ಪ್ರೇಕ್ಷಕ/ಆನಂದ

ಪದ ಚಿಂತನ

ಪದ ಚಿಂತನ*
ಪ್ರೇಕ್ಷಕ/ಆನಂದ
ನೋಡುವವನು, ಸಂತಸ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ.
ಈಕ್ಷ ಧಾತು ನೋಡುವುದು ಎಂಬರ್ಥವಿದ್ದು, ಅಕ ಪ್ರತ್ಯಯ ಪ್ರ ಉಪಸರ್ಗ ಸೇರಿ ಪ್ರೇಕ್ಷಕ ಪದ ಸಿದ್ಧಿಸಿ, ನೋಡುವವನು, ನೋಟಕ, ಪರೀಕ್ಷಾಧಿಕಾರಿ ಮುಂತಾದ ಅರ್ಥಗಳು ಸ್ಫುರಿಸುತ್ತವೆ.

ಟುನದಿ ಧಾತು ಸಂವೃದ್ಧಿಯಾದದ್ದು ಎಂಬರ್ಥ ಹೊಂದಿದ್ದು, ಅ ಪ್ರತ್ಯಯ ಮತ್ತು ಆ ಉಪಸರ್ಗ ಸೇರಿ ಆನಂದ ಪದ ಸಿದ್ಧಿಸುತ್ತದೆ. ಸಂತೋಷ, ಹರುಷ, ಸುಖ, ಪರಬ್ರಹ್ಮ, ಒಂದು ಸಂವತ್ಸರದ ಹೆಸರು, ವಿಷ್ಣು ಮುಂತಾದ ಅರ್ಥಗಳು ಸ್ಫುರಿಸುತ್ತವೆ.

ಓದಿದ್ದಕ್ಕಾಗಿ ಧನ್ಯವಾದಗಳು.🙏🙏🙏🙏🙏🌷🌺🌻💐🌸🌹
ಅ.ನಾ.*

Leave a Reply

Your email address will not be published. Required fields are marked *