ಪ್ರಸಿದ್ಧಿ/ ಸಂಸ್ಥೆ/ಶಾಖೆ

ಪದ ಚಿಂತನ

ಪದ ಚಿಂತನ

ಪ್ರಸಿದ್ಧಿ/ ಸಂಸ್ಥೆ/ಶಾಖೆ
ಖ್ಯಾತಿ, ಒಕ್ಕೂಟ, ವಿಭಾಗ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ.

ಷಿಧು ಧಾತುವಿಗೆ ಪಕ್ವವಾದ ಎಂಬರ್ಥವಿದ್ದು, ಪ್ರ ಉಪಸರ್ಗ ಕ್ತಿನ್ ಪ್ರತ್ಯಯ ಸೇರಿ, ಪ್ರಸಿದ್ಧಿ ಪದ ಸಿದ್ಧಿಸಿ ಹೆಸರುವಾಸಿ, ಕೀರ್ತಿ, ಆಭರಣ, ಕಾರ್ಯಸಿದ್ಧಿ ಮುಂತಾದ ಅರ್ಥಗಳು ಸ್ಫುರಿಸುತ್ತವೆ.

ಷ್ಠಾ ಧಾತು ಚಲನೆಯಿಲ್ಲದ ಎಂಬರ್ಥ ಹೊಂದಿದ್ದು, ಸಂ ಉಪಸರ್ಗ ಮತ್ತು ಅಙ್ ಪ್ರತ್ಯಯ ಸೇರಿ, ಸಂಸ್ಥಾ ಪದ ಸಿದ್ಧಿಸಿ, ನ್ಯಾಯಮಾರ್ಗ, ವ್ಯವಸ್ಥೆ,, ಸಂಘ, ಉದ್ಯೋಗ, ಪರಿಸ್ಥಿತಿ ಮುಂತಾದ ಅರ್ಥಗಳು ಸ್ಫುರಿಸುತ್ತವೆ. ಕನ್ನಡದಲ್ಲಿ ಸಂಸ್ಥೆ ಎಂದಾಗಿದೆ.

ಶಾಖೃ ಧಾತುವಿಗೆ ವ್ಯಾಪಿಸುವುದು ಎಂಬರ್ಥವಿದ್ದು, ಅಚ್ ಪ್ರತ್ಯಯ ಸೇರಿ, ಶಾಖಾ ಪದದ ನಿಷ್ಪತ್ತಿಯಾಗಿ, ಪ್ರಕಾರ, ಭಾಗ, ವಿಧ, ಬಗೆ, ಒಂದು ಪಂಗಡ, ಬಾಹು ಮುಂತಾದ ಅರ್ಥಗಳು ಸ್ಫುರಿಸುತ್ತವೆ. ಕನ್ನಡದಲ್ಲಿ ಶಾಖೆ ಎಂದಾಗಿದೆ.

ಓದಿದ್ದಕ್ಕಾಗಿ ಧನ್ಯವಾದಗಳು.???????????

      *ಅ.ನಾ.*
Total Page Visits: 36 - Today Page Visits: 1

6 thoughts on “ಪ್ರಸಿದ್ಧಿ/ ಸಂಸ್ಥೆ/ಶಾಖೆ

 1. Can I just say what a relief to find somebody that truly understands what they’re discussing on the net.
  You actually understand how to bring a problem
  to light and make it important. More and more people must check this out and understand this side of the story.
  I was surprised that you aren’t more popular because you most certainly possess the
  gift.

Leave a Reply