ಸುಪ್ರಸನ್ನ/ ಧನ್ಯಭಾವ

ಪದ ಚಿಂತನ

ಪದ ಚಿಂತನ*

ಸುಪ್ರಸನ್ನ/ ಧನ್ಯಭಾವ
ಬಹಳಸಂತಸ, ಪುಣ್ಯದ ಅವಸ್ಥೆ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ.

ಷದ್ಲೃ ಧಾತುವಿಗೆ ನೆಮ್ಮದಿಮನಸ್ಸು ಎಂಬರ್ಥವಿದ್ದು, ಸು, ಪ್ರ ಉಪಸರ್ಗಗಳು ಮತ್ತು ಕ್ತಃ ಪ್ರತ್ಯಯ ಸೇರಿ ಸುಪ್ರಸನ್ನ ಪದವು ನಿಷ್ಪತ್ತಿಯಾಗಿ, ಸುಪ್ರೀತನಾದ, ದಯೆಯಿಂದ ಕೂಡಿದ, ನಿರ್ಮಲವಾದ, ಅತ್ಯಂತ ಸಂತಸಗೊಂಡ ಮುಂತಾದ ಅರ್ಥಗಳು ಸ್ಫುರಿಸುತ್ತವೆ.

ಧನ್ ಧಾತು ಐಶ್ವರ್ಯ ಎಂಬರ್ಥ ಹೊಂದಿದ್ದು, ಯತ್ ಪ್ರತ್ಯಯ ಸೇರಿ ಧನ್ಯ ಪದ ಸಿದ್ಧಿಸಿ, ಪುಣ್ಯಶಾಲಿ ಎಂಬರ್ಥ ಸ್ಫುರಿಸುತ್ತದೆ.
ಭೂ ಧಾತು ಇರುವಿಕೆ ಎಂಬರ್ಥ ಹೊಂದಿದ್ದು, ಣಿಚ್+ ಅಚ್ ಪ್ರತ್ಯಯಗಳು ಸೇರಿ ಭಾವ ಪದವು ಸಿದ್ಧಿಸಿ ಆಶಯ, ಅಭಿಪ್ರಾಯ ಅರ್ಥಗಳು ಸ್ಫುರಿಸುತ್ತವೆ.
ಧನ್ಯಭಾವ ಸಮಸ್ತಪದವು ಅದೃಷ್ಟಪಡೆದ, ಪುಣ್ಯಪಡೆದಸ್ಥಿತಿ ಮುಂತಾದ ಅರ್ಥಗಳನ್ನು ಹೊಂದಿದೆ.

ಓದಿದ್ದಕ್ಕಾಗಿ ಧನ್ಯವಾದಗಳು.???????????
ಅ.ನಾ.*

Total Page Visits: 35 - Today Page Visits: 2

1 thought on “ಸುಪ್ರಸನ್ನ/ ಧನ್ಯಭಾವ

  1. Appreciating the hard work you put into your
    site and detailed information you provide. It’s good to come across a blog every once
    in a while that isn’t the same out of date rehashed material.
    Great read! I’ve bookmarked your site and I’m
    including your RSS feeds to my Google account.

Leave a Reply