ಪದ ಚಿಂತನ
ಬುದ್ಧಿ/ಪ್ರಾಚೀನ/ ಮಹಾಕಾವ್ಯ
ಜ್ಞಾನ, ಹಳೆಯಕಾಲದ, ಶ್ರೇಷ್ಠಗ್ರಂಥ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ.
ಬುಧ್ ಧಾತು ತಿಳಿದಿರುವುದು ಎಂಬರ್ಥ ಹೊಂದಿದ್ದು, ಕ್ತಿನ್ ಪ್ರತ್ಯಯ ಸೇರಿ ಬುದ್ಧಿ ಪದ ಸಿದ್ಧಿಸಿ, ಜ್ಞಾನ, ಅರಿವು, ಚುರುಕುತನ, ಚಿತ್ತ, ವಿಷಯಪರಿಜ್ಞಾನ ಮುಂತಾದ ಅರ್ಥಗಳು ಸ್ಫುರಿಸುತ್ತವೆ.
ಪ್ರಾಕ್ ಧಾತು ಮೊದಲು ಎಂಬರ್ಥ ಹೊಂದಿದ್ದು, ಕ್ವಿನ್ + ಖಃ (ನ ಆದೇಶ) ಪ್ರತ್ಯಯ ಸೇರಿ, ಪ್ರಾಚೀನ ಪದ ಸಿದ್ಧಿಸಿ, ಪೂರ್ವಕಾಲದ, ಹಿಂದಿನ ಕಾಲದ, ಪೂರ್ವದೇಶದಲ್ಲಿರುವ ಮುಂತಾದ ಅರ್ಥಗಳು ಸ್ಫುರಿಸುತ್ತವೆ.
ಕವೃ ಧಾತು ವರ್ಣನೆ ಎಂಬರ್ಥ ಹೊಂದಿದ್ದು ಇಃ ಪ್ರತ್ಯಯ ಸೇರಿ ಕವಿ ಪದ ನಿಷ್ಪತ್ತಿಯಾಗಿ, ಕವಿಯ ಕರ್ಮಾರ್ಥದಲ್ಲಿ ಷ್ಯಞ್ ಪ್ರತ್ಯಯ ಸೇರಿ ಕಾವ್ಯ ಪದ ಸಿದ್ಧಿಸಿ, ಗ್ರಂಥ, ಗದ್ಯಪದ್ಯ ರೂಪದ ಕೃತಿ ಎಂಬರ್ಥಗಳು ಸ್ಫುರಿಸುತ್ತವೆ.
ಈ ಪದಕ್ಕೆ ಶ್ರೇಷ್ಠ ಅರ್ಥದ ಮಹತ್ ಧಾತು ಸೇರಿ ( ಆ ಅಂತಾದೇಶವಾಗಿ ಮಹಾ ಎಂದಾಗುತ್ತದೆ)
ಮಹಾ+ ಕಾವ್ಯ > ಮಹಾಕಾವ್ಯ ಸಮಸ್ತಪದವು ಶ್ರೇಷ್ಠಗ್ರಂಥ, ಉತ್ಕೃಷ್ಟ ಕೃತಿ ಎಂಬರ್ಥಗಳು ಸ್ಫುರಿಸುತ್ತವೆ.
ಓದಿದ್ದಕ್ಕಾಗಿ ಧನ್ಯವಾದಗಳು.??????????
*ಅ.ನಾ.*