ಸಂದರ್ಭ/ಉದ್ವಹ/ವಾಲ್ಮೀಕಿ/ಆಶ್ರಮ

ಪದ ಚಿಂತನ

ಪದ ಚಿಂತನ

ಸಂದರ್ಭ/ಉದ್ವಹ/ವಾಲ್ಮೀಕಿ/ಆಶ್ರಮ

ಸಮಯ,ಪುತ್ರ, ರಾಮಾಯಣದಕರ್ತೃ, ತಪಸ್ವಿಗಳ ವಾಸಸ್ಥಾನ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ.

ದೃಭ್ ಧಾತು ಜೋಡಿಸುವುದು ಎಂಬರ್ಥ ಹೊಂದಿದ್ದು, ಸಂ ಉಪಸರ್ಗ ಮತ್ತು ಘಞ್ ಪ್ರತ್ಯಯ ಸೇರಿ, ಸಂದರ್ಭ ಪದ ಸಿದ್ಧಿಸಿ, ಸಮಯ,ಅವಕಾಶ, ಒಟ್ಟುಗೂಡಿಸುವಿಕೆ, ಸತತ ಮುಂದುವರಿಕೆ ಎಂಬರ್ಥಗಳು ಸ್ಫುರಿಸುತ್ತವೆ.

ವಹ್ ಧಾತು ಒಯ್ಯುವುದು ಎಂಬರ್ಥ ಹೊಂದಿದ್ದು, ಉದ್ ಉಪಸರ್ಗ ಮತ್ತು ಅಚ್ ಪ್ರತ್ಯಯ ಸೇರಿ, ಉದ್ವಹ ಪದ ಸಿದ್ಧಿಸಿ, ಪುತ್ರ,ಮಗ, ವಂಶ ಬೆಳೆಸುವವನು, ಮುಂದಕ್ಕೆ ಒಯ್ಯುವವನು ಮುಂತಾದ ಅರ್ಥಗಳು ಸ್ಫುರಿಸುತ್ತವೆ.

ವಲ್ ಧಾತು ಸಂಚಲನ ಎಂಬರ್ಥ ಹೊಂದಿದ್ದು, ಮೀಕನ್+ಇಞ್ ಪ್ರತ್ಯಯಗಳು ಸೇರಿ, ವಾಲ್ಮೀಕಿ ಪದ ಸಿದ್ಧಿಸಿ, ಹುತ್ತದಿಂದ ಹೊರಬಂದವನು, ರಾಮಾಯಣದ ಕರ್ತೃ ಎಂಬರ್ಥ ಸ್ಫುರಿಸುತ್ತದೆ.

ಶ್ರಮು ಧಾತು ಬಳಲಿಕೆ ಎಂಬರ್ಥ ಹೊಂದಿದ್ದು, ಆ ಉಪಸರ್ಗ ಮತ್ತು ಘಞ್ ಪ್ರತ್ಯಯ ಸೇರಿ, ಆಶ್ರಮ ಪದ ಸಿದ್ಧಿಸಿ, ಪರ್ಣಶಾಲೆ, ತಪಸ್ವಿಗಳ ವಾಸಗೃಹ, ವಿದ್ಯಾಶಾಲೆ, ವಿಷ್ಣು ಮುಂತಾದ ಅರ್ಥಗಳು ಸ್ಫುರಿಸುತ್ತವೆ.

ಓದಿದ್ದಕ್ಕಾಗಿ ಧನ್ಯವಾದಗಳು.🙏🌹

ಅ.ನಾ.

Total Page Visits: 38 - Today Page Visits: 2