ಉಪಾಧ್ಯಾಯ:-

ಪದ ಚಿಂತನ

ಪದ ಚಿಂತನ*


ಜೀವನ ನಿರ್ವಹಣೆಗಾಗಿ ವಿದ್ಯೆ ಕಲಿಸುವವನು. ಶಿಕ್ಷಣ ನೀಡುವವನು ಎಂಬರ್ಥವನ್ನು ಉಪಾಧ್ಯಾಯ ಪದ ಹೊಂದಿರುವುದು ನಿಘಂಟುಗಳಲ್ಲಿ ಕಂಡುಬರುತ್ತದೆ.
ಆದರೆ ಉಪಾಧ್ಯಾಯ ಪದಕ್ಕೆ ಇನ್ನೂ ವಿಶಾಲಾರ್ಥವೇ ಇದೆ.
ಅಯ ಎಂಬ ಧಾತುವಿಗೆ ಚಲನೆ,ವಿಷಯದ ಕಡೆ ಗಮನ ಎಂಬರ್ಥಗಳಿದ್ದು ಅಧಿ ಉಪಸರ್ಗ ಸೇರಿ, ಅಧಿ+ ಅಯ+ ಧಞ್( ಅ)
ಪ್ರತ್ಯಯ ಸೇರಿ
ಅಧಿ+ ಆಯ(ಧಾತುವಿನ ಅಂತ್ಯ ಸ್ವರ ಲೋಪ ಮತ್ತು ಪ್ರತ್ಯಯವು ಅಂತ್ಯಕ್ಕೆ ಸೇರಿ ಆದಿ ದೀರ್ಘ)
ಅಧ್ಯಾಯ ಎಂದಾಗುತ್ತದೆ. ಇದರರ್ಥ ವ್ಯಾಸಂಗ, ಅಧ್ಯಯನ.
ಉಪ ಎಂದರೆ ಸಾಮೀಪ್ಯ, ಅಧಿಕ ಎಂಬರ್ಥಗಳಿವೆ.
ಉಪ+ ಅಧ್ಯಾಯ> ಉಪಾಧ್ಯಾಯ
ಅಧಿಕವಾದ ಅಧ್ಯಯನದ ಸಾಮೀಪ್ಯ ಇರುವವನು ಉಪಾಧ್ಯಾಯ.
ನಿರಂತರ ಅಧ್ಯಯನಶೀಲನಾದವನು ಉಪಾಧ್ಯಾಯ. ಕಲಿತದ್ದನ್ನು ವಿದ್ಯಾರ್ಥಿಗಳಿಗೆ ವರ್ಗಾಯಿಸಿ ಜ್ಞಾನ ತುಂಬುವವನು ಉಪಾಧ್ಯಾಯ.
ಉಪಾಧ್ಯಾಯ ಪದವು ವಿಶಾಲವಾದ ಅರ್ಥವನ್ನು ಪಡೆದುಕೊಂಡಿದೆ.
ಈ ಪದವು ಅನ್ವರ್ಥವಾಗಬೇಕಾಗಿರುವುದು ಶಿಕ್ಷಕರ ಕೈಯಲ್ಲೇ ಇದೆ.

ಓದಿದ್ದಕ್ಕಾಗಿ ಧನ್ಯವಾದಗಳು. 🙏🙏🙏🙏🙏💐🌹🌺🌸🌷
ಅ.ನಾ.

Leave a Reply

Your email address will not be published. Required fields are marked *