ಅಸು/ರುಚಿ/ ವನ್ಯಫಲ

ಪದ ಚಿಂತನ

ಪದ ಚಿಂತನ*

ಅಸು/ರುಚಿ/ ವನ್ಯಫಲ

ಉಸಿರು, ಸವಿ, ಕಾಡಿನಹಣ್ಣು ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ.

ಅಸ್ ಧಾತು ಇಡುವುದು ಎಂಬರ್ಥ ಹೊಂದಿದ್ದು ಉನ್( ಉ) ಪ್ರತ್ಯಯ ಸೇರಿ ಅಸು ಪದ ಸಿದ್ಧಿಸಿ ಉಸಿರು, ಪ್ರಾಣ, ಶ್ವಾಸ, ಮನಸ್ಸು, ಜಲ ಮುಂತಾದ ಅರ್ಥಗಳು ಸ್ಫುರಿಸುತ್ತವೆ.

ರುಚ್ ಧಾತು ಪ್ರಕಾಶಿಸು ಎಂಬರ್ಥ ಹೊಂದಿದ್ದು, ಇನ್( ಇ) ಪ್ರತ್ಯಯ ಸೇರಿ ರುಚಿ ಪದ ಸಿದ್ಧಿಸಿ, ಇಷ್ಟ, ಆಸೆ,ಪ್ರೀತಿ, ಆಸಕ್ತಿ, ಸವಿ, ಅನುರಾಗ ಮುಂತಾದ ಅರ್ಥಗಳು ಸ್ಫುರಿಸುತ್ತವೆ.

ವನ್ ಧಾತು ಆಸಕ್ತಿಯುಳ್ಳ ಎಂಬರ್ಥ ಹೊಂದಿದ್ದು, ಅಚ್( ಅ) ಪ್ರತ್ಯಯ ಸೇರಿ ವನ ಎಂದಾಗಿ ಅರಣ್ಯ,ನೀರು,ಗೃಹ,ಪ್ರವಾಸ, ಕಿರಣ ಮುಂತಾದ ಅರ್ಥಗಳು ಸ್ಫುರಿಸುತ್ತವೆ. ಯತ್(ಯ) ಪ್ರತ್ಯಯ ಸೇರಿ ವನ್ಯ ಪದ ನಿಷ್ಪತ್ತಿಯಾಗಿ, ಅರಣ್ಯದಲ್ಲಿ ಹುಟ್ಟಿದ ಎಂಬರ್ಥ ಸ್ಫುರಿಸುತ್ತದೆ.

ಫಲ್ ಧಾತು ಹುಟ್ಟುವುದು ಎಂಬರ್ಥ ಹೊಂದಿದ್ದು, ಅಚ್( ಅ) ಪ್ರತ್ಯಯ ಸೇರಿ ಫಲ ಎಂದಾಗಿ , ಹಣ್ಣು, ಬೆಳೆ, ಫಲಿತಾಂಶ, ಪ್ರಯೋಜನ, ಸಂತತಿ, ಸುಖ ಮುಂತಾದ ಅರ್ಥಗಳು ಸ್ಫುರಿಸುತ್ತವೆ.
ವನ್ಯಫಲ ಸಮಸ್ತ ಪದವು ಅರಣ್ಯದ ಹಣ್ಣುಗಳು, ಗೆಡ್ಡೆಗೆಣಸು ಮುಂತಾದ ಅರ್ಥಗಳನ್ನು ಹೊಂದಿದೆ.

ಓದಿದ್ದಕ್ಕಾಗಿ ಧನ್ಯವಾದಗಳು.???????????
ಅ.ನಾ.*

6 thoughts on “ಅಸು/ರುಚಿ/ ವನ್ಯಫಲ

Leave a Reply to take better photos Cancel reply