ಸೌಮ್ಯ/ ಸನ್ಮಂಗಳ

ಪದ ಚಿಂತನ

ಪದ ಚಿಂತನ*

ಸೌಮ್ಯ/ ಸನ್ಮಂಗಳ
ಮೃದುವಾದ, ಶ್ರೇಷ್ಠವಾದ ಶ್ರೇಯಸ್ಸು ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ.

ಷು ಧಾತುವಿಗೆ ಉತ್ಪತ್ತಿ ಎಂಬರ್ಥವಿದ್ದು, ಮನ್ ಪ್ರತ್ಯಯ ಸೇರಿ ಸೋಮ ಪದವುಂಟಾಗಿ, ಯಃ ಮತ್ತು ಅಣ್ ಪ್ರತ್ಯಯಗಳು ಸೇರಿ ಸೌಮ್ಯ ಪದದ ನಿಷ್ಪತ್ತಿಯಾಗುತ್ತದೆ.
ಬುಧಗ್ರಹ, ಚಂದ್ರ, ಶಾಂತವಾದ, ಕೋಪತಾಪವಿಲ್ಲದ, ಮನೋಹರವಾದ ಮುಂತಾದ ಅರ್ಥಗಳು ಸ್ಫುರಿಸುತ್ತವೆ.

ಮಗಿ ಧಾತುವಿಗೆ ಚಲನೆ ಎಂಬರ್ಥವಿದ್ದು, ಅಲಚ್ ಪ್ರತ್ಯಯ ಸೇರಿ ಮಂಗಲ ಪದ ಸಿದ್ಧಿಸಿ, ಕುಜಗ್ರಹ, ಶುಭ, ಶ್ರೇಯಸ್ಸು,ಆನಂದ ಮುಂತಾದ ಅರ್ಥಗಳು ಸ್ಫುರಿಸುತ್ತವೆ. ಶ್ರೇಷ್ಠವಾದ ಅರ್ಥದ ಸತ್ ಪದವು ಸೇರಿ ಸತ್+ ಮಂಗಳ> ಸನ್ಮಂಗಳ ಪದ ಸಿದ್ಧಿಸಿ, ಒಳ್ಳೆಯ ಶ್ರೇಯಸ್ಸು ಎಂಬರ್ಥ ಸ್ಫುರಿಸುತ್ತದೆ.

ಓದಿದ್ದಕ್ಕಾಗಿ ಧನ್ಯವಾದಗಳು.???????????
ಅ.ನಾ.*

Total Page Visits: 11 - Today Page Visits: 1

1 thought on “ಸೌಮ್ಯ/ ಸನ್ಮಂಗಳ

Leave a Reply