ಸಮಾಧಾನಿಯಾಗು

ಜಾಣಮೂರ್ಖ

ಸಮಾಧಾನಿಯಾಗು

ಆಳೇನು ಅರಸೇನು
ಆರುಳಿದರೀ ಜಗದಿ !?
ಪಾಳಿಬರೆ ವಿಧಿಗೂಳಿ
ದಾಳಿ ತಪ್ಪೀತೆ ?
ಎತ್ತರೆತ್ತರ ಹಾರಿ
ಹೊತ್ತು ಮೀರಲು ಹಕ್ಕಿ
ಮತ್ತೆ ಗೂಡಿಗೆ ಬರದೆ ?
ಜಾಣಮೂರ್ಖ //

ಈ ಜಗತ್ತು ತುಂಬಾ ವಿಚಿತ್ರ ! ಆಳಾದರೂ , ಅರಸನಾದರೂ ಯಾರಾದರೂ ವಿಧಿಯ ಎದಿರು ಒಂದೇ. ವಿಧಿಯು ತನ್ನ ಕಟ್ಟಳೆಯನ್ನು ಮೀರದು. ಸರದಿ ಬಂದಾಗ ನಾವೆಷ್ಟೇ ಶ್ರೀಮಂತರಾದರೂ , ಶ್ರೇಷ್ಠರಾದರೂ , ಪ್ರಭಾವಶಾಲಿಗಳಾದರೂ ವಿಧಿಗೆ ಶರಣಾಗಲೇ ಬೇಕು. ಹಕ್ಕಿ ಎಷ್ಟೇ ಎತ್ತರದಲ್ಲಿ ಹಾರಿದರೂ ಸಹ ಹೊತ್ತು ಮುಳುಗಿದ ಮೇಲೆ ಮತ್ತೆ ಗೂಡಿಗೆ ಬರಲೇಬೇಕಲ್ಲವೇ ಗೆಳೆಯರೇ ? ಆಕಾಶದಲ್ಲೇ ನಿದ್ರಿಸಲಾದೀತೆ !? ವಿಶ್ರಾಂತಿ ಪಡೆಯಲಾದೀತೆ !? ಹಾಗೆಯೇ ನಾವೆಷ್ಟೇ ಎತ್ತರಕ್ಕೆ ಬೆಳೆದರೂ ಒಂದು ದಿನ ಕೆಳಗಿಳಿಯಲೇ ಬೇಕು. ಈ ಅರಿವನ್ನು ಪಡೆದವರು ಅಹಂಕಾರ ಮತ್ಸರಾದಿ ಗುಣಗಳಿಂದ ದೂರಾಗಿ ಘನತರವಾದ ಶಾಂತಿ ಸಮಾಧಾನಗಳನ್ನು ಹೊಂದಿದವರಾಗುತ್ತಾರೆ. ಅದಕ್ಕೇ ದಾಸರು -“ಅಲ್ಲಿದೇ ನಮ್ಮನೇ ಇಲ್ಲಿ ಬಂದೆ ಸುಮ್ಮನೇ” ಎಂದಿರುವುದು ಎಷ್ಟು ಮಾರ್ಮಿಕ ! ಎಷ್ಟು ಸತ್ಯ ! ಅಲ್ಲವೇ ಗೆಳೆಯರೇ ?
✍️ಮುರಳೀಧರ ಹೆಚ್.ಆರ್.

Total Page Visits: 29 - Today Page Visits: 1

44 thoughts on “ಸಮಾಧಾನಿಯಾಗು

 1. Pingback: Immediate Edge
 2. Pingback: nam mo thay tat ke
 3. Pingback: Vape Juices
 4. Pingback: Panzer Arms AR-12
 5. Pingback: slot online
 6. Pingback: mo thay nha
 7. Pingback: youtube views
 8. Pingback: pg slot
 9. Pingback: pasar qq
 10. Pingback: 사설토토
 11. Pingback: human hair wigs
 12. Pingback: ufabet
 13. Pingback: buku mimpi 2 angka
 14. Pingback: Local 365
 15. Pingback: ks pod
 16. Pingback: ottawa attorney

Leave a Reply