ಛಲ/ಮಾಲೆ/ ಸಾಧುಜನ

ಪದ ಚಿಂತನ

ಪದ ಚಿಂತನ*
ಛಲ/ಮಾಲೆ/ ಸಾಧುಜನ
ದೃಢನಿಶ್ಚಯ, ಹಾರ,ಸಭ್ಯಮನುಷ್ಯ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ.

ಛೋ ಧಾತು ಕತ್ತರಿಸುವುದು ಎಂಬರ್ಥ ಹೊಂದಿದ್ದು, ಕಲಃ ಪ್ರತ್ಯಯ ಸೇರಿ, ಛಲ ಪದದ ನಿಷ್ಪತ್ತಿಯಾಗಿ, ಕಾರಣ,ಮರೆಮಾಚುವುದು, ಕಪಟ, ದೃಢ ನಿರ್ಣಯ ಮುಂತಾದ ಅರ್ಥಗಳು ಸ್ಫುರಿಸುತ್ತವೆ.

ಲಾ ಧಾತು, ನೀಡುವುದು ಅರ್ಥ ಹೊಂದಿದ್ದು, ಲಕ್ಷ್ಮೀ ಎಂಬ ಅರ್ಥವುಳ್ಳ ಮಾ ಧಾತುವಿನೊಡನೆ ಸೇರಿ, ಮಾಲಾ( ಲಕ್ಷ್ಮಿಗೆ ಶೋಭೆಯನ್ನು ನೀಡುವ) ಪದವು ಸಿದ್ಧಿಸುತ್ತದೆ. ಹಾರ,ಪಂಕ್ತಿ, ಜಪಸರ ಮುಂತಾದ ಅರ್ಥಗಳು ಸ್ಫುರಿಸುತ್ತವೆ. ಕನ್ನಡದಲ್ಲಿ ಮಾಲೆ ಎಂದಾಗಿದೆ.

ಸಾಧ್ ಧಾತುವಿಗೆ, ಸಂಪೂರ್ಣ ಸಿದ್ಧಿಯನ್ನು ಹೊಂದಿದ ಎಂಬರ್ಥವಿದ್ದು, ಉಣ್( ಉ) ಪ್ರತ್ಯಯ ಸೇರಿ ಸಾಧು ಪದ ಸಿದ್ಧಿಸಿ, ಸಭ್ಯ, ಇತರರ ಹಿತ ಬಯಸುವವನು, ಕನಿಕರವುಳ್ಳವನು, ಚನ್ನಾಗಿ, ಮುನಿ, ರಮ್ಯವಾದ ಮುಂತಾದ ಅರ್ಥಗಳು ಸ್ಫುರಿಸುತ್ತವೆ. ಜನ್ ಧಾತು ಹುಟ್ಟುವುದು ಎಂಬರ್ಥವಿದ್ದು ಅಚ್( ಅ) ಪ್ರತ್ಯಯ ಸೇರಿ ಜನ ಎಂದಾಗಿ ಮನುಷ್ಯ ಎಂಬರ್ಥ ಸ್ಫುರಿಸುತ್ತದೆ. ಸಾಧುಜನ ಸಮಸ್ತಪದವು ಸತ್ಪುರುಷ, ಶಾಂತಚಿತ್ತಸದ್ಗುಣ ಮನುಷ್ಯ ಎಂಬರ್ಥಗಳನ್ನು ಹೊಂದಿದೆ.

ಓದಿದ್ದಕ್ಕಾಗಿ ಧನ್ಯವಾದಗಳು.???????????
ಅ.ನಾ.*

Total Page Visits: 13 - Today Page Visits: 1

2 thoughts on “ಛಲ/ಮಾಲೆ/ ಸಾಧುಜನ

 1. I don’t leave a comment, but after browsing through a few of the comments here ಛಲ/ಮಾಲೆ/
  ಸಾಧುಜನ. I do have a couple of questions for you if you do not
  mind. Is it only me or does it look like like a few of these comments look
  like they are written by brain dead people? 😛 And, if
  you are writing at additional online sites, I’d like to follow you.
  Could you list of every one of your public pages like your twitter feed, Facebook page or linkedin profile?

Leave a Reply