ಜಾಣಮೂರ್ಖ

ಜಾಣಮೂರ್ಖ

ಹಸನುಗೊಳಿಸಿಯೆ ಬಿತ್ತು

ಬಿತ್ತು ಹಸನಿರಲೇನು
ಭೂಮಿ ಹಸನಿರದಿರಲು !
ಮನದಿ ಮಾಲಿನ್ಯವಿರೆ
ಜಾನ ಡೊಂಕೇನು ?
ಕರಲೊಳಗೆ ಬೀಳ್ದ ಬಿ
ತ್ತೆಂತು ಮರವಾಗುವುದೊ ?
ಹಸನುಗೊಳಿಸಿಯೆ ಬಿತ್ತು
ಜಾಣಮೂರ್ಖ//

ಬಿತ್ತನೆಯ ಬೀಜವು ಎಷ್ಟೇ ಯೋಗ್ಯವಾಗಿದ್ದರೂ ಸಹ ಭೂಮಿ ಫಲವತ್ತಾಗಿಲ್ಲದಿದ್ದರೆ ! ಬೆಳೆ ಫಲಿಸುವುದೇನು ? ಅಂತೆಯೇ ಸುಜ್ಞಾನ. ಅರಗಿಸಿಕೊಳ್ಳುವ ಮನಸ್ಸೇ ಮಲಿನಗೊಂಡಿದ್ದರೆ ಜ್ಞಾನವೇನು ಮಾಡುತ್ತದೆ? ಕರಲು (ಕ್ಷಾರಯುಕ್ತ) ನೆಲದಲ್ಲಿ ಬಿತ್ತಿದ ಬೀಜ ಹೆಮ್ಮರವಾಗುವುದೇನು? ಬಿತ್ತುವವರಿಗೂ , ಬಿತ್ತಿಸಿಕೊಳ್ಳುವ ನೆಲಕ್ಕೂ ಎರಡಕ್ಕೂ ಕಸುವಿರಬೇಕು. ನೆಲವು ಹಸನಾಗಿಲ್ಲದಿದ್ದರೆ ಅದನ್ನು ನೀರು ಗೊಬ್ಬರದಿಂದ ಹಸನಾಗಿಸಿ , ಯೋಗ್ಯವಾಗಿಸಿ ಆ ನಂತರ ಬಿತ್ತಬೇಕು. ಅಂತೆಯೇ ಲೌಕಿಕ ಅರಿವನ್ನು ನೀಡುವವರು ಸಾಕಷ್ಟು ಜನರಿದ್ದಾರೆ. ಆದರೆ ಪಾರಮಾರ್ಥಿಕ ಜ್ಞಾನವನ್ನು ನೀಡುವವರೆಷ್ಟು ಮಂದಿ !? ನೀಡಿದರೂ ಸ್ವೀಕರಿಸುವವರೆಷ್ಟು ಮಂದಿ !? ಸ್ವೀಕರಿಸಿದರೂ ಅಳವಡಿಸಿಕೊಳ್ಳುವವರೆಷ್ಟು ಮಂದಿ ?! ಅದಕ್ಕೇ ಅರಿವನ್ನು ಹಂಚುವ ಮುನ್ನ ಸ್ವಲ್ಪ ತಡವಾದರೂ ಚಿಂತೆಯಿಲ್ಲ, ಅರಿಯುವವರನ್ನು ಅಣಿಗೊಳಿಸಿ ಹಂಚಿದರೆ ಚಂದ ! ಅಲ್ಲವೇ ಗೆಳೆಯರೇ ?
✍ಮುರಳೀಧರ ಹೆಚ್.ಆರ್.

Leave a Reply

Your email address will not be published. Required fields are marked *