

- ಪು.ತಿ.ನ. ಎಂಬುದುಪುರೋಹಿತ ತಿರುನಾರಾಯಣ ನರಸಿಂಹಾಚಾರ್ ಎಂಬ ಹೆಸರಿನ ಸಂಕ್ಷಿಪ್ತ ರೂಪ [ಹೆಸರು]. ಇವರ ತಂದೆ ವೃತ್ತಿಯಿಂದ ವೈದಿಕರಾಗಿದ್ದವರು. ಮೇಲುಕೋಟೆಯಲ್ಲಿ ೧೯೦೫ ಮಾರ್ಚ್ ೧೭ರಂದು ಜನಿಸಿದ ಇವರ ಮೇಲೆ ಅಲ್ಲಿನ ಆಧ್ಯಾತ್ಮಿಕ ಪರಿಸರ ವೈಯಕ್ತಿಕವಾಗಿ ಹಾಗೂ ಸಾಹಿತ್ಯ ಬದುಕಿನಲ್ಲಿ ಸಾಕಷ್ಟು ಪರಿಣಾಮ ಬೀರಿದೆ. ಪ್ರಕೃತಿ ಮತ್ತು ಪ್ರಕೃತಿಯಲ್ಲಿ ದೈವತ್ವದ ಹುಡುಕಾಟ ಅವರ ಕಾವ್ಯದ ಮೂಲಭೂತ ಅಂಶವಾಗಿದೆ.
- ಪು.ತಿ.ನ. ಅವರ ಬಾಲ್ಯ ಅರಳಿದ್ದು ತಂದೆಯ ಊರಾದಮೇಲುಕೋಟೆ ಹಾಗೂ ತಾಯಿಯ ಊರಾದ ಗೊರೂರು ನಡುವೆ. ಮುಂದೆ ವಯಸ್ಕರಾದಾಗ ಹೆಂಡತಿಯ ಊರಾದ ಹೆಮ್ಮಿಗೆ, ಓದಿನ ಊರಾದ ಮೈಸೂರು, ವೃತ್ತಿನಗರವಾದ ಬೆಂಗಳೂರು, ಮಲ್ಲೇಶ್ವರಗಳ ನಡುವೆ ಅವರ ಮನಸ್ಸು ಸುಳಿದಾಡಿದೆ. ತಂದೆಯವರು ವೃತ್ತಿಯಿಂದ ವೈದಿಕರಾದರೂ ಜೀವನ ನಿರ್ವಹಣೆ ದುರ್ಬರವೆನಿಸಿದ ಕಾರಣ ಹಾಗೂ ಪು.ತಿ.ನ. ಅವರ ಪ್ರಕೃತಿಗೆ ಒಗ್ಗದಿದ್ದ ಕಾರಣದಿಂದ ಮೈಸೂರನ್ನು ಸೇರಿ ವಿದ್ಯಾಭ್ಯಾಸಕ್ಕೆ ತೊಡಗಿದರು.
- ಮೂಲತಃ ಗ್ರಾಮ್ಯ ತಮಿಳನ್ನು ಆಡುತ್ತಿದ್ದು ಮೈಸೂರಲ್ಲಿ ಆಂಗ್ಲಭಾಷೆ ಮತ್ತು ಕನ್ನಡ ಭಾಷೆಯಲ್ಲಿ ಪ್ರಾವೀಣ್ಯತೆ ಪಡೆದರು. ಅಲ್ಲಿ ಗುರು ಹಿರಿಯಣ್ಣ, ಆತ್ಮೀಯ ಮಿತ್ರರಾದ ಶಿವರಾಮ ಶಾಸ್ತ್ರಿ ಹಾಗೂ ತೀ.ನಂ. ಶ್ರೀಕಂಠಯ್ಯನವರ ಸಂಪರ್ಕ ಒದಗಿ ಬಂತು. ನಂತರ ಬೆಂಗಳೂರಿನಲ್ಲಿ ಸೈನ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಾ ಫಿರಂಗಿಯವರ (ಇಂಗ್ಲೀಷರ) ನೇರ ಕೈಕೆಳಗೆ ಕೆಲಸ ಮಾಡುವ ಸಂದರ್ಭ ಒದಗಿತು. ಸೈನ್ಯದ ಮುಖಂಡರು ಚೆನ್ನಾಗಿ ನಡೆಸಿಕೊಂಡ ಕಾರಣ ಪು.ತಿ.ನ.ರವರ ರೀತಿನೀತಿಗಳು ಬದಲಾಗದೆ ನೆಮ್ಮದಿಯಾಗಿ ಕೃತಿರಚನೆ ಮಾಡಲು ಸಾಧ್ಯವಾಯಿತು.
- ಹಣತೆ,
- ಮಾಂದಳಿರು,
- ಶಾರದ ಯಾಮಿನಿ,
- ಗಣೇಶ ದರ್ಶನ,
- ರಸ ಸರಸ್ವತಿ,
- ಮಲೆ ದೇಗುಲ,
- ಹೃದಯ ವಿಹಾರಿ,
- ಇರುಳು ಮೆರುಗು,
- ಹಳೆಯ ಬೇರು ಹೊಸ ಚಿಗುರು,
- ಎಂಬತ್ತರ ನಲುಗು.
- ರಥಸಪ್ತಮಿ.
- ನಿರೀಕ್ಷೆ.
- ಹಣತೆಯ ಹಾಡು.
- ಜಾಹ್ನವಿಗೆ ಜೋಡಿ ದೀವಿಗೆ ಮತ್ತು ಇತರ ನಾಟಕಗಳು
- ಗೋಕುಲ ನಿರ್ಗಮನ,
- ಕವಿ
- ಅಹಲ್ಯೆ,
- ಸತ್ಯಾಯನ ಹರಿಶ್ಚಂದ್ರ,
- ವಿಕಟಕವಿ ವಿಜಯ,
- ಶಬರಿ,
- ಹಂಸದಮಯಂತಿ,
- ಹರಿಣಾಭಿಸರಣ,
- ದೀಪಲಕ್ಷ್ಮಿ .
- ಕುಚೇಲ ಕೃಷ್ಣ
- ದೋಣಿಯ ಬಿನದ
- ಶ್ರೀ ರಮಣ ಪ್ರಭ
- ಶ್ರೀರಾಮ ಪಟ್ಟಾಭಿಷೇಕ
- ಈ ನಾಟಕಗಳಲ್ಲಿ ಗೋಕುಲ ನಿರ್ಗಮನ, ಅಹಲ್ಯೆ, ಬಿ.ವಿ. ಕಾರಂತರ ಪ್ರಯತ್ನದಿಂದ ರಂಗಪ್ರಯೋಗ ಕಂಡಿವೆ. ಉದ್ಯಾವರ ಮಾಧವ ಆಚಾರ್ಯ ಹೇಳುವಂತೆ ಹರಿಣಾಭಿಸರಣ ಹಾಗೂ ಸತ್ಯಾಯನ ಹರಿಶ್ಚಂದ್ರ ನಾಟಕಗಳು ರಂಗ ಪ್ರಯೋಗ ಕಂಡಿವೆ. ಗೋಕುಲ ನಿರ್ಗಮನ ಅವರ ಹೆಸರಾಂತ ನಾಟಕವಾಗಿದ್ದು ಪ್ರಣಯಿಯೂ, ಸಂಗೀತಗಾರನೂ ಆಗಿರುವ ಕೃಷ್ಣ ಮುಂದೆ ಕೊಳಲನ್ನು ಬಿಸುಟು ಬೇರೆಯದೇ ಹಾದಿ ಹಿಡಿಯುವ ಸೂಚನೆ ಸಿಗುತ್ತದೆ. ಮುಂದೆ ಮಹಾಭಾರತ, ಮಧುರೆ, ದ್ವಾರಕೆಯಲ್ಲೆಲ್ಲೂ ಕೃಷ್ಣ ಕೊಳಲನ್ನು ಹಿಡಿಯುವುದಿಲ್ಲ.
- ಶ್ರೀಹರಿಚರಿತೆ ಆಧುನಿಕ ಯುಗದಲ್ಲಿ ಕೃಷ್ಣನ ಕಲ್ಪನೆಯನ್ನು ಸಾಕ್ಷಾತ್ಕರಿಸುವ ಪ್ರಯತ್ನವಾಗಿದೆ. ಇಂತಹ ಪೌರಾಣಿಕ ಸಂಗೀತಮಯ ನಾಟಕಗಳ ರಚನೆಗೆ ಪ್ರೇರಣೆ ಸಿಕ್ಕಿದ್ದು ಹರಿಕಥೆಗಳು, ಅರಮನೆ ನಾಟಕ ಕಂಪೆನಿಗಳಲ್ಲಿದ್ದ ಒಳ್ಳೆಯ ಸಂಗೀತಗಾರರು ಮತ್ತು ಅವರ ಪಾತ್ರ ನಿರ್ವಹಣೆ, ಮಾರ್ಷ್ ಶಿವಿಲಿಯರ್ನ `Spring time in Paris’ ಎಂಬ ಆಧುನಿಕ ಅಪೆರಾ, ತಮಿಳಿನಲ್ಲಿ `ವಲ್ಲಿ ಪರಿಣಯ’ ಎನ್ನುವ ಹಾಡುಗಳಿಂದಲೇ ನಿರ್ವಹಿಸಲ್ಪಟ್ಟ ನಾಟಕ ಹಾಗೂ ಕಂಪೆನಿ ನಾಟಕಗಳಿಂದ.
- ಅವರೊಬ್ಬ ಗೀತರೂಪಕ ನಾಟಕಕಾರರಾಗುವುದಕ್ಕೆ ಕಾರಣ ಕಾವ್ಯ ಮತ್ತು ಸಂಗೀತ ಮೇಳೈಸಿಕೊಂಡ ಕನ್ನಡದ ಏಕೈಕ ರಚನಕಾರರಾಗಿದ್ದುದು. ಸಂಗೀತಕ್ಕೆ ಪು.ತಿ.ನ.ರವರು ಹಲವು ಹೊಸ ರಾಗಗಳನ್ನು ಕಂಡುಹಿಡಿಯುವುದರ ಮೂಲಕ ಕೊಡುಗೆ ಸಲ್ಲಿಸಿದ್ದಾರೆ ಎಂದು ಡಾ| ದೊರೆಸ್ವಾಮಿ ಅಯ್ಯಂಗಾರರು ಮೆಚ್ಚಿಗೆ ಮಾತನ್ನಾಡಿದ್ದಾರೆ. ಅವುಗಳಲ್ಲಿ ಮುಖ್ಯವಾದವು ವಾಸಂತಿ, ಸಂಜೀವಿನಿ, ಹರಿಣಿ, ಋತುವಿಲಾಸ, ಗಾಂಧಾರದೋಲ, ಋಷಭ ವಿಲಾಸ ಮತ್ತು ಇನ್ನೂ ನಾಮಕರಣವಾಗದ ಹಲವಾರು ರಾಗಗಳು ಸಾಕಷ್ಟಿವೆ. ಪು.ತಿ.ನ.ರವರು ಒಳ್ಳೆಯ ಗದ್ಯ ಬರಹಗಾರರೂ ಆಗಿದ್ದರು ಎಂಬುದಕ್ಕೆ ಅವರ ಐದು ಪ್ರಬಂಧ ಸಂಕಲನಗಳು ಸಾಕ್ಷಿಯಾಗಿವೆ.
- ಧ್ವಜರಕ್ಷಣೆ ಮತ್ತು ಇತರ ಕಥೆಗಳು
- ರಥಸಪ್ತಮಿ ಮತ್ತು ಇತರ ಕಥೆಗಳು
- ರಾಮಾಚಾರಿಯ ನೆನಪು,
- ಈಚಲು ಮರದ ಕೆಳಗೆ,
- ಗೋಕುಲಾಷ್ಟಮಿ,
- ಭೀತಿ ಮೀಮಾಂಸೆ,
- ಧೇನುಕೋಪಾಖ್ಯಾನ,
- ಮಸಾಲೆದೋಸೆ,
- ಯದುಗಿರಿಯ ಗೆಳೆಯರು
- ಬದಲಿಸಿದ ತಲೆಗಳು,
- ಮಹಾಪ್ರಸ್ಥಾನ,
- ಕನ್ನಡ ಭಗವದ್ಗೀತೆ,
- ಗಯಟೆಯ ಫೌಸ್ಟ್ ಭಾಗ-೧
- ನಮ್ಮಾಳ್ವರ್
- ಸಿರಿಬಾಯಿನುಡಿ
- ಸಮಕಾಲೀನ ಭಾರತೀಯ ಸಾಹಿತ್ಯ
- ಕಾವ್ಯ ಕುತೂಹಲ.
- ರಸಪ್ರಜ್ಞೆ.
- ದೀಪರೇಖೆ
- ಅತಿಥಿ
- ನವಿಲುಗರಿ
- ಋತುಗೀತ
- ಲಹರಿ
- ಆಯ್ದ ಪ್ರಬಂಧಗಳು
- ಇವರ “ಹಂಸ ದಮಯಂತಿ ಮತ್ತು ಇತರ ರೂಪಕಗಳು” ಎಂಬ ಕೃತಿಗೆ೧೯೬೬ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.
- ಹಾಗೆಯೇ ಇವರ “ಗೋಕುಲ ನಿರ್ಗಮನ” ಎಂಬ ಸಂಗೀತ ಪ್ರಧಾನ ನಾಟಕ ಕನ್ನಡದ ಮೇರು ಕೃತಿಗಳ ಸಾಲಿಗೆ ಸೇರುತ್ತದೆ. ಈ ಕಾವ್ಯಮಯ ನಾಟಕದಲ್ಲಿ, ಕೃಷ್ಣನಿಗೆ ಕಂಸನಿಂದ ಆಹ್ವಾನ ಬಂದು ಗೋಕುಲದಿಂದ ದ್ವಾರಕೆಗೆ ಹೋಗಬೇಕಾಗಿ ಬಂದಾಗ, ಗೋಕುಲದ ಜನರ ಅನುರಾಗ, ರಾಧೆಯ ವ್ಯಾಕುಲತೆ ಮುಂತಾದವುಗಳನ್ನು ದಿವ್ಯವಾಗಿ ನಿರೂಪಿಸಿದ್ದಾರೆ.
- ಪದ್ಮಶ್ರೀ,
- ಪಂಪಪ್ರಶಸ್ತಿ,
- ನಾಡೋಜ ಪ್ರಶಸ್ತಿ,
- ಮೈಸೂರು ವಿಶ್ವವಿದ್ಯಾಲಯದ ಡಿ.ಲಿಟ್,
- ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ,
- ರಾಜ್ಯೋತ್ಸವ ಪ್ರಶಸ್ತಿ,
- ಜೊತೆಗೆಚಿಕ್ಕಮಗಳೂರಿನಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು. ಅವರಿಗೆ ದೊರೆಯದಿದ್ದ ಪ್ರಶಸ್ತಿ ಎಂದರೆ “ಭಾರತೀಯ ಜ್ಞಾನಪೀಠ ಪ್ರಶಸ್ತಿ” ಮಾತ್ರ! ಇದಕ್ಕಿಂತ ಮಿಗಿಲಾಗಿ ಒಳ್ಳೆಯ ಹಿರಿಯ ಸ್ನೇಹಿತರೂ, ಅಭಿಮಾನಿ ಕಿರಿಯ ಸ್ನೇಹಿತರನ್ನೂ ಹಾಗೂ ಸಹೃದಯಿಗಳ ಮೆಚ್ಚಿಗೆಯನ್ನು ಪಡೆದವರಾಗಿದ್ದಾರೆ. ಅವರು ಗತಿಸಿದಾಗ ಅವರಿಗೆ ತೊಂಬತ್ಮೂರರ ವಯಸ್ಸು.
- ಪುತಿನ ಮನೆ ಸ್ಮಾರಕವಾಗಿದ್ದು ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ. ಅಂದರೆ, ಪುತಿನ ಬದುಕಿದ್ದ ಕಾಲದಲ್ಲೇ. ಕವಿಯ ಆಶಯವೂ ಅದೇ ಆಗಿತ್ತು; ‘ನಾನು ಬದುಕಿರುವಾಗಲೇ ಬಾಳಿ, ಬದುಕಿದ ನನ್ನ ಮನೆ ಸ್ಮಾರಕವಾಗಬೇಕು. ನಾನು ಬರೆದ ಸಾಹಿತ್ಯ ನಿಂತ ನೀರಾ ಗದೆ, ನನ್ನ ಸಾವಿನಾಚೆಯೂ ಮುಂದಿನ ಪೀಳಿಗೆಯನ್ನು ತಲುಪುವಂತಾಗಬೇಕು’. 1996ರಲ್ಲಿ ಈ ಮನೆ ಸ್ಮಾರಕವಾಗಿ, ಸರ್ಕಾರದ ತೆಕ್ಕೆ ಸೇರಿತು.
- 1998ರಲ್ಲಿ ಕವಿ ವಿಧಿವಶರಾದ ನಂತರ ಟ್ರಸ್ಟ್ನವರು ಕವಿಯ ಬಯಕೆಯಂತೆ ಮನೆಯ ಮೂಲ ರೂಪವನ್ನು ಬದಲಿಸದೇ 2000ನೇ ಇಸ್ವಿಯಲ್ಲಿ ಪ್ರಾಚ್ಯವಸ್ತು ಇಲಾಖೆಗೆ ಗುತ್ತಿಗೆ ನೀಡಿ (10 ಲಕ್ಷ ರು.), ಹೊಸ ರೂಪ ಕೊಡಲು ಮುಂದಾದರು. ಶತಮಾನದ ಅಂಚಿನಲ್ಲಿದ್ದ ಮನೆಯ ಹಳೇ ಕಂಬಗಳು, ಮಹಡಿಯ ಮೆಟ್ಟಿಲುಗಳು, ಹೆಂಚುಗಳನ್ನು ಬಳಸಿಕೊಂಡೇ ಮೂಲ ಮನೆಯ ಅಂದ, ಚಂದಕ್ಕೆ ಯಾವುದೇ ಧಕ್ಕೆ ಬಾರದಂತೆ ಕವಿ ಮನೆಯನ್ನು ಸುಂದರ ಸ್ಮಾರಕವಾಗಿಸಲಾಯಿತು.
- ಈ ಮನೆಯಲ್ಲಿ ಕವಿ ಪುತಿನ ಅವರ ಊರುಗೋಲು, ಬರೆಯಲು ಬಳಸುತ್ತಿದ್ದ ಮಣೆ, ಟೋಪಿ ಸೇರಿದಂತೆ ಮಹಡಿಯಲ್ಲಿ ಕುಳಿತು ಬರೆಯುತ್ತಿದ್ದ ಜಾಗವನ್ನೂ ಸಂರಕ್ಷಿಸಲಾಗಿದೆ. ಅಲ್ಲದೆ, ಕವಿಯ ‘ಮನೆ ದೇಗುಲ’, ‘ರಥ ಸಪ್ತಮಿ’, ‘ಹರಿ ಚರಿತೆ’, ‘ಮಾಂದಳಿರು’, ‘ಜಾನ್ಹವಿಗೆ ಜೋಡಿ ದೀವಿಗೆ’, ‘ಗೋಕುಲ ನಿರ್ಗಮನ’ ಸೇರಿದಂತೆ ಅನೇಕ ಕೃತಿಗಳ ಪ್ರಥಮ ಮುದ್ರಣವೂ ಇಲ್ಲಿ ನೋಡಲು ಸಿಗುತ್ತದೆ
ಕನ್ನಡಕ್ಕೆ ಐದನೆಯ ಜ್ಞಾನಪೀಠ ಪ್ರಶಸ್ತಿಯನ್ನು ೧೯೯೧ರಲ್ಲಿ ತಂದುಕೊಟ್ಟ ವಿನಾಯಕ ಕೃಷ್ಣ ಗೋಕಾಕರು ಹಲವು ರೀತಿಯಲ್ಲಿ ಅದೃಷ್ಠವಂತರು. ಅವರು ಕನ್ನಡದ ಪ್ರತಿಭಾವಂತ ಕವಿ, ಪಂಡಿತರಾಗಿದ್ದರು. ಕನ್ನಡ-ಇಂಗ್ಲೀಷ್ ಭಾಷೆಗಳಲ್ಲಿ ಸಮಾನ ಪ್ರಭುತ್ವ ಪಡೆದಿದ್ದ ಅವರು ತಮ್ಮ ಜೀವಿತ ಕಾಲದಲ್ಲೇ ಒಬ್ಬ ಪ್ರತಿಭಾವಂತ ಸಾಹಿತಿಗೆ ದೊರಕಬೇಕಾದ ಎಲ್ಲ ಸಿದ್ಧಿ, ಪ್ರಸಿದ್ಧಿಗಳನ್ನು ಪಡೆದರು. ಗೋಕಾಕರು ಇದಕ್ಕೂ ಮೊದಲು ಭಾರತೀಯ ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದರು.
ಜೀವನ
- ತಮ್ಮ ಹಲವು ಸಾಧನೆ, ಸಿದ್ಧಿಗಳಿಂದ ಕನ್ನಡಕ್ಕೆ ಅಂತಾರಾಷ್ಟ್ರೀಯ ಖ್ಯಾತಿಯನ್ನೂ, ಗೌರವವನ್ನೂ ತಂದು ಕೊಟ್ಟ ವಿನಾಯಕ ಕೃಷ್ಣ ಗೋಕಾಕರು೧೯೦೯ರ ಆಗಸ್ಟ್ ೯ರಂದು ಅವಿಭಜಿತ ಧಾರವಾಡ ಜಿಲ್ಲೆಯ ಸವಣೂರು ಎಂಬಲ್ಲಿ ಜನಿಸಿದರು. ಅವರ ತಂದೆ ಕೃಷ್ಣರಾಯರು ವಕೀಲರಾಗಿದ್ದರು. ವಿನಾಯಕರು ಹುಟ್ಟಿದ ಕಾಲಕ್ಕೆ ಸವಣೂರು ಒಂದು ಪುಟ್ಟ ಸಂಸ್ಥಾನವಾಗಿತ್ತು. ಒಬ್ಬ ನವಾಬನ ಆಡಳಿತಕ್ಕೆ ಒಳಪಟ್ಟಿತ್ತು.
- ವಿನಾಯಕರ ವಿದ್ಯಾಭ್ಯಾಸ ಸವಣೂರುಧಾರವಾಡಗಳಲ್ಲಿ ನಡೆಯಿತು. ಹೀಗೆ ವಿದ್ಯಾಭ್ಯಾಸದ ಸಲುವಾಗಿ ಧಾರವಾಡ ದಲ್ಲಿದ್ದಾಗಲೇ ಅವರಿಗೆ ಕನ್ನಡದ ವರಕವಿ ಬೇಂದ್ರೆಯವರ ಸಂಪರ್ಕ ಒದಗಿ ಬಂತು. ಗೋಕಾಕರ ಸಾಹಿತ್ಯ ಕೃಷಿ ಬೇಂದ್ರೆಯವರ ಮಾರ್ಗದರ್ಶನ, ಪ್ರೋತ್ಸಾಹಗಳಿಂದ ಮುಂದುವರೆಯಿತು. ಬೇಂದ್ರೆ ತಮ್ಮ ಕಾವ್ಯ ಗುರುವೂ, ಮಾರ್ಗದರ್ಶಕರೂ ಆಗಿದ್ದರೆಂದು ಗೋಕಾಕರೇ ಹೇಳಿಕೊಂಡಿದ್ದಾರೆ.
- ಇಂಗ್ಲೀಷ್ ವಿಷಯದ ಎಂ.ಎ ಪರೀಕ್ಷೆಯಲ್ಲಿ ಮೊದಲ ದರ್ಜೆಯಲ್ಲಿ ಉತ್ತೀರ್ಣರಾದ ಗೋಕಾಕರು, ಕೂಡಲೇ ಪುಣೆಯ ಸಿ.ಎಸ್.ಪಿ ಕಾಲೇಜಿನಲ್ಲಿ ಉಪನ್ಯಾಸಕ ಹುದ್ದೆಗೆ ಆಯ್ಕೆಯಾದರು. ಅವರು ತಮ್ಮ ವೃತ್ತಿಯಲ್ಲಿ ತಮ್ಮನ್ನು ಪೂರ್ತಿಯಾಗಿ ತೊಡಗಿಸಿಕೊಂಡರು. ಇದರ ಫಲವಾಗಿ ಕನ್ನಡದ ಗಂಡುಮೆಟ್ಟಿನ ನೆಲದ ಈ ಯುವಕ ಮರಾಠಿಗರನ್ನು ಕೂಡ ತಮ್ಮ ಕಡೆ ಸೆಳೆದುಕೊಂಡ. ಇವರ ತರಗತಿಗಳಿಗೆ ಬೇರೆ ಬೇರೆ ಕಾಲೇಜಿನ ವಿದ್ಯಾರ್ಥಿಗಳು ಕೂಡ ಪಾಠ ಕೇಳಲು ಬರುತ್ತಿದ್ದರಂತೆ.
- ಇವರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದ ಫರ್ಗ್ಯೂಸನ್ ಕಾಲೇಜಿನ ಆಡಳಿತ ವರ್ಗವೇ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಇವರನ್ನು ಆಕ್ಸ್ಫರ್ಡ್ ವಿಶ್ವವಿದ್ಯಾಲಯಕ್ಕೆ ಕಳಿಸಿತು.
- ಗೋಕಾಕರು ಆಕ್ಸ್ಫರ್ಡ್ನಲ್ಲಿ ಇಂಗ್ಲೀಷ್ ಸಾಹಿತ್ಯವನ್ನು ಓದಿದರು. ಪರೀಕ್ಷೆಯನ್ನು ಮೊದಲ ದರ್ಜೆಯಲ್ಲಿ ಪಾಸು ಮಾಡಿದರು. ಹೀಗೆ ಆಕ್ಸ್ಫರ್ಡ್ನಲ್ಲಿ ಇಂಗ್ಲೀಷ್ ಸಾಹಿತ್ಯವನ್ನು ಪ್ರಥಮ ದರ್ಜೆಯಲ್ಲಿ ಪಾಸು ಮಾಡಿದ ಮೊದಲ ಭಾರತೀಯ ಎಂಬ ಕೀರ್ತಿಗೆ ಪಾತ್ರರಾದರು.
- ಇಂಗ್ಲೆಂಡಿನಿಂದ ಹಿಂತಿರುಗಿ ಬಂದವರಿಗೆ ಸಾಂಗ್ಲಿಯ ವಿಲ್ಲಿಂಗ್ಡನ್ ಕಾಲೇಜಿನ ಪ್ರಿನ್ಸಿಪಾಲರ ಹುದ್ದೆ ಕಾದಿತ್ತು. ಅನಂತರ ಕ್ರಮೇಣ ಅವರು ಶಿಕ್ಷಣ ಕ್ಷೇತ್ರದಲ್ಲಿ ಅಧ್ಯಾಪಕನಾದವನೊಬ್ಬನು ಏರಬಹುದಾದ ಅತ್ಯುನ್ನತ ಹುದ್ದೆಯಾದ ಉಪಕುಲಪತಿ ಹುದ್ದೆಗೂ ಏರಿದರು.
- ಅವರು ಸಾಂಗ್ಲಿಯ ವಿಲ್ಲಿಂಗ್ಡನ್ ಕಾಲೇಜು, ಪುಣೆಯ ಫರ್ಗೂಸನ್ ಕಾಲೇಜು, ವೀಸನಗರದ ಕಾಲೇಜು, ಕೊಲ್ಲಾಪುರದ ರಾಜಾರಾಮ ಕಾಲೇಜು, ಧಾರವಾಡದ ಕರ್ನಾಟಕ ಕಾಲೇಜು,ಉಸ್ಮಾನಿಯಾ ವಿಶ್ವವಿದ್ಯಾಲಯ, ಹೈದರಾಬಾದ್ ಹೈದರಾಬಾದಿನಲ್ಲಿರುವ ಇಂಗ್ಲೀಷ್ ಮತ್ತು ವಿದೇಶೀ ಭಾಷೆಗಳ ಕೇಂದ್ರ ಸಂಸ್ಥೆ, ಸಿಮ್ಲಾ ಸಿಮ್ಲಾದಲ್ಲಿರುವ ಉನ್ನತ ಅಧ್ಯಯನ ಸಂಸ್ಥೆ -ಮೊದಲಾದ ಶಿಕ್ಷಣ ಸಂಸ್ಥೆಗಳಲ್ಲಿ ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು.
- ಬೆಂಗಳೂರು ವಿಶ್ವವಿದ್ಯಾಲಯಮತ್ತು ಶ್ರೀಸತ್ಯಸಾಯಿ ಉನ್ನತ ಅಧ್ಯಯನ ಸಂಸ್ಥೆಯ ಉಪಕುಲಪತಿಗಳಾಗಿದ್ದರು.
- ಜಪಾನ್,ಅಮೆರಿಕ, ಇಂಗ್ಲೆಂಡ್, ಬೆಲ್ಜಿಯಂ, ಗ್ರೀಸ್, ಪೂರ್ವ ಆಫ್ರಿಕ ಮೊದಲಾದ ದೇಶಗಳಿಗೆ ಭಾರತದ ಸಾಂಸ್ಕೃತಿಕ ರಾಯಭಾರಿಯಾಗಿ ಹೋಗಿ ಬಂದರು.
- ತಮ್ಮ ಬದುಕಿನುದ್ದಕ್ಕೂಕನ್ನಡದ ಕೀರ್ತಿಪತಾಕೆಗಳನ್ನು ದೇಶದ ಒಳಗೂ ಹೊರಗೂ ಹಾರಿಸಿದ ಗೋಕಾಕರು ೧೯೯೨ರ ಎಪ್ರಿಲ್.೨೮ರಂದು ಬೆಳಗಿನ ಜಾವ ಮುಂಬಯಿಯಲ್ಲಿ ನಿಧನರಾದರು.
ಕೃತಿಗಳು
- ಈ ಶತಮಾನದ ಕನ್ನಡ ಲೇಖಕರಲ್ಲಿ ಅಗ್ರಗಣ್ಯರಾಗಿರುವ ವಿ.ಕೃ. ಗೋಕಾಕರ ಬರಹ ತುಂಬ ವಿಪುಲವೂ, ವ್ಯಾಪಕವೂ ಆದದ್ದು.ಕನ್ನಡ, ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ಗೋಕಾಕರು ಹಲವಾರು ಕೃತಿಗಳನ್ನು ರಚಿಸಿದ್ದಾರೆ!. ಇಂಗ್ಲೀಷಿನಲ್ಲಿ ಅವರು ಬರೆದಿರುವ ಕೃತಿಗಳ ಸಂಖ್ಯೆ ಮೂವತ್ತಕ್ಕೂ ಹೆಚ್ಚು.
- ಅವರ ಮೊದಲ ಪ್ರಕಟಿತ ಕೃತಿ “ಕಲೋಪಾಸಕರು”. ಅವರು ಇಂಗ್ಲೆಂಡಿಗೆ ಸಮುದ್ರದ ಮೂಲಕ ಹೋಗಿ ಬಂದ ಅನುಭವಗಳನ್ನು ಆಧರಿಸಿ ರಚಿಸಿದ “ಸಮುದ್ರ ಗೀತೆಗಳು”, “ಸಮುದ್ರದಾಚೆಯಿಂದ”- ಇವು ಮಹತ್ವದ ಕೃತಿಗಳಾಗಿವೆ. ಸಮುದ್ರ ಗೀತೆಗಳು ಕವನ ಸಂಕಲನದಲ್ಲಿರುವ “ಕೊಡದಿರು ಶರಧಿಗೆ ಷಟ್ಪದಿಯ ದೀಕ್ಷೆಯನು” ಎಂಬ ಸಾಲು ತುಂಬ ಪ್ರಸಿದ್ಧವಾಗಿದೆ.
ಕಾದಂಬರಿಗಳು
- ಸಮರಸವೇ ಜೀವನ.
- ಇಜ್ಜೋಡು.
- ಏರಿಳಿತ.
- ಸಮುದ್ರಯಾನ.
- ನಿರ್ವಹಣ ನರಹರಿ: ನೂತನ ಯುಗದ ಪ್ರವಾದಿ.
ಮಹಾಕಾವ್ಯ
ಭಾರತ ಸಿಂಧು ರಶ್ಮಿ – ವಿನಾಯಕರು ರಚಿಸಿದ ಮಹಾಕಾವ್ಯ. ಹನ್ನೆರಡು ಖಂಡಗಳು, ಮೂವತ್ತೈದು ಸಾವಿರ ಸಾಲುಗಳ ಈ ಮಹಾಕಾವ್ಯ ಋಗ್ವೇದ ಕಾಲದ ಜನಜೀವನವನ್ನು ಕುರಿತದ್ದು.ವಿಶ್ವಾಮಿತ್ರ ಈ ಕಾವ್ಯದ ನಾಯಕ.
ಕವನ ಸಂಕಲನ
- ಪಯಣ.
- ಸಮುದ್ರಗೀತೆಗಳು
- ನವ್ಯ ಕವಿಗಳು
- ತ್ರಿಶಂಕುವಿನ ಪ್ರಜ್ಞಾ ಪ್ರಭಾತ.
- ಊರ್ಣನಾಭ.
- ಉಗಮ.
- ಬಾಳದೇಗುಲದಲ್ಲಿ.
- ಸಿಮ್ಲಾಸಿಂಫನಿ.
- ಇಂದಲ್ಲ ನಾಳೆ(ಚಂಪೂ).
- ದ್ಯಾವಾಪೃಥಿವೀ.
- ಪಾರಿಜಾತದಡಿಯಲ್ಲಿ.
- ಅಭ್ಯುದಯ.
- ಭಾಗವತ ನಿಮಿಷಗಳು.
ಸಾಹಿತ್ಯ ವಿಮರ್ಶೆ
- ಕವಿಕಾವ್ಯ ಮಹೋನ್ನತಿ.
- ನವ್ಯ ಮತ್ತು ಕಾವ್ಯ ಜೀವನ.
- ಇಂದಿನ ಕನ್ನಡ ಕಾವ್ಯದ ಗೊತ್ತುಗುರಿಗಳು.
- ಸಾಹಿತ್ಯದಲ್ಲಿ ಪ್ರಗತಿ.
- ಸಾಹಿತ್ಯ ವಿಮರ್ಶೆಯ ಕೆಲವು ಮೂಲ ತತ್ವಗಳು.
ಪ್ರವಾಸ ಕಥನ
- ಸಮುದ್ರದಾಚೆದಿಂದ.
- ಪಯಣಿಗ.
ಗೌರವಗಳು ಮತ್ತು ಪ್ರಶಸ್ತಿಗಳು
- ಗೋಕಾಕರು ಸಾಹಿತ್ಯ-ಸಂಸ್ಕೃತಿಗೆ ಸಲ್ಲಿಸಿದ ಸೇವೆಯನ್ನು ಗಮನಿಸಿ ಜನತೆಯೂ, ಸರ್ಕಾರವೂ ಅವರಿಗೆ ಪ್ರಶಸ್ತಿ ಗೌರವಗಳನ್ನು ನೀಡಿ ಸನ್ಮಾನಿಸಿವೆ.ಬಳ್ಳಾರಿಯಲ್ಲಿ ೧೯೫೮ರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಅವರು ವಹಿಸಿದ್ದರು.
- ೧೯೬೭ರಲ್ಲಿಕರ್ನಾಟಕ ವಿಶ್ವವಿದ್ಯಾಲಯ ಮತ್ತು ೧೯೭೯ರಲ್ಲಿ ಕ್ಯಾಲಿಫೋರ್ನಿಯಾದ ಫೆಸಿಫಿಕ್ ವಿಶ್ವವಿದ್ಯಾಲಯಗಳು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿವೆ.
- ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿದೆ.
- ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪದವಿ ಮತ್ತುಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ಪದವಿ ಇವೆರಡೂ ಕನ್ನಡಿಗರೊಬ್ಬರಿಗೆ ಮೊದಲ ಬಾರಿಗೆ ಸಂದ ಗೌರವಗಳಾಗಿವೆ.
- ಅವರ ಮೇರು ಕೃತಿ “ಭಾರತ ಸಿಂಧು ರಶ್ಮಿ”ಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಭಾರತೀಯ ವಿದ್ಯಾಭವನದ ರಾಜಾಜಿ ಪ್ರಶಸ್ತಿ ಮತ್ತು ಐ.ಬಿ.ಎಚ್. ಪ್ರಶಸ್ತಿಗಳೂ ದೊರಕಿವೆ.
- ಗೋಕಾಕರ “ದ್ಯಾವಾ ಪೃಥಿವೀ” ಕವನ ಸಂಕಲನಕ್ಕೆ ೧೯೬೦ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಬಂದಿತು.
- ಗೋಕಾಕರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ನೀಡುವಾಗ ಪ್ರಶಸ್ತಿ ಆಯ್ಕೆ ಸಮಿತಿ ಅವರ ಯಾವುದೇ ಕೃತಿಯನ್ನು ಹೆಸರಿಸಲಿಲ್ಲ. ಕನ್ನಡ ಸಾಹಿತ್ಯ ಲೋಕಕ್ಕೆ ಅವರು೧೯೬೯ರಿಂದ೧೯೮೪ರ ಅವಧಿಯಲ್ಲಿ ನೀಡಿದ ಅನುಪಮ ಕೊಡುಗೆಯನ್ನು ಗಮನಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಹೇಳಿದೆ.
- ಯಾವುದೇ ಕೃತಿಯನ್ನು ಹೆಸರಿಸದೆಜ್ಞಾನಪೀಠ ಪ್ರಶಸ್ತಿ ಕೊಟ್ಟಿದ್ದು ಇದೇ ಮೊದಲು. ಆದರೆ ಬಹಳ ಜನರು ಗೋಕಾಕರಿಗೆ ಅವರ ಮೇರು ಕೃತಿ “ಭಾರತ ಸಿಂಧು ರಶ್ಮಿ”ಗಾಗಿಯೇ ಈ ಪ್ರಶಸ್ತಿ ಬಂದಿದೆ ಎಂದು ಭಾವಿಸಿದ್ದಾರೆ.
- ಸಾಮಾನ್ಯವಾಗಿ ಜ್ಞಾನಪೀಠ ಪ್ರಶಸ್ತಿಯನ್ನುದೆಹಲಿಯಲ್ಲಿ ನೀಡಲಾಗುತ್ತದೆ. ಆದರೆ ಗೋಕಾಕರಿಗೆ ಪ್ರಶಸ್ತಿಯನ್ನು ನೀಡಲು ಸ್ವತಃ ಈ ದೇಶದ ಪ್ರಧಾನಿ ಮಂತ್ರಿಗಳೇ ಮುಂಬಯಿಗೆ ಆಗಮಿಸಿದರು. ಇದು ಗೋಕಾಕರು ಎಷ್ಟು ಮಹತ್ವದ ವ್ಯಕ್ತಿ ಎಂಬುದಕ್ಕೆ ಒಂದು ನಿದರ್ಶನ.
ಗೋಕಾಕ್ ವರದಿ
ತಮ್ಮ ಪಾಂಡಿತ್ಯದಿಂದಾಗಿ ಸಾಹಿತ್ಯ ಲೋಕದಲ್ಲಿ ಜನಪ್ರಿಯರಾಗಿದ್ದ ಗೋಕಾಕರಿಗೆ ಶ್ರೀಸಾಮಾನ್ಯರ, ಅನಕ್ಷರಸ್ಥರ ವಲಯದಲ್ಲೂ ಜನಪ್ರಿಯರಾಗುವ ಒಂದು ಸುಯೋಗ ಒದಗಿ ಬಂತು. ಕರ್ನಾಟಕ ಸರ್ಕಾರ ೧೯೮೦ರಲ್ಲಿ ಪ್ರೌಢಶಾಲಾ ವ್ಯಾಸಂಗದಲ್ಲಿ ಭಾಷೆಗಳ ಸ್ಥಾನಮಾನ ಕುರಿತು ವರದಿ ನೀಡಲು ವಿ.ಕೃ. ಗೋಕಾಕರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿತು. ಈ ಸಮಿತಿ ನೀಡಿದ ವರದಿ ಕನ್ನಡದ ಪರವಾಗಿತ್ತು. ಸರ್ಕಾರ ಈ ವರದಿಯನ್ನು ಅಂಗೀಕರಿಸಲು ಹಿಂದೆ ಮುಂದೆ ನೋಡಿತು. ಕನ್ನಡ ಜನತೆ ಮೊದಲ ಬಾರಿಗೆ ಒಕ್ಕೊರಲಿನಿಂದ ಗೋಕಾಕ್ ವರದಿ ಜಾರಿಗೆ ಬರಲಿ ಎಂದು ಸರ್ಕಾರವನ್ನು ಒತ್ತಾಯಿಸಿತು. ಈ ಸಂದರ್ಭದಲ್ಲಿ ನಡೆದ ಕನ್ನಡ ಚಳವಳಿ ಒಂದು ಐತಿಹಾಸಿಕ ದಾಖಲೆಯಾಗಿದೆ. ಕರ್ನಾಟಕದಲ್ಲಿ ಈ ಪ್ರಮಾಣದ ಚಳವಳಿ ಹಿಂದೆಂದೂ ನಡೆದಿರಲಿಲ್ಲ. ಸ್ವಾತಂತ್ರ್ಯ ಹೋರಾಟವಾಗಲೀ, ಕರ್ನಾಟಕ ಏಕೀಕರಣ ಚಳವಳಿಯಾಗಲೀ ಕರ್ನಾಟಕದಲ್ಲಿ ಈ ಪ್ರಮಾಣದಲ್ಲಿ ನಡೆದಿರಲಿಲ್ಲ ಎಂದು ಇತಿಹಾಸಕಾರರು ಹೇಳುತ್ತಾರೆ. ಇದು ಇತಿಹಾಸದಲ್ಲಿ “ಗೋಕಾಕ್ ಚಳವಳಿ” ಎಂದೇ ದಾಖಲಾಗಿದೆ. ಈಗ ಇದರ ಫಲವಾಗಿ ಕರ್ನಾಟಕದ ಕನ್ನಡೇತರ ಶಾಲೆಗಳಲ್ಲೂ ಮೂರನೆಯ ತರಗತಿಯಿಂದ ಹತ್ತನೆಯ ತರಗತಿಯವರೆಗೂ ಒಂದು ಭಾಷೆಯಾಗಿ ಕನ್ನಡವನ್ನು ಕಡ್ಡಾಯವಾಗಿ ಓದಬೇಕಾಗಿದೆ. ಗೋಕಾಕ್ ಚಳವಳಿ ಕನ್ನಡಿಗರಲ್ಲಿ ಎಚ್ಚರವನ್ನು ಮೂಡಿಸಿದೆ. ಅಂದಿನಿಂದ ಕನ್ನಡಿಗರು ತಮ್ಮ ನಾಡು, ನುಡಿ ಹಾಗೂ ನೀರಿನ ಬಗ್ಗೆ ಸ್ವಲ್ಪ ಮಟ್ಟಿಗೆ ಜಾಗೃತರಾಗಿದ್ದಾರೆ. ಗೋಕಾಕರೇ ಸ್ವತಃ ಅನೇಕ ಕನ್ನಡ ಪರ ಚಳವಳಿಗಳಲ್ಲಿ ಭಾಗವಹಿಸಿ ಜನರನ್ನು ಎಚ್ಚರಿಸಿದ್ದಾರೆ. ಅವರು ಅನೇಕ ಕನ್ನಡಪರ ನಿಯೋಗಗಳ ನಾಯಕತ್ವವನ್ನು ವಹಿಸಿ ಸರ್ಕಾರವನ್ನೂ ಎಚ್ಚರಿಸಿದ್ದಾರೆ. ಇದು ಗೋಕಾಕರ ಕನ್ನಡ ಪ್ರೀತಿಗೆ ನಿದರ್ಶನವಾಗಿದೆ. ಗೋಕಾಕ್ ಅವರು ತಮ್ಮ ಬರಹ, ಬೋಧನೆಗಳಿಂದ ಕನ್ನಡದ ಗೌರವವನ್ನು ಹೆಚ್ಚಿಸಿದರು. ಹಾಗೆಯೇ “ಗೋಕಾಕ್ ವರದಿ”ಯಲ್ಲಿ ಕನ್ನಡಕ್ಕೆ ಶಾಲಾ ಶಿಕ್ಷಣದಲ್ಲಿ ಸಲ್ಲಬೇಕಾದ ನ್ಯಾಯಯುತ ಸ್ಥಾನವನ್ನು ದೊರಕಿಸಿಕೊಟ್ಟರು. ಈ ಎರಡೂ ಕೆಲಸಗಳಿಗಾಗಿ ಕನ್ನಡ ಜನತೆ ಗೋಕಾಕರನ್ನು ಸದಾ ಗೌರವ, ಕೃತಜ್ಞತೆಗಳಿಂದ

- ದ್ಯಾವನೂರು
- ಕುಸುಮಬಾಲೆ,ಒಡಲಾಳ
- ಎದೆಗೆ ಬಿದ್ದ ಅಕ್ಷರ
- ನೋಡು ಮತ್ತು ಕೂಡು4
- ಗಾಂಧಿ ಮತ್ತು ಮಾವೋ
- ಕುಸುಮಬಾಲೆ ಇವರು ಬರೆದ ಕಾದಂಬರಿ. ಸ್ಥಳೀಯ ಭಾಷೆಯಲ್ಲಿ ಬರೆದ ೭೫ ಪುಟಗಳ ಈ ಕೃತಿಯನ್ನು “ಕನ್ನಡಕ್ಕೆ ಭಾಷಾಂತರಿಸಬೇಕೆಂದು” , ಮತ್ತೊಬ್ಬ ಸಾಹಿತಿಚಂದ್ರಶೇಖರ ಪಾಟೀಲ ಹಾಸ್ಯ ಮಾಡಿದ್ದರು. ಅಷ್ಟರ ಮಟ್ಟಿಗೆ ಮೈಸೂರಿನ ಹಳ್ಳಿ ನುಡಿಗಟ್ಟುಗಳು ಆ ಕೃತಿಯಲ್ಲಿದ್ದವು.
- ಅವರ ಬರಹಗಳ ಬಗ್ಗೆ ವಿಮರ್ಶೆ ಹಾಗು ಅನಿಸಿಕೆಗಳನ್ನೊಳಗೊಂಡ “ಯಾರ ಜಪ್ತಿಗೂ ಸಿಗದ ನವಿಲು” ಎಂಬ ಕೃತಿಯನ್ನು ಅಭಿನವ ಪ್ರಕಾಶನ ಹೊರತಂದಿದೆ.
- ದೇವನೂರು ಮಹಾದೇವರ ಕಥೆಗಳು, ಕಾದಂಬರಿಗಳು – ಉದಯಕುಮಾರ ಹುಬ್ಬು
- ದೇವನೂರು ಮಹಾದೇವ – ಎನ್.ಪಿ. ಶಂಕರನಾರಾಯಣರಾವ್
ಎ. ಎನ್. ಮೂರ್ತಿರಾವ್ (೧೯೫೪ – ೧೯೫೬)
ಜೀವನ
ಕನ್ನಡದಲ್ಲಿ ಶ್ರೇಷ್ಠ ಪ್ರಬಂಧಕಾರರೂ, ವಿಮರ್ಶಕರೂ, ಆಗಿದ್ದು ‘ದೇವರು’ ಪುಸ್ತಕದ ಮೂಲಕ ಜನಪ್ರಿಯರಾದ ಪ್ರೊ.ಎ.ಎನ್. ಮೂರ್ತಿರಾವ್ ಅವರು ಎಂ.ಸುಬ್ಬರಾವ್ ಮತ್ತು ಪುಟ್ಟಮ್ಮ ದಂಪತಿಗಳ ಪುತ್ರರಾಗಿ (ಅಕ್ಕಿ ಹೆಬ್ಬಾಳು ನರಸಿಂಹಮೂರ್ತಿರಾವ್) ೧೮-೬-೧೯00ರಲ್ಲಿ ಮಂಡ್ಯ ಜಿಲ್ಲೆಯ ಅಕ್ಕಿ ಹೆಬ್ಬಾಳಿನಲ್ಲಿ ಜನ್ಮ ತಳೆದರು. ಬಾಲ್ಯದ ದಿನಗಳನ್ನು ಮೇಲುಕೋಟೆ, ನಾಗಮಂಗಲಗಳಲ್ಲಿ ಕಳೆದ ಮೇಲೆ ೧೯೧೩ರಲ್ಲಿ ಮೈಸೂರಲ್ಲಿ ವೆಸ್ಲಿಯನ್ ಮಿಷನ್ ಸ್ಕೂಲಿನಲ್ಲಿ ಶಾಲಾ ಶಿಕ್ಷಣ ಮುಗಿಸಿ ಮೈಸೂರು ಮಹಾರಾಜ ಕಾಲೇಜನ್ನು ಸೇರಿದರು. ೧೯೨೨ರಲ್ಲಿ ಬಿ.ಎ. ಪದವಿ ಮುಗಿಸಿ ೧೯೨೪ರಲ್ಲಿ ಎಂ.ಎ.ಪದವಿ ಪಡೆದರು.
೧೯೨೪ರಲ್ಲಿ ಮಹಾರಾಜ ಕಾಲೇಜಿನಲ್ಲಿ ಟ್ಯೂಟರ್ ಆಗಿ ೧೯೨೭ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ೧೯೪0ರಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಬಡ್ತಿ ಪಡೆದರು. ೧೯೪0ರಿಂದ ೧೯೪೩ವರೆಗೆ ಶಿವಮೊಗ್ಗ ಸರಕಾರಿ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದು, ೧೯೪೩ರಲ್ಲಿ ಆಕಾಶವಾಣಿಯ ಸಹಾಯಕ ನಿರ್ದೇಶಕರಾದರು. ೧೯೪೮ರಲ್ಲಿ ಚಿತ್ರದುರ್ಗ ಕಾಲೇಜಿನಲ್ಲಿ ಮುಖ್ಯಸ್ಥರಾಗಿದ್ದು, ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ೧೯೫೫ರಲ್ಲಿ ನಿವೃತ್ತಿಗೊಂಡರು.
೧೯೫೫ರಲ್ಲಿ ಸರ್ಕಾರದ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದರು. ೧೯೫೪-೫೬ರಲ್ಲಿ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.
ಸದರ್ನ್ ಲಾಂಗ್ವೇಜಸ್ ಬುಕ್ ಟ್ರಸ್ಟ್ನ ಕನ್ನಡ ಶಾಖೆಯ ಸಂಚಾಲಕ ಅಧ್ಯಕ್ಷರಾಗಿ ೪ ವರ್ಷಗಳ ಕಾಲ ಆಕಾಶವಾಣಿಯಲ್ಲಿ ಸೆಂಟ್ರಲ್ ಪ್ರೋಗ್ರಾಂ ಅಡ್ವೈಸರಿ ಕಮಿಟಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಎ.ಎನ್. ಮೂರ್ತಿರಾವ್ ಅವರು ಸಾಕಷ್ಟು ವಿದೇಶ ಪ್ರವಾಸ ಮಾಡಿದ್ದರು. ಅವರು ತಮ್ಮ ಲೋಕಾನುಭವದಿಂದ ಬರೆದ ಅಪರ ವಯಸ್ಕನ ಅಮೇರಿಕ ಯಾತ್ರೆಗೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ, ಚಿತ್ರಗಳು ಮತ್ತು ಪತ್ರಗಳು ಗ್ರಂಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನ, ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್(೧೯೭೭), ಸಮಗ್ರ ಸಾಹಿತ್ಯಕ್ಕೆ ಮಾಸ್ತಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಗೌರವ, ಡಿ.ಲಿಟ್. ಪ್ರಶಸ್ತಿ, ‘ದೇವರು’ ಗ್ರಂಥಕ್ಕೆ ಪಂಪ ಪ್ರಶಸ್ತಿ ಮುಂತಾದವು ಇವರಿಗೆ ಸಂದಿವೆ.
೧೯೮೪ರಲ್ಲಿ ಕೈವಾರಗಳಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ೫೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದರು.
ಇವರು ರಚಿಸಿರುವ ಕೃತಿಗಳಲ್ಲಿ ಹಗಲುಕನಸುಗಳು, ಅಲೆಯುವ ಮನ, ಮಿನುಗು ಮಿಂಚು(ಪ್ರಬಂಧ ಸಂಕಲನ), ಬಿಎಂಶ್ರೀ, ಪೂರ್ವಸೂರಿಗಳೊಡನೆ, ಶೇಕ್ಸ್ಪಿಯರ್, ಮಾಸ್ತಿಯವರ ಕಥೆಗಳು(ವಿಮರ್ಶಾ ಕೃತಿಗಳು), ಆಷಾಢಭೂತಿ, ಮೋಲಿಯೇರನ ೨ ನಾಟಕಗಳು, ಚಂಡಮಾರುತ(ನಾಟಕಗಳು), ಪಾಶ್ಚಾತ್ಯ ಸಣ್ಣ ಕಥೆಗಳು ಇತ್ಯಾದಿ ಕೃತಿಗಳು ಪ್ರಸಿದ್ಧವಾಗಿವೆ.
ಇಂಗ್ಲಿಷಿನಲ್ಲೂ ಹಲವಾರು ಗ್ರಂಥಗಳನ್ನು ಬರೆದಿದ್ದಾರೆ.
ಕಾರಂತರ ಮರಳಿ ಮಣ್ಣಿಗೆ ಕಾದಂಬರಿಯನ್ನು `ದಿ ರಿಟರ್ನ್ ಟು ದಿ ಸಾಯಲ್’ ಎಂದು ಅನುವಾದಿಸಿದ್ದಾರೆ. ಎಸ್. ರಾಧಾಕೃಷ್ಣನ್, ಎಂ.ವಿಶ್ವೇಶ್ವರಯ್ಯ, ಬಿ.ಎಂ.ಶ್ರೀಕಂಠಯ್ಯ ಅವರುಗಳನ್ನು ಕುರಿತು ಇಂಗ್ಲಿಷಿನಲ್ಲಿ ಸ್ವತಂತ್ರವಾಗಿ ಬರೆದಿದ್ದಾರೆ.
ಎ.ಎನ್. ಮೂರ್ತಿರಾವ್ರು ತಮ್ಮ ೧0೪ನೇ ವಯಸ್ಸಿನಲ್ಲಿ ೨೩-೮-೨00೩ರಲ್ಲಿ ನಿಧನರಾದರು.
ಸಾಧನೆ :
ಪರಿಷತ್ತಿನ ಅಧ್ಯಕ್ಷರಾಗಿದ್ದ ಎಂ. ಆರ್. ಶ್ರೀ ಅವರ ನಿಧನಾನಂತರ ೩ ವರ್ಷಗಳಲ್ಲಿನ ಉಳಿದ ಅವಧಿಗೆ ಅಧ್ಯಕ್ಷರಾದ ಮಾಸ್ತಿ ಅವರು ಸುಮಾರು ೮ ತಿಂಗಳ ಕಾಲ ಪರಿಷತ್ತನ್ನು ನಡೆಸಿದ ಮೇಲೆ ೯.೫.೧೯೫೪ರಿಂದ ೧೭.೫.೧೯೫೬ವರೆಗೆ ಶತಾಯುಷಿಗಳಾದ ಮತ್ತು ಇಂಗ್ಲಿಷ್ ಪ್ರಾಧ್ಯಾಪಕರಾದರೂ ಕನ್ನಡದಲ್ಲಿ ಶ್ರೇಷ್ಠಗ್ರಂಥಗಳನ್ನು ಬರೆದ ಎ. ಎನ್. ಮೂರ್ತಿರಾಯರು ಮಾಸ್ತಿ ಅವರಿಂದ ಪರಿಷತ್ತಿನ ಅಧ್ಯಕ್ಷಸ್ಥಾನವನ್ನು ಸ್ವೀಕರಿಸಿದರು.
ಇವರ ಅವಧಿಯಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆಯ ಚಟುವಟಿಕೆಗಳಲ್ಲಿ ಪರಿಷತ್ತನ್ನು ಭಾಗಿಯನ್ನಾಗಿ ಮಾಡಿಕೊಂಡು ಅದರ ಗ್ರಂಥ ಪ್ರಕಟನೆಯ ಕಾರ್ಯವನ್ನು ಪರಿಷತ್ತಿಗೆ ವಹಿಸಿತು. ಪರಿಷತ್ತಿನ ಕೆಲವು ಗ್ರಂಥಗಳು ಪುನರ್ಮುದ್ರಣವಾದವು.
ಹೆಚ್ಚಿನ ಮಾಹಿತಿ :
ಅಕ್ಕಿಹೆಬ್ಬಾಳು ನರಸಿಂಹಮೂರ್ತಿರಾಯರಿಗೆ ಈ ಹೊತ್ತಿಗೆ (ಜೂನ್16) ನೂರು ವರ್ಷ ತುಂಬಿತು. ಶತಮಾನಂ ಭವತಿ, ಶತಾಯು ಭವತಿ ಎಂಬ ಹರಕೆ ನಿಜವಾಯಿತು. ಹಗಲುಗನಸುಗಳು ಪ್ರಬಂಧಸಂಕಲನ, ಆಷಾಢಭೂತಿ ನಾಟಕ, ಒಂದಷ್ಟು ಕವನ ಸಂಕಲನ ಹಾಗೂ ಇತ್ತೀಚೆಗೆ ಬರೆದ ದೇವರು ಪ್ರಬಂಧಮಾಲೆ- ಹೀಗೆ ಮೂರ್ತಿರಾಯರ ನೂರು ವರುಷಗಳು ಹುಸಿಹೋದ ಅಲೆಮಾರಿ ಬದುಕಲ್ಲ . ಸಾಹಿತ್ಯ ಕ್ಷೇತ್ರದಲ್ಲಿ ಬಾಳಿನಲ್ಲಿ ನೆಲೆ ಕಂಡುಕೊಂಡ ಹಿರಿಯ ಜೀವಿ ಅವರು. ಕನ್ನಡಕ್ಕೆ ಲಲಿತ ಪ್ರಬಂಧದ ಸೊಗಡನ್ನು ಪರಿಚಯಿಸಿದ ಎ. ಎನ್. ಮೂರ್ತಿರಾಯರು ಈಗಲೂ ಆರೋಗ್ಯವಾಗಿದ್ದಾರೆ. ಪೇಪರ್ ಓದುತ್ತಾರೆ. ತಮಗೆ ಅನ್ನಿಸಿದ್ದನ್ನು ಬರೆದಿಡುತ್ತಾರೆ. ಮುಂಜಾನೆ ಎದ್ದು ಮೂರು ಕಿಲೋಮೀಟರ್ ವಾಕಿಂಗ್ ಹೋಗುತ್ತಾರೆ; ಒಂಟಿಯಾಗಿ. ಒಂಟಿಯಾಗಿ ಯಾಕೆ ಹೋಗುತ್ತೀರಿ ಎಂದು ಗೆಳೆಯರೊಬ್ಬರು ಕೇಳಿದ್ದಕ್ಕೆ ಮೂರ್ತಿರಾಯರು ಉತ್ತರಿಸಿದ್ದು ಹೀಗೆ : ಜತೆಗೆ ಯಾರಾದರೂ ಎಷ್ಟು ದಿನ ಇರುತ್ತಾರೆ. ಜತೆಗೆ ಯಾರನ್ನಾದರೂ ಕರೆದುಕೊಂಡು ಹೋದೆ ಅಂತಿಟ್ಟುಕೊಳ್ಳಿ. ಮುಂದೆ ಜೀವ ಒಂಟಿಯಾಗಿ ಅಲೆಯೋದಕ್ಕೆ ಹಿಂದೇಟು ಹಾಕುತ್ತೆ. ಎಲ್ಲದಕ್ಕೂ ಇನ್ನೊಬ್ಬರ ಸಹಾಯ ಬೇಡುತ್ತೆ. ಅದು ಸಿಗುತ್ತೆ ಅಂತ ಏನು ಗ್ಯಾರಂಟಿ? ವರ್ಷದ ಹಿಂದೆ ತಮ್ಮ ಪತ್ನಿ ತೀರಿಕೊಂಡಾಗ ದೇವರನ್ನು ನಂಬದ ಮೂರ್ತಿರಾಯರು ನಮ್ಮ ಮನೆದೇವತೆ ಮನೆ ಬಿಟ್ಟು ಹೊರಟಳು ಅಂದಿದ್ದರು. ಅದು ಅವರ ಪ್ರಾಮಾಣಿಕತೆಗೆ ಸಾಕ್ಷಿ . ಯಾವುದನ್ನೂ ಅವರು ಗಾಗಿ ಮಾಡಲಿಲ್ಲ , ನಿಂದ ಮಾಡಿದರು ಅನ್ನೋದೇ ಅವರು ಬದುಕಿದ ನೂರು ವರುಷಗಳೂ ಸಾರ್ಥಕ ಎನ್ನುವುದಕ್ಕೆ ಸಾಕ್ಷಿ . ಮಿತಾಹಾರ, ಮಿತಭಾಷಿ, ಮಿತ ಜೀವನ ಅವರ ಬದುಕಿನ ಗುಟ್ಟು ಅನ್ನುತ್ತಾರೆ. ಯಾವುದನ್ನು ಅತಿರೇಕಕ್ಕೆ ಹೋಗಿ ಅನುಭವಿಸದೆ, ಮೇಲುಮೇಲಿನಿಂದಲೇ ತಡವದೆ, ಎಷ್ಟು ಬೇಕೋ ಅಷ್ಟು ಪಡಕೊಂಡವರು. ಈ ಸಹನೆ ಮತ್ತು ತೃಪ್ತಿಯೇ ಮೂರ್ತಿರಾಯರು ಹಾಗೂ ಅವರಂಥ ಅನೇಕರನ್ನು ತುಂಬುಜೀವನ ನಡೆಸುವಂತೆ ಮಾಡಿತ್ತೇ? ಯಾರಿಗೆ ಗೊತ್ತು ? ಮೂರ್ತಿರಾಯರ ಬಗ್ಗೆ: ಡಾ. ಎ.ಎನ್. ಮೂರ್ತಿರಾವ್ (ಅಕ್ಕಿ ಹೆಬ್ಬಾಳು ನರಸಿಂಹಮೂರ್ತಿ) ಮೂರ್ತಿರಾಯರು ಹುಟ್ಟಿದ್ದು 1900ರ ಜೂನ್ 16ರಂದು. ಮಂಡ್ಯ ಜಿಲ್ಲೆಯ ಅಕ್ಕಿ ಹೆಬ್ಬಾಳಿನಲ್ಲಿ. ಇವರ ತಂದೆ ಎಂ. ಸುಬ್ಬರಾವ್, ತಾಯಿ ವೆಂಕಟಲಕ್ಷ್ಮಮ್ಮ. ಇಂಗ್ಲಿಷ್ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ಚಿತ್ರದುರ್ಗ ಕಾಲೇಜಿನ ಪ್ರಾಂಶುಪಾಲರಾಗಿ ತಮ್ಮ ಬದುಕಿನಲ್ಲಿ ಸಾವಿರಾರು ವಿದ್ಯಾರ್ಥಿಗಳನ್ನು ಸನ್ಮಾರ್ಗದಲ್ಲಿ ನಡೆಸಿದ ಮೂರ್ತಿರಾಯರು, ಕೆಲ ವರ್ಷಗಳ ಕಾಲ ಕರ್ನಾಟಕ ಸಾಹಿತ್ಯ ಮತ್ತು ಸಂಸ್ಕೃತಿ ನಿರ್ದೇಶನಾಲಯದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯ ಇವರಿಗೆ ಡಿಲಿಟ್ ಪದವಿ ನೀಡಿ ಗೌರವಿಸಿದೆ. ಕೈವಾರದಲ್ಲಿ ನಡೆದ 56ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಅವರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಆಗಿದ್ದ ಅವರು ಕನ್ನಡ ಸಾರಸ್ವತ ಲೋಕಕ್ಕೆ ಸಲ್ಲಿಸಿದ ಸೇವೆ ಅಪಾರ. ಮೂರ್ತಿರಾಯರದು ಬಹುಮುಖ ಪ್ರತಿಭೆ. ನಾಟಕ, ಪ್ರಬಂಧ, ಕತೆ, ಕಾದಂಬರಿ, ಪ್ರವಾಸ ಕಥನ, ವಿಡಂಬನೆ ಮೊದಲಾಗಿ ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ಅವರು ನೀಡಿರುವ ಕೊಡುಗೆ ಅವಿಸ್ಮರಣೀಯ. ಈ ಎಲ್ಲ ಕ್ಷೇತ್ರಗಳು ಮೂರ್ತಿರಾಯರ ಕೊಡುಗೆಯಿಂದ ಮತ್ತಷ್ಟು ಸಂಪನ್ನವಾಗಿವೆ. ಪ್ರಬಂಧ ಸಾಹಿತ್ಯ ಕ್ಷೇತ್ರದಲ್ಲಂತೂ ಇವರು ಅಗ್ರಗಣ್ಯರು. ಇವರ ಕಾವ್ಯಗಳಲ್ಲಿ ಹೊಳಪು, ಕತೆಗಳಲ್ಲಿ ಕುತೂಹಲ, ನಾಟಕಗಳಲ್ಲಿ ಪಾತ್ರಸೃಷ್ಟಿ, ಮಾತಿನಲ್ಲಿ ಹಾಸ್ಯದ ಮೃದು ಲೇಪನ, ನಿರೂಪಣೆಯಲ್ಲಿ ಚಮತ್ಕಾರ ಎಲ್ಲವೂ ಮೇಳೈಸುತ್ತವೆ. ಹೂವುಗಳು ಇವರ ಪ್ರಥಮ ಪ್ರಬಂಧ. ಹಗಲುಗನಸುಗಳು, ಅಲೆಯುವ ಮನ, ಮಿನುಗು ಮಿಂಚು ಇವರ ಕೆಲವು ಪ್ರಮುಖ ಪ್ರಬಂಧ ಸಂಕಲನಗಳು, ಚಿತ್ರಗಳು – ಪತ್ರಗಳು ಕೇಂದ್ರ ಹಾಗೂ ರಾಜ್ಯ ಸಾಹಿತ್ಯ ಅಕಾಡಮಿ ಪುರಸ್ಕಾರ ತಂದಿತ್ತ ಪ್ರಸಿದ್ಧ ಪ್ರಬಂಧ ಸಂಕಲನ. ಆಷಾಢಭೂತಿ, ಚಂಡಮಾರುತ ಅನುವಾದಿತ ಕೃತಿಗಳು. ಡಾ. ಶಿವರಾಮ ಕಾರಂತರ ಮರಳಿ ಮಣ್ಣಿಗೆ ಕಾದಂಬರಿಯನ್ನು ಇಂಗ್ಲಿಷಿಗೆ ಅನುವಾದಿಸಿದ್ದಾರೆ. ಅಪರ ವಯಸ್ಕನ ಅಮೆರಿಕಾಯಾತ್ರೆ ಇವರ ಪ್ರವಾಸ ಕಥನ. ಮೂರ್ತಿರಾಯರು ಕೇವಲ ಗಂಭೀರ ಸಾಹಿತ್ಯವಷ್ಟೇ ಅಲ್ಲದೆ ಹವಳದ್ವೀಪ ಎಂಬ ಶಿಶುಸಾಹಿತ್ಯವನ್ನೂ ಕನ್ನಡಕ್ಕೆ ನೀಡಿದ್ದಾರೆ. ನೂರಾರು ಪ್ರಬಂಧ, ಕಾದಂಬರಿ, ಕತೆಗಳನ್ನು ಬರೆದಿರುವ ಮೂರ್ತಿರಾಯರು ನೂರ್ಕಾಲ ಬದುಕಿದ್ದಾರೆ. ಅವರಿಗೆ ‘ದೇವರು” ………….ಹರಸಲಿ.
“ದುರ್ಗಸಿಂಹ ” ಹಳಗನ್ನಡದ ಪ್ರಮುಖ ಕವಿಗಳಲ್ಲೊಬ್ಬನು. ಈತನ ಕಾಲ ಸುಮಾರು ಕ್ರಿ.ಶ.೧೦೩೦ ಎಂದು ಸಾಹಿತ್ಯ ಚರಿತ್ರಕಾರರ ಅಭಿಪ್ರಾಯವಾಗಿದೆ. ಕರ್ಣಾಟ ಪಂಚತಂತ್ರ – ದುರ್ಗಸಿಂಹ ರಚಿಸಿದ ಮಹತ್ವಪೂರ್ಣ ಚಂಪೂ ಕಾವ್ಯ.ಗದ್ಯ ಪದ್ಯಗಳಿಂದ ಕೂಡಿರುವ ಗ್ರಂಥ. ಚಾಲುಕ್ಯ ರಾಜನಾಗಿದ್ದ ಜಗದೇಕಮಲ್ಲ ಬಳಿ ದಂಡನಾಯಕನೂ,ಸಂಧಿವಿಗ್ರಿಹಿಯೂ ಆಗಿದನು. ವಸುಭಾಗಭಟ್ಟನ್ನು ಸಂಸ್ಕೃತದಲ್ಲಿ ರಚಿಸಿದ ಪಂಚತಂತ್ರ ವನ್ನು ಕನ್ನಡಕ್ಕೆ ತಂಡದನು .ಇವನ ಗುರು ಶಂಕರಭಟ್ಟ.ಈತ ಇದ್ದದ್ದು ಕಿಸುನಾಡಿನ ಸಯಡಿಯೆಂಬ ಅಗ್ರಹಾರದಲ್ಲಿ.ಈತ ತನ್ನ ಪ್ರಭವಿನ ಆಣತಿಯಂತೆ ಹರಿಹರ ದೇವಾಲಯಗಳನ್ನು ಕಟ್ಟಿಸಿದನು.ಇದು ಐದು ತಂತ್ರಗಳನ್ನು ಕಥೆಗಳ ಮೂಲಕ ಬೋಧಿಸುವ ಚಂಪು ಕಾವ್ಯ ಪಂಚತಂತ್ರ .
ಬಾಲ್ಯ
ಹುಟ್ಟಿದ ಸ್ಥಳ ಕಿಸುಕಾಡನಾಡು. ಈತ ಹೆಸರುವಾಸಿಯಾಗಿದ್ದ ದುರ್ಗಮಯ್ಯನ ಮೊಮ್ಮಗ. ಕಮ್ಮೆ ಕುಲದ ಸ್ಮಾರ್ತ ಬ್ರಾಹ್ಮಣ. ಗೌತಮ ಗೋತ್ರದವ. ತಂದೆ ಈಶ್ವರಾಚಾರ್ಯ, ತಾಯಿ ರೇವಾಂಬಿಕೆ. ಗುರು ಮಹಾಯೋಗಿ ಶಂಕರಭಟ್ಟ. ಜಗದೇಕಮಲ್ಲನ ಆಸ್ಥಾನದಲ್ಲಿ ಕುಮಾರಸ್ವಾಮಿ ಎಂಬಾತ ತನಗೆ ಸಂಧಿವಿಗ್ರಹಿ ಪದವಿಯನ್ನು ಕೊಡಿಸಿದನೆಂದು ಈತನೇ ತನ್ನ ಗ್ರಂಥದಲ್ಲಿ ಹೇಳಿದ್ದಾನೆ.
ದುರ್ಗಸಿಂಹ ರಾಜತಂತ್ರ ನಿಪುಣನಾಗಿದ್ದನೆಂಬುದರಲ್ಲಿ ಸಂದೇಹವಿಲ್ಲ. ರಾಜ ಜಗದೇಕಮಲ್ಲನ ಆಣತಿಯಂತೆ ತಾನು ಸೈಯಡಿಯಲ್ಲಿ ಹರಿಹರಭವನಗಳನ್ನು ಕಟ್ಟಿಸಿರುವುದಾಗಿಯೂ ತಿಳಿಸಿದ್ದಾನೆ.
ಕಾಲದ ಬಗ್ಗೆ ಹೆಚ್ಚಿನ ವಿವರಣೆ :
ದುರ್ಗಸಿಂಹನು ತನ್ನವಿಚಾರವನ್ನು ತನ್ನಕೃತಿಯಲ್ಲಿ ಕನ್ನಡದ ಆದಿ ಕವಿ ಪಂಪನ ಹಾಗೆ ವಿವರವಾಗಿ ನಿವೇದಿಸಿಕೊಂಡಿರುವುದರಿಂದ ಕವಿಚರಿತೆಯನ್ನು ತಿಳಿದುಕೊಳ್ಳಲು ಕಷ್ಟವಾಗುವುದಿಲ್ಲ. ಅವನು ತನ್ನ ಊರು ಕರ್ನಾಟಕದ ಸಯ್ಯಡಿಯ ಅಗ್ರಹಾರವೆಂದು ಹೇಳಿದ್ದಾನೆ. ‘ಛಂದೋಂಬು ಯನ್ನು ಬರೆದ ನಾಗವರ್ಮನ ಊರು ಅದೇ ಆಗಿದೆ. ಅದು ಕಿಸುಕಾಡುನಾಡಿನಲ್ಲಿದೆ ಎಂದು ಅವನು ಹೇಳಿದ್ದಾನೆ. ಆ ಸಯ್ಯಡಿಯಲ್ಲಿ ತನ್ನ ಚಕ್ರವರ್ತಿಯ ಆಜ್ಞೆಯಂತೆ ಹರಿಹರಭವನಗಳನ್ನು ದುರ್ಗಸಿಂಹನು ಕಟ್ಟಿಸಿದನಂತೆ, ಸಯ್ಯಡಿ ಇಂದು ಧಾರವಾಡ ಜಿಲ್ಲೆಯ ರೋಣ ತಾಲ್ಲೂಕಿನಲ್ಲಿದೆ.
ದುರ್ಗಸಿಂಹನು ಪದ್ಯಗಳು ಸೂಕ್ತಿ ಸುಧಾರ್ಣವದಲ್ಲಿ ದೊರಕುವುದರಿಂದ ದುರ್ಗಸಿಂಹನು ಕ್ರಿ.ಶ. ೧೧೩೯ ರಿಂದ ಕ್ರಿ.ಶ. ೧೧೪೯ರ ವರೆಗೆ ಆಳಿದ ಚಾಲುಕ್ಯ ಜಗದೇಕಮಲ್ಲನಲ್ಲಿ ಸಂಧಿವಿಗ್ರಹಿಯಾಗಿದ್ದಿರಬೇಕೆಂದೂ ಆದರಿಂದ ಇವನ ಕಾಲವು ಕ್ರಿ.ಶ.ಸು. ೧೧೪೫ ಆಗಿದ್ದಿರಬೇಕೆಂದೂ ಕವಿಚರಿತ್ರೆಯ ಪ್ರಥಮ ಸಂಪುಟದಲ್ಲಿ ಶ್ರೀ ಆರ್. ನರಸಿಂಹಾಚಾರ್ಯರು ನಿರ್ಣಯಿಸಿದ್ದರು. ಈ ಅಭಿಪ್ರಾಯವನ್ನೇ ಶ್ರೀ ಎಸ್. ಜಿ. ನರಸಿಂಹಾಚಾರ್ಯರ ಆವೃತ್ತಿಯ ಪೀಠಿಕೆಯಲ್ಲಿ ಉಲ್ಲೇಖಿಸಲಾಗಿದೆ. ಶ್ರೀ ರಾಜಪುರೋಹಿತರು ಒಂದನೆಯ ಜಗದೇಕಮಲ್ಲ ಜಯಸಿಂಹನ ಆಳ್ವಿಕೆಯ ಕಾಲದಲ್ಲಿ ಎಂದರೆ ಕ್ರಿ.ಶ. ೧೦೩೭-೧೦೪೨ರ ಅವಯಲ್ಲಿ ದುರ್ಗಸಿಂಹನು ತನ್ನ ಕೃತಿಯನ್ನು ರಚಿಸಿರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಡಾ.ರಂ. ಶ್ರೀ. ಮುಗಳಿಯವರು ಸು.ಕ್ರಿ.ಶ. ೧೦೩೦ ಎನ್ನುತ್ತಾರೆ. ಕರ್ಣಾಟಕ ಕವಿಚರಿತ್ರೆಯ ೧೯೬೧ರ ಪರಿಶೋತ ಮುದ್ರಣದಲ್ಲಿ ದುರ್ಗಸಿಂಹನ ಕಾಲವನ್ನು ಕ್ರಿ.ಶ. ಸು. ೧೦೨೫ ಎಂದು ಹೇಳಿದೆ.
ಪಂಚತಂತ್ರದ ಆರಾ ಪ್ರತಿಯಲ್ಲಿ ದೊರಕಿದ ಒಂದು ಪದ್ಯ ದುರ್ಗಸಿಂಹನ ಕಾಲ ನಿರ್ಣಯ ಮಾಡಲು ಸಹಕಾರಿಯಾಯಿತು. ಪದ್ಯ ಹಿಗಿದೆ :
ಅತಿ ಸಂಪನ್ನತೆವೆತ್ತ ಸದ್ಗೃಹನಿವಾಸಸ್ಥಾನಮಾದ ಪ್ರಜಾಪತಿ
ಸಂವತ್ಸರ ಚೆತ್ರಮಾಸಸಿತಪಕ್ಷ ದ್ವಾದಶೀ ತಾರಕಾ ಪತಿವಾರಂ
ಬರೆ ಪಂಚತಂತ್ರಮೆಸೆದತ್ತೀ ಧಾತ್ರಿಯೂಳ್ ದುರ್ಗನಿರ್ಮಿತಮುದ್ಯತ್
ಕವಿಶೇಖರ ಪ್ರಮದ ಲೀಲಾಪುಷ್ಥಿತಾಮ್ರದ್ರುಮಂ ||
ವಸುಭಾಗಭಟ್ಟ ಕೃತಿಯಂ
ವಸುಧಾದಿಪ ಹಿತಮನಖಿಲ ವಿಬುಧಸ್ತುತಮಂ
ಪೊಸತಾಗಿರೆ ವಿರಚಿಸುವೆಂ
ವಸುವ್ಮತಿಯೊಳ್ ಪಂಚತಂತ್ರಮಂ ಕನ್ನಡದಿಂ ||
ಈತನು ಪೂರ್ವಕವಿಗಳಲ್ಲಿ ವಾಲ್ಮೀಕಿ, ವ್ಯಾಸರನ್ನೂ ‘ನಾಭೇಯಂ ಸುರಾಮಾತ್ಯನಿಂದ್ರನದೀನಂದನನುದ್ದವಂ ಮನುವಿಶಾಲಕ್ಷೇಭದಂತಂ ಕುಬೇರನಜಾತಪ್ರಿಯಪುತ್ರ, ಎಂಬ ನೀತಿಶಾಸ್ತ್ರ ಪ್ರವರ್ತಕರನ್ನೂ, ಚಂದ್ರಗುಪ್ತನಿಗೆ ರಾಜ್ಯವನ್ನು ಸಂಪಾದಿಸಿಕೊಟ್ಟ ನೀತಿವಿದನಾದ ವಿಷ್ಣುಗುಪ್ತನನ್ನೂ, ಗುಣಾಡ್ಯ, ವರರುಚಿ, ಕಾಳಿದಾಸ, ಬಾಣ, ಮಯೂರ, ಧನಂಜಯ, ‘ವಾಮನಕುಮಾರನುದ್ಬಟ ಭೀಮಂಭವಭೂತಿ ಭಾರವೀ ಭಟ್ಟಿ ವಚಶ್ರೀಮಾಘ ರಾಜಶೇಖರ ಕಾಮಂದಕರು, ದಂಡಿ ಮೊದಲಾದ ಸಂಸ್ಕೃತ ಕವಿಗಳನ್ನು ಸ್ಮರಿಸಿರುವನು. ಕನ್ನಡದ ಕವಿಗಳಲ್ಲಿ ಶ್ರೀವಿಜಯ, ಕನ್ನಮಯ್ಯ, ಅಸಗ, ಮನಸಿಜ, ಚಂದ್ರ, ಪಂಪ, ಗಜಾಂಕುಶ, ಕವಿತಾವಿಲಾಸರನ್ನು ಸ್ಮರಿಸಿದ್ದಾನೆ. ತನ್ನ ಗ್ರಂಥವನ್ನು‘ ಕವಿ ಗಮಕಿ ವಾದಿ ವಾಗ್ಮಿಪ್ರವರ,ನಾದ ಶ್ರೀಮಾದಿರಾಜ ಮುನಿಪುಂಗವನ್ನು ತಿದ್ದಿದನೆಂದು ಹೇಳಿದ್ದಾನೆ.
ದುರ್ಗಸಿಂಹನು ತನ್ನ ಗುಣಾವಳಿಗಳನ್ನು ಹೀಗೆ ಹೇಳಿಕೊಂಡಿದ್ದಾನೆ: ನಿರ್ದುಷ್ಟವಾದ ನಡತೆಗೆ ಉದಾಹರಣನು, ಪ್ರಕಾಶಮಾನವಾದ ಕೀರ್ತಿಗೆ ಆಧಾರ, ಸ್ವಾಮಿ ಕಾರ್ಯಕ್ಕೆ ಹನುಮಂತ, ತನ್ನ ವಂಶಕ್ಕೆ ಅಲಂಕಾರರತ್ನ, ಸೆನ್ಯ ಸಮುದ್ರವನ್ನು ದಾಟುವುದರಲ್ಲಿ ಶೋಭಾಯಮಾನ, ಸಿದ್ದ ಇಷ್ಟ ಶಿಷ್ಟರ ಸಮೂಹಕ್ಕೆ ದೋಣಿ ಎಂದು ದುರ್ಗಸಿಂಹನನ್ನು ವಿದ್ವಜ್ಜನರು ಹೊಗಳುವರು. ವಿನಯಕ್ಕೆ ಆಶ್ರಯನು ಉತ್ತಮನೂ ಸತ್ಕುಲಸಂಭವನ ಸ್ವಾಮಿಕಾರ್ಯಧುರೀಣನೂ ಮನುಧರ್ಮದ ಮಾರ್ಗದಲ್ಲಿರುವವನೂ ಎಂದು ದುರ್ಗಸಿಂಹ ಪ್ರಸಿದ್ದನಲ್ಲವೇ, ಜ್ಞಾನಕ್ಕೆ ಆಶ್ರಯಸ್ಥಾನ, ಒಳ್ಳೆಯ ಗುಣಕ್ಕೆ ಕಣಿ, ಶ್ಮಚಿಗೆ ಆಧಾರ, ಜಾಣತನಕ್ಕೆ ದಿಣ್ಣೆ, ಒಳ್ಳೆಯ ಮಾತಿಗೆ ಒಡೆಯ, ಪರಾಕ್ರಮಕ್ಕೆ ಆಶ್ರಯ, ಸಾಮರ್ಥ್ಯಕ್ಕೆ ಆಟದ ಮನೆ, ಧರ್ಮಕ್ಕೆ, ಗುರಿ, ವಿನಯಕ್ಕೆ ತವರು ಮನೆ, ಸತ್ಯಕ್ಕೆ ಆಶ್ರಯಸ್ಥಾನ ಎಂದು ಬುದ್ದಿಗೆ ಮೀರಿ ಪ್ರೀತಿಸಿ ದುರ್ಗಸಿಂಹನನ್ನು ಪ್ರಪಂಚವು ಹೊಗಳುವುದು. ಚಂಚಲಚಿತ್ತರನ್ನು ದುಷ್ಟರನ್ನು, ಪಡೆದ ದೋಷಕ್ಕೆ ಪ್ರಾಯಶ್ಚಿತ್ತವೆಂಬ ಸರ್ವವಿದ್ವಜ್ಜನಆಶ್ರಯನಾದ ದುರ್ಗಸಿಂಹನನ್ನು ವಿ ಪಡೆದನು ವಿನಯ ಸಮುದ್ರ, ಶಿಷ್ಟಕಲ್ಪವೃಕ್ಷ, ಸತ್ಯವ್ರತ, ಬ್ರಾಹ್ಮಣವಂಶವೆಂಬ ಆಕಾಶಕ್ಕೆ ಸೂರ್ಯ, ವಾಗ್ವನಿತೆಯ ಮನೋರಮ, ಎಂದೆಷ್ಟೋ ರೀತಿಯಲ್ಲಿ ತನ್ನ ವಂಶದ ಕೀರ್ತಿಯೆಂಬ ದುರ್ಗಸಿಂಹನನ್ನು ಪ್ರಪಂಚ ಬಣ್ಣಿಸುವುದಂತೆ. ಜಗತ್ತಿನಲ್ಲಿ ಸ್ವಾಮಿಹಿತದಲ್ಲಿ ಪ್ರಸಿದ್ದನಾದ ಕರ್ಣನಿಗಿಂತ, ಹನುಮಂತನಿಗಿಂತ ಗರುಡನಿಗಿಂತ ದುರ್ಗಸಿಂಹನು ಇಮ್ಮಡಿ, ಮುಮ್ಮಡಿ, ನಾಲ್ಮಡಿ, ಐದುಮಡಿ ದೊಡ್ಡವನಂತೆ !
ಪರಮಾತ್ಮನು ಪರಮೇಶ್ವರ, ವಿಷ್ಣುವು ದೆವ, ಮಹಾಯೋಗಿಗಳಾದ ಶಂಕರಭಟ್ಟರು ಗುರುಗಳು, ಚೆನ್ನಾಗಿ ಘೋಷಿಸಿದವನು ಶ್ರೀ ಚೋಳಕಾಳಾನಲ ಎಂಬ ಬಿರುದುಳ್ಳ ರಾಜಶ್ರೇಷ್ಟನೂ, ಚಕ್ರವರ್ತಿತಿಲಕನ್ನೂ ಚೆನ್ನಾಗಿ ಸೊಕ್ಕಿದ ವೆರಿಗಳೆಂಬ ಆನೆಗಳಿಗೆ ಸಿಂಹಸ್ವರೂಪನೂ ಅದ ಜಗದೇಕಮಲ್ಲ ಜಯಸಿಂಹನು ಒಡೆಯನು ಎಂದ ಮೇಲೆ ದುರ್ಗಸಿಂಹನ ದೊಡ್ಡತನವನ್ನು ಏನೆಂದು ವರ್ಣಿಸಲಿ !
……………………………………………………………………………………………………………………………………………………….
ಡಾ.ತಿಪ್ಪೇರುದ್ರ ಸಂಡೂರು
ಕನ್ನಡದ ಪ್ರಸಿದ್ಧ ಚಂಪೂ ಕವಿಗಳಲ್ಲಿ ದುರ್ಗಸಿಂಹನೂ ಒಬ್ಬ. ಬಹುಪಾಲು ಗದ್ಯವನ್ನೇ ಬಳಸಿಕೊಂಡು ವಿಶಿಷ್ಟ ಚಂಪೂ ಶೈಲಿಯನ್ನು ಕನ್ನಡ ಸಾಹಿತ್ಯ ಪರಂಪರೆಗೆ ನೀಡಿದ ಪ್ರಮುಖ ಕವಿ. ಹತ್ತನೇ ಶತಮಾನದಲ್ಲಿ ಲೌಕಿಕ ಮತ್ತು ಆಗಮಿಕ ಕಾವ್ಯಗಳ ಮಾರ್ಗವನ್ನು ತುಳಿಯದೇ ತನ್ನದೇ ಆದ ದಾರಿಯನ್ನು ಸೃಷ್ಟಿಸಿಕೊಂಡವನು ದುರ್ಗಸಿಂಹ. ಈತ ರಚಿಸಿದ ಕೃತಿ ‘ಕರ್ನಾಟಕ ಪಂಚತಂತ್ರಂ’. ಇದು ಕನ್ನಡ ಸಾಹಿತ್ಯದ ಬಹು ಜನಪ್ರಿಯವಾದ ಕೃತಿ.
ಕರ್ಣಾಟಕದ ಕಿಸುಕಾಡು ನಾಡಿನ ಸಯ್ಯಡಿ ಎಂಬ ಅಗ್ರಹಾರದವನು ಎಂದು ಕವಿಯೇ ಹೇಳಿಕೊಂಡಿದ್ದಾನೆ. ಆ ಊರು ಈಗಿನ ಗದಗ ಜಿಲ್ಲೆಯ ರೋಣ ತಾಲೂಕಿನ ಸಯ್ಯಡಿ ಎಂದು ವಿದ್ವಾಂಸರು ಗುರುತಿಸಿದ್ದಾರೆ. ಈಶ್ವಾರಾರ್ಯ ಮತ್ತು ರೇವಾಂಬಿಕೆಯರ ಮಗನಾದ ದುರ್ಗಸಿಂಹನು ಚಾಲುಕ್ಯರ ದೊರೆ ಜಗದೇಕಮಲ್ಲ ಜಯಸಿಂಹನ ಆಸ್ಥಾನದಲ್ಲಿ ಸಂಧಿವಿಗ್ರಹಿಯಾಗಿದ್ದನು.
ದುರ್ಗಸಿಂಹನು ಬರೆದ ‘ಕರ್ನಾಟಕ ಪಂಚತಂತ್ರಂ’ ಕೃತಿಯನ್ನು ಮೊದಲ ಬಾರಿಗೆ ಎಸ್.ಜಿ.ನರಸಿಂಹಾಚಾರ್ ಹಾಗೂ ಮ.ಆ.ರಾಮನುಜಯ್ಯಂಗಾರ್ ಕ್ರಿ.ಶ.1898ರಲ್ಲಿ ಗ್ರಂಥಸಂಪಾದನೆ ಮೂಲಕ ಶಾಸ್ತ್ರೀಯವಾಗಿ ಸಂಪಾದಿಸಿದರು. ನಂತರ 1976ರಲ್ಲಿ ಗುಂಡ್ಮಿ ಚಂದ್ರಶೇಖರ ಐತಾಳರು ಇದರ ಗದ್ಯಾನುವಾದವನ್ನು ಮಾಡಿ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಕಟಗೊಳಿಸಿದರು.
‘ಕರ್ನಾಟಕ ಪಂಚತಂತ್ರಂ’ ಕೃತಿಯು ಹನ್ನೊಂದನೆಯ ಶತಮಾನದ ಪೂರ್ವಾರ್ಧದಲ್ಲಿ ರಚಿತವಾದ ಕನ್ನಡ ಸಾಹಿತ್ಯದ ಒಂದು ಉತ್ತಮ ಅನುವಾದ ಗ್ರಂಥವಾಗಿದ್ದು ಕೃತಿಯ ವಸ್ತು, ಕಥಾನಿರೂಪಣೆ, ಶೈಲಿ, ಭಾಷೆ, ಇತ್ಯಾದಿ ಅಂಶಗಳಿಂದ ಕನ್ನಡದ ಮಹತ್ವದ ಕೃತಿಗಳಲ್ಲಿ ಪ್ರಮುಖವಾದುದಾಗಿದೆ. ಪೈಶಾಚಿಕ ಭಾಷೆಯಲ್ಲಿ ರಚನೆಯಾಗಿದೆ ಎನ್ನಲಾದ ವಸುಭಾಗಭಟ್ಟನ ಪಂಚತಂತ್ರವು ದಾಕ್ಷಿಣಾತ್ಯ ಪಾಠಸಂಪ್ರದಾಯಕ್ಕೆ ಸೇರಿದ್ದು, ಇದನ್ನು ನಾನು ಅನುಸರಿಸಿದ್ದೇನೆಂದು ಈ ಕೆಳಕಂಡ ಪದ್ಯದಲ್ಲಿ ದುರ್ಗಸಿಂಹ ಹೇಳಿದ್ದಾನೆ.
ವಸುಭಾಗಭಟ್ಟ ಕೃತಿಯಂ
ವಸುಧಾಧಿಪತಿಮನಖಿಲವಿಭುಧಸ್ತುತಮಂ |
ಪೊಸತಾಗಿರೆ ವಿರಚಿಸುವೆಂ
ವಸುಮತಿಯೊಳ್ ಪಂಚತಂತ್ರಮಂ ಕನ್ನಡದಿಂ ||
ಪಂಚತಂತ್ರ ಹೆಸರೇ ಸೂಚಿಸುವಂತೆ ಭೇದ, ಪರೀಕ್ಷೆ, ವಿಶ್ವಾಸ, ವಂಚನೆ ಮತ್ತು ಮಿತ್ರ ಕಾರ್ಯ ಎಂಬ ಐದು ತಂತ್ರಗಳಿದ್ದು, ಅವು ಈ ಕೃತಿಗೆ ‘ಪಂಚತಂತ್ರ’ ಎಂಬ ಹೆಸರನ್ನೂ ಸಾರ್ಥಕಗೊಳಿಸಿವೆ. ಇಲ್ಲಿಯ ಕತೆಗಳು ಗದ್ಯಪದ್ಯ ಮಿಶ್ರಿತ ಚಂಪೂ ಶೈಲಿಯಲ್ಲಿವೆ. ‘ಕರ್ನಾಟಕ ಪಂಚತಂತ್ರಂ’ ಕೃತಿಯು 216 ಶ್ಲೋಕಗಳು, 448 ಕಂದ, ವೃತ್ತ ಪದ್ಯಗಳು ಹಾಗೂ ನಡುನಡುವೆ ಬರುವ ಗದ್ಯವಿರುವ 67 ಕಥೆಗಳನ್ನೊಳಗೊಂಡ ಮಧ್ಯಮಗಾತ್ರದ ಕೃತಿಯಾಗಿದ್ದು, ಪ್ರತಿಯೊಂದು ತಂತ್ರಕ್ಕೂ ‘ಒಂದು ಮುಖಕಥೆಯಿದ್ದು, ಅದರೊಳಗೆ ಅನೇಕ ಉಪಕಥೆಗಳು ಬಂದಿವೆ. ಪಶು, ಪಕ್ಷಿ, ಬ್ರಾಹ್ಮಣ, ಬೇಡ, ಮುನಿ, ರಾಜರನ್ನೊಳಗೊಂಡ ಈ ಕಥೆಗಳು ಆಕರ್ಷಕವೂ ನೀತಿ ಬೋಧಕವೂ ಆಗಿದ್ದು, ಓದುಗರ ಮನಸ್ಸನ್ನು ಆಕರ್ಷಿಸುತ್ತವೆ. ಪ್ರಾಣಿಪ್ರಪಂಚದ ಮೂಲಕ ರಾಜನೀತಿ, ವ್ಯವಹಾರ ನೀತಿಯನ್ನು ದುರ್ಗಸಿಂಹನು ಈ ಕೃತಿಯಲ್ಲಿ ತಿಳಿಸಿದ್ದಾನೆ.
ಜಂಬೂದ್ವೀಪದ ಭರತವರ್ಷದಲ್ಲಿ ದಾಕ್ಷಿಣಾಥ್ಯವೆಂಬ ಜನಪದ ಅಲ್ಲಿ ಸೌರೂಪ್ಯವೆಂಬ ಪುರದ ರಾಜ ಅಮರಶಕ್ತಿ. ಈತನಿಗೆ ಅನೇಕಶಕ್ತಿ, ವಸುಶಕ್ತಿ, ರುದ್ರಶಕ್ತಿ ಎಂಬ ಮೂವರು ಪುತ್ರರು. ಅಜ್ಞಾನಿಗಳಾದ ಇವರಿಗೆ ಐದು ತಂತ್ರಗಳನ್ನೊಳಗೊಂಡ ಕಥೆಗಳ ಮೂಲಕ ವಸುಭಾಗಭಟ್ಟರು ಜ್ಞಾನಿಗಳನ್ನಾಗಿ ಮಾಡಿದ ವಿವರವಿದೆ.
‘ಕರ್ನಾಟಕ ಪಂಚತಂತ್ರಂ’ ಕೃತಿಯಲ್ಲಿ ಭೇದ ಪ್ರಕರಣವು ಮೊದಲನೆಯದಾಗಿದ್ದು, ಅನೇಕ ಕಪಟೋಪಾಯಗಳಿಂದ ಆತ್ಮೀಯ ಸ್ನೇಹಿತರಲ್ಲಿ ಒಡಕನ್ನು ಹುಟ್ಟಿಸುವುದೇ ‘ಬೇಧ ತಂತ್ರ’. ಈ ಪ್ರಕರಣದಲ್ಲಿ ‘ಸಿಂಹ-ವೃಷಭದ ಸ್ನೇಹದ ಕಥೆ’ ಮುಖಕಥೆಯಾಗಿದ್ದು ಇದನ್ನೊಳಗೊಂಡಂತೆ ಒಟ್ಟು ಇಪ್ಪತ್ತೇಳು ಕಥೆಗಳಿವೆ. ಉಜ್ಜಯಿನಿಪುರದ ವರ್ಧಮಾನ ಎಂಬ ವ್ಯಾಪಾರಿಯು ಐಶ್ವರ್ಯ ಸಂಪಾದನೆಗೆಂದು ಸಂಜೀವಕ, ನಂದಕ ಎಂಬ ಹೆಸರಿನ ಎತ್ತುಗಳ ಬಂಡಿಯೊಂದಿಗೆ ಮಧುರಾಪುರಕ್ಕೆ ಹೋಗುತ್ತಾನೆ. ಸಂಪತ್ತು ಕ್ರೋಢೀಕರಿಸಿಕೊಂಡು ಹಿಂದಿರುಗುವಾಗ ದಾರಿಮಧ್ಯೆ ಬಸವಳಿದು ಸಂಜೀವಕ ಎತ್ತು ನಿಂತುಬಿಡುತ್ತದೆ.
ಕಾಡಿಗೆ ಮೃಗಾಧಿಪತಿಯಾಗಿದ್ದ ಪಿಂಗಳನೆಂಬ ಸಿಂಹವು ವಾಸವಾಗಿತ್ತು. ಆಹಾರಕ್ಕಾಗಿ ಅಲೆದಾಡುತ್ತಿರುವಾಗ ಎತ್ತಿನ ಸಿಡಿಲಿನಂತಹ ಧ್ವನಿಯನ್ನು ಕೇಳಿ, ಅದು ಹೆದರಿಕೊಂಡು ಹಿಂತಿರುಗಿತು. ಅದನ್ನು ನೋಡಿದ ಕರಟಕ, ದಮನಕ ಎಂಬೆರಡು ನರಿಗಳು, ಮೃಗೇಂದ್ರನಂತಿದ್ದ ಸಿಂಹವನ್ನು ಅಪಮಾನಿಸಿದವು.
ಬಂಡಿಯಲ್ಲಿನ ಸಂಪತ್ತಿನ ಕಾವಲಿಗೆಂದು ಆಳುಗಳನ್ನು ಇರಿಸಿದ್ದನು. ಅವರು ಕಾಡಿನಲ್ಲಿನ ಮೃಗಗಳಿಗೆ ಹೆದರಿ ಜೀವಭಯದಿಂದ ಸಂಜೀವಕ ಸತ್ತಿತು, ಅದಕ್ಕಾಗಿ ತಾವು ಹಿಂತಿರುಗಿ ಬಂದೆವು ಎಂದು ವರ್ಧಮಾನನಿಗೆ ಸುಳ್ಳು ಹೇಳಿದರು. ಕಾಡಿನಲ್ಲಿದ್ದ ಹುಲ್ಲು, ಯಮುನಾ ನದಿಯ ನೀರನ್ನು ಸೇವಿಸುತ್ತ ಸಂಜೀವಕ ಎತ್ತು ಚಂದ್ರಶೇಖರನ ನಂದಿಯಂತೆ ಬೆಳೆಯಿತು. ಅದೇ ಕಾಡಿಗೆ ಮೃಗಾಧಿಪತಿಯಾಗಿದ್ದ ಪಿಂಗಳನೆಂಬ ಸಿಂಹವು ವಾಸವಾಗಿತ್ತು. ಆಹಾರಕ್ಕಾಗಿ ಅಲೆದಾಡುತ್ತಿರುವಾಗ ಎತ್ತಿನ ಸಿಡಿಲಿನಂತಹ ಧ್ವನಿಯನ್ನು ಕೇಳಿ, ಅದು ಹೆದರಿಕೊಂಡು ಹಿಂತಿರುಗಿತು. ಅದನ್ನು ನೋಡಿದ ಕರಟಕ, ದಮನಕ ಎಂಬೆರಡು ನರಿಗಳು, ಮೃಗೇಂದ್ರನಂತಿದ್ದ ಸಿಂಹವನ್ನು ಅಪಮಾನಿಸಿದವು.
ಕಾಲಾಂತರದಲ್ಲಿ ಸಂಜೀವಕ ಎತ್ತಿಗೂ ಮತ್ತು ಪಿಂಗಳಕನೆಂಬ ಸಿಂಹಕ್ಕೂ ಉಂಟಾಗಿದ್ದ ಸ್ನೇಹವನ್ನು ಕೆಡಿಸುವ ಉಪಾಯವನ್ನು ದಮನಕ ನರಿಯು ಮಾಡಿ ಸೋಲುತ್ತದೆ. ಈ ಮುಖಕಥೆಯು ವಿರುದ್ಧ ಗುಣಗಳ ಎತ್ತು-ಸಿಂಹಗಳು ಸ್ನೇಹದ ಸೌಜನ್ಯವನ್ನು ಕೆಡಿಸಲು ಬಂದ ನರಿಯ ದಮನ ಬುದ್ಧಿಯನ್ನು ಅರಿತು, ಭೇದವನ್ನು ಮರೆತು ಒಂದಾಗಿ ಕಾಡಿನಲ್ಲಿ ವಾಸಿಸುತ್ತವೆ. ಮೊಲಂ ಸಿಂಹಮಂ ಕೊಂದ ಕಥೆ, ನಾಲ್ವರು ದೂರ್ತರು ಓರ್ವಬ್ರಾಹ್ಮಣನಂ ವಂಚಿಸಿದ ಕಥೆ, ಸೊಸೆಯಂ ಮಾತಂ ಕೇಳದತ್ತೆಯ ಕಥೆ, ದೇವದತ್ತನ ಕಥೆ ಮೊದಲಾದವುಗಳು ಭೇದ ತಂತ್ರದ ಆಶಯವನ್ನು ತಿಳಿಸುವ ಉಪಕಥೆಗಳಾಗಿವೆ.
‘ಪರೀಕ್ಷಾ ವ್ಯಾವರ್ಣನಂ’ ಎಂಬುವುದು ಎರಡನೆಯ ಪ್ರಕರಣವಾಗಿದೆ. ಅದರಲ್ಲಿ ಮುಖಕಥೆಯೊಂದಿಗೆ ಐದು ಉಪಕಥೆಗಳಿವೆ. ಯಾವ ವಿಚಾರವನ್ನು ಪರೀಕ್ಷಿಸದೆ ಸ್ವೀಕರಿಸಬಾರದೆಂಬುದನ್ನು ಬೋಧಿಸುವುದೇ ಪರೀಕ್ಷಾ ತಂತ್ರವಾಗಿದ್ದು, ಈ ಆಶಯವನ್ನು ಬ್ರಾಹ್ಮಣಂ ಮುಂಗುರಿಯಂ ಕೊಂದ ಕಥೆ, ಪರದನ ಕಥೆ, ವೃದ್ಧ ಗೌತಮಿಯ ಕಥೆಗಳು ಪ್ರತಿನಿಧಿಸುತ್ತವೆ.
ಕಾಗೆಗಳ ಕರ್ಕಶ ಸ್ವರವನ್ನು ಕೇಳಲಾಗದೇ, ಗೂಗೆಗಳು ಇರುಳಿನಲ್ಲಿ ಕಣ್ಣುಕಾಣದ ಕಾಗೆಗಳ ಮೇಲೆ ರಾತ್ರಿ ದಾಳಿಮಾಡಿ ನಾಶಮಾಡಿದವು. ಇರುಳಿನಲ್ಲಿ ಕಣ್ಣು ಕಾಣದ ಕಾಗೆಗಳು ಸೋತು ಸತ್ತವು.
‘ವಿಶ್ವಾಸ ಪ್ರಕರಣಂ’ ಎನ್ನುವ ಮೂರನೇ ಪ್ರಕರಣದಲ್ಲಿ ಮುಖ್ಯ ಕಥೆಯೊಂದಿಗೆ ಹದಿನಾಲ್ಕು ಉಪಕಥೆಗಳಿವೆ. ನಂಬದವರನ್ನು ನಂಬುವಂತೆ ಮಾತನಾಡಿ ಅವರ ಒಳಹೊಕ್ಕು ನಾಶಪಡಿಸುವುದೇ ‘ವಿಶ್ವಾಸ ತಂತ್ರ’ ಈ ಆಶಯವನ್ನು ‘ಗೂಗೆಗಳ ತುಂಬಿರ್ದ ಗುಹೆಯಂ ಕಾಗೆಗಳ್ ಸುಟ್ಟಕಥೆ’ಯು
ತಿಳಿಸುತ್ತದೆ. ಕಾಡಿನ ಮರವೊಂದರಲ್ಲಿದ್ದ ಕಾಗೆಗಳಿಗೆಲ್ಲಾ ಮೇಘವರ್ಣ ಎನ್ನುವುದು ಕಾಕವೃಂದಾರಕಪತಿಯಾಗಿತ್ತು. ಆ ಮರದ ಸಮೀಪದಲ್ಲಿದ್ದ ಗುಹೆಯೊಳಗಿನ ಗೂಗೆಗಳಿಗೆಲ್ಲಾ ಅರಿಮರ್ದನ ಎಂಬುದು ರಾಜನಾಗಿತ್ತು. ಕಾಗೆಗಳ ಕರ್ಕಶ ಸ್ವರವನ್ನು ಕೇಳಲಾಗದೇ, ಗೂಗೆಗಳು ಇರುಳಿನಲ್ಲಿ ಕಣ್ಣುಕಾಣದ ಕಾಗೆಗಳ ಮೇಲೆ ರಾತ್ರಿ ದಾಳಿಮಾಡಿ ನಾಶಮಾಡಿದವು. ಇರುಳಿನಲ್ಲಿ ಕಣ್ಣು ಕಾಣದ ಕಾಗೆಗಳು ಸೋತು ಸತ್ತವು.
ಅದಕ್ಕೆ ಪ್ರತಿದಾಳಿ ಮಾಡಲು ರಾಜ ಕಾಗೆ ಆಲೋಚಿಸಲು, ಒಂದು ಕಾಗೆ ಹೀಗೆನ್ನುತ್ತದೆ. ‘ನಾವಿರುಳಿನ ಕಾಳೆಗಕ್ಕಲ್ಲೆವು, ಅಂತುಮಲ್ಲದೆ ನಮ್ಮ ಬಲಮುಮಂ ಪಗೆವರ ಬಲಮುಮನರಿಯದೆ ಪೆರದೆಗೆದಿರ್ದೆವು’, ನಮ್ಮ ಬಲದೊಳ್ ಸೇನಾನಾಯಕಾದಿ ವೀರಾಗ್ರಣಿಗಳೆಲ್ಲಂ ಗೂಗೆಗಳ ಕೈಯೊಳಕಾರಣಂ ಸತ್ತರ್, ಕೆಲರ್ ತಳಲಸಂದರಳಿಯೆ ನೊಂದರ್ ಏತರ್ಕಂ ಕ್ಷಮರಲ್ಲದೆ ನಿಂದರ್. ಕಾಳಗಮೆಂಬುದು ಕಿಡದ ದೋಷಮನುಳ್ಳದು, ಪ್ರಧಾನಪುರುಷರುಂ ಕಿಡಿಸುವುದು ಎಂಬೀ ನೀತಿಯುಂಟು. ನೀವು ಸಹಿಷ್ಣುವಾಗಿ ಪಗೆಯಂ ಬಗೆಗೊಳೆ ಕಾದಿಕೊಲ್ಲುದೆಂದು ಭಿನ್ನಪಂಗೆಯ್ವುದುಂ’ ಎಂಬುವ ಮಾತುಗಳನ್ನು ಹೇಳುತ್ತದೆ. ಈ ಪ್ರಕರಣದಲ್ಲಿ ಬ್ರಹ್ಮರಾಕ್ಷಸನುಂ ತಸ್ಕರನುಂ ಕಥೆ, ಸತ್ತಪುಲಿಯನೆತ್ತಿದ ಗಾರುಡಿಗನ ಕಥೆಗಳು ಸಹೃದಯರ ಗಮನ ಸೆಳೆಯುತ್ತವೆ.
ತನಗೆ ವಂಚಿಸಿ, ಬಲೀಮುಖಿಯು ಹೆಂಡತಿಗೆ ಆಹಾರವಾಗಿಸುತ್ತದೆಂದು ಅರಿತ ಕಪಿಯು ಹೀಗೆ ಹೇಳುತ್ತದೆ. ‘ಕೋಡಗದೆರ್ದೆ ಕೊಂಬಿನ ಮೇಲೆ ಎಂಬುದು ಪ್ರಸಿದ್ಧಮಿದಂ,
ಈ ಕೃತಿಯ ನಾಲ್ಕನೇ ಭಾಗ ‘ವಂಚನಾ ಪ್ರಕರಣಂ’ ಎನ್ನುವುದರಲ್ಲಿ ಮುಖ್ಯ ಕಥೆಯೊಂದಿಗೆ ಎರಡು ಕಥೆಗಳಿವೆ. ಬೇರೆಯವರ ಮನಸ್ಸನ್ನು ತಿಳಿದುಕೊಂಡು ಸಂಧಾನದಿಂದ ಮೋಸ ಮಾಡುವುದೇ ‘ವಂಚನಾ ತಂತ್ರ’. ಈ ಆಶಯವನ್ನು ‘ಮೊಸಳೆಯಂ ಕಪಿ ವಂಚಿಸಿದ ಕಥೆ’ಯು ತಿಳಿಸುತ್ತದೆ. ಕೃಷ್ಣವರ್ಣನೆಂಬ ಕಪಿರಾಜನು ಸರೋವರ ತೀರದ ಅತ್ತಿಯ ಮರದಲ್ಲಿ ವಾಸವಾಗಿತ್ತು. ಅದೇ ಸರೋವರದಲ್ಲಿ ಕಕುದ್ಬಲಿ ಎನ್ನುವ ಮೊಸಳೆ ಕೂಡ ಇತ್ತು. ಒಂದು ದಿನ ಮುದಿ ಮಂಗಕ್ಕೆ ವಾನರನಾರಿಯರ ಆಸೆತೋರಿಸಿ, ಸರೋವರದೊಳಕ್ಕೆ ಮೊಸಳೆಯು ಕರೆದೊಯ್ಯುತ್ತಿರುತ್ತದೆ. ತನಗೆ ವಂಚಿಸಿ, ಬಲೀಮುಖಿಯು ಹೆಂಡತಿಗೆ ಆಹಾರವಾಗಿಸುತ್ತದೆಂದು ಅರಿತ ಕಪಿಯು ಹೀಗೆ ಹೇಳುತ್ತದೆ. ‘ಕೋಡಗದೆರ್ದೆ ಕೊಂಬಿನ ಮೇಲೆ ಎಂಬುದು ಪ್ರಸಿದ್ಧಮಿದಂ, ನೀ ಮುನ್ನಂ ಕೇಳ್ದರಿವುದಿಲ್ಲಕ್ಕುಮೆ ಪೇಳ್ದಯಪ್ಪೊಡೆ ಎನ್ನೆರ್ದೆಯನಾಗಳೆ ಕೊಂಡು ತರ್ಪನೆಂ ಅಲ್ಲದೆನ್ನ ಪ್ರಾಣಮುಂಎಂದಿತು. ಉಪಕಾರಕ್ಕೆ ಅಪಕಾರಗೈಯುವ ಮೊಸಳೆಯನ್ನು ವಂಚಿಸಿ, ತನ್ನ ಪ್ರಾಣವನ್ನು ಉಳಿಸಿಕೊಳ್ಳುವಲ್ಲಿ ಕಪಿಯು ಯಶಸ್ವಿಯಾಗುತ್ತದೆ. ಈ ಭಾಗದಲ್ಲಿ ಬರುವ ‘ನರಿಯಂ ಮಾತಂ ನಂಬಿ ಸತ್ತ ಬೆಳ್ಗತ್ತೆಯ ಕಥೆ’ಯು ವಂಚನಾ ತಂತ್ರದ ಆಶಯವನ್ನು ಬಹು ಸೊಗಸಾಗಿ ತಿಳಿಸುವ ಕಥೆಯಾಗಿದೆ.
‘ಮಿತ್ರಕಾರ್ಯ ಪ್ರಕರಣಂ’ವು ಈ ಕೃತಿಯ ಕೊನೆಯ ಪ್ರಕರಣವಾಗಿದ್ದು, ಎಲ್ಲರನ್ನು ಅತಿ ಸ್ನೇಹದಿಂದ ತನ್ನವರನ್ನಾಗಿ ಮಾಡಿಕೊಳ್ಳುವುದೇ ‘ಮಿತ್ರಕಾರ್ಯ ತಂತ್ರ’ವಾಗಿದೆ. ‘ಕಾಗೆಯುಂ ಆಮೆಯುಂ ಸಾರಂಗಮುಂ ಇಲಿಯುಂ ಕಥೆ’ಯು ಮುಖಕಥೆಯಾಗಿದ್ದು, ಇದಕ್ಕೆ ಪೂರಕವಾಗಿ ಐದು ಉಪಕಥೆಗಳಿವೆ. ಕಾಂಚೀಪಟ್ಟಣದ ಹೊರಭಾಗದ ಕಾಡಿನಲ್ಲಿ ಲಘುಪತಕನೆಂಬ ಕಾಗೆ, ಕಪೋತರಾಜನೆಂಬ ಚಿತ್ರಗ್ರೀವ (ಆಮೆ), ಹಿರಣ್ಯರೋಮನೆಂಬ ಮೂಷಿಕ (ಇಲಿ), ಸಾರಂಗಗಳು ವಾಸವಾಗಿವೆ. ಬೇಟೆಗಾರನಿಂದ ಒದಗಿದ ಸಂಕೋಲೆಯನ್ನು ಒಂದರ ಸಹಾಯದಿಂದ ಮತ್ತೊಂದು ಬದುಕುವ ಉಪಾಯವನ್ನು ಕಂಡುಕೊಳ್ಳುತ್ತವೆ. ಈ ಪ್ರಾಣಿ, ಪಕ್ಷಿಗಳು ತಮ್ಮ ಸಹಕಾರದ ಸ್ನೇಹಕಾರ್ಯದಿಂದ ಅವುಗಳನ್ನು ಹಿಡಿಯಲು ಬಂದ ಬೇಡನೊಬ್ಬನ ಬಲೆಯಿಂದ ಬಲೆಸಮೇತ ಹಾರಿಹೋಗುವ ಚಿತ್ರಣವಿದೆ. ಈ ಕಥೆಯು ಪ್ರಾಣಿ-ಪಕ್ಷಿಗಳ ನಡುವಣ ಗೆಳೆತನವನ್ನು ತಿಳಿಸುತ್ತದೆ.
ಒಟ್ಟಾರೆಯಾಗಿ, ದುರ್ಗಸಿಂಹನ ‘ಕರ್ನಾಟಕ ಪಂಚತಂತ್ರಂ’ ಕನ್ನಡ ಸಾಹಿತ್ಯದ ಉತ್ತಮ ಚಂಪೂ ಕೃತಿ ಮಾತ್ರವಲ್ಲ. ಅದೊಂದು ಉತ್ತಮ ನೀತಿ ಪ್ರತಿಪಾದಕ ಕಾವ್ಯವಾಗಿದೆ. ಸಂಸ್ಕೃತ ಪಂಚತಂತ್ರದ ಒಂದು ಪರಂಪರೆಯನ್ನು ಕನ್ನಡದಲ್ಲಿ ಮೊದಲಬಾರಿಗೆ ಪರಿಚಯ ಮಾಡಿಕೊಟ್ಟ ಕೀರ್ತಿ ದುರ್ಗಸಿಂಹನಿಗೆ ಸಲ್ಲುತ್ತದೆ.
……………………………………………………………………………………………………………………………………………………….
ಕಾವ್ಯ
ಈತನ ಪಂಚತಂತ್ರ ಚಂಪೂರೂಪದಲ್ಲಿದೆ. ಇದರಲ್ಲಿ ಐದು ತಂತ್ರಗಳಿವೆ. ಒಂದೊಂದು ತಂತ್ರಕ್ಕೂ ಒಂದೊಂದು ಅಧ್ಯಾಯವಿದೆ. ಮೊದಲನೆಯ ತಂತ್ರದಲ್ಲಿ ಭೇದ ಪ್ರಕರಣ ಎರಡನೆಯದರಲ್ಲಿ ಪರೀಕ್ಷಾ ವ್ಯಾವರ್ಣನೆ ಮೂರನೆಯದರಲ್ಲಿ ವಿಶ್ವಾಸ ಪ್ರಕರಣ ನಾಲ್ಕನೆಯದರಲ್ಲಿ ವಂಚನಾ ಪ್ರಕರಣ ಐದನೆಯದರಲ್ಲಿ ಮಿತ್ರಕಾರ್ಯ ವರ್ಣನೆ ಇವೆ.
ಒಂದನೆಯ ಪ್ರಕರಣದಲ್ಲಿ ಎತ್ತಿಗೂ ಸಿಂಹಕ್ಕೂ ಉಂಟಾದ ಗೆಳೆತನವನ್ನು ನರಿ ಮುರಿದ ಕಥೆಯನ್ನೂ ಎರಡನೆಯದರಲ್ಲಿ ಬ್ರಾಹ್ಮಣನೊಬ್ಬ ಮುಂಗುಸಿಯನ್ನು ಕೊಂದ ಕಥೆಯನ್ನೂ ಮೂರನೆಯದರಲ್ಲಿ ಕಾಗೆಗಳು ಗೂಬೆಗಳ ಗುಹೆಯನ್ನು ಸುಟ್ಟ ಕಥೆಯನ್ನೂ ನಾಲ್ಕನೆಯದರಲ್ಲಿ ಕಪಿ ಮೊಸಳೆಯನ್ನು ವಂಚಿಸಿದ ಕಥೆಯನ್ನೂ ಐದನೆಯದರಲ್ಲಿ ಕಾಗೆ, ಆಮೆ, ಸಾರಂಗ ಮತ್ತು ಇಲಿಗಳ ಸ್ನೇಹದ ಕಥೆಯನ್ನೂ ಕಾಣಬಹುದಾಗಿದೆ.
ಕಾವ್ಯದ ಆರಂಭದಲ್ಲಿ ಕವಿ ತ್ರಿಮೂರ್ತಿಗಳನ್ನೂ ಸರಸ್ವತಿ ಚಂದ್ರ ಮನ್ಮಥ ಸೂರ್ಯ ವಿನಾಯಕ ದುರ್ಗಿಯರನ್ನೂ ಸ್ತೋತ್ರ ಮಾಡಿದ್ದಾನೆ. ಅನಂತರ ವಾಲ್ಮೀಕಿ ವ್ಯಾಸ ನೀತಿಶಾಸ್ತ್ರಕಾರರು ಮತ್ತು ಚಂದ್ರಗುಪ್ತನಿಗೆ ರಾಜ್ಯವನ್ನು ಕೊಡಿಸಿದ ನೀತಿವಿದನಾದ ವಿಷ್ಣುಗುಪ್ತ-ಇವರುಗಳನ್ನು ಸ್ತುತಿಸಿದ್ದಾನೆ. ಗುಣಾಢ್ಯ ವರರುಚಿ ಕಾಳಿದಾಸ ಬಾಣ ಭಾರವಿ ಮೊದಲಾದ ಸಂಸ್ಕøತ ಕವಿಗಳನ್ನೂ ಶ್ರೀವಿಜಯ ಕನ್ನಮಯ್ಯ ಚಂದ್ರ ಪೊನ್ನ ಪಂಪ ಗಜಾಂಕುಶ ಕವಿತಾ ವಿಲಸ ಎಂಬ ಕನ್ನಡ ಕವಿಗಳನ್ನೂ ಸ್ಮರಿಸಿದ್ದಾನೆ. ಶ್ರೀ ಮಾದಿರಾಜ ಮುನಿಪುಂಗವರು ತನ್ನ ಗ್ರಂಥವನ್ನು ತಿದ್ದಿಕೊಟ್ಟರೆಂದೂ ಹೇಳಿದ್ದಾನೆ.
ಇದರಲ್ಲಿ 457 ಪದ್ಯಗಳೂ 230 ಶ್ಲೋಕಗಳೂ 48 ಉಪಕಥೆಗಳೂ ಇವೆ. ಚಂಪೂ ರೂಪದಲ್ಲಿದ್ದರೂ ಇದರಲ್ಲಿ ಗದ್ಯವೇ ಹೆಚ್ಚಾಗಿದೆ. ಇಲ್ಲಿ ಬರುವ ಕಥೆಗಳು ಮೃಗಪಕ್ಷಿಗಳಿಗೆ ಸಂಬಂಧಿಸಿದವು. ಇವು ಸ್ವಾರಸ್ಯವಾಗಿರುವುವಲ್ಲದೆ ರಾಜನೀತಿ ವ್ಯವಹಾರ ನೀತಿಗಳನ್ನೂ ಬೋಧಿಸುತ್ತವೆ. ಅಲ್ಲಲ್ಲೇ ಕವಿ ಸೊಗಸಾದ ಅಲಂಕಾರಗಳನ್ನು ಗಾದೆಗಳನ್ನೂ ಬಳಸಿದ್ದಾನೆ. ಈ ಕಥೆಗಳು ಕುತೂಹಲವನ್ನು ಕೆರೆಳಿಸುವಂತಿದ್ದು ಅಬಾಲವೃದ್ಧರಿಗೂ ಮನರಂಜಕವಾಗಿವೆ. ಬ್ರಾಹ್ಮಣ ಸಾಹಿತ್ಯದ ಪ್ರಾಚೀನ ಕವಿಗಳಲ್ಲಿ ದುರ್ಗಸಿಂಹ ಒಬ್ಬನಾಗಿರುವುದರ ಜೊತೆಗೆ ಪ್ರಸಿದ್ಧ ಕವಿಯೂ ಆಗಿದ್ದಾನೆ. ಅನಾಮಿಕ ಕವಿಯೊಬ್ಬನ ಪದ್ಯವೊಂದರಲ್ಲಿ ಈತನನ್ನು ಕನ್ನಡದ ಮಹಾಕವಿಗಳೊಡನೆ ಹೆಸರಿಸಿರುವುದು ಕಂಡುಬರುತ್ತದೆ. ಸೂಕ್ತಿ ಸುಧಾರ್ಣವವನ್ನು ರಚಿಸಿದ ಮಲ್ಲಿಕಾರ್ಜುನ ಈತನ ಗ್ರಂಥದಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆದಿರುವುದು ಈತನ ವಿದ್ವತ್ತಿಗೂ ಈತನಿಗಿದ್ದ ಕೀರ್ತಿಗೂ ಸಾಕ್ಷಿಯಾಗಿದೆ. ಸಾಹಿತ್ಯದ ಮೂಲಕ ಕನ್ನಡದಲ್ಲಿ ರಾಜತಂತ್ರವನ್ನೂ ವ್ಯವಹಾರ ನೀತಿಯನ್ನೂ ಬೋಧಿಸಲು ಹೊರಟ ಕವಿಗಳಲ್ಲಿ ದುರ್ಗಸಿಂಹ ಮೊತ್ತಮೊದಲಿಗ ಎನ್ನಬಹುದು.
ಕಥೆಗಳ ಪಟ್ಟಿ
- ಸುಕುಮಾರಸ್ವಾಮಿ ಕಥೆ : ಬೇರೆ ಬೇರೆ ಬವಾವಳಿ (ಜನ್ಮಾಂತರ) ಗಳನ್ನು ಎತ್ತಿ , ಹಲವಾರು ರೀತಿಯ ಅನುವ್ರತ ಗಳನ್ನು ಪೂರೈಸಿ ಕೊನೆಗೆ ಮೋಕ್ಷ ಪಡೆದ ವಾಯುಭೂತಿಯ ಕತೆ.
- ಸುಕೌಶಳಸ್ವಾಮಿ ಕಥೆ : ಪರ್ವತದ ಮೇಲೆ ಹುಲಿ ಕ್ರೋಧದಿಂದ ಕಿತ್ತು ತಿನ್ನುವುದನ್ನು ಸಹಿಸಿ ಮೋಕ್ಷ ಸಾಧಿಸಿದ ಕಥೆ.
- ಗಜಕುಮಾರನ ಕಥೆ : ಹೊಟ್ಟೆ ಅಡಿಯಾಗಿ ಮಲಗಿಸಿ ಚರ್ಮವನ್ನು ಸುಲಿದು, ಕಾದ ಕಬ್ಬಿಣದ ಮೊಳೆಗಳನ್ನು ಹೊಡೆದುದನ್ನು ಸಹಿಸಿದ ಕಥೆ.
- ಸನತ್ಕುಮಾರ ಚಕ್ರವರ್ತಿಯ ಕಥೆ : ನೂರಾರು ವರ್ಷ ಕಾಲ ಏಳು ನೂರು ವ್ಯಾಧಿಗಳನ್ನು ಸಹಿಸಿ ಸಮಾಧಿಮರಣ ಪಡೆದ ಕಥೆ.
- ಅಣ್ಣಿಕಾ ಪುತ್ರನ ಕಥೆ :ನದಿಯಲ್ಲಿ ನಾವೆ ಮುಳುಗುವಾಗಲೂ ಧ್ಯಾನಮಾಡಿ ಮೋಕ್ಷ ಪಡೆದ ಕಥೆ.
- ಭದ್ರಬಾಹು ಭಟ್ಟರರ ಕಥೆ : ಹಸಿವೆಯನ್ನು ಸಹಿಸಿ ರತ್ನತ್ರಯವನ್ನು ಸಾಧಿಸಿದ ಕಥೆ.
- ಲಲಿತಘಟೆಯ ಕಥೆ : ನದಿಯಲ್ಲಿ ಕೊಚ್ಚಿಹೋಗುವಾಗ ಲಲಿತ ಘಟೆ ಎಂಬ ಜನರ ಗುಂಪು ಧ್ಯಾನದಿಂದ ಅಹಮಿಂದ್ರ ಪದವಿ ಪಡೆದ ಕಥೆ.
- ಧರ್ಮ ಘೋಷ ಭಟ್ಟಾರನ ಕಥೆ : ನದಿಯ ತೀರದಲ್ಲಿ ಉಪವಾಸ ಮಾಡಿ ಬಾಯಾರಿಕೆಯನ್ನು ಗೆದ್ದು ಅಚ್ಚುತೇಂದ್ರನಾದ ಕಥೆ.
- ಸಿರಿದಿಣ್ಣ ಭಟ್ಟಾರರ ಕಥೆ : ಶೀತವಾತಗಳನ್ನು ಸಹಿಸಿ ರತ್ನತ್ರಯವನ್ನು ಸಾಧಿಸಿದ ಕಥೆ.
- ವೃಷಭಸೇನ ಭಟ್ಟಾರರ ಕಥೆ : ಕಾದ ಬಂಡೆಯ ಮೇಲೆ ಕುಳಿತು ಬಿಸಿಲು, ಬಿಸಿಗಾಳಿಗಳನ್ನು ಸಹಿಸಿ ಸದ್ಗತಿ ಸಾಧಿಸಿದ ಕಥೆ.
- ಕಾರ್ತಿಕ ಋಷಿಯ ಕಥ : ಶಕ್ತಿ ಆಯುಧದ ಇರಿತವನ್ನು ಸಹಿಸಿ ಆರಾಧನೆಯನ್ನು ಸಾಧಿಸಿದ ಕಥೆ.
- ಅಭಯಘೋಷನೆಂಬ ಮುನಿಯ ಕಥೆ : ಚಕ್ರಾಯುಧದ ಹೊಡೆತವನ್ನು ಸಹಿಸಿ ಇಂದ್ರನಾದ ಕಥೆ.
- ವಿದ್ಯುಚ್ಚೋರ ರಿಸಿಯ ಕಥೆ : ಭಯಂಕರ ಶಿಕ್ಷೆಗಳನ್ನು ಸಹಿಸಿ ಕೊನೆಗೆ ಮೋಕ್ಷ ಪಡೆದ ವಿದ್ಯುಚೋರ (ಕಳ್ಳನ) ಕತೆ.
- ಗುರುದತ್ತ ಭಟಾರನ ಕಥೆ : ಬೆಂಕಿಯ ವೇದನೆಯನ್ನು ಸಹಿಸಿ ಸದ್ಗತಿ ಸಾಧಿಸಿದ ಕಥೆ.
- ಚಿಲಾತಪುತ್ರನ ಕಥೆ: ಗಾಯಗಳಿಗೆ ಕಟ್ಟಿರುವೆಗಳು ಮುತ್ತಿ ತಿಂದುದನ್ನು ಸಹಿಸಿ ಅಹಮಿಂದ್ರನಾದ ಕಥೆ.
- ದಂಡಕ ರಿಸಿಯ ಕಥೆ : ಬಾಣ ನಾಟಿದನ್ನು ಸಹಿಸಿ ರತ್ನತ್ರಯ ಸಾಧಿಸಿದ ಕಥೆ.
- ಅಯ್ನೂರು ಋಷಿಗಳ ಕಥೆ : ಗಾಣಕ್ಕೆ ಹಾಕಿ ಹಿಂಸಿಸಿದನ್ನು ಸಹಿಸಿ ಸದ್ಗತಿ ಪಡೆದ ಕಥೆ.
- ಚಾಣಕ್ಯರಿಸಿಯ ಕಥೆ : ಗೊಬ್ಬರದ ರಾಶಿಯ ನಡುವೆ ಸುಟ್ಟುದನ್ನು ಸಹಿಸಿ ಕ್ಷಮೆ ಮೆರೆದು ಸದ್ಗತಿ ಪಡೆದ ಕಥೆ.
- ವೃಷಭಸೇನ ರಿಸಿಯ ಕಥೆ : ಸಜೀವ ದಹನವನ್ನು ಸಹಿಸಿ ರತ್ನತ್ರಯ ಸಾಧಿಸಿದ ಕಥೆ. ************************************************************************************************************
- ಸುಕುಮಾರಸ್ವಾಮಿಯ ಕಥೆ
- ಸುಕೌಶಳಸ್ವಾಮಿಯ ಕಥೆ
- ಗಜಕುಮಾರನ ಕಥೆ
- ಸನತ್ಕುಮಾರ ಚಕ್ರಚರ್ತಿಯ ಕಥೆ
- ಅಣ್ಣಿಕಾಪುತ್ರನ ಕಥೆ
- ಭದ್ರಬಾಹು ಭಟ್ಟಾರರ ಕಥೆ
- ಲಲಿತಘಟೆಯ ಕಥೆ
- ಧರ್ಮಘೋಷ ಭಟ್ಟಾರರ ಕಥೆ
- ಸಿರಿದಣ್ಣ ಭಟ್ಟಾರರ ಕಥೆ
- ವೃಷಭಸೇನ ಭಟ್ಟಾರರ ಕಥೆ
- ಕಾರ್ತಿಕ ಋಷಿಯ ಕಥೆ
- ಅಭಯಘೋಷ ಮುನಿಯ ಕಥೆ
- ವಿದ್ಯುಚ್ಚೋರನ ಕಥೆ
- ಗುರುದತ್ತ ಭಟ್ಟಾರರ ಕಥೆ
- ಚಿಲಾತಪುತ್ರನ ಕಥೆ
- ದಂಡಕನೆಂಬ ರಿಸಿಯ ಕಥೆ
- ಮಹೇಂದ್ರದತ್ತಾಚಾರ್ಯನ ಕಥೆ
- ಚಾಣಾಕ್ಯ ರಿಸಿಯ ಕಥೆ
- ವೃಷಭಸೇನ ರಿಸಿಯ ಕಥೆ
ಜಿ ಎಸ್ ಶಿವರುದ್ರಪ್ಪ -(ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ)(ಫೆಬ್ರುವರಿ ೭,೧೯೨೬ – ಡಿಸೆಂಬರ್ ೨೩, ೨೦೧೩) ಕನ್ನಡದ ಪ್ರಮುಖ ಕವಿಗಳಲ್ಲೊಬ್ಬರು. ಜೊತೆಗೆ ವಿಮರ್ಶಕ, ಸಂಶೋಧಕ, ನಾಟಕಕಾರ, ಉತ್ತಮ ಪ್ರಾಧ್ಯಾಪಕ, ಒಳ್ಳೆಯ ಆಡಳಿತ ಗಾರ. ಕುವೆಂಪು ಅವರ ಮೆಚ್ಚಿನ ಶಿಷ್ಯ. ಗೋವಿಂದ ಪೈ, ಕುವೆಂಪು ನಂತರ ಮೂರನೆಯ ರಾಷ್ಟ್ರಕವಿಯಾದವರು. ನವೆಂಬರ್ ೧,೨೦೦೬ ಸುವರ್ಣ ಕರ್ನಾಟಕ ರಾಜ್ಯೋತ್ಸವದಂದು ಶಿವರುದ್ರಪ್ಪನವರನ್ನು ರಾಷ್ಟ್ರಕವಿ ಎಂದು ಘೋಷಿಸಲಾಯಿತು
ಓದು/ವಿದ್ಯಾಭ್ಯಾಸ
- ಡಾ.ಜಿ.ಎಸ್.ಶಿವರುದ್ರಪ್ಪನವರು ಶಿವಮೊಗ್ಗಜಿಲ್ಲೆಯ ಶಿಕಾರಿಪುರದ ಹತ್ತಿರವಿರುವ ಈಸೂರು ಗ್ರಾಮದಲ್ಲಿ ಫೆಬ್ರುವರಿ ೭, ೧೯೨೬ ರಂದು ಜನಿಸಿದರು. ತಂದೆ ಶಾಂತವೀರಪ್ಪ ಅಲ್ಲಿನ ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ತಾಯಿ ವೀರಮ್ಮ.
- ತಂದೆಯಿಂದ ಸಾಹಿತ್ಯದ ಗೀಳು ಹತ್ತಿಸಿಕೊಂಡ ಶಿವರುದ್ರಪ್ಪನವರು ಹೊನ್ನಾಳಿ, ಕೋಟೆಹಾಳಗಳಲ್ಲಿ ಪ್ರಾಥಮಿಕ ಶಿಕ್ಷಣವನ್ನು, ರಾಮಗಿರಿ, ಬೆಲಗೂರುಗಳಲ್ಲಿ ಮಾಧ್ಯಮಿಕ ಶಿಕ್ಷಣವನ್ನು, ದಾವಣಗೆರೆ, ತುಮಕೂರುಗಳಲ್ಲಿ ಪ್ರೌಢಶಾಲಾ, ಇಂಟರ್ ಮೀಡಿಯಟ್ ಶಿಕ್ಷಣವನ್ನೂ ಮುಗಿಸಿದರು. ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಆನರ್ಸ್ (೧೯೪೯) ಪದವಿ ಪಡೆದರು.
- ಕೆಲಕಾಲ ದಾವಣಗೆರೆಯ ಡಿ.ಆರ್.ಎಮ್. ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದು ನಂತರ ಎಂ.ಎ. (೧೯೫೩) ಪ್ರ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿ ಮೂರು ಸುವರ್ಣ ಪದಕಗಳನ್ನು ಪಡೆದರು. ೧೯೫೫ರಲ್ಲಿ ಭಾರತ ಸರಕಾರದ ಸಂಶೋಧನಾ ಶಿಷ್ಯ ವೇತನದ ಸಹಾಯದಿಂದ ಕುವೆಂಪುರವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದರು. ಮೈಸೂರು ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ದೊರಕಿಸಿ ಕೊಟ್ಟ ಇವರ ಪ್ರೌಢ ಪ್ರಬಂಧ –ಸೌಂದರ್ಯ ಸಮೀಕ್ಷೆ. ಕುವೆಂಪುರವರ ಮೆಚ್ಚಿನ ಶಿಷ್ಯರಾಗಿ ಅವರ ಬರವಣಿಗೆ ಮತ್ತು ಜೀವನದಿಂದ ಪ್ರಭಾವಿತರಾಗಿದ್ದರು.
- ೧೯೬೩ರ ನವೆಂಬರ್ನಿಂದ ೨ ವರ್ಷಗಳ ಕಾಲ ಹೈದರಾಬಾದಿನ ಉಸ್ಮಾನಿಯಾ ವಿಶ್ವ ವಿದ್ಯಾಲಯದಲ್ಲಿ ಕನ್ನಡ ವಿಭಾಗದ ಉಪ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ೧೯೭೧ರ ನವೆಂಬರಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾದ ಅವರು, ಮುಂದೆ ಅದು “ಕನ್ನಡ ಅಧ್ಯಯನ ಕೇಂದ್ರ” ವಾಗಿ ಪರಿವರ್ತಿತವಾದಾಗ, ಅದರ ನಿರ್ದೇಶಕರೂ ಆದರು.
- ಹಸ್ತಪ್ರತಿಗಳ ಸಂಗ್ರಹಣೆ, ಅವುಗಳ ರಕ್ಷಣೆಗಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಶಿವರುದ್ರಪ್ಪನವರು ೧೯೭೧ರಲ್ಲಿ ಕನ್ನಡ ಅಧ್ಯಯನ ಕೇಂದ್ರದಲ್ಲಿ ‘ಹಸ್ತಪ್ರತಿ ವಿಭಾಗ’ ವನ್ನು ಪ್ರಾರಂಭಿಸಿದರು. ಕೇವಲ ೪ ವರ್ಷಗಳಲ್ಲಿ ೩೦೦೦ಕ್ಕೂ ಹೆಚ್ಚು ಓಲೆಗರಿಯ ಹಾಗೂ ೧೦೦೦ಕ್ಕೂ ಹೆಚ್ಚು ಕಾಗದದ ಹಸ್ತ ಪ್ರತಿಗಳ ಸಂಗ್ರಹಣೆಯಾಯಿತು. ತಾವು ಓದಿದ ಮೈಸೂರು ವಿಶ್ವವಿದ್ಯಾನಿಲಯದಲ್ಲೇ ೧೯೪೯ರಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿಯನ್ನು ಆರಂಭಿಸಿದರು.
- ೧೯೬೩ರಲ್ಲಿ ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದ ಆಹ್ವಾನದ ಮೇರೆಗೆ ರೀಡರ್ ಮತ್ತು ಕನ್ನಡ ವಿಭಾಗದ ಮುಖ್ಯಸ್ಥರಾಗಿ ೧೯೬೬ ರ ವರೆವಿಗೂ ಅಲ್ಲಿ ಸೇವೆ ಸಲ್ಲಿಸಿದರು. ೧೯೬೬ ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ ಹಾಗೂ ನಿರ್ದೇಶಕರಾಗಿ ಆಯ್ಕೆಯಾಗಿ ೧೯೮೭ ರವರೆವಿಗೂ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸೇವೆ ಸಲ್ಲಿಸಿದರು. ಅವರ ಕಾಲದಲ್ಲೇ ಕನ್ನಡ ವಿಭಾಗವು ಕನ್ನಡ ಅಧ್ಯಯನ ಕೇಂದ್ರವಾಯಿತು.
- ನಿವೃತ್ತಿಯ ನಂತರವೂ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಕುವೆಂಪು ಪೀಠ ದ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಗಣನೀಯ ಸೇವೆ ಸಲ್ಲಿಸಿರುತ್ತಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ, ರಾಜ್ಯ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿಯೂ ದುಡಿದಿದ್ದಾರೆ. ದೆಹಲಿಯ ರಾಷ್ಟ್ರೀಯ ಕವಿ ಸಮ್ಮೇಳನ, ತುಮಕೂರಿನ ಸಾಹಿತ್ಯ ಸಮ್ಮೇಳನ ದ ಕವಿಗೋಷ್ಠಿಯ ಅಧ್ಯಕ್ಷರಾಗಿ, ಮದರಾಸಿನ ಕನ್ನಡ ಸಮ್ಮೇಳನ ದ ಅಧ್ಯಕ್ಷರಾಗಿ, ೧೯೯೨ರಲ್ಲಿ ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಗೌರವಿಸಲ್ಪಟ್ಟಿದ್ದಾರೆ.
***********************************************************************************************************
ಜಿ.ಎಸ್.ಶಿವರುದ್ರಪ್ಪ ಅವರ ಕೃತಿಗಳು
ಕವನ ಸಂಕಲನಗಳ
- ಸಾಮಗಾನ
- ಚೆಲುವು-ಒಲವು
- ದೇವಶಿಲ್ಪ
- ದೀಪದ ಹೆಜ್ಜೆ
- ಅನಾವರಣ
- ತೆರೆದ ದಾರಿ
- ಗೋಡೆ
- ವ್ಯಕ್ತಮಧ್ಯ ಓರೆ ಅಕ್ಷರಗಳು
- ತೀರ್ಥವಾಣಿ
- ಕಾರ್ತಿಕ
- ಕಾಡಿನ ಕತ್ತಲಲ್ಲಿ
- ಚಕ್ರಗತಿ
- ಎದೆ ತುಂಬಿ ಹಾಡುವೆನು
ವಿಮರ್ಶೆ/ಗದ್ಯ
- ಪರಿಶೀಲನ
- ವಿಮರ್ಶೆಯ ಪೂರ್ವ ಪಶ್ಚಿಮ
- ಸೌಂದರ್ಯ ಸಮೀಕ್ಷೆ(ಇದು ಅವರ ಪಿಹೆಚ್ಡಿ ಮಹಾ ಪ್ರಬಂಧ)
- ಕಾವ್ಯಾರ್ಥ ಚಿಂತನ
- ಗತಿಬಿಂಬ
- ಅನುರಣನ
- ಪ್ರತಿಕ್ರಿಯೆ
- ಕನ್ನಡ ಸಾಹಿತ್ಯ ಸಮೀಕ್ಷೆ
- ಮಹಾಕಾವ್ಯ ಸ್ವರೂಪ
- ಕನ್ನಡ ಕವಿಗಳ ಕಾವ್ಯ ಕಲ್ಪನೆ
- ಹೊಸಗನ್ನಡ ಕವಿತೆಗಳಲ್ಲಿ ಕಾವ್ಯ ಚಿಂತನ
- ಕುವೆಂಪು : ಪುನರವಲೋಕನ
- ಸಮಗ್ರ ಗದ್ಯ ಭಾಗ ೧, ೨ ಮತ್ತು ೩
- ಬೆಡಗು
- ನವೋದಯ –
- ಕುವೆಂಪು-ಒಂದು ಪುನರ್ವಿಮರ್ಶೆ – ಕರ್ನಾಟಕ ಸರ್ಕಾರಕ್ಕೆ ಕುವೆಂಪು ಮೇಲೆ ಜೀವನಚರಿತ್ರೆಯ ಕೆಲಸ
ಪ್ರವಾಸ ಕಥನ
- ಮಾಸ್ಕೋದಲ್ಲಿ ೨೨ ದಿನ -(ಸೋವಿಯತ್ಲ್ಯಾಂಡ್ ನೆಹರೂ ಪ್ರಶಸ್ತಿ ಬಂದಿದೆ)
- ಇಂಗ್ಲೆಂಡಿನಲ್ಲಿ ಚತುರ್ಮಾಸ
- ಅಮೆರಿಕದಲ್ಲಿ ಕನ್ನಡಿಗ
- ಗಂಗೆಯ ಶಿಖರಗಳಲ್ಲಿ
ಜೀವನ ಚರಿತ್ರೆ
- ಕರ್ಮಯೋಗಿ (ಸಿದ್ದರಾಮನ ಜೀವನ ಚರಿತ್ರೆ)
ಪುರಸ್ಕಾರಗಳು
ಕ್ರಮ ಸಂಖ್ಯೆ | ಪ್ರಶಸ್ತಿ/ಪುರಸ್ಕಾರ | ವರ್ಷ |
---|---|---|
೧ | ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ (“ಮಾಸ್ಕೋದಲ್ಲಿ ೨೨ ದಿನ” ಪ್ರವಾಸ ಕಥನಕ್ಕೆ) | ೧೯೭೪ |
೨ | ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ | ೧೯೮೨ |
೩ | ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ ಹಾಗೂ ‘ಕಾವ್ಯಾರ್ಥ ಚಿಂತನ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ | ೧೯೮೪ |
೪ | ದಾವಣಗೆರೆಯಲ್ಲಿ ನಡೆದ ೬೧ನೇ ಅಖಿಲ-ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ | ೧೯೯೨ |
೫ | ಪ್ರೋ.ಭೂಸನೂರ ಮಠ ಪ್ರಶಸ್ತಿ ಮತ್ತು ಗೊರೂರು ಪ್ರಶಸ್ತಿ | ೧೯೯೭ |
೬ | ಪಂಪ ಪ್ರಶಸ್ತಿ | ೧೯೯೮ |
೭ | ಮಾಸ್ತಿ ಪ್ರಶಸ್ತಿ | ೨೦೦೦ |
೮ | ಹಂಪಿ ಕನ್ನಡ ವಿ.ವಿಯಿಂದ ನಾಡೋಜ ಗೌರವ ಡಾಕ್ಟರೇಟ್ | ೨೦೦೧ |
೯ | ಮೈಸೂರು ವಿ.ವಿಯಿಂದ ಗೌರವ ಡಿ.ಲಿಟ್ | ೨೦೦೪ |
೧೦ | ರಾಷ್ಟ್ರಕವಿ ಪುರಸ್ಕಾರ, ಅ.ನ.ಕೃ ನಿರ್ಮಾಣ್ ಪ್ರಶಸ್ತಿ | ೨೦೦೬ |
೧೧ | ಕುವೆಂಪು ವಿ.ವಿಯಿಂದ ಗೌರವ ಡಿ.ಲಿಟ್ | ೨೦೦೬ |
೧೨ | ಬೆಂಗಳೂರು ವಿ.ವಿಯಿಂದ ಗೌರವ ಡಿ.ಲಿಟ್ | ೨೦೦೭ |
೧೩ | ಕುವೆತ್ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದ ಅಧ್ಯಕ್ಷತೆ | ೨೦೦೭ |
೧೪ | ನೃಪತುಂಗ ಪ್ರಶಸ್ತಿ | ೨೦೧೦ |
ನಿಧನ
ಜಿ.ಎಸ್.ಶಿವರುದ್ರಪ್ಪನವರು 23 ಡಿಸೆಂಬರ್ 2013ರಂದು ತಮ್ಮ ಬನಶಂಕರಿಯ ನಿವಾಸದಲ್ಲಿ ನಿಧನರಾದರು. ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಅಂದು ಸ್ವರ್ಗಸ್ಥರಾದರು. ಜಿ.ಎಸ್.ಶಿವರುದ್ರಪ್ಪನವರ ಆಣತಿಯಂತೆಯೆ ಅವರ ದೇಹವನ್ನು ಮರಣಾನಂತರ ಮಣ್ಣು ಮಾಡದೆ ಸುಡಲಾಯಿತು. ಬೆಂಗಳೂರು ವಿ.ವಿ. ಸಮೀಪವಿರುವ ಕಲಾಗ್ರಾಮದಲ್ಲಿ ಅವರ ಅಂತ್ಯ ಸಂಸ್ಕಾರದ ವಿಧಿ ವಿಧಾನವನ್ನು ಸಕಲ ಸರ್ಕಾರಿ ಗೌರವ ಮರ್ಯಾದೆಯೊಂದಿಗೆ ದಿ. 24 ಡಿಸೆಂಬರ್ 2013ರಂದು ನೇರವೇರಿಸಲಾಯಿತು.
ಸಾಕ್ಷ ಚಿತ್ರ
ಕೊನೆಯ ಸಂದರ್ಶನ
ಪ್ರಸಿದ್ಧ ಭಾವಗೀತೆಗಳು
ಬೇಂದ್ರೆ ೧೮೯೬ನೆಯ ಇಸವಿ ಜನವರಿ ೩೧ ರಂದು ಜನಿಸಿದರು. ತಂದೆ ರಾಮಚಂದ್ರ ಭಟ್ಟ, ತಾಯಿ ಅಂಬಿಕೆ(ಅಂಬವ್ವ). ಬೇಂದ್ರೆಯವರ ಕಾವ್ಯನಾಮ ಅಂಬಿಕಾತನಯದತ್ತ. ಬೇಂದ್ರೆ ಮನೆತನದ ಮೂಲ ಹೆಸರು ಠೋಸರ. ವೈದಿಕ ವೃತ್ತಿಯ ಕುಟುಂಬ. ಒಂದು ಕಾಲಕ್ಕೆ ಸಾಂಗ್ಲಿ ಸಂಸ್ಥಾನಕ್ಕೆ ಸೇರಿದ್ದ ಗದಗ ಪಟ್ಟಣದ ಸಮೀಪದ ಶಿರಹಟ್ಟಿಯಲ್ಲಿ ಬಂದು ನೆಲೆಸಿದರು. ದ.ರಾ.ಬೇಂದ್ರೆ ಹನ್ನೊಂದು ವರ್ಷದವರಿದ್ದಾಗ ಅವರ ತಂದೆ ತೀರಿಕೊಂಡರು. ೧೯೧೩ರಲ್ಲಿ ಮೆಟ್ರಿಕ್ಯುಲೇಶನ್ ಮುಗಿಸಿದ ಬಳಿಕ ಬೇಂದ್ರೆ ಪುಣೆಯ ಕಾಲೇಜಿನಲ್ಲಿ ಓದಿ ೧೯೧೮ರಲ್ಲಿ ಬಿ.ಎ. ಮಾಡಿಕೊಂಡರು. ಹಿಡಿದದ್ದು ಅಧ್ಯಾಪಕ ವೃತ್ತಿ. ೧೯೩೫ರಲ್ಲಿ ಎಂ.ಎ. ಮಾಡಿಕೊಂಡು ಕೆಲಕಾಲ (೧೯೪೪ – ೧೯೫೬) ಸೊಲ್ಲಾಪುರದ ಡಿ.ಎ.ವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಬೇಂದ್ರೆಯವರು ೧೯೧೯ರಂದು ಹುಬ್ಬಳ್ಳಿಯಲ್ಲಿ ಲಕ್ಷ್ಮೀಬಾಯಿಯವರನ್ನು ವಿವಾಹವಾದರು; ಅವರ ಪ್ರಥಮ ಕಾವ್ಯ ಸಂಕಲನ “ಕೃಷ್ಣ ಕುಮಾರಿ”-ಯು ಆಗಲೇ ಪ್ರಕಟಿಸಲ್ಪಟ್ಟಿತ್ತು.
ಸಾಹಿತ್ಯ
ಸಾಹಿತ್ಯ ರಚನೆ ಅವರ ಮೊದಲ ಒಲವು. ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಕವಿತೆಗಳನ್ನು ಕಟ್ಟಿದರು. ೧೯೧೮ರಲ್ಲಿ ಅವರ ಮೊದಲ ಕವನ “ಪ್ರಭಾತ” ಎಂಬ ಪತ್ರಿಕೆಯಲ್ಲಿ ಪ್ರಕಟವಾಯಿತು. ಅಲ್ಲಿಂದಾಚೆಗೆ ಅವರು ಕಾವ್ಯ ರಚನೆ ಮಾಡುತ್ತಲೇ ಬಂದರು. “ಗರಿ”, “ಕಾಮಕಸ್ತೂರಿ “, “ಸೂರ್ಯಪಾನ”, “ನಾದಲೀಲೆ”, “ನಾಕುತಂತಿ” ಮೊದಲಾದ ಕವನ ಸಂಕಲನಗಳನ್ನು ಪ್ರಕಟಿಸಿದರು. ಇವರ ನಾಕುತಂತಿ ಕೃತಿಗೆ ೧೯೭೪ ಇಸವಿಯ ಕೇಂದ್ರ ಜ್ಞಾನಪೀಠ ಪ್ರಶಸ್ತಿ ಬಂದಿದೆ. ಕವಿತೆಗಳನ್ನಲ್ಲದೆ ನಾಟಕಗಳು, ಸಂಶೋಧನಾತ್ಮಕ ಲೇಖನಗಳು, ವಿಮರ್ಶೆಗಳನ್ನು ಬೇಂದ್ರೆ ಬರೆದಿದ್ದಾರೆ. ೧೯೨೧ರಲ್ಲಿ ಧಾರವಾಡದಲ್ಲಿ ಅವರು ಗೆಳೆಯರೊಡನೆ ಕಟ್ಟಿದ “ಗೆಳೆಯರ ಗುಂಪು” ಸಂಸ್ಥೆ ಅವರ ಸಾಹಿತ್ಯ ಚಟುವಟಿಕೆಗಳಿಗೆ ಇಂಬು ನೀಡಿತು.
ಬೇಂದ್ರೆ ವಿಶೇಷ.:
- ಆಗಿನ್ನೂ ಸ್ವಾತಂತ್ರ್ಯ ಚಳುವಳಿ ಬಿಸಿ ಏರಿದ್ದ ಸಮಯ. ಬೇಂದ್ರೆ ಯವರ “ಗರಿ” ಕವನ ಸಂಕಲನದಲ್ಲಿನ “ನರಬಲಿ” ಎಂಬ ಕವನವು ಆಗಿನ ಬ್ರಿಟಿಷ್ ಸರ್ಕಾರದ ಕೋಪಕ್ಕೆ ಕಾರಣವಾಯಿತು. ದೇಶಪ್ರೇಮಿಗಳೂ, ದೇಶಭಕ್ತರೂ ಆಗಿದ್ದ ಬೇಂದ್ರೆ ತಾವೂ ಚಳುವಳಿಯಲ್ಲಿ ಭಾಗವಹಿಸಿ ಕೆಲಕಾಲ ಸೆರೆಮನೆವಾಸ ಅನುಭವಿಸಿದರು. ಅವರು 1954ನೇ ಇಸವಿಯಲ್ಲಿ ತಯಾರಾದ ವಿಚಿತ್ರ ಪ್ರಪಂಚ ಎಂಬ ಚಿತ್ರಕ್ಕೆ ಸಾಹಿತ್ಯ ಹಾಗೂ ಗೀತೆಗಳನ್ನು ರಚಿಸಿದ್ದರೆಂದು ಆ ವರ್ಷದ ನವೆಂಬರ್ ತಿಂಗಳ ಚಂದಮಾಮ ಪತ್ರಿಕೆಯ ಜಾಹೀರಾತೊಂದು ತಿಳಿಸುತ್ತದೆ.
- ಉತ್ತಮ ವಾಗ್ಮಿಗಳಾಗಿದ್ದ ಬೇಂದ್ರೆಯವರ ಉಪನ್ಯಾಸಗಳೆಂದರೆ ಜನರಿಗೆ ಹಿಗ್ಗು. ಅವರ ಮಾತೆಲ್ಲ ಕವಿತೆಗಳೋಪಾದಿಯಲ್ಲಿ ಹೊರಹೊಮ್ಮುತ್ತಿದ್ದವು. ಕನ್ನಡದಲ್ಲಿಯೇ ಅಲ್ಲದೆ ಮರಾಠಿ ಭಾಷೆಯಲ್ಲೂ ಬೇಂದ್ರೆ ಕೆಲವು ಕೃತಿಗಳನ್ನು ರಚಿಸಿದರು.
- ಆಧ್ಯಾತ್ಮದ ವಿಷಯದಲ್ಲಿ ಅವರು ಒಲವು ಬೆಳೆಸಿಕೊಂಡಿದ್ದರು. ಅರವಿಂದರ ವಿಚಾರಗಳಲ್ಲಿ ಆಸಕ್ತಿ ತೋರಿದ ಅವರು ಅರವಿಂದರ ಕೃತಿಯನ್ನು ಇಂಗ್ಲೀಷಿನಿಂದ ಭಾಷಾಂತರ ಮಾಡಿಕೊಟ್ಟರು. ಜಾನಪದ ಧಾಟಿಯ ಅವರ ಎಷ್ಟೋ ಕವಿತೆಗಳನ್ನು ಗಾಯಕರು ಸುಶ್ರಾವ್ಯವಾಗಿ ಹಾಡಿದ್ದಾರೆ. ಅವರ ಕವಿತೆಗಳ ನಾದಮಾಧುರ್ಯ ಅಪಾರ.
- ಇವರು ಬರೆದ “ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ” ಇಂದಿಗೂ ಚಿಣ್ಣರ ಅತ್ಯಂತ ಪ್ರೀತಿಪಾತ್ರ ಕವನವಾಗಿದೆ.
- ಗಣಿತದ ಲೆಕ್ಕಾಚಾರ ಮಾಡುತ್ತ ಬಾಳೆಹಣ್ಣಿನ ಗೊನೆಯಲ್ಲಿ, ಹಲಸಿನ ಹಣ್ಣಿನ ಮುಳ್ಳುಗಳಲ್ಲಿ, ಜೇನುಗೂಡಿನಲ್ಲಿ, ನಿಮ್ಮ ಕಿರುಬೆರಳಿನ ಅಂಚಿಗಿಂತ ಚಿಕ್ಕದಾಗಿರುವ ಹೂವುಗಳಲ್ಲಿ, ಎಲ್ಲೆಲ್ಲೂ ಲೆಕ್ಕಾಚಾರವಿದೆ ಅನ್ನುತ್ತಾ ಕೊನೆ ಕೊನೆಗೆ ದ.ರಾ.ಬೇಂದ್ರೆಯವರು ಗಣಿತದ ಲೆಕ್ಕಾಚಾರದಲ್ಲೇ ಮುಳುಗಿದ್ದರು. ಇವರನ್ನು ಕನ್ನಡದ “ಕನ್ನಡದ ಠಾಗೋರ್” ಎಂದು ಕರೆಯಲಾಗುತ್ತದೆ. “ನಮನ” ಬೇಂದ್ರೆಯವರಿಗೆ ಸಂಖ್ಯೆಗಳು ಹೊಸ ಲೋಕವೊಂದನ್ನು ತೆರೆದಿದದ್ವವು. ಬೇಂದ್ರೆ ಮನಸಿಗೆ 441 ಹಾಗೂ ಹೃದಯಕ್ಕೆ 881 ಎಂದು ಸಂಖ್ಯೆ ನೀಡಿದ್ದರು
ಬೇಂದ್ರೆಯವರ ಸಾಹಿತ್ಯ
- ಧಾರವಾಡದಿಂದ ಪ್ರಕಟಗೊಳ್ಳುತ್ತಿದ್ದ ‘ಸ್ವಧರ್ಮ’ ಎನ್ನುವ ಪತ್ರಿಕೆಯಲ್ಲಿ. ಮೊದಲು ಪ್ರಕಟಗೊಂಡ ‘ಬೆಳಗು’ ಕವಿತೆಯು 1932ರಲ್ಲಿ ಪ್ರಕಟಗೊಂಡ ಬೇಂದ್ರೆಯವರ ಗರಿ ಸಂಕಲನದ ಮೊದಲ ಕವನವಾದ ‘ಗರಿ’ ಸಂಕಲನದಲ್ಲಿದೆ. ಅದರಲ್ಲಿ ಮೊದಲ ಕವನವಾದ ಈ ಕವಿತೆಯು ರಚನೆಗೊಂಡದ್ದು 1919ರಲ್ಲಿ.
ಕವನ ಸಂಕಲನ
(ಪ್ರಥಮ ಆವೃತ್ತಿಯ ವರ್ಷದೊಂದಿಗೆ) ಅಂಬಿಕಾತನಯದತ್ತರ ಸಮಗ್ರ ಕಾವ್ಯ ೬ ಸಂಪುಟಗಳು
- ೧೯೨೨: ಕೃಷ್ಣಾಕುಮಾರಿ;
- ೧೯೩೨: ಗರಿ;
- ೧೯೩೪: ಮೂರ್ತಿ ಮತ್ತು ಕಾಮಕಸ್ತೂರಿ;
- ೧೯೩೭: ಸಖೀಗೀತ;
- ೧೯೩೮: ಉಯ್ಯಾಲೆ;
- ೧೯೩೮: ನಾದಲೀಲೆ;
- ೧೯೪೩: ಮೇಘದೂತ (ಕಾಳಿದಾಸನ ಸಂಸ್ಕೃತ ಮೇಘದೂತದ ಕನ್ನಡ ಅವತರಣಿಕೆ)
- ೧೯೪೬: ಹಾಡುಪಾಡು;
- ೧೯೫೧: ಗಂಗಾವತರಣ;
- ೧೯೫೬: ಸೂರ್ಯಪಾನ;
- ೧೯೫೬: ಹೃದಯಸಮುದ್ರ;
- ೧೯೫೬: ಮುಕ್ತಕಂಠ;
- ೧೯೫೭: ಚೈತ್ಯಾಲಯ;
- ೧೯೫೭: ಜೀವಲಹರಿ;
- ೧೯೫೭: ಅರಳು ಮರಳು;
- ೧೯೫೮: ನಮನ;
- ೧೯೫೯: ಸಂಚಯ;
- ೧೯೬೦: ಉತ್ತರಾಯಣ;
- ೧೯೬೧: ಮುಗಿಲಮಲ್ಲಿಗೆ;
- ೧೯೬೨: ಯಕ್ಷ ಯಕ್ಷಿ;
- ೧೯೬೪: ನಾಕುತಂತಿ;
- ೧೯೬೬: ಮರ್ಯಾದೆ;
- ೧೯೬೮: ಶ್ರೀಮಾತಾ;
- ೧೯೬೯: ಬಾ ಹತ್ತರ;
- ೧೯೭೦: ಇದು ನಭೋವಾಣಿ;
- ೧೯೭೨: ವಿನಯ;
- ೧೯೭೩: ಮತ್ತೆ ಶ್ರಾವಣಾ ಬಂತು;
- ೧೯೭೭: ಒಲವೇ ನಮ್ಮ ಬದುಕು;
- ೧೯೭೮: ಚತುರೋಕ್ತಿ ಮತ್ತು ಇತರ ಕವಿತೆಗಳು;
- ೧೯೮೨: ಪರಾಕಿ;
- ೧೯೮೨: ಕಾವ್ಯವೈಖರಿ;
- ೧೯೮೩: ತಾ ಲೆಕ್ಕಣಕಿ ತಾ ದೌತಿ;
- ೧೯೮೩: ಬಾಲಬೋಧೆ;
- ೧೯೮೬: ಚೈತನ್ಯದ ಪೂಜೆ;
- ೧೯೮೭: ಪ್ರತಿಬಿಂಬಗಳು;
ವಿಮರ್ಶೆ
- ೧೯೪೦: ಸಾಹಿತ್ಯಸಂಶೋಧನೆ;
- ೧೯೪೫: ವಿಚಾರ ಮಂಜರಿ;
- ೧೯೫೪: ಕವಿ ಲಕ್ಷ್ಮೀಶನ ಜೈಮಿನಿಭಾರತಕ್ಕೆ ಮುನ್ನುಡಿ;
- ೧೯೫೯: ಮಹಾರಾಷ್ಟ್ರ ಸಾಹಿತ್ಯ;
- ಸಾಯೋ ಆಟ (ನಾಟಕ)
- ೧೯೬೨: ಕಾವ್ಯೋದ್ಯೋಗ;
- ೧೯೬೮: ಕನ್ನಡ ಸಾಹಿತ್ಯದಲ್ಲಿ ನಾಲ್ಕು ನಾಯಕರತ್ನಗಳು;
- ೧೯೭೪: ಸಾಹಿತ್ಯದ ವಿರಾಟ್ ಸ್ವರೂಪ;
- ೧೯೭೬: ಕುಮಾರವ್ಯಾಸ ಪುಸ್ತಿಕೆ;
ಪ್ರಶಸ್ತಿ, ಪುರಸ್ಕಾರ, ಬಿರುದು
- ೧೯೪೩ರಲ್ಲಿ ಶಿವಮೊಗ್ಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ.
- ೧೯೫೮ರಲ್ಲಿ ‘ಅರಳು ಮರಳು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
- ೧೯೬೪ರ ಮೈಸೂರು ದಸರಾ ಕಾರ್ಯಕ್ರಮದಲ್ಲಿ ಬೇಂದ್ರೆಯವರಿಗೆ ಸನ್ಮಾನ
- ೧೯೬೫ರಲ್ಲಿ ಮರಾಠಿಯಲ್ಲಿ ರಚಿಸಿದ “ಸಂವಾದ” ಎಂಬ ಕೃತಿಗೆ ಕೇಳ್ಕರ್ ಬಹುಮಾನ
- ೧೯೬೮ರಲ್ಲಿ ‘ಪದ್ಮಶ್ರೀ’ ಪ್ರಶಸ್ತಿ ಲಭಿಸಿತು
- ೧೯೭೩ರಲ್ಲಿ ‘ನಾಕುತಂತಿ’ ಕೃತಿಗೆ ಜ್ಞಾನಪೀಠಪ್ರಶಸ್ತಿ
- ಕಾಶಿ ವಿದ್ಯಾಪೀಠ, ವಾರಣಾಸಿ, ಮೈಸೂರು ಹಾಗೂ ಕರ್ನಾಟಕ ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟ್
- ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋಷಿಪ್ ಪಡೆದರು.
https://www.youtube.com/watch?gl=US&v=_xd4dflXvgo
ಜನಪ್ರೀಯ ಭಾವಗೀತೆಗಳು
ಬೇಂದ್ರೆ ೧೮೯೬ನೆಯ ಇಸವಿ ಜನವರಿ ೩೧ ರಂದು ಜನಿಸಿದರು. ತಂದೆ ರಾಮಚಂದ್ರ ಭಟ್ಟ, ತಾಯಿ ಅಂಬಿಕೆ(ಅಂಬವ್ವ). ಬೇಂದ್ರೆಯವರ ಕಾವ್ಯನಾಮ ಅಂಬಿಕಾತನಯದತ್ತ. ಬೇಂದ್ರೆ ಮನೆತನದ ಮೂಲ ಹೆಸರು ಠೋಸರ. ವೈದಿಕ ವೃತ್ತಿಯ ಕುಟುಂಬ. ಒಂದು ಕಾಲಕ್ಕೆ ಸಾಂಗ್ಲಿ ಸಂಸ್ಥಾನಕ್ಕೆ ಸೇರಿದ್ದ ಗದಗ ಪಟ್ಟಣದ ಸಮೀಪದ ಶಿರಹಟ್ಟಿಯಲ್ಲಿ ಬಂದು ನೆಲೆಸಿದರು. ದ.ರಾ.ಬೇಂದ್ರೆ ಹನ್ನೊಂದು ವರ್ಷದವರಿದ್ದಾಗ ಅವರ ತಂದೆ ತೀರಿಕೊಂಡರು. ೧೯೧೩ರಲ್ಲಿ ಮೆಟ್ರಿಕ್ಯುಲೇಶನ್ ಮುಗಿಸಿದ ಬಳಿಕ ಬೇಂದ್ರೆ ಪುಣೆಯ ಕಾಲೇಜಿನಲ್ಲಿ ಓದಿ ೧೯೧೮ರಲ್ಲಿ ಬಿ.ಎ. ಮಾಡಿಕೊಂಡರು. ಹಿಡಿದದ್ದು ಅಧ್ಯಾಪಕ ವೃತ್ತಿ. ೧೯೩೫ರಲ್ಲಿ ಎಂ.ಎ. ಮಾಡಿಕೊಂಡು ಕೆಲಕಾಲ (೧೯೪೪ – ೧೯೫೬) ಸೊಲ್ಲಾಪುರದ ಡಿ.ಎ.ವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಬೇಂದ್ರೆಯವರು ೧೯೧೯ರಂದು ಹುಬ್ಬಳ್ಳಿಯಲ್ಲಿ ಲಕ್ಷ್ಮೀಬಾಯಿಯವರನ್ನು ವಿವಾಹವಾದರು; ಅವರ ಪ್ರಥಮ ಕಾವ್ಯ ಸಂಕಲನ “ಕೃಷ್ಣ ಕುಮಾರಿ”-ಯು ಆಗಲೇ ಪ್ರಕಟಿಸಲ್ಪಟ್ಟಿತ್ತು.
ಸಾಹಿತ್ಯ
ಸಾಹಿತ್ಯ ರಚನೆ ಅವರ ಮೊದಲ ಒಲವು. ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಕವಿತೆಗಳನ್ನು ಕಟ್ಟಿದರು. ೧೯೧೮ರಲ್ಲಿ ಅವರ ಮೊದಲ ಕವನ “ಪ್ರಭಾತ” ಎಂಬ ಪತ್ರಿಕೆಯಲ್ಲಿ ಪ್ರಕಟವಾಯಿತು. ಅಲ್ಲಿಂದಾಚೆಗೆ ಅವರು ಕಾವ್ಯ ರಚನೆ ಮಾಡುತ್ತಲೇ ಬಂದರು. “ಗರಿ”, “ಕಾಮಕಸ್ತೂರಿ “, “ಸೂರ್ಯಪಾನ”, “ನಾದಲೀಲೆ”, “ನಾಕುತಂತಿ” ಮೊದಲಾದ ಕವನ ಸಂಕಲನಗಳನ್ನು ಪ್ರಕಟಿಸಿದರು. ಇವರ ನಾಕುತಂತಿ ಕೃತಿಗೆ ೧೯೭೪ ಇಸವಿಯ ಕೇಂದ್ರ ಜ್ಞಾನಪೀಠ ಪ್ರಶಸ್ತಿ ಬಂದಿದೆ. ಕವಿತೆಗಳನ್ನಲ್ಲದೆ ನಾಟಕಗಳು, ಸಂಶೋಧನಾತ್ಮಕ ಲೇಖನಗಳು, ವಿಮರ್ಶೆಗಳನ್ನು ಬೇಂದ್ರೆ ಬರೆದಿದ್ದಾರೆ. ೧೯೨೧ರಲ್ಲಿ ಧಾರವಾಡದಲ್ಲಿ ಅವರು ಗೆಳೆಯರೊಡನೆ ಕಟ್ಟಿದ “ಗೆಳೆಯರ ಗುಂಪು” ಸಂಸ್ಥೆ ಅವರ ಸಾಹಿತ್ಯ ಚಟುವಟಿಕೆಗಳಿಗೆ ಇಂಬು ನೀಡಿತು.
ಬೇಂದ್ರೆ ವಿಶೇಷ.:
- ಆಗಿನ್ನೂ ಸ್ವಾತಂತ್ರ್ಯ ಚಳುವಳಿ ಬಿಸಿ ಏರಿದ್ದ ಸಮಯ. ಬೇಂದ್ರೆ ಯವರ “ಗರಿ” ಕವನ ಸಂಕಲನದಲ್ಲಿನ “ನರಬಲಿ” ಎಂಬ ಕವನವು ಆಗಿನ ಬ್ರಿಟಿಷ್ ಸರ್ಕಾರದ ಕೋಪಕ್ಕೆ ಕಾರಣವಾಯಿತು. ದೇಶಪ್ರೇಮಿಗಳೂ, ದೇಶಭಕ್ತರೂ ಆಗಿದ್ದ ಬೇಂದ್ರೆ ತಾವೂ ಚಳುವಳಿಯಲ್ಲಿ ಭಾಗವಹಿಸಿ ಕೆಲಕಾಲ ಸೆರೆಮನೆವಾಸ ಅನುಭವಿಸಿದರು. ಅವರು 1954ನೇ ಇಸವಿಯಲ್ಲಿ ತಯಾರಾದ ವಿಚಿತ್ರ ಪ್ರಪಂಚ ಎಂಬ ಚಿತ್ರಕ್ಕೆ ಸಾಹಿತ್ಯ ಹಾಗೂ ಗೀತೆಗಳನ್ನು ರಚಿಸಿದ್ದರೆಂದು ಆ ವರ್ಷದ ನವೆಂಬರ್ ತಿಂಗಳ ಚಂದಮಾಮ ಪತ್ರಿಕೆಯ ಜಾಹೀರಾತೊಂದು ತಿಳಿಸುತ್ತದೆ.
- ಉತ್ತಮ ವಾಗ್ಮಿಗಳಾಗಿದ್ದ ಬೇಂದ್ರೆಯವರ ಉಪನ್ಯಾಸಗಳೆಂದರೆ ಜನರಿಗೆ ಹಿಗ್ಗು. ಅವರ ಮಾತೆಲ್ಲ ಕವಿತೆಗಳೋಪಾದಿಯಲ್ಲಿ ಹೊರಹೊಮ್ಮುತ್ತಿದ್ದವು. ಕನ್ನಡದಲ್ಲಿಯೇ ಅಲ್ಲದೆ ಮರಾಠಿ ಭಾಷೆಯಲ್ಲೂ ಬೇಂದ್ರೆ ಕೆಲವು ಕೃತಿಗಳನ್ನು ರಚಿಸಿದರು.
- ಆಧ್ಯಾತ್ಮದ ವಿಷಯದಲ್ಲಿ ಅವರು ಒಲವು ಬೆಳೆಸಿಕೊಂಡಿದ್ದರು. ಅರವಿಂದರ ವಿಚಾರಗಳಲ್ಲಿ ಆಸಕ್ತಿ ತೋರಿದ ಅವರು ಅರವಿಂದರ ಕೃತಿಯನ್ನು ಇಂಗ್ಲೀಷಿನಿಂದ ಭಾಷಾಂತರ ಮಾಡಿಕೊಟ್ಟರು. ಜಾನಪದ ಧಾಟಿಯ ಅವರ ಎಷ್ಟೋ ಕವಿತೆಗಳನ್ನು ಗಾಯಕರು ಸುಶ್ರಾವ್ಯವಾಗಿ ಹಾಡಿದ್ದಾರೆ. ಅವರ ಕವಿತೆಗಳ ನಾದಮಾಧುರ್ಯ ಅಪಾರ.
- ಇವರು ಬರೆದ “ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ” ಇಂದಿಗೂ ಚಿಣ್ಣರ ಅತ್ಯಂತ ಪ್ರೀತಿಪಾತ್ರ ಕವನವಾಗಿದೆ.
- ಗಣಿತದ ಲೆಕ್ಕಾಚಾರ ಮಾಡುತ್ತ ಬಾಳೆಹಣ್ಣಿನ ಗೊನೆಯಲ್ಲಿ, ಹಲಸಿನ ಹಣ್ಣಿನ ಮುಳ್ಳುಗಳಲ್ಲಿ, ಜೇನುಗೂಡಿನಲ್ಲಿ, ನಿಮ್ಮ ಕಿರುಬೆರಳಿನ ಅಂಚಿಗಿಂತ ಚಿಕ್ಕದಾಗಿರುವ ಹೂವುಗಳಲ್ಲಿ, ಎಲ್ಲೆಲ್ಲೂ ಲೆಕ್ಕಾಚಾರವಿದೆ ಅನ್ನುತ್ತಾ ಕೊನೆ ಕೊನೆಗೆ ದ.ರಾ.ಬೇಂದ್ರೆಯವರು ಗಣಿತದ ಲೆಕ್ಕಾಚಾರದಲ್ಲೇ ಮುಳುಗಿದ್ದರು. ಇವರನ್ನು ಕನ್ನಡದ “ಕನ್ನಡದ ಠಾಗೋರ್” ಎಂದು ಕರೆಯಲಾಗುತ್ತದೆ. “ನಮನ” ಬೇಂದ್ರೆಯವರಿಗೆ ಸಂಖ್ಯೆಗಳು ಹೊಸ ಲೋಕವೊಂದನ್ನು ತೆರೆದಿದದ್ವವು. ಬೇಂದ್ರೆ ಮನಸಿಗೆ 441 ಹಾಗೂ ಹೃದಯಕ್ಕೆ 881 ಎಂದು ಸಂಖ್ಯೆ ನೀಡಿದ್ದರು
ಬೇಂದ್ರೆಯವರ ಸಾಹಿತ್ಯ
- ಧಾರವಾಡದಿಂದ ಪ್ರಕಟಗೊಳ್ಳುತ್ತಿದ್ದ ‘ಸ್ವಧರ್ಮ’ ಎನ್ನುವ ಪತ್ರಿಕೆಯಲ್ಲಿ. ಮೊದಲು ಪ್ರಕಟಗೊಂಡ ‘ಬೆಳಗು’ ಕವಿತೆಯು 1932ರಲ್ಲಿ ಪ್ರಕಟಗೊಂಡ ಬೇಂದ್ರೆಯವರ ಗರಿ ಸಂಕಲನದ ಮೊದಲ ಕವನವಾದ ‘ಗರಿ’ ಸಂಕಲನದಲ್ಲಿದೆ. ಅದರಲ್ಲಿ ಮೊದಲ ಕವನವಾದ ಈ ಕವಿತೆಯು ರಚನೆಗೊಂಡದ್ದು 1919ರಲ್ಲಿ.
ಕವನ ಸಂಕಲನ
(ಪ್ರಥಮ ಆವೃತ್ತಿಯ ವರ್ಷದೊಂದಿಗೆ) ಅಂಬಿಕಾತನಯದತ್ತರ ಸಮಗ್ರ ಕಾವ್ಯ ೬ ಸಂಪುಟಗಳು
- ೧೯೨೨: ಕೃಷ್ಣಾಕುಮಾರಿ;
- ೧೯೩೨: ಗರಿ;
- ೧೯೩೪: ಮೂರ್ತಿ ಮತ್ತು ಕಾಮಕಸ್ತೂರಿ;
- ೧೯೩೭: ಸಖೀಗೀತ;
- ೧೯೩೮: ಉಯ್ಯಾಲೆ;
- ೧೯೩೮: ನಾದಲೀಲೆ;
- ೧೯೪೩: ಮೇಘದೂತ (ಕಾಳಿದಾಸನ ಸಂಸ್ಕೃತ ಮೇಘದೂತದ ಕನ್ನಡ ಅವತರಣಿಕೆ)
- ೧೯೪೬: ಹಾಡುಪಾಡು;
- ೧೯೫೧: ಗಂಗಾವತರಣ;
- ೧೯೫೬: ಸೂರ್ಯಪಾನ;
- ೧೯೫೬: ಹೃದಯಸಮುದ್ರ;
- ೧೯೫೬: ಮುಕ್ತಕಂಠ;
- ೧೯೫೭: ಚೈತ್ಯಾಲಯ;
- ೧೯೫೭: ಜೀವಲಹರಿ;
- ೧೯೫೭: ಅರಳು ಮರಳು;
- ೧೯೫೮: ನಮನ;
- ೧೯೫೯: ಸಂಚಯ;
- ೧೯೬೦: ಉತ್ತರಾಯಣ;
- ೧೯೬೧: ಮುಗಿಲಮಲ್ಲಿಗೆ;
- ೧೯೬೨: ಯಕ್ಷ ಯಕ್ಷಿ;
- ೧೯೬೪: ನಾಕುತಂತಿ;
- ೧೯೬೬: ಮರ್ಯಾದೆ;
- ೧೯೬೮: ಶ್ರೀಮಾತಾ;
- ೧೯೬೯: ಬಾ ಹತ್ತರ;
- ೧೯೭೦: ಇದು ನಭೋವಾಣಿ;
- ೧೯೭೨: ವಿನಯ;
- ೧೯೭೩: ಮತ್ತೆ ಶ್ರಾವಣಾ ಬಂತು;
- ೧೯೭೭: ಒಲವೇ ನಮ್ಮ ಬದುಕು;
- ೧೯೭೮: ಚತುರೋಕ್ತಿ ಮತ್ತು ಇತರ ಕವಿತೆಗಳು;
- ೧೯೮೨: ಪರಾಕಿ;
- ೧೯೮೨: ಕಾವ್ಯವೈಖರಿ;
- ೧೯೮೩: ತಾ ಲೆಕ್ಕಣಕಿ ತಾ ದೌತಿ;
- ೧೯೮೩: ಬಾಲಬೋಧೆ;
- ೧೯೮೬: ಚೈತನ್ಯದ ಪೂಜೆ;
- ೧೯೮೭: ಪ್ರತಿಬಿಂಬಗಳು;
ವಿಮರ್ಶೆ
- ೧೯೪೦: ಸಾಹಿತ್ಯಸಂಶೋಧನೆ;
- ೧೯೪೫: ವಿಚಾರ ಮಂಜರಿ;
- ೧೯೫೪: ಕವಿ ಲಕ್ಷ್ಮೀಶನ ಜೈಮಿನಿಭಾರತಕ್ಕೆ ಮುನ್ನುಡಿ;
- ೧೯೫೯: ಮಹಾರಾಷ್ಟ್ರ ಸಾಹಿತ್ಯ;
- ಸಾಯೋ ಆಟ (ನಾಟಕ)
- ೧೯೬೨: ಕಾವ್ಯೋದ್ಯೋಗ;
- ೧೯೬೮: ಕನ್ನಡ ಸಾಹಿತ್ಯದಲ್ಲಿ ನಾಲ್ಕು ನಾಯಕರತ್ನಗಳು;
- ೧೯೭೪: ಸಾಹಿತ್ಯದ ವಿರಾಟ್ ಸ್ವರೂಪ;
- ೧೯೭೬: ಕುಮಾರವ್ಯಾಸ ಪುಸ್ತಿಕೆ;
ಪ್ರಶಸ್ತಿ, ಪುರಸ್ಕಾರ, ಬಿರುದು
- ೧೯೪೩ರಲ್ಲಿ ಶಿವಮೊಗ್ಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ.
- ೧೯೫೮ರಲ್ಲಿ ‘ಅರಳು ಮರಳು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
- ೧೯೬೪ರ ಮೈಸೂರು ದಸರಾ ಕಾರ್ಯಕ್ರಮದಲ್ಲಿ ಬೇಂದ್ರೆಯವರಿಗೆ ಸನ್ಮಾನ
- ೧೯೬೫ರಲ್ಲಿ ಮರಾಠಿಯಲ್ಲಿ ರಚಿಸಿದ “ಸಂವಾದ” ಎಂಬ ಕೃತಿಗೆ ಕೇಳ್ಕರ್ ಬಹುಮಾನ
- ೧೯೬೮ರಲ್ಲಿ ‘ಪದ್ಮಶ್ರೀ’ ಪ್ರಶಸ್ತಿ ಲಭಿಸಿತು
- ೧೯೭೩ರಲ್ಲಿ ‘ನಾಕುತಂತಿ’ ಕೃತಿಗೆ ಜ್ಞಾನಪೀಠಪ್ರಶಸ್ತಿ
- ಕಾಶಿ ವಿದ್ಯಾಪೀಠ, ವಾರಣಾಸಿ, ಮೈಸೂರು ಹಾಗೂ ಕರ್ನಾಟಕ ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟ್
- ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋಷಿಪ್ ಪಡೆದರು.
https://www.youtube.com/watch?gl=US&v=_xd4dflXvgo
ಜನಪ್ರೀಯ ಭಾವಗೀತೆಗಳು
ಜೀವನ
ಬಾಲ್ಯ
ಕುವೆಂಪು ಅವರು ತಮ್ಮ ತಾಯಿಯ ತವರೂರಾದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹಿರೇಕೊಡಿಗೆ ಎಂಬಲ್ಲಿ ಡಿಸೆಂಬರ್ ೨೯, ೧೯೦೪ ರಲ್ಲಿ ಜನಿಸಿದರು. ತಂದೆ ವೆಂಕಟಪ್ಪಗೌಡ; ತಾಯಿ ಸೀತಮ್ಮ. ಅವರ ಬಾಲ್ಯ ತಮ್ಮ ತಂದೆಯ ಊರಾದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿ ಕಳೆಯಿತು.
ಶಿಕ್ಷಣ
ಕುವೆಂಪು ಅವರ ಆರಂಭಿಕ ವಿದ್ಯಾಭ್ಯಾಸ ಕೂಲಿಮಠದಲ್ಲಿ ಆಯಿತು. ಮಾಧ್ಯಮಿಕ ಶಿಕ್ಷಣ ತೀರ್ಥಹಳ್ಳಿಯಲ್ಲಿ ನಡೆಯಿತು. ನಂತರ ಮೈಸೂರಿನ ವೆಸ್ಲಿಯನ್ ಮಿಷನ್ ಹೈಸ್ಕೂಲಿನಲ್ಲಿ ತಮ್ಮ ಶಿಕ್ಷಣ ಮುಂದುವರಿಸಿದರು. ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎ. ಪದವಿಯನ್ನೂ, ಕನ್ನಡದಲ್ಲಿ ಎಂ. ಎ. ಪದವಿಯನ್ನೂ ಪಡೆದರು. ಟಿ. ಎಸ್. ವೆಂಕಣ್ಣಯ್ಯನವರು ಇವರಿಗೆ ಗುರುಗಳಾಗಿದ್ದರು.
ವೃತ್ತಿಜೀವನ
ಕುವೆಂಪು ಅವರು ಮೈಸೂರಿನ ಮಹಾರಾಜ ಕಾಲೇಜಿನ ಪ್ರಾಧ್ಯಾಪಕರೂ, ಪ್ರಾಂಶುಪಾಲರೂ ಆಗಿದ್ದರು. ನಂತರ ಉಪಕುಲಪತಿಗಳಾದರು. ತಮ್ಮ ಕಲ್ಪನೆಯ ಕೂಸಾದ ಮಾನಸ ಗಂಗೋತ್ರಿಯನ್ನು ಕಟ್ಟಿ ಬೆಳೆಸಿದರು. ವಿಶ್ವವಿದ್ಯಾನಿಲಯವನ್ನು ಅಧ್ಯಯನಾಂಗ, ಸಂಶೋಧನಾಂಗ ಹಾಗೂ ಪ್ರಸಾರಾಂಗ ಎಂಬುದಾಗಿ ವಿಭಾಗಿಸಿದರು. ಕಡಿಮೆ ಅವಧಿಯಲ್ಲಿ ಕನ್ನಡದಲ್ಲಿ ಪಠ್ಯಪುಸ್ತಕಗಳನ್ನು ಬರೆಸಿ ಕನ್ನಡ ಮಾಧ್ಯಮದ ತರಗತಿಗಳನ್ನು ಆರಂಭಿಸಿದರು.
ವೈವಾಹಿಕ ಜೀವನ
‘ಉದಯರವಿ’, ಒಂಟಿಕೊಪ್ಪಲ್, ಮೈಸೂರು
ಕುವೆಂಪು ಅವರು ಹೇಮಾವತಿ ಅವರನ್ನು ವಿವಾಹವಾದರು. ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ, ಇಂದುಕಲಾ ಹಾಗೂ ತಾರಿಣಿ ಅವರ ಮಕ್ಕಳು. ಪೂರ್ಣಚಂದ್ರ ತೇಜಸ್ವಿ ಅವರು ಕನ್ನಡದ ಅಗ್ರಮಾನ್ಯ ಸಾಹಿತಿಗಳಲ್ಲಿ ಒಬ್ಬರಾಗಿದ್ದಾರೆ. ಕೋಕಿಲೋದಯ ಚೈತ್ರ ಅವರು ಇಂಜಿನಿಯರ್ ಆಗಿ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ. ಚಿದಾನಂದಗೌಡ ಅವರು ಕುವೆಂಪು ಅವರ ಅಳಿಯ.
ನಿಧನ
ಕುವೆಂಪು ಅವರು ನವೆಂಬರ್ 11, 1994ರಂದು ಮೈಸೂರಿನಲ್ಲಿ ನಿಧನರಾದರು. ತಮ್ಮ ಹುಟ್ಟೂರಾದ ಕುಪ್ಪಳಿಯಲ್ಲಿ ಅವರ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು. ಕುಪ್ಪಳಿಯಲ್ಲಿರುವ ಅವರ ಸಮಾಧಿ ಒಂದು ಸ್ಮಾರಕವಾಗಿದೆ.
ಕೃತಿಗಳು
ಮಹಾಕಾವ್ಯ
- ಶ್ರೀ ರಾಮಾಯಣ ದರ್ಶನಂ(1949)
ಖಂಡಕಾವ್ಯಗಳು
- ಚಿತ್ರಾಂಗದಾ (1936)
ಕವನ ಸಂಕಲನಗಳು
- ಕೊಳಲು (1930)
- ಪಾಂಚಜನ್ಯ (1933)
- ನವಿಲು (1934)
- ಕಲಾಸುಂದರಿ (1934)
- ಕಥನ ಕವನಗಳು (1937)
- ಕೋಗಿಲೆ ಮತ್ತು ಸೋವಿಯಟ್ ರಷ್ಯಾ (1944)
- ಪ್ರೇಮ ಕಾಶ್ಮೀರ (1946)
- ಅಗ್ನಿಹಂಸ (1946)
- ಕೃತ್ತಿಕೆ (1946)
- ಪಕ್ಷಿಕಾಶಿ (1946)
- ಕಿಂಕಿಣಿ (ವಚನ ಸಂಕಲನ) (1946)
- ಷೋಡಶಿ (1946)
- ಚಂದ್ರಮಂಚಕೆ ಬಾ ಚಕೋರಿ (1957)
- ಇಕ್ಷುಗಂಗೋತ್ರಿ (1957)
- ಅನಿಕೇತನ (1963)
- ಜೇನಾಗುವ (1964)
- ಅನುತ್ತರಾ (1965)
- ಮಂತ್ರಾಕ್ಷತೆ (1966)
- ಕದರಡಕೆ (1967)
- ಪ್ರೇತಕ್ಯೂ (1967)
- ಕುಟೀಚಕ (1967)
- ಹೊನ್ನ ಹೊತ್ತಾರೆ (1976)
- ಕೊನೆಯ ತೆನೆ ಮತ್ತುವಿಶ್ವಮಾನವ ಸಂದೇಶ (1981)
ಕಥಾ ಸಂಕಲನ
- ಸಂನ್ಯಾಸಿ ಮತ್ತು ಇತರ ಕಥೆಗಳು (1936)
- ನನ್ನ ದೇವರು ಮತ್ತು ಇತರ ಕಥೆಗಳು (1940)
ಕಾದಂಬರಿಗಳು
- ಕಾನೂರು ಹೆಗ್ಗಡತಿ (1936)
- ಮಲೆಗಳಲ್ಲಿ ಮದುಮಗಳು (1967)
ನಾಟಕಗಳು
- ಯಮನ ಸೋಲು (1928)
- ಜಲಗಾರ (1928)
- ಬಿರುಗಾಳಿ (1930)
- ವಾಲ್ಮೀಕಿಯ ಭಾಗ್ಯ (1931)
- ಮಹಾರಾತ್ರಿ (1931)
- ಸ್ಶಶಾನ ಕುರುಕ್ಷೇತ್ರಂ (1931)
- ರಕ್ತಾಕ್ಷಿ (1933)
- ಶೂದ್ರ ತಪಸ್ವಿ (1944)
- ಬೆರಳ್ಗೆ ಕೊರಳ್ (1947)
- ಬಲಿದಾನ (1948)
- ಚಂದ್ರಹಾಸ (1963)
- ಕಾನೀನ (1974)
ಪ್ರಬಂಧ
- ಮಲೆನಾಡಿನ ಚಿತ್ರಗಳು (1933)
ವಿಮರ್ಶೆ
- ಕಾವ್ಯವಿಹಾರ (1946)
- ತಪೋನಂದನ (1950)
- ವಿಭೂತಿಪೂಜೆ (1953)
- ದ್ರೌಪದಿಯ ಶ್ರೀಮುಡಿ (1960)
- ರಸೋ ವೈ ಸಃ (1963)
- ಇತ್ಯಾದಿ (1970)
ಆತ್ಮಕಥೆ
- ನೆನಪಿನ ದೋಣಿಯಲ್ಲಿ: ಕುವೆಂಪು ಮದುವೆ ಪ್ರಸಂಗ
ಜೀವನ ಚರಿತ್ರೆಗಳು
- ಸ್ವಾಮಿ ವಿವೇಕಾನಂದ
- ರಾಮಕೃಷ್ಣ ಪರಮಹಂಸ
ಅನುವಾದ
- ಗುರುವಿನೊಡನೆ ದೇವರಡಿಗೆ (ಭಾಗ 1, 2) (1954)
- ಕೊಲಂಬೋ ಇಂದ ಆಲ್ಮೋರಕೆ
ಭಾಷಣ–ಲೇಖನ
- ಸಾಹಿತ್ಯ ಪ್ರಚಾರ (1930)
- ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ (1944)
- ಷಷ್ಠಿನಮನ (1964)
- ಮನುಜಮತ-ವಿಶ್ವಪಥ (1971)
- ವಿಚಾರ ಕ್ರಾಂತಿಗೆ ಆಹ್ವಾನ (1976)
ಶಿಶು ಸಾಹಿತ್ಯ
- ಅಮಲನ ಕಥೆ (1924)
- ಮೋಡಣ್ಣನ ತಮ್ಮ (ನಾಟಕ) (1926)
- ಹಾಳೂರು (1926)
- ಬೊಮ್ಮನಹಳ್ಳಿಯ ಕಿಂದರಿಜೋಗಿ (1928)
- ನನ್ನ ಗೋಪಾಲ (ನಾಟಕ) (1930)
- ನನ್ನ ಮನೆ (1946)
- ಮೇಘಪುರ (1947)
- ಮರಿವಿಜ್ಞಾನಿ (1947)
- ನರಿಗಳಿಗೇಕೆ ಕೋಡಿಲ್ಲ (1977)
ಇತರೆ
- ಜನಪ್ರಿಯ ವಾಲ್ಮೀಕಿ ರಾಮಾಯಣ
ಆಯ್ದ ಸಂಕಲನಗಳು
- ಕನ್ನಡ ಡಿಂಡಿಮ (1968)
- ಕಬ್ಬಿಗನ ಕೈಬುಟ್ಟಿ (1973)
- ಪ್ರಾರ್ಥನಾ ಗೀತಾಂಜಲಿ (1972)
ನುಡಿನಮನ
ಜ್ಞಾನಪೀಠ ಪ್ರಶಸ್ತಿ ಉಲ್ಲೇಖ
ಕುವೆಂಪು ಅವರು ಸಾಹಿತ್ಯ ಬೃಹನ್ಮೂರ್ತಿ; ಕಾವ್ಯಮೀಮಾಂಸೆಯ ಯಾವೂಂದು ಸರಳ ಸೂತ್ರವೂ ಅವರನ್ನು ಸಂಪೂರ್ಣವಾಗಿ ವಿವರಿಸಲಾರದು – ಏಕೆಂದರೆ, ಅವರ ಕೃತಿಗಳು ನಗ್ನ ಸತ್ಯವನೆಂತೊ ಅಂತೇ ಅತೀತ ಸತ್ಯವನ್ನೂ ಅನಾವರಣಗೊಳಿಸುತ್ತವೆ. ಸೃಜನಾತ್ಮಕ ಜೀವನಚರಿತ್ರೆ, ಸಾಹಿತ್ಯ ವಿಮರ್ಶೆ, ಕಾವ್ಯಮೀಮಾಂಸೆ, ನಾಟಕ ಮತ್ತು ಕತೆ ಕಾದಂಬರಿಯ ಕ್ಷೇತ್ರಗಳಿಗೆ ಪುಟ್ಟಪ್ಪನವರ ಕೊಡುಗೆ ಸ್ಮರಣೀಯವಾದುದು. ಅವರದು ವ್ಯಷ್ಠಿ ವಾಣಿಯಲ್ಲ; ಯುಗಧರ್ಮ, ಜನಾಂಗ ಧರ್ಮಗಳ ವಾಣಿ. ಅವರು ಬಹುಕಾಲ ತಮ್ಮ ಸಾಹಿತ್ಯದ ಮೂಲಕ ಚಿರಂಜೀವಿಯಾಗಿ ಇರುತ್ತಾರೆ.
ಬಿ.ಎಂ.ಶ್ರೀ.
ನೂರು ದೋಷಗಳಿದ್ದರೂ ಕಾವ್ಯವು ಕಾವ್ಯವೇ, ಒಂದು ತಪ್ಪಿಲ್ಲದಿದ್ದರೂ ಜೀವವಿಲ್ಲದ ಕಾವ್ಯ ಕಾವ್ಯವೇ ಅಲ್ಲ, ಪುಟ್ಟಪ್ಪನವರ ಉತ್ತಮ ಕವನಗಳಲ್ಲಿ ಈ ಜೀವವಿದೆ; ಇರುವುದರಿಂದಲೇ ಅವುಗಳಲ್ಲಿ ಅಮೃತತ್ವದ ಸಾರವಿದೆ.
ದ.ರಾ.ಬೇಂದ್ರೆ
ಯುಗದ ಕವಿಗೆ
ಜಗದ ಕವಿಗೆ
ಶ್ರೀ ರಾಮಾಯಣ ದರ್ಶನದಿಂದಲೇ ಕೈ
ಮುಗಿದ ಕವಿಗೆ – ಮಣಿಯದವರು ಯಾರು?
ರಾಮಕೃಷ್ಣ ವಚನೋದಿತ ಪ್ರತಿಭೆ ತೆರೆದ
ಕವನ ತತಿಗೆ ತಣಿಯದವರು ಆರು?
ಮಲೆನಾಡಿನ ಸೌಂದರ್ಯಕೆ ಕುಣಿದಾಡಿದ
ಕವಿಯ ಜತೆಗೆ ಕುಣಿಯದವರು ಆರು?
ಕನ್ನಡಿಸಲಿ ಶಿವ ಜೀವನ
ಮುನ್ನಡೆಸಲಿ ಯುವ-ಜನ-ಮನ
ಇದೆ ಪ್ರಾರ್ಥನೆ ನಮಗೆ
ತಮವೆಲ್ಲಿದೆ ರವಿಯಿದಿರಿಗೆ?
ಉತ್ತಮ ಕವಿ ನುಡಿ – ಚದುರಗೆ
ಚಾರುತ್ವದ ಕುಂದಣದಲಿ
ಚಾರಿತ್ರ್ಯದ ರತ್ನ
ಚಾತುರ್ಯದ ಮಂತಣದಲಿ
ಸತ್ಸಂಗದ ಯತ್ನ
ಇದೆ ತೃಪ್ತಿಯು ನಿಮಗೆ
ಸ.ಸ.ಮಾಳವಾಡ
ಹೊಸಗನ್ನಡ ಸಾಹಿತ್ಯವನ್ನು ಹಲವಂದದಲಿ ಸಿರಿವಂತಗೊಳಿಸಿದ ಧೀಮಂತ ಸಾಹಿತಿ ಕುವೆಂಪು. ಅವರು ಸಾಹಿತ್ಯ ಸೃಷ್ಟಿಯಲ್ಲಿ ಲೌಕಿಕ ಬಾಳಿನಲ್ಲಿ ಉನ್ನತ ಸ್ಥಾನ ಪಡೆದವರಾಗಿದ್ದಾರೆ. ಅವರು ಏಕಾಂತ ಜೀವಿ, ಧ್ಯಾನಶೀಲರು, ಭಾವಸಮಾಧಿಯಲ್ಲಿ ವಿರಮಿಸುವವರು. ಆದರೆ ಕನ್ನಡ ನಾಡು ನುಡಿಗಳ ಹಿತರಕ್ಷಣೆಗಾಗಿ ಸತತವೂ ಹೋರಾಟದಲ್ಲಿ ತೊಡಗಿದವರು. ಜನಸಂಪರ್ಕದಿಂದ ದೂರವುಳಿದರೂ ಜನ ಹಿತಕಾರ್ಯದಿಂದ ವಿಮುಖರಾಗಿಲ್ಲ. ಸನಿಹದಲ್ಲಿ ಅವರನ್ನು ಕಂಡಾಗ ಅವರು ಸ್ನೇಹಪರರು, ಕುಟುಂಬವತ್ಸಲರು ಎಂಬುದು ಸ್ಪಷ್ಟವಾಗಿ ತಿಳಿದುಬರುತ್ತದೆ.
ಡಿ.ಎಲ್.ನರಸಿಂಹಾಚಾರ್
ಪುಟ್ಟಪ್ಪನವರಂತೆ ಕಾವ್ಯವನ್ನು ಯಾರು ಬರೆಯಬಲ್ಲರು? ಅವರ ಕಾವ್ಯದಲ್ಲಿ ಕಾಣುವ ಮೃದು ಮಧುರ ಪದಬಂಧ, ಬಗೆಯ ಭಾವದ ಐಸಿರಿ, ಭಾವದ ರಸಪ್ರವಾಹ, ಕಾವ್ಯಾಲಂಕಾರ, ಉಕ್ತಿ ಚಮತ್ಕಾರಗಳ ವೈಭವವು ಸಹೃದಯರನ್ನು ರೋಮಾಂಚನಗೊಳಿಸಿ ಸಂತೋಷದ ಕಣ್ಣೀರನ್ನು ಕೋಡಿವರಿಸುತ್ತದೆ. ಪಾಶ್ಚಿಮಾತ್ಯ ಕಾವ್ಯ ವಿಮರ್ಶಕ ಮಾನದಂಡದಿಂದ ಅಳೆದು ನೋಡಿದರೂ ಪುಟ್ಟಪ್ಪನವರು ಮಹಾಕವಿಗಳಾಗಿ ತೇರ್ಗಡೆ ಹೊಂದುತ್ತಾರೆ.
ಹಾ.ಮಾ.ನಾಯಕ
ಆಧುನಿಕ ಕನ್ನಡ ಸಾಹಿತ್ಯದಲ್ಲಿ ಕುವೆಂಪು ಅವರ ಮಾಂತ್ರಿಕ ಲೇಖನಿ ಅಲಂಕರಿಸದ ಸಾಹಿತ್ಯ ಪ್ರಕಾರವಿಲ್ಲ. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಹೆಚ್ಚು ಕಡಿಮೆ ಒಂದೇ ಬಗೆಯಾದ ಯಶಸ್ಸನ್ನು ಗಳಿಸಿದ ಲೇಖಕರು ಯಾವುದೇ ಭಾಷೆಯಲ್ಲಾದರೂ ಹೆಚ್ಚಾಗಿ ಸಿಕ್ಕುವುದಿಲ್ಲ. ಆ ಬಗೆಯ ವಿರಳರ ಪಂಕ್ತಿಯಲ್ಲಿ ಕನ್ನಡದ ಕುವೆಂಪು ಒಬ್ಬರೆನ್ನುವುದು ಅಭಿಮಾನದ ಸಂಗತಿ.
ಸುಜನಾ
ಶ್ರೀ ಕುವೆಂಪು ದರ್ಶನದ ವೈಶಿಷ್ಟ್ಯ ಪರಂಪರೆ-ಯುಗ ಪ್ರಜ್ಞೆಗಳೆರಡರ ಸಮನ್ವಯದಿಂದ ಬಂದದ್ದು. ಈ ಅತಿಶಯ ಸಿದ್ಧಿ ಸಾಹಿತ್ಯಲೋಕದಲ್ಲಿ ವಿರಳ.
ಜಿ.ಎಸ್.ಶಿವರುದ್ರಪ್ಪ
ಕುವೆಂಪು ಅವರು ಮೂಲತಃ ಕ್ರಾಂತಿಕವಿ. ಸಾಮಾಜಿಕ ಅನ್ಯಾಯಗಳ ಬಗ್ಗೆ ಮೊದಲಿನಿಂದಲೂ ಇವರಷ್ಟು ನಿರ್ಭಯವಾಗಿ ಪ್ರತಿಭಟಿಸಿದ ಕನ್ನಡ ಕವಿ ಲೇಖಕರು ಇಲ್ಲವೇ ಇಲ್ಲ ಎಂದರೂ ಸಲ್ಲುತ್ತದೆ. ಉಚ್ಚ ವರ್ಣದ ಸಮಸ್ತ ಬೌದ್ಧಿಕ ಉಪಕರಣಗಳನ್ನು ಕೈವಶ ಮಾಡಿಕೊಂಡು, ಅವುಗಳನ್ನು ಉಪಯೋಗಿಸಿ ಉಚ್ಚವರ್ಣದ ಮೇಲೆ ಧಾಳಿ ಮಾಡಿದ್ದು, ಮತ್ತು ಅಪ್ರತಿಷ್ಠಿತ ವರ್ಗಕ್ಕೆ ಆತ್ಮಗೌರವನ್ನೂ, ಕೆಚ್ಚನ್ನೂ ತುಂಬುವುದರ ಜತೆಗೆ ಉಚ್ಚ ವರ್ಗದವರೊಂದಿಗೆ ಸಮಸ್ಪರ್ಧಿಯಾಗಿ ನಿಂತದ್ದು ಕುವೆಂಪು ಅವರ ಸಾಹಿತ್ಯಕ ಧೋರಣೆಯ ವಿಶೇಷತೆಯಾಗಿದೆ.
ದೇ.ಜ.ಗೌ
ಐದು ದಶಕಗಳಿಂದ ಶ್ರೀ ಕುವೆಂಪು ಸಾಹಿತ್ಯ ಕನ್ನಡ ನಾಡಿನ ಜನಮನವನ್ನು ತಣಿಸುತ್ತಾ, ಹುರಿದುಂಬಿಸುತ್ತಾ, ಹಸನುಗೊಳಿಸುತ್ತಿದೆ, ಅವರ ವಿಚಾರಶಕ್ತಿಯನ್ನು ಕೆರಳಿಸುತ್ತಾ, ನಿರಂಕುಶ ಮತಿತ್ವದ ಅವಶ್ಯಕತೆ, ಅನಿವಾರ್ಯತೆಯನ್ನು ನೆನಪಿಗೆ ತಂದುಕೊಡುತ್ತಿದೆ, ಅವರ ಬದುಕಿಗೊಂದು ತಾರಕಮಂತ್ರವಾಗಿ ಧ್ರುವತಾರೆಯಾಗಿ ಸಂಜೀವನಶಕ್ತಿಯಾಗಿ ಅದನ್ನು ತಿದ್ದುತ್ತಿದೆ, ಉನ್ನತಗೊಳಿಸುತ್ತಿದೆ, ಸಚೇತನಗೊಳಿಸುತ್ತಿದೆ, ಪುಷ್ಟಿಗೊಳಿಸುತ್ತಿದೆ. ಸಾವಿರಾರು ವರ್ಷಗಳಿಂದ ಭಾರತೀಯ ಧರ್ಮದ ಸುತ್ತ ಬೆಳೆದುಕೊಂಡು, ಅದರ ಮೂಲ ಸ್ವರೂಪವನ್ನು ಮರೆಸಿರುವ ಮೌಢ್ಯಗಳಿಗೆ ಶುಷ್ಕ ಚಾರಗಳಿಗೆ ಕಂದಾಚಾರದ ಸಂಪ್ರದಾಯಗಳಿಗೆ ಅಗ್ನಿ ಸಂಸ್ಕಾರ ಮಾಡುವಲ್ಲಿ, ಜಾತೀಯತೆಯನ್ನು ಸಾಧ್ಯವಾದಷ್ಟು ತೊಡೆಯುವಲ್ಲಿ, ಪುರೋಹಿತ ಹಾಗೂ ಸಾಮ್ರಾಜ್ಯಶಾಹಿಯನ್ನು ಅಂತ್ಯಗೊಳಿಸುವಲ್ಲಿ ಅದು ಯಶಸ್ವಿಯಾಗಿದೆ. ಭಾರತೀಯರ ಸುಖ ದುಃಖ, ಆಶೆ ಆಕಾಂಕ್ಷೆ, ಕನಸು ನನಸು ಗಳನ್ನು ಪ್ರತಿಬಿಂಬಿಸುವ ಮೂಲಕ ಅವರ ನಾಡಿಯನ್ನು ಮಿಡಿದಿದೆ.
ಕೀರ್ತಿನಾಥ ಕುರ್ತಕೋಟಿ
ಕುವೆಂಪು ಈ ತಲೆಮಾರಿನ ಹಿರಿಯ ಕವಿಗಳಲ್ಲೊಬ್ಬರಾಗಿದ್ದಾರೆ. ರಚನಾ ಕ್ರಮದಲ್ಲಿ ದೋಷಗಳನ್ನು ತೋರಿಸಬಹುದಾದರೂ ಅವರ ಕಾವ್ಯಶಕ್ತಿ ಸಹಜವಾದದ್ದು. ಅದು ಮುಖ್ಯವಾಗಿ ‘ರೊಮ್ಯಾಂಟಿಕ್’ ಜಾತಿಯ ಪ್ರತಿಭೆಯಾಗಿದ್ದರಿಂದ ಭಾವಾವೇಶ ಅಲ್ಲಿ ಅನಿವಾರ್ಯವಾಗುತ್ತದೆ. ಆದರೆ ಕುವೆಂಪು ರವರ ಕಾವ್ಯದ ಶ್ರೇಷ್ಠತೆಯಿರುವುದು ಅದು ಸಮಕಾಲೀನ ಜೀವನದ ಎಲ್ಲ ಅಂಶಗಳಿಗೂ ಪ್ರತಿಸ್ಪರ್ಧಿಯಾಯಿತೆಂಬುದೇ. ನಿಸರ್ಗದ ಚೆಲುವು, ದೇಶ ಪ್ರೇಮ, ಆದರ್ಶಪ್ರಿಯತೆ, ಕ್ರಾಂತಿಯ ವೀರಭಾವ, ಆಧ್ಯಾತ್ಮಿಕತೆ ವೊದಲಾದ ಎಲ್ಲ ವಿಷಯಗಳಿಗೂ ಅವರ ಕಾವ್ಯ ಇಂಬುಕೊಟ್ಟಿದೆ. ಹೀಗಾಗಿ ಹೊಸಗನ್ನಡ ಕಾವ್ಯದ ಇತಿಹಾಸದಲ್ಲಿ ಅವರ ಸ್ಥಾನ ಭದ್ರವಾಗಿದೆಯೆಂಬುದರಲ್ಲಿ ಯಾವ ಸಂಶಯವೂ ಇಲ್ಲ.
ಕೋ.ಚೆನ್ನಬಸಪ್ಪ
ಮೊದಲಿನಿಂದಲೂ ಪುಟ್ಟಪ್ಪನವರ ಪ್ರಮುಖ ಪ್ರವೃತ್ತಿ, ಪ್ರಥಮ ಆಸಕ್ತಿ ಅಧ್ಯಾತ್ಮ. ಅವರು ಜನ್ಮ ತಾಳಿದ್ದು ಇತರ ಕೋಟ್ಯಂತರ ಜನರಂತೆ ಸುಮ್ಮನೆ ಬದುಕಿ, ಬಾಳಿ ಹೋಗಲಿಕ್ಕಲ್ಲ ಎಂಬ ಆತ್ಮ ಪ್ರತ್ಯಯ – ಆತ್ಮಜ್ಞಾನ – ಪುಟ್ಟಪ್ಪನವರಿಗೆ ಚಿಕ್ಕಂದಿನಿಂದಲೇ ಉಂಟಾಗಿತ್ತು. ಆದ್ದರಿಂದ ಮಾನವ ಜನ್ಮೋದ್ದೇಶವಾದ ಆತ್ಮಸಾಕ್ಷಾತ್ಕಾರವೇ ಅವರ ಬಾಳ ಗುರಿ; ಜೀವನೋದ್ದೇಶದ ಆದಿ ಅಂತ್ಯ. ಅವರಿಗೆ ಜೀವನದಲ್ಲಿ ಮತ್ತಾವ ಉಪಾಧಿಗಳೂ ಇರಲಿಲ್ಲ. ಇಂಥ ಅವರ ಜೀವನೋದ್ದೇಶಕ್ಕೆ ನೆರವಾದುದು ಅವರ ಕಾವ್ಯಶಕ್ತಿ. ಅದನ್ನವರು ಎಂದೂ ಮರೆಮಾಚಿಲ್ಲ. ಆದರೂ ಕನ್ನಡ, ಕರ್ನಾಟಕ ಅವರ ಜೀವದ ಎರಡು ಶ್ವಾಸಕೋಶಗಳು. ಆ ಶ್ವಾಸಕೋಶಗಳ ಚಲನೆ ನಿಂತರೆ ಅವರ ಬಾಳುಸಿರೇ ನಿಂತಂತೆ.
ಕೆ. ಸಚ್ಚಿದಾನಂದನ್
ಕುವೆಂಪು ಕೇವಲ ಕರ್ನಾಟಕದವರಲ್ಲ, ಭಾರತದ ಮಹಾ ಲೇಖಕ. ಅವರ ‘ರಾಮಾಯಣ ದರ್ಶನಂ’ ಆಧುನಿಕ ಭಾರತೀಯ ಸಾಹಿತ್ಯದ ಶ್ರೇಷ್ಠ ಕೃತಿ. ಇಲ್ಲಿ ಬರುವ ರಾಮ, ಸೀತೆ ಯೊಂದಿಗೆ ಅಗ್ನಿ ಪ್ರವೇಶ ಮಾಡುತ್ತಾನೆ. ಎಲ್ಲೆಡೆ ಮಹಿಳೆಯ ಮೇಲೆ ದೌರ್ಜನ್ಯ, ಹಿಂಸೆಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ ಕುವೆಂಪು ಕಟ್ಟಿಕೊಟ್ಟ ಈ ಚಿತ್ರಣ ಪ್ರಸ್ತುತ ಮತ್ತು ಆದರ್ಶ. ಅವರ ಶೂದ್ರ ತಪಸ್ವಿ ನಾಟಕ, ಶೋಷಣೆ ಮತ್ತು ತಾರತಮ್ಯದ ವರ್ಣ ನೀತಿಗೆ ಮುಖಾಮುಖಿಯಾದ ನಾಟಕ. ಸಾರ್ವಕಾಲಿಕ ಕಾವ್ಯ ಮೀಮಾಂಸೆಯ ಅಧ್ವರ್ಯುಗಳಲ್ಲಿ ಕುವೆಂಪು ಒಬ್ಬರು. ತಾವು ನಂಬಿದ ಕಾವ್ಯ ತತ್ವವನ್ನು ತಮ್ಮ ‘ರಸೋ ವೈ ಸಃ’ದಲ್ಲಿ ಹೇಳಿದ್ದಾರೆ. ಕನ್ನಡಕ್ಕೆ ಹೊಸ ನುಡಿಗಟ್ಟು ಮತ್ತು ಹೊಸ ಕಲ್ಪನೆಗಳನ್ನು ನೀಡಿದವರು. ಕಲ್ಪನಾಶಕ್ತಿಯೊಂದಿಗೆ, ಬೌದ್ಧಿಕ ಸಾಮರ್ಥ್ಯವನ್ನು ಮೇಳೈಸಿ, ನೈತಿಕ ಮತ್ತು ಸೌಂದರ್ಯ ಮೀಮಾಂಸೆಯನ್ನು ಉನ್ನತ ಸ್ಥಾನಕ್ಕೆ ಒಯ್ದವರು.
ಸ್ಮಾರಕಗಳು
ಕವಿಮನೆ, ಕುಪ್ಪಳಿ. ಈಗ ವಸ್ತು ಸಂಗ್ರಹಾಲಯವಾಗಿದೆ.
- ಕುಪ್ಪಳಿಯಲ್ಲಿರುವ ಕುವೆಂಪು ಅವರು ಹುಟ್ಟಿದ ಮನೆ ವಸ್ತು ಸಂಗ್ರಹಾಲಯವಾಗಿದೆ.
- ಅಲ್ಲೇ ಇರುವ ಅವರ ಸಮಾಧಿ ಸ್ಥಳವಾದ ‘ಕವಿಶೈಲ’ ಒಂದು ವಿಶಿಷ್ಟ ಸ್ಮಾರಕ.
- ಶಿವಮೊಗ್ಗದ ಬಳಿ ಇರುವ ವಿಶ್ವವಿದ್ಯಾಲಯಕ್ಕೆ ಕುವೆಂಪು ಅವರ ಹೆಸರಿಡಲಾಗಿದೆ.
- ಮೈಸೂರು ವಿಶ್ವವಿದ್ಯಾನಿಲಯದಲ್ಲಿರುವ ಕನ್ನಡ ಅಧ್ಯಯನ ಸಂಸ್ಥೆಗೆ ಕುವೆಂಪು ಅವರ ಹೆಸರಿಡಲಾಗಿದೆ.
- ಅನುವಾದ ಕಾರ್ಯವನ್ನು ಪ್ರೋತ್ಸಾಹಿಸಲು ಬೆಂಗಳೂರಿನಲ್ಲಿ ಸ್ಥಾಪಿಸಲಾಗಿರುವ ಭಾಷಾ ಭಾರತಿ ಸಂಸ್ಥೆಗೆ ಕುವೆಂಪು ಅವರ ಹೆಸರಿಡಲಾಗಿದೆ.
- ಮೈಸೂರಿನ ಕುವೆಂಪು ನಗರದಲ್ಲಿರುವ ರಸ್ತೆಗಳಿಗೆ ಕುವೆಂಪು ಅವರ ಪರಿಕಲ್ಪನೆಗಳ, ಪಾತ್ರಗಳ ಹೆಸರುಗಳನ್ನು ಇಡಲಾಗಿದೆ.
ಕುವೆಂಪು ಕುರಿತ ಕೃತಿಗಳು
- ಮಗಳು ಕಂಡ ಕುವೆಂಪು– ಲೇ: ತಾರಿಣಿ ಚಿದಾನಂದ ಪ್ರಕಾಶಕರು:ಪುಸ್ತಕ ಪ್ರಕಾಶನ
- ಅಣ್ಣನ ನೆನಪು– ಲೇ: ಕೆ ಪಿ ಪೂರ್ಣಚಂದ್ರ ತೇಜಸ್ವಿ ಪ್ರಕಾಶಕರು:ಪುಸ್ತಕ ಪ್ರಕಾಶನ
- ಕುವೆಂಪು– ಲೇ: ದೇಜಗೌ
- ಯುಗದ ಕವಿ– ಲೇ: ಡಾ.ಕೆ.ಸಿ.ಶಿವಾರೆಡ್ಡಿ
- ಹೀಗಿದ್ದರು ಕುವೆಂಪು– ಲೇ: ಪ್ರಭುಶಂಕರ
- ಕುವೆಂಪು– ಲೇ: ಎಸ್.ವಿ.ಪರಮೇಶ್ವರಭಟ್ಟ
- ಶ್ರೀ ಕುವೆಂಪು ಸಂಭಾಷಣೆ ಮತ್ತು ಸಂದರ್ಶನ– ಲೇ: ಎಸ್.ವೃಷಭೇಂದ್ರಸ್ವಾಮಿ
- ತರಗತಿಗಳಲ್ಲಿ ಕುವೆಂಪು– ಲೇ: ಎಸ್.ವೃಷಭೇಂದ್ರಸ್ವಾಮಿ
- ಕುವೆಂಪು ಕಾವ್ಯಯಾನ– ಲೇ: ಬಿ.ಆರ್. ಸತ್ಯನಾರಾಯಣ
- ಕುವೆಂಪು ನುಡಿತೋರಣ– ಸಂ: ಬಿ.ಆರ್.ಸತ್ಯನಾರಾಯಣ
ನಾಟಕ–ಚಲನಚಿತ್ರ–ಧಾರಾವಾಹಿ
- “ಬೆರಳ್ಗೆ ಕೊರಳ್“ನಾಟಕವು ಚಲನಚಿತ್ರವಾಗಿದೆ.
- “ಕಾನೂರು ಹೆಗ್ಗಡಿತಿ“ಕಾದಂಬರಿ ಚಲನಚಿತ್ರವಾಗಿದೆ.
- “ಮಲೆಗಳಲ್ಲಿ ಮದುಮಗಳು“ಕಾದಂಬರಿ ಧಾರಾವಾಹಿಯಾಗಿದೆ ಹಾಗೂ ೯ ಗಂಟೆಗಳ ಅವಧಿಯ ನಾಟಕವಾಗಿಯೂ ಮೈಸೂರಿನ ರಂಗಾಯಣದಲ್ಲಿ ಮತ್ತು ಬೆಂಗಳೂರಿನ ಕಲಾಗ್ರಾಮದಲ್ಲಿ ಪ್ರದರ್ಶನಗೊಂಡಿದೆ.
ಗೌರವ/ ಪ್ರಶಸ್ತಿ ಪುರಸ್ಕಾರಗಳು
- ಕೇಂದ್ರ ಸಾಹಿತ್ಯ ಅಕಾಡೆಮಿಪ್ರಶಸ್ತಿ – (ಶ್ರೀರಾಮಾಯಣ ದರ್ಶನಂ) (1955)
- ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವಡಿ.ಲಿಟ್. (1956)
- ಪದ್ಮಭೂಷಣ(೧೯೫೮)
- ರಾಷ್ಟ್ರಕವಿಪುರಸ್ಕಾರ (೧೯೬೪)
- ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವಡಿ.ಲಿಟ್. (೧೯೬೬)
- ಜ್ಞಾನಪೀಠ ಪ್ರಶಸ್ತಿ(ಶ್ರೀ ರಾಮಾಯಣ ದರ್ಶನಂ) (೧೯೬೮)
- ಬೆಂಗಳೂರುವಿಶ್ವವಿದ್ಯಾಲಯದಿಂದ ಗೌರವ ಡಿ.ಲಿಟ್. (೧೯೬೯)
- ಕೇಂದ್ರ ಸಾಹಿತ್ಯ ಅಕಾಡೆಮಿಯು ಫೆಲೋಷಿಪ್(1979)
- ಪಂಪ ಪ್ರಶಸ್ತಿ(೧೯೮೮)
- ಪದ್ಮವಿಭೂಷಣ(೧೯೮೯)
- ಕರ್ನಾಟಕ ರತ್ನ(೧೯೯೨)
- ಕನ್ನಡ ಸಾಹಿತ್ಯ ಪರಿಷತ್ತಿನಗೌರವ ಸದಸ್ಯತ್ವ
It’s amazing for me to have a web site, which is valuable in support of my knowledge.
thanks admin
Hello Dear, are you actually visiting this website regularly,
if so after that you will without doubt take fastidious knowledge.
Attractive section of content. I just stumbled upon your site and in accession capital to assert that I get actually enjoyed account your blog posts.
Anyway I will be subscribing to your feeds and even I achievement you access consistently rapidly.
Hello! I know this is kinda off topic however , I’d figured I’d
ask. Would you be interested in exchanging links or maybe guest writing a blog
post or vice-versa? My blog addresses a lot of the same subjects as yours and I think we could greatly benefit from each other.
If you happen to be interested feel free to shoot me an email.
I look forward to hearing from you! Fantastic blog by the way!
I believe this website contains some really great info
for everyone :D.
Here is my web site … Ultimate Keto Fuel Pills
Hello, just wanted to say, I enjoyed this post.
It was inspiring. Keep on posting!
It’s an amazing piece of writing in favor of all the web viewers; they will take advantage from it I am sure.
Its such as you read my thoughts! You appear to know a lot approximately this, like you wrote the e book
in it or something. I feel that you just can do with some p.c.
to power the message home a bit, however instead of that,
this is excellent blog. A fantastic read. I will certainly be
back.
Dad requested. He had completed placing a milker on a cow and had come over to see
my pony. As you can see this desk doubles as
train table for my Lionel train set. Items that can be utilized to purchase additional goods at a enterprise
are frequent prize choices. The 2 quarter-wavelength slots are open slots or monopole slots, and the half-wavelength slot is aligned in-between the two quarter-wavelength slots.
A printed slot antenna comprising two quarter-wavelength
slots of various lengths and a half-wavelength slot for eight-band
wireless wide area network/long run evolution operation within the pill computer is offered.
A novel design of rectangular slot-antenna with dual-broadband operation for 2.4/5-GHz wireless local space networks (WLANs)
is proposed. A novel single-feed circularly polarized microstrip antenna with compact dimension is proposed
for indoor wireless native area community (WLAN) purposes.
Conclusions – SLOT is a novel tutorial method which
might offset faculty scarcity with advantages like enhanced curiosity among teachers and learners, uniform
attain of content, opportunities for group
learning, and involvement of visible aids as instructing-studying (T-L) methodology. https://sunysucks.com/
It’s really very complicated in this busy life to listen news on TV,
thus I only use world wide web for that purpose, and obtain the hottest information.
Spot on with this write-up, I honestly feel this website
needs much more attention. I’ll probably be back again to see more, thanks
for the info!
Simply a smiling visitor here tto share the love.btw ɡreat
style and design and superb post.
My weeb pagge … needak rebounder amazon
Fantastic beat ! I wish to apprentice while you amend your
web site, how could i subscribe for a weblog web
site? The account helped me a acceptable deal. I had been tiny bit acquainted
of this your broadcast provided shiny transparent idea
Thiis website іs my motivation, νery excellent style аnd design as well as ideal articles.
Heгe іs my web site: best online psychics