ಸೈನಿಕ/ಪರಸ್ಪರ

ಪದ ಚಿಂತನ

ಪದ ಚಿಂತನ*
ಸೈನಿಕ/ಪರಸ್ಪರ

ಯೋಧ, ಒಬ್ಬರಿಗೊಬ್ಬರು
ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ.
ಷಿಞ್ ಧಾತು ಬಂಧಿಸುವುದು ಅರ್ಥದಲ್ಲಿದ್ದು ನಃ ಪ್ರತ್ಯಯ ಸೇರಿದಾಗ ಸೇನಾ ಎಂಬ ಪದ ಸಿದ್ಧಿಸಿ, ದಂಡು,ಪಡೆ,ದಳ ಮುಂತಾದ ಅರ್ಥಗಳು ಸ್ಫುರಿಸುತ್ತವೆ. ಸೇನಾ ಪದಕ್ಕೆ ಇಕ ಪ್ರತ್ಯಯ ಸೇರಿದಾಗ ಸೈನಿಕ ಪದವು ನಿಷ್ಪತ್ತಿಯಾಗಿ, ಭಟ,ಯೋಧ, ಸೇನೆಯ ರಕ್ಷಕ, ಸೇನೆಗೆ ಸಂಬಂಧಿಸಿದ ಎಂಬರ್ಥಗಳು ಸ್ಫುರಿಸುತ್ತವೆ.

ಪೃ ಧಾತು ಪಾಲಿಸುವುದು ಎಂಬರ್ಥ ಹೊಂದಿದ್ದು ಅಚ್ ಪ್ರತ್ಯಯ ಸೇರಿ ಪರ ಎಂದಾಗಿ ಅನ್ಯ,ಇತರ, ಮುಂದಿನ, ಉತ್ತಮ, ಬ್ರಹ್ಮ ಮುಂತಾದ ಅರ್ಥಗಳು ಸ್ಫುರಿಸುತ್ತವೆ. ಪರ ಪದದ ಮುಂದೆ ಪರ ಬಂದರೆ
ಪರಃ ಪರ ಎಂದಾಗಿ, ವಿಸರ್ಗ ಕ್ಕೆ ಸ್ ಆದೇಶವಾಗಿ ಪರಸ್+ ಪರ> ಪರಸ್ಪರ ಪದ ಸಿದ್ಧಿಸುತ್ತದೆ. ಒಬ್ಬರಿಗೊಬ್ಬರು, ಅನ್ಯೋನ್ಯವಾಗಿ ಎಂಬರ್ಥಗಳಿವೆ.

ಓದಿದ್ದಕ್ಕಾಗಿ ಧನ್ಯವಾದಗಳು.🙏🙏🙏🙏🙏🌻🌹💐🌸🌷🌺
ಅ.ನಾ.*

17 thoughts on “ಸೈನಿಕ/ಪರಸ್ಪರ

  1. Pingback: yearly web hosting
  2. Pingback: Best Workout Music
  3. Pingback: VR80
  4. Pingback: buy dumps with pin
  5. Pingback: laguqq

Leave a Reply

Your email address will not be published. Required fields are marked *