ಪರಮ ವೇದದ ಸಾರ

ಪದ ಚಿಂತನ

ಪರಮ ವೇದದ ಸಾರ

ಮನವು ಹಣ್ಣಾಗದಲೆ
ಹಣ್ಣಾದೊಡೇನು ತನು ?
ಬೆಣ್ಣೆ ಮಾತೆಲ್ಲ ಬಿಡು
ಕಣ್ಣಾಗು ನೋವ್ಗೆ !
ಹಸಿದವಗೆ ವೇದಾಂತ
ವೇಕೆ ಮೊದಲನ್ನ ನೀ
ಡಿದೆ ಪರಮ ವೇದ ಕಾಣ್
ಜಾಣಮೂರ್ಖ //

ನಮ್ಮ ಹೃದಯಕ್ಕೆ ತುಂಬಾ ಹತ್ತಿರವಾದವರ ನೋವನ್ನೇ ಅರ್ಥಮಾಡಿಕೊಳ್ಳಲಾಗದ ನಾವು ಜಗದ ಜನರ ನೋವನ್ನು ಎಂತು ಅರಿಯುತ್ತೇವೆ!? ಕಾಲ ಕಳೆದಂತೆ ಶರೀರ ಹಣ್ಣಾಗುತ್ತದೆ. ಹಾಗೆಯೇ ಮನಸ್ಸೂ ಕೂಡ ಹಣ್ಣಾಗಿ ಮಾಗಬೇಕಯ್ಯಾ ಗೆಳೆಯ. ಹಸಿದವನಿಗೆ ಅನ್ನ ಬೇಕೇ ಹೊರತು ಒಣ ವೇದಾಂತದ ಸಾರವಲ್ಲ , ನಮ್ಮ ಬೆಣ್ಣೆಯ ಮಾತಲ್ಲ. ಓ ಗೆಳೆಯ ನಿನ್ನ ಬಳಿ ಇರುವುದು ತತ್ ಕ್ಷಣದಲ್ಲಿ ತುಂಬಾ ಅಗತ್ಯವಿರುವ ನಿನ್ನವರಿಗೇ ನೀಡು. ಅದರ ಎರಡು ಪಟ್ಟು ಮತ್ತೆ ನಿನ್ನನ್ನೇ ಸೇರುವುದು. ಇದರಲ್ಲಿ ಸಂದೇಹವಿಲ್ಲ. ಮನುಷ್ಯತ್ವದಲ್ಲಿ ನಂಬಿಕೆಯಿಡು. ನೊಂದವರ ಕಷ್ಟಕ್ಕೆ ನೀನು ನಿಂತಾಗ ನಿನ್ನ ಕಷ್ಟಕ್ಕೆ ಭಗವಂತನೇ ಓಡೋಡಿ ಬರುತ್ತಾನೆ. ಇದರಲ್ಲಿ ಸಂದೇಹವಿಲ್ಲ. ಈ ಅರಿವೇ ಪರಮ ವೇದದ ಸಾರ. ಈ ಅಧ್ಯಾತ್ಮ ಸೂಕ್ಷ್ಮ ಬಹಳಷ್ಟು ಜನರಿಗೆ ಅರ್ಥವಾಗುತ್ತಿಲ್ಲ. ಅರ್ಥವಾದರೂ ಮನಸ್ಸಿನ ಅರಿವಿನ ಅಪಕ್ವತೆಯಿಂದ ಅನುಷ್ಠಾನ ಗೈಯ್ಯಲು ಮುಂದೆ ಬರುತ್ತಿಲ್ಲ. ಇನ್ನಾದರೂ ಈ ಸೂಕ್ಷ್ಮವನ್ನು ಅರ್ಥೈಸಿಕೊಂಡು ನಡೆಯಬೇಕಾದ ಅಗತ್ಯವಿದೆ. ಏನಂತೀರಿ ?
✍️ಮುರಳೀಧರ ಹೆಚ್.ಆರ್.

Total Page Visits: 20 - Today Page Visits: 1

5 thoughts on “ಪರಮ ವೇದದ ಸಾರ

Leave a Reply