ನಿವೇದನ/ ನೈವೇದ್ಯ

ಪದ ಚಿಂತನ


ಸಮರ್ಪಿಸುವುದು ಮತ್ತು ದೇವರಿಗೆ ಅರ್ಪಿಸುವ ಹಣ್ಣುಕಾಯಿ, ಹವಿಸ್ಸು ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿದೆ.
ಬೇರೆ ಬೇರೆ ಅರ್ಥಗಳಿರುವ ಈ ಪದಗಳಿಗೆ ಧಾತು ಒಂದೇ ಆಗಿದೆ.
ವಿದ್ ಧಾತು ಜ್ಞಾನ ಎಂಬರ್ಥದಲ್ಲಿದ್ದು, ನಿ ಉಪಸರ್ಗ ಮತ್ತು ನ ಪ್ರತ್ಯಯ ಸೇರಿ ನಿವೇದನ ಎಂದಾದಾಗ ಸಮರ್ಪಿಸುವುದು, ವಿಜ್ಞಾಪಿಸುವುದು, ಅರಿಕೆಮಾಡುವುದು, ತಿಳಿಸುವುದು ಎಂಬರ್ಥಗಳನ್ನು ಹೊಂದಿದೆ. ಕನ್ನಡದಲ್ಲಿ ನಿವೇದನೆ ಎಂದು ಪ್ರಯೋಗದಲ್ಲಿದೆ.

ವಿದ್ ಧಾತುವಿಗೆ ನಿ ಉಪಸರ್ಗ ಅ ವಿಕರಣ ಪ್ರತ್ಯಯ ಸೇರಿ ನಿವೇದ ಎಂದಾಗಿ, ಇದಕ್ಕೆ ಯ ಪ್ರತ್ಯಯ ಸೇರಿ, ಆದಿಯ ಸ್ವರಕ್ಕೆ ವೃದ್ಧಿಯು ಬಂದು, ನೈವೇದ್ಯ ಪದ ನಿಷ್ಪತ್ತಿಯಾಗುತ್ತದೆ. ದೇವರಿಗೆ ಅರ್ಪಿಸುವುದಕ್ಕೆ ಯೋಗ್ಯವಾದ ಹಣ್ಣು,ಕಾಯಿ, ಹವಿಸ್ಸು ಎಂಬರ್ಥ ಸ್ಫುರಿಸುತ್ತದೆ.

ಓದಿದ್ದಕ್ಕಾಗಿ ಧನ್ಯವಾದಗಳು.🙏🙏🙏🙏🙏🌺🌷💐🌹🌻🌸
ಅ.ನಾ.*

Leave a Reply

Your email address will not be published. Required fields are marked *