ಸುಲಭ/ ಸಾಧ್ಯ

ಪದ ಚಿಂತನ* ಸುಲಭ/ ಸಾಧ್ಯ ಕಷ್ಟವಲ್ಲದ, ನೆರವೇರಿಸಲು ಆಗುವ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ. ಲಭಷ್ ಧಾತು, ಹೊಂದುವ, ಪಡೆಯುವ ಅರ್ಥ ಹೊಂದಿದ್ದು, ಸು ಉಪಸರ್ಗ ಸೇರಿ ಸುಲಭ ಎಂದಾಗಿ, ಸುಖವಾಗಿ ಪಡೆಯುವ, ಕಷ್ಟವಿಲ್ಲದೆ ಹೊಂದುವ, ಅರ್ಹವಾದ, ಸ್ವಭಾವ ಸಿದ್ಧವಾದ ಎಂಬರ್ಥಗಳು ಸ್ಫುರಿಸುತ್ತವೆ. ಸಾಧ್ ಧಾತು, ಸಿದ್ಧಿಸುವುದು ಎಂಬರ್ಥ ಹೊಂದಿದ್ದು, ಣ್ಯತ್( ಯ) ಪ್ರತ್ಯಯ ಸೇರಿ ಸಾಧ್ಯ ಪದದ ನಿಷ್ಪತ್ತಿಯಾಗುತ್ತದೆ. ಕಾರ್ಯನಿರ್ವಹಿಸುವುದು, ನೆರವೇರಿಸಿದ, ಹೊಂದಲುಶಕ್ಯವಾದ ಎಂಬರ್ಥಗಳು ಸ್ಫುರಿಸುತ್ತವೆ. ಕಷ್ಟವಿಲ್ಲದೆ ಪಡೆದುಕೊಳ್ಳಬಹುದಾದದ್ದನ್ನು ಸುಲಭಸಾಧ್ಯ ಎಂದು ಕರೆಯುತ್ತೇವೆ. ಓದಿದ್ದಕ್ಕಾಗಿ ಧನ್ಯವಾದಗಳು.??????????? […]

ಮುಂದೆ ಓದಿ

ದಯನೀಯ/ ಸಾಮೂಹಿಕ

ಪದ ಚಿಂತನ* ದಯನೀಯ/ ಸಾಮೂಹಿಕ ಕರುಣಾಜನಕ, ಸಮೂಹಕ್ಕೆ ಸೇರಿದ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ. ದಯಾ ಧಾತು ಕರುಣೆ ಎಂಬರ್ಥವಿದ್ದು, ಅನೀಯರ್ ಪ್ರತ್ಯಯ ಸೇರಿ, ದಯನೀಯ ಪದ ನಿಷ್ಪತ್ತಿಯಾಗುತ್ತದೆ. ಕರುಣಾಪೂರಕ, ಕನಿಕರದಿಂದ ಕೂಡಿದ, ಅನುಕಂಪ ತೋರುವ, ಇತರರ ಕಷ್ಟವನ್ನು ಸಹಿಸಲು ಸಾಧ್ಯವಾಗದ ಮುಂತಾದ ಅರ್ಥಗಳು ಸ್ಫುರಿಸುತ್ತವೆ. ಊಹ ಧಾತು ಭಾವಿಸುವುದು ಎಂಬ ಅರ್ಥ ಹೊಂದಿದ್ದು, ಸಂ ಉಪಸರ್ಗ ಸೇರಿ ಸಮೂಹ ಪದ ಸಿದ್ಧಿಸಿ, ಗುಂಪು,ರಾಶಿ, ಹಿಂಡು ಮುಂತಾದ ಅರ್ಥ ಸ್ಫುರಿಸುತ್ತವೆ. ಸಮೂಹ ಪದಕ್ಕೆ ಇಕ ಪ್ರತ್ಯಯ ಸೇರಿ […]

ಮುಂದೆ ಓದಿ

ಸಂದೇಹ/ ಗಂಭೀರ

ಪದ ಚಿಂತನ* ಸಂದೇಹ/ ಗಂಭೀರ ಅನುಮಾನ, ಗಹನವಾದ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ. ದಿಹ ಧಾತುವಿಗೆ ಬೆಳವಣಿಗೆ ಎಂಬರ್ಥವಿದ್ದು ‘ಅ’ ಪ್ರತ್ಯಯ ಸೇರಿ ದೇಹ ಎಂದಾಗಿ, ಸಂ ಉಪಸರ್ಗ ಸೇರಿ ಸಂದೇಹ ಪದ ನಿಷ್ಪತ್ತಿಯಾಗುತ್ತದೆ. ಸಂಶಯ, ಅನಿಶ್ಚಿತ ಅರಿವು, ಒಂದು ಅಲಂಕಾರ ಪ್ರಭೇದ ಎಂಬರ್ಥಗಳು ಸ್ಫುರಿಸುತ್ತವೆ. ಗಮ್ ಧಾತು ಚಲನೆ ಎಂಬರ್ಥವಿದ್ದು ಭ ಆದೇಶ ಈರನ್( ಈರ) ಪ್ರತ್ಯಯ ಸೇರಿ ಗಮ್+ ಭ+ ಈರ> ಗಂಭೀರ ಪದವು ಸಿದ್ಧಿಸುತ್ತದೆ. ಆಳವಾದ, ಆಕರ್ಷಣೀಯ, ಗಹನವಾದ, ಶ್ರೇಷ್ಠ, ನಿಂಬೆಗಿಡ, ಕಮಲ […]

ಮುಂದೆ ಓದಿ

ಸಂಭವ/ ಸಾಂತ್ವನ

ಪದ ಚಿಂತನ* ಸಂಭವ/ ಸಾಂತ್ವನ ಉತ್ಪತ್ತಿ, ಸಮಾಧಾನ ಪಡಿಸು ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ. ಭೂ ಧಾತು ಇರುವಿಕೆ ಎಂಬರ್ಥ ಹೊಂದಿದ್ದು, ಅಪ್( ಅ) ಪ್ರತ್ಯಯ ಸೇರಿದಾಗ ಭವ ಎಂದಾಗುತ್ತದೆ. ಜನ್ಮ,ಹುಟ್ಟು, ಪ್ರಾಪ್ತಿ, ಕ್ಷೇಮ ಮುಂತಾದ ಅರ್ಥಗಳಿವೆ. ಸಂ ಉಪಸರ್ಗ ಸೇರಿ ಸಂಭವ ಪದ ನಿಷ್ಪತ್ತಿಯಾಗಿ, ಹುಟ್ಟುವುದು, ಹೊಂದಿಕೆಯಾಗುವುದು, ಸಮಯ ಎಂಬರ್ಥಗಳು ಸ್ಫುರಿಸುತ್ತವೆ. ಕನ್ನಡದ ಇಸು ಪ್ರತ್ಯಯ ಸೇರಿ ಸಂಭವಿಸು ಆದಾಗ ಒದಗಿಬರು, ನೆರವೇರು, ಈಡೇರು ಎಂಬರ್ಥಗಳು ಸ್ಫುರಿಸುತ್ತವೆ. ಸಾಂತ್ವ ಧಾತು ಹಿತವಾದ ಮಾತಾಡುವುದು, ಮಧುರವಚನ ಎಂಬರ್ಥಗಳನ್ನು […]

ಮುಂದೆ ಓದಿ

ಹತಾಶೆ/ ಸಮೀಪ

ಪದ ಚಿಂತನ* ಹತಾಶೆ/ ಸಮೀಪ ನಿರಾಸೆ, ಹತ್ತಿರ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ. ಹನ್ ಧಾತು ಹಿಂಸಿಸುವುದು ಎಂಬರ್ಥ ಹೊಂದಿದ್ದು ಕ್ತಃ( ತ) ಪ್ರತ್ಯಯ ಸೇರಿ, ಹತ ಪದವು ನಿಷ್ಪತ್ತಿಯಾಗುತ್ತದೆ. ಉತ್ಸಾಹವಿಲ್ಲದ, ಕೊಲ್ಲಲ್ಪಟ್ಟ, ತೊಂದರೆ ಮುಂತಾದ ಅರ್ಥಗಳು ಸ್ಫುರಿಸುತ್ತವೆ. ಆಶಾ( ಆಸೆ) ಪದದೊಡನೆ ಸೇರಿ ಹತಾಶಾ ಎಂದಾಗಿ, ಆಸೆತೊರೆದ, ಫಲಕೊಡದ, ದಯೆಯಿಲ್ಲದ, ಆಶಾಭಂಗ ಮೊದಲಾದ ಅರ್ಥಗಳನ್ನು ಪಡೆದಿದೆ. ಕನ್ನಡದಲ್ಲಿ ಹತಾಶೆ ಎಂದಾಗಿದೆ. ಆಪ್ ಧಾತು ವ್ಯಾಪ್ತಿ ಎಂಬರ್ಥ ಹೊಂದಿದ್ದು, ಈತ್( ಈ)+ ಅಃ ಪ್ರತ್ಯಯಗಳನ್ನು ಪಡೆದು ಈಪ […]

ಮುಂದೆ ಓದಿ

ತುರ್ತು ಪರಿಸ್ಥಿತಿ

ಪದ ಚಿಂತನ* ತುರ್ತು ಪರಿಸ್ಥಿತಿ ಕೂಡಲೇ ಗಮನ ಕೊಡಬೇಕಾದ ಸಮಯ( ಸ್ಥಿತಿ) ಎಂಬರ್ಥ ಈ ಪದಕ್ಕಿದೆ. ತ್ವರಾ ಧಾತು ತರಾತುರಿ,ಬೇಗ, ಸುತ್ತುವುದು ಎಂಬರ್ಥಗಳಿದ್ದು ಇತ ಪ್ರತ್ಯಯ ಸೇರಿ ತ್ವರಿತ ಪದ ಸಿದ್ಧಿಸುತ್ತದೆ. ವೇಗ, ಅವಸರ, ಆತುರ, ಶೀಘ್ರವಾಗಿ ಎಂಬರ್ಥಗಳು ಸ್ಫುರಿಸುತ್ತವೆ. ತ್ವರಿತ ಪದವು ಕನ್ನಡದಲ್ಲಿ ತುರ್ತು ಎಂದಾಗಿದೆ. ಷ್ಠಾ ಧಾತು ಸ್ಥಿರವಾಗಿರುವ ಎಂಬರ್ಥವಿದ್ದು, ಕ್ತಿನ್( ತಿ) ಪ್ರತ್ಯಯ ಸೇರಿ ಸ್ಥಿತಿ ಎಂದಾಗಿ ಇರುವಿಕೆ, ಸ್ಥಿರತೆ, ನಿಯಮ ಪಾಲನೆ, ರಕ್ಷಣೆ ಮುಂತಾದ ಅರ್ಥಗಳು ಸ್ಫುರಿಸುತ್ತವೆ. ಪರಿ ಉಪಸರ್ಗ ಸೇರಿ […]

ಮುಂದೆ ಓದಿ

ಪದ ಚಿಂತನ* ಯುದ್ಧ/ ದ್ವೇಷ ಸಾಧನೆ ಕಾಳಗ, ಹಗೆತನ ಈಡೇರಿಸುವುದು ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ. ಯುಧ್ ಧಾತು ಹೊಡೆಯುವುದು ಅರ್ಥ ಹೊಂದಿದ್ದು , ಕ್ತಃ(ಧ) ಪ್ರತ್ಯಯ ಸೇರಿ ಯದ್ಧ ಪದವು ಸಿದ್ಧಿಸಿ, ಸಮರ ಅರ್ಥವನ್ನು ಪಡೆಯುತ್ತದೆ. ಇದೇ ಯುಧ್ ಧಾತುವಿಗೆ ಅಚ್( ಅ) ಪ್ರತ್ಯಯ ಸೇರಿ ಯೋಧ ಆಗಿ ಸೈನಿಕ ಅರ್ಥ ಬರುತ್ತದೆ. ದುರ್ಯೋಧನ, ಯುಧಿಷ್ಠಿರ ಪದಗಳು ಯುಧ್ ಧಾತುಮೂಲದ್ದಾಗಿವೆ. ದ್ವಿಷ್ ಧಾತು ಪ್ರೀತಿಯಿಲ್ಲದ ಎಂಬರ್ಥ ಹೊಂದಿದ್ದು ಧಞ್( ಅ) ಪ್ರತ್ಯಯ ಸೇರಿದಾಗ ದ್ವೇಷ ಪದವು […]

ಮುಂದೆ ಓದಿ

ವಿವಿಧ ಸಂಸ್ಕೃತಿ:-

ಪದ ಚಿಂತನ* ವಿವಿಧ ಸಂಸ್ಕೃತಿ:- ಬೇರೆಬೇರೆ ಪದ್ಧತಿ( ಸಂಪ್ರದಾಯ) ಎಂಬ ಅರ್ಥ ಈ ಪದಕ್ಕಿದೆ. ಧಾಞ್( ಧಾ) ಧಾತು ಧರಿಸು,ಪೋಷಿಸು ಎಂಬರ್ಥ ಹೊಂದಿದ್ದು, ವಿ ಉಪಸರ್ಗ ಸೇರಿ ವಿಧ ಎಂದಾಗಿ ರೀತಿ, ಬಗೆ,ಸಮೃದ್ಧಿ ಎಂಬರ್ಥ ಪಡೆದಿದೆ. ವಿಧವಿಧ ಎಂಬ ದ್ವಿರುಕ್ತಿ ಪದ ವಿವಿಧ ಎಂದಾಗಿ ಬಗೆಬಗೆ, ಬೇರೆಬೇರೆ ಎಂಬರ್ಥಗಳು ಸ್ಫುರಿಸುತ್ತವೆ. ಷ್ಯಞ್( ಯ) ಪ್ರತ್ಯಯ ಸೇರಿದಾಗ ವೈವಿಧ್ಯ ಎಂದಾಗುತ್ತದೆ. ಕೃ ಧಾತು ಮಾಡುವುದು ಅರ್ಥ ಹೊಂದಿದ್ದು ಸಂ ಉಪಸರ್ಗ ಕ್ತಿನ್( ಕ್ತಿ) ಪ್ರತ್ಯಯ ಸೇರಿ ಸಂಸ್ಕೃತಿ ಎಂದಾಗಿ, […]

ಮುಂದೆ ಓದಿ

ಪ್ರಸ್ತುತ/ಮನೋಜ್ಞ

ಪದ ಚಿಂತನ* ಪ್ರಸ್ತುತ/ಮನೋಜ್ಞ ಚನ್ನಾಗಿ ಹೊಗಳಲ್ಪಟ್ಟ ಮತ್ತು ಮನೋಹರ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ. ಸ್ತು ಧಾತು ಹೊಗಳುವುದು ಅರ್ಥಹೊಂದಿದ್ದು ಕ್ತ( ತ) ಪ್ರತ್ಯಯ, ಪ್ರ ಉಪಸರ್ಗ ಸೇರಿ ಪ್ರಸ್ತುತ ಪದ ನಿಷ್ಪತ್ತಿಯಾಗಿ, ಚನ್ನಾಗಿ ಸ್ತುತಿಸಿದ, ಪ್ರಾರಂಭಿಸಿದ, ನಿರೀಕ್ಷಿಸಲ್ಪಟ್ಟ,ಸಂದರ್ಭ, ಈಗಿನ ಎಂಬರ್ಥಗಳು ಸ್ಫುರಿಸುತ್ತವೆ. ಕನ್ನಡದಲ್ಲಿ ಈಗಿನ ಎಂಬರ್ಥ ಹೆಚ್ಚಾಗಿ ಚಾಲ್ತಿಯಲ್ಲಿದೆ. ಜ್ಞ ಧಾತು ತಿಳಿದಿರುವುದು, ಪಂಡಿತ, ಬಲ್ಲವನು, ಬ್ರಹ್ಮ ಎಂಬರ್ಥಗಳಿದ್ದು ಮನಃ ಪದವು ಸೇರಿದಾಗ ಮನಃ+ ಜ್ಞ ಮನ ಉ+ ಜ್ಞ( ವಿಸರ್ಗಕ್ಕೆ ಉಕಾರಾದೇಶ) ಮನೋ+ ಜ್ಞ> […]

ಮುಂದೆ ಓದಿ

ವಿಸ್ತರಣ/ಪ್ರಸ್ತಾರ

ಪದ ಚಿಂತನ* ವಿಸ್ತರಣ/ಪ್ರಸ್ತಾರ ದೊಡ್ಡದುಮಾಡುವುದು, ಲಘುಗುರು ಗುರುತಿಸುವ ಛಂದಸ್ಸಿನ ವಿಧಾನ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ. ಬೇರೆಬೇರೆ ಪದಗಳಾಗಿದ್ದರೂ ಒಂದೇ ಧಾತು ಮೂಲ ಹೊಂದಿವೆ. ಸ್ತೃ ಧಾತು ಮುಚ್ಚುವಿಕೆ ಎಂಬರ್ಥ ಹೊಂದಿದ್ದು, ಪ್ರತ್ಯಯ ಅ+ ಣ ಸೇರಿ ಸ್ತರಣ ಎಂದಾಗಿ ವಿ ಉಪಸರ್ಗ ಸೇರಿ ವಿಸ್ತರಣ ಪದ ಸಿದ್ಧಿಸುತ್ತದೆ. ಕನ್ನಡದಲ್ಲಿ ವಿಸ್ತರಣೆ ಎಂದಾಗಿದೆ. ಈ ಪದಕ್ಕೆ ಹರಡುವುದು, ಶಬ್ದದ ವಿಶ್ಲೇಷಣೆ, ದೊಡ್ಡದು ಮಾಡುವುದು, ವಿಸ್ತಾರವಾದದ್ದು ಎಂಬರ್ಥಗಳು ಸ್ಫುರಿಸುತ್ತವೆ. ಸ್ತೃ ಧಾತು ಧಞ್( ಅ) ಪ್ರತ್ಯಯ ಸೇರಿದಾಗ ಸ್ತಾರ […]

ಮುಂದೆ ಓದಿ