ಪ್ರಥಮ ಭಾಷೆ
ದ್ವಿತೀಯ ಭಾಷೆ
ತೃತೀಯ ಭಾಷೆ
ಪರೀಕ್ಷೆಯ ಸಲಹೆಗಳು
ಅನಿಸಿಕೆ

  ತೃತೀಯ ಭಾಷೆ : ಕನ್ನಡ

  ತೃತೀಯ ಭಾಷೆ ಕನ್ನಡ : 10ನೇ ತರಗತಿ

  consectetur adipiscing elit, sed do
  eiusmod Lorem ipsum dolor sit amet.

  ತೃತೀಯ ಭಾಷೆ ಕನ್ನಡ : 10ನೇ ತರಗತಿ
  • ಗದ್ಯ
  • ಪದ್ಯ
  • ಪಠ್ಯಪೂರಕ
  ಪಾಠ ವಿಡಿಯ ಆಡಿಯೋ ನೋಟ್ಸ್ ಟೆಸ್ಟ್ ಚಟುವಟಿಕೆ
  1. ನೋಡಿ ಕೇಳಿ ನೋಡಿ/ಓದಿರಿ ನೋಡಿ ನೋಡಿ
  1. ನೋಡಿ ಕೇಳಿ ನೋಡಿ/ಓದಿರಿ ನೋಡಿ ನೋಡಿ
  1. ನೋಡಿ ಕೇಳಿ ನೋಡಿ/ಓದಿರಿ ನೋಡಿ ನೋಡಿ
  1. ನೋಡಿ ಕೇಳಿ ನೋಡಿ/ಓದಿರಿ ನೋಡಿ ನೋಡಿ
  1. ನೋಡಿ ಕೇಳಿ ನೋಡಿ/ಓದಿರಿ ನೋಡಿ ನೋಡಿ
  1. ನೋಡಿ ಕೇಳಿ ನೋಡಿ/ಓದಿರಿ ನೋಡಿ ನೋಡಿ
  1. ನೋಡಿ ಕೇಳಿ ನೋಡಿ/ಓದಿರಿ ನೋಡಿ ನೋಡಿ
  1. ನೋಡಿ ಕೇಳಿ ನೋಡಿ/ಓದಿರಿ ನೋಡಿ ನೋಡಿ
  ಪಾಠ ವಿಡಿಯ ಆಡಿಯೋ ನೋಟ್ಸ್ ಟೆಸ್ಟ್ ಚಟುವಟಿಕೆ
  1. ನೋಡಿ ಕೇಳಿ ನೋಡಿ/ಓದಿರಿ ನೋಡಿ ನೋಡಿ
  1. ನೋಡಿ ಕೇಳಿ ನೋಡಿ/ಓದಿರಿ ನೋಡಿ ನೋಡಿ
  1. ನೋಡಿ ಕೇಳಿ ನೋಡಿ/ಓದಿರಿ ನೋಡಿ ನೋಡಿ
  1. ನೋಡಿ ಕೇಳಿ ನೋಡಿ/ಓದಿರಿ ನೋಡಿ ನೋಡಿ
  1. ನೋಡಿ ಕೇಳಿ ನೋಡಿ/ಓದಿರಿ ನೋಡಿ ನೋಡಿ
  1. ನೋಡಿ ಕೇಳಿ ನೋಡಿ/ಓದಿರಿ ನೋಡಿ ನೋಡಿ
  1. ನೋಡಿ ಕೇಳಿ ನೋಡಿ/ಓದಿರಿ ನೋಡಿ ನೋಡಿ
  1. ನೋಡಿ ಕೇಳಿ ನೋಡಿ/ಓದಿರಿ ನೋಡಿ ನೋಡಿ
  ಪಾಠ ವಿಡಿಯ ಆಡಿಯೋ ನೋಟ್ಸ್ ಟೆಸ್ಟ್ ಚಟುವಟಿಕೆ
  1. ನೋಡಿ ಕೇಳಿ ನೋಡಿ/ಓದಿರಿ ನೋಡಿ ನೋಡಿ
  1. ನೋಡಿ ಕೇಳಿ ನೋಡಿ/ಓದಿರಿ ನೋಡಿ ನೋಡಿ
  1. ನೋಡಿ ಕೇಳಿ ನೋಡಿ/ಓದಿರಿ ನೋಡಿ ನೋಡಿ
  1. ನೋಡಿ ಕೇಳಿ ನೋಡಿ/ಓದಿರಿ ನೋಡಿ ನೋಡಿ
  1. ನೋಡಿ ಕೇಳಿ ನೋಡಿ/ಓದಿರಿ ನೋಡಿ ನೋಡಿ
  1. ನೋಡಿ ಕೇಳಿ ನೋಡಿ/ಓದಿರಿ ನೋಡಿ ನೋಡಿ
  1. ನೋಡಿ ಕೇಳಿ ನೋಡಿ/ಓದಿರಿ ನೋಡಿ ನೋಡಿ
  1. ನೋಡಿ ಕೇಳಿ ನೋಡಿ/ಓದಿರಿ ನೋಡಿ ನೋಡಿ

  ತೃತೀಯ ಭಾಷೆ : 10ನೇ ತರಗತಿ ಪ್ರಶ್ನೋತ್ತರ

  ಪಾಠಗಳ ಹೆಸರುಗಳ ಮೇಲೆ ಕ್ಲಿಕ್‌ ಮಾಡಿ ಪ್ರಶ್ನೋತ್ತರ ಓದಿ

  ಪಾಠ – 1. ಲಾಕಪ್ಪಿನಲ್ಲಿ ಒಂದು ರಾತ್ರಿ.
  ಲೇಖಕರ ಪರಿಚಯ
  *ಗೊರೂರು ರಾಮಸ್ವಾಮಿ ಅಯ್ಯಂಗಾರ್*
  ಜನ್ಮ : 1904 ಜುಲೈ 4
  ಜನ್ಮ ಸ್ಥಳ : ಹಾಸನ ಜಿಲ್ಲೆಯ ಗೊರೂರು
  ಕೃತಿಗಳು :1)ಅಮೇರಿಕಾದಲ್ಲಿಗೊರೂರು, 2) ನಮ್ಮಊರಿನ ರಸಿಕರು, 3) ಹೇಮಾವತಿ, 4) ಮೆರವಣಿಗೆ, 5) ಹಳ್ಳಿಯ ಹಾಡು.
  ಒಂದು ವಾಕ್ಯದಲ್ಲಿ ಉತ್ತರಿಸಿ.
  1. ಬೆಳಗಾಗುವ ವೇಳೆ ಕಾಲು ಕೊರಡಾಗಬಹುದೆಂಬ ಭಾವನೆಯು ಗೊರೂರರ ಮನಸ್ಸಿಗೆ ಏಕೆ ಬಂದಿತು?
  ಉತ್ತರ: ರಾತ್ರಿ ಚಳಿ ಆರಂಭವಾದ ಕಾರಣ ಕಾಲು ಕೊರಡಾಗಬಹುದೆಂಬ ಭಾವನೆಯು ಗೊರೂರರ ಮನಸ್ಸಿಗೆ ಬಂದಿತು.
  2. ಭಾರತದಲ್ಲಿರುವ ಅಲೆಮಾರಿಗಳಿಗೆ ರಾತ್ರಿ ವೇಳೆಯಲ್ಲಿ ತಂಗಲು ಇರುವ ಸ್ಥಳಗಳಾವವು?
  ಉತ್ತರ: ಛತ್ರÀ, ಧರ್ಮಶಾಲೆ, ದೇವಾಲಯ, ರೇಲ್ವೆಸ್ಟೇಷನ್, ವಿಮಾನ ನಿಲ್ದಾಣ ಇವು ಭಾರತದಲ್ಲಿರುವ ಅಲೆಮಾರಿಗಳಿಗೆ ರಾತ್ರಿ ವೇಳೆ
  ತಂಗಲು ಇರುವಂಥ ಸ್ಥಳಗಳು.
  3. ಅಮೇರಿಕಾದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ರಾತ್ರಿವೇಳೆ ತಂಗುವAತಿಲ್ಲ ಏಕೆ?
  ಉತ್ತರ: ಕಾರಣ ಅಂತಹ ಸ್ಥಳಗಳಲ್ಲಿ ರಾತ್ರಿ ತಂಗಿದರೆ ಅಲೆಮಾರಿ ಎಂದು ತಿಳಿದು ಲಾಕಪ್ಪಿಗೆ ಹಾಕುತ್ತಾರೆ.
  4. ಮಿನಿ ಪೋಲೀಸ್ ನಗರದಲ್ಲಿ ದಾರಿತಪ್ಪಿದ ಗೊರೂರರು ರಾತ್ರಿ ಕಳೆಯಲು ಹೋಟೆಲಿಗೆ ಹೋಗಲಾಗಲಿಲ್ಲ ಏಕೆ?
  ಉತ್ತರ: ಕಾರಣ ಅವರ ಹತ್ತಿರ ಹೆಚ್ಚು ಡಾಲರ್‌ಗಳಿರಲಿಲ್ಲ.
  5. ಅಮೇರಿಕಾದ ಪೋಲೀಸರು ಭಾರತದ ಪೋಲೀಸರ ಬಗೆಗೆ ಗೊರೂರರಲ್ಲಿ ಯಾವ ವಿಚಾರವನ್ನು ಕೇಳಿ ತಿಳಿದುಕೊಂಡರು?
  ಉತ್ತರ : ಸಂಬಳ ಮತ್ತು ಸಾರಿಗೆ ಈ ಎರಡು ವಿಚಾರಗಳನ್ನು ಕೇಳಿ ತಿಳಿದುಕೊಂಡರು.
  ಎರಡು/ಮೂರು ವಾಕ್ಯಗಳಲ್ಲಿ ಉತ್ತರಿಸಿ.
  1) ಗೊರೂರರು ಮಿನಿಪೋಲೀಸ್ ನಗರದಲ್ಲಿ ಇಳಿದ ಸ್ಥಳದಿಂದ ಏಕೆ ತಪ್ಪಿಸಿಕೊಂಡರು?
  ಉತ್ತರ: ಮಿನಿ ಪೋಲೀಸ್ ನಗರದಲ್ಲಿ ಲೇಖಕರು ತನಗೆ ಅರಿವಿಲ್ಲದಂತೆ ಸುತ್ತುತ್ತ ಬಣ್ಣದ ಬಲ್ಬುಗಳನ್ನು, ಕಮಾನುಗಳನ್ನು,
  ಕಿಟಕಿಗಳನ್ನು ನೋಡುತ್ತ ರಸ್ತೆಯ ಆಚೆ-ಈಚೆ ಹೊರಟು ಹೋದ ಕಾರಣ ಅವರು ಕಾರು ಇಳಿದ ಸ್ಥಳದಿಂದ
  ತಪ್ಪಿಸಿಕೊAಡರು.
  2) ಮಿನಿಪೋಲೀಸ್ ನಗರದಲ್ಲಿ ಪೋಲೀಸ್‌ರು ಗೊರೂರರನ್ನು ಹೇಗೆ ಉಪಚರಿಸಿದರು? (2018)
  ಉತ್ತರ: ಮಿನಿಪೋಲೀಸ್ ನಗರದಲ್ಲಿ ಪೋಲೀಸ್‌ರು ಗೊರೂರರನ್ನು ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಮನೆಗೆ
  ಕರೆದುಕೊಂಡು ಹೋದರು. ರಾತ್ರಿಯ ಊಟವೆಂದು ಬ್ರೆಡ್, ಹಾಲು, ಹಣ್ಣು, ಬಿಸ್ಕೀಟ್‌ಗಳನ್ನು ನೀಡಿದರು. ತಮ್ಮ ಮನೆಯ
  ಹಾಸಿಗೆ ಧೂಳು ತುಂಬಿದ ಕಾರಣ ತಮ್ಮ ವಶದಲ್ಲಿರುವ ಲಾಕಪ್ಪಿನಲ್ಲಿ ಮಲಗುವ ವ್ಯವಸ್ಥೆ ಮಾಡಿ ಚೆನ್ನಾಗಿಯೇ
  ಉಪಚರಿಸಿದರು.
  3) ಗೊರೂರರು ಒಂದು ರಾತ್ರಿಯನ್ನು ಲಾಕಪ್ಪಿನಲ್ಲಿ ಕಳೆಯಬೇಕಾಯಿತು ಏಕೆ?
  ಉತ್ತರ : ಲೇಖಕರು ತಮಗೆ ಅರಿವಿಲ್ಲದಂತೆ ಬಣ್ಣದ ಬಲ್ಬುಗಳು, ಕಿಟಕಿಗಳು, ಕಿಟಕಿಗಳ ದೀಪಾಲಂಕಾರ, ಕಮಾನುಗಳು,
  ದೀಪ ರಾಶಿ ಮುಂತಾದವುಗಳನ್ನೆಲ್ಲಾ ನೋಡುತ್ತ ರಸ್ತೆಯ ಆಚೆ-ಈಚೆ ಹೊರಟು ಹೋದರು. ಮಿತ್ರರ ಪರಿಚಿತ ವ್ಯಕ್ತಿ
  ಕರೆದುಕೊಂಡು ಹೋಗುವುದಾಗಿ ಹೇಳಿದ್ದ ಆ ಸ್ಥಳ ಸಿಗದೇ ಹೋಯಿತು. ನಂತರ ಗೊರೂರರು ಟ್ರಾಫಿಕ್ ಪೋಲೀಸನವರ
  ಕೈಗೆ ಸಿಕ್ಕಿಹಾಕಿಕೊಂಡ ಕಾರಣ ಒಂದು ರಾತ್ರಿ ಲಾಕಪ್ಪಿನಲ್ಲಿ ಕಳೆಯಬೇಕಾಯಿತು.
  4) ಪೋಲೀಸರು ಗೊರುರರನ್ನು ಲಾಕಪ್ಪಿನಲ್ಲಿ ಮಲಗಿಸಲು ಯೋಚಿಸಿದ್ದೇಕೆ? (2018)
  3
  ಉತ್ತರ: ಟ್ರಾಫಿಕ್ ಪೋಲೀಸ್‌ನವರ ಮನೆಯ ಹಾಸಿಗೆ ಧೂಳಿನಿಂದ ತುಂಬಿತ್ತು, ಆ ಕಾರಣದಿಂದಾಗಿ ಪೊಲೀಸ್‌ನವರು
  ಗೊರೂರರನ್ನು ತಮ್ಮ ವಶದಲ್ಲಿರುವ ಲಾಕಪ್ಪಿನಲ್ಲಿ ಮಲಗಿಸಲು ಯೋಚಿಸಿದರು.
  ಎಂಟು/ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ.
  1) ಮಿನಿಪೊಲೀಸ್ ನಗರದಲ್ಲಿ ಗೊರೂರರಿಗೆ ಎದುರಾದ ಸಮಸ್ಯೆಗಳು ಯಾವವು?

  ಉತ್ತರ : ಮಿನಿಪೊಲೀಸ್ ನಗರಕ್ಕೆ ಲೇಖಕರು ತಮ್ಮ ಮಿತ್ರರನ್ನು ನೋಡಲು ಹೋದಾಗ ಅವರು ಭೇಟಿಯಾಗಲಿಲ್ಲ.
  ಅವರ ಪರಿಚಯವಿರುವ ವ್ಯಕ್ತಿಯೊಬ್ಬರು ಭೇಟಿಯಾದರು. ಅವರು ಲೇಖಕರನ್ನು ತಮ್ಮ ಕಾರಿನಲ್ಲಿ ಕೂರಿಸಿಕೊಂಡು ತಮ್ಮ
  ಕೆಲಸದ ಮೇಲೆ ಹೋದಾಗ ಲೇಖಕರು ನಡುದಾರಿಯಲ್ಲಿ ಇಳಿದುಕೊಂಡರು. ಮಧ್ಯರಾತ್ರಿ 2-00 ಗಂಟೆಗೆ ತಮ್ಮನ್ನು
  ಕರೆದುಕೊಂಡು ಹೋಗಲು ಹೇಳಿದರು. ಸಂಜೆ ದೀಪ ಹೊತ್ತಿದ ನಂತರ ಲೇಖಕರು ತಮಗೆ ಅರಿವಿಲ್ಲದಂತೆ ಸುಂದರ
  ನಗರದ ದೃಶ್ಯಾವಳಿಗಳನ್ನು ನೋಡುತ್ತ ರಸ್ತೆಂiÀi ಆಚೆ-ಈಚೆ ಹೊರಟು ಹೋದರು. ಆಮೇಲೆ ಆ ನಿಗದಿಪಡಿಸಿದ ಜಾಗ
  ಸಿಗದೇ ಹೋಗಿ, ರಾತ್ರಿ 9 ಗಂಟೆಯಾಯಿತು. ರಾತ್ರಿ ಚಳಿ ಬೇರೆ ಜೋರಾಗಿತ್ತು. ಹೋಟೆಲಿನಲ್ಲಿ ಉಳಿಯಲು ಇವರ
  ಹತ್ತಿರ ಹೆಚ್ಚು ಡಾಲರ್‌ಗಳು ಇರಲಿಲ್ಲ. ಅಮೇರಿಕಾದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಲಗಿದರೆ ಅಲೆಮಾರಿ ಎಂದು
  ತಿಳಿದು ಲಾಕಪ್ಪಿಗೆ ಹಾಕುತ್ತಾರೆ. ಇಂತಹ ಸ್ಥಿತಿಯಲ್ಲಿ ಅವರಿಗೆ ಒಬ್ಬ ಟ್ರಾಫಿಕ್ ಪೊಲೀಸ್ ಭೇಟಿಯಾಗಿ, ಅವರೇ
  ಲೇಖಕರನ್ನು ಸರಿಯಾಗಿ ಉಪಚರಿಸಿ ಲಾಕಪ್ಪಿನಲ್ಲಿ ಮಲಗುವ ವ್ಯವಸ್ಥೆ ಮಾಡಿದರು.
  2) ಮಿನಿಪೋಲೀಸ್ ನಗರದಲ್ಲಿ ಎದುರಾದ ಸಮಸ್ಯೆಯಿಂದ ಲೇಖಕರು ಪಾರಾದುದು ಹೇಗೆ? ವಿವರಿಸಿ.
  ಉತ್ತರ : ಮಿನಿಪೊಲೀಸ್ ನಗರದಲ್ಲಿ ಲೇಖಕರು ದಾರಿತಪ್ಪಿ ಅಲೆದಾಡುವಾಗ, ಆಗ ತಾನೇ ಕರ್ತವ್ಯ ಮುಗಿಸಿ ಬರುತ್ತಿದ್ದ
  ಟ್ರಾಫಿಕ್ ಪೋಲೀಸ್‌ನವನು ಸಿಕ್ಕಿದನು. ಅವನಿಗೆ ಲೇಖಕರು ತಮ್ಮ ಸಮಸ್ಯೆಯನ್ನು ಹೇಳಿಕೊಂಡಾಗ, ಅವನು ತನ್ನ
  ಮನೆಗೆ ಕರೆದುಕೊಂಡು ಹೋದನು. ರಾತ್ರಿ ಊಟವೆಂದು ಬ್ರೆಡ್, ಹಾಲು, ಹಣ್ಣು ಬಿಸ್ಕೀಟ್‌ಗಳನ್ನು ನೀಡಿದನು. ತನ್ನ
  ಮನೆಯ ಹಾಸಿಗೆ ಅನೇಕ ದಿನಗಳಿಂದ ಉಪಯೋಗಿಸದೇ ಇರುವುದರಿಂದ ಧೂಳು ತುಂಬಿದೆ. ಆ ಕಾರಣ ತನ್ನ
  ವಶದಲ್ಲಿರುವ ಲಾಕಪ್ಪಿನಲ್ಲಿ ಹೋಗಿ ಮಲಗಿರಿ ಎಂದು ಹೇಳಿದನು. ಈ ರೀತಿಯಾಗಿ ಲೇಖಕರು ತನಗೆ ಎದುರಾದ
  ಸಮಸ್ಯೆಗಳಿಂದ ಪಾರಾದರು.
  ಸಂದರ್ಭ ಸ್ಪಷ್ಟಿಕರಿಸಿ.
  1) “ಈಗ ನೀವು ನನ್ನ ವಶವಾದಿರಿ. ನಾನು ನಿಮ್ಮನ್ನು ಕೈ ಬಿಡುವುದಿಲ್ಲ.
  ಪಾಠದ ಹೆಸರು: ಲಾಕಪ್ಪಿನಲ್ಲಿ ಒಂದು ರಾತ್ರಿ.
  ಲೇಖಕರ ಹೆಸರು: ಗೊ.ರಾ.ಅಯ್ಯಂಗಾರ್.
  ಸAದರ್ಭ: ಟ್ರಾಫಿಕ್ ಪೋಲೀಸ್‌ನವರು ಈ ಮಾತನ್ನು ಲೇಖಕರಿಗೆ ನುಡಿದಿದ್ದಾರೆ.
  ವಿವರಣೆ: ಮಿನಿಪೋಲೀಸ್ ನಗರದ ದೀಪರಾಶಿ ಕಮಾನುಗಳು, ಕಿಟಕಿಗಳು, ಕಿಟಕಿಗಳ ದೀಪಾಲಂಕಾರ
  ಮೊದಲಾದವುಗಳನ್ನೆಲ್ಲಾ ನೋಡುತ್ತ ಲೇಖಕರು ರಸ್ತೆಯ ಆಕಡೆ ಈಕಡೆ ಹೊರಟು ಹೋದರು. ನಂತರ ಮಿತ್ರರ
  ಪರಿಚಿತರು ಕರೆದುಕೊಂಡು ಹೋಗಲು ಹೇಳಿದ ಜಾಗ ಏನು ಮಾಡಿದರು ಸಿಗಲೇ ಇಲ್ಲ. ಕೊನೆಗೆ ಲೇಖಕರು ಟ್ರಾಫಿಕ್
  ಪೋಲೀಸನವರ ಕೈಗೆ ಸಿಕ್ಕಿ ಹಾಕಿಕೊಂಡಾಗ ಅವರು ಮೇಲಿನ ಈ ಮಾತನ್ನು ಲೇಖಕರಿಗೆ ನುಡಿಯುವರು.
  2) “ನನ್ನ ಖೈದಿಯ ರಕ್ಷಣೆಯನ್ನು ನಾನು ಸರಿಯಾಗಿ ಮಾಡಬೇಕಷ್ಟೆ”
  ಪಾಠದ ಹೆಸರು: ಲಾಕಪ್ಪಿನಲ್ಲಿ ಒಂದು ರಾತ್ರಿ.
  ಲೇಖಕರ ಹೆಸರು: ಗೊ.ರಾ.ಅಯ್ಯಂಗಾರ್.
  ಸAದರ್ಭ: ಟ್ರಾಫಿಕ್ ಪೊಲೀಸ್‌ನವರು ಈ ಮಾತನ್ನು ಲೇಖಕರಿಗೆ ನುಡಿದಿದ್ದಾರೆ.
  ವಿವರಣೆ: ಲೇಖಕರು ತಮ್ಮ ಸಮಸ್ಯೆಯನ್ನು ಟ್ರಾಫಿಕ್ ಪೊಲೀಸ್‌ನವರಿಗೆ ಹೇಳಿದರು. ಪೋಲೀಸ್ನವರು ಲೇಖಕರನ್ನು
  ತನ್ನ ಕಾರಿನಲ್ಲಿ ಕೂರಿಸಿಕೊಂಡು ಮನೆಗೆ ಬಂದರು. ರಾತ್ರಿಯ ಊಟಕೆಂದು ಬ್ರೆಡ್, ಹಾಲು, ಹಣ್ಣು, ಬಿಸ್ಕೀಟ್‌ಗಳನ್ನು
  ನೀಡಿದರು. ನಂತರ ತನ್ನ ವಶದಲ್ಲಿರುವ ಲಾಕಪ್ಪಿನಲ್ಲಿ ಎಲ್ಲ ವ್ಯವಸ್ಥೆಇದೆ.ಅಲ್ಲಿ ಹೋಗಿ ಮಲಗಿದರೆ ಸೊಗಸಾದ ನಿದ್ರೆ
  ಬರುತ್ತದೆ ಎಂದು ಹೇಳುತ್ತ ಈ ಮೇಲಿನ ಮಾತನ್ನು ಅವರು ಲೇಖಕರಿಗೆ ನುಡಿದರು.
  4
  3) “ಪೊಲೀಸ್‌ನವರ ಸಹವಾಸವಾದ ಮೇಲೆ ಲಾಕಪ್ ಆಗಲೇಬೇಕಷ್ಟೆ.”
  ಪಾಠದ ಹೆಸರು: ಲಾಕಪ್ಪಿನಲ್ಲಿ ಒಂದು ರಾತ್ರಿ.
  ಲೇಖಕರ ಹೆಸರ: ಗೊ.ರಾ.ಅಯ್ಯಂಗಾರ್.
  ಸAದರ್ಭ: ಲೇಖಕರು ಈ ಮಾತನ್ನು ಟ್ರಾಫಿಕ್ ಪೋಲೀಸ್‌ನವರ ಕುರಿತು ತನ್ನ ಮನದೊಳಗೆ ಅಂದುಕೊAಡಿದ್ದಾರೆ.
  ವಿವರಣೆ: ಟ್ರಾಫಿಕ್ ಪೊಲೀಸ್‌ನವರು ಲೇಖಕರನ್ನು ತನ್ನ ಮನೆಗೆ ಕರೆದುಕೊಂಡು ಬಂದರು. ರಾತ್ರಿಯ ಊಟ
  ನೀಡಿದರು. ತನ್ನ ಮನೆಯ ಹಾಸಿಗೆ ಸ್ವಚ್ಛವಿರದ ಕಾರಣ ತನ್ನ ವಶದಲ್ಲಿರುವ ಲಾಕಪ್ಪಿನಲ್ಲಿ ಹೋಗಿ ಮಲಗಿರಿ.
  ಸೊಗಸಾದ ನಿದ್ರೆ ಬರುತ್ತದೆ ಎಂದು ಹೇಳಿದಾಗ ಈ ಮೇಲಿನ ಮಾತನ್ನು ಲೇಖಕರು ತನ್ನ ಮನದೊಳಗೆ
  ಅಂದುಕೊAಡರು.
  4) “ನಾನು ಏನು ಮಾಡಿದರು ಕಾನೂನು ಬಿಟ್ಟು ಹೋಗುವುದಿಲ್ಲ.”
  ಪಾಠದ ಹೆಸರು: ಲಾಕಪ್ಪಿನಲ್ಲಿ ಒಂದು ರಾತ್ರಿ.
  ಲೇಖಕರ ಹೆಸರು: ಗೊ.ರಾ.ಅಯ್ಯಂಗಾರ್.
  ಸAದರ್ಭ: ಟ್ರಾಫಿಕ್ ಪೋಲೀಸ್‌ನವರು ಈ ಮಾತನ್ನು ಲೇಖಕರಿಗೆ ನುಡಿದಿದ್ದಾರೆ.
  ವಿವರಣೆ: ಟ್ರಾಫಿಕ್ ಪೊಲೀಸ್‌ನವರು ಲೇಖಕರಿಗೆ ರಾತ್ರಿಯ ಊಟ ನೀಡುತ್ತಾರೆ. ಊಟವಾದ ನಂತರ ಅಮೇರಿಕಾದ
  ಪೊಲೀಸ್‌ನವರ ಕರ್ತವ್ಯಗಳ ಕುರಿತು ಮಾತನಾಡುತ್ತ ಈ ಮೇಲಿನ ಮಾತನ್ನು ಲೇಖಕರಿಗೆ ನುಡಿಯುತ್ತಾರೆ.
  ಭಾಷಾಭ್ಯಾಸ:
  ಅ) ಕೆಳಗೆ ಕೊಟ್ಟಿರುವ ಪದಗಳನ್ನು ಬಿಡಿಸಿ, ಬರೆದು ಸಂಧಿಯನ್ನು ಹೆಸರಿಸಿ
  .
  ದೇವ+ಆಲಯ=ದೇವಾಲಯ (ಸವರ್ಣದೀರ್ಘ ಸಂಧಿ)
  ಧರ್ಮ+ಅರ್ಥ= ಧರ್ಮಾರ್ಥ (ಸವರ್ಣದೀರ್ಘ ಸಂಧಿ)
  ರಕ್ಷಣೆ+ಅನ್ನು=ರಕ್ಷಣೆಯನ್ನು (‘ಯ’ಕಾರಾಗಮ ಸಂಧಿ)
  ಅರಿವು+ಇಲ್ಲ=ಅರಿವಿಲ್ಲ (ಲೋಪಸಂಧಿ)
  ಸ್ವಚ್ಛ+ಆದ=ಸ್ವಚ್ಛವಾದ (‘ವ’ಕಾರಾಗಮ ಸಂಧಿ) ದೀಪ+ಅಲಂಕಾರ=ದೀಪಾಲAಕಾರ (ಸವರ್ಣದೀರ್ಘ ಸಂಧಿ)
  ಊಟ+ಆಯಿತು=ಊಟವಾಯಿತು (‘ವ’ಕಾರಾಗಮ ಸಂಧಿ)
  ಬೇಕು+ಅಷ್ಟೇ=ಬೇಕಷ್ಟೇ (ಲೋಪಸಂಧಿ)
  ವಾರಕ್ಕೆ+ಎರಡು=ವಾರಕ್ಕೆರಡು (ಲೋಪಸಂಧಿ)
  ನನ್ನ+ಅಲ್ಲಿ=ನನ್ನಲ್ಲಿ (ಲೋಪಸಂಧಿ)
  ಆ) “ಲಾಕಪ್ಪಿನಲ್ಲಿ ಒಂದು ರಾತ್ರಿ” ಗದ್ಯಭಾಗದಲ್ಲಿ÷ಬಂದಿರುವ ಅನ್ಯದೇಶ್ಯ ಪದಗಳನ್ನು ಆರಿಸಿ ಬರೆಯಿರಿ.
  ಮಿನಿ, ಪೊಲೀಸ್, ಲಾಕಪ್, ಮೋಟಾರು, ಬಲ್ಬು, ಡಾಲರು, ಹೋಟಲು, ಬ್ರೆಡ್, ಬಿಸ್ಕಿಟ್, ರಿರ‍್ನ್, ಟಿಕೇಟು, ರೈಲ್ವೆ, ಸ್ಟೇಷನ್, ಕಾರು.
  ಇ) ಪದಗಳ ವಿರುದ್ಧಾರ್ಥಕ ರೂಪ ಬರೆಯಿರಿ.
  ಪರಿಚಿತರು x ಅಪರಿಚಿತರು, ಹಗಲು x ಇರುಳು, ಧರ್ಮ x ಅಧರ್ಮ, ಮಿತ್ರ x ಶತ್ರು, ಬೆಳಕು x ಕತ್ತಲು.
  ಈ) ಕೆಳಗೆ ಕೊಟ್ಟಿರುವ ಪದಗಳ ಬಹುವಚನ ರೂಪ ಬರೆಯಿರಿ.
  ಕಣ್ಣು-ಕಣ್ಣುಗಳು, ಮರ-ಮರಗಳು, ಕಾರು-ಕಾರುಗಳು, ನಗರ-ನಗರಗಳು, ಮನೆ-ಮನೆಗಳು, ದಿನ-ದಿನಗಳು, ಮಿತ್ರ-ಮಿತ್ರರು,
  ದೀಪ-ದೀಪಗಳು.
  ಎ) ಕೆಳಗೆ ಕೊಟ್ಟಿರುವ ಪದಗಳ ಲಿಂಗ ಹೆಸರಿಸಿ.
  ಹುಡುಗಿ-ಸ್ತಿçÃಲಿಂಗ, ಅಣ್ಣ-ಪುಲ್ಲಿಂಗ, ಹುಡುಗ-ಪುಲ್ಲಿಂಗ, ಕವಯಿತ್ರಿ-ಸ್ತಿçÃಲಿಂಗ, ರಾಮ-ಪುಲ್ಲಿಂಗ.
  ಏ) ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.
  1) ಗೊರೂರರು ಅಮೇರಿಕಾದಲ್ಲಿ ಮಿತ್ರರನ್ನು ನೋಡಲು ಹೋಗಿದ್ದ ಸ್ಥಳದ ಹೆಸರು ಮಿನಿಪೊಲೀಸ್ ನಗರ.
  2) ಮಿನಿ ಪೊಲೀಸ್ ನಗರದಲ್ಲಿ ದಾರಿತಪ್ಪಿದ ಗೊರೂರರಿಗೆ ಆಶ್ರಯ ನೀಡಿದಾತ ಟ್ರಾಫಿಕ್ ಪೊಲೀಸ್.
  3) ಮಿನಿ ಪೊಲೀಸ್ ನಗರದಲ್ಲಿ ಗೊರೂರರ ಜೇಬಿನಲ್ಲಿ ಎರಡು ಡಾಲರ್ ಜೊತೆಗೆಇದ್ದುದು ಒಂದು ರಿರ‍್ನ್ ಟಿಕೇಟು.
  4) ಮಿನಿಪೊಲೀಸ್ ನಗರದ ಲಾಕಪ್‌ನ್ನು ಸಾರಣೆ ಮಾಡಲು ಬಳಸುತ್ತಿದ್ದ ವಸ್ತು ಕ್ರಿಮಿನಾಶಕ.
  5) ಗೊರೂರರು ಬರೆದಿರುವ ಪ್ರವಾಸಕಥನದ ಹೆಸರು “ಅಮೆರಿಕಾದಲ್ಲಿ ಗೊರೂರು.”

  ಪದ್ಯ – 2ಕಟ್ಟತೇವ ನಾವು.

  *ಕವಿ ಪರಿಚಯ*

  ಸತೀಶ ಕುಲಕರ್ಣಿ

  ಜನ್ಮ ವರ್ಷ: ಜುಲೈ–13, 1951

  ಜನ್ಮ ಸ್ಥಳ: ಗುಡಗೇರಿ (ಧಾರವಾಡ ಜಿಲ್ಲೆ)

  ಕೃತಿಗಳು: ಬೆಂಕಿ ಬೇರು, ನೆಲದ ನೆರಳು, ವಿಕ್ಷಿಪ್ತ, ಒಡಲಾಳ ಕಿಚ್ಚು.

  ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ.

  1) ‘ಕಟ್ಟತೇವ ನಾವು’ ಕವಿತೆಯಲ್ಲಿ ಕವಿ ಯಾವೆಲ್ಲ ಮನಸ್ಸುಗಳನ್ನು ಕಟ್ಟುತ್ತೇವೆ ಎಂದು ಹೇಳುತ್ತಾರೆ?

  ಉತ್ತರ: ‘ಕಟ್ಟತೇವ ನಾವು’ ಕವಿತೆಯಲ್ಲಿ ಕವಿ ಅಪನಂಬಿಕೆ, ಮೌಢ್ಯತೆ, ಅಸಮಾನತೆಯಿಂದ ಸಂಬಂಧ ಕಳೆದು ಹೋದ ಜನರ

  ಮನಸ್ಸುಗಳನ್ನು ಕಟ್ಟುತ್ತೇವೆ ಎಂದು ಹೇಳುತ್ತಾರೆ.

  2) ಎಂತಹ ಬಾಳನ್ನು ಕಟ್ಟುತ್ತೇವೆ ಎಂದು ‘ಕಟ್ಟತೇವ ನಾವು’ ಕವಿತೆ ಭರವಸೆ ನೀಡುತ್ತದೆ? (2018)

  ಉತ್ತರ: ಜಾತಿ, ಭೀತಿ ಇಲ್ಲದ ಜನರ ಬಾಳನ್ನು ಕಟ್ಟತ್ತೇವೆ ಎಂದು ‘ಕಟ್ಟತೇವ ನಾವು’ ಕವಿತೆ ಭರವಸೆಯನ್ನು ನೀಡುತ್ತದೆ.

  3) ‘ಕಟ್ಟತೇವು ನಾವು’ ಕವಿತೆಯಲ್ಲಿ ಬರುವ ಕ್ರಾಂತಿಕಾರಿಗಳು ಎಂತಹ ಕುಂಡವನ್ನು ಹೊತ್ತಿದ್ದೇವೆಂದು ಹೇಳುತ್ತಾರೆ?

  ಉತ್ತರ: ‘ಕಟ್ಟುತೇವ ನಾವು’ ಕವಿತೆಯಲ್ಲಿ ಬರುವ ಕ್ರಾಂತಿಕಾರಿಗಳು ಕ್ರಾಂತಿ ಎಂಬ ಕೆಂಡದ ಕುಂಡವನ್ನು ಹೊತ್ತಿದ್ದೇವೆಂದು

  ಹೇಳುತ್ತಾರೆ.

  4) ಮನುಕುಲವನ್ನು ಹೇಗೆ ಕಟ್ಟುತ್ತೇವೆಂದು ಕವಿ ಕುಲಕರ್ಣಿಯವರು ಹೇಳಿದ್ದಾರೆ?

  ಉತ್ತರ: ಕುಲವೆನ್ನದ ಮನುಕುಲವನ್ನು ಕಟ್ಟುತ್ತೇವೆಂದು ಕವಿ ಕುಲಕರ್ಣಿಯವರು ಹೇಳಿದ್ದಾರೆ.

  5) ‘ಕಟ್ಟತೇವ ನಾವು’ ಕವಿತೆಯಲ್ಲಿನ ಕ್ರಾಂತಿಕಾರಿಗಳ ಕಾಲುಗಳು ಏಕೆ ರಕ್ತವಾಗಿವೆ?

  ಉತ್ತರ: ‘ಕಟ್ಟುತೇವ ನಾವು’ ಕವಿತೆಯಲ್ಲಿ ಕ್ರಾಂತಿಕಾರಿಗಳ ಕಾಲುಗಳು ಮುಳ್ಳು ತುಳಿದ ಕಾರಣ ರಕ್ತವಾಗಿವೆ.

  6) ಕುಲಕರ್ಣಿಯವರು ಕ್ರಾಂತಿಯನ್ನು ಯಾವುದಕ್ಕೆ ಹೋಲಿಸಿದ್ದಾರೆ?

  ಉತ್ತರ: ಕುಲಕರ್ಣಿಯವರು ಕ್ರಾಂತಿಯನ್ನು ಬೆಂಕಿಯ ಕೆಂಡದ ಕುಂಡಕ್ಕೆ ಹೋಲಿಸಿದ್ದಾರೆ.

  7) ಸತೀಶ ಕುಲಕರ್ಣಿಯವರು ಎಂತಹ ಹಾಡನ್ನು ಕಟ್ಟುತ್ತೇವೆಂದು ಹೇಳಿದ್ದಾರೆ?

  ಉತ್ತರ: ಸತೀಶ ಕುಲಕರ್ಣಿಯವರು ನೂರು ಮನಸ್ಸಿನ ಕೋಟಿ ಕನಸಿನ ಹಾಡನ್ನು ಕಟ್ಟುತ್ತೇವೆಂದು ಹೇಳಿದ್ದಾರೆ.

  ಆ) ಕೆಳಗಿನ ಪ್ರಶ್ನೆಗಳಿಗೆ ಎರಡು/ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

  1) ಮನುಷ್ಯರ ನಡುವಿನ ವೈಮನಸ್ಸುನ್ನು ತೊಡೆದು ಹಾಕುವ ಕನಸು ‘ಕಟ್ಟತೇವ ನಾವು’ ಕವಿತೆಯಲ್ಲಿ ಹೇಗೆ ವ್ಯಕ್ತವಾಗಿದೆ?

  ಉತ್ತರ: ದೇಶದಲ್ಲಿಂದು ಅಸಮಾನತೆ, ಜಾತಿಪದ್ಧತಿ, ಅನ್ಯಾಯ, ಅಜ್ಞಾನ, ದೌರ್ಜನ್ಯ, ಶೋಷಣೆ ಈ ಎಲ್ಲಿ ಸಮಸ್ಯೆಗಳಿಂದ

  ಜನಸಾಮಾನ್ಯರ ಮನಸ್ಸು ಒಡೆದು ಹೋಗಿದೆ. ಕ್ರಾಂತಿ ಗೀತೆಗಳ ಮೂಲಕ ಮನುಷ್ಯರ ನಡುವಿನ ವೈಮನಸ್ಸನ್ನು ತೊಡೆದು ಹಾಕುವ ಕನಸು ಈ ಕವಿತೆಯಲ್ಲಿ ವ್ಯಕ್ತವಾಗಿದೆ.

  2) ಸತೀಶ ಕುಲಕರ್ಣಿಯವರು ಎಂತಹ ನಾಡನ್ನು ಕಟ್ಟುತ್ತೇವೆ ಎಂದು ಆತ್ಮ ವಿಶ್ವಾಸದಿಂದ ಹೇಳಿದ್ದಾರೆ?

  ಉತ್ತರ: ಜಾತಿಇಲ್ಲದ, ಭೀತಿಇಲ್ಲದ ಬಾಳನ್ನು ಕಟ್ಟುತ್ತ ಕುಲವೆನ್ನದೆ, ಮಾನವ ಕುಲ ಒಂದೇ ಎನ್ನುವ ನಾಡನ್ನು ನಾವು ಕಟ್ಟುತ್ತೇವೆ ಎಂದು ಸತೀಶ ಕುಲಕರ್ಣಿಯವರು ಆತ್ಮ ವಿಶ್ವಾಸದಿಂದ ಹೇಳಿದ್ದಾರೆ.

  3) ಶೋಷಣೆಯನ್ನು ವಿರೋಧಿಸುವವರು ಪಡಬೇಕಾದ ಕಷ್ಟ ‘ಕಟ್ಟತೇವ ನಾವು’ ಕವಿತೆಯಲ್ಲಿ ಹೇಗೆ ಅಭಿವ್ಯಕ್ತಿಗೊಂಡಿದೆ?

  ಉತ್ತರ: ಶೋಷಣೆಯನ್ನು ವಿರೋಧಿಸುವವರು ಮುಳ್ಳು ಹಾದಿಯನ್ನು ತುಳಿಯಬೇಕಾಗುತ್ತದೆ. ರಕ್ತಸಿಕ್ತವಾದ ಕಾಲಿನಿಂದ ತಮ್ಮ

  ಪಾಲಿನ ಹಾಡನ್ನು ನೆಲದ ಮೇಲೆ ಬರೆಯಬೇಕಾಗುತ್ತದೆ ಎಂದು ಈ ಕವಿತೆಯಲ್ಲಿ ಅವರ ಕಷ್ಟ ಅಭಿವ್ಯಕ್ತಗೊಂಡಿದೆ.

  4) ‘ಕಟ್ಟುತೇವ ನಾವು’ ಕವಿತೆಯು ಕ್ರಾಂತಿಕಾರಿಗಳ ಕನಸಿನ ಹಾಡನ್ನು ಹೇಗೆ ಕಟ್ಟಲು ಬಯಸುತ್ತಿದೆ?

  ಉತ್ತರ: ಗೋಳಿಲ್ಲದ, ಗುಂಡಿಲ್ಲದ ಹೊಸ ನಾಡೊಂದನ್ನು ನಾವು ಕಟ್ಟಬೇಕಾಗಿದೆ. ನೂರು ಮನಸಿನೊಳಗಿರುವ ಕೋಟಿ ಕನಸುಗಳನ್ನು ನನಸು ಮಾಡುವಂತಹ ಹೊಸ ಹಾಡನ್ನು ಕಟ್ಟಲು ಕ್ರಾಂತಿಕಾರಿಗಳ ಮೂಲಕ ಈ ಪದ್ಯವು ಬಯಸುತ್ತಿದೆ.

  ಇ) ಕೆಳಗಿನ ಪ್ರಶ್ನೆಗಳಿಗೆ ಎಂಟು/ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ.

  1) ಯಾವುದೇ ತಾರತಮ್ಯಗಳಿಲ್ಲದ ಸಮಾಜ ನಿರ್ಮಾಣದ ಆಶಯ ಸತೀಶ ಕುಲಕರ್ಣಿ ಅವರ ಕವಿತೆಯಲ್ಲಿ ಹೇಗೆ ಅಂತರ್ಗತವಾಗಿದೆ? ವಿವರಿಸಿ.

  ಉತ್ತರ: ನಾವು ಇಂದು ಅಪನಂಬಿಕೆಯಿAದ ಸಂಬAಧ ಕಳೆದು ಕೊಡುವಂತಹ ಜನರ ಒಡೆದ ಮನಸ್ಸಗಳನ್ನು ಕಟ್ಟಬೇಕಾಗಿದೆ.

  ಬಾಲ್ಯದಲ್ಲಿ ಮುಗ್ದವಾಗಿ ಕಂಡಿರುವ ಆ ಕನಸುಗಳನ್ನು ನನಸು ಮಾಡಬೇಕಾಗಿದೆ. ಜಾತಿ ಇಲ್ಲದಂತಹ, ಭೀತಿ ಇಲ್ಲದಂತಹ ನಮ್ಮೆಲ್ಲರ ಬಾಳನ್ನು ಕಟ್ಟಿಕೊಳ್ಳುತ್ತ ಕುಲವೇ ಎನ್ನದ ಹೊಸ ಮನುಕುಲವನ್ನು ನಾವಿಂದು ಕಟ್ಟಬೇಕಾಗಿದೆ. ಹೊಸ ನಾಡೊಂದನ್ನು ಕಟ್ಟಬೇಕಾಗಿದೆ. ದುಃಖವಿಲ್ಲದ, ಗುಂಡಿಲ್ಲದ ನಾಡನ್ನು ನಾವೆಲ್ಲರೂ ಕಟ್ಟಬೇಕಾಗಿದೆ. ನೂರು ಮನಸ್ಸಿನೊಳಗಿರುವ ಕೋಟಿ ಕನಸಿನ ಸಮಾನತೆಯ ಹಾಡನ್ನು ನಾವು ಕಟ್ಟಬೇಕಾಗಿದೆ. ಈ ರೀತಿಯಾಗಿ ಸತೀಶ ಕುಲಕರ್ಣಿಯವರ ಕವಿತೆಯಲ್ಲಿ ತಾರತಮ್ಯಗಳಿಲ್ಲದ ಸಮಾಜ ನಿರ್ಮಾಣದ ಆಶಯ ಅಂತರ್ಗತವಾಗಿದೆ.

  2) ‘ಕಟ್ಟತೇವ ನಾವು’ ಕವಿತೆಯು ಸಮಾಜದಲ್ಲಿರುವ ಅಸಮಾನತೆಯನ್ನು ಹೋಗಲಾಡಿಸಬೇಕಾಗಿರುವ ಅವಶ್ಯಕತೆಯನ್ನು ಹೇಗೆ ಪ್ರತಿಪಾದಿಸುತ್ತದೆ?

  ಉತ್ತರ: ಸಮಾಜದಲಿ ್ಲಇಂದು ಅಸಮಾನತೆ, ಜಾತಿಪದ್ಧತಿ, ಅಜ್ಞಾನ, ಅನ್ಯಾಯ, ದೌರ್ಜನ್ಯ, ಶೋಷಣೆ ಕಂಡು, ಬಂದು ಜನ ಸಾಮಾನ್ಯರ ಏಳಿಗೆಗೆ ಈ ಸಮಸ್ಯೆಗಳೆಲ್ಲಾ ಮಾರಕವಾಗಿವೆ. ಸಮುದಾಯದ ಹಿತದೃಷ್ಟಿಯಿಂದ ತಮ್ಮ ಹಕ್ಕಿಗಾಗಿ ಹೋರಾಟದ ಹಾದಿಯನ್ನು ಹಿಡಿಯಬೇಕಾಗುತ್ತದೆ. ಸಮಾಜ ಸುಧಾರಕರು, ಕ್ರಾಂತಿಕಾರಿಗಳು ಕ್ರಾಂತಿಗೀತೆಗಳನ್ನು ರಚಿಸುತ್ತ, ದೇಶಾದ್ಯಂತ ಹೊಸ ಸಂಚಲನ ಶಕ್ತಿಯನ್ನು ಮೂಡಿಸುತ್ತ, ಜನರಲ್ಲಿ ಭರವಸೆಯ ಬೆಳಕನ್ನು ಮೂಡಿಸಿ, ನಾವೆಲ್ಲರೂ ಇಂದು ಒಗ್ಗಟ್ಟಾಗಿ, ಜಾತಿ ಭೀತಿ ಇಲ್ಲದ, ಗೋಳು ಗುಂಡಿಲ್ಲದ ಹೊಸ ನಾಡನ್ನು ಕಟ್ಟಬೇಕಾಗಿದೆ. ಕುಲದಲ್ಲಿ ತಾರತಮ್ಯ ಮಾಡದೇ, ಮನುಕುಲವನ್ನು ಕಟ್ಟಬೇಕಾಗಿದೆ. ನೂರು ಮನಸಿನ, ಕೋಟಿ ಕನಸಿನ ಹಾಡನ್ನು ಕಟ್ಟಬೇಕಾಗಿದೆ. ಈ ರೀತಿಯಾಗಿ ಈ ಪದ್ಯವು ಸಮಾಜದಲ್ಲಿರುವ ಅಸಮಾನತೆಯನ್ನು ಹೋಗಲಾಡಿಸಬೇಕಾಗಿರುವ ಅವಶ್ಯಕತೆಯನ್ನು ಪ್ರತಿಪಾದಿಸುತ್ತದೆ.

  ಈ) ಕೆಳಗಿನ ಸಾಲುಗಳ ಸ್ವಾರಸ್ಯಗಳನ್ನು ಸಂದರ್ಭದೊಂದಿಗೆ ವಿವರಿಸಿರಿ.

  1) ‘ರಕ್ತಗಾಲಿನ ನಮ್ಮ ಪಾಲಿನ ಹಾಡ ಬರೆಯತೇವ’

  ಪದ್ಯದ ಹೆಸರು: ಕಟ್ಟತೇವ ನಾವು

  ಕವಿಗಳ ಹೆಸರು: ಸತೀಶ ಕುಲಕರ್ಣಿ

  ಸಂದರ್ಭ: ಕವಿಗಳು ಕ್ರಾಂತಿಕಾರಿಗಳ ಕಷ್ಟದ ಬಗೆಗೆ ಹೇಳುವಾಗ ಈ ಮಾತನ್ನು ನುಡಿದಿದ್ದಾರೆ.

  ವಿವರಣೆ: ಕ್ರಾಂತಿಕಾರಿಗಳು ಸಮಾಜದಲ್ಲಿ ಸಮಾನತೆ ತರಲು ಬಯಸಿ, ಸಾಮಾಜಿಕ ಸಮಸ್ಯೆಗಳ ವಿರುದ್ಧ ಕ್ರಾಂತಿಯ ಕುಂಡವನ್ನು ಹೊತ್ತು, ಮುಳ್ಳಿನ ಹಾದಿ ತುಳಿಯತ್ತಿದ್ದಾರೆ. ಪಡಬಾರದ ಕಷ್ಟ, ನೋವು, ಯಾತನೆ ಪಡುತ್ತಿದ್ದಾರೆ ಎಂದು ಹೇಳತ್ತ ಕವಿಗಳು ಈ ಮೇಲಿನ ಮಾತನ್ನು ನುಡಿದಿದ್ದಾರೆ.

  2) ‘ಗೊಳಿಲ್ಲದ ಗುಂಡಿಲ್ಲದ ನಾಡ ಕಟ್ಟತೇವ’

  ಪದ್ಯದ ಹೆಸರು:ಕಟ್ಟತೇವ ನಾವು

  ಕವಿಗಳ ಹೆಸರು: ಸತೀಶ ಕುಲಕರ್ಣಿ

  ಸಂದರ್ಭ: ಕವಿಯು ಈ ಮಾತನ್ನು ನಮ್ಮನ್ನುದ್ದೇಶಿಸಿ ನುಡಿದಿದ್ದಾರೆ.

   

  ವಿವರಣೆ: ನಾವಿಂದು ಸಮಾಜದ ಜನ ಸಾಮಾನ್ಯರಲ್ಲಿ ಗೋಳಿಲ್ಲದ ಬಂದೂಕಿನ ಗುಂಡಿಲ್ಲದ ಹೊಸ ನಾಡೊಂದನ್ನು ಕಟ್ಟಬೇಕಾಗಿದೆ ಎಂಬ ಆಶಯವನ್ನು ವ್ಯಕ್ತಪಡಿಸುತ್ತ ಕವಿಗಳು ಈ ಮೇಲಿನ ಮಾತನ್ನು ನುಡಿದಿದ್ದಾರೆ.

  3) ‘ಒಡೆದ ಮನಸುಗಳ ಕಂಡ ಕನಸುಗಳ ಕಟ್ಟೇ ಕಟ್ಟತೇವ’ (2018)

  ಪದ್ಯದ ಹೆಸರು: ಕಟ್ಟತೇವ ನಾವು

  ಕವಿಗಳ ಹೆಸರು: ಸತೀಶ ಕುಲಕರ್ಣಿ

  ಸಂದರ್ಭ: ಕವಿಗಳು ಈ ಮಾತನ್ನು ನಮಗೆ ನುಡಿದಿದ್ದಾರೆ.

  ವಿವರಣೆ: ಸಾಮಾಜಿಕ ಸಮಸ್ಯೆಗಳಿಂದ ಹಾಗೂ ಅಪನಂಬಿಕೆಯಿAದ ಜನಸಾಮಾನ್ಯರ ಮನಸ್ಸುಗಳು ಒಡೆದು ಹೋಗಿವೆ. ಅಂತಹ ಮನಸ್ಸುಗಳನ್ನು ಬಾಲ್ಯದಲ್ಲಿ ಕಂಡ ಕನಸುಗಳನ್ನು ನಾವು ಕಟ್ಟೇ ಕಟ್ಟತೇವ ಎಂದು ಕವಿಗಳು ವಿಶ್ವಾಸದಿಂದ ಈ ಮೇಲಿನ ಮಾತನ್ನು ನಮಗೆ ನುಡಿದಿದ್ದಾರೆ.

  ಭಾಷಾಭ್ಯಾಸ

  ಅ) ಕೆಳಗಿನ ಪದಗಳ ಗ್ರಾಂಥಿಕರೂಪ ಬರೆಯಿರಿ.

  ಕಟ್ಟತೇವ-ಕಟ್ಟುತ್ತೇವೆ, ಬರೆಯತೇವ-ಬರೆಯುತ್ತೇವೆ, ನೆಲಕ-ನೆಲಕ್ಕೆ, ತುಳಿಯತೇವ-ತುಳಿಯುತ್ತೇವೆ.

  ಆ) ಕೆಳಗಿನ ಪದಗಳನ್ನು ಬಿಡಿಸಿ ಬರೆದು, ಸಂಧಿಗಳನ್ನು ಹೆಸರಿಸಿ.

  ಗುಂಡು + ಇಲ್ಲದ= ಗುಂಡಿಲ್ಲದ (ಲೋಪಸಂಧಿ)

  ಕುಲ + ಎನ್ನದ = ಕುಲವೆನ್ನದ (‘ವ’ಕಾರಾಗಮ ಸಂಧಿ) ರಕ್ತ + ಕಾಲಿನ = ರಕ್ತಗಾಲಿನ (ಆದೇಶ ಸಂಧಿ)

  ಗೋಳು + ಇಲ್ಲದ = ಗೋಳಿಲ್ಲದ (ಲೋಪ ಸಂಧಿ)

  ಇ) ಕೆಳಗಿನ ಪದಗಳನ್ನು ನಿಮ್ಮ ಸ್ವಂತ ವಾಕ್ಯಗಳಲ್ಲಿ ಬಳಸಿರಿ.

  ಕನಸು, ಕ್ರಾಂತಿ, ನಾಡು, ಪಾಲು.

  ಈ) ‘ಕಟ್ಟತೇವ ನಾವು’ ಪದ್ಯದ ಎರಡು ಮತ್ತು ನಾಲ್ಕನೇ ನುಡಿಗಳನ್ನು ಕಂಠಪಾಠ ಮಾಡಿರಿ.

  ಜಾತಿಇಲ್ಲದ

  ಭೀತಿಇಲ್ಲದ

  ಬಾಳ ಕಟ್ಟತೇವ

  ಕುಲವೆನ್ನದ ಮನುಕುಲವ

  ನಾವು ನಾಡ ಕಟ್ಟತೇವ !!ಕಟ್ಟತೇವ ನಾವು!!

  ಕ್ರಾಂತಿ ಕೆಂಡದ

  ಕೊಡ ಹೊತ್ತು ನಾವು

  ಮುಳ್ಳು ತುಳಿಯತೇವ

  ರಕ್ತಗಾಲಿನ ನಮ್ಮ ಪಾಲಿನ ಹಾಡ ಬರೆಯತೇವ

  ನೆಲಕ ಹಾಡ ಬರೆಯತೇವ !!ಕಟ್ಟತೇವ ನಾವು!!

  ಪಾಠ – 3. ಕೊಡಗಿನ ಗೌರಮ್ಮ.

  * ಲೇಖಕಿಯ ಪರಿಚಯ *

  ಮ. ನ. ಮುಕ್ತಾಯಿ

  ಜನ್ಮ ವರ್ಷ: 1961.

  ಜನ್ಮ ಸ್ಥಳ: ಶಿವಮೊಗ್ಗ ಜಿಲ್ಲೆಯ ಅರತೊಳಲು.

  ಕೃತಿಗಳು: ಸಣ್ಣಕತೆ, ಜೀವನಚರಿತ್ರೆ, ಲೇಖನ, ಪ್ರಬಂಧಗಳು, ಕೊಡಗಿನ ಗೌರಮ್ಮ ಜೀವನಚರಿತ್ರೆ.

  ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ.

  1) ಆಧುನಿಕ ಕನ್ನಡ ಸಾಹಿತ್ಯದ ಮೊದಲ ಸಮಕಾಲೀನ ಸಂವೇದನಾಶೀಲ ಲೇಖಕಿಯರು ಯಾರು ಯಾರು?

  ಉತ್ತರ- ನಂಜನಗೂಡಿನ ತಿರುಮಲಾಂಬ, ಬೆಂಗಳೂರಿನ ಆರ್.ಕಲ್ಯಾಣಮ್ಮ, ತಿರುಮಲೆರಾಜಮ್ಮ, ದಕ್ಷಿಣಕನ್ನಡದ ಸರಸ್ವತಿಬಾಯಿ ರಾಜವಾಡೆ, ಕೊಡಗಿನ ಗೌರಮ್ಮ ಮುಂತಾದವರೆಲ್ಲಾ ಆಧುನಿಕ ಕನ್ನಡ ಸಾಹಿತ್ಯದ ಮೊದಲ ಸಮಕಾಲೀನ ಸಂವೇದನಾಶೀಲ ಲೇಖಕಿಯರು.

  2) ಕೊಡಗಿನ ಗೌರಮ್ಮನವರ ವಿವಾಹವು ಯಾರೊಡನೆ ಆಯಿತು?

  ಉತ್ತರ-ಕೊಡಗಿನ ಗೌರಮ್ಮನವರ ವಿವಾಹವು ಶ್ರೀ. ಬಿ. ಟಿ. ಗೋಪಾಲಕೃಷ್ಣಯ್ಯನವರೊಡನೆ 1925ರಲ್ಲಿ ಆಯಿತು.

  3) ಮಂಜುನಾಥಯ್ಯನವರ ಮನೆಯಲ್ಲಿ ಆಗಾಗ್ಗೆ ಮೊಕ್ಕಾಂ ಹೂಡುತ್ತಿದ್ದ ಸಾಹಿತಿಗಳು ಯಾರು ಯಾರು?

  – ಶಿವರಾಮ ಕಾರಂತ, ಮಾಸ್ತಿ ವೆಂಕಟೇಶಅಯ್ಯAಗಾರ್, ದ.ರಾ. ಬೇಂದ್ರೆ ಮುಂತಾದ ಹೆಸರಾಂತ ಲೇಖಕರು

  ಮಂಜುನಾಥಯ್ಯನವರ ಮನೆಯಲ್ಲಿ ಆಗಾಗ್ಗೆ ಮೊಕ್ಕಾಂ ಹೂಡುತ್ತಿದ್ದರು.

  4) ಕೊಡಗಿನ ಗೌರಮ್ಮನವರು ಯಾವುದರ ಬಗೆಗೆ ಅಪಾರ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು?

  – ಕೊಡಗಿನ ಗೌರಮ್ಮನವರು ಸ್ವಾತಂತ್ರö್ಯ ಚಳುವಳಿಯ ಬಗೆಗೆ ಅಪಾರ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು.

  5) ಕೊಡಗಿನ ಗೌರಮ್ಮನವರು ಅಕಾಲಿಕ ಮರಣ ಹೊಂದಿದ್ದೇಕೆ?

  – ಹರಿಯುವ ಹಟ್ಟಿಹೊಳೆಯಲ್ಲಿ ಈಜಾಡುವಾಗ ಸುಳಿಗೆ ಸಿಲುಕಿ ಗೌರಮ್ಮನವರು ಅಕಾಲಿಕ ಮರಣ ಹೊಂದಿದರು.

  6) ಆರ್. ಕಲ್ಯಾಣಮ್ಮ ಯಾರು?

  – ಆರ್. ಕಲ್ಯಾಣಮ್ಮ ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತೆ ಹಾಗೂ ಪ್ರಸಿದ್ಧ ಕನ್ನಡ ಲೇಖಕಿಯಾಗಿದ್ದರು.

  ಆ) ಕೆಳಗಿನ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರ ಬರೆಯಿರಿ.

  1) ಕೊಡಗಿನ ಗೌರಮ್ಮನವರ ಬರವಣಿಗೆಗೆ ಪೂರಕ ಹಾಗೂ ಪ್ರೇರಕವಾದ ವಿಚಾರಗಳು ಯಾವುವು?

  – ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತೆ ಹಾಗೂ ಲೇಖಕಿಯಾಗಿದ್ದ ಆರ್.ಕಲ್ಯಾಣಮ್ಮನವರೊಡನೆ ಕೊಡಗಿನ ಗೌರಮ್ಮನವರು

  ಸಂಪರ್ಕಇಟ್ಟುಕೊAಡಿದ್ದರು.ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದ ಚರ್ಚೆ, ಬದಲಾವಣೆಗಳು ಮತ್ತು ಹೊಸ ಬರವಣಿಗೆಯ

  ಸಂಪರ್ಕ ಇವೆಲ್ಲ ಗೌರಮ್ಮನವರ ಬರವಣಿಗೆಗೆ ಪೂರಕ ಹಾಗೂ ಪ್ರೇರಕವಾದ ವಿಚಾರಗಳಾಗಿದ್ದವು.

  2) ಗಾಂಧೀಜಿಯವರು ಗೌರಮ್ಮನವರ ಮನೆಗೆ ಏಕೆ ಬಂದರು?

  – ಕೊಡಗಿನ ಗೌರಮ್ಮ ಮಹಾತ್ಮ ಗಾಂಧೀಜಿಯವರ ಪರಮ ಅನುಯಾಯಿಯಾಗಿದ್ದರು. ಇವರು ತಮ್ಮ 21ನೇ ವಯಸ್ಸಿನಲ್ಲಿಯೇ ಉಪವಾಸ ಸತ್ಯಾಗ್ರಹ ಮಾಡಿ, ಗಾಂಧೀಜಿಯವರು ತಮ್ಮಂತಹ ಸಾಧಾರಣ ಕುಟುಂಬದವರ ಮನೆಗೆ ಬರಬೇಕೆಂದು ಆಗ್ರಹಿಸಿದ್ದರು. ಗಾಂಧೀಜಿ ಕರ್ನಾಟಕದ ಪ್ರವಾಸ ಕೈಗೊಂಡಾಗ ಗೌರಮ್ಮನವರ ಉಪವಾಸ ಅಂತ್ಯಗೊಳಿಸಿ, ಅವರ ಮನೆಗೆ ಹೋಗಿದ್ದರು.

  3) ಕೊಡಗಿನ ಗೌರಮ್ಮನವರು ಸ್ವಾತಂತ್ರö್ಯ ಚಳುವಳಿಯಲ್ಲಿ ತಮ್ಮನ್ನು ಹೇಗೆ ತೊಡಗಿಸಿಕೊಂಡರು?

  -ಕೊಡಗಿನ ಗೌರಮ್ಮನವರು ಸ್ವಾತಂತ್ರö್ಯ ಚಳುವಳಿಯ ಬಗೆಗೆ ಅಪಾರ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು. ಇವರು ಸ್ವತಃ ಖಾದಿ ಬಟ್ಟೆಯನ್ನು ಧರಿಸುತ್ತಿದ್ದರು. ಗಾಂಧೀಜಿಯವರ ಪರಮ ಅನುಯಾಯಿಗಳಾಗಿದ್ದರು. ಈ ರೀತಿಯಾಗಿ ಗೌರಮ್ಮನವರು ಸ್ವಾತಂತ್ರ ಚಳುವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು.

  4) ಗಾಂಧೀಜಿಯವರು ಅವಾಕ್ಕಾಗಲು ಕಾರಣವೇನು?

  – ಕೊಡಗಿನ ಗೌರಮ್ಮನವರು ಗಾಂಧೀಜಿಯವರ ಸ್ವಾತಂತ್ರö್ಯ ಸಂಗ್ರಾಮ ಮತ್ತು ಹರಿಜನೋದ್ಧಾರ ಸಂಬAಧ ನಿಧಿಗೆ ತನ್ನ ಕೊರಳಿನ  ಮಂಗಳಸೂತ್ರ, ಕಿವಿಯ ಓಲೆ ಮತ್ತು ಮೂಗುಬೊಟ್ಟಿನ ಹೊರತಾಗಿ ಉಳಿದೆಲ್ಲಾ ಒಡವೆಗಳನ್ನು ಗಾಂಧೀಜಿಯವರ ಕೈಗೆ ಕೊಟ್ಟಾಗ ಅವರು ಅವಕ್ಕಾದರು.

  5) ಕೊಡಗಿನ ಗೌರಮ್ಮನವರ ಬರವಣಿಗೆಯಲ್ಲಿ ಕಂಡುಬರುವ ಪ್ರಮುಖ ವಿಚಾರಗಳಾವುವು?

  – ಕೊಡಗಿನ ಗೌರಮ್ಮನವರ ಬರವಣಿಗೆಯಲ್ಲಿ ಮಹಿಳೆಯರ ಸಮಸ್ಯೆ, ಮಹಿಳಾ ಲೋಕದ ಕನಸುಗಳ ಆದರ್ಶಗಳು, ಮಾನವ

  ಜೀವಿಗಳ ಸ್ವಾತಂತ್ರö್ಯ ಸದಭಿರುಚಿ, ಹೊಸ ಜಾತ್ಯಾತೀಯ ಮನೋಧರ್ಮದ ಸಮಾಜ ನಿರ್ಮಾಣ ಈ ಎಲ್ಲ ಪ್ರಮುಖ ವಿಚಾರಗಳು ಕಂಡು ಬರುತ್ತವೆ.

  ಇ) ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರ ಬರೆಯಿರಿ.

  1) ಗಾಂಧೀಜಿಯವರು ಕೊಡಗಿನಲ್ಲಿತಂಗಿದ್ದಾಗ ನಡೆದ ಸಂಗತಿಗಳನ್ನು ಕುರಿತು ಬರೆಯಿರಿ. (2018)

  – 1933ನೇ ವರ್ಷದ ಕೊನೆಯಲ್ಲಿ ಗಾಂಧೀಜಿಯವರು ಕರ್ನಾಟಕದ ಪ್ರವಾಸ ಕೈಗೊಂಡು ಕೊಡಗಿನಲ್ಲಿ ಎರಡು ದಿನ ನಿಲ್ಲುವ

  ಕಾರ್ಯಕ್ರಮ ಹಾಕಿಕೊಂಡಿದ್ದರು. ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ಗೌರಮ್ಮರನ್ನು ಭೇಟಿಯಾಗಿ ಕಿತ್ತಲೆ ಹಣ್ಣು ನೀಡಿ ಉಪವಾಸ

  ಅಂತ್ಯಗೊಳಿಸಿ ಅವರ ಇಚ್ಛೆಯಂತೆ ಅವರ ಮನೆಗೂ ಹೋಗಿದ್ದರು. ಆಗ ಗೌರಮ್ಮ ಗಾಂಧೀಜಿಯವರಿಗೆ ಸ್ವಾತಂತ್ರö್ಯ ಸಂಗ್ರಾಮ ಮತ್ತು

  ಹರಿಜನರ ಉದ್ಧಾರ ನಿಧಿಗೆ ತನ್ನ ಕೊರಳಿನ ಮಂಗಳಸೂತ್ರ, ಕಿವಿಯ ಓಲೆ ಮತ್ತು ಮೂಗುಬೊಟ್ಟಿನ ಹೊರತಾಗಿ ಉಳಿದೆಲ್ಲಾ

  ಒಡವೆಗಳನ್ನು ನೀಡಿದ್ದರು. ಗೌರಮ್ಮನವರ ಉದಾರ ಮನಸ್ಸು ನೋಡಿ ಗಾಂಧೀಜಿ ಅಕ್ಷರಶಃ ಅವಕ್ಕಾಗಿದ್ದರು.

  2) ಕೊಡಗಿನ ಗೌರಮ್ಮನವರ ಸಾಹಿತ್ಯ ಸೃಷ್ಟಿಗೆ ಪೂರಕವಾದ ವಿಚಾರಗಳನ್ನು ಕುರಿತು ಬರೆಯಿರಿ. (2018)

  – ನಮ್ಮ ದೇಶಕ್ಕೆ ಸ್ವಾತಂತ್ರö್ಯ ಸಿಗುವ ಮೊದಲೆ ಕೊಡಗಿನ ಗೌರಮ್ಮನವರು ಮಹಿಳೆಯರ ಸಮಸ್ಯೆ ಕುರಿತು ಬರೆಯುವ ಗಟ್ಟಿತನವನ್ನು ತೋರಿದ್ದರು. ಬೆಂಗಳೂರಿನ ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತೆ ಹಾಗೂ ಲೇಖಕಿಯರಾಗಿದ್ದ ಆರ್. ಕಲ್ಯಾಣಮ್ಮ ಅವರೊಡನೆ ಸಂಪರ್ಕವನ್ನು ಇವರು ಇಟ್ಟುಕೊಂಡಿದ್ದರು. ಹೀಗಾಗಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದ ಚರ್ಚೆ, ಬದಲಾವಣೆಗಳು ಮತ್ತು ಹೊಸ ಬರವಣಿಗೆಯ ಸಂಪರ್ಕ ಗೌರಮ್ಮನವರ ಬರವಣಿಗೆಗೆ ಪೂರಕವಾದವು. ಜಾನಪದ ಸಾಹಿತ್ಯದ ಬಗೆಗೆ ಕುತೂಹಲ ಇದ್ದ ಇವರು ಕೆಲವು ಜನಪದ ಗೀತೆಗಳನ್ನು ಸಂಗ್ರಹಿಸಿದ್ದರು. ಗೌರಮ್ಮ ತಮ್ಮ ಕಥೆಗಳಲ್ಲಿ ಮಹಿಳಾ ಲೋಕದ ಕನಸುಗಳ, ಆದರ್ಶಗಳ ಚಿತ್ರಣವನ್ನು ನೀಡಲು ಪ್ರಯತ್ನಿಸಿದರು. ಮಾನವಜೀವಿಗಳ ಸ್ವಾತಂತ್ರö್ತ ಸದಭಿರುಚಿಯ ಹಾಗೂ ಮನದಾಳದ ಅನಿಸಿಕೆಗಳಿಗೆ ಪೂರಕವಾಗಿ ನಿಲ್ಲಬಲ್ಲ ಹೊಸ ಸಮಾಜವೊಂದರ ನಿರ್ಮಾಣದ ಶಕ್ತಿಯಿರುವುದು ಪ್ರತಿಬಿಂಬಿತವಾಗುತ್ತಿತ್ತು.

  3) ‘ಕೊಡಗಿನ ಗೌರಮ್ಮನವರು ಆ ಕಾಲದ ಮಹಿಳಾ ಸದಭಿರುಚಿಯ ದ್ಯೋತಕವಾಗಿದ್ದರು.’ ಈ ಹೇಳಿಕೆಯನ್ನು ಸಮರ್ಥಿಸಿರಿ.

  – ಗೌರಮ್ಮ ಸಮುದಾಯದ ಬದುಕಿನಲ್ಲಿ ಕಂಡು ಕೇಳಿದ ಘಟನೆಗಳನ್ನು ತಮ್ಮ ಅನುಭವದ ಹಿನ್ನಲೆಯಲ್ಲಿ ಮಹಿಳಾ ಲೋಕದ

  ಕನಸುಗಳ, ಆದರ್ಶಗಳ ಚಿತ್ರಣವನ್ನು ತಮ್ಮ ಕಥೆಗಳಲ್ಲಿ ನೀಡಲು ಪ್ರಯತ್ನಸಿದರು. ಆರೋಗ್ಯಕರ ನಿಲುವು, ಜಾತ್ಯಾತೀತ

  ಮನೋಧರ್ಮ, ಮಾನವೀಯ ವಿಚಾರಗಳು ಹಾಗೂ ಅಪಾರ ಜೀವನ ಪ್ರೀತಿಯನ್ನು ಹೊಂದಿದ್ದ ಕತೆಗಾರ್ತಿಯಾಗಿದ್ದರು ಗೌರಮ್ಮ. ಭಾರತದ ಸಮಾಜದಲ್ಲಿ ಮಹಿಳೆಯರು ತಮ್ಮದೇ ಆದ ಸಂಕೋಲೆಗಳು ಮತ್ತು ನಿಸ್ಸಾಹಯಕತೆಯ ಇಕ್ಕಟ್ಟಿನಲ್ಲಿ ನರಳುವುದನ್ನು ಗ್ರಹಿಸಿ ಸಮಾಜದೊಳಗಿನ ಮಹಿಳೆಯರ ಮೇಲಾಗುವ ಕ್ರೌರ್ಯದ ನಾನಾ ಮುಖಗಳನ್ನು ಸೂಕ್ಷö್ಮವಾದ ಅನಾವರಣವನ್ನು ತಮ್ಮ ಕಥೆಗಳಲ್ಲಿ ಮಾಡಿದರು. ಮಹಿಳೆಯರ ಬದುಕಿನ ಬಗೆಗೆ ಅಪಾರ ಕಾಳಜಿಯನ್ನು ಹೊಂದಿದ್ದ ಗೌರಮ್ಮ ಆ ಕಾಲದ ಮಹಿಳಾ ಸದಭಿರುಚಿಯ ದ್ಯೋತಕವಾಗಿದ್ದರು.

  ಈ) ಕೆಳಗಿನ ಅಪೂರ್ಣ ವಾಕ್ಯಗಳ ಮುಂದೆ ಕೊಟ್ಟಿರುವ ಸ್ಥಳದಲ್ಲಿ ಆ ವಾಕ್ಯಗಳಿಗೆ ಸಂಬಂಧಿಸಿದ ಹೆಸರನ್ನು ಬರೆದು

  ಪೂರ್ಣಗೊಳಿಸಿರಿ.

  1) ಕೊಡಗಿನ ಗೌರಮ್ಮನವರು ಬರೆದ ಮೊದಲ ಕತೆಯ ಹೆಸರು ಪುನರ್ವಿವಾಹ.

  2) ಕೊಡಗಿನ ಗೌರಮ್ಮನವರ ತಾಯಿಯ ಹೆಸರು ನಂಜಕ್ಕ.

  3) ಕೊಡಗಿನ ಗೌರಮ್ಮನವರ ತಂದೆಯ ಹೆಸರು ಎನ್. ಎಸ್. ರಾಮಯ್ಯ.

  4) ಕೊಡಗಿನ ಗೌರಮ್ಮನವರ ಪತಿಯ ಹೆಸರು ಬಿ. ಟಿ. ಗೋಪಾಲಕೃಷ್ಣಯ್ಯ.

  5) ಕೊಡಗಿನ ಗೌರಮ್ಮನವರು ಅಕಾಲ ಮರಣಕ್ಕೆ ಗುರಿಯಾಗುವಂತೆ ಮಾಡಿದ ಹೊಳೆಯ ಹೆಸರು ಹಟ್ಟಿಹೊಳೆ.

  6) ಕೊಡಗಿನ ಗೌರಮ್ಮನವರ ಪೂರ್ವಜರ ಸೀಮೆಯ ಹೆಸರು ವಿಟ್ಲ.

  ಭಾಷಾಭ್ಯಾಸ

  ಅ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.

  ನಿರಾಡಂಬರ x ಆಡಂಬರ ಸ್ವಾತಂತ್ರ x ಪರಾತಂತ್ರ ಗಟ್ಟಿತನ x ಪೊಳ್ಳುತನ

  ಆಸಕ್ತಿ x ಅನಾಸಕ್ತಿ ಅಪರಿಮಿತ x ಪರಿಮಿತ

  ಆ) ಕೆಳಗಿನ ಪದಗಳನ್ನು ಬಿಡಿಸಿ ಬರೆದು ಸಂಧಿಯನ್ನು ಹೆಸರಿಸಿರಿ.

  ಮಹಾ + ಆತ್ಮ = ಮಹಾತ್ಮ (ಸ. ದೀ. ಸಂಧಿ) ಪರಿಜ್ಞಾನ + ಅನ್ನು = ಪರಿಜ್ಞಾನವನ್ನು (‘ವ’ ಕಾರಾಗಮ ಸಂಧಿ)

  ಹರಿಜನ + ಉದ್ಧಾರ = ಹರಿಜನೋದ್ಧಾರ (ಗುಣಸಂಧಿ) ಸತ್ + ಅಭಿರುಚಿ = ಸದಭಿರುಚಿ (ಜಸ್ತ÷್ವ ಸಂಧಿ)

  ಸತ್ಯ + ಆಗ್ರಹ = ಸತ್ಯಾಗ್ರಹ( ಸ. ದೀ. ಸಂಧಿ)

  ಜಾತಿ + ಅತೀತ = ಜಾತ್ಯಾತೀತ ( ಯಣ್ ಸಂಧಿ) ನವ + ಉದಯ = ನವೋದಯ (ಗುಣ ಸಂಧಿ)

  ಇ) ಕೆಳಗಿನ ತತ್ಸಮಗಳಿಗೆ ತದ್ಭವಗಳನ್ನು ಬರೆಯಿರಿ.

  ಕವಿ – ಕಬ್ಬಿಗ ಕಾವ್ಯ – ಕಬ್ಬ ವರ್ಷ – ವರುಷ ಶ್ರೇಣಿ – ಸರಣಿ

  ಪದ್ಯ – 4. ಭೂಮಿತಾಯ ಕುಡಿಗಳು.

  -:ಕವಿಪರಿಚಯ:-

  * ಕವಿಯ ಹೆಸರು: ಕೆ. ಎಸ್. ನಿಸಾರ್ ಅಹಮದ್

  * ಜನ್ಮ ವರ್ಷ: ಫೆಬ್ರುವರಿ – 05, 1936.

  * ಜನ್ಮ ಸ್ಥಳ: ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ ಜಿಲ್ಲೆ)

  * ಕೃತಿಗಳು: ಮನಸು ಗಾಂಧಿ ಬಜಾರು, ನೆನೆದವರ ಮನದಲ್ಲಿ, ಸುಮುಹೂರ್ತ, ಸಂಜೆ ಐದರ ಮಳೆ, ನಿತ್ಯೋತ್ಸವ.

  ಅ) ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯದ ಉತ್ತರಗಳನ್ನು ಬರೆಯಿರಿ.

  1) ‘ಭೂಮಿ ತಾಯ ಕುಡಿಗಳು’ ಪದ್ಯದಲ್ಲಿ ಕವಿ ಯಾರು ಯಾರು ಒಂದು ಎಂದು ಹೇಳಿದ್ದಾರೆ?

  – ‘ಭೂಮಿ ತಾಯ ಕುಡಿಗಳು’ ಪದ್ಯದಲ್ಲಿ ಕವಿಗಳು ಭಾರತೀಯರಾದ ನಾವು, ನೀವು, ಅವರು, ಇವರು ಎಲ್ಲರೂ ಒಂದು ಎಂದು

  ಹೇಳಿದ್ದಾರೆ.

  2) ಎಲ್ಲರೂ ಇಂದೇ ಏನೆಂದು ಪಣ ತೊಡಬೇಕೆಂದು ಕವಿ ನಿಸಾರ್ ಅಹಮದ್ ಆಶಿಸಿದ್ದಾರೆ?

  – ನಾವೆಲ್ಲರೂ ಒಂದೇ, ಈ ಭಾರತ ಭೂಮಾತೆಯ ಕುಡಿಗಳೆಂದು ಪಣ ತೊಡಬೇಕೆಂದು ಕವಿಗಳಾದ ನಿಸಾರ್ ಅಹಮದ್

  ಆಶಿಸಿದ್ದಾರೆ.

  3) ಕಳಸ, ಶಿಲುಬೆ, ಬಿಳಿಮಿನಾರು ಇವು ಯಾವ ಧರ್ಮದ ಸಂಕೇತಗಳಾಗಿವೆ?

  – ಕಳಸ, ಶಿಲುಬೆ ಬಿಳಿಮಿನಾರು ಇವು ಕ್ರಮವಾಗಿ ಹಿಂದೂ, ಕ್ರಿಶ್ಚನ್, ಮುಸ್ಲಿಂ ಧರ್ಮಗಳ ಸಂಕೇತಗಳಾಗಿವೆ.

  4) ರಸ ಕವಿತ್ವ ಒಂದೇ ಆದರೂ ಅದರ ರಚನೆಗೆ ಬಳಕೆಯಾಗುತ್ತಿರುವ ಛಂದೋ ಪ್ರಕಾರಗಳು ಯಾವುವು?

  – ಕಂದ, ವೃತ್ತ, ತ್ರಿಪದಿ ಮತ್ತು ವಚನಸಾಹಿತ್ಯ ಇವೆಲ್ಲ ಸಾಹಿತ್ಯ ಮತ್ತು ಕಾವ್ಯಗಳ ವಿವಿಧ ಪ್ರಕಾರಗಳಾದರೂ ಅವುಗಳ ರಸ ಕವಿತ್ವ ಒಂದೇ ಆಗಿದೆ.

  5) ‘ನಿತ್ಯೋತ್ಸವ ಕವಿ’ ಎಂದೇ ಪ್ರಸಿದ್ಧರಾಗಿರುವ ಕವಿ ಯಾರು?

  – ‘ನಿತ್ಯೋತ್ಸವ ಕವಿ’ ಎಂದೇ ಪ್ರಸಿದ್ಧರಾಗಿರುವ ಕವಿ ಪ್ರೊ. ಕೆ. ಎಸ್. ನಿಸಾರ್ ಅಹಮದ್.

  ಆ) ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ.

  1) ಆಂಗ್ಲರು, ಆಫ್ರಿಕನ್ನರಲ್ಲಿ ಹರಿವ ನೆತ್ತರೊಂದೇ ಎಂದು ಕವಿ ಹೇಳಿರುವುದರ ಔಚಿತ್ಯವೇನು?

  – ಆಂಗ್ಲ ಜನರ ಮೈಬಣ್ಣ ಕೆಂಪಾಗಿರುತ್ತÀ್ತದೆ. ಆಫ್ರಿಕನ್ ಜನರ ಮೈಬಣ್ಣ ಕಪ್ಪಾಗಿರುತ್ತದೆ. ಆದರೆ ಅವರವರ ಮೈಯಲ್ಲಿ ಹರಿಯುವ ರಕ್ತದ ಬಣ್ಣ ಕೆಂಪು ಒಂದೇ ಆಗಿರುತ್ತದೆ. ವಿಶ್ವದ ಮಾನವರು ಹೇಗೆ ಕಾಣಿಸಲಿ ಎಲ್ಲೆ ಇರಲಿ ಅವರೆಲ್ಲರೂ ಮಾನವ ಸಮುದಾಯಕ್ಕೆ ಸೇರಿರುವವರು ಎಂದು ಕವಿಗಳು ಹೇಳಿರುವುದು ಔಚಿತ್ಯವೇ ಸರಿ.

  2) ಭೌಗೋಳಿಕವಾಗಿ ಭಾರತೀಯರೆಲ್ಲಾ ಒಂದೇ ಎಂದು ನಿಸಾರ್ ಅಹಮದ್ ಅವರು ಹೇಗೆ ನಿರೂಪಿಸಿದ್ದಾರೆ? (2018)

  – ಭಾರತೀಯರಾದ ನಾವು ಕರ್ನಾಟಕ, ವಂಗ, ಆಂಧ್ರಪ್ರದೇಶ ಎಲ್ಲಿಯೇ ವಾಸವಾಗಿದ್ದರೂ ಮೂಲತಃ ನಾವೆಲ್ಲರೂ ಭಾರತೀಯರೆ. ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ದಿಕ್ಕುಗಳಲ್ಲಿ ಬೀಸುವ ಗಾಳಿ, ಮೇಲೆ ಕಾಣಿಸುವ ಆಕಾಶ ಎಲ್ಲರಿಗೂ ಒಂದೇ ಎಂದು ಕವಿಗಳು ಭೌಗೋಳಿಕವಾಗಿಯೂ ಭಾರತೀಯರೆಲ್ಲಾ ಒಂದೇ ಎಂದು ನಿರೂಪಿಸಿದ್ದಾರೆ.

  3) ಬಣ್ಣ ಬೇರೆಯಾದರೂ, ಜೀವರಸ ಒಂದೇ ಎಂಬ ಭಾವನೆ ‘ಭೂಮಿತಾಯ ಕುಡಿಗಳು’ ಕವನದಲ್ಲಿ ಹೇಗೆ ವ್ಯಕ್ತವಾಗಿದೆ?

  – ಆಂಗ್ಲ, ಆಫ್ರಿಕನ್‌ರ ಮೈಬಣ್ಣ ವಿಭಿನ್ನವಾದರೂ ಅವರವರಲ್ಲಿ ಹರಿಯುವ ರಕ್ತದ ಬಣ್ಣ ಕೆಂಪು ಆಗಿರುತ್ತದೆ. ಅದರಂತೆಯೇ, ಅಕ್ಕಿ, ರಾಗಿ, ಗೋಧಿ, ಜೋಳ ಈ ಎಲ್ಲ ದವಸಧಾನ್ಯಗಳ ಬಣ್ಣ ಬೇರೆ ಬೇರೆಯಾದರೂ ರೈತ ಹೊಲದಲ್ಲಿ ಧಾನ್ಯ ಬೆಳೆಯುವ ಪೈರಿನ ಬಣ್ಣ ಹಸಿರೊಂದೆ ಆಗಿರುತ್ತದೆ. ಹೀಗೆ ಬಣ್ಣ ಬೇರೆಯಾದರೂ, ಜೀವರಸ ಒಂದೇ ಆಗಿರುವುದೆಂದು ಕವಿಗಳು ಈ ಪದ್ಯದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  4) ಬೆಳಕಿನ ಸತ್ವ ಮತ್ತು ರಸಕವಿತ್ವ ಒಂದೇ ಎನ್ನುವುದಕ್ಕೆ ನಿಸಾರ್ ಅಹಮದ್‌ರವರು ನೀಡಿರುವ ನಿದರ್ಶನಗಳಾವುವು? (2018)

  – ಬಾಣ, ಬಿರುಸು, ಕುಂಡ, ಹಣತೆ ಇವುಗಳ ಸ್ವರೂಪ ಬೇರೆ ಬೇರೆಯಾದರೂ ಇವುಗಳಲ್ಲಿರುವ ಬೆಳಕಿನ ಸತ್ವ ಒಂದೇ ಆಗಿರುತ್ತದೆ.ಅದರಂತೆಯೇ ಕಂದ, ವೃತ್ತ, ತ್ರಿಪದಿ, ವಚನ ಇವೆಲ್ಲ ಸಾಹಿತ್ಯದ ವಿವಿಧ ಪ್ರಕಾರಗಳಾದರೂ ಇವುಗಳ ಒಳಗಿರುವ ರಸಕವಿತ್ವ ಒಂದೇ ಆಗಿರುವುದು ಎಂದು ಕವಿ ನಿಸಾರ್ ಅಹಮದ್ ಅವರು ಕೆಲವು ನಿದರ್ಶನಗಳನ್ನು ನೀಡಿದ್ದಾರೆ.

  ಇ) ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರ ಬರೆಯಿರಿ.

  1) ‘ಮನುಜ ಜಾತಿ ತಾನೊಂದೆ ವಲಂ’ ಎಂಬ ಭಾವನೆ ‘ಭೂಮಿ ತಾಯಿ ಕುಡಿಗಳು’ ಕವನದಲ್ಲಿ ಹೇಗೆ ವ್ಯಕ್ತವಾಗಿದೆ? ವಿವರಿಸಿ.

  – ಪ್ರಕೃತಿಯಲ್ಲಿ ವೈವಿಧ್ಯತೆಯಿದ್ದರೂ ಮೂಲತಃ ಏಕತೆ ಇರುವಂತೆ ಭಾರತ ಭೂ ತಾಯಿಯ ಮಕ್ಕಳಾದ ನಾವೆಲ್ಲರೂ ಒಂದೇ. ನಾವು ಒಗ್ಗಟ್ಟಿನಿಂದ ಬಾಳಬೇಕು. ಪ್ರಪಂಚದ ಒಂದೊAದು ದೇಶಗಳಲ್ಲಿ ಆಚಾರ-ವಿಚಾರ, ರೂಢಿ-ಸಂಪ್ರದಾಯ, ಉಡುಗೆ-ತೊಡುಗೆ,ಭಾಷೆ, ಸಂಸ್ಕೃತಿ, ಆಹಾರ ಮೊದಲಾದವುಗಳಲ್ಲಿ ವಿಭಿನ್ನತೆಗಳಿದ್ದರೂ ವಿಶ್ವ ಮಾನವರಾದ ನಾವೆಲ್ಲರೂ ಒಂದೇ. ನಾಗರಿಕತೆ ಬೆಳೆದಂತೆ,ನಾವೇ ಮಾಡಿಕೊಂಡಿರುವ ಧರ್ಮ, ಭಾಷೆ, ಜಾತಿ, ಜನಾಂಗ, ಸಂಪ್ರದಾಯಗಳು ಬೇರೆ ಬೇರೆಯಾಗಿರಬಹುದು. ಪಂಚಭೂತಗಳಾದ ಭೂಮಿ, ಆಕಾಶ, ಅಗ್ನಿ, ನೀರು, ಗಾಳಿ ಎಲ್ಲರಿಗೂ ಒಂದೇ ಆಗಿರುವಾಗ ಭೂಮಿ ತಾಯಿಯ ಮಕ್ಕಳೇ ಆದ ನಾವೆಲ್ಲರೂ ಒಂದಾಗಿರಬೇಕು. ಆದಿಕವಿ ಪಂಪ ಹೇಳಿದಂತೆ ‘ಮನುಜ ಜಾತಿ ತಾನೊಂದೆ ವಲಂ’ ಎಂಬ ಮಾತಿನಂತೆ ನಾವು ಒಂದಾಗಿ ಬಾಳಬೇಕು ಎಂಬ ಭಾವನೆ ಈ ಕವನದಲ್ಲಿ ಅರ್ಥಪೂರ್ಣವಾಗಿ ವ್ಯಕ್ತವಾಗಿದೆ.

  2) ‘ಭೂಮಿ ತಾಯ ಕುಡಿಗಳು’ ಈ ಕವನದ ಸಾರಾಂಶವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.

  – ನಾವು-ನೀವು, ಅವರು-ಇವರು, ಎಲ್ಲರೂ ಒಂದೇ. ಈ ಭಾರತ ಭೂಮಾತೆಯ ವಂಶದ ಕುಡಿಗಳೇ ಆಗಿದ್ದೇವೆ. ನಮ್ಮನಮ್ಮಲ್ಲಿ

  ಸ್ವಭಾವ, ಚಹರೆ, ಧರ್ಮ, ಜಾತಿ, ಭಾಷೆ ಹೀಗೆಲ್ಲ ವಿಭಿನ್ನತೆಗಳಿದ್ದರೂ, ನಾವೆಲ್ಲರೂ ಭಾರತೀಯರೆ. ಜಗತ್ತಿನ ಯಾವುದೇ ದೇಶದ ವ್ಯಕ್ತಿಯಾಗಿರಲಿ ಮೊದಲು ಅವರು ವಿಶ್ವ ಮಾನವರೆನಿಸಿಕೊಳ್ಳುತ್ತಾರೆ. ಆಂಗ್ಲರಿರಲಿ, ಆಫ್ರಿಕನ್ನರೇ ಇರಲಿ ಅವರವರಲ್ಲಿ ಹರಿಯುವ ರಕ್ತದ ಬಣ್ಣ ಒಂದೇ ಆಗಿದೆ. ದವಸ ಧಾನ್ಯಗಳ ಬಣ್ಣ ಬೇರೆ ಬೇರೆಯಾದರೂ ಹೊಲದಲ್ಲಿ ಆ ಬೆಳೆಯ ಪೈರಿನ ಬಣ್ಣ ಹಸಿರೊಂದೆ ಆಗಿರುತ್ತದೆ. ಬಾಣ, ಬಿರುಸು, ಕುಂಡ, ಹಣತೆ ಇವೆಲ್ಲ ಕಾಣಲು ಬೇರೆ ಬೇರೆ ಎನಿಸಿದರೂ ಅವುಗಳ ಒಳಗಿನ ಬೆಳಕಿನ ಸತ್ವ ಒಂದೇ ಆಗಿರುವುದು. ಸಾಹಿತ್ಯದ ವಿವಿಧ ರೂಪಗಳಾದ ಕಂದ, ವೃತ್ತ, ತ್ರಿಪದಿ, ವಚನ ಇವೆಲ್ಲವುಗಳ ರಸಕವಿತ್ವ ಒಂದೇಯಾಗಿರುತ್ತದೆ. ಭಾರತವಾಸಿಗಳಾದ ನಾವು ಯಾವುದೇ ರಾಜ್ಯದಲ್ಲಿ ವಾಸಿಸಲಿ ಮೊದಲು ನಾವೆಲ್ಲರೂ ಭಾರತೀಯರೆ. ನಾಲ್ಕು ದಿಕ್ಕುಗಳಲ್ಲಿ ಬೀಸುವ ಗಾಳಿ ಮೇಲೆ ಕಾಣಿಸುವ ಆಕಾಶ ಎಲ್ಲರಿಗೂ ಒಂದೇ ಆಗಿರುವಾಗ ನಾವೆಲ್ಲರೂ ಕೂಡಾ ಒಂದಾಗಿ ಒಗ್ಗಟ್ಟಿನಿಂದ ಬಾಳಬೇಕೆಂದು ಕೆ. ಎಸ್. ನಿಸಾರ್ ಅಹಮದ್ ಅವರು ಹೇಳಿದ್ದಾರೆ.

  3) ನಿಸಾರ್ ಅಹಮದ್‌ರವರು ನಾವೆಲ್ಲರೂ ಭೂಮಿ ತಾಯಿಯ ಕುಡಿಗಳೆಂದು ಏಕೆ ಪಣ ತೊಡಬೇಕೆಂದು ಹೇಳಿದ್ದಾರೆ?

  – ಪ್ರಕೃತಿಯಲ್ಲಿ ಅಪಾರ ವೈವಿಧ್ಯ ಇದ್ದರೂ ಒಳಗೆ ಸಾಮರಸ್ಯ ಇರುವಂತೆ ಭಾರತ ಭೂಮಿತಾಯ ಮಕ್ಕಳಾದ ನಾವೆಲ್ಲರೂ

  ಒಗ್ಗಟ್ಟಾಗಿರಬೇಕು. ಜಗತ್ತಿನ ವಿವಿಧ ದೇಶಗಳಲ್ಲಿ ಒಂದೊAದು ರೀತಿಯ ಆಚಾರ-ವಿಚಾರ, ಉಡುಗೆ-ತೊಡುಗೆ, ರೂಢಿ-ಸಂಪ್ರದಾಯ,ಆಹಾರ ಪದ್ಧತಿಗಳನ್ನು ಹೊಂದಿದ್ದರೂ ಮಾನವರಾದ ನಾವೆಲ್ಲರೂ ಒಂದೇ ನಾಗರಿಕತೆ ಬೆಳೆದಂತೆ ನಾವೇ ಮಾಡಿಕೊಂಡಿರುವ ಧರ್ಮ, ಜಾತಿ, ಭಾಷೆ, ಜನಾಂಗ ಮತ್ತು ಸಂಪ್ರದಾಯಗಳು ಬೇರೆ ಬೇರೆಯಾಗಿರಬಹುದು. ಪಂಚಭೂತಗಳಾದ ಭೂಮಿ, ಆಕಾಶ, ಅಗ್ನಿ, ಜಲ, ಗಾಳಿ ಒಂದೇ ಆಗಿರುವಾಗ ಈ ಭೂಮಿತಾಯಿಯ ಮಕ್ಕಳಾದ ನಾವೆಲ್ಲರೂ ಒಂದಾಗಬೇಕು. ಏಕತೆಯ ಭಾವನೆಯನ್ನು ಹೊಂದಬೇಕು. ನಾವೆಲ್ಲರೂ ಸರಿಸಮಾನರು ಈ ಭೂಮಿತಾಯಿಯ ಕುಡಿಗಳೆಂದು ಪಣ ತೊಡಬೇಕೆಂದು ಕವಿಗಳಾದ ನಿಸಾರ್ ಅಹಮದ್ ಅವರು ಹೇಳುತ್ತಾರೆ.

  ಈ) ಕೆಳಗಿನ ಸಾಲುಗಳ ಸಂದರ್ಭಗಳನ್ನು ಸ್ವಾರಸ್ಯಸಹಿತ ವಿವರಿಸಿ.

  1) “ಭೂಮಿ ತಾಯ ಕುಡಿಗಳೆಂದು ಪಣವ ತೊಡಿರಿ ಇದೆ.”

  ಪದ್ಯದ ಹೆಸರು: ಭೂಮಿ ತಾಯ ಕುಡಿಗಳು.

  ಕವಿಗಳ ಹೆಸರು: ಪ್ರೊ. ಕೆ. ಎಸ್. ನಿಸಾರ್ ಅಹಮದ್.

  ಸಂದರ್ಭ: ಕವಿಗಳು ನಮ್ಮನ್ನು ಉದ್ದೇಶಿಸಿ ಮಾತನಾಡುವಾಗ ಈ ಮಾತನ್ನು ನುಡಿದಿದ್ದಾರೆ.

  ವಿವರಣೆ: ಭಾರತ ದೇಶದಲ್ಲಿ ಹುಟ್ಟಿದವರಾದ ನಾವೆಲ್ಲರೂ ಒಂದೇ. ನಾವೆಲ್ಲರೂ ಈ ಭಾರತ ಭೂಮಾತೆಯ ವಂಶದ ಕುಡಿಗಳೇ ಆಗಿದ್ದೇವೆ ಎಂದು ಇಂದೇ ಪ್ರಮಾಣ ಮಾಡೋಣವೆಂದು ಕವಿಗಳು ಮಾನವ ಸಮುದಾಯಕ್ಕೆ ಕರೆ ನೀಡಿದ್ದಾರೆ.

  2) “ಸ್ವಸ್ವಭಾವ ಚಹರೆ ಬೇರೆ ತಾಯ ಬಸಿರು ಒಂದೆ.”

  ಪದ್ಯದ ಹೆಸರು: ಭೂಮಿ ತಾಯ ಕುಡಿಗಳು.

  ಕವಿಗಳ ಹೆಸರು: ಪ್ರೊ. ಕೆ. ಎಸ್. ನಿಸಾರ್ ಅಹಮದ್.

  ಸಂದರ್ಭ: ನಮ್ಮಲ್ಲಿರುವ ವಿಭಿನ್ನ ಗುಣಲಕ್ಷಣ ಹಾಗೂ ಭಾರತಾಂಬೆಯ ಕುರಿತು ಹೇಳುವಾಗ ಕವಿಗಳು ಈ ಮಾತನ್ನು ನುಡಿದಿದ್ದಾರೆ.

  ವಿವರಣೆ: ಭಾರತೀಯರಾದ ನಮ್ಮಲ್ಲಿ ಸ್ವಭಾವಗಳಲ್ಲಿ ಹಾಗೂ ಚಹರೆಗಳಲ್ಲಿ ಭಿನ್ನತೆಗಳು ಕಂಡು ಬಂದರೂ ಮೂಲತಃ ನಾವೆಲ್ಲರೂ ಭಾರತೀಯರೆ. ನಮ್ಮೆಲ್ಲರಿಗೂ ಆಸರೆ ನೀಡುವ ಭೂಮಿ ತಾಯಿಯ ಬಸಿರು ಒಂದೇ ಆಗಿದೆ ಎಂದು ಹೇಳುವಾಗ ಕವಿಗಳು ಈ ಮೇಲಿನ ಮಾತನ್ನು ನುಡಿದಿದ್ದಾರೆ.

  3) “ಕರ್ನಾಟಕದ ವಂಗ ಆಂಧ್ರ ಭಾರತೀಯರೊಂದೆ”

  ಪದ್ಯದ ಹೆಸರು: ಭೂಮಿ ತಾಯ ಕುಡಿಗಳು.

  ಕವಿಗಳ ಹೆಸರು: ಪ್ರೊ. ಕೆ. ಎಸ್. ನಿಸಾರ್ ಅಹಮದ್.

  ಸಂದರ್ಭ: ಕವಿಗಳು ಈ ಮಾತನ್ನು ನಮ್ಮನ್ನು ಉದ್ದೇಶಿಸಿ ನುಡಿದಿದ್ದಾರೆ.

  ವಿವರಣೆ: ಭಾರತವಾಸಿಗಳಾದ ನಾವು ಯಾವುದೇ ರಾಜ್ಯಕ್ಕೆ ಸೇರಿದವರಾದರೂ ನಾವೆಲ್ಲರೂ ಭಾರತೀಯರೆ. ನಾಲ್ಕು ದಿಕ್ಕುಗಳಲ್ಲಿ ಬೀಸುವ ಗಾಳಿ ಮೇಲೆ ಕಾಣಿಸುವ ಆಕಾಶ ಎಲ್ಲರಿಗೂ ಒಂದೇ ಆಗಿರುವಂತೆ ನಾವೆಲ್ಲರೂ ಕೂಡ ಒಗ್ಗಟ್ಟಾಗಿರಬೇಕು ಎಂದು ಹೇಳುವಾಗ ಕವಿಗಳು ಈ ಮೇಲಿನ ಮಾತನ್ನು ನುಡಿದಿದ್ದಾರೆ.

  ಉ) ಗುಂಪಿಗೆ ಸೇರದ ಪದವನ್ನು ಆರಿಸಿ ಬರೆಯಿರಿ.

  1) ಕಂದ, ವೃತ್ತ, ಉಪಮಾ, ತ್ರಿಪದಿ = ಉಪಮಾ 2) ನಾನು, ನೀನು, ಅವರು, ಒಂದೆ = ಒಂದೆ

  3) ಅಕ್ಕಿ, ರಾಗಿ, ಮಾವು, ಗೋಧಿ = ಮಾವು 4) ಬಾಣ, ಹಣತೆ, ಕುಂಡ, ಬಿರುಸು = ಹಣತೆ

  5) ಕಳಸ, ವಚನ, ಶಿಲುಬೆ, ಮಿನಾರ್ = ವಚನ

  *ಭಾಷಾಭ್ಯಾಸ*

  ಅ) ಕೆಳಗಿನ ಪದಗಳಿಗೆ ಸಮಾನಾರ್ಥಕ ಪದಗಳನ್ನು ಬರೆಯಿರಿ.

  1) ನೆತ್ತರು: ರಕ್ತ : ರುಧಿರ : ರಕುತ

  2) ಭೂಮಿ : ಇಳೆ; ಧರೆ; ವಸುಂಧರೆ; ಧರಣಿ; ಭುವಿ; ಧಾತ್ರಿ; ಭೂ

  3) ತಾಯಿ: ಜನನಿ; ಮಾತೆ; ಅಂಬೆ; ಅಮ್ಮ

  4) ಬಸಿರು: ಹೊಟ್ಟೆ; ಉದರ

  5) ಮುಗಿಲು: ಆಕಾಶ; ನಭ; ಗಗನ; ಬಾನು; ಆಗಸ; ಅಂಬರ

  6) ಗಾಳಿ: ಪವನ; ವಾಯು; ಹವೆ.

  ಆ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ರೂಪವನ್ನು ಬರೆಯಿರಿ.

  1) ಧರ್ಮ x ಅಧರ್ಮ, 2) ಕರಿದು x ಬಿಳಿದು, 3) ಬಿಳುಪು x ಕಪ್ಪು, 4) ಹಗಲು x ಇರುಳು, 5) ಬೆಳಕು x ಕತ್ತಲು

  ಇ) ಕೆಳಗಿನ ತತ್ಸಮಗಳಿಗೆ ತದ್ಭವ ರೂಪವನ್ನು ಬರೆಯಿರಿ.

  1) ವರ್ಣ-ಬಣ್ಣ, 2) ಧರ್ಮ-ದಮ್ಮ, ದರುಮ, 3) ಪ್ರಣತಿ-ಹಣತೆ, 4) ಭೂಮಿ-ಬುವಿ

  ಈ) ಕೆಳಗಿನ ಪದಗಳನ್ನು ಬಿಡಿಸಿ ಬರೆದು, ಸಂಧಿಗಳನ್ನು ಹೆಸರಿಸಿ.

  1) ಕುಡಿಗಳು + ಎಂದು = ಕುಡಿಗಳೆಂದು (ಲೋಪ ಸಂಧಿ) 2) ಧರ್ಮದ + ಉಸಿರು = ಧರ್ಮದುಸಿರು (ಲೋಪ ಸಂಧಿ)

  3) ನೆತ್ತರು + ಒಂದೆ = ನೆತ್ತರೊಂದೆ (ಲೋಪಸಂಧಿ) 4) ಪೂರ್ವ + ಉತ್ತರ = ಪೂರ್ವೋತ್ತರ (ಗುಣಸಂಧಿ)

  5) ಭಾರತೀಯರು + ಒಂದೆ = ಭಾರತೀಯರೊಂದೆ (ಲೋಪಸಂಧಿ)

  ಉ) “ಅ” ಪಟ್ಟಿಯನ್ನು “ಬ” ಪಟ್ಟಿಗೆ ಹೊಂದಿಸಿ ಬರೆಯಿರಿ.

  ಅ                    ಬ

  1) ಪೂರ್ವ ಅ) ತೆಂಕಣ

  2) ಪಶ್ಚಿಮ ಆ) ಬಡಗಣ

  3) ಉತ್ತರ ಇ) ಜರಗಣ

  4) ದಕ್ಷಿಣ ಈ) ಪಡುವಣ

                 ಉ) ಮೂಡಣ

  ಉತ್ತರಗಳು : 1-ಉ, 2-ಈ, 3-ಆ, 4-ಅ.

   

  ಈ ಕೆಳಗಿನ ಪದ್ಯಭಾಗಗಳನ್ನು ಕಂಠಪಾಠ ಮಾಡಿರಿ. (2017)

  ನಾವು ನೀವು ಅವರು ಇವರು

  ಒಂದೆ ಒಂದೆ ಒಂದೆ

  ಭೂಮಿ ತಾಯ ಕುಡಿಗಳೆಂದು

  ಪಣವ ತೊಡಿರಿ ಇಂದೆ

  ಕರ್ನಾಟಕ ವಂಗ ಆಂಧ್ರ

  ಭಾರತೀಯರೊಂದೆ.

  ಪೂರ್ವೋತ್ತರ ಪಡು ತೆಂಕಣ

  ಗಾಳಿ ಮುಗಿಲು ಒಂದೆ

  ಪಾಠ – 5. ಶಿಶುನಾಳ ಶರೀಫ ಸಾಹೇಬರು.

  ಲೇಖಕರ ಪರಿಚಯ

  ಹೆಸರು : *ಆರ್. ಎಸ್. ಸುಂಕದ*

  ಜನ್ಮ ವರ್ಷ: 1951

  ಜನ್ಮ ಸ್ಥಳ: ಮೊರಬ (ಧಾರವಾಡ ಜಿಲ್ಲೆ)

  ಕೃತಿಗಳು: 1) ಕನ್ನಡ ವ್ಯಾಕರಣ, 2) ಗಂಗಾಧರ ಮಡಿವಾಳೇಶ್ವರ ತುರಮರಿ ಒಂದು ಅಧ್ಯಯನ, 3) ಮೊರಬ ಗ್ರಾಮದ ಸಂಸ್ಕೃತಿಕ

  ಅಧ್ಯಯನ.

  ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ.

  1) ಶರೀಫರು ಯಾವ ಮಾತನ್ನು ಹುಸಿಗೊಳಿಸಿದರು?

  ಉತ್ತರ: ತತ್ವ ವಿವೇಚನೆ, ಶಾಸ್ತçಶ್ರವಣ, ಮುಂತಾದವುಗಳು ಕೇವಲ ಉಚ್ಚ ಜನರ ಸೊತ್ತೆಂಬ ಮೂಢ ತಿಳುವಳಿಕೆಯನ್ನು ಶರೀಫರು ಹುಸಿಗೊಳಿಸಿದರು.

  2) ಶರೀಫರು ಸ್ವಪ್ರಯತ್ನದಿಂದ ಏನನ್ನು ಕಲಿತರು? (2018)

  ಉತ್ತರ: ಶರೀಫರು ಸ್ವಪ್ರಯತ್ನದಿಂದ ಉರ್ದು ಹಾಗೂ ಮೋಡಿ ಭಾಷೆಯನ್ನು ಕಲಿತರು.

  3) ಶರೀಫರು ಭಾಗವಹಿಸುತ್ತಿದ್ದ ಇಸ್ಲಾಂ ಹಬ್ಬ ಮತ್ತು ಮೇಳಗಳಾವುವು?

  ಉತ್ತರ: ಇಸ್ಲಾಂ ಹಬ್ಬಗಳಲ್ಲಿ ಒಂದಾದ ಮೊಹರಂ ಮತ್ತು ಅದರ ಭಾಗವಾದ ಅಲಾವಿ, ಕರ್ಬಲಾ ಆಚರಣೆಗಳಲ್ಲಿ ಶರೀಫರು

  ಭಾಗವಹಿಸುತ್ತಿದ್ದರು.

  4) ಶರೀಫರಿಗೆ ಸಹಿಸಲಾಗದ ಆಘಾತವಾಯಿತು ಏಕೆ?

  ಉತ್ತರ: ಶರೀಫರು ಏಕೈಕ ಪುತ್ರಿಯು ಕಾಲರಾ ರೋಗಕ್ಕೆ ಬಲಿಯಾದಳು. ಶರೀಫರ ನಡು ಹರೆಯದಲ್ಲಿಯೇ ಮಡದಿಯೂ

  ತೀರಿಕೊಂಡಳು. ಮಗಳ ಮತ್ತು ಹೆಂಡತಿಯ ಮರಣಗಳಿಂದ ಶರೀಫರಿಗೆ ಸಹಿಸಲಾಗದ ಆಘಾತವಾಯಿತು.

  5) ಗುರುಪಂಥ ಎಂದರೇನು?

  ಉತ್ತರ: ಗುರುಗಳಲ್ಲಿ ಭಕ್ತಿ ಭಾವವನ್ನು ತೋರಿ ನಡೆಯುವವರನ್ನು ಗುರುಪಂಥದವರೆAದು ಕರೆಯುತ್ತಾರೆ.

  ಆ) ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರ ಬರೆಯಿರಿ.

  1) ಶರೀಫರ ಬಾಲ್ಯವು ಹಿಂದೂ ಪರಂಪರೆಯೊAದಿಗೆ ಹೇಗೆ ಬೆರೆತು ಹೋಗಿತ್ತು? ವಿವರಿಸಿ.

  ಉತ್ತರ: ಶರೀಫರ ಬಾಲ್ಯ ಶಿಶುನಾಳ ಗ್ರಾಮದಲ್ಲಿಯೇ ಕಳೆಯಿತು. ಅವರ ವಿದ್ಯಾಭ್ಯಾಸ ಕನ್ನಡ ಮುಲ್ಕಿಯವರೆಗೆ ಇದೇ

  ಗ್ರಾಮದಲ್ಲಾಯಿತು. ಬಾಲ್ಯದಲ್ಲಿ ರಾಮಾಯಣ, ಮಹಾಭಾರತ, ಅಲ್ಲಮಪ್ರಭು ಬಯಲಾಟಗಳಲ್ಲಿ ಪಾತ್ರವಹಿಸಿ ಪ್ರೇಕ್ಷಕರ ಕಣ್ಮನ ತಣಿಸುತ್ತಿದ್ದರು. ಜಾತ್ರೆ ಉತ್ಸವಗಳಲ್ಲಿ ಶರಣರ ಕಾವ್ಯವಾಚನ ಮಾಡುತ್ತಿದ್ದರು. ಹೀಗೆ ಶರೀಫರ ಜನ್ಮ ಮುಸ್ಲಿಂ ಕುಟುಂಬದಲ್ಲಾದರೂ ಹಿಂದೂ ಪರಂಪರೆಯೊಂದಿಗೆ ಅವರ ಬಾಲ್ಯ ಬೆರೆತು ಹೋಗಿತ್ತು.

  2) ಶರೀಫರು ತಮಗಾದ ದುಃಖವನ್ನು ಕಡಿಮೆ ಮಾಡಿಕೊಂಡ ಬಗೆಯನ್ನು ತಿಳಿಸಿ.

  ಉತ್ತರ: ಮಗಳ ಮತ್ತು ಹೆಂಡತಿಯ ಮರಣಗಳಿಂದ ಶರೀಫರಿಗೆ ಸಹಿಸಲಾಗದ ಆಘಾತವಾಯಿತು. ಧೃತಿಗೆಡದೆ ಶರೀಫರು ತಮಗಾದ ದುಃಖವನ್ನು ಸಾಧು ಸತ್ಪುರುಷರ ಸಹವಾಸದಲ್ಲಿ ಕಳೆಯುತ್ತ, ಅಧ್ಯಾತ್ಮ-ಸುಬೋಧ, ಧರ್ಮ-ನೀತಿ ಮಾತುಗಳನ್ನು ಬೋಧಿಸುತ್ತ ಕಡಿಮೆ ಮಾಡಿಕೊಂಡರು.

  3) ಗುರುಪಂಥ ಎಂದರೇನು? ಗುರುಗಳ ಮಹತ್ವವೇನು?

  ಉತ್ತರ: ಯಾರಲ್ಲಿ ಗುರುಗಳ ಬಗೆಗೆ ಭಕ್ತಿಭಾವವಿರುತ್ತದೆಯೋ ಅಂಥವರನ್ನು “ಗುರುಪಂಥ”ದವರು ಎಂದು ಕರೆಯುತ್ತಾರೆ.

  ಕರ್ನಾಟಕದಲ್ಲಿ ಗುರುಗಳಿಗೆ ಅಗ್ರಸ್ಥಾನಮಾನವಿದೆ. ಜನರು ಗುರುಗಳ ಆಶೀರ್ವಾದ ಬಯಸಿ ಮಠ, ಮಂದಿರಗಳಿಗೆ ಹೋಗುತ್ತಾರೆ. ಶರೀಫರಿಗೆ ಕಳಸ ಗ್ರಾಮದ ‘ಗುರುಗೋವಿಂದಭಟ್ಟ’ರೆAಬ ಆದರ್ಶ ಗುರುಗಳು ದೊರೆತರು.

  ಇ) ಕೆಳಗಿನ ಪ್ರಶ್ನೆಗಳಿಗೆ ಏಳು-ಎಂಟು ವಾಕ್ಯಗಳಲ್ಲಿ ಉತ್ತರ ಬರೆಯಿರಿ.

  1) ಗೋವಿಂದಭಟ್ಟರು ಯಾರು? ಅವರ ಗುಣ ಸ್ವಭಾವವನ್ನು ತಿಳಿಸಿರಿ.

  ಉತ್ತರ: ಗೋವಿಂದಭಟ್ಟರು ಕಳಸ ಗ್ರಾಮದವರು. ಜ್ಞಾನಿ ಹಾಗೂ ವಿದ್ಯಾವಂತರೆAದು ಖ್ಯಾತಿವೆತ್ತವರಾಗಿದ್ದರು. ನಗುಮುಖದ ಪ್ರಸಾದ ವಾಣಿಯ ದಿವ್ಯ ವ್ಯಕ್ತಿಗಳಾಗಿದ್ದರು. ಕೈಯಲ್ಲಿ ತಾಮ್ರದ ತಂಬಿಗೆ ಹೆಗಲ ಮೇಲೆ ಪಂಜೆ, ನಡುವಿನಲ್ಲಿ ಲಂಗೋಟಿ ಇವು ಇವರ ವೇಷಭೂಷಣಗಳಾಗಿದ್ದವು. ಗುರುಗೋವಿಂದರು ಶಕ್ತಿಯ ಉಪಾಸಕರಾಗಿದ್ದರು. ಉದಾರ ಹೃದಯಿಗಳಾದ ಇವರು ಮಾನವಕುಲ ಒಂದೇ ಎಂಬ ಭಾವನೆಯುಳ್ಳವರಾಗಿದ್ದರು. ಜಾತಿ ಮತಗಳೆಂದರೆ ಇವರಿಗಾಗುತ್ತಿರಲಿಲ್ಲ. ಸ್ವಜಾತೀಯನಲ್ಲದ ತಮ್ಮ ಮುಸ್ಲಿಂ ಶಿಷ್ಯನಿಗೆ ಮುಕ್ತ ಹೃದಯದಿಂದ ವಿದ್ಯಾದಾನ ಮಾಡಿದರು. ಗುರು ಶಿಷುರಿಬ್ಬರಿಗೂ ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿದ್ದರು. ಅವರು ವಿಶೇಷವಾಗಿ ಕೂಡಿಕೊಂಡೆ ಇರುತ್ತಿದ್ದರು.

  2) ಶರೀಫರ ತತ್ವಪದಗಳ ವೈಶಿಷ್ಟ್ಯಯವನ್ನು ವಿವರಿಸಿರಿ.

  ಉತ್ತರ: ಭರತ ಭೂಮಿಯ ಪುಣ್ಯ ಪುರುಷರಲ್ಲಿ ಶಿಶುನಾಳ ಶರೀಫರು ಒಬ್ಬರು. ಜಾನಪದದ ಪ್ರತಿನಿಧಿಯಾದ ಈ ಸಂತಕವಿ

  ಸಾಮಾನ್ಯ ಮಾನವನಿಗೂ ಅರ್ಥವಾಗುವಂತೆ ಮಾನವತೆಯ ತತ್ವ ಬೋಧನೆ ಮಾಡಿದ್ದಾರೆ. ತತ್ವ ವಿವೇಚನೆ, ಶಾಸ್ತçಶ್ರವಣ

  ಮುಂತಾದವುಗಳು ಕೇವಲ ಉಚ್ಛ ಜನರ ಸ್ವತ್ತೆಂಬ ಮೂಢ ತಿಳುವಳಿಕೆ ನಮ್ಮಲ್ಲಿದೆ. ಆದರೆ ಶರೀಫರು ಈ ಮಾತನ್ನು

  ಹುಸಿಯಾಗಿಸಿದ್ದಾರೆ. ಧರ್ಮ ಪರಿಪಾಲನೆ ಹಾಗೂ ತತ್ವ ಸೌರಭವನ್ನು ಪ್ರತಿಯೊಬ್ಬರೂ ಸವಿಯಲು ಅರ್ಹರೆಂದು ಸಾರಿದ್ದಾರೆ.

  ಆದ್ದರಿಂದಲೇ ಶರೀಫರ ತತ್ವಪದಗಳನ್ನು ವೇದಶಾಸ್ತç ಅರಿಯದವರೂ, ಗವಾರರೂ ಗುನುಗುಡುತ್ತಿರುತ್ತಾರೆ. ಮನೆಮನೆಗೆ ಅಲೆದಾಡುವ ದಾಸಯ್ಯಗಳು, ಭಿಕ್ಷಕರು ಇಂಥ ತತ್ವ ಪದಗಳನ್ನು ಹಾಡುತ್ತಾರೆ. ಶ್ರೀಸಾಮಾನ್ಯನು ತನ್ನ ಜೀವನವನ್ನು ಸಾಫಲ್ಯಗೊಳಿಸಿಕೊಳ್ಳುವ ರಹಸ್ಯ ಈ ಹಾಡುಗಳಲ್ಲಿವೆ. ಅಲ್ಲದೆ ಶರೀಫರು ರಚಿಸಿದ ಹಾಡುಗಳ ಗತಿ ಗತ್ತುಗಳು ಜನಮನವನ್ನು ಹಿಡಿಸುವಂಥವುಗಳಾಗಿವೆ.

  3) ಶರೀಫರು ಮತ್ತು ಗೋವಿಂದಭಟ್ಟರ ನಡುವಿನ ಅನ್ಯೋನ್ಯತೆಯನ್ನು ಕುರಿತು ಬರೆಯಿರಿ.

  ಉತ್ತರ: ಜಾತಿ ಮತಗಳಲ್ಲಿ ಭೇದ ಮಾಡದೆ ಗುರು-ಶಿಷ್ಯರಿಬ್ಬರೂ ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿದ್ದರು. ಇವರಿಬ್ಬರಿಗೂ ಅಂದಿನಸಮಾಜ ಬಹಿಷ್ಕಾರ ಹಾಕಿತ್ತು. ಹಾಳು ದೇವಾಲಯ ಮತ್ತು ಸಾರ್ವಜನಿಕ ಗುಡಿಗುಂಡಾರುಗಳಲ್ಲಿ ಇವರು ಕೂಡಿಯೇ

  ವಾಸಿಸುತ್ತಿದ್ದರು. ಶರೀಫ ಹಾಗೂ ಗೋವಿಂದಭಟ್ಟರು ಸುತ್ತಲಿನ ಗ್ರಾಮಗಳಿಗೆ ಒಟ್ಟಿಗೆ ಹೋಗಿ ಅಲ್ಲಿನ ಜನರ ತಿಳುವಳಿಕೆಯ

  ಮಟ್ಟದಲ್ಲಿ ಬೆರೆತು ಉಪದೇಶ ಮಾಡುತ್ತಿದ್ದರು. ಗುಡಿಗೇರಿಯ ಕುಂಬಾರ ಮುದುಕಪ್ಪನ ಮನೆಗೆ ವಿಶೇಷವಾಗಿ ಬರುವ ಹಾಗೂ

  ಅಲ್ಲಿಯೇ ಊಟ ಉಪಚಾರಗಳನ್ನು ತೀರಿಸಿಕೊಳ್ಳುವ ರೂಢಿಯನ್ನು ಇಟ್ಟುಕೊಂಡಿದ್ದರು. ಉಪವಾಸವಿರುವ ಪ್ರಸಂಗ ಬಂದಾಗ ಬೇಡಿತಿಂದರೆ ಋಣಭಾರದಲ್ಲಿ ಸಿಲುಕಬೇಕಾಗುತ್ತದೆ ಎಂದು ತಿಳಿದು ಉಪವಾಸವಿರುತ್ತಿದ್ದರು. ಯಾರಾದರೂ ಪ್ರೀತಿಯಿಂದ ಕರೆದು ನೀಡಿದರೆ ಮಾತ್ರ ಪ್ರಸಾದವೆಂದು ತಿಳಿದು ಸ್ವೀಕರಿಸುತ್ತಿದ್ದರು. ಹೀಗೆ ಗುರು-ಶಿಷ್ಯರ ಸಂಬAಧ ಅನ್ಯೋನ್ಯವಾಗಿತ್ತು.

  4) ಕರ್ಬಲಾ ಮತ್ತು ಅಲಾವಿಗಳ ನಡುವಿನ ವ್ಯತ್ಯಾಸವೇನು?

  ಉತ್ತರ: ಕರ್ಬಲಾ ಇರಾಕ್ ದೇಶದಲ್ಲಿರುವ ಒಂದು ಸ್ಥಳ. ಹಜರತ್ ಹುಸೇನರು ಈ ಸ್ಥಳದಲ್ಲಿ ಶತ್ರುಗಳೊಡನೆ ಹೋರಾಡಿ

  ಹುತಾತ್ಮರಾಗಿದ್ದರು. ಮೊಹರಂ ಹಬ್ಬದ ಕೊನೆಯ ದಿನ ಹಜರತ್ ಹುಸೇನರನ್ನು ಸಾಂಕೇತಿಸುವ ಲೋಹದ ಹಸ್ತಗಳನ್ನು

  ಮೆರವಣಿಗೆಯಲ್ಲಿ ಊರ ಹೊರಗೆ ತಂದು ಸ್ನಾನ ಮಾಡಿಸಿ ಬಿಳಿ ಬಟ್ಟೆಯಲ್ಲಿ ಅವುಗಳನ್ನು ಗಟ್ಟು ಕಟ್ಟುತ್ತಾರೆ. ಇದು ಹುತಾತ್ಮರಾದ ಹುಸೇನರನ್ನು ಸಾಂಕೇತಿಸುವ ಆಚರಣೆಯಾಗಿದೆ. ಅಲಾವಿ ಎಂದರೆ, ಮೊಹರಂ ಹಬ್ಬದ ಸಂದರ್ಭದಲ್ಲಿ ಲೋಹದ ಹಸ್ತವಾದ ‘ಬಾಬಯ್ಯ’ನನ್ನು ಕೂಡಿಸುವುದು. ಬಾಬಯ್ಯನ ಗುಡಿಯ ಮುಂದೆ ಗುಂಡಿ ತೋಡಿ ಅದರಲ್ಲಿ ಬೆಂಕಿ ಉರಿಸುತ್ತಾರೆ. ಆ ಗುಂಡಿಗೆ ‘ಅಲಾವಿ’ ಎಂದು ಕರೆಯುತ್ತಾರೆ..

  ಈ) ಕೆಳಗಿನ ಸಂದರ್ಭಗಳನ್ನು ಸ್ವಾರಸ್ಯದೊಂದಿಗೆ ಬರೆಯಿರಿ.

  1) ಮುಕ್ತ ಹೃದಯದಿಂದ ವಿದ್ಯಾದಾನ ಮಾಡಿದರು.

  – ಪಾಠದ ಹೆಸರು: ಶಿಶುನಾಳ ಶರೀಫ ಸಾಹೇಬರು.

  ಲೇಖಕರ ಹೆಸರು: ಆರ್.ಎಸ್. ಸುಂಕದ.

  ಸಂದರ್ಭ: ಲೇಖಕರು ಈ ಮಾತನ್ನು ಗುರು ಗೋವಿಂದ ಭಟ್ಟರ ಕುರಿತು ನುಡಿದಿದ್ದಾರೆ.

  ವಿವರಣೆ: ಶರೀಫರಿಗೆ ಗುರು ಗೋವಿಂದಭಟ್ಟರೆAಬ ಗುರುಗಳು ದೊರಕಿದರು. ಅವರು ಕಳಸ ಗ್ರಾಮದವರಾಗಿದ್ದರು. ಜ್ಞಾನಿಗಳು, ವಿದ್ಯಾವಂತರು, ಶಕ್ತಿಯ ಉಪಾಸಕರು, ಮಾನವ ಕುಲ ಒಂದೇ ಎಂಬ ಭಾವನೆಯನ್ನು ಹೊಂದಿದ್ದರು. ಜಾತಿ, ಮತ ಭೇದ ಮಾಡದ ಇವರು ಸ್ವಜಾತೀಯನಲ್ಲದ ತಮ್ಮ ಮುಸಲ್ಮಾನ ಶಿಷ್ಯನಿಗೆ ಮುಕ್ತ ಹೃದಯದಿಂದ ವಿದ್ಯಾದಾನ ಮಾಡಿದರು ಎಂದು ಹೇಳುವ ಸಂದರ್ಭದಲ್ಲಿ ಲೇಖಕರು ಈ ಮೇಲಿನ ಮಾತನ್ನು ಹೇಳಿದ್ದಾರೆ.

  2) “ದೊರಕಿದಾ ಗುರು ದೊರಕಿದಾ ಸದ್ಗುರು.” (2018)

  – ಪಾಠದ ಹೆಸರು: ಶಿಶುನಾಳ ಶರೀಫ ಸಾಹೇಬರು.

  ಲೇಖಕರ ಹೆಸರು: ಆರ್.ಎಸ್. ಸುಂಕದ.

  ಸಂದರ್ಭ: ಶರೀಫರು ರಚಿಸಿದ ಪದ್ಯದಲ್ಲಿ ಈ ಮೇಲಿನ ಮಾತು ಬಂದಿದೆ.

  ವಿವರಣೆ: ಶರೀಫರಿಗೆ ಗುರುಗೋವಿಂದ ಭಟ್ಟರೆಂಬ ಆದರ್ಶ ಗುರುಗಳು ದೊರೆತರು. ಸ್ವಜಾತಿಯನಲ್ಲದ ಶರೀಫರಿಗೆ ಗುರುಗಳು ವಿದ್ಯಾದಾನ ಮಾಡಿದರು. ಗುರುಗೋವಿಂದ ಭಟ್ಟರು ‘ಮಾನವ ಕುಲ ಒಂದೇ’ ಎಂಬ ಭಾವನೆಯುಳ್ಳವರಾಗಿದ್ದರು. ಗುರು ಶಿಷ್ಯರಿಬ್ಬರೂ ಒಂದೇತಟ್ಟೆಯಲ್ಲಿ ಊಟ ಮಾಡುತ್ತಿದ್ದರು. ಶರೀಫರು ಗುರುಗಳ ಮಹಿಮೆಯನ್ನು ಸ್ತುತಿಸುವ ಒಂದು ಕವನದಲ್ಲಿ ಈ ಮೇಲಿನ ಸಾಲನ್ನು ಭಯ ಭಕ್ತಿಗಳಿಂದ ಹಾಡಿದ್ದರು.

  3) “ಅಲ್ಲಾಹೂ ಅಕ್ಬರ.”

  – ಪಾಠದ ಹೆಸರು: ಶಿಶುನಾಳ ಶರೀಫ ಸಾಹೇಬರು.

  ಲೇಖಕರ ಹೆಸರು: ಆರ್.ಎಸ್. ಸುಂಕದ.

  ಸಂದರ್ಭ: ಮುಸ್ಲಿಂ ಜನಾಂಗದವರ ಕುರಾನ್ ಪಠಣದಲ್ಲಿ ಈ ಮಾತು ಕೇಳಿ ಬರುತ್ತಿತ್ತು.

  ವಿವರಣೆ: ಕರ್ನಾಟಕದ ಕಬೀರರು ಎಂದು ಖ್ಯಾತಿ ಪಡೆದ ಶರೀಫರು ಮೃತರಾದಾಗ ಅವರ ಶವ ಸಂಸ್ಕಾರವನ್ನು ಹಿಂದೂ, ಮುಸ್ಲಿಂ ಸಮುದಾಯದವರು ತಮ್ಮ ಧಾರ್ಮಿಕ ವಿಧಿಯಂತೆ ಮಾಡಲು ಮುಂದಾದರು. ಒಂದು ಕಡೆ ಕುರಾನಿನ ಪಠಣದೊಳಗೆ ಈ ಮೇಲಿನ ಮಾತು ಕೇಳಿ ಬರುತ್ತಿತ್ತು. ಇನ್ನೊಂದೆಡೆ ವೇದ ಮಂತ್ರ ಪಠಣದೊಳಗೆ ‘ಹರ ಹರ ಮಹಾದೇವ’ ಎಂಬ ಉದ್ಘೋಷ ಕೇಳಿ ಬರುತ್ತಿತ್ತು ಎಂದು ಲೇಖಕರು ಹೇಳಿದ್ದಾರೆ.

  4) “ಭೂಮಿಗೆ ಕೊಡತೇನೀ ದೇಹಾ.”

  – ಪಾಠದ ಹೆಸರು: ಶಿಶುನಾಳ ಶರೀಫ ಸಾಹೇಬರು.

  ಲೇಖಕರ ಹೆಸರು: ಆರ್.ಎಸ್. ಸುಂಕದ.

  ಸಂದರ್ಭ: ಶರೀಫರು ತಮ್ಮ ದೇಹ ತ್ಯಜಿಸುವ ಮುನ್ನ ಈ ಮೇಲಿನ ಮಾತನ್ನು ನುಡಿದಿದ್ದರು.

  ವಿವರಣೆ: ಶರೀಫರ ಅಂತ್ಯವು ಶಾಂತಿಯುತವಾಗಿತ್ತು. ಮರಣಕ್ಕೆ ಮುಂಚೆ ಅವರು ಗುರು ಹಿರಿಯರನ್ನೆಲ್ಲಾ ಸ್ಮರಿಸಿದರು. ಅವಸಾನ ಹೊಂದುವ ಕೆಲವು ನಿಮಿಷಗಳ ಮುಂಚೆ ಈ ಮೇಲಿನ ಸಾಲನ್ನು ಹಾಡಿದ್ದರು ಎಂದು ಲೇಖಕರು ಹೇಳಿದ್ದಾರೆ.

  ಉ) ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.

  1) ಶರೀಫರ ಜನ್ಮಸ್ಥಳ ಶಿಶುನಾಳ.

  2) ಶರೀಫರ ಆದರ್ಶ ಗುರುವಿನ ಹೆಸರು ಗುರುಗೋವಿಂದಭಟ್ಟ.

  3) ಶರೀಫರ ಹಾಡುಗಳನ್ನು ಬರೆದು ಕೊಳ್ಳುತ್ತಿದ್ದವರು ಕುಂಬಾರ ಮುದುಕಪ್ಪ.

  4) ಶರೀಫರ ಪತ್ನಿಯ ಹೆಸರು ಫಾತಿಮಾ.

  ಊ) ಮೊದಲೆರಡು ಪದಗಳಿಗಿರುವ ಸಂಬಂಧವನ್ನು ಗಮನಿಸಿ, ಮೂರನೇ ಪದಕ್ಕೆ ಸಂಬಂಧಿಸಿದ ಪದವನ್ನು ಬರೆಯಿರಿ.

  1) ಶರೀಫರತಂದೆ : ಹಜರತಇಮಾಮ :: ಶರೀಫರತಾಯಿ : ಹಾಜುಮ್.

  2) ಶಿಶುನಾಳದ ಸಂತ : ಶರೀಫರು :: ಹುಲಗೂರಿನ ಸಂತ :ಖಾದರ್ ಷಾ ವಲಿ.

  3) ಹಜರತ್‌ಇಮಾಮ : ಹಾಜುಮ್ :: ಶರೀಫರು : ಫಾತಿಮಾ.

  ಭಾಷಾಭ್ಯಾಸ

  ಅ) ಕೆಳಗಿನ ತತ್ಸಮ ಪದಗಳಿಗೆ ತದ್ಭವ ರೂಪಗಳನ್ನು ಬರೆಯಿರಿ.

  ಧರ್ಮ–ದರುಮ, ದಮ್ಮ

  ಭಕ್ತ – ಭಕುತ ಜನ್ಮ–ಜನುಮ

  ಮುಕ್ತಿ – ಮುಕುತಿ ಭಿಕ್ಷಭಿಕ್ಕು

  ಪ್ರಸಾದ – ಹಸಾದ ವ್ಯವಸಾಯ – ಬೇಸಾಯ

  ಆ) ಕೆಳಗಿನ ತದ್ಭವ ಪದಗಳಿಗೆ ತತ್ಸಮರೂಪವನ್ನು ಬರೆಯಿರಿ.

  ವರುಷ– ವರ್ಷ

  ರಿಣ–ಋಣ ಬಿಜ್ಜೆ– ವಿದ್ಯೆ

  ಬೊಮ್ಮ – ಬ್ರಹ್ಮ ಮೊಗ – ಮುಖ

  ಜೋಗಿ–ಯೋಗಿ. ಬಣ್ಣ– ವರ್ಣ

  ಇ) ಕೆಳಗಿನ ಪದಗಳನ್ನು ಬಿಡಿಸಿ ಬರೆದು, ಸಂಧಿಗಳನ್ನು ಹೆಸರಿಸಿರಿ.

  ಸತ್ + ಗುರು = ಸದ್ಗುರು (ಜಶ್ತವ ಸಂಧಿ)

  ದೇವ + ಉನ್ಮಾದ = ದೇವೋನ್ಮಾದ (ಗುಣ ಸಂಧಿ) ಬಾಷ್ಪ + ಅಂಜಲಿ = ಬಾಷ್ಪಾಂಜಲಿ (ಸವರ್ಣದೀರ್ಘ ಸಂಧಿ)

  ಜೀವ + ಒಂದು = ಜೀವವೊಂದು (‘ವ’ ಕಾರಾಗಮ ಸಂಧಿ)

  ವಿದ್ಯಾ + ಅಭ್ಯಾಸ = ವಿದ್ಯಾಭ್ಯಾಸ (ಸವರ್ಣದೀರ್ಘ ಸಂಧಿ)

  ಈ) ಕೆಳಗಿನ ಪದಗಳಿಗೆ ವಿಗ್ರಹವಾಕ್ಯವನ್ನು ಮಾಡಿ, ಸಮಾಸದ ಹೆಸರನ್ನು ತಿಳಿಸಿರಿ.

  ಕಾವ್ಯದ + ವಾಚನ = ಕಾವ್ಯವಾಚನ = ತತ್ಪುರುಷ ಸಮಾಸ.

  ಮೈಯನ್ನು + ಮರೆತು = ಮೈಮರೆತು = ಕ್ರಿಯಾ ಸಮಾಸ

  ಚಕ್ರದ + ಆಕಾರ = ಚಕ್ರಾಕಾರ = ತತ್ಪರುಷ ಸಮಾಸ. ತತ್ವದ + ಪದ = ತತ್ವಪದ = ತತ್ಪುರುಷ ಸಮಾಸ

  ಹಿರಿದಾದ + ಗುರಿ = ಹೆಗ್ಗುರಿ = ಕರ್ಮಧಾರೆಯ ಸಮಾಸ

  ಪದ್ಯ -6. ಗ್ರಂಥಾಲಯದಲ್ಲಿ.

  ಕವಿ ಪರಿಚಯ

  *ಸಿ. ಪಿ. ಕೃಷ್ಣಕುಮಾರ್*

  ಜನ್ಮ ವರ್ಷ: 1939

  ಜನ್ಮ ಸ್ಥಳ: ಚಿಕ್ಕನಾಯಕನ ಹಳ್ಳಿ ( ಮೈಸೂರು ಜಿಲ್ಲೆ )

  ಕೃತಿಗಳು: 1) ಅನಂತ ಪೃಥ್ವಿ, 2) ತಾರಾಸಖ, 3) ಸಾಹಿತ್ಯ ಪ್ರವೇಶ, 4) ಕನ್ನಡನಾಗಾನಂದ, 5) ಕಾವ್ಯಾರಾಧನೆ.

  ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ.

  1) ಸಿ.ಪಿ.ಕೆ.ಯವರು ಯಾವುದರ ಅಡಿಯಲ್ಲಿ ತಾನು ಧೂಳು ಕಣವಾಗಿ ಬಿಡುತ್ತೇನೆಂದು ಹೇಳಿದ್ದಾರೆ?

  ಉತ್ತರ: ಸಿ.ಪಿ.ಕೆಯವರು ಗ್ರಂಥಾಲಯದಲ್ಲಿ ಜೋಡಿಸಿಟ್ಟಿರುವ ಗ್ರಂಥಗಿರಿ ಪಂಕ್ತಿಗಳ ಅಡಿಯಲ್ಲಿ ತಾನು ಧೂಳು ಕಣವಾಗಿ

  ಬಿಡುತ್ತೇನೆಂದು ಹೇಳಿದ್ದಾರೆ.

  2) ಕವಿಯು ತನ್ನ ಮತಿ ಎಲ್ಲಿ ಮುದುಡಿ ಹೋಗುತ್ತದೆ ಎಂದಿದ್ದಾರೆ?

  ಉತ್ತರ: ಕವಿಯು ತನ್ನ ಮತಿ ಗ್ರಂಥಾಲಯದಲ್ಲಿ ಮುದುಡಿ ಹೋಗುತ್ತದೆ ಎಂದಿದ್ದಾರೆ.

  3) ಅಹಂಕಾರವನ್ನು ನುಚ್ಚು ನೂರಾಗಿಸುವ ತಾಣ ಯಾವುದೆಂದು ಸಿ.ಪಿ.ಕೆಯವರು ಹೇಳಿದ್ದಾರೆ?

  ಉತ್ತರ: ಗ್ರಂಥಾಲಯವು ತನ್ನ ಅಹಂಕಾರವನ್ನು ನುಚ್ಚು ನೂರಾಗಿಸುವ ತಾಣವೆಂದು ಸಿ.ಪಿ.ಕೆಯವರು ಹೇಳಿದ್ದಾರೆ.

  4) ಸಿ.ಪಿ.ಕೆಯವರು ಗ್ರಂಥಗಳನ್ನು ಯಾವುದರ ಪಳೆಯುಳಿಕೆ ಎಂದಿದ್ದಾರೆ?

  ಉತ್ತರ: ಸಿ.ಪಿ.ಕೆಯವರು ಗ್ರಂಥಗಳನ್ನು ಅನೇಕಾನೇಕ ಹಿರಿಬಾಳುಗಳ ಪಳೆಯುಳಿಕೆ ಎಂದಿದ್ದಾರೆ.

  5) ಸಿ.ಪಿ.ಕೆ.ಯವರು ಯಾವುದನ್ನು ವಿಶ್ವರೂಪಾವಲೋಕನ ಎಂದಿದ್ದಾರೆ?

  ಉತ್ತರ: ಸಿ.ಪಿ.ಕೆ.ಯವರು ಹಲವಾರು ಹಿರಿಬಾಳ ಪಳೆಯುಳಿಕೆಯಾದ ಗ್ರಂಥಗಳ ಮೂಲವನ್ನು ವಿಶ್ವರೂಪಾವಲೋಕನ ಎಂದಿದ್ದಾರೆ.

  6) ಭೀತ ವಿಸ್ಮಿತರಾದ ಕವಿ ಯಾರ ಹಾಗೆ ತತ್ತರಿಸಿದರು? (2018)

  ಉತ್ತರ: ಭೀತ ವಿಸ್ಮಿತರಾದ ಕವಿ ಪಾರ್ಥನಂತೆ ತತ್ತರಿಸಿದರು.

  ಆ) ಕೆಳಗಿನ ಪ್ರಶ್ನೆಗಳಿಗೆ ಎರಡು/ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ.

  1) ಗ್ರಂಥಾಲಯವನ್ನು ಹೊಕ್ಕಾಗ ಕವಿಗೆ ಆದ ಅನುಭವವನ್ನು ತಿಳಿಸಿ.

  ಉತ್ತರ: ಕವಿ ಸಿ. ಪಿ. ಕೆಯವರುಗ್ರಂಥಾಲಯವನ್ನು ಪ್ರವೇಶಿಸಿ ಕಣ್ಣಿನದೃಷ್ಟಿ ಹರಿಸಿದ ಎಲ್ಲ ಕಡೆ ಅವರಿಗೆ ಗ್ರಂಥಗಿರಿ ಪಂಕ್ತಿಗಳು

  ಇರುವುದು ಕಂಡುಬಂದಿತು. ಆ ಪಂಕ್ತಿಗಳ ಕೆಳಗೆ ತಾನು ಧೂಳು ಕಣವಾಗಿ ನಿಂತAತೆ ಭಾಸವಾಯಿತು. ಗ್ರಂಥಾಲಯದಲ್ಲಿ ತನ್ನ ಮತಿ ಮುದುಡಿ ಹೋಗಿ, ಅಹಂಕಾರವು ನುಚ್ಚುನೂರಾದಂತೆ ಕವಿಗಳಿಗೆ ಅನುಭವವಾಯಿತು.

  2) ಕವಿ ಸಿ. ಪಿ. ಕೆಯವರು ಗ್ರಂಥಾಲಯದಲ್ಲಿ ಭೀತ ವಿಸ್ಮಿತರಾಗಿ ನಿಂತದ್ದು ಏಕೆ?

  ಉತ್ತರ: ಕವಿ ಸಿ. ಪಿ. ಕೆಯವರು ಗ್ರಂಥಾಲಯದಲ್ಲಿರುವ ಗ್ರಂಥಗಿರಿಗಳ ಪಂಕ್ತಿಗಳನ್ನು ನೋಡಿ ಆಶ್ಚರ್ಯಚಕಿತರಾಗುತ್ತಾರೆ. ಹಲವಾರು ಕವಿಗಳ, ಲೇಖಕರ ಕೃತಿಗಳನ್ನು ನೋಡಿ ಅವರಿಗೆ ತನ್ನ ಮತಿ ಮುದುಡಿದಂತೆ, ಅಹಂಕಾರ ನುಚ್ಚುನೂರಾದಂತೆ ಭಾಸವಾಗುತ್ತದೆ. ಹಲವಾರು ಹಿರಿಬಾಳುಗಳ ಪಳೆಯುಳಿಕೆಗಳ ಮೇಳ ಅಲ್ಲಿ ನೆರೆದಂತೆ ಭಾಸವಾಗುತ್ತದೆ. ಆ ಗ್ರಂಥಗಳ ಮೂಲವನ್ನು ಚಿತ್ರಿಸಲು ಪ್ರಯತ್ನಿಸಿದಾಗ ಮಹಾಭಾರತ ಯುದ್ಧದ ಮುನ್ನ ಶ್ರೀಕೃಷ್ಣನ ವಿಶ್ವರೂಪದರ್ಶನವನ್ನು ಕಂಡು ಭೀತ ವಿಸ್ಮಿತನಾದ ಅರ್ಜುನನಂತಹ ಅವಸ್ಥೆ ಸಿ.ಪಿ.ಕೆಯವರದ್ದಾಗಿದೆ.

  3) ಸಿ.ಪಿ.ಕೆಯವರು ‘ಹಿರಿಬಾಳು ಪಳೆಯುಳಿಕೆ’ ಎಂದು ಯಾವುದನ್ನು ಕರೆದಿದ್ದಾರೆ, ಏಕೆ?

  ಉತ್ತರ: ಸಿ.ಪಿ.ಕೆಯವರು ಗ್ರಂಥಾಲಯದಲ್ಲಿ ಅಸಂಖ್ಯ ಕವಿ, ಲೇಖಕರು ಬರೆದಿರುವ ಸಹಸ್ರಾರು ಪುಸ್ತಕಗಳನ್ನು ನೋಡಿ

  ಬೆರಗಾಗುತ್ತಾರೆ. ಆ ಪುಸ್ತಕಗಳನ್ನು ನೋಡುತ್ತಿದ್ದಂತೆಯೇ ಕವಿಗಳ ಅಹಂಕಾರ ನುಚ್ಚುನೂರಾಗಿ ಅಲ್ಲಿ ಹಲವಾರು ಹಿರಿಬಾಳು

  ಪಳೆಯುಳಿಕೆ ಇರುವಂತೆ ಭಾಸವಾಗುತ್ತದೆ. ಆ ಹಿರಿಯ ಕವಿಗಳ ಸಾಧನೆ ಮತ್ತು ಕೃತಿಗಳನ್ನು ಕಂಡು ಕವಿ ಸಿ.ಪಿ.ಕೆಯವರು ಹಳೆಯ ಗ್ರಂಥಗಳನ್ನು ಹಿರಿಬಾಳುಗಳ ಪಳೆಯುಳಿಕೆ ಎಂದು ಕರೆದಿದ್ದಾರೆ.

  ಇ) ಕೆಳಗಿನ ಹೇಳಿಕೆಗಳ ಸಂದರ್ಭವನ್ನು ಸ್ವಾರಸ್ಯ ಸಹಿತ ವಿವರಿಸಿ.

  1) “ಕಣ್‌ದಿಟ್ಟಿ ಹರಿದತ್ತ ಗ್ರಂಥಗಿರಿ ಪಂಕ್ತಿಗಳು”

  – ಪದ್ಯದ ಹೆಸರು : ಗ್ರಂಥಾಲಯದಲ್ಲಿ.

  ಕವಿಗಳ ಹೆಸರು: ಸಿ. ಪಿ. ಕೃಷ್ಣಕುಮಾರ್.

  ಸಂದರ್ಭ: ಕವಿಗಳು ಈ ಮಾತನ್ನು ನಮಗೆ ನುಡಿದಿದ್ದಾರೆ.

  ವಿವರಣೆ: ಕವಿ ಸಿ. ಪಿ. ಕೆಯವರು ಗ್ರಂಥಾಲಯವನ್ನು ಪ್ರವೇಶಿಸಿದಾಗ ಅವರು ಕಣ್ಣಿನದೃಷ್ಟಿ ಹರಿಸಿದಲ್ಲೆಲ್ಲಾ ಗ್ರಂಥಗಳ ಗಿರಿ

  ಪಂಕ್ತಿಗಳನ್ನೇ ಕಾಣುತ್ತಾರೆ. ಸರಿಯಾಗಿ ಜೋಡಿಸಿಟ್ಟಿರುವ ಗ್ರಂಥಗಳನ್ನು ನೋಡಿ ಬೆರಗಾದ ಕವಿಗಳು ಈ ಮೇಲಿನ ಮಾತನ್ನು ನಮಗೆ ನುಡಿಯುತ್ತಾರೆ.

  2) “ಮುದುಡಿ ಹೋಗುವುದಿಲ್ಲಿ: ನನ್ನಅಹಂಕಾರ”

  – ಪದ್ಯದ ಹೆಸರು: ಗ್ರಂಥಾಲಯದಲ್ಲಿ

  ಕವಿಗಳ ಹೆಸರು: ಸಿ. ಪಿ. ಕೃಷ್ಣಕುಮಾರ್.

  ಸಂದರ್ಭ: ಗ್ರಂಥಾಲಯದೊಳಗಿನ ಅನುಭವ ಹೇಳುತ್ತಾ ಕವಿ ಈ ಮಾತನ್ನು ನುಡಿದಿದ್ದಾರೆ.

  ವಿವರಣೆ: ಗ್ರಂಥಾಲಯದೊಳಗೆ ಗ್ರಂಥಗಿರಿ ಪಂಕ್ತಿಗಳ ಕೆಳಗೆ ಕವಿಗಳು ನಿಂತಾಗ ತಾನೊಂದು ಧೂಳಿನ ಕಣವೆಂಬAತೆ ಕವಿಗಳಿಗೆ ಅನಿಸಿ, ಒಂದು ಕ್ಷಣ ಗ್ರಂಥಾಲಯದಲ್ಲಿ ಬಂದು ನಿಂತರೆ ಸಾಕು ತನ್ನ ಮತಿ ಮುದುಡಿ ಹೋಗಿ ತನ್ನ ಅಹಂಕಾರವೆಲ್ಲಾ ಈ ಗ್ರಂಥಾಲಯದಲ್ಲಿ ಅಪ್ಪಳಿಸಿ ನುಚ್ಚುನೂರಾಗಿ ಬಿಡುತ್ತದೆ ಎಂಬ ಭಾವನೆ ಕವಿಗಳಲ್ಲಿ ಮೂಡಿದೆ.

  3) “ಪಾರ್ಥನೊಲು ತತ್ತರಿಸಿ ವಿಸ್ಮಿತನಾಗಿ”

  – ಪದ್ಯದ ಹೆಸರು: ಗ್ರಂಥಾಲಯದಲ್ಲಿ

  ಕವಿಗಳ ಹೆಸರು: ಸಿ. ಪಿ. ಕೃಷ್ಣಕುಮಾರ್.

  ಸಂದರ್ಭ: ಕವಿಗಳು ತನ್ನಲ್ಲಿ ಉಂಟಾದ ಭಯ ಹಾಗೂ ಆಶ್ಚರ್ಯದ ಬಗೆಗೆ ಹೇಳುವಾಗ ಈ ಮೇಲಿನ ಮಾತನ್ನು ಹೇಳಿದ್ದಾರೆ.

  ವಿವರಣೆ: ಕವಿ ಸಿ. ಪಿ. ಕೆಯವರು ಗ್ರಂಥಾಲಯದಲ್ಲಿ ಅನೇಕ ಹಿರಿಯ ಕವಿ ಹಾಗೂ ಲೇಖಕರು ಬರೆದಿರುವ ಪುಸ್ತಕಗಳನ್ನು

  ಕಾಣುತ್ತಾರೆ. ಆ ಪುಸ್ತಕಗಳ ಮೂಲ ಹುಡುಕಲು ಪ್ರಯತ್ನಿಸಿದಾಗ ಅವರಿಗೆ ವಿಶ್ವರೂಪದ ಅವಲೋಕನವೇ ಆಯಿತು. ಶ್ರೀಕೃಷ್ಣನ ವಿಶ್ವರೂಪದರ್ಶನವನ್ನು ಕಂಡ ಪಾರ್ಥ ಹೇಗೆ ಭಯಭೀತ ವಿಸ್ಮಿತನಾದನೋ ಅದೇರೀತಿಯ ಭಾಸ ಕವಿಗಳಿಗೆ ಗ್ರಂಥಾಲಯದಲ್ಲಿ ಆಯಿತು ಎಂದು ಹೇಳುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.

  ಈ) ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರ ಬರೆಯಿರಿ.

  1) ಗ್ರಂಥಾಲಯದ ಬಗ್ಗೆ ಕವಿ ವ್ಯಕ್ತಪಡಿಸಿರುವ ಭಾವನೆಗಳನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.

  ಗ್ರಂಥರಾಶಿಯ ಮುಂದೆ ಮನುಷ್ಯನ ಅಹಂಕಾರ ನುಚ್ಚು ನೂರಾಗುತ್ತದೆ ಎಂಬ ಭಾವನೆ ‘ಗ್ರಂಥಾಲಯದಲ್ಲಿ’ ಕವನದಲ್ಲಿ ಹೇಗೆ ವ್ಯಕ್ತವಾಗಿದೆ?

  ವಿವರಿಸಿ. (ಇವೆರಡೂ ಪ್ರಶ್ನೆಗಳಿಗೆ ಒಂದೇ ಈ ಕೆಳಗಿನ ಉತ್ತರ)

  ಉತ್ತರ: ಕವಿಗಳು ಗ್ರಂಥಾಲಯವನ್ನು ಪ್ರವೇಶಿಸಿದಾಗ ಅಲ್ಲಿರುವ ಪುಸ್ತಕಗಳ ಭಂಡಾರವನ್ನು ಕಂಡು ತಾನು ಆ ಗ್ರಂಥಗಳೆAಬ ಗಿರಿ ಪಂಕ್ತಿಗಳ ಕೆಳಗೆ ನಿಂತು ಧೂಳಿನ ಕಣಕ್ಕೆ ಸಮನಾಗಿದ್ದೇನೆ ಎನಿಸುತ್ತದೆ. ಗ್ರಂಥಾಲಯದೊಳಗೆ ಬಂದು ಒಂದು ಕ್ಷಣಕಾಲ ನಿಂತರೂ ಸಾಕು ಅವರ ಮತಿ ಮದುಡಿ ಹೋಗುತ್ತದೆ. ಗ್ರಂಥಾಲಯ ಕವಿಗಳ ಅಹಂಕಾರವನ್ನು ಅಪ್ಪಳಿಸಿ ನುಚ್ಚುನೂರು ಮಾಡುತ್ತದೆ. ಕವಿಗಳಿಗೆ ಗ್ರಂಥಾಲಯದಲ್ಲಿ ಭಯ ಉಂಟಾಗಿ ಆದಷ್ಟೂ ಬೇಗ ಹೊರಗೆ ಓಡಿ ಹೋಗಬೇಕೆಂದೆನಿಸುತ್ತದೆ. ಇಂತಹ ಶಿಕ್ಷೆ ನನಗೆ ಬೇಡ, ಆದಷ್ಟೂ ಗ್ರಂಥಾಲಯ ನನ್ನಿಂದ ದೂರದಲ್ಲಿಯೇಇರಲಿ ಎನಿಸುತ್ತದೆ.ಗ್ರಂಥಾಲಯದಲ್ಲಿ ಹಲವಾರು ಕವಿ, ಲೇಖಕರು ಬರೆದ ಗ್ರಂಥಗಳನ್ನು ಕಂಡು ಲೇಖಕರಿಗೆ ಆ ಗ್ರಂಥಾಲಯ ಹಿರಿಬಾಳುಗಳ ಪಳೆಯುಳಿಕೆಯಂತೆ ಭಾಸವಾಗುತ್ತದೆ. ಕವಿಗಳು ಇದರ ಮೂಲವನ್ನು ಚಿತ್ರಿಸಲು ಪ್ರಯತ್ನಿಸಿದಾಗ ವಿಶ್ವರೂಪದ ಅವಲೋಕನವನ್ನೇ ಕವಿಗಳಿಗೆ ಮಾಡಿದಂತಾಗುತ್ತದೆ. ಶ್ರೀಕೃಷ್ಣನ ವಿಶ್ವರೂಪದರ್ಶನವನ್ನು ಕಂಡು ಅರ್ಜುನ ತತ್ತರಿಸಿ ಭೀತ ವಿಸ್ಮಿತನಾದಂತೆ ಕವಿಗಳೂ ಗ್ರಂಥಾಲಯದಲ್ಲಿ ಭೀತ ವಿಸ್ಮಿತರಾಗುತ್ತಾರೆ.

  ಭಾಷಾಭ್ಯಾಸ

  ಅ) ಕೆಳಗೆ ಕೊಟ್ಟಿರುವ ಪದಗಳನ್ನು ಬಿಡಿಸಿ ಬರೆದು, ಸಂಧಿಗಳನ್ನು ಹೆಸರಿಸಿರಿ.

  ಪುಸ್ತಕ + ಆಲಯ = ಪುಸ್ತಕಾಲಯ (ಸ. ದೀ. ಸಂ.)

  ರೂಪ + ಅವಲೋಕನ = ರೂಪಾವಲೋಕನ (ಸ.ದೀ.ಸಂ.) ನನಗೆ + ಇಲ್ಲ = ನನಗಿಲ್ಲ (ಲೋಪ ಸಂಧಿ)

  ಪಾರ್ಥನ + ಒಲು = ಪಾರ್ಥನೊಲು (ಲೋಪ ಸಂಧಿ)

  ಆ) ತತ್ಸಮ-ತದ್ಭವಗಳನ್ನು ಬರೆಯಿರಿ.

  ದಿಟ್ಟಿ–ದೃಷ್ಟಿ , ಪುಸ್ತಕ – ಹೊತ್ತಿಗೆ , ಚಣ–ಕ್ಷಣ,  ತಾಣ – ಸ್ಥಾನ

  ಇ) ಕೆಳಗಿನ ಪದಗಳನ್ನು ಸ್ವಂತ ವಾಕ್ಯಗಳಲ್ಲಿ ಬಳಸಿರಿ.

  1) ಗ್ರಂಥಾಲಯ: ಜ್ಞಾನ ವೃದ್ಧಿಸಿಕೊಳ್ಳುವ ತಾಣವೇ ಗ್ರಂಥಾಲಯ.

  2) ಮೇಳ: ಅನೇಕ ವಿದ್ಯಾವಂತರಿಗಾಗಿ ಸರ್ಕಾರವು ಉದ್ಯೋಗ ಮೇಳವನ್ನು ಆಯೋಜಿಸುತ್ತದೆ.

  3) ಪಳೆಯುಳಿಕೆ: ಸಿಂಧೂ ನದಿ ನಾಗರಿಕತೆಯ ಅನೇಕ ಪಳಿಯುಳಿಕೆಗಳು ಹರಪ್ಪ, ಮಹೊಂಜೊದಾರೋ ನಗರಗಳಲ್ಲಿ

  ಕಂಡುಬರುತ್ತವೆ.

  4) ಭೀತ ವಿಸ್ಮಿತ: ಧಾರಾಕಾರವಾಗಿ ಬೀಳುವ ಮಳೆಯು ಎಲ್ಲರನ್ನು ಭೀತ ವಿಸ್ಮಿತರನ್ನಾಗಿ ಮಾಡುತ್ತದೆ.

  ಈ) ಈ ಕೆಳಗಿನ ಪದ್ಯ ಭಾಗಗಳನ್ನು ಕಂಠಪಾಠ ಮಾಡಿರಿ.

  ಕಣ್‌ದಿಟ್ಟಿ ಹರಿದತ್ತ ಗ್ರಂಥಗಿರಿ ಪಂಕ್ತಿಗಳು

  ನಿಂತು ಬೆರಗೀಯುತಿವೆ ಪುಸ್ತಕಾಲಯದಲ್ಲಿ

  ಇವುಗಳಡಿ ನಾಧೂಳ ಕಣವಾಗಿ ನಿಲ್ಲುವೆನು –

  ಚಣಕಾಲ ಬಂದು ನಿಂತರೆ ಸಾಕು,

  ನನ್ನ ಮತಿ ಮುದುಡಿ ಹೋಗುವುದಿಲ್ಲಿ ನನ್ನ ಅಹಂಕಾರವನು

  ನುಚ್ಚು ನೂರಾಗಿಸುವುದೀ ತಾಣ ಅಪ್ಪಳಿಸಿ!

  ಒಳಗೆ ಬಂದೆನೊ ಬೇಗ ಹೊರಗೆ ಓಡುವತವಕ-

  ಏಕೆನಲು ಬೆದರುವೆನು ನನಗಿಲ್ಲಿ ಬಹ ಲಯಕೆ!

  ಪಾಠ – 7. ಧ್ವಜ ರಕ್ಷಣೆ.

  ಲೇಖಕರ ಪರಿಚಯ

  * ಪ್ರೋ|| ಎಸ್. ಆರ್. ರೋಹಿಡೇಕರ್*

  ಜನ್ಮ ವರ್ಷ: ಸಪ್ಟೆಂಬರ್ 15, 1915

  ಜನ್ಮ ಸ್ಥಳ: ವಿಜಯಪುರ ( ವಿಜಾಪುರ )

  ಕೃತಿಗಳು: 1) ಮೂರು ಏಕಾಂಕ ನಾಟಕಗಳು, 2) ರಾಮಸಿಂಗ್ ಚೌಕ, 3) ಧ್ವಜ ರಕ್ಷಣೆ.

  ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ.

  1) ಮೋಹನಪುರದಲ್ಲಿ ನಡೆದ ಚಳುವಳಿ ಯಾವುದು?

  ಉತ್ತರ: ಮೋಹನಪುರದಲ್ಲಿ ಚಲೇಜಾವ್ ಚಳುವಳಿ ನಡೆಯಿತು.

  2) ಗಾಂಧೀಜಿಯವರು ಕೊಟ್ಟ ಮಂತ್ರ ಯಾವುದು? (2018)

  ಉತ್ತರ: ‘ಮಾಡು ಇಲ್ಲವೆ ಮಡಿ’ ಎಂಬುದು ಗಾಂಧೀಜಿಯವರು ಕೊಟ್ಟ ಮಂತ್ರವಾಗಿತ್ತು.

  3) ಸತ್ಯಾಗ್ರಹಿಗಳನ್ನು ಚದುರಿಸಲು ಕುಲಕರ್ಣಿಯವರು ಏನು ಮಾಡಿದರು?

  ಉತ್ತರ: ಸತ್ಯಾಗ್ರಹಿಗಳನ್ನು ಚದುರಿಸಲು ಕುಲಕರ್ಣಿಯವರು ಗಾಳಿಯಲ್ಲಿ ಗುಂಡು ಹಾರಿಸಿದರು.

  4) ಮೋಹನಪುರದ ಪರಿಸ್ಥಿತಿಯನ್ನು ನಿಯಂತ್ರಿಸಲು ಡಿ. ಎಸ್. ಪಿ. ಏನು ಮಾಡಿದರು?

  ಉತ್ತರ: ಮೋಹನಪುರದ ಪರಿಸ್ಥಿತಿಯನ್ನು ನಿಯಂತ್ರಿಸಲು ಡಿ. ಎಸ್. ಪಿಯವರು ತಮ್ಮ ಇಲಾಖೆಯ ನಿಷ್ಠಾವಂತ ಅಧಿಕಾರಿ ಮಿ|| ಕುಲಕರ್ಣಿಯವರನ್ನು ಕರ್ತವ್ಯದ ಮೇಲೆ ಹೋಗುವಂತೆ ಆದೇಶಿಸಿದರು.

  5) ರಾಮಸಿಂಗ್ ಶಿಪಾಯಿಗಳಿಗೆ ಯಾವ ಮಾತನ್ನು ಸೆರಗಿಗೆಗಂಟು ಹಾಕಿಕೊಳ್ಳುವಂತೆ ಹೇಳಿದನು? (2018)

  ಉತ್ತರ: ರಾಮಸಿಂಗ್ ಸಿಪಾಯಿಗಳಿಗೆ “ಜನರೊಪ್ಪದ ಬ್ರಿಟಿಷರ ಆಟ ಇನ್ನು ಭಾರತದಲ್ಲಿ ನಡೆಯಲಾರದು.” ಎಂಬ ಮಾತನ್ನು

  ಸೆರಗಿಗೆ ಗಂಟು ಹಾಕಿಕೊಳ್ಳುವಂತೆ ಹೇಳಿದನು.

  ಆ) ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಎರಡು/ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ.

  1) ತುಳಜಾಬಾಯಿಯ ದೇಶಪ್ರೇಮ ಮತ್ತು ತ್ಯಾಗವನ್ನು ಕುರಿತು ಬರೆಯಿರಿ. (2018)

  ಉತ್ತರ: ತುಳಜಾಬಾಯಿ ರಾಮಸಿಂಗನ ತಾಯಿ. ಸ್ವಾತಂತ್ರö್ಯ ಸಂಗ್ರಾಮದ ಚಳುವಳಿಯಲ್ಲಿ ತನ್ನ ಮಗನನ್ನು ಬಲಿ ಕೊಡುವ ಸಾಧ್ಯತೆಯ ಅರಿವಿದ್ದರೂ ಧೈರ್ಯ ತಂದುಕೊAಡು ಒಂದು ವರ್ಷದ ಹಿಂದಷ್ಟೆ ಈ ಹೋರಾಟದಲ್ಲಿ ತನ್ನ ಪತಿ ಗತಿಸಿದ್ದರೂ ಲೆಕ್ಕಿಸದೆ ತುಳಜಾಬಾಯಿಯು ತನ್ನ ಮಗನನ್ನು ಆಶೀರ್ವದಿಸಿ ಮೋಹನಪುರದಲ್ಲಿನ ಹೋರಾಟಕ್ಕೆ ಶುಭಕೋರಿ ಕಳುಹಿಸಿಕೊಟ್ಟಿದ್ದಳು.

  2) ರಾಮಸಿಂಗನಿಗೂ ಸಿಪಾಯಿಗಳಿಗೂ ನಡೆದ ಸಂಭಾಷಣೆಯನ್ನು ನಿಮ್ಮ ಮಾತುಗಳಲ್ಲಿ ಸಂಗ್ರಹಿಸಿ.

  ಉತ್ತರ: ಸಿಪಾಯಿ – 1: ಇಲ್ಲಿ ಸಭೆ ಸೇರಿಸಕೂಡದೆಂದು ಡಂಗುರ ಸಾರಿದ್ದನ್ನು ಕೇಳಿಲ್ಲವೇ?

  ರಾಮಸಿಂಗ್: ಹಾಗೆ ಡಂಗುರ ಸಾರಲು, ಇದು ನಿಮ್ಮಪ್ಪನ ಮನೆಯಲ್ಲ, ಇದು ನಮ್ಮ ಊರು.

  ಸಿಪಾಯಿ – 2: ಆದರೆ ಇಲ್ಲಿ ರಾಜ್ಯವಾಳುವವರು ನೀವಲ್ಲ, ಬ್ರಿಟಿಶ್ ಸರಕಾರ.

  ರಾಮಸಿಂಗ್: ನೀವು ಬ್ರಿಟಿಶ್‌ರಲ್ಲವಲ್ಲ !

  ಸಿಪಾಯಿ-1: ನಾವು ಬ್ರಿಟಿಶ್ ಸರಕಾರದ ನೌಕರರು.

  ರಾಮಸಿಂಗ್: ನೌಕರರಲ್ಲ, ಗುಲಾಮರು.

  ಈ ರೀತಿಯಾಗಿ ರಾಮಸಿಂಗ್ ಮತ್ತು ಸಿಪಾಯಿಗಳ ನಡುವೆ ಸಂಭಾಷಣೆ ನಡೆಯುತ್ತದೆ.

  3) “ಅರಿಯದ ಬಾಲಕರನ್ನು ಅಡ್ಡದಾರಿಗೆ ಎಳೆದು ಅವರ ಬದುಕನ್ನು ಹಾಳು ಮಾಡದಿರಿ.” ಎಂದು ಕುಲಕರ್ಣಿಯು ಸೋಮಣ್ಣನಿಗೆ ಏಕೆ ಹೇಳಿದನು?

  ಉತ್ತರ: ರಾಮಸಿಂಗ್ ಕೈಯಲ್ಲಿ ರಾಷ್ಟçಧ್ವಜ ಹಿಡಿದು ಪ್ರಭಾತಪೇರಿಯನ್ನು ಮುನ್ನಡೆಸುತ್ತ ಮೋಹನಪುರದ ಎರಡು ರಸ್ತೆಗಳು ಕೂಡುವ ಸ್ಥಳದಲ್ಲಿ ತನ್ನ ಮಿತ್ರರೊಂದಿಗೆ ಬಂದಿದ್ದ, ಕುಲಕರ್ಣಿಯೊಂದಿಗೆ ಮಾತಿಗೆ ಮಾತು ಬೆಳೆಸಿ ಪ್ರತ್ಯುತ್ತರ ನೀಡುತ್ತಿದ್ದ, ಘೋಷಣೆಗಳನ್ನು ಮಾಡುತ್ತಿದ್ದ. ಸುಮ್ಮನಾಗಿ ಇಲ್ಲಿಂದ ಚದುರಿರಿ ಎಂದು ಹೇಳಿದರೂ ಕೇಳಲಿಲ್ಲ. ಈ ಎಲ್ಲ ಕಾರಣಗಳಿಂದಾಗಿ ಕುಲಕರ್ಣಿಯು ಸೋಮಣ್ಣನಿಗೆ ಅರಿಯದ ಬಾಲಕರನ್ನು ಅಡ್ಡದಾರಿಗೆ ಎಳೆದು ಅವರ ಬದುಕು ಹಾಳು ಮಾಡದಿರಿ ಎಂದು ಹೇಳಿದನು.

  4) ಮೋಹನಪುರದ ಸತ್ಯಾಗ್ರಹಿಗಳು ಮಾಡುತ್ತಿದ್ದ ಘೋಷಣೆಗಳಾವುವು?

  ಉತ್ತರ: ‘ಬೋಲೋ ಭಾರತ ಮಾತಾ ಕೀ ಜೈ’, ‘ವಂದೇ ಮಾತರಂ’, ‘ಮಹಾತ್ಮಾ ಗಾಂಧೀಜಿ ಕೀ ಜೈ’ ವಂದೆ ಮಾತರಂ ‘ಭಾರತ ಮಾತಾಕಿ ಜೈ’ ‘ರಾಮಸಿಂಗ್ ಕೀ ಜೈ’ ಈ ರೀತಿಯಾಗಿ ಮೋಹನಪುರದ ಸತ್ಯಾಗ್ರಹಿಗಳು ಘೋಷಣೆಗಳನ್ನು ಮಾಡುತ್ತಿದ್ದರು.

  5) ಕುಲಕರ್ಣಿಯು ರಾಮಸಿಂಗ್‌ನ ಮೇಲೆ ಗುಂಡು ಹಾರಿಸಿದ್ದೇಕೆ?

  ಉತ್ತರ: ರಾಮಸಿಂಗ್ ಕುಲಕರ್ಣಿಯೊಂದಿಗೆ ವಾದ ಮಾಡುತ್ತಾನೆ. ಕುಲಕರ್ಣಿಯ ಆಜ್ಞೆ ಪಾಲಿಸದೇ ಪ್ರತಿರೋಧ ವ್ಯಕ್ತಪಡಿಸುತ್ತಾನೆ. ಕುಲಕರ್ಣಿ ಮುಂದಡಿ ಇಟ್ಟರೆ ಗತಿ ಚೆನ್ನಾಗಿರುವುದಿಲ್ಲ ಎಂದಾಗ ರಾಮಸಿಂಗ್ ಎರಡು ಹೆಜ್ಜೆ ಮುಂದಡಿ ಇಟ್ಟು “ಭಾರತ ಮಾತಾಕೀ ಜೈ” ಎಂದು ಘೋಷಿಸಿದಾಗ ಕುಲಕರ್ಣಿ ಸಿಟ್ಟಿನಿಂದ ಆತನ ಮೇಲೆ ಗುಂಡು ಹಾರಿಸಿ ಕೊಲ್ಲುತ್ತಾನೆ.

  ಇ) ಸಂದರ್ಭ ಸಹಿತ ಕೆಳಗಿನ ಮಾತುಗಳ ಸ್ವಾರಸ್ಯವನ್ನು ವಿವರಿಸಿ.

  1) “ನಾವು ತಿನ್ನುವ ಮಾವಿನ ಹಣ್ಣಿನ ಗಿಡಗಳನ್ನು ನಾವೆ ಹೆಚ್ಚಿಲ್ಲ.”

  ಪಾಠದ ಹೆಸರು: ಧ್ವಜ ರಕ್ಷಣೆ

  ಲೇಖಕರ ಹೆಸರು: ಪ್ರೊ|| ಎಸ್. ಆರ್. ರೋಹಿಡೇಕರ್.

  ಸಂದರ್ಭ: ಸೋಮಣ್ಣ ಈ ಮಾತನ್ನು ಕುಲಕರ್ಣಿಗೆ ನುಡಿದಿದ್ದಾನೆ.

  ವಿವರಣೆ: ಭಾರತದ ಸ್ವಾತಂತ್ರö್ಯ ಚಳುವಳಿಯಲ್ಲಿ ತಮ್ಮ ಪಾತ್ರವೇನೆಂಬುದರ ಕುರಿತು ಸೋಮಣ್ಣ ತನ್ನ ವಿಚಾರ ವ್ಯಕ್ತ ಪಡಿಸುವಾಗ ಈ ಮೇಲಿನ ಮಾತನ್ನು ಕುಲಕರ್ಣಿಗೆ ನುಡಿಯುತ್ತಾನೆ.

  2) “ಸಾಕು ಮಾಡಿರಿ ನಿಮ್ಮ ಪುರಾಣ”

  ಪಾಠದ ಹೆಸರು: ಧ್ವಜ ರಕ್ಷಣೆ

  ಲೇಖಕರ ಹೆಸರು: ಪ್ರೊ|| ಎಸ್. ಆರ್. ರೋಹಿಡೇಕರ್.

  ಸಂದರ್ಭ: ಕುಲಕರ್ಣಿ ಈ ಮಾತನ್ನು ಸೋಮಣ್ಣನಿಗೆ ನುಡಿದಿದ್ದಾನೆ.

  ವಿವರಣೆ: ಸೋಮಣ್ಣ ಕುಲಕರ್ಣಿಗೆ – “ನೀವು ಫೌಜುದಾರರಾದಕ್ಷಣ ನಿಮಗೆ ಸುಖ ಸಿಗುವುದೆಂಬ ಭ್ರಾಂತಿ ಬಿಡಿ. ನಿಮ್ಮ

  ಸುತ್ತಮುತ್ತಲಿನ ಜನರ ಗೋಳಿಗೆ ನೀವೇ ಕಾರಣರು” ಎನ್ನುತ್ತಾನೆ. ಆಗ ಕುಲಕರ್ಣಿ ಸಿಟ್ಟಿನಿಂದ ಈ ಮೇಲಿನ ಮಾತನ್ನು

  ಸೋಮಣ್ಣನಿಗೆ ನುಡಿಯುತ್ತಾನೆ.

  3) “ಹೆಣ್ಣು ಮಗಳೇ ಆ ಧ್ವಜವನ್ನು ಮೊದಲು ಕೆಳಗಿಡು.” (ಎಪ್ರಿಲ್ 2016, ಎಪ್ರಿಲ್ 2017)

  ಪಾಠದ ಹೆಸರು: ಧ್ವಜ ರಕ್ಷಣೆ

  ಲೇಖಕರ ಹೆಸರು: ಪ್ರೊ|| ಎಸ್. ಆರ್. ರೋಹಿಡೇಕರ್.

  ಸಂದರ್ಭ: ಕುಲಕರ್ಣಿ ಈ ಮಾತನ್ನು ತುಳಜಾಬಾಯಿಗೆ ನುಡಿದಿದ್ದಾನೆ.

  ವಿವರಣೆ: ರಾಮಸಿಂಗ್‌ನಿಗೆ ಗುಂಡು ತಗುಲಿ ಸಾವನ್ನಪ್ಪಿದ ಸುದ್ದಿ ತಿಳಿದು ತುಳಜಾಬಾಯಿ ಗೋಳಿಡುತ್ತ ರಭಸದಿಂದ ಓಡೋಡಿ

  ಬರುವಳು. ರಾಮಸಿಂಗ್‌ನ ಕೈಯಲ್ಲಿ ಧ್ವಜ ಇಲ್ಲದಿರುವುದನ್ನು ಗಮನಿಸಿ ತಾನು ತಂದ ಧ್ವಜವನ್ನು ಕೊಡಲು ಪ್ರಯತ್ನಿಸುವಳು. ಆಗ ಕುಲಕರ್ಣಿ ಈ ಮೇಲಿನ ಮಾತನ್ನು ತುಳಜಾಬಾಯಿಗೆ ನುಡಿಯುವನು.

  4) “ಕವಡಿ ಕಿಮ್ಮತ್ತಿನ ಗುಲಾಮರಿಗೆ ಮುಂದಾಳುಗಳೇಕೆ?”

  ಪಾಠದ ಹೆಸರು: ಧ್ವಜ ರಕ್ಷಣೆ

  ಲೇಖಕರ ಹೆಸರು: ಪ್ರೊ|| ಎಸ್. ಆರ್. ರೋಹಿಡೇಕರ್.

  ಸಂದರ್ಭ: ರಾಮಸಿಂಗ್ ಈ ಮಾತನ್ನು ಸಿಪಾಯಿಗೆ ನುಡಿದಿದ್ದಾನೆ.

  ವಿವರಣೆ: ಫೌಜುದಾರ ಕುಲಕರ್ಣಿಯ ಬಗೆಗೆ ತನ್ನ ಅಭಿಪ್ರಾಯ ತಿಳಿಸುತ್ತ ರಾಮಸಿಂಗ್ ಈ ಮಾತನ್ನು ಸಿಪಾಯಿಗೆ ನುಡಿಯುತ್ತಾನೆ. ಕವಡಿ ಕಿಮ್ಮತ್ತಿನ ಗುಲಾಮರಿಗಿಂತ ನನ್ನಂತಹ ದೇಶಾಭಿಮಾನ ಹುಡುಗನೊಬ್ಬ ಸಾಕು ಎಂದು ರಾಮಸಿಂಗ್ ಸಿಪಾಯಿಗೆ ಹೇಳುತ್ತಾನೆ.

  5) “ಒಂದು ಪಿಳ್ಳೆ ಜೀವಂತವಿರುವವರೆಗೆ, ನಿಮ್ಮ ಆಜ್ಞೆ ನಡೆಯಲಾರದು ಇಲ್ಲಿ.”

  ಪಾಠದ ಹೆಸರು: ಧ್ವಜ ರಕ್ಷಣೆ

  ಲೇಖಕರ ಹೆಸರು: ಪ್ರೊ|| ಎಸ್. ಆರ್. ರೋಹಿಡೇಕರ್.

  ಸಂದರ್ಭ: ರಾಮಸಿಂಗ್ ಈ ಮಾತನ್ನು ಫೌಜದಾರ ಕುಲಕರ್ಣಿಗೆ ನುಡಿದಿದ್ದಾನೆ.

  ವಿವರಣೆ: ರಾಮಸಿಂಗ್ ಹಾಗೂ ಆತನ ಮಿತ್ರರು ಚಲೇಜಾವ್ ಚಳವಳಿಯನ್ನು ಯಶಸ್ವಿಗೊಳಿಸಲು ಕೈಯಲ್ಲಿ ರಾಷ್ಟçಧ್ವಜ ಹಿಡಿದು ಪ್ರಭಾತಪೇರಿಯೊಂದಿಗೆ ಸಭೆ ನಡೆಸಲು ನಿರ್ಧರಿಸುತ್ತಾರೆ. ಸತ್ಯಾಗ್ರಹಿಗಳೇ ಇಲ್ಲಿಂದ ಚದುರಿರಿ ಎಂದು ಫೌಜುದಾರ ಕುಲಕರ್ಣಿ ಆದೇಶಿಸುತ್ತಾರೆ. ಇದಕ್ಕೆ ಪ್ರತಿಯಾಗಿ ರಾಮಸಿಂಗ್ ಈ ಮೇಲಿನ ಮಾತನ್ನು ಕುಲಕರ್ಣಿಗೆ ನುಡಿಯುತ್ತಾನೆ.

  6) “ದೇಹದಲ್ಲಿ ಪ್ರಾಣವಿರುವವರೆಗೆ ಇದನ್ನು ಕೆಳಗಿಡಲಾರೆ.”

  ಪಾಠದ ಹೆಸರು: ಧ್ವಜ ರಕ್ಷಣೆ

  ಲೇಖಕರ ಹೆಸರು: ಪ್ರೊ|| ಎಸ್. ಆರ್. ರೋಹಿಡೇಕರ್.

  ಸಂದರ್ಭ: ರಾಮಸಿಂಗ್ ಈ ಮಾತನ್ನು ಫೌಜುದಾರ ಕುಲಕರ್ಣಿಗೆ ನುಡಿದಿದ್ದಾನೆ.

  ವಿವರಣೆ: ಫೌಜುದಾರ ಕುಲಕರ್ಣಿ ರಾಮಸಿಂಗ್‌ನಿಗೆ ಹೆದರಿಸಲು ಪಿಸ್ತೂಲು ತೋರಿಸುವನು. ಅದಕ್ಕೆ ಪ್ರತಿರೋಧವಾಗಿ ರಾಮಸಿಂಗ್ ರಾಷ್ಟçಧ್ವಜ ಎತ್ತಿ ತೋರಿಸಿ ಈ ಧ್ವಜದ ಶಕ್ತಿಯ ಮುಂದೆ ನೀವು ನಿಲ್ಲಬಲ್ಲಿರಾ? ಎಂದು ಕೇಳುವನು. ಕುಲಕರ್ಣಿ ಸುಮ್ಮನೆ ಕೆಳಗಿಡು ಅದನ್ನು ಎಂದಾಗ ರಾಮಸಿಂಗ್ ಕುಲಕರ್ಣಿಗೆ ಈ ಮೇಲಿನ ಮಾತನ್ನು ನುಡಿಯುವನು.

  ಈ) ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರ ಬರೆಯಿರಿ.

  1) ರಾಮಸಿಂಗ್‌ನು ತನ್ನ ಛಲವನ್ನು ಹೇಗೆ ಸಾಧಿಸಿದನು? ವಿವರಿಸಿ.

  ಉತ್ತರ: ರಾಮಸಿಂಗ್ ಮೋಹನಪುರದ ತರುಣ ಉತ್ಸಾಹಿಯಾಗಿದ್ದ. ಸ್ವಾತಂತ್ರö್ಯ ಹೋರಾಟದಲ್ಲಿ ಧುಮುಕಲು ಸರ್ವಸಿದ್ಧತೆ ಮಾಡಿಕೊಂಡಿದ್ದನು. ಆತನಲ್ಲಿ ದೇಶಭಕ್ತಿಯ ಜೊತೆಗೆ ಛಲವೂ ಇತ್ತು. ಮೋಹನಪುರದಲ್ಲಿ ಚಲೇಜಾವ್ ಚಳುವಳಿ ನಡೆಯುತ್ತಿತ್ತು. ರಾಮಸಿಂಗ್‌ನಿಗೆ ಆ ದಿನದ ಬೆಳಗಿನ ಪ್ರಭಾತಫೇರಿ ಮುನ್ನಡೆಸುವ ಅವಕಾಶ ಅವನಿಗೆ ಬಂದಿತ್ತು. ಇಬ್ಬರು ಸಿಪಾಯಿಗಳೊಂದಿಗೆ ಫೌಜುದಾರ ಕುಲಕರ್ಣಿ ಆಗಮಿಸಿ ಸತ್ಯಾಗ್ರಹಿಗಳನ್ನು ಹೋರಾಟ ನಿಲ್ಲಿಸುವಂತೆ ಇಲ್ಲಿಂದ ಚದುರಿ ಹೋಗುವಂತೆ ಆದೇಶಿಸುತ್ತಾನೆ. ರಾಮಸಿಂಗ್‌ನಿಗೆ ಧ್ವಜವನ್ನು ಕೆಳಗಿಡುವಂತೆ ಸೂಚಿಸುತ್ತಾನೆ. ರಾಮಸಿಂಗ್ ಕುಲಕರ್ಣಿಯೊಂದಿಗೆ ವಾದವಿವಾದ ಬೆಳೆಸುತ್ತಾನೆ. ಕುಲಕರ್ಣಿ ಅಧಿಕಾರದ ದರ್ಪದಿಂದ ರಾಮಸಿಂಗ್‌ನ ಮೇಲೆ ಗುಂಡು ಹಾರಿಸುತ್ತಾನೆ. ಈ ರೀತಿಯಾಗಿ ರಾಮಸಿಂಗ್ ಸಾವಿಗೆ ಶರಣಾದರೂ ತನ್ನ ಛಲವನ್ನು ಸಾಧಿಸಿಯೇ ಬಿಡುತ್ತಾನೆ.

  2) ಕುಲಕರ್ಣಿ ಅವರಿಗೂ ರಾಮಸಿಂಗ್‌ನಿಗೂ ನಡೆದ ಸಂಭಾಷಣೆಯನ್ನು ಸಂಗ್ರಹಿಸಿ ಬರೆಯಿರಿ.

  ಉತ್ತರ: ಕುಲಕರ್ಣಿ ರಾಮಸಿಂಗ್‌ನನ್ನು ಕುರಿತು – “ಇಲ್ಲಿಂದ ಹೊರಟು ಹೋಗಿರಿ ನನ್ನ ಸಿಟ್ಟು ನೆತ್ತಿಗೇರುತ್ತಿದೆ! ನನ್ನ ಕೈಯಲ್ಲಿ ಏನಿದೆ ನೋಡುವೆಯಾ ! ಎನ್ನುತ್ತ ಪಿಸ್ತೂಲು ತೋರಿಸಿ ಹೆದರಿಸುವನು.” ರಾಮಸಿಂಗ್ ಕುಲಕರ್ಣಿಗೆ ನಿಮ್ಮ ಸಿಟ್ಟು ಇಳಿಸುವ ಮಾಂತ್ರಿಕರು ನಮ್ಮಲ್ಲಿದ್ದಾರೆ ಎನ್ನುತ್ತ ರಾಷ್ಟçಧ್ವಜವನ್ನು ಪಿಸ್ತೂಲಿಗೆ ಪ್ರತಿಯಾಗಿ ತೋರಿಸುವನು. ಕುಲಕರ್ಣಿ ಪಿಸ್ತೂಲಿನ ಶಕ್ತಿಯ ಮುಂದೆ ನೀನು ನಿಲ್ಲಬಲ್ಲೆಯಾ? ಎಂದಾಗ ರಾಮಸಿಂಗ್ ಈ ಧ್ವಜದ ಶಕ್ತಿಯ ಮುಂದೆ ನೀವು ನಿಲ್ಲಬಲ್ಲಿರಾ? ಎಂದು ಕೇಳುವನು. ಕುಲಕರ್ಣಿ ಧ್ವಜವನ್ನು ಕೆಳಗಿಡುವಂತೆ ಸೂಚಿಸಿದಾಗ ರಾಮಸಿಂಗ್ ‘ಈ ದೇಹದಲ್ಲಿ ಪ್ರಾಣವಿರುವವರೆಗೂ ಇದನ್ನು ಕೆಳಗಿಡಲಾರೆ’ ಎಂದು ವಾದಿಸುವನು. ಅಲ್ಲದೇ ‘ಮೋಹನಪುರದಲ್ಲಿ ಒಂದು ಪಿಳ್ಳೆ ಜೀವಂತವಿರುವವರೆಗೂ ನಿಮ್ಮ ಆಜ್ಞೆ ನಡೆಯಲಾರದು’ ಎಂದು ರಾಮಸಿಂಗ್ ಅಂಜದೇ ಅಳುಕದೇ ಕುಲಕರ್ಣಿಗೆ ಹೇಳುವನು.

  3) ಸೋಮಣ್ಣ ಕುಲಕರ್ಣಿಯ ಕೃತ್ಯವನ್ನು ಹೇಗೆ ಖಂಡಿಸಿದನು? ವಿವರಿಸಿ.

  ಉತ್ತರ: ಫೌಜುದಾರ ಕುಲಕರ್ಣಿಯವರೇ ಇಂತಹ ಬಾಲಕನ ಮೇಲೆ ಗುಂಡು ಹಾರಿಸಿರುವಿರಾ? ಈ ಹೀನ ಕಾರ್ಯಕ್ಕೆ ನಿಮ್ಮ

  ಕೈಗಳಾದರೂ ಹೇಗೆ ಮೇಲೆತ್ತಿದವು? ಇವನನ್ನು ಹಿಡಿದು ಜೈಲಿಗೆ ಹಾಕಬಹುದಿತ್ತು. ಅದನ್ನು ಬಿಟ್ಟು, ಗುಂಡಿಟ್ಟು ಅವನನ್ನು

  ಕೊಂದದ್ದು, ನಿಮ್ಮ ಪರಾಕ್ರಮವೇ? ನೀವು ಫೌಜುದಾರ ಆದ ಕ್ಷಣ ನಿಮಗೆ ಸುಖ ಸಿಗುತ್ತದೆ ಎಂಬ ಭ್ರಾಂತಿ ಬಿಡಿ, ನಿಮ್ಮ

  ಸುತ್ತಮುತ್ತಲಿನ ಜನರ ಗೋಳಿಗೆ ನೀವೇ ಕಾರಣರು. ಗೇಣು ಹೊಟ್ಟೆಗಾಗಿ ದೇಶದ ಕಂದಮ್ಮರನ್ನು ಕೊಂದು ಅವರ ರಕ್ತದ

  ಮಡುವಿನಲ್ಲಿ ಮೆರೆಯುವುದು ನಿಮ್ಮ ಕರ್ತವ್ಯನಿಷ್ಠೆಯೇ? ಧಿಕ್ಕಾರವಿರಲಿ ನಿಮ್ಮ ಬದುಕಿಗೆ, ಶತಧಿಕ್ಕಾರ ! ಈ ರೀತಿಯಾಗಿ ಸೋಮಣ್ಣ ಕುಲಕರ್ಣಿಯ ಕೃತ್ಯವನ್ನು ಖಂಡಿಸಿದನು.

  4) ರಾಮಸಿಂಗ್ ಕುಟುಂಬದವರ ದೇಶಪ್ರೇಮ ಮತ್ತು ತ್ಯಾಗವನ್ನು ಕುರಿತು ಬರೆಯಿರಿ.

  ಉತ್ತರ: ರಾಮಸಿಂಗ್ ಮೋಹನಪುರದ ಉತ್ಸಾಹಿ ತರುಣ, ಸ್ವಾತಂತ್ರö್ಯ ಹೋರಾಟದಲ್ಲಿ ಧುಮುಕಲು ಸರ್ವಸಿದ್ಧತೆ

  ಮಾಡಿಕೊಂಡಿದ್ದನು. ಒಂದು ವರ್ಷದ ಹಿಂದಷ್ಟೆ ಇದೇ ಹೋರಾಟದಲ್ಲಿ ಆತನ ತಂದೆ ಸಾವನ್ನಪ್ಪಿದರು. ರಾಮಸಿಂಗ್‌ನಿಗೆ ಆ ದಿನದ ಚಳುವಳಿಯನ್ನು ಮುನ್ನಡೆಸುವ ಅವಕಾಶ ಸಿಕ್ಕಿತು. ಈ ಹೋರಾಟದಲ್ಲಿ ಮಗನನ್ನು ಬಲಿಕೊಡುವ ಸಾಧ್ಯತೆಯ ಅರಿವಿದ್ದರೂ ತಾಯಿ ತುಳಜಾಬಾಯಿ ಮಗನಿಗೆ ಆಶೀರ್ವದಿಸಿ ಮೋಹನಪುರದಲ್ಲಿನ ಹೋರಾಟಕ್ಕೆ ಶುಭ ಕೋರಿ ಕಳುಹಿಸುತ್ತಾಳೆ. ರಾಮಸಿಂಗ್ ಕುಲಕರ್ಣಿಯ ಗುಂಡಿಗೆ ಬಲಿಯಾದಾಗ ತುಳಜಾಬಾಯಿ ಇನ್ನೊಂದು ಧ್ವಜ ತಂದು ರಾಮಸಿಂಗ್‌ನಿಗೆ ಕೊಡಲು ಪ್ರಯತ್ನಿಸುತ್ತಾಳೆ. ಆಗ ಕುಲಕರ್ಣಿ ತುಳಜಾಬಾಯಿಗೆ ಆ ಧ್ವಜವನ್ನು ಕೆಳಗಿಡುವಂತೆ ಸೂಚಿಸುತ್ತಾನೆ. ಅದಕ್ಕೆ ತುಳಾಜಾಬಾಯಿ – “ಹೊಟ್ಟೆಯಲ್ಲಿ ಹುಟ್ಟಿದ ಮಗನನ್ನೇ ಬಲಿಕೊಟ್ಟಿರುವೆ. ನನ್ನ ಪ್ರಾಣವನ್ನೇ ತ್ಯಜಿಸಲು ನಾನು ಸಿದ್ಧಳಿದ್ದೇನೆ. ಆದರೆ ಈ ಧ್ವಜವನ್ನು ಕೆಳಗಿಡಲಾರೆ ಎಂದು ಹೇಳಿ ಚಳುವಳಿಯನ್ನು ಮುಂದುವರೆಸುತ್ತಾಳೆ.

  ಊ) ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.

  1. ಚಲೇಜಾವ್ ಚಳುವಳಿಯು ನಡೆದ ವರ್ಷ, 9 ಅಗಸ್ಟ್ 1942.
  2. ಮೋಹನಪುರದ ಚಳುವಳಿಯನ್ನು ಮುನ್ನಡೆಸಿದ ಉತ್ಸಾಹಿ ತರುಣನ ಹೆಸರು ರಾಮಸಿಂಗ್.
  3. ರಾಮಸಿಂಗ್‌ನ ತಾಯಿಯ ಹೆಸರು ತುಳಜಾಬಾಯಿ.
  4. ಇಬ್ಬರು ಪೊಲೀಸ್‌ನವರ ಜತೆ ಸೇರಿದ ಅಧಿಕಾರಿಯ ಹೆಸರು ಮಿ|| ಕುಲಕರ್ಣಿ.
  5. ಸತ್ಯಾಗ್ರಹಿಗಳನ್ನು ಚದುರಿಸಲು ಕುಲಕರ್ಣಿಯು ಮಾಡಿದ ಕೆಲಸ ಗಾಳಿಯಲ್ಲಿ ಗುಂಡು ಹಾರಿಸಿದ.

  ಭಾಷಾಭ್ಯಾಸ

  ಅ) ಕೆಳಗೆ ಕೊಟ್ಟರುವ ಪದಗಳನ್ನು ಬಿಡಿಸಿ ಬರೆದು, ಸಂಧಿಗಳನ್ನು ಹೆಸರಿಸಿ.

  ಜನರು + ಒಪ್ಪದೆ = ಜನರೊಪ್ಪದೆ (ಲೋಪಸಂಧಿ)

  ದೇಶ + ಅಭಿಮಾನ = ದೇಶಾಭಿಮಾನ (ಸ. ದೀ. ಸಂ.) ಮುಚ್ಚು + ಎಂದಾಗ = ಮುಚ್ಚೆಂದಾಗ (ಲೋಪಸಂಧಿ)

  ಆ) ‘ಧ್ವಜ ರಕ್ಷಣೆ’ ಪಾಠದಲ್ಲಿ ಬಂದಿರುವ ಅನ್ಯದೇಶಿಯ ಪದಗಳನ್ನು ಪಟ್ಟಿಮಾಡಿ.

  ಪ್ರಭಾತಫೇರಿ

  ಫೌಜುದಾರ ಮಿ||

  ಜೈಲು ಪೊಲೀಸ್

  ಗುಲಾಮ ಬ್ರಿಟಿಶ್ ಪಿಸ್ತೂಲು ವಂದೇ ಮಾತರಂ ಸೈತಾನ

  ಡಿಪಾರ್ಟಮೆಂಟ್ ನಿಶಾನೆ

  ಬೋಲೋ ಭಾರತ ಮಾತಾಕೀ ಜೈ

  ಪದ್ಯ – 8. ಬಸವಣ್ಣನವರ ವಚನಗಳು.

  ಕೃತಿಕಾರರ ಪರಿಚಯ

  ಹೆಸರು -:ಬಸವಣ್ಣ;-

  ಕಾಲ:- 12ನೇ ಶತಮಾನ

  ಜನ್ಮ ಸ್ಥಳ:- ವಿಜಯಪುರಜಿಲ್ಲೆಯ ಬಾಗೇವಾಡಿ.

  ಕೃತಿ:- ವಚನಗಳು

  ಅಂಕಿತನಾಮ:- ಕೂಡಲಸಂಗಮದೇವ

  ಅ) ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರವನ್ನು ಬರೆಯಿರಿ.

  1) ಬಸವಣ್ಣನವರು ಹೇಳಿರುವಂತೆ ದೇವರನ್ನು ಒಲಿಸುವ ಪರಿಯಾವುದು?

  -ಬಸವಣ್ಣನವರು ತಮ್ಮ ವಚನಗಳಲ್ಲಿ ಮಾನವರಾದ ನಾವು ಕಳ್ಳತನ ಕೊಲೆ ಮಾಡಬಾರದು, ಸುಳ್ಳು ಹೇಳಬಾರದು, ಬೇರೆಯವರ ಮೇಲೆ ಕೋಪ ಮಾಡಿಕೊಳ್ಳಬಾರದು, ಇತರರನ್ನು ಕಂಡು ಅಸಹ್ಯಪಡಬಾರದು, ಈ ಎಲ್ಲ ಅಂಶಗಳನ್ನು ಪಾಲಿಸುತ್ತ ಜೀವನ ನಡೆಸಬೇಕು. ಈ ರೀತಿಯಾಗಿ ಜೀವನ ನಡೆಸಿದರೆ ಮಾತ್ರ ಅಂತರAಗ, ಬಹಿರಂಗ ಶುದ್ಧಿಯಾಗಿ ಕೂಡಲಸಂಗಮನಾದ ದೇವರನ್ನು ಒಲಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಬಸವಣ್ಣನವರು ಹೇಳಿದ್ದಾರೆ.

  2) ದೇವಲೋಕ, ಮರ್ತ್ಯಲೋಕವೆಂಬುದು ಬೇರೆ ಎಲ್ಲೂ ಇಲ್ಲವೆಂಬುದನ್ನು ಬಸವಣ್ಣನವರು ಹೇಗೆ ನಿರೂಪಿಸಿದ್ದಾರೆ?

  – ಬಸವಣ್ಣನವರು ದೇವಲೋಕ, ಮರ್ತ್ಯಲೋಕವೆಂಬುದು ಬೇರೆ ಇಲ್ಲವೆಂದು ಹೇಳುತ್ತಾರೆ. ಸತ್ಯವನ್ನು ನುಡಿಯುವುದೇ

  ದೇವಲೋಕ, ಮಿಥ್ಯವ ಅಂದರೆ ಸುಳ್ಳು ನುಡಿಯುವುದೇ ಮರ್ತ್ಯಲೋಕ. ಆಚಾರ ಎಂದರೆ ಒಳ್ಳೆಯ ನಡವಳಿಕೆಯನ್ನು

  ಪಾಲಿಸುವುದೇ ಸ್ವರ್ಗ, ಅನಾಚಾರ ಎಂದರೆ ಕೆಟ್ಟ ನಡವಳಿಕೆಯನ್ನು ಹೊಂದಿ ಜೀವನವನ್ನು ನಡೆಸುವುದೇ ನರಕ. ಇದಕ್ಕೆ

  ಕೂಡಲಸಂಗಮದೇವನೇ ಸಾಕ್ಷಿ ಎಂದು ಬಸವಣ್ಣನವರು ಹೇಳುತ್ತಾರೆ.

  3) ಅಂತಃಶುದ್ಧಿಯನ್ನು ಕಾಪಾಡಿಕೊಳ್ಳುವುದು ಹೇಗೆ ಎಂದು ಬಸವಣ್ಣನವರು ತಿಳಿಸಿದ್ದಾರೆ?

  – ನಾವು ನಮ್ಮ ಜೀವನದಲ್ಲಿ ಒಳ್ಳೆಯ ನಡತೆಯಿಂದ ಅಂತರAಗ ಶುದ್ಧಿಯನ್ನು ಕಾಪಾಡಿಕೊಳ್ಳಬಹುದು ಎಂದು ಬಸವಣ್ಣನವರು

  ಹೇಳುತ್ತಾರೆ. ನಮ್ಮ ಜೀವನ ಉನ್ನತ ಮೌಲ್ಯಗಳಿಂದ ಕೂಡಿರಬೇಕು. ಕಳ್ಳತನ, ಕೊಲೆ, ಸುಳ್ಳು ಹೇಳುವುದು, ಇತರರನ್ನು

  ನಿಂದಿಸುವುದು ಸರಿಯಲ್ಲ. ನಮ್ಮ ಜೀವನದಲ್ಲಿ ಉತ್ತಮವಾದ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಅಂತರAಗ ಶುದ್ಧಿಯನ್ನು ಕಾಪಾಡಿಕೊಳ್ಳಬಹುದೆಂದು ಬಸವಣ್ಣನವರು ತಿಳಿಸುತ್ತಾರೆ.

  4) ಸ್ವರ್ಗ-ನರಕಗಳ ಬಗೆಗೆ ಬಸವಣ್ಣನವರು ಕೊಟ್ಟಂತಹ ಹೊಸ ಸೂತ್ರಯಾವುದು?

  – ಬಸವಣ್ಣನವರು ದೇವಲೋಕ, ಮರ್ತ್ಯಲೋಕವೆಂಬುದು ಬೇರೆ ಎಲ್ಲೂ ಇಲ್ಲ. ಈ ಲೋಕದಲ್ಲಿಯೇ ಈ ಎರಡೂ ಲೋಕಗಳಿವೆ

  ಎಂದು ಹೇಳುತ್ತಾರೆ. ಸತ್ಯ ಮಾರ್ಗ ಅನುಸರಿಸಿದರೆ ಈ ಲೋಕ ಸ್ವರ್ಗವೆನಿಸುವುದು. ಮಿಥ್ಯ ಮಾರ್ಗ ಅನುಸರಿಸಿದರೆ ಈ ಲೋಕ ಮರ್ತ್ಯಲೋಕವೆನಿಸುವುದು. ಆಚಾರ ಎಂದರೆ ಒಳ್ಳೆಯ ನಡತೆಯಿಂದ ಜೀವನ ನಡೆಸಿದರೆ ಈ ಲೋಕವೇ ಸ್ವರ್ಗಲೋಕವೆನಿಸುವುದು. ಅನಾಚಾರ ಎಂದರೆ ದುರಾಚಾರ, ಹೀನಕೃತ್ಯ, ಅನೈತಿಕತೆಯಿಂದ ಜೀವನ ನಡೆಸಿದರೆ ಈ ಲೋಕವೇ ನರಕಲೋಕವಾಗುವುದು ಎಂದು ಬಸವಣ್ಣನವರು ಸ್ವರ್ಗ, ನರಕಗಳ ಬಗೆಗೆ ಹೊಸ ಸೂತ್ರವನ್ನೇ ನೀಡಿದ್ದಾರೆ.

  ಆ) ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರ ಬರೆಯಿರಿ.

  1) ಆತ್ಮಶುದ್ಧಿಗೆ ಬಸವಣ್ಣನವರು ತಿಳಿಸಿರುವ ಸರಳ ಮಾರ್ಗಗಳಾವುವು? ವಿವರಿಸಿರಿ.

  – ಬಸವಣ್ಣನವರು ನಾವು ನಮ್ಮ ಅಂತರAಗ ಎಂದರೆ ಮನಸ್ಸಿನ ಒಳಗೆ ಹಾಗೂ ಬಹಿರಂಗ ಎಂದರೆ ಮನಸ್ಸಿನ ಹೊರಗಡೆ ಬಾಹ್ಯ

  ನಡವಳಿಕೆಗಳನ್ನು ಶುದ್ಧವಾಗಿರಿಸಿಕೊಂಡರೆ ಆತ್ಮಶುದ್ಧಿ ಹೊಂದಲು ಸಾಧ್ಯ ಎಂದು ಹೇಳುತ್ತಾರೆ. ಅಂತರAಗ ಹಾಗೂ ಬಹಿರಂಗ ಶುದ್ಧಿಗಾಗಿ ಕೆಲವು ಸರಳ ಮಾರ್ಗಗಳನ್ನು ತಿಳಿಸುತ್ತಾರೆ. ನಾವು ಕಳ್ಳತನ, ಕೊಲೆ ಮಾಡಬಾರದು. ಯಾರ ಮೇಲೂ

  ಕೋಪಿಸಿಕೊಳ್ಳಬಾರದು. ಇತರರನ್ನು ಕಂಡು ಅಸಹ್ಯಪಡಬಾರದು. ತನ್ನನ್ನು ತಾನು ಸ್ತುತಿಸಿಕೊಳ್ಳಬಾರದು. ಯಾರನ್ನೂ ಕೂಡಾ ನಿಂದಿಸಬಾರದು. ಈ ಎಲ್ಲ ಅಂಶಗಳನ್ನು ಮನಸ್ಸಿನಿಂದ ಪಾಲಿಸಿದರೆ ಅಂತರAಗ ಹಾಗೂ ಬಹಿರಂಗ ಈ ಎರಡು ವಲಯಗಳು ಶುದ್ಧವಾಗಿ ಆತ್ಮಶುದ್ಧಿಯುಂಟಾಗುವುದೆAದು ಬಸವಣ್ಣನವರು ಹೇಳಿದ್ದಾರೆ.

  2) ಅಂತರಂಗ ಮತ್ತು ಬಹಿರಂಗವನ್ನು ಶುದ್ಧಿಯಾಗಿಡುವುದು ಹೇಗೆ ಎಂದು ಬಸವಣ್ಣನವರು ಹೇಳಿದ್ದಾರೆ? ವಿವರಿಸಿ. (2018)

  – ನಾವು ನಮ್ಮ ಜೀವಮಾನದಲ್ಲಿ ಉತ್ತಮ ನಡವಳಿಕೆ ಹಾಗೂ ಉನ್ನತ ಮೌಲ್ಯಗಳಿಂದ ಅಂತರAಗ ಹಾಗೂ ಬಹಿರಂಗವನ್ನು

  ಶುದ್ಧವಾಗಿಟ್ಟುಕೊಳ್ಳಬಹುದೆಂದು ಬಸವಣ್ಣನವರು ಹೇಳಿದ್ದಾರೆ. ಕಳ್ಳತನ ಮಾಡಬಾರದು, ಕೊಲೆಮಾಡಬಾರದು, ಸುಳ್ಳು

  ಮಾತನಾಡಬಾರದು, ಕೋಪಿಸಿಕೊಳ್ಳಬಾರದು, ಇತರರ ಬಗೆಗೆ ಅಸಹ್ಯ ಪಡಬಾರದು, ತನ್ನನ್ನು ಬಣ್ಣಿಸಬಾರದು, ಇತರರನ್ನು

  ನಿಂದಿಸಬಾರದು ಈ ಎಲ್ಲ ಅಂಶಗಳನ್ನು ನಾವು ಪಾಲಿಸಿದರೆ ಅಂತರAಗ, ಬಹಿರಂಗ ಶುದ್ಧವಾಗಿಟ್ಟುಕೊಳ್ಳಲು ಸಾಧ್ಯವಾಗುತ್ತದೆ ಎಂದು ಬಸವಣ್ಣನವರು ಹೇಳಿದ್ದಾರೆ.

  3) ನುಡಿ-ನಡೆಗಳು ಎಲ್ಲಕ್ಕಿಂತ ಮುಖ್ಯವಾದುದೆಂದು ಬಸವಣ್ಣನವರು ಹೇಗೆ ನಿರೂಪಿಸಿದ್ದಾರೆ?

  – ಬಸವಣ್ಣನವರು ನಾವು ನಡೆ-ನುಡಿಗಳ ಮೂಲಕ ಇಹಲೋಕವನ್ನು ದೇವಲೋಕವನ್ನಾಗಿ ಪರಿವರ್ತಿಸಿಕೊಳ್ಳಬಹುದೆಂದು

  ಹೇಳಿದ್ದಾರೆ. ಸತ್ಯವನ್ನು ನುಡಿಯುವುದೇ ದೇವಲೋಕ ಎಂದರೆ ನೀತಿಯುತವಾದ ಜೀವನನ್ನು ನಡೆಸಿದರೆ ಸಮಾಜದಲ್ಲಿ ಒಳ್ಳೆಯ ಹೆಸರು, ಗೌರವ ಸಿಗುತ್ತದೆ. ನಾವಿರುವ ಸ್ಥಳವೇ ನಮಗೆ ಸ್ವರ್ಗದಂತೆ ಅನಿಸುತ್ತದೆ. ಮಿಥ್ಯವನ್ನು ನುಡಿದರೆ ಇದೆ ಮರ್ತ್ಯಲೋಕ ವಾಗುತ್ತದೆ. ಸುಳ್ಳು, ಮೋಸ, ವಂಚನೆಯಿAದ ಜೀವನ ನಡೆಸಿದರೆ ಜನರ ತಿರಸ್ಕಾರಕ್ಕೆ ನಾವು ಒಳಗಾಗಬೇಕಾಗುತ್ತದೆ. ಸಮಾಜದಿಂದ ಅವಮಾನಿತರಾಗಿ ನರಕಯಾತನೆಯ ಜೀವನ ನಡೆಸಬೇಕಾಗುತ್ತದೆ. ಆದ್ದರಿಂದ ನಮ್ಮ ಜೀವನದಲ್ಲಿ ನುಡಿ ನಡೆಗಳನ್ನು ಶುದ್ಧವಾಗಿಟ್ಟುಕೊಂಡು ಇಹಲೋಕವನ್ನು ದೇವಲೋಕದ ಸ್ವರ್ಗವನ್ನಾಗಿ ಪರಿವರ್ತಿಸಿಕೊಳ್ಳಲು ನಮ್ಮ ನಡೆ-ನುಡಿಗಳು ತುಂಬಾ ಮಹತ್ವದ್ದಾದವು ಎಂದು ಬಸವಣ್ಣನವರು ಹೇಳಿದ್ದಾರೆ.

  4) ಬಸವಣ್ಣನವರ ವಚನಗಳಲ್ಲಿ ಕಂಡು ಬರುವ ಮಾನವೀಯ ಮೌಲ್ಯಗಳಾವುವು? ವಿವರಿಸಿ. (2018)

  – ಬಸವಣ್ಣನವರು ತಮ್ಮ ವಚನಗಳ ಮೂಲಕ ನಾವು ನಮ್ಮ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು

  ಎಲ್ಲರೂ ಮೆಚ್ಚುವ ರೀತಿಯಲ್ಲಿ ಜೀವನ ನಡೆಸಬೇಕು ಎಂದು ಆಶಿಸುತ್ತಾರೆ. ನಾವು ನಮ್ಮ ಮಾತಿನಿಂದಾಗಲಿ ಅಥವಾ

  ಕಾರ್ಯಗಳಿಂದಾಗಲಿ ಯಾರಿಗೂ ತೊಂದರೆಯನ್ನುAಟು ಮಾಡಬಾರದು. ಜೀವನದಲ್ಲಿ ನಾವು ಸತ್ಯ, ಪ್ರಾಮಾಣಿಕತೆ, ಅಹಿಂಸೆ,

  ಶಾಂತಿ, ಆಚಾರ ಮುಂತಾದ ಮೌಲ್ಯಯುತ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ಬಸವಣ್ಣನವರು ಹೇಳುತ್ತಾರೆ. ಕಳ್ಳತನ,

  ಕೊಲೆ ಮಾಡದೇ ಅಹಿಂಸೆಯ ಮೌಲ್ಯವನ್ನು ಎತ್ತಿಹಿಡಿದಿದ್ದಾರೆ. ಕೋಪ, ಅಸಹ್ಯ, ನಿಂದಿಸುವುದನ್ನು ಮಾಡಬಾರದೆಂದು ಹೇಳುತ್ತ, ಶಾಂತಿಯ ಮೂಲ-ಮಂತ್ರವನ್ನು ತಿಳಿಸಿದ್ದಾರೆ. ಹೀಗೆ ನಾವು ನಮ್ಮ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಬಾಳಬೇಕೆಂದು ಬಸವಣ್ಣನವರು ಹೇಳಿದ್ದಾರೆ.

  5) ಸ್ವಸ್ಥಸಮಾಜ ನಿರ್ಮಾಣಕ್ಕೆ ‘ಬಸವಣ್ಣನವರ ವಚನಗಳು’ ಪದ್ಯದಲ್ಲಿರುವ ಸಂದೇಶಗಳಾವುವು? ವಿವರಿಸಿರಿ.

  – ಸ್ವಸ್ಥಸಮಾಜ ನಿರ್ಮಾಣಕ್ಕಾಗಿ ಬಸವಣ್ಣನವರು ಕೆಲವು ಮಹತ್ವದ ಸಂದೇಶಗಳನ್ನು ಹೇಳಿರುತ್ತಾರೆ. ಅವು ಈ ರೀತಿಯಾಗಿವೆ. ನಾವು ಕಳ್ಳತನ, ಕೊಲೆ ಮುಂತಾದ ಹೀನ ಕೃತ್ಯಗಳನ್ನು ಮಾಡಬಾರದು, ಸುಳ್ಳು ಹೇಳಬಾರದು, ಬೇರೆಯವರ ಮೇಲೆ ಕೋಪಿಸಿಕೊಳ್ಳಬಾರದು, ಅಸಹ್ಯಪಡಬಾರದು, ಸ್ವಪ್ರಶಂಸೆ ಮಾಡಿಕೊಳ್ಳಬಾರದು, ಬೇರೆಯವರನ್ನು ನಿಂದಿಸಬಾರದು, ಆಚಾರವಂತರಾಗಿ ನಾವು ಜೀವನ ನಡೆಸಬೇಕು. ಅನಾಚಾರದ ಕೆಲಸಗಳಲ್ಲಿ ನಾವು ಭಾಗಿಯಾಬಾರದು. ಹೀಗೆ ಬಸವಣ್ಣನವರ ಮೌಲ್ಯಯುತ ಸಂದೇಶಗಳನ್ನು ನಾವು ಪಾಲಿಸುವ ಮೂಲಕ ಮರ್ತ್ಯಲೋಕವನ್ನೇ ದೇವಲೋಕವನ್ನಾಗಿ ಪರಿವರ್ತಿಸಬಹುದು. ಶಾಂತಿ, ನೆಮ್ಮದಿಯ ಬದುಕನ್ನು ಬದುಕಬಹುದೆಂದು ಬಸವಣ್ಣನವರು ಹೇಳುತ್ತಾರೆ.

  ಇ) ಕೆಳಗಿನ ಸಾಲುಗಳ ಸಂದರ್ಭವನ್ನು ಸ್ವಾರಸ್ಯ ಸಹಿತ ವಿವರಿಸಿ.

  1) “ಇದೇ ಅಂತರಂಗ ಶುದ್ಧಿ”

  – ಪದ್ಯದ ಹೆಸರು: ಬಸವಣ್ಣನವರ ವಚನಗಳು.

  ಕವಿಗಳ ಹೆಸರು: ಬಸವಣ್ಣ.

  ಸಂದರ್ಭ: ಬಸವಣ್ಣನವರು ನಮ್ಮನ್ನು ಉದ್ದೇಶಿಸಿ ಈ ಮಾತನ್ನು ನುಡಿದಿದ್ದಾರೆ.

  ವಿವರಣೆ: ನಾವು ಕಳ್ಳತನ, ಕೊಲೆ ಮಾಡಬಾರದು, ಸುಳ್ಳು ಮಾತಾಡಬಾರದು, ಕೋಪಿಸಿಕೊಳ್ಳಬಾರದು, ಇತರರನ್ನು ಕಂಡು

  ಅಸಹ್ಯಪಡಬಾರದು. ತನ್ನನ್ನು ತಾನು ಹೊಗಳಿಕೊಳ್ಳಬಾರದು. ಯಾರನ್ನು ಕೂಡ ನಿಂದಿಸಬಾರದು, ಈ ಎಲ್ಲ ಅಂಶಗಳನ್ನು ನಾವು ಮನಸ್ಸಿನಿಂದ ಪಾಲಿಸಿದರೆ ಅದರಿಂದ ಅಂತರAಗ ಶುದ್ಧಿ ಹಾಗೂ ಬಹಿರಂಗ ಶುದ್ಧಿಯುಂಟಾಗಿ ಕೂಡಲಸಂಗಮದೇವರನ್ನು ಒಲಿಸಿಕೊಳ್ಳಲು ದಾರಿಯಾಗುವುದೆಂದು ಬಸವಣ್ಣನವರು ಹೇಳಿದ್ದಾರೆ.

  2) “ತನ್ನ ಬಣ್ಣಿಸಬೇಡ.”

  – ಪದ್ಯದ ಹೆಸರು: ಬಸವಣ್ಣನವರ ವಚನಗಳು.

  ಕವಿಗಳ ಹೆಸರು: ಬಸವಣ್ಣ.

  ಸಂದರ್ಭ: ಬಸವಣ್ಣನವರು ಈ ಮಾತನ್ನು ನಮ್ಮನ್ನು ಉದ್ದೇಶಿಸಿ ನುಡಿದಿದ್ದಾರೆ.

  ವಿವರಣೆ: ಮಾನವರಾದ ನಾವು ಒಳ್ಳೆಯ ಮೌಲ್ಯಗಳನ್ನು ಅನುಸರಿಸಬೇಕು. ಕಳ್ಳತನ, ಕೊಲ್ಲುವುದು, ಸುಳ್ಳು ಹೇಳುವುದು,

  ಸಿಟ್ಟಾಗುವುದು, ಅಸಹ್ಯ ಪಡುವುದು, ಈ ಎಲ್ಲ ಕೆಟ್ಟ ಅಂಶಗಳನ್ನು ಬಿಡಬೇಕು. ಆಡಂಭರದ ಬದುಕು ಬದುಕುತ್ತ ತನ್ನನ್ನು ತಾನು

  ಸ್ತುತಿಸಿಕೊಳ್ಳುವುದನ್ನು ಮಾಡದೇ ಅಂತರAಗ ಹಾಗೂ ಬಹಿರಂಗ ಶುದ್ಧಿ ಮಾಡಿಕೊಳ್ಳಲು ಆಚಾರದ ಬದುಕು ಬದುಕಬೇಕೆಂದು ಬಸವಣ್ಣನವರು ಹೇಳಿದ್ದಾರೆ.

  3) “ಆಚಾರವೇ ಸ್ವರ್ಗ, ಅನಾಚಾರವೇ ನರಕ.”

  – ಪದ್ಯದ ಹೆಸರು: ಬಸವಣ್ಣನವರ ವಚನಗಳು.

  ಕವಿಗಳ ಹೆಸರು: ಬಸವಣ್ಣ.

  ಸಂದರ್ಭ: ಬಸವಣ್ಣನವರು ಸ್ವರ್ಗ, ನರಕಗಳ ಪರಿಕಲ್ಪನೆ ಹೇಳುತ್ತÀ ಈ ಮಾತನ್ನು ನಮಗೆ ನುಡಿದಿದ್ದಾರೆ.

  ವಿವರಣೆ: ಮಾನವರಾದ ನಾವು ಒಳ್ಳೆಯ ನಡತೆಯಿಂದ ನಮ್ಮ ಬದುಕನ್ನು ಸ್ವರ್ಗವನ್ನಾಗಿ ಮಾಡಿಕೊಳ್ಳಲು ಪ್ರಯತ್ನಿಸಬೇಕು.

  ಅನಾಚಾರದಿಂದ ದುರಾಚಾರದ ಬದುಕು ಬದುಕಿ ಜೀವನವನ್ನು ಹಾಳುಮಾಡಿಕೊಂಡು ನರಕಯಾತನೆ ಅನುಭವಿಸಬಾರದೆಂದು ಬಸವಣ್ಣ ನಮಗೆ ವಚನಗಳ ಮೂಲಕ ಸಂದೇಶ ನೀಡಿದ್ದಾರೆ.

  ಈ) ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.

  1) ಬಸವಣ್ಣನವರ ವಚನದಲ್ಲಿ ಹೇಳಿರುವಂತೆ, ದೇವಲೋಕ ಸತ್ಯವನ್ನು ನುಡಿಯುವುದು.

  2) ಬಸವಣ್ಣನವರ ಪ್ರಕಾರ ಮರ್ತ್ಯಲೋಕವೆಂಬುದು ಮಿಥ್ಯವನ್ನು ನುಡಿಯುವುದು.

  3) ಬಸವಣ್ಣನವರ ವಚನಗಳ ಅಂಕಿತ ಕೂಡಲಸಂಗಮದೇವಾ.

  4) ಆಚಾರ ಸ್ವರ್ಗವಾದರೆ, ಅನಾಚಾರ ನರಕ.

  5) ಅನ್ಯರಿಗೆ ಅಸಹ್ಯ ಪಡಬಾರದು, ತನ್ನನ್ನು ಬಣ್ಣಿಸಬಾರದು.

  *ಭಾಷಾಭ್ಯಾಸ*

  ಅ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದ ಬರೆಯಿರಿ.

  ಬೇಡು x ಬೇಕು ಅಂತರAಗ x ಬಹಿರಂಗ ಆಚಾರ x ಅನಾಚಾರ ಸತ್ಯ x ಅಸತ್ಯ, ಮಿಥ್ಯ ಸಹ್ಯ x ಅಸಹ್ಯ

  ಆ) ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯಿರಿ.

  * ಬಣ್ಣಿಸು: ಬಾಲಕೃಷ್ಣನ ತುಂಟಾಟ ಎಷ್ಟು ಬಣ್ಣಿಸಿದರೂ ಸಾಲದು.

  * ಹಳಿ: ಮನೆಯಲ್ಲಿ ನಾವು ಯಾರನ್ನೂ ಹಳಿಯಬಾರದು.

  * ಮುನಿ: ಕಾರಣವಿಲ್ಲದೆ ನಾವು ಯಾರ ಮೇಲೆ ಮುನಿಯಬಾರದು.

  * ಹುಸಿ: ನ್ಯಾಯಾಲಯದಲ್ಲಿ ಹುಸಿ ಮಾತನಾಡಬಾರದೆಂದು ಪ್ರಮಾಣ ಮಾಡಿಕೊಳ್ಳುತ್ತಾರೆ.

  ಇ) ಕೆಳಗಿನ ತತ್ಸಮಗಳಿಗೆ ತದ್ಭವಗಳನ್ನು ಬರೆಯಿರಿ.

  * ವರ್ಣಿಸು – ಬಣ್ಣಿಸು. * ಲೋಕ – ಲೋಗ * ಸ್ವರ್ಗ – ಸಗ್ಗ

  ಈ) ಈ ಕೆಳಗಿನ ಪದ್ಯ ಭಾಗಗಳನ್ನು ಕಂಠಪಾಠ ಮಾಡಿರಿ.

  ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ

  ಮುನಿಯ ಬೇಡ, ಅನ್ಯರಿಗೆ ಅಸಹ್ಯ ಪಡಬೇಡ

  ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ

  ಇದೇ ಅಂತರAಗ ಶುದ್ಧಿ, ಇದೇ ಬಹಿರಂಗ ಶುದ್ಧಿ

  ಇದೇ ಕೂಡಲ ಸಂಗಮದೇವರನೊಲಿಸುವ ಪರಿ.

  ದೇವಲೋಕ, ಮರ್ತ್ಯಲೋಕವೆಂಬುದು ಬೇರಿಲ್ಲ, ಕಾಣಿರೋ !

  ಸತ್ಯವ ನುಡಿವುದೇ ದೇವ ಲೋಕ, ಮಿಥ್ಯವ ನುಡಿವುದೇ ಮರ್ತ್ಯಲೋಕ !

  ಆಚಾರವೇ ಸ್ವರ್ಗ, ಅನಾಚಾರವೇ ನರಕ

  ಕೊಡಲಸಂಗಮದೇವಾ ನೀವೇ ಪ್ರಮಾಣಿಸು

  ಪಾಠ – 9. ಕರ್ನಾಟಕದ ವೀರ ವನಿತೆಯರು.

  -: ಕವಿ ಪರಿಚಯ:-

  ಹೆಸರು : *ಡಾ|| ವಿಜಯಲಕ್ಷ್ಮೀ ಬಾಳೇಕುಂದ್ರಿ* (2018)

  ಜನ್ಮ ವರ್ಷ: ಅಗಸ್ಟ್ 6, 1950

  ಜನ್ಮ ಸ್ಥಳ: ಬೆಳಗಾವಿ

  ಕೃತಿಗಳು: 1) ಸಮಾಜ ವಿಕಾಸಕ್ಕೆ ಶರಣ ಸಂಸ್ಕೃತಿ, 2) ಜೀವನ್ಮುಕ್ತಿ, 3) ಚಿಣ್ಣರಚಿತ್ತಾರ, 4) ಚಿಣ್ಣರ ಚಿಲಿಪಿಲಿ, 5)ಜೀವನಧಾರೆ.

  ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ.

  1) ಪೋರ್ಚುಗೀಸರು ಕೇಳಿದ ಬೆಲೆಗೆ ವಸ್ತುಗಳನ್ನು ಕೊಡಲು ಅಬ್ಬಕ್ಕದೇವಿಯು ಏಕೆ ಒಪ್ಪಲಿಲ್ಲ?

  – ರೈತರು ಬೆಳೆದ ಬೆಳೆಗಳನ್ನು ಹಾಗೂ ನೇಕಾರರು ನೇಯ್ದ ಬಟ್ಟೆಗಳನ್ನು ಪೋರ್ಚುಗೀಸರು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಲು ಯೋಚಿಸಿದ್ದರು. ಆದ್ದರಿಂದ ಅಬ್ಬಕ್ಕದೇವಿ ಇದಕ್ಕೆ ಒಪ್ಪಲಿಲ್ಲ.

  2) ಮಲ್ಲಮ್ಮಾಜಿಯ ಪರಾಕ್ರಮದಲ್ಲಿ ಈಶಪ್ರಭುವಿಗೆ ಅಪಾರ ನಂಬಿಕೆ ಇತ್ತು ಏಕೆ?

  – ಒಂದು ಸಲ ವಿಹಾರಕ್ಕೆ ಹೋದಾಗ ಈಶಪ್ರಭು ನಿದ್ರಿಸಿದಾಗ ಬಂದ ಎರಡು ಹುಲಿಗಳನ್ನು ಸಾಯಿಸಿದ ಮಲ್ಲಮ್ಮಾಜಿಯ

  ಪರಾಕ್ರಮದಲ್ಲಿ ಈಶಪ್ರಭುಗಳಿಗೆ ಅಪಾರ ನಂಬಿಕೆ ಇತ್ತು.

  3) ವಿಜಯೋತ್ಸವದ ಸಂಭ್ರಮದಲ್ಲಿದ್ದ ಮಲ್ಲಮ್ಮಾಜಿಗೆ ಆಘಾತವಾಯಿತು ಏಕೆ?

  – ವಿಜಯೋತ್ಸವದ ಸಂಭ್ರಮದಲ್ಲಿದ್ದ ಮಲ್ಲಮ್ಮಾ ಗಂಡನಿಗೆ ತಿಳಿಸಲು ಹೋದಾಗ ಅವಳಿಗೆ ಆಘಾತವಾಯಿತು. ಕಾರಣ ಶಿವಾಜಿಯ ಸೈನಿಕರನ್ನು ಸೋಲಿಸಲು ಅತ್ತ ಹೋದಾಗ ಇತ್ತ 10,000 ಮರಾಠ ಸೈನಿಕರು ಕೋಟೆಗೆ ಮುತ್ತಿಗೆ ಹಾಕಿ ಈಶಪ್ರಭುಗಳನ್ನು ತೀವ್ರವಾಗಿ ಗಾಯಗೊಳಿಸಿದ್ದರು.

  4) ಪೋರ್ಚುಗೀಸರು ವ್ಯಾಪಾರಕ್ಕಾಗಿ ಭಾರತಕ್ಕೆ ಏಕೆ ಬಂದರು?

  – ರೈತರು ಬೆಳೆದ ಬೆಳೆಯ ಹಾಗೂ ನೇಕಾರರು ನೇಯ್ದ ಬಟ್ಟೆಯ ವ್ಯಾಪಾರಕ್ಕಾಗಿ ಪೋರ್ಚುಗೀಸರು ಭಾರತಕ್ಕೆ ಬಂದರು.

  5) ದೇಸಾಯಿ ಈಶಪ್ರಭು ಕಿಡಿಕಿಡಿಯಾದುದೇಕೆ?

  – ಶಿವಾಜಿಯ ಸೈನಿಕರು ಹಳ್ಳಿಗರ ಜಾನುವಾರುಗಳನ್ನು ಅಪಹರಿಸಿಕೊಂಡು ಹೋಗಿ ಅವರಿಗೆ ಕಿರುಕುಳ ಕೊಡುವುದನ್ನು ಕೇಳಿ

  ದೇಸಾಯಿ ಈಶಪ್ರಭುಗಳು ಕಿಡಿಕಿಡಿಯಾದರು.

  ಆ) ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ.

  1) ಜಿನೋವದ ಪ್ರವಾಸಿ ಪಿತ್ರೋ ಅಬ್ಬಕ್ಕನನ್ನು ಕುರಿತು ಏನೆಂದು ಬರೆದಿದ್ದಾನೆ?

  – ವೀರರಾಣಿ ಅಬ್ಬಕ್ಕದೇವಿ ತಮ್ಮ ರೈತರು ಬೆಳೆದ ಬೆಳೆಗಳನ್ನು, ನೇಕಾರರು ನೇಯ್ದ ಬಟ್ಟೆಯನ್ನು ವ್ಯಾಪಾರಕ್ಕೆ ಬಂದ

  ಪೋರ್ಚುಗೀಸರು ಕೇಳಿದ ಬೆಲೆಗೆ ಕೊಡಲು ಒಪ್ಪಲಿಲ್ಲ. ಅನ್ಯಾಯವಾಗಿ ಪೋರ್ಚುಗೀಸರು ಪಡೆಯತ್ತಿದ್ದ ವಾರ್ಷಿಕ ಕಪ್ಪನ್ನು

  ವಿರೋಧಿಸಿದಳು. ಅವರ ಆರ್ಥಿಕ ಶೋಷಣೆಗೆ ತಲೆ ಬಾಗದ ರಾಣಿ ಅಬ್ಬಕ್ಕದೇವಿ ವಿವೇಚನಾಶೀಲಳೂ, ನ್ಯಾಯಪರಳೂ, ಕುಶಲಳೂ ಆಗಿದ್ದಳೆಂದು ಪಿತ್ರೋ ಬರೆದಿದ್ದಾನೆ.

  2) ಕಿತ್ತೂರು ಚೆನ್ನಮ್ಮಾಳು ಸೆರೆಯಾದುದೇಕೆ? (2018)

  – ಬ್ರಿಟಿಷರು ಕಿತ್ತೂರಿನ ಕೆಲವರನ್ನು ತನ್ನ ಕೈಗೊಂಬೆಯನ್ನಾಗಿ ಮಾಡಿಕೊಂಡರು. ಆ ಹಿತಶತ್ರುಗಳು ಕಿತ್ತೂರಿನ ಕೋಟೆಯ

  ಮೇಲಿರುವ ತೋಪಿನಲ್ಲಿ ಸೆಗಣಿ ಸೇರಿಸಿ ತೋಪುಗಳು ಬ್ರಿಟಿಶ್ ಸೈನ್ಯದ ವಿರುದ್ಧ ಹಾರದಂತೆ ಮಾಡಿದರು. ಮುಂದೆ ಬ್ರಿಟಿಶ್ ಸೈನಿಕರು ಕೋಟೆಗೆ ಮುತ್ತಿಗೆ ಹಾಕಿ ಅನ್ಯಾಯವಾಗಿ ಮೋಸದಿಂದ ಚೆನ್ನಮ್ಮಾಜಿಯನ್ನು ಸೆರೆಹಿಡಿದರು.

  3) ಕೆಳದಿಯ ಚೆನ್ನಮ್ಮಾ ತನ್ನ ರಾಜಧಾನಿಯನ್ನು ಭುವನಗಿರಿಗೆ ಏಕೆ ಸ್ಥಳಾಂತರಿಸಿದಳು?

  – ಕೆಳದಿಯ ರಾಣಿ ಚೆನ್ನಮ್ಮಾ ಮೊಘಲರಿಗೆ ಅಂಜಿ ತಲೆಮರೆಸಿಕೊಂಡು ಓಡಿ ಬಂದ ಶಿವಾಜಿಯ ಮಗ ರಾಜಾರಾಮನಿಗೆ ಆಶ್ರಯ ನೀಡಿದ್ದಳು. ಈ ವಿಷಯ ತಿಳಿದ ಔರಂಗಜೇಬ ತನ್ನ ಮಗ ಅಜಮತಾರಾನ ಜೊತೆಗೆ ಭಾರಿ ಸೈನ್ಯವನ್ನು ಕೆಳದಿಯ ಕಡೆಗೆ ಕಳುಹಿಸಿದನು. ಆದರೆ ಚಾಣಾಕ್ಷಳಾದ ಚೆನ್ನಮ್ಮಾ ಮೊಘಲರ ಆಕ್ರಮಣದಿಂದ ಪಾರಾಗಲು ತನ್ನ ರಾಜಧಾನಿಯನ್ನು ಭುವನಗಿರಿಗೆ ಸ್ಥಳಾಂತರಿಸಿ ಶತ್ರು ಸೈನಿಕರಿಗೆ ಅನ್ನ, ನೀರು ಸಿಗದಂತೆ ಮಾಡಿದಳು.

  4) ಪೋರ್ಚುಗೀಸರು ಭಾರತೀಯರನ್ನು ಯಾವರೀತಿಯಲ್ಲಿ ಆರ್ಥಿಕವಾಗಿ ಶೋಷಣೆ ಮಾಡುತ್ತಿದ್ದರು?

  – ಪೋರ್ಚುಗೀಸರು ಭಾರತಕ್ಕೆ ವ್ಯಾಪಾರಕ್ಕೆಂದು ಬಂದಿದ್ದರು. ರೈತರು ಬೆಳೆದ ಬೆಳೆಗಳನ್ನು ಹಾಗೂ ನೇಕಾರರ ನೇಯ್ದ ಬಟ್ಟೆಗಳನ್ನು ಅವರು ಅತಿಕಡಿಮೆ ಬೆಲೆಗೆ ಕೊಳ್ಳಲು ಬಯಸಿದರು. ಇಲ್ಲಿನ ಸ್ಥಳೀಯ ಆಸ್ಥಾನದ ರಾಜರುಗಳಿಂದ ಅವರು ವಾರ್ಷಿಕ ಕಪ್ಪನ್ನು ಪಡೆಯುತ್ತಿದ್ದರು. ಹೀಗೆ ಪೋರ್ಚುಗೀಸರು ಭಾರತೀಯರ ಆರ್ಥಿಕವಾಗಿ ಶೋಷಣೆ ಮಾಡುತ್ತಿದ್ದರು.

  ಇ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.

  1) “ಒಬ್ಬಂಟಿಗರಾದ ನಿಮ್ಮನ್ನು ನೋಡುವರ‍್ಯಾರು?”

  – ಪಾಠದ ಹೆಸರು: ಕರ್ನಾಟಕದ ವೀರ ವನಿತೆಯರು.

  ಲೇಖಕಿಯರ ಹೆಸರು: ಡಾ|| ವಿಜಯಲಕ್ಷಿö್ಮÃ ಬಾಳೇಕುಂದ್ರಿ.

  ಸಂದರ್ಭ: ರಾಣಿ ಅಬ್ಬಕ್ಕದೇವಿ ಈ ಮಾತನ್ನು ಪಿತ್ರೋನಿಗೆ ನುಡಿದಿದ್ದಾಳೆ.

  ವಿವರಣೆ: ಇಟಲಿ ದೇಶದ ಪ್ರವಾಸಿ ಪಿತ್ರೋ ಭಾರತಕ್ಕೆ ಬಂದು ರಾಣಿ ಅಬ್ಬಕ್ಕ ದೇವಿಯನ್ನು ಭೇಟಿಯಾಗುತ್ತಾನೆ. ವಿಶ್ವ ವಿಖ್ಯಾತರಾದ ನಿಮ್ಮನ್ನು ಅಷ್ಟು ದೂರದಿಂದ ನೋಡಲು ಬಂದದ್ದು ಸಾರ್ಥಕವಾಯಿತು ಎಂದಾಗ ರಾಣಿ ಅಬ್ಬಕ್ಕ ಈ ಮೇಲಿನ ಮಾತನ್ನು ಪಿತ್ರೋನಿಗೆ ನುಡಿದು ಸ್ತ್ರಿ ಸಹಜವಾದ ವಾತ್ಸಲ್ಯದಿಂದ ವಿಚಾರಿಸಿಕೊಂಡಿದ್ದಳು.

  2) “ದೇವಿ ನನ್ನ ಅಪರಾಧವನ್ನು ಕ್ಷಮಿಸು.”

  – ಪಾಠದ ಹೆಸರು: ಕರ್ನಾಟಕದ ವೀರ ವನಿತೆಯರು.

  ಲೇಖಕಿಯರ ಹೆಸರು: ಡಾ|| ವಿಜಯಲಕ್ಷಿö್ಮÃ ಬಾಳೇಕುಂದ್ರಿ.

  ಸಂದರ್ಭ: ಶಿವಾಜಿ ಮಹಾರಾಜರು ಈ ಮಾತನ್ನು ಬೆಳವಡಿಯ ಮಲ್ಲಮ್ಮಾಜಿಗೆ ನುಡಿದಿದ್ದಾರೆ.

  ವಿವರಣೆ: ಶಿವಾಜಿ ಮಹಾರಾಜರು ತಮ್ಮ ಎಂಟು-ಹತ್ತು ಸರದಾರರೊಂದಿಗೆ ಜಗದಾಂಬೆಯ ದರ್ಶನ ಪಡೆದು ಮರಳುತ್ತಿದ್ದಾಗ

  ಬೆಳವಡಿಯ ಮಲ್ಲಮ್ಮ ಅವರೆಲ್ಲರ ಮೇಲೆ ಮಿಂಚಿನAತೆ ಎರಗಿ ಖಡ್ಗದ ಹೊಡೆತದಿಂದ ನೆಲಕ್ಕುರುಳಿಸಿದಳು. ಹಠಾತ್ತನೆ ದಾಳಿ

  ಮಾಡಿದ ರಾಣಿಯನ್ನು ಕಂಡು ಶಿವಾಜಿ ಮಹಾರಾಜರು ತಲ್ಲಣಗೊಂಡು ಈ ಮೇಲಿನ ಮಾತನ್ನು ನುಡಿದು ಕ್ಷಮೆಯಾಚಿಸಿದ್ದರು.

  3) “ಇತಿಹಾಸದಲ್ಲಿಯೇ ಅಪೂರ್ವ ಮತ್ತು ಅಮೋಘ ಸಾಧನೆ.”

  – ಪಾಠದ ಹೆಸರು: ಕರ್ನಾಟಕದ ವೀರ ವನಿತೆಯರು.

  ಲೇಖಕಿಯರ ಹೆಸರು: ಡಾ|| ವಿಜಯಲಕ್ಷಿö್ಮÃ ಬಾಳೇಕುಂದ್ರಿ.

  ಸಂದರ್ಭ: ಲೇಖಕಿ ಈ ಮಾತನ್ನು ಕೆಳದಿಯ ರಾಣಿ ಚೆನ್ನಮ್ಮಾಳ ಕುರಿತು ನುಡಿದಿದ್ದಾರೆ.

  ವಿವರಣೆ: ಕರ್ನಾಟಕದ ಮಲೆನಾಡಿನ ಪುಟ್ಟರಾಜ್ಯದ, ಚಿಕ್ಕ ವಯಸ್ಸಿನಲ್ಲಿ ಗಂಡನ ಭೀಕರಕೊಲೆಯನ್ನು ಕಂಡ ಕೆಳದಿಯ ರಾಣಿ

  ಚೆನ್ನಮ್ಮಾ, ಬಲಾಡ್ಯ ಮೊಗಲ್ ಚಕ್ರವರ್ತಿಯಾದ ಔರಂಗಜೇಬನ್ನು ಸೋಲಿಸಿದ್ದು ಇತಿಹಾಸದಲ್ಲಿಯೇ ಅಪೂರ್ವ ಮತ್ತು ಅಮೋಘ ಸಾಧನೆ! ಎಂದು ಲೇಖಕಿಯವರು ಹೇಳಿದ್ದಾರೆ.

  4) “ತಾಯಿ ಎಂದು ಕರೆದ ಕನ್ನಡದ ಕಂದ ಯಾರು?”

  – ಪಾಠದ ಹೆಸರು: ಕರ್ನಾಟಕದ ವೀರ ವನಿತೆಯರು.

  ಲೇಖಕಿಯರ ಹೆಸರು: ಡಾ|| ವಿಜಯಲಕ್ಷಿö್ಮÃಬಾಳೇಕುಂದ್ರಿ.

  ಸಂದರ್ಭ: ಕಿತ್ತೂರಿನ ರಾಣಿ ಚೆನ್ನಮ್ಮಾ ಈ ಮಾತನ್ನು ಸಂಗೊಳ್ಳಿ ರಾಯಣ್ಣನ ಕುರಿತು ನುಡಿದಿದ್ದಾಳೆ.

  ವಿವರಣೆ: ಬ್ರಿಟಿಷರು ಮೋಸಮಾಡಿ ರಾಣಿ ಚೆನ್ನಮ್ಮಾಳನ್ನು ಬಂಧಿಸಿ ಸೆರೆಮನೆಯಲ್ಲಿಟ್ಟರು. ಸಂಗೊಳ್ಳಿ ರಾಯಣ್ಣ ಚೆನ್ನಮ್ಮಾಳನ್ನು ಭೇಟಿಯಾಗಲು ಬಂದಾಗ, ‘ತಾಯಿ’ ಎಂದು ಕರೆದಿದ್ದ. ಆಗ ರಾಣಿ ಚೆನ್ನಮ್ಮಾ ಈ ಮೇಲಿನ ಮಾತನ್ನು ರಾಯಣ್ಣನ ಬಗೆಗೆ ನುಡಿದು ಅಭಿಮಾನ ವ್ಯಕ್ತಪಡಿಸಿದ್ದಳು.

  5) “ಇದು ನಮ್ಮ ಕೊನೆಯ ಭೇಟಿ.”

  – ಪಾಠದ ಹೆಸರು: ಕರ್ನಾಟಕದ ವೀರ ವನಿತೆಯರು.

  ಲೇಖಕಿಯರ ಹೆಸರು: ಡಾ|| ವಿಜಯಲಕ್ಷಿö್ಮÃಬಾಳೇಕುಂದ್ರಿ.

  ಸಂದರ್ಭ: ಬೆಳವಡಿಯ ಮಲ್ಲಮ್ಮಾಜೀ ತನ್ನ ಪ್ರಜೆಗಳನ್ನು ಉದ್ದೇಶಿಸಿ ಈ ಮಾತನ್ನು ನುಡಿದಿದ್ದಳು.

  ವಿವರಣೆ: ಮಲ್ಲಮ್ಮಾಜೀ ಗಂಡನಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಶಕ್ತಿಯ ಜೊತೆಗೆ ಯುಕ್ತಿಯಿಂದ ದಿಟ್ಟಹೆಜ್ಜೆ ಇಟ್ಟಳು. ತನ್ನ

  ಪ್ರಜೆಗಳಿಗೆ ಈ ಮೇಲಿನ ಮಾತು ನುಡಿದು, ತನ್ನ ಸ್ತಿçà ಸೈನ್ಯದೊಂದಿಗೆ ಗುಪ್ತಮಾರ್ಗವಾಗಿ ಶಿವಾಜಿ ಮಹಾರಾಜರ ಹಾಗೂ ಅವರ ಸೈನಿಕರ ಜೊತೆಗೆ ಯುದ್ಧ ಮಾಡಲು ಹೊರಟಳು.

  ಈ) ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರ ಬರೆಯಿರಿ.

  1) ಶಿವಾಜಿಯು ಮಲ್ಲಮ್ಮಾಜಿಯೊಂದಿಗೆ ರಾಜಿ ಮಾಡಿಕೊಂಡ ಸನ್ನಿವೇಶವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.

  – ಮಲ್ಲಮ್ಮಾಜೀ ಗಂಡನಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಶಕ್ತಿಯ ಜೊತೆಗೆ ಯುಕ್ತಿಯಿಂದ ದಿಟ್ಟ ಹೆಜ್ಜೆ ಇಟ್ಟಳು. ಸರದಾರ

  ಶಾಂತಯ್ಯನನ್ನು ಕರೆದು ಶಿವಾಜಿ ಮಹಾರಾಜರು ಸಿದ್ದ ಸಮುದ್ರದಲ್ಲಿರುವ ದ್ಯಾಮವ್ವ ಎಂಬ ಜಾಗೃತ ಜಗದಾಂಬೆಯ ದರ್ಶನಕ್ಕೆ ಬರುವಂತೆ ಮಾಡಿದಳು. ತನ್ನ ಸ್ತಿçà ಸೈನ್ಯದೊಂದಿಗೆ ಮುನ್ನುಗ್ಗಿದ ಮಲ್ಲಮ್ಮಾ ಎಂಟು-ಹತ್ತು ಸರದಾರರೊಂದಿಗೆ ಜಗದಾಂಬೆಯ ದರ್ಶನ ಪಡೆದು ಹಿಂದಿರುಗುವಾಗ ಶಿವಾಜಿಯ ಸರದಾರರ ಮೇಲೆ ಮಿಂಚಿನAತೆ ಎರಗಿ ಖಡ್ಗದ ಹೊಡೆತದಿಂದ ನೆಲಕ್ಕುರುಳಿಸಿದಳು. ಶಿವಾಜಿ ಮಹಾರಾಜರು ತಲ್ಲಣಗೊಂಡು ಕುದುರೆಯ ಮೇಲಿಂದ ಕೆಳಗಿಳಿದು “ದೇವಿ ನನ್ನ ಅಪರಾಧವನ್ನು ಕ್ಷಮಿಸು ನಾನು ನಿನ್ನ ಮಗನೆಂದು ತಿಳಿ” ಎಂದಾಗ ರಾಣಿ ನನ್ನ ಪತಿಯನ್ನು ಕೊಂದು ಈಗ ಕ್ಷಮೆಯಾಚಿಸುತ್ತಿದ್ದೀರಾ? ಎಂದಳು. ಆಗ ಶಿವಾಜಿ ಅದರಲ್ಲಿ ನನ್ನ ತಪ್ಪೇನಿಲ್ಲ ಅದು ನನ್ನದುಷ್ಟ ಸರದಾರನ ಕೆಲಸವಿರಬಹುದು ಎಂದು ಪ್ರತಿಪಾದಿಸಿದರು. ಮುಂದೆ ಇಬ್ಬರೂ ರಾಜಿ ಮಾಡಿಕೊಂಡರು. ಈ ರಾಜಿ ಮಾಡಿಕೊಂಡ ಪ್ರಸಂಗವನ್ನು ಶಿಲ್ಪಿಯೊಬ್ಬ ಯಾದವಾಡದಲ್ಲಿ ಶಿಲ್ಪಕಲೆಯಲ್ಲಿ ನಿರ್ಮಿಸಿದ್ದಾನೆ.

  2) ಅಬ್ಬಕ್ಕದೇವಿಯು ಸಪ್ತಸಮುದ್ರದಾಚೆ ವಿಖ್ಯಾತಳಾದುದು ಹೇಗೆ? ವಿವರಿಸಿರಿ.

  – ಪೋರ್ಚುಗೀಸರು ಭಾರೀ ನೌಕೆಯಲ್ಲಿ ಬಲಾಢ್ಯ ಪಡೆಯೊಂದಿಗೆ ಆಕ್ರಮಣಕ್ಕೆ ಸಜ್ಜಾಗಿ ಉಲ್ಲಾಳದ ಕರಾವಳಿಯಲ್ಲಿ ಲಂಗರು

  ಹಾಕಿದ್ದರು. ಆಗ ರಾಣಿ ಅಬ್ಬಕ್ಕದೇವಿ ಮೊಗೇರು ಎಂಬ ಮೀನುಗಾರ ಸಾಹಸಿ ಸೈನಿಕರು ಕರಾಳ ರಾತ್ರಿಯ ವೇಳೆ ಸದ್ದುಗದ್ದಲವಿಲ್ಲದೆ ನೂರಾರು ಸಣ್ಣ ದೋಣಿಗಳಲ್ಲಿ ಹೋಗಿ ಸಾವಿರಾರು ತೆಂಗಿನಗರಿಯ ಉರಿಯುವ ದೀವಟಿಗೆಗಳನ್ನು ಕ್ಷಣಾರ್ಧದಲ್ಲಿ ನೌಕೆಯ ಮೇಲೆಸೆದಿದ್ದರು. ಧಗಧಗ ಉರಿಯುವ ನೌಕೆಯಲ್ಲಿ ದಿಕ್ಕೆಟ್ಟ ಪೋರ್ಚುಗೀಸ ಸೈನಿಕರು ಸಾವಿನಿಂದ ಪಾರಾಗಲು ಸಮುದ್ರಕ್ಕೆ ಹಾರಿದಾಗ ಅಬ್ಬಕ್ಕದೇವಿಯ ಸೈನಿಕರ ಖಡ್ಗ, ಈಟಿಗಳಿಗೆ ಬಲಿಯಾದರು. ಈ ರೀತಿಯಾಗಿ ಪೋರ್ಚುಗೀಸರ ಹಡಗನ್ನು ಮುಳುಗಿಸಿ, ಮೀರಾಂಡಾ ಮತ್ತು ಡಿ. ಮೆಲ್ಲೊ ಎಂಬ ಸೇನಾಪತಿಗಳನ್ನು ಓಡಿಸಿ ಸಪ್ತ ಸಮುದ್ರದಾಚೆ ವಿಖ್ಯಾತಳಾದಳು ವೀರರಾಣಿ ಅಬ್ಬಕ್ಕದೇವಿ.

  3) ಕೆಳದಿಯ ಚೆನ್ನಮ್ಮಾ ಯುದ್ದವನ್ನೇ ಮಾಡದೆ ಬಲಾಢ್ಯ ಮೊಗಲರ ಸೈನ್ಯವನ್ನು ಹೇಗೆ ಸೋಲಿಸಿದಳು? ವಿವರಿಸಿರಿ.

  – ಕೆಳದಿಯ ರಾಣಿಚೆನ್ನಮ್ಮಾ ಮೊಘಲರಿಗೆ ಅಂಜಿ ತಲೆ ಮರೆಸಿಕೊಂಡು ಓಡಿ ಬಂದ ಶಿವಾಜಿಯ ಮಗ ರಾಜಾರಾಮನಿಗೆ ಆಶ್ರಯ ನೀಡಿದ್ದಳು. ಈ ವಿಷಯ ತಿಳಿದ ಔರಂಗಜೇಬ ತನ್ನ ಮಗ ಅಜಮತಾರನ ಜೊತೆಗೆ ಭಾರಿ ಸೈನ್ಯವನ್ನು ಕೆಳದಿಯ ಕಡೆಗೆ ಕಳುಹಿಸಿದನು. ಆದರೆ ಚಾಣಾಕ್ಷಳಾದ ಚೆನ್ನಮ್ಮಾ ತನ್ನ ರಾಜಧಾನಿಯನ್ನು ಭುವನಗಿರಿಗೆ ಸ್ಥಳಾಂತರಿಸಿ ಸುತ್ತಲಿನ ಬೆಟ್ಟ, ಕಣಿವೆ,

  ಇಕ್ಕಟ್ಟುದಾರಿ, ಕಾಲುದಾರಿ, ಕಳ್ಳದಾರಿಗಳಲ್ಲಿ ತನ್ನ ಸೈನಿಕರನ್ನು ನಿಲ್ಲಿಸಿ ಮೊಘಲ್ ಸೇನೆಗೆ ಅನ್ನ, ನೀರು ಸಿಗದಂತೆ ಮಾಡಿದಳು. ದಟ್ಟವಾದ ಕಾಡುಗಳ ಸಂದುಗೊಂದುಗಳಲ್ಲಿ ಚಲಿಸಲು ಆಗದೆ ಮಲೆನಾಡಿನ ಮಳೆಗೆ ತತ್ತರಿಸಿ ಪ್ರಾಣಭೀತಿಯಿಂದ ಪಲಾಯನಗೊಂಡರು ಮೊಘಲರು. ಈ ರೀತಿಯಾಗಿ ಯುದ್ಧವನ್ನೇ ಮಾಡದೆ ಕೆಳದಿಯ ಚೆನ್ನಮ್ಮಾ ಬಲಾಢ್ಯ ಮೊಘಲ್ ಸೈನ್ಯವನ್ನು ಸೋಲಿಸಿದ್ದಳು.

  5) ಕಿತ್ತೂರು ರಾಣಿ ಚೆನ್ನಮ್ಮಾಳ ಸ್ವಾಭಿಮಾನ ಮತ್ತು ದೇಶಾಭಿಮಾನವನ್ನು ಕುರಿತು ಬರೆಯಿರಿ.

  – ಬೆಳಗಾವಿ ಜಿಲ್ಲೆಯ ಕಿತ್ತೂರಿನ ರಾಣಿ ಚೆನ್ನಮ್ಮಾಜೀ ಬಲಾಢ್ಯ ಬ್ರಿಟಿಷರನ್ನು ಸೋಲಿಸಿದ ವೀರರಾಣಿ, ಅವಳು ಸೆರೆಯಾಳುಗಳನ್ನು ಅದರಲ್ಲೂ ಮಹಿಳೆ ಮತ್ತು ಮಕ್ಕಳನ್ನು ಅಕ್ಕರೆಯಿಂದ ಕಂಡಕರುಣಾಮಯಿ. ಬ್ರಿಟಿಷರು ಮುಂದೆ ಹಿತಶತ್ರುಗಳೊಂದಿಗೆ ಪಿತೂರಿ ನಡೆಸಿ ಮದ್ದಿನಲ್ಲಿ ಸೆಗಣಿ ಸೇರಿಸಿ ರಾಣಿ ಚೆನ್ನಮ್ಮಾಳ ತೋಪು ಹಾರದಂತೆ ಮೋಸಮಾಡಿ ಅವಳನ್ನು ಸೆರೆ ಹಿಡಿದು ಇಟ್ಟಾಗ, ಸ್ವಾತಂತ್ರಯದ ಕನಸನ್ನೇ ಕಂಡಳು ವೀರರಾಣಿ. ಸೆರೆಮನೆಯಲ್ಲಿ ಭೇಟಿಯಾಗಲು ಬಂದ ಸಂಗೊಳ್ಳಿ ರಾಯಣ್ಣ “ತಾಯಿ” ಎಂದು ಕರೆದಾಗ “ತಾಯಿ” ಎಂದು ಕರೆದ ಕನ್ನಡದ ಕಂದ ಯಾರು?” ಎಂದು ಕೇಳಿದ ಕೆಚ್ಚಿನ ರಾಣಿ ಚೆನ್ನಮ್ಮಾ. “ನಿಮ್ಮ ಧಮನಿ ಧಮನಿಗಳಲ್ಲಿ ರಕ್ತದ ಕಣಗಳಿರುವವರೆಗೂ ವೀರರಾಗಿ ಹೋರಾಡಿ.”ಎಂದು ಹುರಿದುಂಬಿಸಿದ ಕಿತ್ತೂರು ಚೆನ್ನಮ್ಮಾ. ಬ್ರಟಿಷರ ವಿರುದ್ಧ ಸ್ವಾತಂತ್ರ ಹೋರಾಟದ ಕಹಳೆ ಊದಿದ್ದು ಝಾನ್ಸಿ ರಾಣಿ ಲಕ್ಷ್ಮೀಬಾಯಿಗಿಂತಲೂ 24 ವರ್ಷ ಮೊದಲು !

  -:ಭಾಷಾಭ್ಯಾಸ:-

  ಅ) ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬಳಸಿರಿ.

  1) ಪ್ರಾಣಪಕ್ಷಿ: ದಶರಥ ಮಹಾರಾಜರ ಬಾಣ ತಗಲಿ ಶ್ರವಣ ಕುಮಾರನ ಪ್ರಾಣಪಕ್ಷಿ ಹಾರಿ ಹೋಯಿತು.

  2) ಸಂಕೋಲೆ: ಸೆರೆಮನೆಗಳಲ್ಲಿ ಮಹಾ ಅಪರಾಧಿಗಳನ್ನು ಸಂಕೋಲೆಗಳಿAದ ಬಂಧಿಸಿಟ್ಟಿರುತ್ತಾರೆ.

  3) ತಲ್ಲಣ: ಭೀಕರ ಅಪಘಾತವನ್ನು ಕಂಡು ಜನರು ತಲ್ಲಣಗೊಂಡರು.

  4) ಹೃದಯಂಗಮ: ಬೇಲೂರು ಹಳೇಬೀಡುಗಳಲ್ಲಿಯ ವಾಸ್ತುಶಿಲ್ಪ ಹೃದಯಂಗಮವಾಗಿದೆ.

  5) ಪತಾಕೆ: ಶ್ವೇತ ಬಣ್ಣದ ಪತಾಕೆ ಯುದ್ಧವನ್ನು ನಿಲ್ಲಿಸುವುದನ್ನು, ಶಾಂತಿ ಕಾಪಾಡುವುದನ್ನು ಸೂಚಿಸುತ್ತದೆ.

  6) ವಿಜಯೋತ್ಸವ: ಭಾರತೀಯ ಕ್ರಿಕೆಟ್ ತಂಡ 2015ರಲ್ಲಿ ವಿಶ್ವಕಪ್ ಗೆದ್ದಾಗ ಭಾರತದ ತುಂಬೆಲ್ಲಾ ವಿಜಯೋತ್ಸವವನ್ನೇ

  ಆಚರಿಸಿದಂತಾಗಿತ್ತು.

  ಆ) ಕೆಳಗಿನ ಶಬ್ದಗಳಲ್ಲಿ ಅನುಕರಣಾವ್ಯಯ, ಜೋಡುನುಡಿ ಮತ್ತು ದ್ವಿರುಕ್ತಿಗಳನ್ನು ಗುರುತಿಸಿ, ಪಟ್ಟಿಮಾಡಿ.

  ಅನುಕರಣಾವ್ಯಯ

  ಧಗಧಗ,

  ಝಳಝಳ ಜೋಡುನುಡಿ

  ಮನೆಮಠ,ರೋಗರುಜಿನ ದ್ವಿರುಕ್ತಿ

  ಕಣಕಣ,

  ಧಮನಿ ಧಮನಿ,

  ಕಿಡಿಕಿಡಿ

  ಇ) ಕೆಳಗಿನ ಸಾಲುಗಳಲ್ಲಿ ಖಾಲಿ ಬಿಟ್ಟಿರುವ ಸ್ಥಳಗಳನ್ನು ಸರಿಹೊಂದುವ ಸೂಕ್ತ ಹೆಸರು (ಅಂಕಿತನಾಮ)ಗಳಿಂದ

  ಭರ್ತಿಮಾಡಿರಿ.

  1) ಅಬ್ಬಕ್ಕದೇವಿಯ ಸೈನ್ಯದಲ್ಲಿದ್ದ ಮೀನುಗಾರ ಸಾಹಸಿ ಸೈನಿಕರು ಮೊಗೇರು.

  2) ಸನ್ಯಾಸಿಯ ವೇಷ ಧರಿಸಿದ ಮಲ್ಲಮ್ಮಾಜಿಯ ಸರದಾರ ಶಾಂತಯ್ಯ.

  3) ಛತ್ರಪತಿ ಶಿವಾಜಿಯನ್ನು ಸೋಲಿಸಿದ ಬೆಳವಡಿಯ ರಾಣಿ ಮಲ್ಲಮ್ಮಾಜೀ.

  4) ಅಬ್ಬಕ್ಕಳ ಸೈನ್ಯಕ್ಕೆ ಹೆದರಿ ಓಡಿಹೋದ ಪೋರ್ಚುಗೀಸ್ ಸೇನಾಪತಿಗಳು ಮಿರಾಂಡಾ ಮತ್ತು ಡಿ. ಮೆಲ್ಲೊ.

  5) ಅಬ್ಬಕ್ಕಳ ಆಸ್ಥಾನಕ್ಕೆ ಭೇಟಿ ನೀಡಿದ ಜಿನೋವಾದ ಪ್ರವಾಸಿ ಪಿತ್ರೋ.

  6) ಉಲ್ಲಾಳವನ್ನು ಆಕ್ರಮಿಸಲು ಸಜ್ಜಾಗಿ ಕರಾವಳಿಯಲ್ಲಿ ಲಂಗರು ಹಾಕಿದ ವಿದೇಶಿಯರು ಪೋರ್ಚುಗೀಸರು.

  7) ಕೆಳದಿಯ ಚೆನ್ನಮ್ಮನಲ್ಲಿ ಆಶ್ರಯ ಪಡೆದ ಶಿವಾಜಿಯ ಮಗ ರಾಜಾರಾಮ.

  8) ಕೆಳದಿಯ ಮೇಲೆ ದಂಡೆತ್ತಿ ಬಂದ ಔರಂಗಜೇಬನ ಮಗ ಅಜಮತಾರ.

  9) ಕಿತ್ತೂರು ರಾಣಿ ಚೆನ್ನಮ್ಮಾಳನ್ನು ಸೆರೆಮನೆಯಲ್ಲಿ ಭೇಟಿಯಾಗಲು ಬಂದ ವೀರ ಸಂಗೊಳ್ಳಿ ರಾಯಣ್ಣ.

  10) ಪೋರ್ಚುಗೀಸರನ್ನು ಸೋಲಿಸಿದ ಉಲ್ಲಾಳದ ರಾಣಿ ಅಬ್ಬಕ್ಕದೇವಿ.

  ಪದ್ಯ – 10. ಉದರ ವೈರಾಗ್ಯ.

  * ಕವಿ ಪರಿಚಯ *

  ಹೆಸರು : ಪುರಂದರದಾಸರು.

  ಕಾಲ: 16 ನೇ ಶತಮಾನ

  ಜನ್ಮಸ್ಥಳ: ಪುರಂದರಗಡ

  ಕೃತಿಗಳು: 1) ಕೀರ್ತನೆಗಳು, 2) ಸುಳಾದಿ, 3) ಉಗಾಭೋಗಗಳು.

  ಅಂಕಿತನಾಮ: ಪುರಂದರವಿಠಲ.

  ಅ) ಕೆಳಗಿನ ಪ್ರಶ್ನೆಗಳಿಗೆ ಒಂದೊದು ವಾಕ್ಯದ ಉತ್ತರಗಳನ್ನು ಬರೆಯಿರಿ.

  1) ಉದರ ವೈರಾಗ್ಯ ಎಂದರೇನು?

  – ಹೊಟ್ಟೆಪಾಡಿಗಾಗಿ ವೈರಾಗ್ಯದ ಸೋಗು ಹಾಕುವುದನ್ನೇ “ಉದರ ವೈರಾಗ್ಯ” ಎನ್ನುವರು.

  2) ಪುರಂದರದಾಸರು ಯಾವುದನ್ನು ಉದರ ವೈರಾಗ್ಯ ಎಂದಿದ್ದಾರೆ? (2018)

  – ಪದ್ಮನಾಭನಲ್ಲಿ ಸ್ವಲ್ಪವೂ ಭಯ, ಭಕ್ತಿಯಿಲ್ಲದೆ ಮಹಾಭಕ್ತನಂತೆ ನಟಿಸುವ ಡಾಂಭಿಕ ಭಕ್ತಿಯನ್ನು ಪುರಂದರದಾಸರು ಉದರ

  ವೈರಾಗ್ಯ ಎಂದು ಕರೆದಿದ್ದಾರೆ.

  3) ಡಾಂಭಿಕ ಭಕ್ತನ ಮನಸ್ಸು ಯಾವ ಗುಣಗಳಿಂದ ತುಂಬಿದೆ ಎಂದು ಪುರಂದರದಾಸರು ಹೇಳಿದ್ದಾರೆ?

  – ಡಾಂಭಿಕ ಭಕ್ತನ ಮನಸ್ಸು ಮದ, ಮತ್ಸರ, ಕ್ರೋಧ ಮುಂತಾದ ಕೆಟ್ಟಗುಣಗಳಿಂದ ತುಂಬಿದೆ ಎಂದು ಪುರಂದರದಾಸರು

  ಹೇಳಿದ್ದಾರೆ.

  4) ಪುರಂದರದಾಸರು ಡಾಂಭಿಕ ಭಕ್ತನ ದೇವರ ಕೋಣೆಯನ್ನು ಯಾವುದಕ್ಕೆ ಹೋಲಿಸಿದ್ದಾರೆ?

  – ಪುರಂದರದಾಸರು ಡಾಂಭಿಕ ಭಕ್ತನ ದೇವರ ಕೋಣೆಯನ್ನು ಕಂಚುಗಾರನ ಬಿಡಾರಕ್ಕೆ ಹೋಲಿಸಿದ್ದಾರೆ.

  5) ಪುರಂದರದಾಸರ ಪದಗಳ ಅಂಕಿತಯಾವುದು?

  – ಪುರಂದರದಾಸರ ಪದಗಳ ಅಂಕಿತನಾಮ ‘ಪುರಂದರವಿಠಲ’.

  ಆ) ಈ ಕೆಳಗಿನ ಪ್ರಶ್ನೆಗಳಿಗೆ ಎರಡು/ಮೂರು ವಾಕ್ಯಗಳಲ್ಲಿ ಉತ್ತರಿಸಿ.

  1) ಡಾಂಭಿಕನ ಭಕ್ತಿ ಬದಿಯಲ್ಲಿದ್ದವರಿಗೆ ಆಶ್ಚರ್ಯವಾಗುವುದು ಯಾವುದು?

  – ಡಾಂಭಿಕ ಭಕ್ತನು ಉದಯ ಕಾಲದಲ್ಲಿ ಎದ್ದು ನದಿಯಲ್ಲಿ ಮಿಂದು ಗಡಗಡ ನಡುಗುತ್ತ ಹಿಗ್ಗುತ್ತ ಮಹಾಭಕ್ತನಂತೆ ನಟಿಸುತ್ತಾನೆ.

  ಆದರೆ ಅವನ ಮನದಲ್ಲಿ ಮದ, ಮತ್ಸರ, ಕ್ರೋಧ ಮುಂತಾದ ಕೆಟ್ಟಗುಣಗಳೇ ತುಂಬಿಕೊ೦ಡಿರುತ್ತವೆ. ಅವನ ಈ ರೀತಿಯ ಭಕ್ತಿ

  ಬದಿಯಲ್ಲಿದ್ದವರಿಗೆ ಆಶ್ಚರ್ಯವನ್ನುಂಟು ಮಾಡುತ್ತದೆ.

  2) ಪುರಂದರದಾಸರು ಡಾಂಭಿಕ ಭಕ್ತನ ವೈರಾಗ್ಯಶಾಲಿ ಎಂದೆನಿಸುವ ಪೂಜೆಯನ್ನು ಹೇಗೆ ವರ್ಣಿಸಿದ್ದಾರೆ?

  – ಡಾಂಭಿಕ ಭಕ್ತನು ತನ್ನ ಮನೆಯ ದೇವರ ಜಗುಲಿಯ ಮೇಲೆ ಕಂಚು, ಹಿತ್ತಾಳೆ, ತಾಮ್ರಗಳಿಂದ ತಯಾರಿಸಲ್ಪಟ್ಟ ದೇವರ

  ಪ್ರತಿಮೆಗಳನ್ನು ಜೋಡಿಸಿಟ್ಟಿರುತ್ತಾನೆ. ಆ ಪ್ರತಿಮೆಗಳೆಲ್ಲಾ ಮಿಂಚಬೇಕೆ೦ದು ಹೆಚ್ಚಿನ ಸಂಖ್ಯೆಯಲ್ಲಿ ದೀಪಗಳನ್ನು ಹಚ್ಚಿರುತ್ತಾನೆ. ಆದರೆ ಆ ದೇವರ ಮೂರ್ತಿಗಳ ಬಗೆಗೆ ಡಾಂಭಿಕ ಭಕ್ತನ ಮನದಲ್ಲಿ ಸ್ವಲ್ಪವೂ ಭಯ, ಭಕ್ತಿಗಳಿರುವುದಿಲ್ಲ. ಹೀಗೆ ಪುರಂದರದಾಸರು ಡಾ೦ಭಿಕ ಭಕ್ತನ ವೈರಾಗ್ಯಶಾಲಿ ಎಂದೆನಿಸುವ ಪೂಜೆಯನ್ನು ವರ್ಣಿಸಿದ್ದಾರೆ.

  3) ಪುರಂದರದಾಸರು ಡಾಂಭಿಕನ ಭಕ್ತಿಯನ್ನು ನಾಟಕ ಸ್ತಿಸ್ತ್ರೀಗೆ ಏಕೆ ಹೋಲಿಸಿದ್ದಾರೆ?

  – ಡಾಂಭಿಕ ಭಕ್ತ ತಾನೇ ಪರಮ ವೈರಾಗ್ಯಶಾಲಿ ಭಕ್ತನಂತೆ ನಟಿಸುತ್ತಾನೆ. ಆತನ ಭಕ್ತಿ ಕೇವಲ ನಟನೆಯ ಭಕ್ತಿಯಾಗಿರುತ್ತದೆ. ಆದರೆ ಅವನ ತೋರಿಕೆಯ ಭಕ್ತಿಯನ್ನು ಕಂಡವರು ಈತನೇ ನಿಜವಾದ ಭಕ್ತ. ಈತನ ಸರಿಸಮಾನ ಭಕ್ತ ಮತ್ತೊಬ್ಬನಾರಿಲ್ಲ

  ಅಂದುಕೊಳ್ಳುತ್ತಾರೆ. ಇದು ಕೇವಲ ನಾಟಕ ಸ್ತಿಸ್ತ್ರೀಯ ಅಭಿನಯದಂತೆ ಬಯಲು ಡಂಭವಾಗಿರುತ್ತದೆ. ಕೇವಲ ಊಟದ ಮಾರ್ಗದ ಜ್ಞಾನವಾಗಿರುತ್ತದೆ. ಡಾಂಭಿಕನ ಭಕ್ತಿ ಕೇವಲ ಉದರ ವೈರಾಗ್ಯವಾಗಿರುವುದರಿಂದ ಪುರಂದರದಾಸರು ಡಾಂಭಿಕನ ಭಕ್ತಿಯನ್ನು ನಾಟಕ ಸ್ಸ್ತ್ರೀಗೆ ಹೋಲಿಸಿದ್ದಾರೆ.

  4) ನಿಜವಾಗಿ ಪುರಂದರ ವಿಠಲನನ್ನು ಯಾವಾಗ ಕಾಣಬಹುದು ಎಂದು ಪುರಂದರದಾಸರು ಹೇಳುತ್ತಾರೆ?

  – ನಾನು ಎಂಬುವುದನ್ನು ಬಿಟ್ಟು ಜ್ಞಾನಿಗಳ ಜೊತೆಗೂಡಿ ನಾವು ಬಾಳಬೇಕು. ಜೀವನದಲ್ಲಿ ಯಾವ ತೊಂದರೆಗಳು ಬಂದರೂ

  ಎಲ್ಲವೂ ಹರಿ ಪ್ರೇರಣೆ ಎಂದು ಭಾವಿಸಬೇಕು. ಸದಾಕಾಲ ಪುರಂದರವಿಠಲನನ್ನು ಮೌನವಾಗಿ ಧ್ಯಾನಿಸಿ ಕಾರ್ಯಪ್ರವೃತ್ತರಾದವರು, ತಮ್ಮ ಕಾರ್ಯದಲ್ಲಿ ನಿಜವಾದ ಪುರಂದರವಿಠಲನನ್ನು ಕಾಣಲು ಸಾಧ್ಯವಾಗುತ್ತದೆ ಎಂದು ಪುರಂದರದಾಸರು ಹೇಳಿದ್ದಾರೆ.

  ಇ) ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಗಳನ್ನು ಬರೆಯಿರಿ.

  1) ಪುರಂದರದಾಸರ ಕೀರ್ತನೆಯಲ್ಲಿ ಡಂಭಾಚಾರದ ಭಕ್ತಿಯ ಸ್ಪಷ್ಟ ಚಿತ್ರಣವು ಹೇಗೆ ಚಿತ್ರಿತವಾಗಿದೆ?

  – ಡಾಂಭಿಕ ಭಕ್ತನು ಕೇವಲ ತನ್ನ ಹೊಟ್ಟೆಪಾಡಿಗಾಗಿ ನಟನೆಯ ಭಕ್ತಿಯನ್ನು ಪ್ರದರ್ಶಿಸುತ್ತಾನೆ. ಆತ ಉದಯ ಕಾಲದಲ್ಲಿ ಎದ್ದು

  ನದಿಯಲಿ ಮಿಂದೆನೆ೦ದು ಹಿಗ್ಗುತ್ತಾನೆ. ಆತನ ಮನೆಯ ದೇವರ ಕೋಣೆ ಕಂಚುಗಾರನ ಬಿಡಾರಕ್ಕೆ ಸಮಾನವಾಗಿರುತ್ತದೆ. ದೇವರ ಮೂರ್ತಿಗಳನ್ನು ಆತ ಸರಿಯಾಗಿ ಜೋಡಿಸಿಟ್ಟು ಅವೆಲ್ಲ ಹೊಳೆಯಬೇಕೆಂದು ಹೆಚ್ಚಿನ ಸಂಖ್ಯೆಯಲ್ಲಿ ದೀಪಗಳನ್ನು ಹಚ್ಚಿರುತ್ತಾನೆ. ಆತ ಕೇವಲ ವಂಚನೆಯಿ೦ದಲೇ ದೇವರನ್ನು ಪೂಜಿಸುತ್ತಾನೆ. ಆತನ ಕೈಯಲ್ಲಿ ಜಪಮಣಿ ಇರುತ್ತದೆ. ಬಾಯಲ್ಲಿ ಮಂತ್ರಪಠಣವಿರುತ್ತದೆ. ಮುಖದ ಮೇಲೆ ಅರಿವೆಯ ಮುಸುಕು ಹಾಕಿಕೊಂಡು ಮನದಲ್ಲಿ ಪರಸತಿಯರ ಗುಣಗಾನವಿರುತ್ತದೆ. ಹೀಗೆ ಪುರಂದರದಾಸರು ಡ೦ಭಾಚಾರದ ಭಕ್ತಿಯ ಸ್ಪಷ್ಟ ಚಿತ್ರಣವನ್ನು ಈ ಕೀರ್ತನೆಯಲ್ಲಿ ಚಿತ್ರಿಸಿದ್ದಾರೆ.

  2) ಪುರಂದರದಾಸರು ಕಪಟ ಭಕ್ತಿಯ ಆರಾಧಕರನ್ನು ಹೇಗೆ ಅಣಕಿಸಿ ಅವಹೇಳನ ಮಾಡಿದ್ದಾರೆ?

  – ಡಾಂಭಿಕ ಭಕ್ತರ ತೋರಿಕೆಯ ಭಕ್ತಿ ಪ್ರದರ್ಶನವನ್ನು ಪುರಂದರದಾಸರು ಉದರ ವೈರಾಗ್ಯ ಹೊಟ್ಟೆಪಾಡಿಗಾಗಿ ಮಾಡುವ ಸೋಗಿನ ನಾಟಕ ಎಂದು ಕರೆದಿದ್ದಾರೆ. ದಾಸರು ಈ ಡಾಂಭಿಕ ಭಕ್ತನ ಮನೆಯ ದೇವರಕೋಣೆಯನ್ನು ಕಂಚುಗಾರನ ಬಿಡಾರಕ್ಕೆ ಹೋಲಿಸಿದ್ದಾರೆ. ಕಂಚುಗಾರನಿಗೆ ಆ ಮೂರ್ತಿಗಳ ಮೇಲೆ ಯಾವುದೇ ರೀತಿಯ ಭಯ, ಭಕ್ತಿ ಇರುವುದಿಲ್ಲ. ಅವು ಕೇವಲ ಆತನಿಗೆ ಮಾರಾಟದ ವಸ್ತುಗಳಾಗಿರುತ್ತವೆ. ಅದೇ ರೀತಿ ಡಾಂಭಿಕ ಭಕ್ತ ತನ್ನ ಮನೆಯ ಕೋಣೆಯಲ್ಲಿ ದೇವರ ಮೂರ್ತಿಗಳನ್ನು ವ್ಯವಸ್ಥಿತವಾಗಿ ಜೋಡಿಸಿಟ್ಟು ಅವೆಲ್ಲ ಮಿಂಚಬೇಕೆ೦ದು ಬಲು ದೀಪಗಳನ್ನು ಹಚ್ಚಿರುತ್ತಾನೆ. ಮೋಸದಿಂದಲೇ ಪೂಜೆ ಮಾಡಿ ಪರಮ ವೈರಾಗ್ಯಶಾಲಿ ಭಕ್ತನೆನಿಸಿಕೊಳ್ಳುತ್ತಾನೆ. ಹೀಗೆ ಪುರಂದರದಾಸರು ಕಪಟ ಭಕ್ತಿಯ ಆರಾಧಕರನ್ನು ಅಣಕಿಸಿ ಅವಹೇಳನ ಮಾಡಿದ್ದಾರೆ.

  ಈ) ಕೆಳಗಿನ ಸಾಲುಗಳ ಸ್ವಾರಸ್ಯವನ್ನು ವಿವರಿಸಿ.

  1) “ ಕರದೊಳು ಜಪಮಣಿ ಬಾಯೊಳು ಮಂತ್ರವು”

  – ಪದ್ಯದ ಹೆಸರು: ಉದರ ವೈರಾಗ್ಯ.

  ಕವಿಗಳ ಹೆಸರು: ಪುರಂದರದಾಸರು.

  ದರ್ಭ: ಡಾಂಭಿಕ ಭಕ್ತನ ಸೋಗಿನ ಭಕ್ತಿಯ ಬಗೆಗೆ ಹೇಳುವಾಗು ದಾಸರು ಈ ಮಾತನ್ನು ನುಡಿದಿದ್ದಾರೆ.

  ವಿವರಣೆ: ಡಾಂಭಿಕ ಭಕ್ತರು ತಮ್ಮ ಹೊಟ್ಟೆಪಾಡಿಗಾಗಿ ಸೋಗಿನ ಭಕ್ತಿ ಪ್ರದರ್ಶನ ಮಾಡುತ್ತಾರೆ. ಅವರು ಕೈಯಲ್ಲಿ ಜಪಮಣಿ

  ಹಿಡಿದಿರುತ್ತಾರೆ. ಬಾಯಿಂದ ಮಂತ್ರವನ್ನು ಪಠಿಸುತ್ತಾರೆ. ಇದು ಕೇವಲ ಡಂಭಾಚಾರದ ಭಕ್ತಿಯಾಗಿರುತ್ತದೆ ಎಂದು ದಾಸರು

  ಹೇಳಿದ್ದಾರೆ.

  2) “ಪರಸತಿ ಪರಧನಕಾಗಿ ಚಿಂತಿಸುತ”

  – ಪದ್ಯದ ಹೆಸರು: ಉದರ ವೈರಾಗ್ಯ.

  ಕವಿಗಳ ಹೆಸರು: ಪುರಂದರದಾಸರು.

  ದರ್ಭ: ಡಾಂಭಿಕ ಭಕ್ತನ ಸೋಗಿನ ಭಕ್ತಿಯ ಬಗೆಗೆ ಹೇಳುವಾಗು ದಾಸರು ಈ ಮಾತನ್ನು ನುಡಿದಿದ್ದಾರೆ.

  ವಿವರಣೆ: ಡಾಂಭಿಕ ಭಕ್ತರು ಸೋಗಿನ ಭಕ್ತಿ ಪ್ರದರ್ಶಿಸುತ್ತಾರೆ. ಅವರು ಕೈಯಲ್ಲಿ ಜಪಮಣಿ ಹಿಡಿದು ಬಾಯಿಂದ ಮಂತ್ರ ಪಠಿಸುತ್ತಾರೆ.

  ಮುಖದ ಮೇಲೆ ಅರಿವೆಯ ಮುಸುಕು ಹಾಕಿರುತ್ತಾರೆ. ಮನದಲಿ ಮಾತ್ರ ಪರಸತಿ, ಪರಧನಕ್ಕಾಗಿ ಚಿಂತಿಸುತ್ತ ಮೋಸದ ಭಕ್ತಿ

  ಪ್ರದರ್ಶನ ಮಾಡುತ್ತರೆಂದು ದಾಸರು ಹೇಳಿದ್ದಾರೆ.

  3) “ನಾನು ಎಂಬುದು ಬಿಡದೆ, ಅಜ್ಞಾನಿಗಳೊಡಗೂಡಿ”

  – ಪದ್ಯದ ಹೆಸರು: ಉದರ ವೈರಾಗ್ಯ.

  ಕವಿಗಳ ಹೆಸರು: ಪುರಂದರದಾಸರು.

  ದರ್ಭ: ಪುರಂದರದಾಸರು ನಮ್ಮನ್ನು ಉದ್ದೇಶಿಸಿ ಈ ಮಾತನ್ನು ನುಡಿದಿದ್ದಾರೆ.

  ವಿವರಣೆ: ನಾನು, ನಾನು ಎಂಬ ಅಹಂಕಾರವನ್ನು ಬಿಟ್ಟು, ನಾವು ಜ್ಞಾನಿಗಳ ಜೊತೆಗೂಡಬೇಕು. ನಮ್ಮ ಜೀವನವೇ ಹರಿ ಪ್ರೇರಣೆಯ ಒಂದು ಅಂಗವೆ೦ದು ಭಾವಿಸಬೇಕೆಂದು ದಾಸರು ಹೇಳಿದ್ದಾರೆ.

  4) “ನಾಟಕ ಸ್ತಿಸ್ತ್ರೀಯಂತೆ ಬಯಲಡಂಭವತೋರಿ”

  _ ಪದ್ಯದ ಹೆಸರು: ಉದರ ವೈರಾಗ್ಯ.

  ಕವಿಗಳ ಹೆಸರು: ಪುರಂದರದಾಸರು.

  ದರ್ಭ: ಡಾಂಭಿಕ ಭಕ್ತನ ಭಕ್ತಿ ಪ್ರದರ್ಶನವನ್ನು ವಿಡಂಭಿಸುತ್ತ ದಾಸರು ಈ ಮಾತನ್ನು ನುಡಿದಿದ್ದಾರೆ.

  ವಿವರಣೆ: ಡಾಂಭಿಕ ಭಕ್ತರು ಮಹಾಭಕ್ತರಂತೆ ನಟಿಸುತ್ತಾರೆ. ಅವರ ಭಕ್ತಿ ಕೇವಲ ತೋರಿಕೆಯ ಭಕ್ತಿಯಾಗಿರುತ್ತದೆ. ಇಂತಹವರನ್ನು ಜನರು ಈತನೇ ನಿಜವಾದ ಭಕ್ತ ಎನ್ನುತ್ತಾರೆ. ಆದರೆ ಈತನ ಭಕ್ತಿ ನಾಟಕ ಸ್ತಿಸ್ತ್ರೀಯಂತೆ ಮೋಸದ ಭಕ್ತಿಯಾಗಿರುತ್ತದೆ ಎಂದು ದಾಸರು ಹೇಳಿದ್ದಾರೆ.

  5) “ವಂಚನೆಯಿದಲಿ ಪೂಜೆ ಮಾಡುವುದು.”

  – ಪದ್ಯದ ಹೆಸರು: ಉದರ ವೈರಾಗ್ಯ.

  ಕವಿಗಳ ಹೆಸರು: ಪುರಂದರದಾಸರು.

  ದರ್ಭ: ಡಾಂಭಿಕ ಭಕ್ತನ ಭಕ್ತಿಯನ್ನು ವಿಡಂಭಿಸುತ್ತ ದಾಸರು ಈ ಮಾತನ್ನು ನುಡಿದಿದ್ದಾರೆ.

  ವಿವರಣೆ: ಪುರಂದರದಾಸರು ಡಾಂಭಿಕ ಭಕ್ತನ ಮನೆಯನ್ನು ಕಂಚುಗಾರನ ಬಿಡಾರಕ್ಕೆ ಹೋಲಿಸಿದ್ದಾರೆ. ಕಂಚುಗಾರ ತನ್ನ

  ಬಿಡಾರದಲ್ಲಿ ಕಂಚು, ತಾಮ್ರ, ಹಿತ್ತಾಳೆಗಳ ವಿಗ್ರಹಗಳನ್ನು ಜೋಡಿಸಿರುವಂತೆ ಡಾಂಭಿಕ ಭಕ್ತರು ತಮ್ಮ ಮನೆಯ ದೇವರ ಕೋಣೆಯಲ್ಲಿ

  ದೇವರ ಪ್ರತಿಮೆಗಳನ್ನು ಸಾಲಾಗಿ ಜೋಡಿಸಿ ಅವೆಲ್ಲ ಮಿಂಚಬೇಕೆ೦ದು ಹಲವಾರು ದೀಪಗಳನ್ನು ಹಚ್ಚಿರುತ್ತಾರೆ. ಹೀಗೆ

  ವಂಚನೆಯಿ೦ದಲೇ ಅವರು ಪೂಜೆ ಮಾಡುತ್ತಾರೆಂದು ದಾಸರು ಹೇಳಿದ್ದಾರೆ.

  *ಭಾಷಾಭ್ಯಾಸ*

  ಅ) ಕೆಳಗಿನ ಪದಗಳನ್ನು ಬಿಡಿಸಿ ಬರೆದು, ಸಂಧಿಯನ್ನು ಹೆಸರಿಸಿ.

  * ವೈರಾಗ್ಯ + ಇದು = ವೈರಾಗ್ಯವಿದು (‘ವ’ ಕಾರಾಗಮ ಸಂಧಿ)

  * ನದಿ + ಒಳು = ನದಿಯೊಳು (‘ಯ’ಕಾರಾಗಮ ಸಂಧಿ)

  * ಪ್ರೇರಣೆ + ಎಂದು = ಪ್ರೇರಣೆಯೆಂದು (‘ಯ’ಕಾರಾಗಮ ಸಂಧಿ)

  * ಏನು + ಎಲ್ಲಕೆ = ಏನೆಲ್ಲಕೆ (ಲೋಪ ಸಂಧಿ)

  * ಅಂಗಡಿ + ಅಂದದಿ = ಅಂಗಡಿಯ೦ದದಿ (‘ಯ’ಕಾರಾಗಮ ಸಂಧಿ)

  ಆ) ಕೆಳಗಿನ ತದ್ಭವಗಳಿಗೆ ತತ್ಸಮಗಳನ್ನು ಬರೆಯಿರಿ.

  ಪದುಮ – ಪದ್ಮ, ಬಕುತಿ – ಭಕ್ತಿ , ಅಚ್ಚರಿ – ಆಶ್ಚರ್ಯ, ಮೂರುತಿ – ಮೂರ್ತಿ, ಕಜ್ಜ – ಕಾರ್ಯ

  ಇ) ಈ ಕೆಳಗಿನ ಪದ್ಯ ಭಾಗಗಳನ್ನು ಕಂಠಪಾಠ ಮಾಡಿರಿ. (ಎಪ್ರೀಲ್ – 2018, ಜೂನ್ – 2018)

  ಕಂಚುಗಾರನ ಬಿಡಾರದಂದದಿ

  ಚು ಹಿತ್ತಾಳೆಯ ಪ್ರತಿಮೆಗಳ ನೆರಹಿ

  ಮಿಂಚಬೇಕೆದು ಬಲು ಜ್ಯೋತಿಗಳನು ಹಚ್ಚಿ

  ವಂಚನೆಯಿದಲಿ ಪೂಜೆ ಮಾಡುವುದು.

  ನಾನು ಎಂಬುದ ಬಿಟ್ಟು ಜ್ಞಾನಿಗಳೊಡನಾಡಿ

  ಏನಾದರು ಹರಿ ಪ್ರೇರಣೆಯೆಂದು

  ಧ್ಯಾನಿಸಿ ಮೌನದಿ ಪುರಂದರವಿಠಲನ

  ಕಾಣದೆ ಮಾಡಿದ ಕಾರ್ಯಗಳೆಲ್ಲವು.

  ಪಾಠ – 11. ನನ್ನ ಪುಸ್ತಕ ಪ್ರಪಂಚ.

  ಲೇಖಕರ ಪರಿಚಯ –

  ಹೆಸರು : * ಬೀಚಿ*

  ಹೆಸರು: ರಾಯಸಂ ಭೀಮಸೇನರಾವ್

  ಕಾವ್ಯನಾಮ: ಬೀಚಿ

  ಜನ್ಮ ವರ್ಷ: 1913

  ಜನ್ಮ ಸ್ಥಳ: ದಾವಣಗೆರೆಜಿಲ್ಲೆಯ (ಹರಪನ ಹಳ್ಳಿ)

  ಕೃತಿಗಳು: 1) ಕೆನೆಮೊಸರು, 2) ನೀವು ಕೇಳಿದಿರಿ! (ಅಂಕಣ ಬರಹಗಳು), 3) ಹನ್ನೊಂದನೆಯ ಅವತಾರ,

  4) ಸೈಕಾಲಾಜಿಸ್ಟ್ ಸಾರಂಗಪಾಣಿ (ನಾಟಕಗಳು), 5) ಬೆಳ್ಳಿತಿಂಮ ನೂರೆಂಟು ಹೇಳಿದ,  6) ಅಂದನಾ ತಿಂಮ (ಕವನ ಸಂಕಲನಗಳು)

  ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

  1) ಇಂಗ್ಲಿಷ್‌ನ ಹೇಳಿಕೆಯೊಂದನ್ನು ಕೊಂಚ ಮಾರ್ಪಡಿಸಿ ಬೀಚಿಯವರು ಸೃಷ್ಟಿಸಿರುವ ಹೇಳಿಕೆ ಯಾವುದು?

  – ‘ನೀನಾವ ಪುಸ್ತಕಗಳನ್ನು ಓದುತ್ತಿ ಎಂಬುದನ್ನು ಹೇಳು, ನಿನ್ನ ತಲೆ ಏನೆಂಬುದನ್ನು ಹೇಳುತ್ತೇನೆ.’ ಎಂಬ ಹೇಳಿಕೆಯನ್ನು

  ಬೀಚಿಯವರು ಇಂಗ್ಲಿಷ್‌ನ ಹೇಳಿಕೆಯೊಂದನ್ನು ಕೊಂಚ ಮಾರ್ಪಡಿಸಿ ಸೃಷ್ಟಿಸಿದ್ದರು.

  2) ಹುಬ್ಬಳ್ಳಿಯಲ್ಲಿ ಲೈಫ ಇನ್‌ಷೂರೆನ್ಸ್ ಕಂಪನಿಯ ಏಜೆಂಟರ ಆಫೀಸಿನಲ್ಲಿ ಬೀಚಿಯವರ ನಿತ್ಯದ ಕಾರ್ಯಕ್ರಮ ಯಾವುದಾಗಿತ್ತು?

  – ಆಫೀಸಿನ ಎದುರು ಇದ್ದ ಮಂಗಳೂರಿನ ಗೋವಿಂದರಾಯರ ಅಂಗಡಿಯಲ್ಲಿ ಕುಳಿತು ತವುಡು ಕಟ್ಟುವುದು ಬೀಚಿಯವರ ನಿತ್ಯದ

  ಕಾರ್ಯಕ್ರಮ ಅಂದರೆ ಕೆಲಸವಾಗಿತ್ತು.

  3) ‘ಸಂಧ್ಯಾರಾಗ’ ಪುಸ್ತಕವನ್ನು ಬೀಚಿಯವರು ಏಕೆ ಓದಿದರು? (2018)

  – ಬೀಚಿಯವರ ಹೆಂಡತಿ ಬಹಳ ಭೇಷ್ ಅದರೀ ಪುಸ್ತಕ ನೀವೂ ಓದಬೇಕು ಇದನೊಮ್ಮೆ ಎಂದು ಹೇಳಿದ್ದಕ್ಕಾಗಿ ‘ಸಂಧ್ಯಾರಾಗ’

  ಪುಸ್ತಕವನ್ನು ಬೀಚಿಯವರು ಓದಿದರು.

  4) ಟ್ರೇನಿನಲ್ಲಿ ಪುಸ್ತಕವನ್ನು ಬಚ್ಚಿಟ್ಟುಕೊಂಡು ಬೀಚಿಯವರು ಓದಲಾರಂಭಿಸಿದ್ದೇಕೆ?

  – ಟ್ರೇನಿನಲ್ಲಿ ಕನ್ನಡ ಪುಸ್ತಕ ಕೈಲಿ ಹಿಡಿದು ಕುಳಿತರೆ ನನ್ನ ಮಾನ ಉಳಿಯುತ್ತದೆಯೇ? ಎಂಬ ವಿಚಾರ ಬೀಚಿಯವರ ಮನದಲ್ಲಿ

  ಬಂದ ಕಾರಣ ಅವರು ಆ ಪುಸ್ತಕವನ್ನು ಬಚ್ಚಿಟ್ಟುಕೊಂಡು ಓದಲಾರಂಭಿಸಿದರು.

  5) ಕನ್ನಡದ ದೀಕ್ಷೆಯನ್ನು ಬೀಚಿಯವರು ಸ್ವೀಕರಿಸಿದ ಶುಭಮುಹೂರ್ತ ಯಾವುದು?

  – ಅ. ನ. ಕೃಷ್ಣರಾಯರ ‘ಸಂಧ್ಯಾರಾಗ’ ಕನ್ನಡ ಕೃತಿಯನ್ನು ಓದಿದ ನಂತರ, ಕನ್ನಡದಲ್ಲಿಯೂ ಒಳ್ಳೊಳ್ಳೆ ಬರಹಗಾರರಿದ್ದಾರೆಂದು

  ಬೀಚಿಯವರಿಗೆ ಅನಿಸಿ, ಅಂದಿನಿ೦ದಲೇ ಅವರು ಕನ್ನಡದ ದೀಕ್ಷೆಯನ್ನು ಪಡೆದರು.

  6) ಬೀಚಿಯವರೇ ಹೇಳಿರುವಂತೆ ಡಿ. ವಿ. ಜಿ. ಯವರ ತಿಮ್ಮನಿಗೂ, ಬೀಚಿಯವರ ತಿಂಮನಿಗೂ ಇರುವ ವ್ಯತ್ಯಾಸವೇನು?

  – ಬೀಚಿಯವರು ಹೇಳಿರುವಂತೆ ನನ್ನ ತಿಂಮನಿಗೂ ಡಿ.ವಿ.ಜಿ.ಯವರ ತಿಮ್ಮನಿಗೂ ಕೇವಲ ಹೊರ ಹೋಲಿಕೆ ಅಷ್ಟಿಷ್ಟು

  ಇರಬಹುದಾದರೂ, ನಮ್ಮಿಬ್ಬರಲ್ಲಿ ಅಜಗಜಾಂತರವಿದೆ. ಗುಂಡಪ್ಪನವರ ತಿಮ್ಮ ಸೂರ್ಯ, ನನ್ನ ತಿಂಮ ‘ಬೆಡ್‌ಲ್ಯಾಂಪ್’.

  7) ಬಿಚೀಯವರನ್ನು ಮಂತ್ರಮುಗ್ದಗೊಳಿಸಿದ ಕೃತಿ ಯಾವುದು? (2018)

  – ಜಿ. ಪಿ. ರಾಜರತ್ನಂ ಅವರ ‘ರತ್ನನ ಪದಗಳು’ ಎಂಬ ಕೃತಿಯು ಬಿಚೀಯವರನ್ನು ಮಂತ್ರಮುಗ್ದಗೊಳಿಸಿತು.

  ಆ) ಕೆಳಗಿನ ಪ್ರಶ್ನೆಗಳಿಗೆ ಮೂರು/ನಾಲ್ಕು ವಾಕ್ಯಗಳಲ್ಲಿ ಉತ್ತರ ಬರೆಯಿರಿ.

  1) ಪುಸ್ತಕ ಪ್ರಪಂಚವು ನನ್ನ ಆತ್ಮಚರಿತ್ರೆಯಲ್ಲಿ ಅತಿ ಮುಖ್ಯವಾದ ಭಾಗ ಎಂದು ಬೀಚಿಯವರು ಏಕೆ ಹೇಳಿದ್ದಾರೆ?

  – ಬೀಚಿಯವರು ನನ್ನ ಆತ್ಮಚರಿತ್ರೆಯಲ್ಲಿ ಅತಿ ಮುಖ್ಯವಾದ ಭಾಗವೇ ಪುಸ್ತಕ ಪ್ರಪಂಚವೆ೦ದು ಹೇಳಿದ್ದಾರೆ. ಪುಸ್ತಕ ಪ್ರಪಂಚವಿಲ್ಲದ ನನ್ನ ಪ್ರಪಂಚ ಬರಡು, ಸಹಾರಾ ಮರುಭೂಮಿ. ನನ್ನ ಜೀವಾಳವೇ ಪುಸ್ತಕವಾಗಿರುವಾಗ ಪುಸ್ತಕವಿಲ್ಲದ ಬೀಚಿ ಜೀವವಿಲ್ಲದ ದೇಹವಿದ್ದಂತೆ. ರೆಡಿಮೇಡ್ ಅಂಗಡಿಯ ಮುಂದೆ ನಿಂತಿರುವ ಚೆಂದದ ಬೊಂಬೆಯ೦ತೆ ಎಂದು ಬೀಚಿಯವರು ಹೇಳಿದ್ದಾರೆ.

  2) ಹೈಸ್ಕೂಲ್‌ನ ಗ್ರಂಥಾಲಯದಲ್ಲಿದ್ದ ಪುಸ್ತಕಗಳು ಬೀಚಿಯವರ ಮೇಲೆ ಯಾವ ಪ್ರಭಾವವನ್ನು ಬೀರಲಿಲ್ಲ. ಏಕೆ? (2018)

  – ಬೀಚಿಯವರು ಕಲಿತ ಹೈಸ್ಕೂಲಿನಲ್ಲಿ ಒಂದು ಗ್ರಂಥಾಲಯವಿತ್ತು. ಸರಸ್ವತಿ ಪೂಜೆಯ ದಿನದಂದು ಮಾತ್ರ ಅದರ

  ದರ್ಶನವಾಗುತ್ತಿತ್ತು. ಬೀಗ ಹಾಕಿದ ಆ ಪುಸ್ತಕಗಳ ಕಪಾಟುಗಳಿಗೆ ಅರಿಸಿನ, ಕುಂಕುಮ ಹಚ್ಚಿ, ಪೂಜೆ ಆರತಿ ಮಾಡಿ, ತಂಗಿನಕಾಯಿ ಒಡೆದು, ಚರುಪು ಮಾತ್ರ ತಿನ್ನಲು ಸಿಗುತ್ತಿತ್ತು. ಆದರೆ, ಪುಸ್ತಕಗಳು ಮಾತ್ರ ಓದಲು ಸಿಗುತ್ತಿರಲಿಲ್ಲ. ಆ ಕಾರಣದಿಂದಾಗಿ ಬೀಚಿಯವರ ಮೇಲೆ ಹೈಸ್ಕೂಲಿನ ಗ್ರಂಥಾಲಯದೊಳಗಿರುವ ಪುಸ್ತಕಗಳು ಯಾವ ಪ್ರಭಾವವನ್ನೂ ಬೀರಲಿಲ್ಲ.

  3) ಈಗಿನ ವಿದ್ಯಾರ್ಥಿಗಳು ಪುಣ್ಯವಂತರು ಎಂದು ಬೀಚಿಯವರು ಹೇಳಲು ಕಾರಣವೇನು?

  – ಈಗಿನ ವಿದ್ಯಾರ್ಥಿಗಳು ಬಹಳ ಪುಣ್ಯವಂತರು ಯಾಕೆಂದರೆ ನರ್ಸರಿ ಕ್ಲಾಸಿನಲ್ಲಿಯ ಪುಸ್ತಕಕ್ಕೇ ನೋಟ್ಸಗಳು ಬಂದಿವೆ. ಆ

  ನೋಟ್ಸಗಳಿಗೆ ಡೈಜಿಸ್ಟ್ ಇವೆ. ಆದರೆ ಆಗ ನಮಗೆ ಪಠ್ಯ ಪುಸ್ತಕವೇ ಗತಿಯಾಗಿತ್ತು. ಹೀಗಾಗಿ ಈಗಿನ ವಿದ್ಯಾರ್ಥಿಗಳಿಗೆ ಪಠ್ಯ

  ಪುಸ್ತಕದೊಂದಿಗೆ ಓದಲು ಪೂರಕವಾದ ಬೇರೆ ಬೇರೆ ಪುಸ್ತಕಗಳಿವೆ. ಆದ್ದರಿಂದ ಈಗಿನ ವಿದ್ಯಾರ್ಥಿಗಳು ಪುಣ್ಯವಂತರು ಎಂದು

  ಬೀಚಿಯವರು ಹೇಳಿದ್ದಾರೆ.

  4) ಯಾವುದಾದರು ಒಂದು ಕನ್ನಡ ಕತೆ ಪುಸ್ತಕವನ್ನು ಕೊಡುವಂತೆ ಬೀಚಿಯವರು ಗೋವಿಂದರಾಯರನ್ನು ಏಕೆ ಕೇಳಿದರು?

  – ಒಂದು ದಿನ ಬೀಚಿಯವರು ಪತ್ನಿಯೊಂದಿಗೆ ವಾಕಿಂಗ್ ಹೋಗುತ್ತಿದ್ದಾಗ ಸಾಹಿತ್ಯ ಭಂಡಾರದತ್ತ ಬೆರಳು ತೋರಿಸಿ, ಇದೇ ನನ್ನ ಆಫೀಸು. ಈ ಪುಸ್ತಕದಂಗಡಿಯಲ್ಲೇ ಹೆಚ್ಚು ಕಾಲ ಕಳೆಯುತ್ತೇನೆ ಎಂದು ಹೇಳಿದ್ದರು. ಇದನ್ನು ನೆನಪಿನಲ್ಲಿಟ್ಟುಕೊಂಡಿದ್ದ ಅವರ ಪತ್ನಿ ಒಂದು ದಿನ ಮಧ್ಯಾಹ್ನದ ವೇಳೆ ಕಳೆಯುವುದು ಬಹಳ ಕಷ್ಟವಾಗುತ್ತಿದೆ. ಯಾವುದಾದರೂ ಒಂದು ಕನ್ನಡ ಪುಸ್ತಕ

  ತಂದುಕೊಡುವ೦ತೆ ಕೇಳಿದಾಗ ಬೀಚಿಯವರು ತನ್ನ ಹೆಂಡತಿಗಾಗಿ ಒಂದು ಕನ್ನಡ ಪುಸ್ತಕ ಕೊಡುವಂತೆ ಗೋವಿಂದರಾಯರನ್ನು ಕೇಳಿದರು.

  5) ‘ವಿಶ್ವಾಮಿತ್ರ ಸೃಷ್ಟಿ’ಯು ಬೀಚಿಯವರ ಮೇಲೆ ಬೀರಿದ ಪ್ರಭಾವವೇನು?

  – ಬೀಚಿಯವರ ಸಹೋದರ ಪ್ರೊ.ಜಹಗೀರ್‌ದಾರ್‌ರವರು ‘ವಿಶ್ವಾಮಿತ್ರ ಸೃಷ್ಟಿ’ಯ ಎರಡು ಸಂಪುಟಗಳನ್ನು ತಂದುಕೊಟ್ಟರು. ಅವು ಬೀಚಿಯವರನ್ನು ಬಹುಬೇಗ ಸೆರೆ ಹಿಡಿದವು. ಜಹಗೀರ್‌ದಾರರ ಆ ಮಾತಿನ ಚಮತ್ಕಾರ, ವಿಚಾರ ಮಂಡನೆ, ಕಲಾಕುಶಲತೆಗೆ ಬಿಚೀ ಮಾರು ಹೋದರು. ರಾಯರು ಬೀಚಿಯವರ ಹೃದಯವನ್ನು ಗೆದ್ದರು. ಈ ಎರಡು ಪುಸ್ತಕಗಳು ಬೀಚಿಯವರ ಮೇಲೆ ತುಂಬಾ ಪ್ರಭಾವ ಬೀರಿದವು.

  ಇ) ಕೆಳಗಿನ ಪ್ರಶ್ನೆಗಳಿಗೆ ಏಳು/ಎಂಟು ವಾಕ್ಯಗಳಲ್ಲಿ ಉತ್ತರ ಬರೆಯಿರಿ.

  1) ಜಿ. ಪಿ. ರಾಜರತ್ನಂ ಅವರ ‘ರತ್ನನ ಪದಗಳು’ ಕೃತಿಯ ಕುರಿತು ಬೀಚಿ ಮತ್ತು ಅ.ನ.ಕೃ. ಅವರ ಅಭಿಪ್ರಾಯವೇನು?

  – ಜಿ. ಪಿ. ರಾಜರತ್ನಂ ಅವರ ‘ರತ್ನನ ಪದಗಳು’ ಕೃತಿಯ ಕುರಿತು ಮಾತನಾಡುತ್ತಿದ್ದಾಗ ಅ.ನ.ಕೃ.ರವರು ಹೀಗೆ ಅಭಿಪ್ರಾಯ

  ಪಟ್ಟಿದ್ದಾರೆ. (ಕನ್ನಡದಲ್ಲಿ ಅದೊಂದು ಬೃಹತ್ ಕೃತಿ) ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ಬೀಚಿಯವರು ರಾಜರತ್ನಂ ಅವರ ‘ರತ್ನನ ಪದಗಳು’ ನನ್ನ ಮೇಲೆ ಅತ್ಯಂತ ಪ್ರಭಾವ ಬೀರಿವೆ ಎಂದು ಹೇಳಿ, ಅವರ ಗೆಳೆಯರಾದ ಕಾಳಿಂಗರಾಯರು ಸಭೆ ಸಮಾರಂಭಗಳಲ್ಲಿ ಇವನ್ನು ಹಾಡುವಾಗ ನನ್ನ ಮೈಮನ ಪುಳಿಕಿತಗೊಳ್ಳುತ್ತಿದ್ದವು ಎಂದು ಹೇಳಿದ್ದಾರೆ. ಜಿ.ಪಿ.ಯವರು ಇಂತಹ ಸಾಹಿತ್ಯವನ್ನು ಮುಂದುರಿಸಿದ್ದಿದ್ದರೆ ಕನ್ನಡ ಸಾಹಿತ್ಯಕ್ಕೆ ಎಂತಹ ಉಪಕಾರವಾಗುತ್ತಿತ್ತಲ್ಲಾ ಎಂಬ ಪೇಚಾಟವು ಬೀಚಿಯವರಲ್ಲಿದೆ. ಈ ರೀತಿಯಾಗಿ ಜಿ. ಪಿ.ರಾಜರತ್ನಂ ಅವರ ‘ರತ್ನನ ಪದಗಳು’ ಕುರಿತು ಬೀಚಿ ಹಾಗೂ ಅ.ನ.ಕೃ. ಅವರು ತಮ್ಮತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

  2) ಡಿ.ವಿ.ಜಿ. ಯವರ ‘ಮಂಕುತಿಮ್ಮನ ಕಗ್ಗ’ ಬೀಚಿಯವರಿಗೆ ಮೆಚ್ಚುಗೆ ಯಾಗಲು ಕಾರಣಗಳೇನು?

  – ಡಿ.ವಿ.ಜಿ. ಯವರ ‘ಮಂಕುತಿಮ್ಮನ ಕಗ್ಗ’ ದಲ್ಲಿ ಲೌಕಿಕವೂ ಇದೆ. ಪರಮಾರ್ಥಿಕವೂ ಇದೆ. ಎಂತಹ ಶುಷ್ಕ ವೇದಾಂತವನ್ನೂ

  ಶೃ೦ಗಾರದಷ್ಟು ಸ್ವಾರಸ್ಯಕರವಾಗಿ ಡಿ.ವಿ.ಜಿ.ಯವರು ತಮ್ಮ ಈ ಕೃತಿಯಲ್ಲಿ ತಿಳಿಸಿದ್ದಾರೆ. ಉಪಮಾನಗಳಂತೂ ಚಿಕ್ಕಮಕ್ಕಳಿಗೂ ಅರ್ಥವಾಗುವಷ್ಟು ಸಾಮಾನ್ಯ ಭಾಷೆಯಲ್ಲಿದೆ. ಬೀಚಿಯವರು ‘ಅಂದನಾ ತಿಂಮ’ ಬರೆಯಲು ಡಿ.ವಿ.ಜಿ.ಯವರ ಮಂಕುತಿಮ್ಮನೇ ಕಾರಣ. ಮಂಕುತಿಮ್ಮನ ಕಗ್ಗದಲ್ಲಿ ರಾಜ್ಯದ ರಾಜಕಾರಣದ ಕೂಡಾ ಪ್ರಸ್ತಾಪವಿದೆ. ಇಲ್ಲಿ ಬೀಚಿಯವರ ತಿಂಮನಿಗೂ ಡಿ.ವಿ.ಜಿ.ಯವರ ತಿಮ್ಮನಿಗೂ ಕೇವಲ ಹೋಲಿಕೆ ಇದೆಯೇ ಹೊರತು ಎರಡಕ್ಕೂ ಅಜಗಜಾಂತರವಿದೆ. ಗುಂಡಪ್ಪನವರ ತಿಮ್ಮ ಸೂರ್ಯನಾದರೆ ಬೀಚಿಯವರ ತಿಂಮ ‘ಬೆಡ್ ಲ್ಯಾಂಪ್’ ಎಂದು ಹೋಲಿಕೆ ಮಾಡಿ ಬೀಚಿಯವರು ಡಿ.ವಿ.ಜಿ.ಯವರ ‘ಮಂಕುತಿಮ್ಮನ ಕಗ್ಗ’ ಕೃತಿಯ ಬಗೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

  3) ಶಂ. ಬಾ. ಜೋಶಿಯವರ ‘ಯಕ್ಷಪ್ರಶ್ನೆ’ ಬೀಚಿಯವರ ಮನಸ್ಸನ್ನು ಸೂರೆಗೊಂಡಿತು ಏಕೆ?

  – ಬೀಚಿಯವರು ಓದಿದ ನಾಲ್ಕನೇ ಪುಸ್ತಕ ಶಂ.ಬಾ.ಜೋಶಿಯವರ ‘ಯಕ್ಷಪ್ರಶ್ನೆ’ ಹಳೆಯ ಪೌರಾಣಿಕ ಕಥೆಯನ್ನು ಹೊಸ ಕಣ್ಣಿನಿಂದ ನೋಡುವ ಅವರ ಸಂಶೋಧನಾ ಪದ್ಧತಿ ಕನ್ನಡಿಗರಲ್ಲಿ ಅಸದೃಶ್ಯ. ಹೊರ ನೋಟಕ್ಕೆ ಕೇವಲ ಗೊಡ್ಡು ಕತೆಗಳಾಗಿ ಕಾಣುವ ನಮ್ಮ  ಧರ್ಮಗ್ರಂಥಗಳಲ್ಲಿ ಬರುವ ಕಥೆ, ಉಪಕಥೆಗಳಿಗೆ ಜೋಶಿಯವರು ಕೊಡುವ ಅರ್ಥ ಕನ್ನಡಕ್ಕೆ ಹೊಸದು. ಅಂದಿನ ಯಕ್ಷಪ್ರಶ್ನೆಯ ಕಥೆ ನಮಗಿಂದು ಬರಲಿರುವ ಸಮಾಜದ ದರ್ಶನವನ್ನು ಮಾಡಿಸುತ್ತದೆ. ಹೀಗಾಗಿ ಶಂ.ಬಾ.ಜೋಶಿಯವರ ‘ಯಕ್ಷಪ್ರಶ್ನೆ’ ಕೃತಿಯು ಬೀಚಿಯವರ ಮನಸ್ಸನ್ನು ಸೂರೆಗೊಂಡಿತು.

  ಈ) ಕೆಳಗಿನ ಹೇಳಿಕೆಯ ಸಂದರ್ಭವನ್ನು ಸ್ವಾರಸ್ಯ ಸಹಿತ ವಿವರಿಸಿರಿ.

  1) “ಭಾಳ ಭೇಷ್ ಅದರೀ ಪುಸ್ತಕ. ನೀವೂ ಓದಬೇಕು ಇದನ್ನೊಮ್ಮೆ.”

  – ಪಾಠದ ಹೆಸರು: ನನ್ನ ಪುಸ್ತಕ ಪ್ರಪಂಚ

  ಲೇಖಕರ ಹೆಸರು: ಬೀಚಿ

  ಸಂದರ್ಭ: ಬೀಚಿಯವರ ಹೆಂಡತಿ ಈ ಮಾತನ್ನು ಬೀಚಿಯವರಿಗೆ ನುಡಿದಿದ್ದಾರೆ.

  ವಿವರಣೆ: ಬೀಚಿಯವರ ಹೆಂಡತಿಗೆ ಮಧ್ಯಾಹ್ನದ ವೇಳೆ ಕಳೆಯೋದು ಕಷ್ಟವಾಗುತ್ತಿತ್ತು. ಆ ಕಾರಣ ಅವರು ಬೀಚಿಯವರಿಗೆ

  ಯಾವುದಾದರೂ ಒಂದು ಕನ್ನಡ ಪುಸ್ತಕ ಓದಲು ತಂದುಕೊಡಿ ಎಂದು ಕೇಳಿಕೊಂಡಿದ್ದರು. ಬೀಚಿ ‘ಸಂಧ್ಯಾರಾಗ’ ಪುಸ್ತಕ

  ತಂದುಕೊಟ್ಟಿದ್ದರು. ಅದನ್ನು ಓದಿದ ನಂತರ ಬೀಚಿಯವರ ಹೆಂಡತಿ ಬೀಚಿಯವರಿಗೆ ಈ ಮೇಲಿನ ಮಾತನ್ನು ನುಡಿದಿದ್ದರು.

  2) “ದಯವಿಟ್ಟು ಇದನ್ನು ಓದಿ.”

  – ಪಾಠದ ಹೆಸರು: ನನ್ನ ಪುಸ್ತಕ ಪ್ರಪಂಚ

  ಲೇಖಕರ ಹೆಸರು: ಬೀಚಿ

  ಸಂದರ್ಭ: ಬೀಚಿಯವರು ನಮ್ಮನ್ನು ಉದ್ದೇಶಿಸಿ ಈ ಮಾತನ್ನು ನುಡಿದಿದ್ದಾರೆ.

  ವಿವರಣೆ: ಶಂ.ಬಾ.ಜೋಶಿಯವರ ‘ಯಕ್ಷಪ್ರಶ್ನೆ’ ಕೃತಿ ಬೀಚಿಯವರ ಮನಸ್ಸನ್ನು ಸೂರೆಗೊಂಡಿತು. ಹಳೆಯ ಪೌರಾಣಿಕ ಕಥೆಯನ್ನು ಹೊಸ ಕಣ್ಣಿನಿಂದ ನೋಡುವ ಅವರ ಸಂಶೋಧನಾ ಪದ್ಧತಿ ಕನ್ನಡಿಗರಲ್ಲಿ ಅಸದೃಶ್ಯ. ಹೀಗಾಗಿ ಆ ಕೃತಿಯನ್ನು ನಾವು ಓದಲೇಬೇಕೆಂದು ಬೀಚಿಯವರು ಹೇಳಿದ್ದಾರೆ.

  3) “ನೀವು ದಯಮಾಡಿ ಇದನ್ನು ಓದಿ ನಿಮ್ಮ ಅಭಿಪ್ರಾಯವನ್ನು ಹೇಳಿ.”

  – ಪಾಠದ ಹೆಸರು: ನನ್ನ ಪುಸ್ತಕ ಪ್ರಪಂಚ

  ಲೇಖಕರ ಹೆಸರು: ಬೀಚಿ

  ಸಂದರ್ಭ: ಲೇಖಕರ ಕಿರಿಯ ಮಗ ಲೇಖಕರಿಗೆ ಈ ಮಾತನ್ನು ನುಡಿದಿದ್ದಾರೆ.

  ವಿವರಣೆ: ಬೀಚಿಯವರ ಕಿರಿಯ ಮಗ ಪಾಪಣ್ಣಿ ಬೀಚಿಯವರ ಮೇಜಿನ ಮೇಲೆ ಕೆ.ವಿ.ಅಯ್ಯರ್ ಅವರ ‘ರೂಪದರ್ಶಿ’ ಪುಸ್ತಕವನ್ನು

  ಇಟ್ಟಿದ್ದರು. ಸಂಜೆ ಹೊತ್ತು ಬೀಚಿಯವರು ಆಫೀಸಿನಿಂದ ಮನೆಗೆ ಬಂದಾಗ ಪಾಪಣ್ಣಿಯವರು ಈ ಮೇಲಿನ ಮಾತನ್ನು

  ಬೀಚಿಯವರಿಗೆ ನುಡಿದಿದ್ದರು.

  4) “ಇಂತಹ ಮನೋಜ್ಞವಾದ ಕೃತಿಯಿಂದ ಯಾರೂ ಸ್ಪೂರ್ತಿಯನ್ನು ಪಡೆಯಬಹುದು.”

  – ಪಾಠದ ಹೆಸರು: ನನ್ನ ಪುಸ್ತಕ ಪ್ರಪಂಚ

  ಲೇಖಕರ ಹೆಸರು: ಬೀಚಿ

  ಸಂದರ್ಭ: ಬೀಚಿಯವರು ಡಿ.ವಿ.ಜಿ ಹಾಗೂ ಜಿ.ಪಿ.ಯವರ ಕೃತಿಗಳ ಬಗೆಗೆ ಹೇಳುವಾಗ ಈ ಮಾತನ್ನು ನುಡಿದಿದ್ದಾರೆ.

  ವಿವರಣೆ: ಬೀಚಿಯವರು ಡಿ.ವಿ.ಜಿ.ಯವರ ‘ಮಂಕುತಿಮ್ಮನ ಕಗ್ಗ’ ಹಾಗೂ ಜಿ.ಪಿ. ರಾಜರತ್ನಂ ಅವರ ‘ರತ್ನನ ಪದಗಳು’ ಈ

  ಎರಡೂ ಕೃತಿಗಳನ್ನು ಓದಿ ಅವುಗಳಿಂದ ಸ್ಪೂರ್ತಿ ಪಡೆದು ಈ ಮೇಲಿನ ಮಾತನ್ನು ನುಡಿದಿದ್ದಾರೆ.

  5) “ಓದಬೇಕಾದುದು ಬಹಳ ಜಾಸ್ತಿ ಇದೆ. ಆಯುಷ್ಯ ಮಾತ್ರ ಬಹಳ ಕಡಿಮೆ ಇದೆ.”

  – ಪಾಠದ ಹೆಸರು: ನನ್ನ ಪುಸ್ತಕ ಪ್ರಪಂಚ

  ಲೇಖಕರ ಹೆಸರು: ಬೀಚಿ

  ಸಂದರ್ಭ: ಬೀಚಿಯವರು ಪುಸ್ತಕಗಳ ಬಗೆಗೆ ತಮ್ಮ ಅಭಿಪ್ರಾಯ ತಿಳಿಸುತ್ತ ಈ ಮಾತನ್ನು ನುಡಿದಿದ್ದಾರೆ.

  ವಿವರಣೆ: ಬೀಚಿಯವರು ತಾನಿನ್ನೂ ಓದದೇ ಇರುವ ಇನ್ನೂ ಅನೇಕ ಪುಸ್ತಕಗಳಿವೆ ಎಂದು ಹೇಳಿದ್ದಾರೆ. ತಾವು ಶಿವರಾಂ ಕಾರಂತರ ‘ಮರಳಿ ಮಣ್ಣಿಗೆ’ ಪುಸ್ತಕ ಓದಬೇಕಾಗಿದೆ ಎಂದು ಹೇಳುತ್ತ ಈ ಮೇಲಿನ ಮಾತನ್ನು ನುಡಿದಿದ್ದಾರೆ.

  ಉ) ಬಿಟ್ಟಿರುವ ಪದಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿರಿ.

  1) ‘ಸಂಧ್ಯಾರಾಗ’ದ ಕರ್ತೃ ಅ. ನ. ಕೃಷ್ಣರಾಯರು.

  2) ‘ಅಂದನಾ ತಿಂಮ’ ಸೃಷ್ಟಿಗೆ ಕಾರಣವಾದಕೃತಿ ಡಿ.ವಿ.ಜಿ.ಯವರ ಮಂಕುತಿಮ್ಮ.

  3) ‘ವಿಶ್ವಾಮಿತ್ರ ಸೃಷ್ಟಿ’ಯನ್ನು ಬೀಚಿಯವರಿಗೆ ತಂದುಕೊಟ್ಟವರು ಅವರಣ್ಣ.

  4) ಬೀಚಿಯವರು ಓದಲು ಇನ್ನೂ ಆಗಿಲ್ಲವೆಂದು ಹೇಳಿರುವ ಶಿವರಾಂ ಕಾರಂತರ ಕೃತಿ ‘ಮರಳಿ ಮಣ್ಣಿಗೆ’.

  5) ಗುಂಡಪ್ಪನವರ ತಿಮ್ಮ ಸೂರ್ಯ, ಬೀಚಿಯವರ ತಿಂಮ ಬೆಡ್‌ಲ್ಯಾಂಪ್.

  ಭಾಷಾಭ್ಯಾಸ–

  ಅ) ಕೆಳಗಿನ ಪದಗಳಿಗೆ ತತ್ಸಮ-ತದ್ಭವಗಳನ್ನು ಬರೆಯಿರಿ.

  ಪುಸ್ತಕ – ಹೊತ್ತಿಗೆ

  ಸಂಧ್ಯಾ – ಸಂಜೆ ದೃಷ್ಟಿ – ದಿಟ್ಟಿ

  ರತ್ನ–ರತುನ, ರನ್ನ

  ದರ್ಶನ–ದರುಶನ

   ನಿತ್ಯ – ನಿತುನ

  ರಾಯ–ರಾಜ

  ಶೃಂಗಾರ – ಸಿಂಗಾರ ಸಿರಿಶ್ರೀ

  ಆ) ಕೆಳಗಿನ ಪದಗಳನ್ನು ಬಿಡಿಸಿ ಬರೆದು, ಸಂಧಿಯ ಹೆಸರನ್ನು ತಿಳಿಸಿರಿ.

  ಅತಿ+ಅಂತ್ಯ=ಅತ್ಯ೦ತ (ಯಣ್ ಸಂಧಿ)

  ಸರ್ವ+ಅರ್ಪಣ=ಸರ್ವಾರ್ಪಣ (ಸ. ದೀ. ಸಂ)

  ಅಜಗಜ+ಅಂತರ=ಅಜಗಜಾ೦ತರ (ಸ. ದೀ. ಸಂ.)

   ಗ್ರಂಥ+ಆಲಯ=ಗ್ರ೦ಥಾಲಯ (ಸ. ದೀ. ಸಂ)

  ತಲೆ+ಅನ್ನು=ತಲೆಯನ್ನು (ಯಕಾರಾಗಮ ಸಂಧಿ)

  ಸ್ಪೂರ್ತಿ+ಅನ್ನು=ಸ್ಪೂರ್ತಿಯನ್ನು (‘ಯ’ಕಾರಾಗಮ ಸಂಧಿ)

  ಹೃದಯ+ಅನ್ನು=ಹೃದಯವನ್ನು (‘ವ’ಕಾರಾಗಮ ಸಂಧಿ)

   ಒಳ್ಳೆ+ಒಳ್ಳೆ=ಒಳ್ಳೊಳ್ಳೆ (ಲೋಪ ಸಂಧಿ)

  ಇ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.

  ಮಾನ x ಅವಮಾನ, ಅಪಮಾನ

  ಅಕ್ಷಮ್ಯ x ಕ್ಷಮ್ಯ ಸತ್ಯ x ಅಸತ್ಯ

  ಪುಣ್ಯ x ಪಾಪ ಮುಖ್ಯ x ಅಮುಖ್ಯ

  ಈ) ಕೆಳಗಿನ ನುಡಿಗಟ್ಟುಗಳ ಅರ್ಥವನ್ನು ತಿಳಿದು, ಸ್ವಂತ ವಾಕ್ಯದಲ್ಲಿ ಬಳಸಿರಿ.

  1) ಅಜಗಜಾಂತರ: ಅರ್ಥ- ಆಡಿಗೂ ಆನೆಗೂ ಇರುವ ವ್ಯತ್ಯಾಸ.

  ಹಿಂದಿನ ಕಾಲದ ವೈದ್ಯಕೀಯ ವ್ಯವಸ್ಥೆ ಇಂದಿನ ಕಾಲದ ವೈದ್ಯಕೀಯ ವ್ಯವಸ್ಥೆಗಳಲ್ಲಿ ಅಜಗಜಾಂತರ ವ್ಯತ್ಯಾಸವಿದೆ.

  2) ತವುಡುಕುಟ್ಟು: ಅರ್ಥ- ವ್ಯರ್ಥವಾದ ಆಲಾಪ.

  ಇಂದಿನ ಕಾಲೇಜು ವಿದ್ಯಾರ್ಥಿಗಳಲ್ಲಿ ಅಭ್ಯಾಸದ ಚರ್ಚೆಗಿಂತ ತವುಡುಕುಟ್ಟುವುದೇ ಹೆಚ್ಚಾಗಿ ಕಂಡು ಬರುತ್ತದೆ.

  3) ದುಂಬಾಲು ಬೀಳು: ಅರ್ಥ- ಹಿಂದೆ ಬಿದ್ದು ಒತ್ತಾಯ ಮಾಡು.

  ಬೀದಿಯಲ್ಲಿ ಕೆಲವು ಮಾರಾಟಗಾರರು ಗ್ರಾಹಕರು ಸಾಹಿತ್ಯ ಕೊಳ್ಳುವತನಕ ದುಂಬಾಲು ಬೀಳುತ್ತಾರೆ.

  4) ಮಂತ್ರಮುಗ್ಧನಾಗು: ಅರ್ಥ- ಮಂತ್ರದ ಪ್ರಯೋಗದಿಂದ ಮರುಳಾಗುವನು.

  ಶಿವತಾಂಡವ ಮಂತ್ರವು ಎಂತಹವರನ್ನೂ ಮಂತ್ರಮುಗ್ಧನನ್ನಾಗಿ ಮಾಡುತ್ತದೆ.

  5) ಸೆರೆಹಿಡಿ: ಅರ್ಥ- ಹಿಡಿತದಲ್ಲಿಡುವುದು.

  ‘ಸತ್ಯಹರಿಶ್ಚಂದ್ರ’ ನಾಟಕವು ಮಹಾತ್ಮಾಗಾಂಧೀಜಿಯವರ ಮನಸ್ಸನ್ನು ಸೆರೆಹಿಡಿಯಿತು.

  ಪದ್ಯ – 12. ಜನಪದ ಗೀತೆ.

  * ಜನಪದ ಸಾಹಿತ್ಯ *

  ಕನ್ನಡ ನಾಡಿನ ಅಜ್ಞಾತ ಕವಿಗಳಿಂದ ರಚಿತವಾದ ಸಾಹಿತ್ಯವೇ ಜನಪದ ಸಾಹಿತ್ಯ. ಈ ಸಾಹಿತ್ಯವು ಜನರ ಬಾಯಿಂದ

  ಬಾಯಿಗೆ ಹರಿದು ಬಂದಿದೆ. ಹಳ್ಳಿಗರು ತಮ್ಮ ದಿನನಿತ್ಯದ ಬದುಕಿನಲ್ಲಿ ತಮ್ಮ ದುಃಖ ದುಮ್ಮಾನಗಳನ್ನು, ಆಸೆ ಆಕಾಂಕ್ಷೆಗಳನ್ನು

  ದೈನ೦ದಿನ ಬದುಕಿನ ಅನುಭವಗಳನ್ನು ಈ ಹಾಡಿನ ಮೂಲಕ ಅಭಿವ್ಯಕ್ತಿಗೊಳಿಸಿದ್ದಾರೆ. ಜನಪದ ಗೀತೆಗಳು ಇಡೀ ಜನಾಂಗದ

  ಸ೦ಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ.

  ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ.

  1) ರೈತನು ಮಳೆಯನ್ನು ಏನೆಂದು ಕರೆದಿದ್ದಾನೆ?

  – ರೈತನು ಮಳೆಯನ್ನು ಅಪ್ಪ, ರಕ್ಷಕನೆಂದು ಕರೆದಿದ್ದಾನೆ.

  2) ರೈತನಿಗೆ ಮೋಡಗಳು ಹೇಗೆ ಕಾಣುತ್ತಿದ್ದವು?

  – ರೈತನಿಗೆ ಮೋಡಗಳು ಗೋಡೆಗೆ ಕಪ್ಪು ಬಣ್ಣ ಬಳಿದಂತೆ ಕಾಣುತ್ತಿದ್ದವು.

  3) ಎಲ್ಲಿ ಹೆಚ್ಚು ಮಳೆ ಸುರಿಯಬೇಕೆಂದು ರೈತನು ಕೇಳುತ್ತಾನೆ?

  – ಬೆಟ್ಟದ ಮೇಲೆ ಮಳೆ ಜಾಸ್ತಿ ಸುರಿಯಬೇಕೆಂದು ರೈತನು ಮಳೆರಾಯನಲ್ಲಿ ಕೇಳುತ್ತಾನೆ.

  4) ಯಾವ ಮಳೆ ಸುರಿದರೆ ಕೆರೆಗಳು ತುಂಬುತ್ತವೆ?

  – ಸ್ವಾತಿ ನಕ್ಷತ್ರದ ಮಳೆ ಸುರಿದರೆ ಕೆರೆಗಳು ತುಂಬುತ್ತವೆ.

  ಆ) ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳ ಉತ್ತರ ಬರೆಯಿರಿ.

  1) ರೈತನು ದನಕರಗಳು ಹೇಗಾಗಿವೆ ಎಂದು ಮಳೆರಾಯನಲ್ಲಿ ನಿವೇದಿಸುತ್ತಾನೆ? (2018)

  – ಮಳೆಯಿಲ್ಲದ ಕಾರಣ ಭೂಮಿ ಒಣಗಿ ಬರಡಾಗಿದೆ. ದನಕರುಗಳಿಗೆ ತಿನ್ನಲು ಮೇವಿಲ್ಲ, ಕುಡಿಯಲು ನೀರಿಲ್ಲದ ಕಾರಣ ಅವೆಲ್ಲ

  ಸೊರಗಿ ದಂಟಿನ೦ತಾಗಿವೆ ಎಂದು ರೈತ ದನಕರುಗಳ ಬಗೆಗೆ ಮಳೆರಾಯನಲ್ಲಿ ನವೇದಿಸುತ್ತಾನೆ.

  2) ಮೋಡಗಳು ಕಾಣಿಸಿಕೊಂಡಾಗ ರೈತನಿಗಾದ ಸಂತೋಷವೇನು? (2018)

  – ಮೂಡಣ ದಿಕ್ಕಿನಲ್ಲಿ ಮೋಡಗಳು ಕಾಣಿಸಿಕೊಂಡಾಗ ರೈತ ಸಂತಸಪಡುತ್ತ, ತನ್ನ ರೈತ ಬಾಂಧವರನ್ನೆಲ್ಲಾ ಕರೆದು, ‘ಅಲ್ಲಿ ನೋಡಿ ಆಕಾಶದಲ್ಲಿ ಮೋಡಗಳ ಚೆಂದವ, ಗೋಡೆಗೆ ಕಪ್ಪ ಬಣ್ಣ ಬಳಿದಂತೆ ಕಾಣುತ್ತವೆ.’ ಎಂದು ಹೇಳುತ್ತ ರೈತ ಸಂತಸಪಡುತ್ತಾನೆ.

  3) ಸ್ವಾತಿ ಮಳೆ ಸುರಿದಾಗ ರೈತನಿಗಾಗುವ ಲಾಭಗಳೇನು?

  – ಸ್ವಾತಿ ಮಳೆ ಸುರಿದರೆ ಸಾವಿರಾರು ಕೆರೆಗಳು ತುಂಬುತ್ತವೆ. ಇದರಿಂದ ರೈತನ ಹೊಲಗದ್ದೆಗಳಿಗೆ ಕೃಷಿ ಕೆಲಸಕ್ಕೆ ಬೇಕಾದಷ್ಟು ನೀರು ಸಿಗುತ್ತದೆ. ಕುಣಿಗಲು ಕೆರೆಯಲ್ಲಿ ಕುಚ್ಚಲ ಮೀನುಗಳ ಸಂತತಿ ವೃದ್ಧಿಯಾಗುತ್ತದೆ. ಆ ಮೀನುಗಳ ಫಸಲವು ರೈತನಿಗೆ ತುಂಬಾ ಲಾಭ ನೀಡುತ್ತದೆ. ಹೀಗೆ ಸ್ವಾತಿ ಮಳೆ ಸುರಿದಾಗ ರೈತನಿಗೆ ಅನೇಕ ಬಗೆಯ ಲಾಭಗಳಾಗುತ್ತವೆ.

  ಇ) ಕೊಟ್ಟಿರುವ ಪ್ರಶ್ನೆಗಳಿಗೆ ಆರು-ಏಳು ವಾಕ್ಯಗಳ ಉತ್ತರಗಳನ್ನು ಬರೆಯಿರಿ.

  1) ಮಳೆದೇವರಲ್ಲಿ ರೈತನ ಪ್ರಾರ್ಥನೆಯೇನು?

  – ಮಳೆಯಿಲ್ಲದ ಭೂಮಿ ಬಾಡಿ ಬರಡಾಗಿದೆ. ದನಕರಗಳಿಗೆ ಮೇವು, ನೀರು ಸಿಗದಂತಾಗಿದೆ. ಅವೆಲ್ಲ ಸೊರಗಿ ದಂಟಿನ೦ತಾಗಿವೆ. ಆದ್ದರಿ೦ದ ಮಳೆರಾಯ ನೀ ಬಂದು ಕರುಣಿಸೋ ಎಂದು ರೈತ ಮಳೆರಾಯನಲ್ಲಿ ವಿನಂತಿಸಿಕೊಳ್ಳುತ್ತಾನೆ. ಪೂರ್ವ ದಿಕ್ಕಿನಲ್ಲಿ ಸೋನೆ ಮಳೆ ಸುರಿಯಲಿ, ಬೆಟ್ಟದ ಮೇಲೆ ಮಳೆ ಜಾಸ್ತಿ ಸುರಿಯಲಿ, ಕೆರೆ ನದಿ ಹಳ್ಳ ಕೊಳ್ಳಗಳೆಲ್ಲಾ ತುಂಬಿ ಕಲಕಲಗೊಳ್ಳಲಿ. ಇದರಿಂದಾಗಿ ದನಕರಗಳಿಗೆ ಹೊಲದಲ್ಲಿರುವ ಬೆಳೆಗೆ ಹೆಚ್ಚು ಅನುಕೂಲವಾಗುವಂತಾಗಲಿ ಎಂದು ರೈತ ಮಳೆದೇವರಲ್ಲಿ ಪ್ರಾರ್ಥಿಸುತ್ತಾನೆ.

  2) ‘ಜನಪದ ಗೀತೆ’ ಪದ್ಯದ ಸಾರಾಂಶವನ್ನು ನಿಮ್ಮ ಮಾತಿನಲ್ಲಿ ಬರೆಯಿರಿ.

  – ಮಳೆಯಿಲ್ಲದೆ ಭೂಮಿ ಬಾಡಿ ಬರಡಾಗಿದೆ. ದನಕರಗಳಿಗೆ ಮೇವು, ನೀರಿಲ್ಲದೆ ಅವು ಸೊರಗಿ ದಂಟಿನ೦ತಾಗಿವೆ. ಅಪ್ಪಾ

  ಮಳೆರಾಯ ನೀ ಬಂದು ನಮ್ಮೆಲ್ಲರನ್ನು ರಕ್ಷಿಸೋ ಎಂದು ರೈತ ಮಳೆರಾಯನಲ್ಲಿ ವಿನಂತಿಸುತ್ತಾನೆ. ಆಕಾಶದಲ್ಲಿ ಮೋಡಗಳು

  ಕಾಣಿಸಿಕೊಂಡಾಗ ರೈತ ತುಂಬಾ ಸಂತಸಪಡುತ್ತಾನೆ. ತನ್ನ ರೈತ ಬಾಂಧವರನ್ನು ಕರೆದು ಬನ್ನಿ! ನೋಡಿ ಪೂರ್ವದಲ್ಲಿ ಕಾಣುವ ಮೋಡದ ಚೆಂದವನ್ನು ಗೋಡೆಗೆ ಕಪ್ಪು ಬಣ್ಣ ಬಳಿದಂತೆ ಕಾಣುತ್ತವೆ ಎಂದು ಹೇಳಿ ಹರ್ಷ ಪಡುತ್ತಾನೆ. ಪೂರ್ವ ದಿಕ್ಕಿನಲ್ಲಿ ಸೋನೆ ಮಳೆ ಸುರಿಯಬೇಕು. ಬೆಟ್ಟದ ಮೇಲೆ ಜಾಸ್ತಿ ಮಳೆಯಾಗಬೇಕು. ಸಾತೆಯ ಮಳೆ ಸುರಿದು ಸಾವಿರಾರು ಕೆರೆ ನದಿಗಳು ತುಂಬಿ ಕುಣಿಗಲು ಕೆರೆಯಲ್ಲಿ ಮೀನುಗಳ ಸಂತತಿ ವೃದ್ಧಿಯಾಗಿ ಅವು ರೈತನಿಗೆ ಲಾಭ ನೀಡುವಂತಾಗಬೇಕು. ಎಂದು ರೈತ ಪರಿಪರಿಯಾಗಿ ಈ ಜನಪದ ಗೀತೆಯಲ್ಲಿ ಮಳೆರಾಯನನ್ನು ಕೇಳಿಕೊಳ್ಳುತ್ತಾನೆ.

  ಈ) ಕೆಳಗಿನ ಸಾಲುಗಳನ್ನು ಸ್ವಾರಸ್ಯ ಸಹಿತ ವಿವರಿಸಿರಿ.

  1) “ಗೋಡೆಗೆ ಕಪ್ಪ ಬಳಿದ್ಹಂಗೆ”

  – ಪದ್ಯದ ಹೆಸರು: ಜನಪದ ಗೀತೆ.

  ಜನಪದ ಗೀತೆಯಾಗಿರುವುದರಿಂದ ಕವಿಗಳ ಹೆಸರು ಇರುವುದಿಲ್ಲ.

  ಸಂದರ್ಭ: ಒಬ್ಬ ರೈತ ಈ ಮಾತನ್ನು ತನ್ನ ರೈತ ಬಾಂಧವರಿಗೆ ನುಡಿದಿದ್ದಾನೆ.

  ವಿವರಣೆ: ರೈತನ ಪ್ರಾರ್ಥನೆ ಕೇಳಿ ಆಕಾಶದಲ್ಲಿ ಕರಿ ಮೋಡಗಳು ಆವರಿಸುತ್ತವೆ. ಮಳೆರಾಯನ ಆಗಮನ ಕೆಲವು ಕ್ಷಣಗಳಲ್ಲಿ

  ಆಗುವುದೆಂದು ತಿಳಿದು ರೈತ ಹರ್ಷಗೊಂಡು ಈ ಮೇಲಿನ ಮಾತನ್ನು ತನ್ನ ರೈತ ಬಾಂಧವರಿಗೆ ನುಡಿಯುತ್ತಾನೆ.

  2) “ಜಗ್ಗಿಸಿ ಹುಯ್ಯೋ ಮಳೆರಾಯ”

  – ಪದ್ಯದ ಹೆಸರು: ಜನಪದ ಗೀತೆ.

  ಜನಪದ ಗೀತೆಯಾಗಿರುವುದರಿಂದ ಕವಿಗಳ ಹೆಸರು ಇರುವುದಿಲ್ಲ.

  ಸಂದರ್ಭ: ರೈತ ಈ ಮಾತನ್ನು ಮಳೆರಾಯನಲ್ಲಿ ಪ್ರಾರ್ಥಿಸುವಾಗ ನುಡಿದಿದ್ದಾನೆ.

  ವಿವರಣೆ: ರೈತ ಮಳೆರಾಯನಲ್ಲಿ ನೀ ಬಂದು ಬೇಗ ಕರುಣಿಸೋ ಎಂದು ಬೇಡಿಕೊಳ್ಳುತ್ತಾನೆ. ಪೂರ್ವ ದಿಕ್ಕಿನಲ್ಲಿ ಮುತ್ತಿನಂತಿರುವ

  ಸೋನೆ ಮಳೆಯಾಗಬೇಕು. ಬೆಟ್ಟದ ಮೇಲೆ ಜಾಸ್ತಿ ಮಳೆ ಸುರಿಯಬೇಕು ಎಂದು ಹೇಳುವ ಸಂದರ್ಭದಲ್ಲಿ ಈ ಮೇಲಿನ ಮಾತು

  ಬಂದಿದೆ.

  3) “ಸಾವಿರಾರು ಕೆರೆ ತುಂಬಿ”

  – ಪದ್ಯದ ಹೆಸರು: ಜನಪದ ಗೀತೆ.

  ಜನಪದ ಗೀತೆಯಾಗಿರುವುದರಿಂದ ಕವಿಗಳ ಹೆಸರು ಇರುವುದಿಲ್ಲ.

  ಸಂದರ್ಭ: ರೈತ ಸ್ವಾತಿ ನಕ್ಷತ್ರದ ಮಳೆಯ ಕುರಿತು ಹೇಳುವಾಗ ಈ ಮಾತನ್ನು ಹೇಳಿದ್ದಾನೆ.

  ವಿವರಣೆ: ಸ್ವಾತಿ ನಕ್ಷತ್ರದ ಮಳೆ ಸುರಿದರೆ ಸಾವಿರಾರು ಕೆರೆಗಳು ತುಂಬುತ್ತವೆ. ಕುಣಿಗಲು ಕೆರೆಯಲ್ಲಿ ಕುಚ್ಚಲ ಮೀನುಗಳ ಸಂತತಿ

  ವೃದ್ಧಿಯಾಗುತ್ತದೆ. ಆ ಮೀನುಗಳನ್ನು ರೈತ ಹಿಡಿದು ಮಾರಿ ಹಣ ಸಂಪಾದಿಸುತ್ತಾನೆ. ಇದಕ್ಕೆಲ್ಲಾ ಕಾರಣ ಸ್ವಾತಿ ನಕ್ಷತ್ರದ ಮಳೆ

  ಎಂದು ಹೇಳುತ್ತ ರೈತ ಈ ಮೇಲಿನ ಮಾತನ್ನು ಹೇಳಿದ್ದಾನೆ.

  * ಭಾಷಾಭ್ಯಾಸ *

  ಅ) ಕೆಳಗೆ ಕೊಟ್ಟಿರುವ ಪದಗಳನ್ನು ಬಿಡಿಸಿ, ಬರೆದು ಸಂಧಿಗಳನ್ನು ಹೆಸರಿಸಿರಿ.

  ಮೂಡಲು + ಆಗಿ = ಮೂಡಲಾಗಿ (ಲೋಪಸಂಧಿ)

   ಜೋತು + ಆಡು = ಜೋತಾಡು ( ಲೋಪಸಂಧಿ)

  ಈ) ಈ ಕೆಳಗಿನ ಪದ್ಯ ಭಾಗಗಳನ್ನು ಕಂಠಪಾಠ ಮಾಡಿರಿ.

  ಅಪ್ಪರಿಲ್ಲದೆ ಸೊಪ್ಪಾದೊ ಈ ಭೂಮಿ

  ಸಪ್ಪೆ ದಂಟಾದೊ ದನಕರ – ಮಳೆರಾಯ

  ಅಪ್ಪ ನೀ ಬಂದು ಕರುಣೀಸೊ||

  ಮೂಡಮೋಡ ನೋಡೋ ಮೋಡದ ಚಂದನೋಡೋ

  ಗೋಡೆಗೆ ಕಪ್ಪ ಬಳಿದ್ಹಂಗೆ – ಮಳೆರಾಯ

  ಬೋರಾಡು ತಾವೆ ಮುಗಿಲಲ್ಲಿ||

  ಪಠ್ಯ ಪೂರಕ ಅಧ್ಯಯನ

  1. ಹೀಗೊಂದು ಟಾಪ್ ಪ್ರಯಾಣ

  ಲೇಖಕರ ಪರಿಚಯ

  ಹೆಸರು : *ಈರಪ್ಪ ಎಂ. ಕಂಬಳಿ*

  ಜನ್ಮ ವರ್ಷ: ಅಗಸ್ಟ್ 15, 1958.

  ಜನ್ಮ ಸ್ಥಳ: ಕೊಪ್ಪಳ ಜಿಲ್ಲೆಯ ಯಲಬುರ್ಗಿ.

  ಕೃತಿಗಳು: 1) ಹೆದ್ದಾರಿಗುಂಟ, 2) ಹೀಗೊಂದು ಟಾಪ್ ಪ್ರಯಾಣ, 3) ಚಾಚಾ ನೆಹರು, 4) ಈಚಲಮರ.

  ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ ಸೂಕ್ತ ಉತ್ತರ ಬರೆಯಿರಿ.

  1) “ಹೀಗೊಂದು ಟಾಪ್ ಪ್ರಯಾಣ” ಲೇಖನವು ಯಾವ ಸಾಹಿತ್ಯ ಪ್ರಕಾರಕ್ಕೆ ಉದಾಹರಣೆಯಾಗಿದೆ?

  – “ಹೀಗೊಂದು ಟಾಪ್ ಪ್ರಯಾಣ” ಲೇಖನವು “ಲಲಿತ ಪ್ರಬಂಧ” ಸಾಹಿತ್ಯ ಪ್ರಕಾರಕ್ಕೆ ಉದಾಹರuಯಾಗಿದೆ.

  2) ಬಸ್ ಪ್ರಯಾಣದ ವೇಳೆ ಲೇಖಕರಿಗೆ ನೆನಪಿಗೆ ಬಂದ ಕಾವ್ಯಾನಂದರ ಪದ್ಯದ ಸಾಲುಗಳಾವುವು?

  – ಬಸ್ ಪ್ರಯಾಣದ ವೇಳೆ ಲೇಖಕರಿಗೆ ನೆನಪಿಗೆ ಬಂದ ಕಾವ್ಯಾನಂದರ ಪದ್ಯದ ಸಾಲುಗಳು –

  ಪ್ರಕೃತಿಯೆ ಗುರು

  ಗಗನ ಲಿಂಗವು

  ಜಗವೆ ಕೂಡಲಸಂಗಮ.

  3) ಸಾವೇ ಭುಜ ಸವರಿಕೊಂಡು ಹೋದಂತೆ ಲೇಖಕರಿಗೆ ಭಾಸವಾದುದೇಕೆ?

  – ರಸ್ತೆಗೆ ಅಡ್ಡವಾಗಿ ಎಳೆಯಲಾಗಿದ್ದ ವಿದ್ಯುತ್ ತಂತಿಗಳು ತಲೆಗೆ ಹತ್ತಿರದಲ್ಲಿಯೇ ಹಾದು ಹೋದ ಕಾರಣ ಲೇಖಕರಿಗೆ ಸಾವೇ

  ಭುಜ ಸವರಿಕೊಂಡು ಹೋದಂತೆ ಭಾಸವಾಯಿತು.

  4) ಲೇಖಕರಿಗೆ ತಾವು ಆನೆಯಂಬಾರಿ ಏರಿದಂತೆ ಭಾಸವಾಗಲು ಕಾರಣವೇನು?

  – ಲೇಖಕರು ಬಸ್ಸಿನ ಟಾಪಿನ ಮೇಲೆ ಏರಿ ಕುಳಿತು ಪ್ರಯಾಣ ಮಾಡುತ್ತಿದ್ದ ಕಾರಣ ಅವರಿಗೆ ತಾವು ಆನೆಯಂಬಾರಿ ಏರಿದಂತೆ

  ಭಾಸವಾಯಿತು.

  5) ಈರಪ್ಪ ಕಂಬಳಿಯವರನ್ನು ಕಂಡು ಸಹ ಪ್ರಯಾಣಿಕರು ಪಕಪಕ ನಕ್ಕಿದ್ದೇಕೆ? (2018)

  – ರಸ್ತೆಗೆ ಅಡ್ಡವಾಗಿ ಎಳೆಯಲಾಗಿದ್ದ ವಿದ್ಯುತ್ತಿನ ತಂತಿಗಳು ಲೇಖಕರ ತಲೆಯ ಹತ್ತಿರದಲ್ಲಿಯೇ ಹಾದು ಹೋದ ಕಾರಣ ಸಾವು

  ಅವರ ಭುಜ ಸವರಿಕೊಂಡು ಹೋದಂತೆ ಭಾಸವಾಗಿ ದಿಗ್ಗನೇ ಟಾಪಿನ ಮೇಲೆ ಒರಗಿದರು. ಸಾವರಿಕೊಂಡು ಏಳುವ ಹೊತ್ತಿಗೆ

  ಸಹಪ್ರಯಾಣಿಕರು ಪಕಪಕ ನಕ್ಕರು.

  6) “ಬಾದಲೋಂಕಾ ರೂಪ ಲೇಕರ್ ಬರಸೇ ಹಲಕೆ ಹಲಕೆ” ಈ ಸಾಲುಗಳ ಅರ್ಥವೇನು?

  – ಮೋಡಗಳ ರೂಪ ಪಡೆದು ನಿಧಾನವಾಗಿ ಮಳೆ ಬಂದಿತು ಎಂಬುದು ಈ ಸಾಲಿನ ಅರ್ಥ.

  7) ಈರಪ್ಪ ಎಂ. ಕಂಬಳಿಯವರ ಬಿಳಿಯ ಶರ್ಟು ಕೆಂಪು ಬಣ್ಣಕ್ಕೆ ತಿರಿಗಿದ್ದೇಕೆ?

  – ಬಸ್ಸು ನಿಂತಾಗಲೆಲ್ಲಾ ಹಿಂದೆ ಏಳುವ ಧೂಳಿನ ಕಾರಣ ಈರಪ್ಪ ಎಂ. ಕಂಬಳಿಯವರ ಬಿಳಿಯ ಶರ್ಟು ಕೆಂಪು ಬಣ್ಣಕ್ಕೆ ತಿರುಗಿತು.

  8) ಲೇಖಕರು ಕೆಂಪು ಬಸ್ಸನ್ನು ನೆಚ್ಚಿದ್ದರಿಂದ ಇಡೀ ದಿನವನ್ನು ವ್ಯಯಿಸಬೇಕಾಯಿತು. ಏಕೆ?

  – ಕಾರಿನಲ್ಲಿ ಒಳದಾರಿಯಲ್ಲಿ ಹೋದರೆ ಪ್ರಯಾಣಕ್ಕಾಗಿ ಕೇವಲ ಒಂದು ಗಂಟೆ ತಗಲುತ್ತದೆ. ಆದರೆ ಲೇಖಕರು ಕೆಂಪು ಬಣ್ಣದ

  ಸರ್ಕಾರಿ ಬಸ್ಸನ್ನು ನೆಚ್ಚಿ ಪೂರ್ತಿ ಒಂದು ದಿನವನ್ನು ವ್ಯಯಿಸಿದರು. ಜೊತೆಗೆ ಅದರ ಹಿಂದಿನ ರಿಸ್ಕವನ್ನು ಎದುರಿಸಿದರು.

  ಪಠ್ಯ ಪೂರಕ ಅಧ್ಯಯನ

  1. ಸೋಮೇಶ್ವರ ಶತಕ

  ಕವಿ ಪರಿಚಯ

  ಹೆಸರು * ಪುಲಿಗೆರೆ ಸೋಮನಾಥ *

  ಕಾಲ: 13 ನೇ ಶತಮಾನ

  ಜನ್ಮ ಸ್ಥಳ: ಧಾರವಾಡ ಜಿಲ್ಲೆಯ ಲಕ್ಷೆö್ಮÃಶ್ವರ

  ಅಂಕಿತನಾಮ: “ಹರಹರಾ ಶ್ರೀ ಚೆನ್ನಸೋಮೇಶ್ವರಾ”

  ಕೃತಿ: ಸೋಮೇಶ್ವರ ಶತಕ.

  ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ ಸೂಕ್ತವಾದ ಉತ್ತರ ಬರೆಯಿರಿ.

  1) ಪುಲಿಗೆರೆ ಸೋಮನಾಥ ಹೇಳಿರುವಂತೆ ಮಗನಾದವನಲ್ಲಿ ಇರಬೇಕಾದ ಗುಣ ಯಾವುದು?

  – ಮಗನಾದವನಲ್ಲಿ ವಿನಯಶೀಲ ಗುಣವಿರಬೇಕೆಂದು ಪುಲಿಗೆರೆ ಸೋಮನಾಥನು ಹೇಳಿದ್ದಾನೆ.

   

  2) ಪುಲಿಗೆರೆ ಸೋಮನಾಥ ಹೇಳಿರುವಂತೆ ಋಷಿಯಲ್ಲಿ ಯಾವ ಗುಣವಿರಬೇಕು?

  – ಪುಲಿಗೆರೆ ಸೋಮನಾಥ ಹೇಳಿರುವಂತೆ ಋಷಿಯಲ್ಲಿ ಪರಿಶುದ್ಧವಾದ ಗುಣವಿರಬೇಕು.

  3) ಕವಿ ಸೋಮನಾಥನು ಯಾರನ್ನು ದೊಡ್ಡ ಮನುಷ್ಯನೆಂದು ಹೆಸರಿಸಲಾಗುವುದಿಲ್ಲ ಎಂದಿದ್ದಾನೆ?

  – ಕವಿ ಸೋಮನಾಥ ಕೆಟ್ಟವರ ಸಹವಾಸದಲ್ಲಿರುವವನನ್ನು ದೊಡ್ಡ ಮನುಷ್ಯನೆಂದು ಕರೆಯಲಾಗುವುದಿಲ್ಲ ಎಂದು ಹೇಳಿದ್ದಾನೆ.

  4) ಸೋಮೇಶ್ವರ ಶತಕದಲ್ಲಿ ಹೇಳಿರುವಂತೆ ಭಟ ಮತ್ತು ಆಚಾರವಂತ ಎನಿಸಿಕೊಳ್ಳಲು ಯಾರು ಅರ್ಹರಲ್ಲ?

  – ಸೋಮೇಶ್ವರ ಶತಕದಲ್ಲಿ ಯುದ್ಧಕ್ಕಾಗದ ಭಟನು ಶಿವನನ್ನು ಬಿಟ್ಟಿರುವ ಆಚಾರವಂತನು ಆಯಾ ಹೆಸರಿಗೆ ಅರ್ಹರಲ್ಲ ಎಂದು

  ಹೇಳಲಾಗಿದೆ.

  5) ಮಂತ್ರಿಯಾಗಲು ಮತ್ತು ರಾಜನಾಗಲು ಯಾವ ಗುಣಗಳನ್ನು ಹೊಂದಿರಬೇಕೆAದು ಸೋಮೇಶ್ವರ ಶತಕದಲ್ಲಿ ತಿಳಿಸಲಾಗಿದೆ?

  – ನಾನಾ ವಿಧದ ಚಮತ್ಕಾರಗಳನ್ನು ತಿಳಿದವನೇ ಮಂತ್ರಿಯಾಗಬೇಕು. ಯಾರು ಏನೇ ಅಂದರು ಕೋಪಿಸಿಕೊಳ್ಳದೇ ತಾಳ್ಮೆಯಿಂದ

  ಇರುವವನೇ ರಾಜನಾಗಬೇಕೆಂದು ಸೋಮೇಶ್ವರ ಶತಕದಲ್ಲಿ ತಿಳಿಸಲಾಗಿದೆ.

  6) ಯೋಗಿಯಾದವನು ಏನನ್ನು ಜಯಿಸಬೇಕೆಂದು ಸೋಮೇಶ್ವರ ಶತಕದಲ್ಲಿ ಹೇಳಿದೆ?

  – ಯೋಗಿಯಾದವನು ಅರಿಷಡ್ವರ್ಗಗಳನ್ನು ಜಯಿಸಬೇಕೆಂದು ಸೋಮೇಶ್ವರ ಶತಕದಲ್ಲಿ ಹೇಳಿದೆ.

  7) ಬೇರೆಯವರ ಸಾಲಕ್ಕೆ ಯಾವಾಗ ಹೊಣೆಯಾಗಬೇಕೆಂದು ಕವಿ ಸೋಮನಾಥನು ಹೇಳಿದ್ದಾನೆ? (2018)

  – ತನ್ನ ಕೈಯಿಂದ ದಂಡ ತೆರುವ ಸಾಮರ್ಥ್ಯವಿರುವವನು ಮಾತ್ರ ಬೇರೆಯವರ ಸಾಲಕ್ಕೆ ಹೊಣೆಯಾಗಬೇಕೆಂದು ಕವಿ

  ಸೋಮನಾಥನು ಹೇಳಿದ್ದಾನೆ.

  8) ಪುಲಿಗೆರೆ ಸೋಮನಾಥನ ಅಂಕಿತ ಯಾವುದು?

  – ಪುಲಿಗೆರೆ ಸೋಮನಾಥನ ಅಂಕಿತನಾಮ “ಹರಹರಾ ಶ್ರೀ ಚೆನ್ನಸೋಮೇಶ್ವರಾ.”

  9) ಸೋಮೇಶ್ವರ ಶತಕದಲ್ಲಿ ಹೇಳಿರುವಂತೆ ಯಾವ ಗುಣವನ್ನು ಹೊಂದಿದವರು ಯಾವ ಹೆಸರಿಗೆ ಅರ್ಹರಾಗುತ್ತಾರೆ?

  – ವಿನಯಶೀಲವಿರುವ ಮಗ, ಪರಿಶುದ್ಧನಾಗಿರುವ ಋಷಿ, ಬೈಯದೇ ಇರುವ ಹೆಂಡತಿ, ರುಚಿಯಾದ ಊಟ, ಕೆಟ್ಟವರ

  ಸಹವಾಸದಲ್ಲಿರದ ದೊಡ್ಡ ಮನುಷ್ಯ, ಶೌರ್ಯದಿಂದ ಯುದ್ಧ ಮಾಡುವ ಭಟ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ನಂಟ,

  ಶಿವನನ್ನು ಬಿಟ್ಟಿರದ ಆಚಾರವಂತ ಈ ಎಲ್ಲ ಗುಣಗಳನ್ನು ಹೊಂದಿದವರು ಆಯಾ ಹೆಸರಿಗೆ ಅರ್ಹರಾಗಿರುತ್ತಾರೆಂದು ಸೋಮೇಶ್ವರ ಶತಕದಲ್ಲಿ ಹೇಳಲಾಗಿದೆ.

  10) ಪುಲಿಗೆರೆ ಸೋಮನಾಥನು ಹೇಳಿರುವಂತೆ ಯಾವ ಯಾವ ಸಾಮರ್ಥ್ಯದಿಂದ ಯಾವ ಯಾವ ಕಾರ್ಯಗಳನ್ನು ಮಾಡಬೇಕು?

  – ಯುದ್ಧ ಮಾಡುವ ಕಲೆ ಬಲ್ಲವನೇ ಭಟನಾಗಬೇಕು. ವಿವಿಧ ಚಮತ್ಕಾರಗಳನ್ನು ತಿಳಿದವನೇ ಮಂತ್ರಿಯಾಗಬೇಕು. ಯಾರು ಏನೇ ಅಂದರೂ ಕೋಪಿಸಿಕೊಳ್ಳದೇ ತಾಳ್ಮೆಯಿಂದ ಇರುವವನೇ ದೊರೆಯಾಗಬೇಕು. ಅರಿಷಡ್ವರ್ಗಗಳನ್ನು ಗೆಲ್ಲುವ ಸಾಮರ್ಥ್ಯ ಹೊಂದಿದವನು ಯೋಗಿಯಾಗಬೇಕು. ತನ್ನ ಕೈಯಿಂದ ದಂಡ ತೆರುವ ಸಾಮರ್ಥ್ಯವಿರುವವನು ಮಾತ್ರ ಮತ್ತೊಬ್ಬರು ಮಾಡುವ ಸಾಲಕ್ಕೆ ಹೊಣೆಯಾಗಬೇಕು ಎಂದು ಪುಲಿಗೆರೆ ಸೋಮನಾಥನು ಹೇಳಿದ್ದಾನೆ.

  1. ಮಹಾಶಿಲ್ಪಿ

  ಲೇಖಕಿಯ ಪರಿಚಯ

  ಹೆಸರು : * ಪ್ರೇಮಾ ಭಟ್ *

  ಜನ್ಮ ವರ್ಷ: ಸಪ್ಟೆಂಬರ್ 1941

  ಜನ್ಮ ಸ್ಥಳ: ಉಡುಪಿ ಜಿಲ್ಲೆಯ ಹೆರ್ಗ.

  ಕೃತಿಗಳು: 1) ಕುಂಕುಮಶೋಭಿನಿ, 2) ದೇವರಾಣೆ, 3) ಮನೆ ಮನ.

  ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ ಸೂಕ್ತ ಉತ್ತರ ಬರೆಯಿರಿ.

  1) ಧರ್ಮಪದನು ವಿಶುವಿನ ಬಳಿಗೆ ಏಕೆ ಬಂದನು?

  – ಧರ್ಮಪದನು ಕೋನಾರ್ಕ ದೇವಾಲಯದ ಮಹಾದ್ವಾರಕ್ಕೆ ಕಲಶ ಕೂಡಿಸಲು ವಿಶುವಿನ ಬಳಿಗೆ ಬಂದನು.

  2) ಧರ್ಮಪದನು ತನ್ನ ಭಾವನೆಗಳನ್ನು ಏಕೆ ಹತ್ತಿಕ್ಕಿಕೊಂಡನು?

  – ತಂದೆಗೆ ತಾನು ಮಗನೆಂದು ತಿಳಿದರೆ “ಈ ಪೋರ ಏನು ಮಾಡಬಲ್ಲ? ಆತನಿಂದಾಗದು” ಎನ್ನುವ ಭಾವನೆ ಬರಬಹುದು,

  ಅಥವಾ ಮಗನ ಮುಂದೆ ತಾನು ಚಿಕ್ಕವನಾಗಿಬಿಟ್ಟೆನಲ್ಲಾ ಎಂಬ ನೋವಿನಿಂದ ನರಳಬಹುದು. ಅಮ್ಮ ಹೊರಡುವ ಮುನ್ನ ಕೊಟ್ಟ ಎಚ್ಚರಿಕೆಯ ಗಂಟೆಯ ನೆನಪು ಬಂದ ಕಾರಣ, ಧರ್ಮಪದ ತನ್ನ ಭಾವನೆಗಳನ್ನು ಹತ್ತಿಕ್ಕಿಕೊಂಡನು.

  3) ಮಹಾಶಿಲ್ಪಿ ವಿಶುವಿಗೆ ಧರ್ಮಪದನು ನೀಡಿದ ಆಶ್ವಾಸನೆಯೇನು?

  – ಧರ್ಮಪದ ಮಹಾಶಿಲ್ಪಿ ವಿಶುವಿಗೆ-“ಮಹಾಶಿಲ್ಪಿಗಳೇ! ದೇವಾಲಯದ ಕಲಶವನ್ನು ನಾನು ನಿಲ್ಲಿಸಬಲ್ಲೆ. ಈ ಕುರಿತು ಅನುಮಾನ ಬೇಡ. ನನಗೊಂದು ಅವಕಾಶ ಕೊಟ್ಟು ನೋಡಿ ನನ್ನ ಪ್ರಯತ್ನಕ್ಕೆ ಜಯ ಖಂಡಿತ, ನಾನು ನಿಮ್ಮ ನಿಟ್ಟುಸಿರು ನೀಗುವಂತೆ ಮಾಡುತ್ತೇನೆ.” ಎಂದು ಆಶ್ವಾಸನೆ ನೀಡಿದನು.

  4) ಧರ್ಮಪದನನ್ನು ನೋಡಿ ವಿಶುವಿನಲ್ಲಿ ಮೂಡಿದ ಭಾವನೆಗಳೇನು?

  – ಎದೆಯುದ್ದ ಬೆಳೆದಿದ್ದ ಧರ್ಮಪದನನ್ನು ತದೇಕಚಿತ್ತದಿಂದ ನೋಡುತ್ತ ವಿಶು ತನಗೂ ಒಬ್ಬ ಮಗನಿದ್ದಾನಲ್ಲವೆ? ಅವನು

  ಇವನಾಗಿರಬಾರದೇಕೆ? ದೂರದೂರಿನಲ್ಲಿ ಆತನನ್ನು ಬಿಟ್ಟು ಬಂದಾಗ ಅವನು ಚಣ್ಣ ತೊಡುತ್ತಿದ್ದ. ಅವನ ವಯಸ್ಸು ಆಗ ಆರೋ, ಏಳೋ. ಈಗವನಿಗೆ ಹದಿನೇಳರ ಪ್ರಾಯದ ಅಂಚಿರಬಹುದು. ಇವನಿಗೂ ಅಷ್ಟೇ ಇರಬಹುದೆಂದು ಧರ್ಮಪದನನ್ನು ನೋಡಿದ ನಂತರ ವಿಶುವಿನಲ್ಲಿ ಕೆಲವು ಭಾವನೆಗಳು ಮೂಡಿದವು.

  5) ವಿಶು ಜ್ಞಾನತಪ್ಪಿ ಏಕೆ ಕೆಳಗುರುಳಿದನು?

  – ತನ್ನಿಂದ ಕೂಡಿಸಲಾಗದ ಕೋನಾರ್ಕ ದೇವಾಲಯದ ಕಲಶವನ್ನು ಅರ್ಧಗಂಟೆಯಲ್ಲಿ ಕೂಡಿಸಿ ಜಯಭೇರಿ ಹೊಡೆದ

  ಧರ್ಮಪದನನ್ನು ನೋಡಿ ವಿಶುವಿಗೆ ಅವಮಾನವಾಗಿ ತಲೆತಗ್ಗಿಸುವಂತಾಯಿತು. ಈಗಿವನು ಮಹಾರಾಜರಿಂದ ಬಿರುದು

  ಬಾವಲಿಗಳನ್ನು ತನ್ನಿದಿರೇ ಪಡೆಯುತ್ತಾನೆ. ತಾನೀಗ ಕೈ ಕೆಳಗೆ ಕೆಲಸ ಮಾಡುತ್ತಿದ್ದ ಇತರ ಶಿಲ್ಪಿಗಳ ಮುಂದೆ ಅವಮಾನಿತನಾಗಿದ್ದೇನೆ ಎಂದು ಯೋಚಿಸುತ್ತ ಉದ್ವೇಗಕ್ಕೊಳಗಾಗಿ ವಿಶು ಜ್ಞಾನತಪ್ಪಿ ಕೆಳಗುರುಳಿದ.

  6) ಧರ್ಮಪದನಿಗೆ ವಿಷ ಉಣಿಸಲು ಪ್ರಯತ್ನಿಸಿದ್ದೇಕೆ? (2018)

  – ಧರ್ಮಪದ ಚಿಕ್ಕ ವಯಸ್ಸಿನಲ್ಲಿಯೇ ಶಿಲ್ಪಶಾಸ್ತç ಪರಿಣಿತನಾಗಿದ್ದ. ಈತನಲ್ಲಿರುವ ಪ್ರತಿಭೆ ನೋಡಲಿಕ್ಕಾಗದ ಹೊಟ್ಟೆಕಿಚ್ಚಿನ ಶಿಲ್ಪಿಯೊಬ್ಬ ಇವನನ್ನು ಬೆಳೆಯಲು ಬಿಡಬಾರದು, ತಮ್ಮ ಸಾಧನೆ ಅವನ ಪ್ರತಿಭೆಯ ಮುಂದೆ ಸಣ್ಣಗಾಗುವುದು ಬೇಡ. ಈಗಲೇ ಅವನನ್ನು ಮುಗಿಸಿ ಬಿಡಬೇಕು ಎಂದು ಯೋಚಿಸಿ, ಮನೆಯಿಂದ ತಂದ ಬುತ್ತಿಗೆ ವಿಷ ಬೆರೆಸಿ ಆ ಊಟವನ್ನು ಧರ್ಮಪದನಿಗೆ ಉಣ್ಣಲು ಒತ್ತಾಯ ಪಡಿಸಿದನು.

  7) ವಿಶುವು ತನ್ನ ಮುಂದಿರುವವನು ನನ್ನ ಮಗನಲ್ಲವೆಂದು ಏಕೆ ತೀರ್ಮಾನಿಸಿದನು?

  – ಧರ್ಮಪದ ತನ್ನ ತಂದೆಗೆ ತಾನು ಅವರ ಮಗನೆಂದು ಗೊತ್ತಾಗಬಾರದೆಂದು ಬೇಕಂತಲೆ ತನ್ನ ಹೆಸರು “ಮುಕುಂದ” ವಯಸ್ಸು ಇಪ್ಪತ್ತು ಎಂದು ಹೇಳಿದನು. ಈ ಕಾರಣದಿಂದಾಗಿ ವಿಶು ತನ್ನ ಮುಂದಿರುವ ಈ ತರುಣ, ನನ್ನ ಮಗನಲ್ಲ ಎಂದು

  ತೀರ್ಮಾನಿಸಿದನು.

  8) ಧರ್ಮಪದನಿಗೆ ಬುತ್ತಿಕೊಟ್ಟ ಶಿಲ್ಪಿಯ ಮುಖ ಏಕೆ ಬಿಳಿಚಿಕೊಂಡಿತು?

  – ಧರ್ಮಪದನನ್ನು ಬೆಳೆಯಲು ಬಿಡಬಾರದು ಎಂಬ ವಿಚಾರ ಶಿಲ್ಪಿಯೊಬ್ಬನಲ್ಲಿ ಮೂಡಿದಾಗ ಮನೆಯಿಂದ ತಂದ ಬುತ್ತಿಗೆ ವಿಷ

  ಬೆರೆಸಿ ಧರ್ಮಪದನ ಸನಿಹ ಕುಳಿತು ಆತನ ಮನ ಒಲಿಸಿಕೊಳ್ಳುತ್ತ ಬುತ್ತಿಯನ್ನು ತಿನ್ನಲು ಪ್ರೇರೇಪಿಸಿದನು. ಬುತ್ತಿಯಲ್ಲಿದ್ದ

  ರೊಟ್ಟಿಯನ್ನು ಧರ್ಮಪದ ಇನ್ನೇನು ಕಚ್ಚಿತಿನ್ನಬೇಕು ಎನ್ನುವಷ್ಟರಲ್ಲಿ ಆಕಾಶ ಮಾರ್ಗವಾಗಿ ಗಿಡುಗೊಂದು ಬಂದು ರೊಟ್ಟಿಯನ್ನು

  ಕಚ್ಚಿಕೊಂಡು ಹೋಗಿ ತಿಂದು ರೆಕ್ಕೆ ಬಡಿದುಕೊಳ್ಳುತ್ತ ಸಾವನ್ನಪ್ಪಿತು. ಈ ಕಡೆ ಧರ್ಮಪದನ ಕೈಯಲ್ಲಿದ್ದ ಬುತ್ತಿಯೂ

  ಮಣ್ಣುಪಾಲಾಯಿತು. ಈ ಕಾರಣದಿಂದಾಗಿ ಶಿಲ್ಪಿಯ ಮುಖ ಬಿಳಿಚಿಕೊಂಡಿತು.

  9) ಧರ್ಮಪದನು ತನ್ನ ತಂದೆಗೆ ಏನೆಂದು ಹೇಳಬೇಕೆಂದು ವಿಶುವಿನ ಸ್ನೇಹಿತನಿಗೆ ಹೇಳಿದನು?

  – ಧರ್ಮಪದನು ತನ್ನ ತಂದೆಗೆ “ಮುಕುಂದ ನಿಮ್ಮ ಮಗ ಎಂದು ಹೇಳಬೇಕೆಂದು” ವಿಶುವಿನ ಸ್ನೇಹಿತನಿಗೆ ಹೇಳಿದನು.

  10) ವಿಶುವಿನ ಎದೆಯಲ್ಲಿ ಎಂದೆದಿಗೂ ನಿಲ್ಲದಂತೆ ಮೊಳಗುತ್ತಿದ್ದ ಪದ ಯಾವುದು?

  – ವಿಶುವಿನ ಎದೆಯಲ್ಲಿ “ಮಹಾಶಿಲ್ಪಿ” ಎಂಬ ಪದ ಎಂದೆ೦ದಿಗೂ ನಿಲ್ಲದಂತೆ ಮೊಳಗುತ್ತಿತ್ತು.

  ಪಾಸಿಂಗ್‌ ಪ್ಯಾಕೆಜ್‌ : ಬೆಂಗಳೂರು ಉತ್ತರ ಜಿಲ್ಲೆ
  ಮಾದರಿ ಪ್ರಶ್ನೆಪತ್ರಿಕೆ : ಬೆಂಗಳೂರು ಉತ್ತರ ಜಿಲ್ಲೆ
  ಮಾದರಿ ಪ್ರಶ್ನೆಪತ್ರಿಕೆ : ಬೆಂಗಳೂರು ಕೋಲಾರ ಜಿಲ್ಲೆ
  ಮಾದರಿ ಪ್ರಶ್ನೆಪತ್ರಿಕೆ : ಜಿಲ್ಲೆ
  ಪುಟ ವೀಕ್ಷಣೆಯ ಸಂಖ್ಯೆ
  ಶೈಕ್ಷಣಿಕ ವೆಬ್‌ಸೈಟ್‌ಗಳು
  Test Series
  Passing Package
  UGC
  ನಮ್ಮನ್ನು ಅನುಸರಿಸಿ