ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ಮುಂದೂಡಿಕೆ, 2020-21ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ಪಿಯುಸಿಗೆ ದಾಖಲಾದ ಎಲ್ಲಾ ವಿದ್ಯಾರ್ಥಿಗಳನ್ನು ದ್ವಿತೀಯ ಪಿಯುಸಿ ತೇರ್ಗಡೆ ಎಂದು ಪರಿಗಣಿಸುವುದು

ಆದೇಶಗಳು ಸುದ್ಧಿ

ರಾಜ್ಯದಾದ್ಯಂತ ಕೋವಿಡ್-19ರ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿರುವ ಸಂಬಂಧ ಪದವಿಪೂರ್ವ ಶಿಕ್ಷಣ ಇಲಾಖೆಯು ಪರೀಕ್ಷೆಯನ್ನು ನಡೆಸುವ ಹಾಗೂ ಶೈಕ್ಷಣಿಕ ಚಟುವಟಿಕೆಗಳ ಕುರಿತು ಉಲ್ಲೇಖ-2ರ ಅನ್ವಯ ಮಾನ್ಯ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ಹಾಗೂ ಮಾನ್ಯ ಅಪರ ಮುಖ್ಯ
ಕಾರ್ಯದರ್ಶಿಗಳು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ, ಮತ್ತು ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ ಇವರ ಉಪಸ್ಥಿತಿಯಲ್ಲಿ ದಿನಾಂಕ 04-05-2021 ರಂದು ಸಭೆ ನಡೆಸಲಾಯಿತು. ಸದರಿ ಸಭೆಯ ತೀರ್ಮಾನದಂತೆ ಈ ಕೆಳಕಂಡಂತೆ ನಿರ್ದೇಶನಗಳನ್ನು ನೀಡಲಾಗಿದೆ.
1, ದ್ವಿತೀಯ ಪಿಯುಸಿ ಪರೀಕ್ಷೆಯ ಕುರಿತು:-
ಪದವಿ ಪೂರ್ವ ಶಿಕ್ಷಣ ಇಲಾಖೆಯು 2020-21ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ದಿನಾಂಕ 24-05-2021 ರಿಂದ ದಿನಾಂಕ 16-06-2021 ರವರೆಗೆ ನಡೆಸಲು
ತೀರ್ಮಾನಿಸಿ ಉಲ್ಲೇಖ-1ರ ಸುತ್ತೋಲೆಯ ಮೂಲಕ ಪರೀಕ್ಷಾ ವೇಳಾ ಪಟ್ಟಿಯನ್ನು ಪ್ರಕಟಿಸಲಾಗಿತ್ತು.ಆದರೆ ರಾಜ್ಯದಲ್ಲಿ ಕೋವಿಡ್-19ರ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಹುತೇಕ ಎಲ್ಲಾ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿಗಳು ಸದರಿ ಕಾರ್ಯದಲ್ಲಿ ನಿರತರಾಗಿರುತ್ತಾರೆ, ನಮ್ಮ ಇಲಾಖೆಯ
ಅಧಿಕಾರಿ ಮತ್ತು ಸಿಬ್ಬಂದಿಗಳು ಸಹ ಕೋವಿಡ್-19ರ ಕಾರ್ಯದಲ್ಲಿ ಪಾಲ್ಗೊಂಡಿರುತ್ತಾರೆ.
ಎಲ್ಲಕ್ಕಿಂತ ಹೆಚ್ಚಾಗಿ ಇಂದಿನ, ಕೋವಿಡ್ ಪರಿಸ್ಥಿತಿಗಳಲ್ಲಿ ವಿದ್ಯಾರ್ಥಿಗಳ ಕ್ಷೇಮ ಮುಖ್ಯವಾಗಿದ್ದು,
ಪರೀಕ್ಷೆಗಳನ್ನು ನಡೆಸುವುದು ವಿದ್ಯಾರ್ಥಿಗಳ ಆರೋಗ್ಯಕ್ಕೆ ಸೂಕ್ತವಲ್ಲವೆಂದು ಅಭಿಪ್ರಾಯಿಸಲಾಯಿತು. ಇದಲ್ಲದೇ
ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಮುಂದೂಡುವಂತೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಹಲವಾರು
ಸಂಘ ಸಂಸ್ಥೆಗಳಿಂದ ಮನವಿಗಳು ಸ್ವೀಕೃತವಾಗಿರುತ್ತವೆ,
ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಹಾಗೂ ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ
ಹಿತದೃಷ್ಟಿಯಿಂದ ಇಲಾಖೆಯು ದಿನಾಂಕ 24-05-2021 ರಂದು ಪ್ರಾರಂಭಿಸಬೇಕಿದ್ದ ದ್ವಿತೀಯ ಪಿಯುಸಿ
ವಾರ್ಷಿಕ ಪರೀಕ್ಷೆಯನ್ನು ಮುಂದೂಡಿದೆ.
ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿಯನ್ನು ಪರೀಕ್ಷೆಯನ್ನು ನಡೆಸಲು
ನಿಗದಿಪಡಿಸುವ ದಿನಾಂಕಕ್ಕೆ 15 ದಿನಗಳ ಮುಂಚಿತವಾಗಿ ಪ್ರಕಟಿಸಲಾಗುವುದು. ಅಲ್ಲದೇ ದ್ವಿತೀಯ ಪಿಯುಸಿ
ಪರೀಕ್ಷಾ ವಿಷಯಕ್ಕೆ ಸಂಬಂದಿಸಿದಂತೆ ಏನಾದರೂ ಮಾಹಿತಿಗಳು ಇದ್ದಲ್ಲಿ ಇಲಾಖೆಯು ಕಾಲಕಾಲಕ್ಕೆ ಮಾರ್ಗಸೂಚಿಗಳನ್ನು ಹೊರಡಿಸುವುದು, ಎಲ್ಲಾ ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿಯೇ ಸುರಕ್ಷಿತವಾಗಿದ್ದು ಪರೀಕ್ಷೆಗಳಿಗೆ ಉತ್ತಮ ಸಿದ್ಧತೆಗಳನ್ನು
ಮಾಡಬೇಕು ಹಾಗೂ ಯಾವುದೇ ಆತಂಕ ಅಥವಾ ಖಿನ್ನತೆಗೆ ಒಳಗಾಗದೆ ಧೈರ್ಯದಿಂದ ಈ ಕಠಿಣ
ಪರಿಸ್ಟಿಯಿಂದ ಪಾರಾಗಿ ಮುಂದಿನ ಜೀವನದ ಬಗ್ಗೆ ಯೋಜಿಸಬೇಕೆಂದು ಇಲಾಖೆಯು ಹಾರೈಸುತ್ತದೆ,

 1. ಪ್ರಥಮ ಪಿಯುಸಿ ಪರೀಕ್ಷೆಯ ಕುರಿತು;=
  2020-21ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ಪಿಯುಸಿಗೆ ದಾಖಲಾದ ಎಲ್ಲಾ ವಿದ್ಯಾರ್ಥಿಗಳನ್ನು
  ದ್ವಿತೀಯ ಪಿಯುಸಿ ತೇರ್ಗಡೆ ಎಂದು ಪರಿಗಣಿಸುವುದು
  . ಸದರಿ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ
  ವರ್ಷದ ಪ್ರಾರಂಭದಲ್ಲಿ 2020-21ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ಪಿಯುಸಿಯಲ್ಲಿ ಶೇಕಡ 30ರಷ್ಟು
  ಕಡಿತಗೊಳಿಸಿದ ಪಠ್ಯಕ್ರಮವನ್ನು ಸೇತು ಬಂಧ ತರಗತಿಗಳನ್ನಾಗಿ ನಡೆಸುವುದು. ಈ ಕುರಿತು ಹೆಚ್ಚಿನ
  ವಿವರಗಳನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದು.
  3, ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ಕರ್ತವ್ಯ-
  ಪ್ರಸ್ತುತ ಕೋವಿಡ್-19 ರ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಕಾಲೇಜುಗಳ
  ಪ್ರಾಂಶುಪಾಲರು ಹಾಗೂ ಉಪನ್ಯಾಸಕರುಗಳು ಮನೆಯಿಂದಲೇ ಕೆಲಸ ನಿರ್ವಹಿಸುವುದು. ಅವಶ್ಯವಿದ್ದಲ್ಲಿ
  ಮಾತ್ರ ಕಾಲೇಜಿಗೆ ಪ್ರಾಂಶುಪಾಲರ ನಿರ್ದೇಶನದ ಮೇರೆಗೆ ಆಗಮಿಸಿ ಕರ್ತವ್ಯ ನಿರ್ವಹಿಸುವುದು. ದ್ವಿತೀಯಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ದೂರವಾಣಿ ಹಾಗೂ ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ಮಾರ್ಗದರ್ಶನ ನೀಡುವುದು ಹಾಗೂ ಪಠ್ಯಕ್ರಮಕ್ಕೆ ಸಂಬಂಧಿಸಿದ ಸಂಶಯಗಳನ್ನು
  ಪರಿಹರಿಸುವುದು,

Leave a Reply