ಅಭಿವ್ಯಕ್ತಿ

ಪದ ಚಿಂತನ

ಪದ ಚಿಂತನ*

ಅಭಿವ್ಯಕ್ತಿ:

ಅಞ್ಜೂ ( ಅಂಜೂ) ಧಾತು, ಸ್ಪಷ್ಟವಾಗಿ ಕಾಣುವಿಕೆ ಎಂಬರ್ಥ ಪಡೆದಿದೆ.
ಇದಕ್ಕೆ ವಿ ಉಪಸರ್ಗ, ಕ್ತಿನ್( ಕ್ತಿ) ಪ್ರತ್ಯಯ ಸೇರಿ
ವಿ+ ಅಂಜೂ+ ಕ್ತಿ> ವ್ಯಕ್ತಿ ಎಂಬ ಪದದ ನಿಷ್ಪತ್ತಿಯಾಗಿ, ಸ್ಪಷ್ಟವಾಗಿ ಕಾಣುವುದು, ನಿಜರೂಪ, ಒಬ್ಬ ಮನುಷ್ಯ, ಪ್ರತ್ಯೇಕ ವಸ್ತು, ಚರಾಚರವಸ್ತುಗಳು ಮುಂತಾದ ಅನೇಕ ಅರ್ಥಗಳು ಸ್ಫುರಿಸುತ್ತವೆ.
ಆದರೆ ವ್ಯಕ್ತಿ ಪದ ಮನುಷ್ಯ ಎಂಬರ್ಥಕ್ಕೆ ಸೀಮಿತವಾದಂತಿದೆ.

ವ್ಯಕ್ತಿ ಪದಕ್ಕೆ ಅಭಿ ಉಪಸರ್ಗ ಸೇರಿ ಅಭಿವ್ಯಕ್ತಿ ಪದವುಂಟಾದಾಗ
ಸ್ಪಷ್ಟವಾಗಿ ಪ್ರಕಟಿಸುವುದು, ಚನ್ನಾಗಿ ನಿರೂಪಿಸುವುದು, ಸೂಕ್ಷ್ಮವಾದದ್ದನ್ನು ವಿಶ್ಲೇಷಿಸಿ ಪ್ರಕಟಪಡಿಸುವುದು ಎಂಬರ್ಥ ಪಡೆಯುತ್ತದೆ. ಅಭಿವ್ಯಕ್ತಿ ಗುಣ ಪ್ರತಿಯೊಬ್ಬರಲ್ಲೂ ಕಾಣಿಸುವ ವಿಶೇಷ ಗುಣವಾಗಿದೆ. ಶಿಕ್ಷಕರ ಅತಿಮುಖ್ಯ ಗುಣವೆಂದರೆ ಅಭಿವ್ಯಕ್ತಿಯೇ ಆಗಿದೆ.

ಓದಿದ್ದಕ್ಕಾಗಿ ಧನ್ಯವಾದಗಳು.???????????
ಅ.ನಾ.*

Leave a Reply