ಸತ್ಯದರ್ಶನ

ಜಾಣಮೂರ್ಖ

ಸತ್ಯದರ್ಶನ

ಮುಚ್ಚಿಪೋಪುದು ವಿಶ್ವ
ಮೊಂದು ದಿನ ಕತ್ತಲೆಯೊ
ಲುಳಿವಿದೇ ಮತಧರ್ಮ
ಹೆಣ್ಣು ಹೊನ್ಮಣ್ಣು !?
ಭಾವ ಬೆಮೆಯಳಿದು ಬಾ
ಸಂತಸವ ಕಾಣುಬಾ
ಸತ್ಯದರ್ಶನಮಿಹುದೊ
ಜಾಣಮೂರ್ಖ //

ಸ್ನೇಹಿತರೇ , ಮುಂದೊಂದು ದಿನ ಈ ಭೂಮಿಯೂ ಸಹ ಸೀಮಾತೀತವಾದ ಸೃಷ್ಠಿಯ ಅಗಾಧತೆಯಲ್ಲಿ ಮುಚ್ಚಿಹೋಗುತ್ತದೆ. ಆಗ ಎಲ್ಲೆಲ್ಲೂ ಶೂನ್ಯ ! ನಿಶ್ಶಬ್ದ ! ಗಾಡಾಂಧಕಾರ ! ಮುಂದಿನದೇನೋ ಬಲ್ಲವರಾರು !? ಇದಂತೂ ಒಂದು ದಿನ ಆಗಿಯೇ ಆಗುತ್ತದೆ. ಬ್ಲ್ಯಾಕ್ ಹೋಲ್ ಸಿದ್ಧಾಂತ ಇದನ್ನೇ ಹೇಳುತ್ತದೆ. ಹೀಗಿರುವಾಗ ನಮ್ಮ ಜಾತಿ , ಮತ , ಪಂಥ ,ಧರ್ಮಗಳಾಗಲಿ ಹೆಣ್ಣು ಹೊನ್ನು ಮಣ್ಣಾಗಲಿ ಚಿರವೇ ! ಶಾಶ್ವತವೇ !? ಏಕೆ ಸುಮ್ಮನೆ ಹೊಡೆದಾಡುತ್ತೇವೋ ಭಗವಂತನೇ ಬಲ್ಲ. ಇದನ್ನೊಮ್ಮೆ ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುತ್ತಾ ಕಣ್ಮುಚ್ಚಿ ಧ್ಯಾನಾಸಕ್ತರಾಗಿ ! ನೋಡಿ ಹೇಗಿರುತ್ತದೆಯೆಂದು. ಆದರೆ ಇದಕ್ಕೆ ಭ್ರಮೆಯ ಭಾವವನ್ನು ಕಳೆದು ಬರಬೇಕು. ನಿಜವಾದ ಸಂತಸವನ್ನು ಕಾಣುವ ಉದ್ದೇಶದಿಂದ ಬರಬೇಕು. ನಿರ್ಲಿಪ್ತತೆಯಿಂದ ಕೂರಬೇಕು. ಒಂದು ಹಂತದಲ್ಲಿ ಬದುಕಿನ ಸತ್ಯದರ್ಶನವಾಗುತ್ತದೆ. ಪ್ರಕೃತಿಯ ಅಗಾಧತೆಯ ಮುಂದೆ ನಾವೆಷ್ಟರವರೆಂಬುದು ತಿಳಿಯುತ್ತದೆ ! ಇನ್ನೂ ಏನೇನೋ ಅವ್ಯಕ್ತವಾದ ಅನುಭವಗಳಾಗಬಹುದು ! ಇದರಿಂದ ಎಲ್ಲರಲ್ಲಾಗುವ ಬದಲಾವಣೆಯನ್ನು ನಾನು ಹೇಳಲಾರೆ. ಆದರೆ ಕಿಂಚಿತ್ ಅಜ್ಞಾನವಂತೂ ದೂರವಾಗಬಹುದೇನೋ !?
ಏನಂತೀರಿ !?
✍️ಮುರಳೀಧರ ಹೆಚ್.ಆರ್.

Total Page Visits: 37 - Today Page Visits: 1

25 thoughts on “ಸತ್ಯದರ್ಶನ

 1. The therapist will need to have advanced training and experience of treating soft tissue injuries.
  Now you will massage your ears; start on top of your ears, then massage
  hard all way on the ear. It is also critical to
  get into the habit of exercising regularly to maintain muscle strength
  which will help prevent obesity.

 2. Pingback: wherewatches.com
 3. Pingback: 마나모아
 4. Pingback: dewaqq
 5. Pingback: solarmovie-free
 6. Pingback: 여우코믹스
 7. Pingback: relx infinity
 8. Pingback: ottawa law firm
 9. Pingback: PPO
 10. Pingback: ks pod

Leave a Reply