ದಿವ್ಯತ್ವಕೆರಗು ಬಾ
ತನುವಿನೊಳಗೊಂದು ಮನ
ಕಾಣದವ್ಯಕ್ತಾತ್ಮ !
ಸನಿಹದೊಳಗಿರಲೇನು
ನಿಲುಕನೀ ದೇವ!
ನಿತ್ಯ ಚೈತನ್ಯಮಯಿ
ಸತ್ಯಮೀ ಸೃಷ್ಟಿಯೀ
ದಿವ್ಯತ್ವಕೆರಗು ಬಾ
ಜಾಣಮೂರ್ಖ //
ಈ ಅನಂತವಾದ ದಿವ್ಯ, ಭವ್ಯ ಸೃಷ್ಟಿಗೆ ನಾವೆಷ್ಟು ಕೃತಜ್ಞರಾಗಿದ್ದರೂ ಸಾಲದು. ಈಗ ನೀವೇ ನೋಡಿ ಇದೊಂದು ಶರೀರ ! ಇದರೊಳಗೊಂದು ಮನಸ್ಸು ! ಅದರೊಟ್ಟಿಗೇ ಇರುವ ಬುದ್ಧಿ ! ಇವೆಲ್ಲಕ್ಕೂ ಚೈತನ್ಯಸ್ವರೂಪವಾದ ಆತ್ಮ ! ಇವುಗಳೆಲ್ಲದರ ಪೋಷಣೆಗೋ ಎಂಬಂತೆ ರೂಪುಗೊಂಡಿರೋ ಈ ಅನಂತವೂ ಅಗಮ್ಯವೂ ಆದ ಸೃಷ್ಟಿ !ಸನಿಹದಲ್ಲೇ ಇದ್ದರೂ ಕಾಣದೆ ನೇಪಥ್ಯದಲ್ಲಿರುವ ಇದರ ಕಾರಣಕರ್ತ ಭಗವಂತ ! ಕಣಕಣದಲ್ಲೂ ಜೀವಂತಿಕೆಯ ಸೆಲೆ ! ಬನ್ನಿ ಗೆಳೆಯರೇ , ಈ ಬದುಕಿನ ಜಂಜಾಟಗಳು ಇದ್ದವುಗಳೇ ಮಿಥ್ಯಪ್ರಪಂಚ ! ಇದರಲ್ಲಿ ಹಾಸುಹೊಕ್ಕಾಗಿರುವ ದಿವ್ಯ ಭವ್ಯ ಸತ್ಯ ಶಿವ ಸೌಂದರ್ಯವನ್ನು ಕಂಡು ಧನ್ಯರಾಗೋಣ ! ಮನದಣಿಯೆ ಮಣಿಯೋಣ!
✍️ಮುರಳೀಧರ ಹೆಚ್.ಆರ್.
Iloved as muchh aѕ yоu will receive carried օut rіght hеre.The sketch is attractive, your authored subject matter stylish.
nonetһeless, you command ɡet bought an impatience ⲟver thаt you wish be delivering tthe follߋwing.
unwell unquestionably ⅽome more formerly again since exactly tһe same nearly a lot ⲟften іnside cаse yoou shield this increase.
My web site; Your future kid
Asking questions are actually nice thing if
you are not understanding anything totally, however this post gives pleasant understanding yet.