ಪ್ರಾಣ/ ಪ್ರಾಣಿ

ಪದ ಚಿಂತನ

ಪ್ರಾಣ/ ಪ್ರಾಣಿ
ಶರೀರದಲ್ಲಿರುವ ಉಸಿರು, ಮೃಗಗಳು ಎಂಬರ್ಥಗಳನ್ನು ಕ್ರಮವಾಗಿ ನಾವು ಈ ಪದಗಳಿಗೆ ಹೇಳುತ್ತೇವೆ. ಈ ಪದಗಳಿಗೆ ವಿಶಿಷ್ಟವಾದ ಅರ್ಥಗಳಿವೆ.

ಅನ ಎಂಬ ಧಾತು ಜೀವಿಸು, ಬದುಕು ಎಂಬರ್ಥವನ್ನು ಹೊಂದಿದ್ದು, ಪ್ರ ಉಪಸರ್ಗ ಸೇರಿ
ಪ್ರ+ ಅನ > ಪ್ರಾನ ಎಂದಾಗಿ, ರೇಫೆಯು ಪದದಲ್ಲಿರುವ ಕಾರಣದಿಂದ, ನಿಯಮದಂತೆ ನಕಾರ ಕ್ಕೆ ಣ ಆದೇಶವಾಗಿ ಪ್ರಾಣ ಎಂಬ ಪದ ಸಿದ್ಧಿಸುತ್ತದೆ. ಬ್ರಹ್ಮ, ಶರೀರದಲ್ಲಿರುವ ಪಂಚವಾಯುಗಳು, ಉಸಿರು ಎಂಬರ್ಥ ಸ್ಫುರಿಸುತ್ತದೆ. ಇಷ್ಟವಾದದನ್ನು, ಪ್ರೀತಿಗೆ ಪಾತ್ರರಾದವರನ್ನು ಪ್ರಾಣ ಎಂದು ಕರೆಯುವ ರೂಢಿಯೂ ಇದೆ.

ಪ್ರಾಣ ಪದಕ್ಕೆ ( ಪ್ರಾಣಃ ಅಸ್ಯ ಅಸ್ತಿ ಇನಿ) ಇನಿ ಪ್ರತ್ಯಯ ಸೇರಿ, ಪ್ರಾಣ ಎಲ್ಲಿ ಇರುವುದೋ ಅದು ಪ್ರಾಣಿನ್( ಪ್ರಾಣ ಸಹಿತವಾದದ್ದು) ಎಂದಾಗುತ್ತದೆ. ಪ್ರಾಣಿನ್ ಪದ ಪ್ರಾಣಿ ಎಂದು ಬಳಕೆಯಲ್ಲಿದೆ. ಮೃಗಗಳಿಗೆ ಮಾತ್ರ ಅರ್ಥ ಸೀಮಿತಗೊಳಿಸಿ ಅರ್ಥ ಸಂಕುಚಿತ ಮಾಡಲಾಗಿದೆ. ವಿಶಾಲಾರ್ಥದಲ್ಲಿ ಪ್ರಾಣ ಎಲ್ಲಿದೆಯೋ ಅವೆಲ್ಲಾ ಪ್ರಾಣಿಗಳೇ ಆಗಿವೆ. ಪ್ರಾಣಿ ಪದವು ಅನ್ವರ್ಥ ಪದವಾಗಿದೆ. ಯಾವುದು ಸರಿಯಾಗಿದೆ ಎಂಬುದನ್ನು ನಿರ್ಣಯಿಸಬಹುದಲ್ಲವೇ?

ಓದಿದ್ದಕ್ಕಾಗಿ ಧನ್ಯವಾದಗಳು.🙏🙏🙏🙏🙏🙏🙏🌹💐🌷🌻🌸🌺
ಅ.ನಾ.*

Leave a Reply

Your email address will not be published. Required fields are marked *