ಗೀತಾ ನಾಗಭೂಷಣ : ಒಂದು ನೆನಪು

ಸಾಹಿತ್ಯ ಲೋಕ

೧. ಬದುಕು-ಬರಹ

‘ ಏ ಪೋರಿ … ಇಕಾ … ನಮ್ಮ ಹುಡ್ರೆಲ್ಲಾ ತಿಂದು ಒಂದಿಷ್ಟು ಉಪ್ಪಿಟ್ಟು ಉಳದದ

ನೋಡು … ತಗೋ … ತಿನ್ನು” ಅಂತ ಮನೆಯ ಅಂಗಳದಲ್ಲಿ ಓದುತ್ತಾ ಕುಳಿತಿದ್ದ ಬಾಲಕಿಗೆ

ಮಡಿ ಹೆಂಗಸು ಸುಂದ್ರಾಬಾಯಿ ಕರೆದರು. ಎಲೆಯ ತುಂಡೋ, ಹಳೆಯ ರದ್ದಿಯ ಕಾಗದದ ಮೇಲೋ ಆ ಉಳಿದ ಉಪ್ಪಿಟ್ಟನ್ನಿಟ್ಟು ಬಾಲಕಿಯನ್ನು ಮುಟ್ಟಿಸಿಕೊಳ್ಳಬಾರದೆಂದು ಎತ್ತರದಿಂದಲೇ ಅವಳ ಕೈಗೆ ದೊಪ್ಪನೆ ಬಿಸಾಕಿದರು. ಎಸೆದ ರಭಸಕ್ಕೆ ಭಾರ ತಡೆಯದೆ ಕೈಯಿಂದ ಕೆಳಗುರುಳಿದಉಪ್ಪಿಟ್ಟು ನೆಲದ ಮೇಲೆಲ್ಲಾ ಚೆಲ್ಲಾಪಿಲ್ಲಿ; ಆಗ ಮುಂದೆ ಮಾಡಬೇಕಾದುದನ್ನು ನೆನೆಸಿಕೊಂಡು ಬಾಲಕಿಯ ಕಣ್ಣಲ್ಲಿ ನೀರು.

” ಥ ನಿನ್ನ … ಕೊಟ್ಟಿದ್ದು ಭೋಲೋತ್ಸಾಗಿ ಸಂಭಾಳಿಸ್ಕೊಂಡು ತಗೊಂಡು ತಿನ್ನಲಕ್ಕನೂ ಬರಂಗಿಲ್ಲಲ್ಲೇ ನಿನಗಾ? ದಡ್ಡ ಮುಂಡೇದು … ಅದೆಲ್ಲಾ ಮ್ಯಾಲಿಂದು ಬಳ್ಕೊಂಡು, ಬ್ಯಾರೆ ಪತ್ರೋಳಿಗಿ ಕುಡ್ತೀನಿ, ಹಾಕ್ಕೊಂಡು ತಿನ್ನು, ಕೆಳಗಿಂದೆಲ್ಲಾ ಬಳು ಚೆಲ್ಲಿ ನೆಲಕ್ಕೆ ನೀರಾಕಿ ಸಾರಿಸಿಬಿಡು …’ ‘ ಅಂತ ಮತ್ತೆ ಆ ಹೆಂಗಸಿನ ಅಪ್ಪಣೆ! ಅಂಗಳದಲ್ಲಿ ಅವಳೊಡನೆ ಅಲ್ಲಿ ಓದುತ್ತಾ ಕುಳಿತ್ತಿದ್ದ ಹುಡುಗರೆಲ್ಲಾ ಕಿಸಿ ಕಿಸಿ ನಗುತ್ತಿದ್ದವು. ನೆಲದ ಮೇಲೆ ಬಿದ್ದದ್ದನ್ನು ಬಳ್ಕೊಂಡು ತಿನ್ನಲು ಆಕೆಗೆ ಮನಸ್ಸಿಲ್ಲ. ತೀರ ಅವಮಾನವಾದಂತಾಗಿ ಎಲ್ಲವನ್ನೂ ಬಳಿದೊಯ್ದು ತಿಪ್ಪೆಗೆಸೆದು ಬಂದು ನೀರಿನಿಂದ ನೆಲ ಸಾರಿಸುತ್ತಿರುವಾಗ ಆಕೆಗೆ ಜೀವ ಹೋದಂತಾಗಿತ್ತು ಈ ನೋವುಂಡ ಬಾಲಕಿ ಮತ್ತಾರೂ ಅಲ್ಲ, ಇಂದಿನ ಕನ್ನಡದ ಪ್ರಸಿದ್ಧ ಲೇಖಕಿ, ಕಾದಂಬರಿಗಾರ್ತಿ ಗೀತಾ ನಾಗಭೂಷಣ.

ಗೀತಾರವರ ತಂದೆ ಶಾಂತಪ್ಪ. ಹಳ್ಳಿಯಲ್ಲಿ ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯವಿಲ್ಲವೆಂದು ಕಲಬುರ್ಗಿಗೆ ಬಂದು ಎಂ. ಎಸ್. ಕೆ. ಮಿಲ್ನ ಗಿರಣಿಯಲ್ಲಿ ಕೂಲಿ ಕಾರ್ಮಿಕರಾಗಿ ಸೇರಿಕೊಂಡರು. ಅನಕ್ಷರಸ್ಥೆಯಾದ ತಾಯಿ ಶರಣಮ್ಮನಿಗೆ ಅವರು ವಾಸ ಮಾಡುತ್ತಿದ್ದ ಓಣಿಯಲ್ಲಿದ್ದ ಹಾರುವರ ಮನೆಗಳಿಗೆ ಹೋಗಿ ಮಕ್ಕಳಿಗೆ ಸ್ನಾನ ಮಾಡಿಸುವುದು, ಅಭ್ಯಂಜನ ಮಾಡಿಸುವುದು, ದಿನಸಿ ಪದಾರ್ಥ ಸ್ವಚ್ಛ ಮಾಡಿಕೊಡುವುದು ಮತ್ತು ಅದಕ್ಕೆ ಪ್ರತಿಯಾಗಿ ದವಸ, ಧಾನ್ಯಗಳನ್ನು ಪಡೆಯುವುದು ರೂಢಿಯಾಗಿತ್ತು ಗಿರಣಿ ಕಾರ್ಮಿಕರಾಗಿದ್ದ ಶಾಂತಪ್ಪ ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಜೈಲು ಸೇರಿ ಬಂದವರು. ಅನಕ್ಷರಸ್ಥರಾದರೂ, ಜೈಲಿನಲ್ಲಿದ್ದ ಗೀತಾರವರ ತಂದೆಗೆ ಅಲ್ಲಿದ್ದ ವಿದ್ಯಾವಂತ ಖೈದಿಗಳ ಸಂಪರ್ಕದಿಂದ ರಾಮಾಯಣ, ಮಹಾಭಾರತ – ಹೀಗೆ ಹತ್ತು ಹಲವು ಗ್ರಂಥಗಳ ಪರಿಚಯವಾಯಿತು; ವಿದ್ಯೆಯ ಮಹತ್ವ ಅರಿವಾಯಿತು. ಜೈಲಿನಿಂದ ಹೊರಗೆ ಬಂದ ಮೇಲೆ ತಮ್ಮ ಮಕ್ಕಳಿಗೂ ವಿದ್ಯೆ ಕಲಿಸಬೇಕೆಂದು ನಿರ್ಧರಿಸಿದರು.

 ” ಏ ಶೂದ್ರ ಮುಂಡೇದೆ … ದೂರ ಕೂಡು ಅಕಾಡಿ … ನಮ್ಮ ಹುಡ್ರ ಸರಿಜೋಡಿ ಕುಂತು ಓದೀಯೇನೇ … ಧೂ … ಸಲಿಕೆ ಕೊಟ್ಟ ನಾಯಿ ತೆಲಿ ಮೂಸಿ ನೋಡಿತಂತೆ … ಈ ಕೆಳ ಮಂದೀಗೆಲ್ಲಾ ಸಮೀಪ ಕರೋಬ್ಯಾಡೋ ಒ ಅಂದ್ರ ನನ್ನ ಮಾತೆಲ್ಲಿ ಕೇಳ್ತಾನ ನನ್ನ ಮಗಾ … ನಮ್ಮ ಪಾರುಗೋಳ ಜತಿ ಅಕೀನೂ ಓದ್ಯೋಲಿ ಪಾಪ … ಅಂತಾನ … ಹಿಟ್ಟೂ ಬೂದಿ ಸಮಾಯೇನು?” ಓದಲೇಬೇಕೆಂದು ಹಠ ತೊಟ್ಟ ಗೀತಾ ಸುಂದ್ರಾಬಾಯಿಯವರ ಈ ನುಡಿ ಮುತ್ತುಗಳನ್ನು ಅರಗಿಸಿಕೊಳ್ಳಲೇಬೇಕಿತ್ತು ತನ್ನ ಮನೆಯಲ್ಲಿ ಕಂದೀಲಾಗಲೀ ಸರಿಯಾದ ಚಿಮಣಿಯಾಗಲೀ ಇರಲಿಲ್ಲವಾದ್ದರಿಂದ ಮಾಲೀಕ ಬಾಳಾಚಾರಿ ಕತ್ತಲಾದೊಡನೆ ಗೀತಾಳನ್ನು ಅಂಗಳಕ್ಕೆ ಕಂಡೊಡನೆ ಓಡುತ್ತಿದ್ದರು   “. ದಿನಾ ಆ ಮನೆಯ ಸಾಲಿಗೆ. ಹೋಗಲಕತ್ತಿದ್ಯಾಯಿಲ್ಲ ಓದ್ಯೋತ ಕೂಡ.”? ಎಂದೆನ್ನುತ್ತಿದ್ದರು ಸಂಜಿ ಮುಂದ. ಹೀಗೆ ನಮ್ಮ ಅಂಗಳದಾಗ ಬಾಳಾಜಿಯ ಬಂದು ಮಕ್ಕಳೊಂದಿಗೆ ನಮ್ಮ ಹುಡ್ಗ ಓದುತ್ತಿದೆ ಜತಿ ಗೀತಾ, ಶಾಲೆಯಲ್ಲಿ ಅವರ ಮಕ್ಕಳಿಗಿಂತ ಹೆಚ್ಚಿನ ಅಂಕ ಪಡೆಯುತ್ತಿದ್ದುದು ಅವರ ಮಕ್ಕಳಿಗೆ ಕೆಲವೊಮ್ಮೆ ಕಣ್ಣು ಕಿಸುರಾಗುತ್ತಿತ್ತು, ತಳವಾರ ಜಾತಿಗೆ ಸೇರಿದ ಕುಟುಂಬದೊಳಗೆ ಜನಿಸಿದ ಗೀತಾರವರು ಬ್ರಾಹ್ಮಣರ ಓಣಿಯಲ್ಲಿ ಬಾಡಿಗೆಗೆ ವಾಸಿಸುತ್ತಿದ್ದುದರಿಂದ, ಮೇಲುಜಾತಿಯವರು ಕೆಳಜಾತಿಯವರನ್ನು ಅಪಮಾನಗೊಳಿಸಬಹುದಾದ ಎಲ್ಲ ಪರಿಯನ್ನು ಸ್ವಂತ ಅನುಭವವಾಗಿ ಕಂಡವರು. ಮನೆಯಲ್ಲಿದ್ದ ಕಡುಬಡತನದಿಂದಾಗಿ ಅವರ ವಿದ್ಯಾಭ್ಯಾಸ ಯಾವ ಹಂತದಲ್ಲಾದರೂ ನಿಲ್ಲಬಹುದಿತ್ತು, ಆದರೂ ನೆರೆಯವರ ಸಹೃದಯತೆ ಮತ್ತು ಬದುಕಿನಲ್ಲಿ ಸಿಕ್ಕ ಚಿಕ್ಕ ಪುಟ್ಟ ಪ್ರೋತ್ಸಾಹದಿಂದಾಗಿ ಎದೆಗುಂದದೆ ಮೆಟ್ರಿಕ್ ಮುಗಿಸಿದರು. ಪುಸ್ತಕದ ಪ್ರೀತಿ ಮತ್ತು ಓದುವ ಅದಮ್ಯ ಆಸೆಯೊಂದಿಗೆ, ಮನೆಯ ಬಡತನದ ಅಗತ್ಯಗಳನ್ನು ಸರಿದೂಗಿಸಬೇಕಾದ್ದರಿಂದ ಕಲಬುರ್ಗಿಯ ಕಲೆಕ್ಟರ್ ಕಚೇರಿಯಲ್ಲಿ ನೌಕರಿಗೆ ಸೇರಿಕೊಂಡರು. ಜೊತೆಯಲ್ಲಿ ಶ್ರೀ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಬೆಳಗಿನ ಕಾಲೇಜಿಗೂ ಸೇರಿಕೊಂಡರು. ಅರುವತ್ತರ ದಶಕದಲ್ಲಿ ಗುಲಬರ್ಗಾ ನಗರದ ಯಾವ ಕಛೇರಿಯಲ್ಲಿಯೂ ಹೆಣ್ಣು ಮಕ್ಕಳು ಕ್ಲರ್ಕ್ ಆಗಿ ಕೆಲಸ ಮಾಡುತ್ತಿರಲಿಲ್ಲ. ಅಕ್ಕಪಕ್ಕದವರ ಕಟುನುಡಿ, ಬಂಧು ಬಳಗದವರವಿರೋಧ, ಅಮ್ಮನ ಅಳು, ಬೈಗುಳಗಳೂ ಅವರ ನಿರ್ಧಾರವನ್ನು ಬದಲಿಸಲಿಲ್ಲ. ಏಕೆಂದರೆಅವರಿಗೆ ತಂದೆಯ ಪ್ರೋತ್ಸಾಹವಿತ್ತು ಆಫೀಸಿನಲ್ಲೂ ಅವರೊಬ್ಬರೇ ಮಹಿಳೆಯಾದ್ದರಿಂದ ಜೊತೆಗಾರರ ವರ್ತನೆಯೆಲ್ಲವೂ ಒಂದೇ ರೀತಿಯದಾಗಿರಲಿಲ್ಲ. ಕೆಲವರು ಇವರನ್ನು ಕಂಡು ಹುಬ್ಬೇರಿಸಿದರೆ, ಮತ್ತೆ ಕಲವರು ಕುಹಕ ನಗೆ ನಗುತ್ತಿದ್ದರು. ಆದರೂ ಕೆಲವು ಹಿರಿಯರು ಅವರಿಗೆ ಕೆಲಸ ಹೇಳಿಕೊಟ್ಟು ಬದುಕು ಸಹ್ಯವಾಗುವಂತೆ ಮಾಡಿದರು. ಪದವಿ ದೊರಕಿಸಿಕೊಂಡ ವರ್ಷಗಳ ಮುಂದೆ ಬಿ.ಎಡ್ ಕಾಲ ಕಾರ್ಯನಿರ್ವಹಿಸಿ., ಅನಂತರ ಎಂ. ಎ. ಪದವಿ  ಗಳಿಸಿಕೊಂಡು . ಶರಣಬಸಪ್ಪ ಕಾಲೇಜು ಪ್ರಿನ್ಸಿಪಾಲ್ ನಿವೃತ್ತರಾದರು.

ಬದುಕಿನೊಂದಿಗೆ ಬರವಣಿಗೆಯೂ ಜೊತೆ ಜೊತೆಗೆ ಹೆಜ್ಜೆ ಹಾಕಿತು. ಬಡತನದ

ಬದುಕಿನಲ್ಲಿ ಕಾಣದ ಚಂದದ ವಸ್ತ್ರ, ಒಡವೆಗಳು, ರುಚಿ ರುಚಿ ಅಡುಗೆ ತಿಂಡಿಗಳು ಸುಂದರ

ಹೋಗೆ ನೂರಾರು ಗಳಲ್ಲಿನ ಕನಸಿನ ಮನರಂಜನಾ ಬೆಳೆದಿತ್ತು ಹೆಂಗಸರು, ಕಣೆ ಜನಪ್ರಿಯ ಆಕಾಂಕ್ಷೆಗಳಾದವು ಅ.ನ.ಕೃ. ಕನಸುಗಳು-ಕಾದಂಬರಿಗಳು ಎನ್ನುವ, ಟಿ ಶಿಷ್ಟ. ಕೆ ಭಾಷೆ.. ಕಣ್ಣ ರಾಮರಾವ್ ಭಾಷೆ ಹೈಸ್ಕೂಲಿನಿಂದಲೇ ಮನಸ್ಸಿಗೆ ಬಹಳ ಮುಂದಿದ್ದರಿಂದ ಅವರಿಗೆ, ತ್ರಿವೇಣಿ ಖುಷಿ ತುಂಬ ‘ ಛಲೋ ಕೊಟ್ಟವು,, ಕಥೆ ಪಸಂದ ಎಂ ಆವತ್ತಿನ. ಕೆ. ಪುಸ್ತಕಗಳ. ಅಂತ ಎನಿಸಿತ್ತು ಕಾದಂಬರಿಯ ಇಂದಿರಾ ಲೇಖಕರು ಅನ್ನಿಸಿತ್ತು, ಓದು-ಹರೆಯದ ಇವರ. ಬರೆಯುತ್ತಿದ್ದ ಪಾತ್ರಗಳಾದ ಹವ್ಯಾಸವಾಗಿ ಬಾರೆ ಕಾದಂಬರಿ ದಿನಗಳ ಕಣೆ, ಮನೆಯ ವಾಸ ರೇಷ್ಮೆ ಸೀರೆ ಉಡುವುದು, ತಲೆ ತುಂಬಾ ಹೂ ಮುಡಿಯುವುದು, ಮಹಡಿ-, ಕಾರಿನಲ್ಲಿ ಓಡಾಡುವುದು- ಆ ಕಾದಂಬರಿಗಳಲ್ಲಿ ಹೊಗೆಯಾಡುವ ಉಪ್ಪಿಟ್ಟು ಇವೆಲ್ಲಾ, ಕಾಫಿ ರೋಮಾಂಚನಕಾರಿ, ಬಾಳೆಹಣ್ಣು, ತಿಂಡಿಗಳ ಕನಸುಗಳಾದವು ವಾಸನೆ. ಮನಸ್ಸಿಗೆ ಖುಷಿ ಕೊಡುತ್ತಿದ್ದವು. ಈ ಗುಂಗಿನಲ್ಲಿಯೇ ಗೀತಾ ಅವರು ಇದೇ ಧಾಟಿಯ ಕೆಲವು

ಜನಪ್ರಿಯ ಕಾದಂಬರಿಗಳನ್ನು, ಕೆಲವು ಕತೆಗಳನ್ನು ರಚಿಸಿದರು.

ಬಡತನದ ಬಾಲ್ಯಕ್ಕಿಂತ ಗೀತಾರವರ ಹರೆಯದ ದಿನಗಳು ಇನ್ನೂ ಹೆಚ್ಚಿನ ಸಂಕಷ್ಟದಿಂದ

ಕೂಡಿದ್ದವು. ಹಿರಿಯರು ನಿರ್ಧರಿಸಿದ ಒಗ್ಗದ ಮದುವೆ ಹೊಂದಾಣಿಕೆಯಿಲ್ಲದೆ ಮುರಿದಾಗಿತ್ತು ಮುರಿದ ಮದುವೆಯ ಕಾರಣಕ್ಕೆ ಸುತ್ತಲಿನ ಜನರ ಚುಚ್ಚು ನೋಟಗಳನ್ನು ಎದುರಿಸಬೇಕಾಗಿ ಬಂತು. ಆ ಸಂದರ್ಭದಲ್ಲಿ ಅವರ ಬದುಕಿನಲ್ಲಿ ಪ್ರವೇಶಿಸಿದ ವಿವಾಹಿತ ನಾಗಭೂಷಣರವರೊಂದಿಗಿನ ಮದುವೆಯನ್ನೂ ಅವರ ಬಂಧುಗಳು, ಸ್ನೇಹಿತರು ಒಪ್ಪಿದ್ದರಿಂದ ಅವರಿಂದಲೂ ದೂರ ಸರಿಯಬೇಕಾಯಿತು. ಮೊದಲಿಗೆ ಗೀತಾರವರು ನಾಗಭೂಷಣರವರನ್ನು ಮೆಚ್ಚಿಯೇ ಮದುವೆಯಾಗಿದ್ದರೂ ಅವರ ಆಯ್ಕೆ ತಪ್ಪಾದದ್ದೆಂದು ಕಂಡುಕೊಳ್ಳಲು ಅವರಿಗೆ ಹೆಚ್ಚು ಕಾಲ ಹಿಡಿಯಲಿಲ್ಲ. ಈ ಮದುವೆಯಿಂದಲೂ ಅವರು ಪಡೆದದ್ದು ಅಪಾರವಾದ ನೋವು. ನಾಗಭೂಷಣರಿಂದ ಪಡೆದ ಇಬ್ಬರು ಮಕ್ಕಳನ್ನು ಬೆಳೆಸುತ್ತಾ ಬದುಕಿನಲ್ಲಿ ಒಂಟಿಯಾಗಿ ಹೋರಾಟದ ಬದುಕನ್ನು ಆರಿಸಿಕೊಂಡರು. ಗಂಡನಿಗೆ ಗುಲಾಮಳಾಗುವ ಅಥವಾ ಸಮಸ್ಯೆಗಳೊಂದಿಗೆ ರಾಜಿ ಮಾಡಿಕೊಳ್ಳುವ ಗುಣವನ್ನು ಹೊಂದಿರದ ಗೀತಾರ ದಾಂಪತ್ಯದ ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿಗಳು ಮರೀಚಿಕೆಯಾದವು. ಹೀಗೆ ಅವರ ಬದುಕಿನಲ್ಲಿ ಉಂಡ ನೋವಿನ ಸಂಘರ್ಷದ ಅನುಭವಗಳು ಅವರ ಬರೆಹಕ್ಕೆ ನೀರೆರೆದು ಪೋಷಿಸಿವೆ. ಗೀತಾರವರಿಗೆ ಸ್ವತಃ ವಿವಾಹ ಸಂಸ್ಥೆಯಲ್ಲಿ ಭದ್ರತೆ, ಗೌರವ ದೊರೆಯದಿದ್ದರೂ, ಅವರಿಗೆ ಆ ಸಂಸ್ಥೆಯ ಬಗ್ಗೆ ಅತ್ಯಂತ ವಿಶ್ವಾಸವಿದೆ. ತಮ್ಮ ಬರೆಹಗಳಲ್ಲಿ ವಿವಾಹ ಸಂಸ್ಥೆಯಲೋಪದೋಷಗಳನ್ನು ಕುರಿತು ಚಿತ್ರಿಸಿದರೂ ವಿವಾಹವು ಹೆಣ್ಣಿನ ಭದ್ರತೆಯ, ಸುಖದ ತಾಣವೆಂಬುದರಲ್ಲಿ ಅವರಿಗೆ ಅಚಲವಾದ ನಂಬಿಕೆಯಿದೆ. ಇದನ್ನು ಅವರ ಕೃತಿಗಳು ನಿರೂಪಿಸುತ್ತವೆ.

ಒಮ್ಮೆ ಗೀತಾರವರು ಅವರ ತಾಯಿಯ ತವರಾದ ಚುಂಚೂರು ಗ್ರಾಮಕ್ಕೆ ಅವರಮನೆದೇವತೆ ಮಾಪುರ ತಾಯಿ ದೇವಿಯ ಜಾತ್ರೆಗೆ ಹೋಗಿರುತ್ತಾರೆ. ಅಲ್ಲಿ ಅವರಿಗೆನಿಜವಾಗಿಯೂ ಶಾಕ್ ಆದದ್ದು ದಲಿತರ ಬೆತ್ತಲೆ ಸೇವೆ, ಬೆತ್ತಲೆ ಮೈಗೆ ಬೇವಿನ್ನೊಟ್ಟಿಗೆ,ಗಂಧದೊಟ್ಟಿಗೆ ಸುತ್ತಿಕೊಂಡು ಹರಕೆ ಹೊತ್ತವರು ದೇವಸ್ಥಾನದ ಸುತ್ತ ಕುಣಿಯುತ್ತಾಬರುತ್ತಿದ್ದರು. ಇದೊಂದು ದೇವಿಯ ಹರಕೆ. ಬೆತ್ತಲೆ ಸೇವೆಗೆ ಲಿಂಗಭೇದ,ವಯೋಭೇದವಿರಲಿಲ್ಲ, ಬರೀ ಬೆತ್ತಲೆಯಾಗಿ ನೆತ್ತಿಯ ಮೇಲೆ ಉರಿಯುವ ಸೊಡ್ಡಾರತಿಯತಟ್ಟೆ ಹೊತ್ತು ಬಾಯಲ್ಲಿ ಬೇವಿನೆಲೆ ಕಚ್ಚಿಕೊಂಡು ಹರಕೆ ಹೊತ್ತವರು ಬರಿಗಾಲಿನಿಂದ ದೇವಿಯಗುಡಿ ಸುತ್ತುತ್ತಿದ್ದರು. ಅವರ ಮುಂದೆ ಬಲಿ ಕೊಡುವ ಕುರಿ ಸಿಂಗಾರವಾಗಿ ಓಡುತ್ತಿತ್ತು. ಅದರಮುಂದೆ ಹಲಗೆ, ಬಾಜಿ, ಡೊಳ್ಳು ಭಜಂತ್ರಿಗಳ ಆವಾಜು, ಕುರಿಯ ಹಿಂದೆ ಹರಕೆ ಹೊತ್ತಹೆಂಗಸು ಅಥವಾ ಗಂಡಸು. ಅವರ ಹಿಂದೆ ಬಂಧು ಬಳಗದವರು ಉಧೋ … ಉಧೋ …ಅಂತ ಒದರುತ್ತ ಓಡುತ್ತಿದ್ದರು. ಇದನ್ನು ನೋಡುತ್ತ ಸುತ್ತ ನಿಂತ ಮಂದಿಗೆ ಪುಕ್ಕಟೆ ಮನರಂಜನೆಸಿಕ್ಕುತ್ತಿತ್ತು. ಇದನ್ನು ನೋಡಿ ಲೇಖಕಿಗೆ ಭಾರಿ ಶಾಕ್ ಅಷ್ಟೇ ಅಲ್ಲ, ಅಪಾರ ವ್ಯಥೆಯೂಆಯಿತು. ಇದು ಆ ದೇವಿಯ ಜಾತ್ರೆಯ ವೈಶಿಷ್ಟ್ಯವಾದರೆ, ನೋವು ಕೊಟ್ಟ ಮತ್ತೊಂದುಆಚರಣೆಯೆಂದರೆ, ಈ ಸಂದರ್ಭದಲ್ಲಿಯೇ ಆಗತಾನೆ ಮೈನೆರೆದು ಹಸಿ ಬಿಸಿ ಹರೆಯ ಹೊತ್ತಅಮಾಯಕ ಹೆಣ್ಣುಗಳನ್ನು ದೇವಿಗೆ ‘ ಜೋಗಿಣಿ’ ಅಂತ ಬಿಡುವುದು. ಮನಸ್ಸಿರಲಿ, ಬಿಡಲಿಅವರು ಜೋಗಿಣಿಯಾದ ಅನಂತರ ತಲೆಯ ಮೇಲೆ ಜರಡಿ ಬುಟ್ಟಿ ಹೊತ್ತು, ಕೊರಳಲ್ಲಿಕವಡೆ ಸರ ಹಾಕ್ಕೊಂಡು, ಬಗಲಲ್ಲಿ ಚೌಡಕಿ ಹಿಡ್ಕೊಂಡು ಉಧೋ ಉಧೋ ಅಂತ ದೇವಿಯಮಹಿಮೆಯ ಹಾಡುಗಳನ್ನು ಹಾಡುತ್ತಾ ಮನೆ-ಮನೆ, ಗಲ್ಲಿ ಗಲ್ಲಿ, ಬಾಜಾರು- ಬಾಜಾರು,ಸಂತೆ-ರಸ್ತೆಗಳಲ್ಲಿ ಭಿಕ್ಷೆ ಬೇಡಬೇಕು. ಅವಳು ದೇವರ ಸೇವೆಗೆ ಮೀಸಲು ಅಂದರೂತನ್ನ ಜೀವನದುದ್ದಕ್ಕೂ ಬೀದಿ ಸೂಳೆಯಾಗಿಯೇ ಬದುಕಬೇಕು; ಸೂಳೆಯಾಗಿಯೇ ಸಾಯಬೇಕ ಇವೆಲ್ಲಾ ಗೀತಾರವರ ಕಥೆಯ, ಕಾದಂಬರಿಗಳ ವಸ್ತುವಾಯಿತು.

ಗೀತಾರವರು ಆರಂಭದಲ್ಲಿ ಜನಪ್ರಿಯ ಮಾದರಿಯ ಶಿಷ್ಟ ಭಾಷೆಯಲ್ಲಿಯೇ ಕೃತಿಗಳನ್ನು

ಓದಿದ ರಚಿಸುತ್ತಾ ಅನಂತರ ಇದ್ದರು. ಅದನ್ನು ಒಮ್ಮೆ ಚಂದ್ರಶೇಖರ ಬಹುವಾಗಿ ಮೆಚ್ಚಿಕೊಂಡರು ಕಂಬಾರರು. ಬರೆದ ಈ ಕೃತಿಯ ಸಿಂಗಾರವ್ವ ಭಾಷೆಯನ್ನು ಮತ್ತು ಅರಮನೆ ಓದಿದಮೇಲೆ ಅವರಿಗೆ ಧೈರ್ಯ ಬಂದಿತು. ಅಲ್ಲಿಂದ ಅವರು ಹಿಂದೆ ನೋಡಲೇ ಇಲ್ಲ. ಅನಂತರಅವರು ತಮ್ಮದೇ ಆಡುಭಾಷೆಯಲ್ಲಿ (ಜವಾರಿ ಭಾಷೆ) ಕೃತಿ ರಚನೆಗೆ ತೊಡಗಿದರು. ಅವರಸಮಾಜದ ಹೆಣ್ಣು ಮಕ್ಕಳ ಬಗ್ಗೆ ಕಥೆ ಬರೆಯಲು ಆರಂಭಿಸಿದರು. ‘ ಸುಧಾ’ ವಾರಪತ್ರಿಕೆಯಎಂ. ಬಿ. ಸಿಂಗ್ ಅವರಿಂದ ಅವರಿಗೆ ತುಂಬ ಪ್ರೋತ್ಸಾಹ ಸಿಕ್ಕಿತು. ಅವರ ಪತ್ರಿಕೆಯಲ್ಲಿ ಗೀತಾಅವರ ಕಥೆಗಳು ಪ್ರಕಟವಾಗಲು ಆರಂಭಿಸಿದವು. ಇದರಿಂದ ಅವರಿಗೆ ಸ್ವಲ್ಪ ಧೈರ್ಯ ಬಂತು.ಚಿಕ್ಕಂದಿನಿಂದಲೂ ಮನಸ್ಸಿನಲ್ಲಿ ಕಾಡುತ್ತಿದ್ದ ನೂರಾರು ಪ್ರಶ್ನೆಗಳಿಗೆ ಮೂರ್ತರೂಪ ಕೊಡಲು ಆರಂಭಿಸಿದರು. ಜೋಗಿಣಿಯ ಹರಕೆ ಹೊತ್ತು ಸೂಳೆಗಾರಿಕೆಗೆ ಇಳಿಯುತ್ತಿದ್ದವರು ತೀರ ಕೆಳಜಾತಿಯ ಹೊಲೆ ಮಾದಿಗರು. ಮೇಲು ಜಾತಿಯ ಹೆಂಗಸಲ್ಯಾರೂ ಇಂಥ ಹರಕೆ ಹೊರುತ್ತಿರಲಿಲ್ಲ, ಆ ‘ ಹರಕೆ’ ಒಂದು ಸಂಪ್ರದಾಯವಾಗಿ ಬೆಳೆದುಬಂದದ್ದು ಬರೀ ದಲಿತರಲ್ಲಿ ಮಾತ್ರವೆಂಬ ಸಂಗತಿ ಅವರಿಗೆ ಇನ್ನಷ್ಟು ನೋವು ತಂದಿತು. ಮೇಲ್ಬಾತಿ, ವರ್ಗಗಳ ಹೆಣ್ಣುಗಳಿಗೆ ಬೆತ್ತಲೆ ಸೇವೆ, ಜೋಗಿಣಿಯ ಹರಕೆಗಳ ಹಂಗಿಲ್ಲ, ಬದಲಿಗೆ ಅವರು ದೇವಿಗೆ ಪೂಜೆ ನೈವೇದ್ಯ ಮಾಡುತ್ತಿದ್ದರು-ಇಂತಹ ರೂಢಿ, ರಿವಾಜುಗಳನ್ನು ಮಾಡಿದ ಮೇಲ್ಬಾತಿಯವರ ಚಾಲಾಕುತನದ ಸಂಚುಗಳನ್ನೆಲ್ಲ ಬರೆಹದ ಮೂಲಕ ಬಯಲಿಗಿಡುವ ಸಂಕಲ್ಪದಿಂದ ಬರೆವಣಿಗೆಯಲ್ಲಿ ತೊಡಗಿಸಿಕೊಂಡರು. ಮಾಪುರ ತಾಯಿಯ ಮಕ್ಕಳು ಕಾದಂಬರಿ ಈ ಹಿನ್ನೆಲೆಯಲ್ಲಿ ರಚಿತವಾದದ್ದು ಈ ಕೃತಿಯ ರಚನೆ ಅವರ ಬದುಕಿನ ಮಹತ್ವದ ಘಟ್ಟ. ಇಲ್ಲಿಂದ ಅವರಿಗೆ ತಮ್ಮ ಬರೆವಣಿಗೆಯ ದಿಕ್ಕು ಸ್ಪಷ್ಟವಾಯಿತು.

ಹಳ್ಳಿಯ ಕೊಳಗೇರಿಯ, ನಗರದ ರೋಪಡಪಟ್ಟಿಯ ಮುಗ್ಧ, ಮೂರ್ಖ ಹೆಂಗಸರ ನೂರಾರು ಸಮಸ್ಯೆಗಳು ಗೀತಾರವರ ಬರೆವಣಿಗೆಯ ವಸ್ತುಗಳಾದವು. ಅನಕ್ಷರಸ್ಥ, ಹಳ್ಳಿಯ ಹೆಣ್ಣಿನ ನೋವಿನ ಅನುಭವಗಳು, ಅವಳ ಶೋಷಣೆಯ ವಿವಿಧ ಮುಖಗಳನ್ನು ಕುರಿತು ಬರೆಯಲು ಆರಂಭಿಸಿದರು. ಅವರ ನೀಲಗಂಗಾ ಕಾದಂಬರಿ ಲಂಕೇಶ್ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾದಾಗ ವಿಮರ್ಶಕರೂ, ಓದುಗರೂ ಅದನ್ನು ತುಂಬ ಮೆಚ್ಚಿಕೊಂಡರು. ಭಾಷೆಯ ಗಟ್ಟಿತನವನ್ನು, ಒರಟುತನವನ್ನು ಪ್ರೀತಿಸಿದರು. ಇದರಿಂದ ಧೈರ್ಯ ಪಡೆದ ಲೇಖಕಿ ತಮ್ಮ ನೆಲದ ಗ್ರಾಮ್ಯ ಭಾಷೆಯನ್ನು ಯಾವ ಮುಲಾಜೂ ಇಲ್ಲದೆ ನಿರ್ಭಿಡೆಯಿಂದ ಬಳಸತೊಡಗಿದರು. ಅವರ ಹಸಿ ಮಾಂಸ ಮತ್ತು ಹದ್ದುಗಳು ‘ ತರಂಗ’ ಪತ್ರಿಕೆಯಲ್ಲಿ ಪ್ರಕಟವಾದಾಗ ಜನರು

ದಂಗಾದರು. ಒಬ್ಬ ಹೆಣ್ಣು ಮಗಳಾಗಿ ಸೆಕ್ಸ್ ಬಗ್ಗೆ, ಲೈಂಗಿಕ ಶೋಷಣೆಯ ಬಗ್ಗೆ ಎಷ್ಟೊಂದು

ಧೈರ್ಯವಾಗಿ ಬರೆಯುತ್ತಾಳೆ ಎನ್ನುವ ಮೆಚ್ಚಿಗೆ ಒಂದು ಕಡೆಯಾದರೆ, ಎಂತಹ’ ನಾಚಿಕೆಗೆಟ್ಟವಳು’ ಎಂಬ ಆರೋಪವೂ ಕೇಳಿಬಂತು. ಈ ಕಾದಂಬರಿಯಲ್ಲಿ ಚಿತ್ರಿತಳಾಗಿರುವ ಲಚ್ಚಿ ತನ್ನ ಗಂಡು ಮಗುವನ್ನು ತಾನೇ ಕೊಲ್ಲುವ ಸಂದರ್ಭ ರಚಿತವಾಗಿದೆ. ಹಾಗೆ ಮಾಡುವ ಮೂಲಕ ಪುರುಷಲೋಕವನ್ನು ಧಿಕ್ಕರಿಸುವ ಅವಳ ಕ್ರಮವನ್ನು ಕುರಿತು ಸಾಹಿತ್ಯ ವಲಯದಲ್ಲಿ ಒಂದು ಸಂಚಲನವೇ ಉಂಟಾಯಿತು ಹಾಗೂ ಹಲವಾರು ವಾದ- ವಿವಾದಗಳನ್ನು ಹುಟ್ಟು ಹಾಕಿತು. ಈ ಕಾದಂಬರಿಯ ಜನಪ್ರಿಯತೆ ಸಿನಿಮಾ ಆಗುವುದರ ಮೂಲಕ ಮತ್ತಷ್ಟು ಹೆಚ್ಚಿತು. ಸುಪ್ರಸಿದ್ಧ ಚಲನಚಿತ್ರ ನಿರ್ದೇಶಕರಾದ ದೊರೈ-ಭಗವಾನ್‌ರು ಸಿನೇಮಾಕ್ಕಾಗಿ ಕಾದಂಬರಿಯನ್ನು ಆರಿಸಿಕೊಂಡರು. ‘ ಹೆಣ್ಣಿನ ಕೂಗು’ ಎಂಬ ಹೆಸರಿನ ಚಲನಚಿತ್ರ ನಿರ್ಮಿಸಿದರು. ಈ ಚಿತ್ರವೂ ಯಶಸ್ವಿಯಾಯಿತು. ಅನಂತರ ಹಲವಾರು ಮಹತ್ವದ ಕಾದಂಬರಿಗಳು ಇವರಲೇಖನಿಯಿಂದ ಹೊರಬಂದಿವೆ. ಧುಮ್ಮಸು, ದಂಗೆ, ಚಿಕ್ಕಿಯ ಹರೆಯದ ದಿನಗಳು, ಬದುಕಲು ಹೋದವರು, ಆಸರೆಗಳು, ಅವ್ವ, ಜ್ವಲಂತ-ಮುಂತಾದವು ಅವುಗಳಲ್ಲಿ ಕೆಲವು.

ಕುದುರೆಮೋತಿಯ ಬೆತ್ತಲೆ ಪ್ರಕರಣ ನಡೆದಾಗ ಬಂಡಾಯ ಸಾಹಿತ್ಯ ಸಂಘಟನೆಯವ ರೊಂದಿಗೆ ಆ ಸ್ಥಳಕ್ಕೆ ಧಾವಿಸಿ, ಬೆತ್ತಲೆ ಮೆರವಣಿಗೆಗೆ ಒಳಗಾಗಿ ಘಾಸಿಗೊಂಡು ನೆಲ ಹಿಡಿದ ಹೆಂಗಸರೊಂದಿಗೆ ಮಾತನಾಡಿ ಅವರ ಸಂದರ್ಶನದ ವರದಿಯನ್ನು ‘ ತರಂಗ’ ದಲ್ಲಿ ಪ್ರಕಟಿಸಿದರು. ಇದಕ್ಕಾಗಿ ಅವರು ತಕ್ಕ ಬೆಲೆ ತೆರಬೇಕಾಯಿತು. ಈ ಲೇಖನ ಪ್ರಕಟವಾದ ಅನಂತರ ಅವರಿಗೆ ಬೆದರಿಕೆಯ ಫೋನುಗಳು, ಅವರನ್ನು ಕೊಲ್ಲುತ್ತೇವೆಂದು ಹೆದರಿಸುವ ಪತ್ರಗಳು ಅವರ ನಿದ್ರೆಯನ್ನು ಕೆಡಿಸಿದ್ದೂ ಉಂಟು.

ಮತ್ತೊಮ್ಮೆ ಲಂಕೇಶ್ ಪತ್ರಿಕೆಯಲ್ಲಿ ತರಕಾರಿ ಮಾರುವ ಹೆಂಗಸರ ಬಗ್ಗೆ, ಅವರ ಸಮಸ್ಯೆ, ಸಂಕಟ, ಅಸಹಾಯಕತೆಯ ಬಗ್ಗೆ ವಿವರವಾಗಿ ಬರೆದರು. ಅದು ಪತ್ರಿಕೆಯಲ್ಲಿ ಪ್ರಕಟವಾದ ಅನಂತರ ಮರುದಿನವೇ ಪೊಲೀಸರು ಬಂದು ಅವರ ಮನೆಯ ಬಾಗಿಲು ತಟ್ಟಿದರಂತೆ.       “ ಯಾರು ಆ ಗೂಂಡಾ? ಎಲ್ಲಿದ್ದಾ’ ‘ ಎಂದು ಅವರನ್ನು ಜಬರ್ದಸ್ತಿ ಮಾಡಿ ಕೇಳಿದರಂತೆ. ಕತೆ, ಕಾದಂಬರಿಗಳನ್ನು ಬರೆದಾಗಲೂ ಕೆಲವೊಮ್ಮೆ ಸಾರ್ವಜನಿಕರಿಂದ ಟೀಕೆ, ಟಿಪ್ಪಣಿ, ಬೆದರಿಕೆಗಳು ಅವರಿಗೆ ಒದಗಿಬಂದಿವೆ.

ಕನ್ನಡದಲ್ಲಿ ಮೊದಲಬಾರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನ ಪಡೆದ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಗೀತಾ ನಾಗಭೂಷಣ ಅವರು ಕ್ಲಾಸಿಕಲ್ ಎನ್ನಬಹುದಾದ ತಮ್ಮ ಮಹತ್ವದ ಬದುಕು ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಹುಮಾನವನ್ನು ೨೦೦೫ ರಲ್ಲಿ ಪಡೆದರು. ಈ ಕೃತಿ ಅವರ ಇದುವರೆಗಿನ ಬದುಕಿನ ಎಲ್ಲ ಅನುಭವ, ವೈಚಾರಿಕತೆಯ ಘನೀಕೃತ ರೂಪವಾಗಿ ಮೂಡಿಬಂದಿದೆ. ಅವರ ಮಾತಿನಲ್ಲೇ ಹೇಳುವುದಾದರೆ,

ನನ್ನ ಮತ್ತು ನನ್ನಂಥವರು ಹುಟ್ಟಿ ಬೆಳೆದ, ಅನುಭವಿಸಿದ ಬದುಕಿನ ಹಲವು ಹದಿನೆಂಟು ಮುಖವಾಡಗಳನ್ನು ಕಿತ್ತೆಸೆದು ಅವುಗಳ ಹಿಂದಿರುವ, ಮೇಕಪ್ಪಿಲ್ಲದ ಮಾರಿಗಳಿಗೆ ಭೂತಕನ್ನಡಿ ಹಿಡಿಯುವ ಸಾಚಾ ಕಳಕಳಿಯ, ಪ್ರಾಮಾಣಿಕ ಪ್ರಯತ್ನವೇ ಈ ಕಾದಂಬರಿ. ರೋಪಡಪಟ್ಟಿ ಮಂದಿಯ ಸುಖ-ದುಃಖ, ಸಂಕಟ-ಸಮಸ್ಯೆ, ರೀತಿ-ರಿವಾಜು, ರೂಢಿ-ನಂಬಿಕೆ, ಶಾಸ್ತ್ರ ಸಂಪ್ರದಾಯ, ಚಾಜ ನೇಮ, ಆಚರಣೆಗಳೆಲ್ಲ ಯಾವುದೇ ನಕಲೀ ಬಟ್ಟೆಯ ಮುಸುಕಿನ ಹಂಗಿಲ್ಲದೆ ಬೆತ್ತಲಾಗೇ ನಿಂತಿವೆ.

ಹೀಗೆ ರೋಪಡಪಟ್ಟಿ ಜನರ ದುಃಖ, ದುಮ್ಮಾನಗಳನ್ನು ಸಾಹಿತ್ಯದಲ್ಲಿ ಅಭಿವ್ಯಕ್ತಿಸುವ ಸಂಪ್ರದಾಯಕ್ಕೆ ಗೀತಾ ನಾಂದಿ ಹಾಡಿದ್ದಾರೆ. ಸಾಮಾಜಿಕ ಕಾಳಜಿಯ ಜೊತೆಗೆ ಸಾಹಿತ್ಯ ಪ್ರಪಂಚದಲ್ಲೂ ಅಪರೂಪದ ಅನುಭವದ ಲೋಕಗಳನ್ನು ತೆರೆದುಕೊಟ್ಟವರು ಗೀತಾ ನಾಗಭೂಷಣ, ಕೆಳ ಜಾತಿ, ವರ್ಗದ ಊಟ, ತಿಂಡಿ, ಆಚರಣೆ, ಒಡವೆ, ವಸ್ತ್ರ- ಎಲ್ಲವನ್ನೂ ಸಂಭ್ರಮದಿಂದ ವರ್ಣಿಸುತ್ತಾ ಅದಕ್ಕೊಂದು ಪ್ರಾಶಸ್ಯತಂದುಕೊಟ್ಟರು. ಆ ಮೂಲಕ ಆ ಜನರ ಸ್ವಾಭಿಮಾನದ ಗಡಿಯನ್ನು ಎತ್ತರಿಸಿದರು. ಅವರ ಭಾಷೆಯಲ್ಲಿಯೇ ಹೇಳುವುದಾದರೆ, ” ಶಿಷ್ಟ ಸಂಸ್ಕೃತಿಯ ಹೋಳಿಗೆ, ಪಾಯಸ, ತಿಂದೂ ತಿಂದೂ ಜಡಗಟ್ಟಿ ಸ್ವಾದ ಕಳೆದುಕೊಂಡಿರುವ ನಾಲಿಗೆಗಳಿಗೆ ಪುಂಡಿ- ಪಲ್ಯ, ಸಜ್ಜಿ ರೊಟ್ಟಿ, ಬಜ್ಜಿ -ಪಲ್ಯ, ಜ್ವಾಳದ ಕಡಬು, ಉಣ್ಣಿಸಿ ಜಾನಪದ ಖುಷಿಪಡಿಸುವ ಸಂಸ್ಕೃತಿಯ ಹುನ್ನಾರು ನನ್ನದು,’ ಹೀಗೆ ‘ ತಮ್ಮ ಬರವಣಿಗೆಯಲ್ಲಿ ಪ್ರಯತ್ನಿಸಿದ್ದಾರೆ.

ಸೇಂದಿ ಅಂಗಡಿಯ ಅನುಭವದ ಕುರಿತು ಸಂದರ್ಶನವೊಂದರಲ್ಲಿ ಪ್ರಶ್ನಿಸಿದಾಗ ಗೀತಾ ಈ ವರ್ಣನೆಗೆ ಅವರು ದೊರಕಿಸಿಕೊಂಡ ಅವರ ಅನುಭವದ ಉತ್ತರ ಮೂಲ ಹೀಗಿದೆ:

ನಾನು ಸಣ್ಣವಳಿದ್ದಾಗ ಶಾಲೆಯ ರಜಾದಿನಗಳಲ್ಲಿ ನನ್ನ ಅವ್ವನ ತವರೂರಾದ ಭೀಮಳ್ಳಿಗೆ ಹೋಗುತ್ತಿದ್ದೆ. ಈ’ ಬದುಕು ‘ ವಿನಲ್ಲಿ ಬರುವ ಜಮಾದಾರ ಮಲ್ಲಪ್ಪನಂಥ ವ್ಯಕ್ತಿ ನನ್ನ ಮುತ್ಯಾ (ಅಜ್ಜ). ಅವನೇ ಮಲ್ಲಪ್ಪನಾಗಿ ಮರುಹುಟ್ಟು ಪಡೆದಿದ್ದಾನೆ ಎನ್ನಬಹುದು. ಆ ಮುತ್ಯಾನ ಅತ್ಯಂತ ಪ್ರೀತಿಯ ಮೊಮ್ಮಗಳು ನಾನು. ನಾನು ಶಾಲೆಗೆ ಹೋಗುತ್ತಿದ್ದೆನಲ್ಲ, ಹಿಂಗಾಗಿ ಅವನಿಗೆ ನನ್ನ ಮೇಲೆ ವಿಶೇಷ ಪ್ರೀತಿ. ನನ್ನನ್ನು ತನ್ನೊಂದಿಗೆ ಊರ ಬದಿಯ ಸೇಂದಿ ಬನಕ್ಕೆ ಕರೆದುಕೊಂಡು ಹೋಗುತ್ತಿದ್ದನು.’ ಸೇಂದಿ ‘ ಮತ್ತು’ ನೀರಾ’ದ ರುಚಿಯೂ ತೋರಿಸಿದ್ದ. ಒಂದೊಂದು ಸಲ ಸೇಂದಿ ಕಲ್ಲಪ್ಪನ ದುಖಾನಕ್ಕೂ ನಾನು ಅವನೊಂದಿಗೆ ಅವನ ಕೈ ಹಿಡ್ಕೊಂಡು ಹೋಗಿದ್ದಿದೆ. ಹಿಂಗಾಗಿ ನನಗೆ ಸೇಂದಿ ಬನದ ಸೇಂದಿ ಖಾನೆಯ ಸಹಜವಾದ ಚಿತ್ರಣ ಕೊಡಲು ಸಾಧ್ಯವಾಗಿದೆ.

ತಮ್ಮ ಅನುಭವದ ವಿಸ್ತಾರ ಮತ್ತು ಶ್ರೀಮಂತಿಕೆಯನ್ನು ಹೆಚ್ಚಿಸಿಕೊಳ್ಳಲು ಗೀತಾ ಕೆಲವೊಮ್ಮೆ ವಿಶೇಷ ಪ್ರಯತ್ನಗಳನ್ನು ಮಾಡಿರುವುದೂ ಉಂಟು. ಧುಮ್ಮಸು ಕಾದಂಬರಿಯಲ್ಲಿ ತಮ್ಮ ಇಂತಹ ಆಸಕ್ತಿಗಳನ್ನು ಉಲ್ಲೇಖಿಸಿದ್ದಾರೆ.

ಮನಸ್ಸಿಗೆ ಕಿರಿಕಿರಿಯೆನಿಸಿ ನಾನು ಬೇಚೈನಾದಾಗ ಆಗಾಗ ನನ್ನ ಹಳ್ಳಿಗೋ ಇದೇ ಶಹರದಲ್ಲಿನ ರೋಪಡಪಟ್ಟಿಗೋ ಭೇಟಿಕೊಟ್ಟು ಅಲ್ಲಿಯ ಮಂದಿಯೊಂದಿಗೆ ಮಾತಾಡಿ ಬರುವುದು, ನನಗೆ ಹತ್ತಿಕೊಂಡ ಚಟ. ಹೀಗೊಮ್ಮೆ ಹೋದಾಗ ಗುಡಿಸಲೊಂದರಲ್ಲಿ ಹರೆಯ ಹೊಳ್ಳಿ ನಿಂತ ಹೆಂಗಸೊಬ್ಬಳು ಸೆರಗು ಬಾಯಿಗೊತ್ತಿಕೊಂಡು ಅಳು ನುಂಗುತ್ತ ಕುಂತಿದ್ದಳು. ಮಾತಾಡಿಸಿದರೆ ತುಟಿ ಬಿಚ್ಚಲಿಲ್ಲ … ಅಂದು ನಾನು ಆಡಿಸಿದ ಮಾತಿಗೆ ಮೂಕಿಯಾಗಿದ್ದ ಆ ಹೆಂಗಸು ನನಗೆ ಈಟುದ್ದದ ಕಾದಂಬರಿ ಬರೆಯಲು ಹಚ್ಚಿದ್ದು ಮಾತ್ರ ನನಗೂ ತಿಳಿಯದ ಒಗಟು. ಎನ್ನುತ್ತಾರೆ ಗೀತಾ.

ಕೆಳಜಾತಿ ವರ್ಗದವರ ದುಃಖ-ದುಮ್ಮಾನಗಳನ್ನು, ಆಚರಣೆ, ಕುರುಡು ನಂಬಿಕೆಗಳನ್ನು-ಒಟ್ಟಾರೆಯಾಗಿ ಸಮಾಜದ ಶೋಷಿತರ ವಿಸ್ತಾರವಾದ ಬದುಕಿನ ಚಿತ್ರವನ್ನು ತಮ್ಮ ಕಾದಂಬರಿಗಳಲ್ಲಿ ಚಿತ್ರಿಸುವ ಮೂಲಕ ಇದುವರೆಗೆ ಕನ್ನಡ ಸಾಹಿತ್ಯಲೋಕಕ್ಕೆ ಅಪರಿಚಿತವಾಗಿದ್ದ ಅನುಭವ ಪ್ರಪಂಚವನ್ನು ಪರಿಚಯಿಸಿರುವ ಶ್ರೀಮತಿ ಗೀತಾ ನಾಗಭೂಷಣ ಅವರು ತಮ್ಮ ಕೃತಿಗಳಿಗೆ ಹಲವಾರು ಬಹುಮಾನಗಳನ್ನು, ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕನ್ನಡ ಸಾಹಿತ್ಯಲೋಕದ ಬಹುಪಾಲು ಎಲ್ಲ ಮುಖ್ಯ ಪ್ರಶಸ್ತಿಗಳಿಗೂ ಪಾತ್ರರಾಗಿರುವ ಗೀತಾರವರು ಹಲವಾರು ಪ್ರಥಮಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಹೈದರಾಬಾದ್ ಕರ್ನಾಟಕದ ಪ್ರಾಂತ್ಯದಲ್ಲಿನ ಕೆಳಜಾತಿಯ ಸಮುದಾಯದಲ್ಲಿ ಮೊದಲಿಗೆ ವಿದ್ಯಾಭ್ಯಾಸ ಪಡೆದವರಾಗಿ, ಕಛೇರಿಯಲ್ಲಿ ಕೆಲಸ ಮಾಡುವ ಮೊದಲ ಮಹಿಳೆಯಾಗಿ ವಿಶಿಷ್ಟ ಅನುಭವವನ್ನು ಪಡೆದಿದ್ದ ಗೀತಾರವರು ಕನ್ನಡದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನ ಪಡೆದ ಮೊದಲ ಲೇಖಕಿಯಾಗಿದ್ದಾರೆ. ಅಷ್ಟೇ ಅಲ್ಲ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮೊದಲ ಮಹಿಳಾ ಅಧ್ಯಕ್ಷರೂ ಆಗಿದ್ದಾರೆ.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಯನ್ನು ೧೯೯೫ ರಲ್ಲೇ ಪಡೆದಿದ್ದ ಗೀತಾ ಅವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸರ್ಕಾರದ ‘ ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಕನ್ನಡ ವಿಶ್ವವಿದ್ಯಾಲಯದ’ ನಾಡೋಜ ‘ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ’ ಅನುಪಮಾ ‘ ಪ್ರಶಸ್ತಿಗಳಿಂದ ಸನ್ಮಾನಿತರಾಗಿದ್ದಾರೆ.

ತಮ್ಮ ಬದುಕಿನ ಪ್ರವಾಹದಲ್ಲಿ ತಮ್ಮ ಮನಸ್ಸಿಗೆ ಒಪ್ಪಿತವಾದದ್ದನ್ನು ಗಳಿಸಲು ವಿರುದ್ಧ ದಿಕ್ಕಿನಲ್ಲಾದರೂ ಸರಿಯೇ ಎಂದೂ ರಾಜಿಮಾಡಿಕೊಳ್ಳದೆ ಹೋರಾಡುವ ಮನೋಭಾವವನ್ನು ಗಳಿಸಿಕೊಂಡಿರುವ ಲೇಖಕಿ ಗೀತಾರವರಿಗೆ ವ್ಯಕ್ತಿಗತ ಪ್ರತಿಭೆ ಮತ್ತು ಸಾಮರ್ಥ್ಯದಲ್ಲಿ ಅಚಲ ವಿಶ್ವಾಸ.“ ನಮ್ಮನ್ನು ನಾವೇ ಉದ್ಧಾರ ಮಾಡಿಕೊಳ್ಳಬೇಕು. ಬೇರೆಯವರು ಬಂದು ಉದ್ದಾರ ಮಾಡುತ್ತಾರೆ ಅಂತ ಹೇಳಕ್ಕಾಗಲ್ಲ ‘ ಎನ್ನುವ ಅವರ ಬದುಕೇ ಅವರ ನಂಬಿಕೆಗೆ ನಿದರ್ಶನ. ತಮ್ಮ ವೈಯಕ್ತಿಕ ಬದುಕಿನ ಕಹಿ ಅನುಭವಗಳು ಮತ್ತು ತಮ್ಮ ಸುತ್ತಲಿನ ಸಮಾಜದ ಒಳಿತು ಕೆಡುಕುಗಳನ್ನು, ದುಃಖ-ದುಮ್ಮಾನಗಳನ್ನು ಸಾಹಿತ್ಯದಲ್ಲಿ ಅಭಿವ್ಯಕ್ತಿಸಿದರೂ ಅದರಿಂದ ಸಮಾಜದ ಸಹಾನುಭೂತಿ ಗಳಿಸುವ ಮನಸ್ಸು ಅವರದಲ್ಲ, ಅವರೆನ್ನುತ್ತಾರೆ:

ನನ್ನ ಬದುಕಿನ ಹೋರಾಟ, ಸಂಘರ್ಷಗಳು ಮುಂದಿನ ಬರಹಗಾರ್ತಿಯರಿಗೆ ಎಚ್ಚರಿಕೆಯ ಗಂಟೆಗಳಾಗುತ್ತವೆಂಬ ಭ್ರಮೆಗಳು ಇಲ್ಲ. ನನ್ನ ಪರಿಸರ, ನನ್ನ ನೋವು, ಅಪಮಾನಗಳು, ನನ್ನ ಹೋರಾಟಗಳು-ಇವೆಲ್ಲ ನನ್ನವೇ. ಇವು ಅನ್ಯರಿಗೆ ಸಹಕಾರಿ ಹೇಗೆ ಆದಾವು? ಇತ್ತೀಚೆಗೆ ಆತ್ಮ ಚರಿತ್ರೆ ಬರೆಯುವ ಹುಚ್ಚು ಹಿಡಿದಂತಿದೆ, ಸಾಹಿತಿಗಳಿಗೆ ಬರೆದರೆ ತಮ್ಮ ತೀರ ವೈಯುಕ್ತಿಕಬದುಕನ್ನೆಲ್ಲಾ ಬಯಲಾಗಿಸುವ ಛಾತಿವಂತಿಕೆಯಿರಬೇಕು ಛಾತಿವಂತಿಕೆಯಿರಬೇಕು.. ಕೆಲವನ್ನು ಪವಾಡವೆಂಬಂತೆ ವೈಭವೀಕರಿಸಿ ಮತ್ತೆ ಕೆಲವದರ ಮೇಲೆ ಪಾವಡ ಮುಚ್ಚಿ ಓದುಗರಿಗೆ ಗುಮಾನಿ ಬರುವಂಥ ಜೀವನ ಚರಿತ್ರೆಗಳಿಂದ ಏನು ಲಾಭ?

4 thoughts on “ಗೀತಾ ನಾಗಭೂಷಣ : ಒಂದು ನೆನಪು

Leave a Reply

Your email address will not be published. Required fields are marked *