ದೇವ ಮಾನವ ಮೈತ್ರಿ

ಜಾಣಮೂರ್ಖ

ಮನದ ಸಂಕಲ್ಪ ತಾ
ದೃಢಮಿರ್ದೊಡಾಯ್ತು ಮಿಗೆ
ದೇವ ಬಹನಲ್ಲಿ ಕಾಣ್
ಸಂದೆಯಮದೇಕೆ !?
ಸಂಕಲ್ಪ ಸಿದ್ಧಿಗದು
ಸಿದ್ಧಸೋಪಾನಮದೆ
ದೇವಮಾನವ ಮೈತ್ರಿ
ಜಾಣಮೂರ್ಖ //

ದೈವ ಸಂಕಲ್ಪವನ್ನು ಅರಿತವರಿಲ್ಲ ಎನ್ನುತ್ತಾರೆ ಅಲ್ಲವೆ ? ದೇವಮಾನವ ಮೈತ್ರಿ ಅತಿ ಗೌಪ್ಯವಾದದ್ದು. ಕೆಲವರು ಸ್ವಲ್ಪ ಸೂಕ್ಷ್ಮದೃಷ್ಟಿ , ಸೂಕ್ಷ್ಮ ಸಂವೇದನೆಗಳನ್ನು ಹೊಂದಿದ್ದು, ಅಂತಹವರಿಗೆ ಈ ಅರಿವು ಇರುತ್ತದೆ. ಮನಸ್ಸಿನಂತೆ ಮಹಾದೇವ , ಯದ್ಭಾವಂ ತದ್ಭವತಿ ಎಂಬಿತ್ಯಾದಿ ಮಾತುಗಳನ್ನು ನೀವು ಕೇಳಿದ್ದೀರಲ್ಲ ! ಮನಸ್ಸಿನ ಸಂಕಲ್ಪಗಳು ದೃಢವಾಗಿರಬೇಕಷ್ಟೆ. ಆತ್ಮಸಂಕಲ್ಪ ದೃಡವಾಗಿದ್ದಾಗ ಕೈಚೆಲ್ಲಿ ಕುಳಿತ ಕಾರ್ಯಗಳೂ ಸಹ ಸಿದ್ದಿಗೊಳ್ಳುತ್ತವೆ. ಏಕೆಂದರೆ ಅಲ್ಲಿ ಸ್ವಯಂ ಭಗವಂತನೇ ಬರುತ್ತಾನೆ. ಅಂತಹಾ ಕೆಲಸದಲ್ಲಿ ಆತ್ಮಾನಂದವಿರುತ್ತದೆ. ಸಂಕಲ್ಪಸಿದ್ಧಿಗೆ ದೃಢ ಸಂಕಲ್ಪವು ಸೋಪಾನವಿದ್ದಂತೆ. ದೃಢ ಮತ್ತು ಸತ್ಸಂಕಲ್ಪಕ್ಕೆ ಭಗವಂತನ ಸಹಾಯ ಇದ್ದೇ ಇರುತ್ತದೆ. ಒಮ್ಮನಸ್ಸಿನಿಂದ ಕಾರ್ಯಪ್ರವೃತ್ತರಾದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಇದರಲ್ಲಿ ಸಂದೇಹವೇ ಇಲ್ಲ. ಇದೇ ದೇವ ಮಾನವ ಮೈತ್ರಿಯ ರಹಸ್ಯ ! ಅಲ್ಲವೇ ಗೆಳೆಯರೇ !?
✍️ಮುರಳೀಧರ ಹೆಚ್.ಆರ್.

Leave a Reply

Your email address will not be published. Required fields are marked *