನ್ನು ಕತ್ತರಿಸುವುದು,ಕೆತ್ತುವುದು ಎಂಬರ್ಥ ಪಡೆಯುತ್ತದೆ. ಕ್ಷಣ ಧಾತುವಿಗೆ, ಸಮಯ, ಕಾಲ ಎಂಬರ್ಥವಿದ್ದು ಅದಕ್ಕೆ ತತ್ ಎಂಬ ಪದ ಸೇರಿದಾಗ ತತ್ಕ್ಷಣ ಪದವುಂಟಾಗಿ ಅದೇ ವೇಳೆ, ಅದೇ ಕಾಲ ಎಂಬರ್ಥ ಸ್ಫುರಿಸುತ್ತದೆ. ಆದರೆ ಹೆಚ್ಚಾಗಿ, ಆಗಲೇ, ಅದೇಸಮಯ ಎಂಬರ್ಥ ಹೇಳಲು ತಕ್ಷಣ ಬಾ, […]

ಮುಂದೆ ಓದಿ

ವಿಧಿ ಪಡೆಯದ ಭಾಗ್ಯ !

ವಿಧಿ ಪಡೆಯದ ಭಾಗ್ಯ ! ಕೊಡುವ ಭಾಗ್ಯವನೆಲ್ಲ ಬಿಡದೆ ಪಡೆವುದು ವಿಧಿಯು ! ಪಡೆಯದಿಹ ಭಾಗ್ಯಮಿದೆ ಒಡನೆ ಪಡೆ ಕೆಳೆಯ ! ಅಳಿವ ವೈಭೊಗ ತೊರೆ ದಾತ್ಮದರಿವನು ಪಡೆದು ಮುಕ್ತನಾಗೇಳೇಳೊ ಜಾಣಮೂರ್ಖ // ವಿಧಿಯು ನಮಗೆ ಯಾವ ಯಾವ ಭಾಗ್ಯವನ್ನು ನೀಡುವುದೋ ಅದನ್ನೆಲ್ಲಾ ಒಮ್ಮೆ ನಿರ್ದಾಕ್ಷಣ್ಯವಾಗಿ ಹಿಂಪಡೆಯುತ್ತದೆ. ಏನನ್ನೂ ಬಿಡುವುದಿಲ್ಲ. ಇದೊಂದು ಮಹಾ ವಿಯೋಗ. ದುಃಖಕರ ! ಎಲ್ಲವೂ ಹೋಗುತ್ತದೆ , ಯಾವುದೂ ಶಾಶ್ವತವಲ್ಲ ಎಂಬುದು ನಿಶ್ಚಿತವಾದ ಮೇಲೆ ದುಃಖವಾದರೂ ಏಕೆ ? ಅಲ್ಲವೇ ಓ ,ಗೆಳೆಯಾ […]

ಮುಂದೆ ಓದಿ