ಕುಲಾಲ ಚಕ್ರ/ ವಿಪತ್ತು/ ನಿಶ್ಚಯ

ಕುಲಾಲ ಚಕ್ರ/ ವಿಪತ್ತು/ ನಿಶ್ಚಯ ಕುಂಬಾರನಚಕ್ರ, ತೊಂದರೆ, ನಿರ್ಣಯ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ. ಅಲ ಧಾತು ಭೂಷಣ ಎಂಬರ್ಥ ಹೊಂದಿದ್ದು, ಪೀಳಿಗೆ ಎಂಬರ್ಥದ ಕುಲ ಪದ ಮತ್ತು ಅಣ್ ಪ್ರತ್ಯಯ ಸೇರಿ ಕುಲಾಲ ಪದ ಸಿದ್ಧಿಸಿ, ಮಣ್ಣಿನಪಾತ್ರೆ, ಹೆಂಚು ತಯಾರಿಸುವವನು, ಕುಂಬಾರ ಎಂಬರ್ಥ ಸ್ಫುರಿಸುತ್ತದೆ. ಇದಕ್ಕೆ ಬಂಡಿ ಎಂಬರ್ಥದ ಚಕ್ರ ಪದ ಸೇರಿ, ಕುಲಾಲ ಚಕ್ರ ಪದ ಸಿದ್ಧಿಸಿ ಮಡಕೆ ಮಾಡುವ ಬಂಡಿ, ಕುಂಬಾರನ ಚಕ್ರ ಎಂಬರ್ಥಗಳು ಸ್ಫುರಿಸುತ್ತವೆ. ಪದ ಧಾತು ಚಲನೆ ಎಂಬರ್ಥ ಹೊಂದಿದ್ದು, […]

ಮುಂದೆ ಓದಿ