ರವಿ/ಗಮನ/ಮಾಯೆ

ಪದ ಚಿಂತನ

ಪದ ಚಿಂತನ*
ರವಿ/ಗಮನ/ಮಾಯೆ
ಸೂರ್ಯ, ನಡಿಗೆ, ಕಾಣದಾಗುವುದು ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ.
ರು ಧಾತು ಶಬ್ದಮಾಡುವುದು ಎಂಬರ್ಥವಿದ್ದು, ಇಃ ಪ್ರತ್ಯಯ ಸೇರಿ ರವಿ ಪದ ಸಿದ್ಧಿಸಿ ಸೂರ್ಯ,ಎಕ್ಕದಗಿಡ ಎಂಬರ್ಥಗಳು ಸ್ಫುರಿಸುತ್ತವೆ.

ಗಮ್ಲೃ ಧಾತು ಚಲಿಸುವುದು ಎಂಬರ್ಥ ಹೊಂದಿದ್ದು, ನ ಪ್ರತ್ಯಯ ಸೇರಿ ಗಮನ ಪದ ಸಿದ್ಧಿಸಿ, ನಡೆಯುವುದು,ಸಂಚಾರ, ಲಕ್ಷ್ಯವಿಡುವುದು ಮುಂತಾದ ಅರ್ಥಗಳು ಸ್ಫುರಿಸುತ್ತವೆ.

ಮಾ ಧಾತು ಪ್ರಮಾಣ,ಅಳತೆ ಎಂಬರ್ಥ ಹೊಂದಿದ್ದು, ಯಃ ಪ್ರತ್ಯಯ ಸೇರಿ ಮಾಯಾ ಪದ ಸಿದ್ಧಿಸಿ, ಇಲ್ಲದ ವಸ್ತುವನ್ನು ಇರುವಂತೆ ಮಾಡುವ ಶಕ್ತಿ, ಇಂದ್ರಜಾಲ, ಮಿಥ್ಯೆ, ಪರಮಾತ್ಮನ ಅನಿರ್ವಚನೀಯ ಶಕ್ತಿ ಮುಂತಾದ ಅರ್ಥಗಳು ಸ್ಫುರಿಸುತ್ತವೆ.

ಓದಿದ್ದಕ್ಕಾಗಿ ಧನ್ಯವಾದಗಳು.🙏🙏🙏🙏🌹💐🌷🌻🌺🌸
ಅ.ನಾ.*

Leave a Reply

Your email address will not be published. Required fields are marked *