ಮನೋಹರ/ ಅಭಿನಯ

ಪದ ಚಿಂತನ

ಪದ ಚಿಂತನ*
ಮನೋಹರ/ ಅಭಿನಯ

ಸುಂದರ, ನಟನೆ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ.
ಹೃಞ್ ಧಾತು ಒಯ್ಯವುದು, ಕಳ್ಳತನ, ಹೋಗಲಾಡಿಸು ಮುಂತಾದ ಅರ್ಥಗಳಿದ್ದು ಅ ಪ್ರತ್ಯಯ ಸೇರಿ ಹರ ಎಂಬ ಪದ ಸಿದ್ಧಿಸುತ್ತದೆ.
ಮನ ಧಾತು ಜ್ಞಾನ ಎಂಬರ್ಥ ಹೊಂದಿದ್ದು, ಅಸುನ್ ಪ್ರತ್ಯಯ ಸೇರಿ ಮನಸ್ ಎಂಬ ಪದ ಸಿದ್ಧಿಸಿ ಹೃದಯ ಎಂಬರ್ಥ ಸ್ಫುರಿಸುತ್ತದೆ.
ಮನಸ್ ಪದದ ಸಕಾರಕ್ಕೆ ವಿಸರ್ಗಾದೇಶ ಬಂದು ಮನಃ ಎಂದಾಗಿ
ಮನಃ+ ಹರ> ಮನ ಉ+ ಹರ( ವಿಸರ್ಗಕ್ಕೆ ಉ ಆದೇಶ)
ಮನೋ+ ಹರ> ಮನೋಹರ ಪದ ನಿಷ್ಪತ್ತಿಯಾಗಿ, ಸುಂದರ, ಮನಸ್ಸನ್ನು ಸೆಳೆ, ಚಿನ್ನ ಮುಂತಾದ ಅರ್ಥಗಳು ಸ್ಫುರಿಸುತ್ತವೆ.

ನೀ ಧಾತು ಒಯ್ಯುವುದು ಅರ್ಥ ಹೊಂದಿದ್ದು, ಅಚ್ ಪ್ರತ್ಯಯ ಸೇರಿ ನಯ ಪದ ಸಿದ್ಧಿಸಿ, ನೀತಿ,ನಡತೆ,ನಾಯಕ, ಕ್ರಮಬದ್ಧ ಮುಂತಾದ ಅರ್ಥಗಳು ಸ್ಫುರಿಸುತ್ತವೆ. ನಯ ಪದಕ್ಕೆ ಅಭಿ ಉಪಸರ್ಗ ಸೇರಿ ಅಭಿನಯ ಪದ ಸಿದ್ಧಿಸಿ, ನಟಿಸುವುದು, ಮನದಭಿಪ್ರಾಯ ತಿಳಿಸುವುದು ಮುಂತಾದ ಅರ್ಥಗಳು ಸ್ಫುರಿಸುತ್ತವೆ.

ಓದಿದ್ದಕ್ಕಾಗಿ ಧನ್ಯವಾದಗಳು.🙏🙏🙏🙏🙏🌸🌺🌹💐🌷🌻
ಅ.ನಾ.*

Leave a Reply

Your email address will not be published. Required fields are marked *