ಪ್ರತಿಷ್ಠಾ/ ಪ್ರತಿಷ್ಠಿತ

ಪದ ಚಿಂತನ

ಪದ ಚಿಂತನ*
ಪ್ರತಿಷ್ಠಾ/ ಪ್ರತಿಷ್ಠಿತ
ಗೌರವ, ಸ್ಥಿರವಾಗಿ ಇರಿಸಿದ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ.
ಷ್ಠಾ ಧಾತು ಸ್ಥಿರವಾಗಿರುವುದು ಎಂಬರ್ಥ ಹೊಂದಿದ್ದು, ಪ್ರತಿ ಉಪಸರ್ಗ ಸೇರಿದಾಗ ಪ್ರತಿಷ್ಠಾ ಪದದ ನಿಷ್ಪತ್ತಿಯಾಗಿ, ಮರ್ಯಾದೆ, ಭದ್ರವಾಗಿರುವುದು, ವಾಸಸ್ಥಾನ, ಕೀರ್ತಿ ಮುಂತಾದ ಅರ್ಥಗಳು ಸ್ಫುರಿಸುತ್ತವೆ. ಕನ್ನಡದಲ್ಲಿ ಪ್ರತಿಷ್ಠೆ ಎಂದಾಗಿ, ಗೌರವದ ಅರ್ಥದ ಜೊತೆಗೆ ಗರ್ವ, ಅಹಂಕಾರ ಎಂಬರ್ಥಗಳೂ ಸಾಂದರ್ಭಿಕವಾಗಿ ಬಳಕೆಯಲ್ಲಿದೆ.

ಪ್ರತಿಷ್ಠಾ ಪದಕ್ಕೆ ಇತ ಪ್ರತ್ಯಯ ಸೇರಿ ಪ್ರತಿಷ್ಠಿತ ಪದವಾದಾಗ ಸ್ಥಿರವಾಗಿರುವ, ಗೌರವಹೊಂದಿದ, ಕೀರ್ತಿಗಳಿಸಿದ ಎಂಬರ್ಥಗಳು ಸ್ಫುರಿಸುತ್ತವೆ. “ಪ್ರತಿಷ್ಠಿತ ಪ್ರಶಸ್ತಿ” ಸಾಧಕರಿಗೆ ಗೌರವದ ಸಂಕೇತವಾಗಿ ಕೊಡಲಾಗುತ್ತದೆ.

ಓದಿದ್ದಕ್ಕಾಗಿ ಧನ್ಯವಾದಗಳು.????????????
ಅ.ನಾ.*

Total Page Visits: 45 - Today Page Visits: 1