ಕಣ್ಣಾಗು ಜಗಕೇಳು

ಕಣ್ಣಾಗು ಜಗಕೇಳು ಮಣ್ಣ ಮಂದಿರ ಕಟ್ಟಿ ಕಣ್ಮುಚ್ಚಿ ಕೂರಲೇನ್ ? ಕಣ್ಣೀರನೊರೆಸೇಳು ಅದೆ ನಿಜಧ್ಯಾನ ಮಣ್ಣಾಗುವೀ ತನುವನೊಲುಮೆಯಿಂ ಬೆಸೆಯೇಳು ಕಣ್ಣಾಗು ಜಗಕೇಳು ಜಾಣಮೂರ್ಖ // “ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ” ಎಂಬುದು ಎಂತಹಾ ಪಕ್ವಗೊಂಡ ನುಡಿ ! ಈ ಮಾತನ್ನು ಕೇಳುತ್ತೇವೆ , ಅರ್ಥ ಮಾಡಿಕೊಳ್ಳುತ್ತೇವೆ, ಆದರೆ ಬದುಕಲ್ಲಿ ಅಳವಡಿಸಿಕೊಳ್ಳುವುದಿಲ್ಲ ಅಷ್ಟೆ. ಕಲ್ಲು ಮಣ್ಣುಗಳಿಂದ ದೇವಸ್ಥಾನ ನಿರ್ಮಿಸುತ್ತೇವೆ. ಅದರಲ್ಲಿ ಕಣ್ಮುಚ್ಚಿ ಧ್ಯಾನಕ್ಕೆ ಕೂರುತ್ತೇವೆ. ಧ್ಯಾನವಾದರೂ ಏಕೆ ? ನೆಮ್ಮದಿಗೆ ಎಂದೇ ಉತ್ತರ ! ಅದು ಧ್ಯಾನದ ಒಂದು ರೀತಿ ಅಷ್ಟೆ. […]

ಮುಂದೆ ಓದಿ

ಪಾಳಿ ಬರುವನಕ ತಾಳ್

ಪಾಳಿ ಬರುವನಕ ತಾಳ್ ನಾಳೆಗಳನಿಟ್ಟವನು ಕೂಳಿಗಿಟ್ಟಿಹ ದಾರಿ ಪಾಳಿ ಬರುವನಕ ತಾಳ್ ಗೋಳಾಟವೇಕೆ ? ದಾಳವಿಹುದೆಂತೊ ವಿಧಿಯಾಟವರಿತವರಾರು ? ತಾಳು ಉಬ್ಬೆಗವೇಕೆ ಜಾಣಮೂರ್ಖ// ನಾವುಗಳು ಪ್ರತಿಯೊಬ್ಬರೂ ಈ ಮುಕ್ತಕದ ಆಳಕ್ಕಿಳಿದು ಬಿಟ್ಟರೆ ಜಗತ್ತು ರಾಮರಾಜ್ಯವಾಗಿಬಿಡುತ್ತೆ. ಆದರೆ ಆಳಕ್ಕಿಳಿಯಬೇಕಷ್ಟೆ. ಓ, ಗೆಳೆಯ ವಿಧಿ ನಿನಗೆ ನಾಳೆಯನ್ನು ಕೊಟ್ಟಿದೆ ಎಂದ ಮೇಲೆ ನಿನಗೊಂದು ಬದುಕಿನ ದಾರಿಯನ್ನು ಕೊಟ್ಟೇ ಇರುತ್ತದೆ. ಬದುಕು ಬಂದಂತೆ , ದಾರಿ ಕೊಟ್ಟಂತೆ ನಡೆಯೋಣ. ಕಿಂಚಿತ್ ಪ್ರಯತ್ನವಿರಲಿ. ಆದರೆ ಅದಕ್ಕಾಗಿ ಗೋಳಾಡುವುದಾದರೂ ಏಕೆ ? ವಿಧಿಯ ಎಣಿಕೆಯೆಂತೋ […]

ಮುಂದೆ ಓದಿ

ಬಾಳ್ವೆಂದರಿದೆಯೇನೊ

ಬಾಳ್ವೆಂದರಿದೆಯೇನೊ ಬೀಳ್ವುದೇನೇಳ್ವುದೇನೀಸೀಸಿ ಸೋಲ್ವುದೇ ನಾಳ್ವಂತ ಪರಿಯುಮೇಂ ಪೇಳ್ವ ಪಾಂಗೆಂತು ! ತಾಳ್ವಿಕೆಯ ಆಳದೊಳಗೇಂ ಸ್ವಾರ್ಥದಾ ಸೆಳೆತ ಬಾಳ್ವೆಂದರಿದೆಯೇನೊ ಜಾಣಮೂರ್ಖ // ಸ್ನೇಹಿತರೇ , ಗುರುವಿತ್ತ ಈ ನುಚ್ಚಿನ ನುಡಿಯನ್ನು ಒಮ್ಮೆ ಗಂಭೀರವಾಗಿ ಪರಿಗಣಿಸಿ. ನಿಮ್ಮನ್ನೊಮ್ಮೆ ನೀವೇ ನೋಡಿಕೊಳ್ಳಿ ! ಬದುಕಿನಲ್ಲಿ ಒಮ್ಮೆ ಏಳುತ್ತೇವೆ , ಮತ್ತೊಮ್ಮೆ ಬೀಳುತ್ತೇವೆ. ಈ ಬಾಳ ಸಾಗರದಲ್ಲಿ ಈಸೀ ಈಸೀ ಸೋಲುತ್ತೇವೆ. ಸೋತರೂ ರಕ್ತಗುಣ ! ನಿರಂಕುಶತ್ವ , ಅಹಂಕಾರ ಮಾತ್ರ ಹೋಗೋದೇ ಇಲ್ಲ. ನಮ್ಮ ಮಾತಿನ ಗತ್ತು ಗೊತ್ತಿಲ್ಲದೆಯೇ ನಮ್ಮಲ್ಲಿರುವ ಅಹಂಕಾರವನ್ನು […]

ಮುಂದೆ ಓದಿ

ಬುದ್ಧಿ ಭಾವದ ಬೆಸುಗೆ

ಬುದ್ಧಿ ಭಾವದ ಬೆಸುಗೆ ಬೆಸುಗೆಯೊಂದೊಂದರಲು ಹೊಸೆದಿಹನು ಬೊಮ್ಮ ತಾ ಕಸುವ ಕೊಡಲೀ ಬಾಳ್ಗೆ ಹಸನುಗೊಳಿಸಲ್ಕೆ ! ಬುದ್ಧಿಗುಂ ಭಾವಕುಂ ಬೆಸುಗೆ ಮರೆತನು ಏಕೊ !? ಹೃದಯದಿಂ ಬೆಸೆ ಏಳು ಜಾಣಮೂರ್ಖ // ಈ ಸೃಷ್ಟಿಯಲ್ಲಿ ಎಲ್ಲವೂ ಒಂದಕ್ಕೊಂದು ಹೊಂದಿಕೊಂಡು ನಡೆಯುತ್ತಿವೆ. ಅದಕ್ಕೇ ಈ ಅನಂತ ಸೃಷ್ಟಿಯು ಸ್ವಲ್ಪವೂ ಏರುಪೇರಾಗದಂತೆ ನಡೆಯುತ್ತಿದೆ. ಈ ಬದುಕಿಗೊಂದು ಕಸುವು ಕೊಡಲು , ಶಕ್ತಿ ನೀಡಲು ಭಗವಂತನೇ ಹೊಂದಿಸಿದ ಬೆಸುಗೆ ಈ ಬಾಳ ಬೆಸುಗೆ. ಇದರಿಂದಲೇ ಎಲ್ಲರ ಬಾಳೂ ಸಹ ಹಸನಾಗಿದೆ. ಆದರೂ […]

ಮುಂದೆ ಓದಿ

ದಿವ್ಯತ್ವಕೆರಗು ಬಾ

ದಿವ್ಯತ್ವಕೆರಗು ಬಾ ತನುವಿನೊಳಗೊಂದು ಮನ ಕಾಣದವ್ಯಕ್ತಾತ್ಮ ! ಸನಿಹದೊಳಗಿರಲೇನು ನಿಲುಕನೀ ದೇವ! ನಿತ್ಯ ಚೈತನ್ಯಮಯಿ ಸತ್ಯಮೀ ಸೃಷ್ಟಿಯೀ ದಿವ್ಯತ್ವಕೆರಗು ಬಾ ಜಾಣಮೂರ್ಖ // ಈ ಅನಂತವಾದ ದಿವ್ಯ, ಭವ್ಯ ಸೃಷ್ಟಿಗೆ ನಾವೆಷ್ಟು ಕೃತಜ್ಞರಾಗಿದ್ದರೂ ಸಾಲದು. ಈಗ ನೀವೇ ನೋಡಿ ಇದೊಂದು ಶರೀರ ! ಇದರೊಳಗೊಂದು ಮನಸ್ಸು ! ಅದರೊಟ್ಟಿಗೇ ಇರುವ ಬುದ್ಧಿ ! ಇವೆಲ್ಲಕ್ಕೂ ಚೈತನ್ಯಸ್ವರೂಪವಾದ ಆತ್ಮ ! ಇವುಗಳೆಲ್ಲದರ ಪೋಷಣೆಗೋ ಎಂಬಂತೆ ರೂಪುಗೊಂಡಿರೋ ಈ ಅನಂತವೂ ಅಗಮ್ಯವೂ ಆದ ಸೃಷ್ಟಿ !ಸನಿಹದಲ್ಲೇ ಇದ್ದರೂ ಕಾಣದೆ ನೇಪಥ್ಯದಲ್ಲಿರುವ […]

ಮುಂದೆ ಓದಿ

ಕೃತಜ್ಞತೆ

ಕೃತಜ್ಞತೆ ನೀರು ಗೊಬ್ಬರವಿತ್ತ ನೆರವ ಮರೆವುದೆ ಮರವು ? ಪೊರೆವುದೈ ನಿನ್ನ ಮೇಣ್ ನಿನ್ನವರನೆಲ್ಲಾ !? ನೆರವಿತ್ತು ನೆರಳಿತ್ತು ನೂರು ವರುಷದ ವರೆಗೆ ! ಸಾರುವುದೆ ಡಂಗುರವ ? ಜಾಣಮೂರ್ಖ // ನಾವು ಬೆಳೆಸಿದ ಗಿಡ ಮರಗಳ ಕೃತಜ್ಞತೆ ಮತ್ತು ಔದಾರ್ಯಗಳು ನಮಗೆ ಅದೆಷ್ಟು ಅನುಕರಣಾರ್ಹವಾಗಿವೆ !? ನಾವು ಸವೆದುಕೊಂಡಿರುವುದು ಒಂದಷ್ಟು ನೀರು ಗೊಬ್ಬರ ಅಷ್ಟೆ (ಅದೂ ಹೇರಳವಾಗಿ ಸಿಗೋದು ಮತ್ತೆ ನಮಗೆ ಬೇಡವಾದದ್ದು.) ಆದರೆ ಹೆಮ್ಮರವಾಗಿ ಬೆಳೆದ ಮರವು ನಮ್ಮ ಮತ್ತು ನಮ್ಮ ಕುಟುಂಬ ವರ್ಗದವರಿಗೆಲ್ಲಾ […]

ಮುಂದೆ ಓದಿ

ನಾಕದೊಳಗಿನ ನಾಕ

ನಾಕದೊಳಗಿನ ನಾಕ ಹಾಸುವೆಳೆ ನಾರ್ಪಿಡಿದು ಹೊಸೆದು ಹೆಣೆವುದು ಹಿಸಿದು ಹಂಸತೂಲಿಕೆಯೇಕೆ ಈಸೆ ನಿದಿರೆಯನು ! ನಾಕದೊಳು ನಾಕವೈ ಮೂಕಹಕ್ಕಿಯ ಗೂಡು ಸಾಕು ಬಾ ಸಗ್ಗವಿದೆ ಜಾಣಮೂರ್ಖ // ಎಳೆಯ ಬಿಗಿಯಾದ ನಾರನ್ನು ಆರಿಸಿ , ಎಳೆದು , ಹಿಸಿದು , ಹೊಸೆದು ಗೂಡುಕಟ್ಟಿ ನಲಿವ ಗೀಜುಗನ ಗೂಡಿನ ಮುಂದೆ ಹಂಸತೂಲಿಕಾ ತಲ್ಪವಾದರೂ ಏಕೆ ? ಅದರಲ್ಲಿ ಮಲಗುವವರು ನಿಜವಾಗಿ ಸುಖನಿದಿರೆ ಮಾಡುವರೇನು ? ಆದರೆ ಈ ಮೂಕ ಹಕ್ಕಿಯು ಸದ್ದು ಗದ್ದಲವಿಲ್ಲದೆ ಕಟ್ಟುವ ಈ ಗೂಡು ಹಂಸ […]

ಮುಂದೆ ಓದಿ

ಬಾಳಬಟ್ಟೆ

ಬಾಳಬಟ್ಟೆ ನೇಕಾರನರ್ತಿಯಿಂ ನೂಲಿನೆಳೆಗಳ ಪಿಡಿದು ಅಡ್ಡದೆಳೆಯುದ್ದದೆಳೆ ಹೊಂದಿಸುವನಲ್ತೆ ! ನೋವ್ನಲಿವಿನೆಳೆಗಳಿಂ ನೇಕಾರ ಹೊಂದಿಸಿದ ಬಾಳ ಬಟ್ಟೆಯ ನೋಡೊ ಜಾಣಮೂರ್ಖ // ನಾವೆಲ್ಲಾ ತರಾವರಿ ಬಣ್ಣ ಬಣ್ಣದ ಬಟ್ಟೆಗಳನ್ನು ಧರಿಸುತ್ತೇವೆ ! ಚಂದವಾಗಿ ಕಾಣಬೇಕೆಂದು ಅಲ್ಲವೇ ಗೆಳೆಯರೇ ? ಅದರ ಹಿಂದೆ ಬಟ್ಟೆ ನೆಯ್ದವನ ತುಂಬುಶ್ರಮವಿರುತ್ತದೆ. ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿ ನೂಲಿನ ಎಳೆಗಳು ಅಡ್ಡವಾಗಿಯೂ , ಉದ್ದುದ್ದವಾಗಿಯೂ ಜೋಡಿಸಲ್ಪಟ್ಟು ನೆಯ್ದ ಸುಂದರ ವಸ್ತ್ರವದು ! ಈ ಬದುಕೂ ಕೂಡ ಹಾಗೆಯೇ ಗೆಳೆಯರೇ ! ದೇವನೆಂಬ ನೇಕಾರನು ನೋವು ನಲಿವುಗಳೆಂಬ […]

ಮುಂದೆ ಓದಿ

ಅಜ್ಞಾನಕಿಹುದೆ ಗತಿ !

ಅಜ್ಞಾನಕಿಹುದೆ ಗತಿ ! ಬಿಸಿಲತೊರೆಯರಿವಂತೆ ಬಂಧ ಬಿಗಿಗೊಂಡೊಡಾ ಯ್ತಂತೆ ಹುರಿದಿಹ ಬಿತ್ತು ಮೊಳೆಗೊಳ್ವುದೇನು ? ಜ್ಞಾನಾಗ್ನಿಯೊಳು ಬೆಂದ ಅಜ್ಞಾನಕಿಹುದೆ ಗತಿ ! ಅನುಭವಿಸು ಬೇಯೇಳು ಜಾಣಮೂರ್ಖ // ಬಿಸಿಲತೊರೆ ಎಂದರೆ ಮರೀಚಿಕೆ (ಬಿಸಿಲುಗುದುರೆ) ಎಂದರ್ಥ. ಅದನ್ನು ಅರ್ಥೈಸಿಕೊಂಡರೆ ಆಯ್ತು. ಮರೀಚಿಕೆಯ ಅರ್ಥ ‘ಸುಳ್ಳು’ ಎಂಬುದಷ್ಟೇ !. ಇದೆಲ್ಲದರ ಅರ್ಥ ತಿಳಿದು ಮಾಗಿದರೆ ಮುಗಿಯಿತು. ಮನಸ್ಸು ಪಕ್ವವಾದಂತೆ. ಹುರಿದ ಬಿತ್ತು ಹೇಗೆ ಮೊಳೆತು ಬೆಳೆಯುವುದಿಲ್ಲವೋ ಹಾಗೆ ನಮ್ಮ ಜ್ಞಾನಾಗ್ನಿಯಲ್ಲಿ ಬೆಂದ ಅಜ್ಞಾನಕ್ಕೆ ಮತ್ತೆ ಅಸ್ತಿತ್ವವಿದೆಯೇ ? ಆದ್ದರಿಂದ ಓ […]

ಮುಂದೆ ಓದಿ

ಪೆರರಾಟಕಣಿಯೆಲ್ಲ

ಪೆರರಾಟಕಣಿಯೆಲ್ಲ ! ಬಂಗಾರ ತುಂಬಲೇನ್ ಬಂಗ ತೀರದ ಮೇಲೆ ಸಿಂಗಾರಗೊಂಡರೇ ನರಿವಿರದ ಮೇಲೆ ? ಬಂಗಾರ ಸಿಂಗಾರ ರಂಗದಾ ಮೇಲಷ್ಟೆ ! ಪೆರರಾಟಕಣಿಯೆಲ್ಲ ಜಾಣಮೂರ್ಖ // ಕೆಲವರಿಗೆ ಬಂಗಾರದ ಒಡವೆಗಳ ಮೇಲೆ ಅದೆಷ್ಟು ಪ್ರೀತಿ ! ತಿಜೋರಿಯಲ್ಲಿ ತುಂಬಿದ್ದೇ ತುಂಬಿದ್ದು. ಅವರ ತಾಪತ್ರಯಗಳು, ತೊಂದರೆಗಳು ತೀರುವುದೇ ಇಲ್ಲ. ಬಂಗಪಟ್ಟು ಬಿಸಿಯನ್ನ ಉಣ್ಣುವುದಕ್ಕಿಂತಲೂ ತಂಗಳನ್ನವೇ ಲೇಸಲ್ಲವೇ ಗೆಳೆಯರೇ ? ಕೆಲವರಿಗಂತೂ ಆಸೆ , ಮೋಹಗಳು ಹೋಗುವುದೇ ಇಲ್ಲ. ಒಡವೆಗಳ ಹೊರೆ ಹೊತ್ತು ಭಾರದಿಂದ ಬೀಗುತ್ತಾರೆ. ತನುವು ಸಿಂಗಾರಗೊಂಡರಾಯ್ತೆ ? […]

ಮುಂದೆ ಓದಿ