ಸಂಕಲನ,ಪ್ರಜ್ಞೆ,ಪ್ರಕೃತಿ,ಮುಕ್ತಿ

ಪದ ಚಿಂತನ

ಸಂಕಲನ,ಪ್ರಜ್ಞೆ,ಪ್ರಕೃತಿ,ಮುಕ್ತಿ

ಒಟ್ಟಿಗೆ ಸೇರುವುದು,ಬುದ್ಧಿ,ಸಹಜಗುಣ,
ಬಿಡುಗಡೆ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ.

ಕಲ್ ಧಾತು ಸಂಖ್ಯೆ ಎಂಬರ್ಥ ಹೊಂದಿದ್ದು, ಸಂ ಉಪಸರ್ಗ ಮತ್ತು ಲ್ಯುಟ್ ಪ್ರತ್ಯಯ ಸೇರಿ, ಸಂಕಲನ ಪದ ಸಿದ್ಧಿಸಿ, ಒಟ್ಟಾಗಿ ಸೇರಿಸುವುದು, ಕೂಡುವುದು,ಮಿಶ್ರಣ ಮುಂತಾದ ಅರ್ಥಗಳಿವೆ.

ಜ್ಞಾ ಧಾತು ತಿಳಿಯುವುದು ಎಂಬರ್ಥ ಹೊಂದಿದ್ದು, ಪ್ರ ಉಪಸರ್ಗ ಮತ್ತು ಅಙ್ ಪ್ರತ್ಯಯ ಸೇರಿ, ಪ್ರಜ್ಞಾ ಪದ ಸಿದ್ಧಿಸಿ, ಬುದ್ಧಿ,ವಿಚಾರಮಾಡುವಶಕ್ತಿ, ಚನ್ನಾಗಿ ತಿಳಿದ ಎಂಬರ್ಥಗಳು ಸ್ಫುರಿಸುತ್ತವೆ. ಕನ್ನಡದಲ್ಲಿ ಪ್ರಜ್ಞೆ ಎಂದಾಗಿದೆ.

ಕೃಞ್ ಧಾತು ಮಾಡುವುದು ಎಂಬರ್ಥ ಹೊಂದಿದ್ದು, ಪ್ರ ಉಪಸರ್ಗ ಮತ್ತು ಕ್ತಿನ್ ಪ್ರತ್ಯಯ ಸೇರಿ, ಪ್ರಕೃತಿ ಪದ ಸಿದ್ಧಿಸಿ, ಸ್ವಭಾವ, ಸಹಜಗುಣ,ಪರಮಾತ್ಮ,ಮುಖ್ಯ ಮುಂತಾದ ಅರ್ಥಗಳು ಸ್ಫುರಿಸುತ್ತವೆ.

ಮುಚ್ಲೃ ಧಾತು ಮೋಕ್ಷ ಎಂಬರ್ಥ ಹೊಂದಿದ್ದು, ಕ್ತಿನ್ ಪ್ರತ್ಯಯ ಸೇರಿ, ಮುಕ್ತಿ ಪದ ಸಿದ್ಧಿಸಿ, ಬಿಡುಗಡೆ, ವಿಮೋಚನೆ, ಸ್ವಾತಂತ್ರ್ಯ, ಕೈವಲ್ಯ ಮುಂತಾದ ಅರ್ಥಗಳು ಸ್ಫುರಿಸುತ್ತವೆ.

ಓದಿದ್ದಕ್ಕಾಗಿ ಧನ್ಯವಾದಗಳು.🙏🌹

ಅ.ನಾ.

Total Page Visits: 50 - Today Page Visits: 2