ಅನುಕೂಲ/ಅತ್ಯಾದರ/ ಶಿಖರ

ಪದ ಚಿಂತನ

ಪದ ಚಿಂತನ

ಅನುಕೂಲ/ಅತ್ಯಾದರ/ ಶಿಖರ

ಸಹಾಯ, ಬಹಳಗೌರವ,ತುದಿ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ.

ಕೂಲ ಧಾತುವಿಗೆ ಆವರಣ ಎಂಬರ್ಥವಿದ್ದು, ಅನು ಉಪಸರ್ಗ ಮತ್ತು ಕಃ ಪ್ರತ್ಯಯ ಸೇರಿ ಅನುಕೂಲ ಪದ ಸಿದ್ಧಿಸಿ, ಉಪಕಾರ, ದಯೆಯುಳ್ಳ, ಯೋಗ್ಯವಾದ, ವಿಷ್ಣು ಮುಂತಾದ ಅರ್ಥಗಳು ಸ್ಫುರಿಸುತ್ತವೆ.

ದೃಙ್ ಧಾತುವಿಗೆ ಮರ್ಯಾದೆ ಎಂಬರ್ಥವಿದ್ದು, ಉಪಸರ್ಗ ಮತ್ತು ಅಪ್ ಪ್ರತ್ಯಯ ಸೇರಿ ಆದರ ಪದ ಸಿದ್ಧಿಸಿ, ಗೌರವ, ಪ್ರೀತಿ, ಮನ್ನಣೆ ಮುಂತಾದ ಅರ್ಥ ಸ್ಫುರಿಸುತ್ತವೆ. ಈ ಪದಕ್ಕೆ ಅತಿ ಉಪಸರ್ಗ ಸೇರಿ, ಅತ್ಯಾದರ ಪದ ಸಿದ್ಧಿಸಿ, ಬಹಳಗೌರವ, ತುಂಬ ಉತ್ಸಾಹವುಳ್ಳ, ಅತ್ಯಂತ ಪ್ರೀತಿ ಎಂಬರ್ಥಗಳು ಸ್ಫುರಿಸುತ್ತವೆ.

ಶೀಙ್ ಧಾತು ಸ್ವಪ್ನ ಎಂಬರ್ಥ ಹೊಂದಿದ್ದು, ಖಃ ಪ್ರತ್ಯಯ ಹ್ರಸ್ವಶ್ಚ ಸೂತ್ರದಿಂದ ಶಿಖಾ ಪದ ಸಿದ್ಧಿಸಿ, ಜುಟ್ಟು, ಪರ್ವತದ ಅಗ್ರಭಾಗ, ಅಗ್ನಿಜ್ವಾಲೆ ಮುಂತಾದ ಅರ್ಥಗಳು ಸ್ಫುರಿಸುತ್ತವೆ. ಶಿಖಾ ಪದಕ್ಕೆ ರಃ ಪ್ರತ್ಯಯ ಹ್ರಸ್ವಶ್ಚ ಸೂತ್ರದನ್ವಯ ಶಿಖರ ಪದ ಸಿದ್ಧಿಸಿ, ತುದಿ, ಅಗ್ರಭಾಗ, ಪರ್ವತಾಗ್ರ, ಬಾಣದತುದಿ ಮುಂತಾದ ಅರ್ಥಗಳು ಸ್ಫುರಿಸುತ್ತವೆ.

ಓದಿದ್ದಕ್ಕಾಗಿ ಧನ್ಯವಾದಗಳು.???????????

        *ಅ.ನಾ.*
Total Page Visits: 24 - Today Page Visits: 1

2 thoughts on “ಅನುಕೂಲ/ಅತ್ಯಾದರ/ ಶಿಖರ

Leave a Reply